ಹಂಸವೇಣಿ ಕುಲಾಲ್

Drama Others Children

4  

ಹಂಸವೇಣಿ ಕುಲಾಲ್

Drama Others Children

ಸುವ್ವಿ ಸುವ್ವಲಾಲಿ - ೨

ಸುವ್ವಿ ಸುವ್ವಲಾಲಿ - ೨

3 mins
273



ಜೀವನದ ನಡಿಗೆಯಲ್ಲಿ ನೋವಿನ ನೆರಳು ಅಂಟಿಕೊಂಡಿದ್ದರು, ಅದೆಲ್ಲಾ ಪಕ್ಕಕ್ಕೆ ಸರಿಸಿ ಮುಂದಿನ ಮಾರ್ಗದಲ್ಲಿ ಸಾಗುತ್ತಿರುವಳು ಅಮೃತಾ. ತನ್ನ ಬಳಿ ಬರುವ ಮಕ್ಕಳ ಜೊತೆ ಮಕ್ಕಳಾಗಿಯೇ ಬೆರೆತು ಹೋಗುತ್ತಿದ್ದಳು. ನಾಳೆಯ ಬಗ್ಗೆ ಯಾವುದೇ ನಿರೀಕ್ಷೆ ಅವಳಲ್ಲಿ ಇಲ್ಲ. ದಿನಗಳ ಜೊತೆ ಹೆಜ್ಜೆ ಇಡುವುದಷ್ಟೇ ಅವಳ ನಿರ್ಣಯ. ಇದಕ್ಕೆಲ್ಲಾ ಅವಳ ಮನದಲ್ಲಿ ಅಡಗಿರುವ ಆ ನೋವೇ ಕಾರಣ.


ಎಂದಿನಂತೆ ಅಂದು ರೌಂಡ್ಸ್ ಮುಗಿಸಿ ತನ್ನ ಛೇಂಬರ್ ಒಳಗೆ ನಡೆದಳು. ಒಳಗೆ ಹೋಗುತ್ತಿದ್ದಂತೆ ಅಚ್ಚರಿ ಅವಳಿಗೆ. ಆ ಛೇಂಬರ್ ಸುತ್ತಾ 'SORRY' ಎಂಬ ಪದ ತುಂಬಿ ತುಳುಕುತ್ತಿದೆ. ಆ ಕೆಲಸ ಯಾರದು ಎಂದು ತಿಳಿಯಿತು ಸಹ.


"ಜೀವನ್..."

ಕೋಪದಲ್ಲಿ ಕರೆದಳು.


ಆ ಕೂಗಿಗೆ ಜೀವನ್ 'SORRY' ಎಂದು ಬರೆದ ಬೋರ್ಡ್ ಹಿಡಿದು ಅವಳ ಎದುರು ನಿಂತ.


"ಡಾಕ್ಟರ್ ಜೀವನ್ ಇದೇನು ನಿಮ್ಮ ಹುಚ್ಚಾಟ? ನನಗೆ ಇದೆಲ್ಲಾ ಇಷ್ಟ ಆಗೋಲ್ಲ ಅಂತ ಗೊತ್ತಿದ್ರೂ, ಪದೇ-ಪದೇ ಅದನ್ನೇ ಮಾಡ್ತಾ ಇದ್ದೀರಾ ನೀವು"


ಈಗ ಮುಖದ ಮುಂದೆ ಹಿಡಿದಿದ್ದ ಬೋರ್ಡ್ ಕೆಳಗೆ ಇಳಿಸಿದ.


"ಸಾರೀ ಅಮ್ಮು..."


"ಹೋ... ನಾನು ಎಷ್ಟು ಸಾರಿ ಹೇಳೋದು ನಿಮಗೆ; ಅಮ್ಮು ಅಂತ ಕರಿಬೇಡಿ"

ಅವನ ಪಕ್ಕಕ್ಕೆ ಸರಿದು ನಡೆದಳು.


"ಓಕೆ, ಓಕೆ ಡಾಕ್ಟರ್‌ಗೆ ತುಂಬಾ ಕೋಪ ಬಂದಿದೆ ಅನಿಸುತ್ತೆ?"


ಮೆಲ್ಲನೆ ಅವಳ ಮುಖದ ಮುಂದೆ ಬಾಗಿದ. ಕೆಂಪಾದ ಕಣ್ಣಿನಲ್ಲಿ ಇವನನ್ನ ನೋಡಿದಳು.


"ಅಷ್ಟು ಕೋಪ ಬೇಡ ಅಮ್ಮು. ನಾನು ಹೀಗೆಯೇ ಕರೆಯೋದು"

ಅವಳು ಏನೋ ಹೇಳಲು ಬಂದಾಗ ಅವಳನ್ನ ತಡೆದ ಜೀವನ್.


"ಎಸ್ಟರ್ಡೇ ನನಗೆ ತಿಳಿದದ್ದು ಅಮ್ಮು; ಲಾಸ್ಟ್ ವೀಕ್ ನಿನ್ನ ಬರ್ತಡೇ ಆಗಿದೆ ಅಂತ. ಅಂಕಲ್ ಕಾಲ್ ಮಾಡಿದ್ರೂ. ತುಂಬಾ ಪ್ರೀತಿಸ್ತೀನಿ ಅಂತ ಡೈಲಾಗ್ ಹೇಳಿ ಒಂದು ಬರ್ತಡೇ ವಿಶ್ ಕೂಡ ಮಾಡ್ಲಿಲ್ಲ ಇವ್ನು, ಅಂತ ನಮ್ಮ ಹುಡುಗಿ ಬೇಜಾರ್ ಆಗಿದ್ದಾಳೆ ಅನ್ಕೊಂಡೆ. ಅದೇ ಸತ್ಯ ಕೂಡ. ನೋ, ನೋ ನೀನು ಏನೇ ಹೇಳಿದ್ರೂ ನಾನು ನಂಬೋದಿಲ್ಲ. 

ಬಿಲೇಟೆಡ್ ಹ್ಯಾಪಿ ಬರ್ತ್ ಡೇ ಅಮ್ಮು. ಲವ್ ಯು ಒನ್ಸ್. ಈ ಗಿಫ್ಟ್, ಚಾಕೋಲೇಟ್ ನನ್ನ ಪ್ರೀತಿಯ ಹುಡುಗಿಗೆ ಕಡಿಮೆನೇ. ನೀನೇ ತುಂಬಾ ಸ್ವೀಟ್, ಒಂದ್ಸಾರಿ ನನ್ನ ಪ್ರೀತಿ ಒಪ್ಕೊಳ್ಳೆ ಹುಡುಗಿ"


ಹೂವಿನ ಬೊಕ್ಕೆ ನೀಡಿದ.


"ಜೀವನ್..." ಕಿರುಚಿದಳು.


"ಓಕೆ, ಓಕೆ ಕಿವಿ ಹೋಯ್ತು. ಕೂಗ್ಬೇಡ ಆಮೇಲೆ ನಾನು otolaryngologist ಹತ್ತಿರ ಹೋಗಬೇಕಾಗುತ್ತೆ"


ಎಂದೇಳಿ ಹೊರಡಲು ಸಿದ್ಧನಾದ. ಅವನ ಧ್ವನಿ ನಿಂತಿದ್ದೆ, ಜೋರಾದ ಉಸಿರನ್ನ ಹೊರ ಹಾಕಿದಳು ಅಮೃತಾ.


"ಅಮ್ಮು... ಬಾಗಿಲಿನಿಂದ ಕೂಗಿದ ಜೀವನ್

ಐ ಲವ್ ಯು ಒನ್ಸ್ ಅಮ್ಮು"

ಎಂದೇಳಿ ಕಣ್ಣು ಹೊಡೆದು ಓಡಿದ.



ಜೀವನ್, ಅಮೃತಾ ಸಹ ವೈದ್ಯ. ಅವನು ಸಹ ಮಕ್ಕಳ ತಜ್ಞ. ಅವಳ ಸರಳವಾದ ಮಾತು, ಎಲ್ಲರನ್ನ ತನ್ನವರಂತೆ ಕಾಣುವ ಮನ ಮೊದಲಿಗೆ ಅವನ ಮೆಚ್ಚುಗೆ ಪಡೆಯಿತು. ಆ ಮೆಚ್ಚುಗೆಗೆ ಮುಂದಿನ ದಿನಗಳಲ್ಲಿ ಪ್ರೀತಿ ಎಂಬ ನಾಮಕರಣ ಮಾಡಿದ ಆತ. ನಂತರದಲ್ಲಿ ಅಮೃತಾ ಮನೆಯವರೆಲ್ಲಾ ಪರಿಚಯವಾದರು. ಆದರೆ ಇಲ್ಲಿಯವರೆಗೂ ಆಕೆ ಮಾತ್ರ ಒಪ್ಪಿಗೆ ಸೂಚಿಸಿಲ್ಲ. ಅದು ಯಾಕೆ ಎಂಬುದೇ ಎಲ್ಲರಲ್ಲೂ ಇರುವ ಪ್ರಶ್ನೆ. ಅದಕ್ಕೆ ಉತ್ತರ ಅವಳ ಮನದಲ್ಲಿ ಅಡಗಿರುವ ಆ ನೋವು.



       *********************



ಈ ದಿನ ಅರ್ಜುನ್‌ಗೆ ಕಾಲೇಜ್ ನಲ್ಲಿ ಬೋಧನೆ ಮಾಡುವ ಮನಸ್ಸೇ ಇಲ್ಲ. ಇಂದು ಬೆಳಗ್ಗೆ ಬರುವಾಗ ಮುದ್ದಿನ ಮಗಳು ಅವನನ್ನ ಗಟ್ಟಿಯಾಗಿ ತಬ್ಬಿ ಹಿಡಿದಿದ್ದಳು. ಒಲ್ಲದ ಮನಸ್ಸಿನಿಂದಲೇ ಕೆಲಸಕ್ಕೆ ಹಾಜರಿ ನೀಡಿದ. ನಿಮಿಷಕ್ಕೆ ಒಂದು ಬಾರಿ ಕೈಗಡಿಯಾರದ ಕಡೆಗೆ ಅವನ ನೋಟ ಇತ್ತು.


ಸಂಜೆ ಮನೆಗೆ ಬಂದಾಗ ಅವನಿಗೆ ಎದುರಾದದ್ದು ಆಗಷ್ಟೇ ಬಂದಿದ್ದ ತಂಗಿ ಅಂಕಿತ. ಆಕೆ ಬಂದಿರುವುದರ ಉದ್ದೇಶ ಸಹ ತಿಳಿದಿದೆ ಅವನಿಗೆ.


ಅಂಕಿತ, ನಾದಿನಿ ಮಾನಸ ಓದುವ ಹಂಬಲದಿಂದ ಅಣ್ಣನ ಮದುವೆ ಮೊದಲಿಗೆ ಆಗಲಿ ಎಂದಿದ್ದಳು. ಅದರಂತೆ ಅಂಕಿತ ಹಾಗೂ ಜಗದೀಶ್ ಅವರ ಮದುವೆ ನಡೆಯಿತು. ಇದರ ಹಿಂದೆ ಒಂದು ಉದ್ದೇಶ ಸಹ ಇತ್ತು. ಮನಸಾಳಿಗೆ ಮೊದಲಿನಿಂದಲೂ ಅರ್ಜುನ್ ನಲ್ಲಿ ಮನಸ್ಸಾಗಿತ್ತು. ಅಂಕಿತ ಮದುವೆ ನಂತರ ಅರ್ಜುನ್ ಹತ್ತಿರ ವಿಷಯ ಪ್ರಸ್ತಾಪಿಸಿದಾಗ ಅನಘಳನ್ನ ಪ್ರೀತಿಸುತ್ತಿರುವುದಾಗಿ ಹೇಳಿದ. ಮನೆಯವರಿಗೆಲ್ಲಾ ಮಾನಸಳನ್ನ ಸೊಸೆಯಾಗಿ ತರಬೇಕೆಂಬ ಆಸೆ ಇತ್ತು. ಆದರೆ ಆ ಆಸೆ, ಅಸೆಯಾಗಿಯೇ ಉಳಿಯಿತು. ಎಂದೂ ಅನಘ, ಅರ್ಜುನ್ ಜೀವನದಿಂದ ಕಣ್ಮರೆಯಾದಳು ಆಗ ಮತ್ತೆ ಆ ಆಸೆ ಎಲ್ಲರಲ್ಲಿ ಚಿಗುರಿದೆ. ಅರ್ಜುನ್ ಒಪ್ಪಿಗೆಗಾಗಿ ಕಾಯುವ ಸರದಿಯಲ್ಲಿ ಇರುವರು ಎಲ್ಲ.


ತಂಗಿಯ ಜೊತೆ ಒಂದಷ್ಟು ಮಾತನಾಡಿ ಮಗಳನ್ನ ನೋಡಲು ಕೊಠಡಿಗೆ ನಡೆದ. ಅಳುತ್ತಿದ್ದ ಮಗುವನ್ನ ಸಮಾಧಾನ ಮಾಡುವ ಹರ ಸಾಹಸವನ್ನೇ ಮಾಡುತ್ತಿದ್ದಳು ಮಾನಸ. ಅವಳ ಗಮನ ಸೆಳೆಯಲು ಕೆಮ್ಮುವಂತೆ ಮಾಡಿದ. ಅವನನ್ನು ಕಂಡು ನಾಚಿಕೆಯಿಂದ ಬಂದು ಎದುರು ನಿಂತಳು ಆಕೆ. ಅರ್ಜುನ್ ತನ್ನ ದೃಷ್ಟಿ ಪಕ್ಕಕ್ಕೆ ಮಾಡಿದ.


"ಈಗ ಬಂದ್ರಾ ಅರ್ಜುನ್?"


ಅವಳ ಪ್ರಶ್ನೆಗೆ ಬಲು ತ್ರಾಸದಿಂದ 'ಹು'ಎಂದಷ್ಟೇ ಹೇಳಿದ. ತಂದೆಯನ್ನು ಕಂಡೊಡನೆ ಅವನ ಕಡೆಗೆ ಕೈ ಚಾಚಿತು ಕಂದಮ್ಮ. ಮಗುವನ್ನ ಎತ್ತಿಕೊಂಡ ತಕ್ಷಣ ಬಿಸಿಯ ಅನುಭವವಾಯಿತು. ಮಗುವಿನ ಕತ್ತಿನ ಸುತ್ತ, ಹಣೆಯ ಭಾಗದ ಮೇಲೆ ಮುಟ್ಟಿ ನೋಡಿದ. ಜ್ವರ ಬಂದಿದೆ. ಅವನಿಗೆ ಜೀವವೇ ಹೋದಂತೆ ಅನಿಸಿತು. ಅಳುವನ್ನು ನಿಲ್ಲಿಸದ ಮಗುವನ್ನು ಕಂಡು ಮರುಗಿದ. ಮನೆಯವರ ಮೇಲೆ ಕೂಗಾಡಿದ. ಅವನ ಕೂಗಾಟಕ್ಕೆ ಎಲ್ಲ ಬಂದು ಗಮನಿಸಿದರು.


"ಅರ್ಜುನ್, ಮಕ್ಕಳಿಗೆ ಜ್ವರ, ಶೀತ ಇದೆಲ್ಲಾ ಬರದೇ ಇರುತ್ತಾ? ಸಿರಪ್ ಹಾಕು ಕಡಿಮೆ ಆಗುತ್ತೆ"

ಸೀತಾರ ಅವರು ಹೇಳಿದರು.


ಅವರ ಮಾತಿನಂತೆ ನಡೆದುಕೊಂಡ. ಮಗುವಿನ ಸ್ಥಿತಿ ನೋಡಿದವನಿಗೆ ಯಾವುದರ ಮೇಲೂ ಗಮನ ಇಲ್ಲ. ರಾತ್ರಿಯ ಊಟ ಸಹ ಬೇಡವೆಂದು ಮಗುವಿನ ಜೊತೆಯಲ್ಲೇ ಇರುವ.


ರಾತ್ರಿ ಹನ್ನೊಂದು ಗಂಟೆಯ ಸಮಯ ಕಂದಮ್ಮ ಅಳಲು ಆರಂಭಿಸಿತು. ಆಗಷ್ಟೇ ನಿದ್ದೆಗೆ ಜಾರುತ್ತಿದ್ದ ಅರ್ಜುನ್ ಎಚ್ಚರಗೊಂಡ. ಮಗುವನ್ನ ಮುಟ್ಟಿ ನೋಡಿದಾಗ ಮೈಯಲ್ಲಾ ಸುಡುತ್ತಿದೆ. ಭಯವಾಯಿತು ಅವನಿಗೆ. ತಕ್ಷಣ ತನ್ನ ಮಗಳನ್ನು ಕರೆದುಕೊಂಡು ಪರಿಚಯ ಇರುವ ವೈದ್ಯರನ್ನು ಅರಸಿ ಹೊರಟ.



       *****


ಮುಂದುವರೆಯುತ್ತದೆ......


Rate this content
Log in

Similar kannada story from Drama