Vaishnavi Puranik

Drama Tragedy Inspirational

4  

Vaishnavi Puranik

Drama Tragedy Inspirational

ಸಿನೆಮಾ - ರಂಗನಾಯಕಿ

ಸಿನೆಮಾ - ರಂಗನಾಯಕಿ

4 mins
382



ಬಣ್ಣದ ಬದುಕನ್ನು ಕಟ್ಟಿಕೊಂಡ ರಂಗು ಮತ್ತು ಶ್ಯಾಮಣ್ಣ ಮತ್ತು ರಾಮಣ್ಣ ಅವರ ಪಾತ್ರಗಳ ಪರಿಚಯ ಕಂಡು ಕಣ್ಣಿನ ಅಂಚಿನಲ್ಲಿ ನೀರು ಬರುವುದು. ರಂಗುವಿಗೆ ತಾನು ಅನಾಥ ಭಾವ ಬಾರದು ಎನ್ನುವ ಕಾರಣಕ್ಕಾಗಿ ಈ ಬಣ್ಣವು ಆಕೆಗೆ ಆಸರೆಯಾಗಿ ನಿಂತುಕೊಂಡು ಇರುತ್ತದೆ. ರಂಗುವಿಗೆ ವಿವಾಹವಾದರೂ ಆಕೆಗೆ ಆ ಬಣ್ಣದ ಬದುಕಿಗೆ ಹೆಚ್ಚಿನ ಆಸಕ್ತಿ ಹೊಂದಿದಳು.ಆದರೆ ಆಕೆಯ ಪತಿಯು ಆಕೆಯನ್ನು ಮತ್ತು ಚಂದ್ರುನನ್ನು ದೂರ ಮಾಡಿ ಹೋದಾಗ ಆಶ್ರಯ ನೀಡಿದಿದ್ದು ಅದೇ ಬಣ್ಣ ಲೋಕ. ಅನಿರೀಕ್ಷಿತವಾಗಿ ರಂಗುವಿನ ಗಂಡನನ್ನು ಕಂಡು ಆತನಿಗೆ ಪಾಪ ಪ್ರಜ್ಞೆ ಕಾಡುವ ಇದ್ದವು. ಮಗ ಆಕೆಯ ಜೊತೆಯಲ್ಲಿ ಇದ್ದರು ಗುರುತಿಸಲು ಅಸಾಧ್ಯವಾಗಿತ್ತು. ಕೊನೆಯಲ್ಲೂ ತನ್ನ ಮಗನನ್ನು ನೋಡಲು ಆಗದೇ ಬಣ್ಣದ ಲೋಕಕ್ಕೆ ತನ್ನ ಅರ್ಪಣೆ ಮಾಡಿದಳು.


ಈ ಸಿನೆಮಾದ ಮುಂದಿನ ಭಾಗವನ್ನು ನಾನು ಮುಂದುವರಿಸಿ ಬರೆದೆನು.


 ರಂಗನಾಯಕಿ


ಅಂದು ಅಂಬರೀಶ್ ಸರ್, ಆರತಿ ಮತ್ತು ರಾಮಕೃಷ್ಣ ಅವರು ನಟನೆ ಮಾಡಿರುವ ರಂಗನಾಯಕಿ ಚಲನಚಿತ್ರವನ್ನು ಮುಂದುವರಿಸಿ ಬರೆಯೋಣ ಎನಿಸಿತು ಇದು ಕೇವಲ ನನ್ನ ಕಲ್ಪನೆ ಎಂದು ನಿರೂಪಿಸುತ್ತಾ ಇದ್ದೇನೆ.

   ಆಕೆಯು ತನ್ನ ಮಗನ ಆಗಮನವಾಗುತ್ತದೆ ಎಂದು ನಂಬಿಕೊಂಡಿದ್ದ ಆಕೆಗೆ ಕೊನೆಯಲ್ಲಿ ಸಿಗದೇ ಮರಣವನ್ನು ಹೊಂದಿದಾಗ ಇತ್ತ ಮಗನು ಅಮ್ಮ ಅಮ್ಮ ಒಮ್ಮೆ ನನ್ನನ್ನು ನೋಡಿ ನಿಮ್ಮ ಮಗನು ಬಂದಿರುತ್ತೇನೆ ಒಮ್ಮೆ ನೋಡಿ ಎನ್ನುವ ಸಂದರ್ಭದಲ್ಲಿ...

     ರಾಮಣ್ಣ ಮತ್ತು ಮನೆಯ ಆಳು ಬಂದು ನಿಮಗೆ ಹೇಗೆ ತಾಯಿಯವರು ಆಗುತ್ತಾರೆ? ಅವರು ಪ್ರಶ್ನೆ ಮಾಡಿದಾಗ ಆಕೆಯ ನಿಜವಾದ ಪತಿಯು ತಲೆಯನ್ನು ತಗ್ಗಿಸಿಕೊಂಡು ಬಂದು ಆತ ನಮ್ಮ ಇಬ್ಬರ ಹೆಮ್ಮೆಯ ಕೂಸು ಆತನ ಹೆಸರು ಶೇಖರ್ ಅಲ್ಲ ಚಂದ್ರು ಅಂದಾಗ....

  ರಾಮಣ್ಣ ನಮ್ಮ ರಂಗು ಮಗನ ಅಯ್ಯೋ ಆಕೆ ಈಗ ಇದ್ದಿದ್ದಾರೆ ಎಷ್ಟು ಸಂತೋಷ ಪಡುತ್ತಾ ಇದ್ದಳು ಎನ್ನುವ ಹೊತ್ತಿಗೆ ಮುಂದೆ ನಡೆಯಬಹುದಾ ಕಾರ್ಯಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳೋಣ ಎನ್ನುವ ಹೊತ್ತಿಗೆ ಇತ್ತ ರಾಮಣ್ಣ ಹಾಗೆ ಒರಗಿ ಕುಳಿತುಕೊಳ್ಳಲು 


ಹಾಗೆ ರಾಮಣ್ಣನವರು ಒರಗಿಕೊಳ್ಳಲು ತನ್ನ ಅಪ್ಪಾಜಿಯವರಿಗೆ ಮುಂಜಾನೆ ಸುಮಾರು ನಾಲ್ಕು ಗಂಟೆ ಹಾಕಿದ್ದ ಮಲ್ಲಿಗೆ ಹೂವಿನ ಹಾರ ಕೊರಳಿಗೆ ಬಿದ್ದಾಗ....

   ಎಲ್ಲರೂ ಒಮ್ಮೆ ರಾಮಣ್ಣ ರಾಮಣ್ಣ ಎಂದು ಬೊಬ್ಬೆ ಹಾಕುವಾಗ, ರಂಗುವಿನ ಜೊತೆಯಲ್ಲಿ ಇದ್ದ ಆ ಸಣ್ಣ ಹುಡುಗಿ ಏನು ರಾಮಣ್ಣ ನಿದ್ರೆಯನ್ನು ಮಾಡುತ್ತಾ ಇದ್ದೀರಾ ಎಂದು ಪ್ರಶ್ನೆ ಮಾಡಿದಾಗ....

  ಶೇಖರ ಅವರು ಎಲ್ಲರೂ ಒಂದಲ್ಲ ಒಂದು ದಿನ ಚಿರನಿದ್ರೆ ಮಾಡುತ್ತಾರೆ ಎಂದು ಇಬ್ಬರ ಸಂಸ್ಕಾರ ಮಾಡಲು ಕಂಪನಿಯ ಸಮಸ್ತ ಜನರು ತೀರ್ಥವನ್ನು ಹಾಕಲು ರಂಗುವಿನ ಪತಿದೇವರು ನೀವು ಅವರಿಗೆ ಹಾಕುವಂತಿಲ್ಲ ನಿಮಗೆ ಯಾವ ಅಧಿಕಾರ ಇಲ್ಲ ಮಗ ಮತ್ತು ತಾಯಿಯವರನ್ನು ದೂರ ಮಾಡಿದ ಪಾಪಿ ನೀನು ಎಂದು ನುಡಿಯುವಾಗ...

  ಆಕಾಶದಲ್ಲಿ ಒಂದು ರೀತಿಯಾದ ವಿಚಿತ್ರ ದ್ವನಿ ಕೇಳಿಬಂದಿತು, ನೋಡು ಚಂದ್ರು ನೀನು ಹಾಗೆ ಹೇಳುವುದು ತರವಲ್ಲ ನಿನ್ನ ಜವಾಬ್ದಾರಿ ಇನ್ನೂ ಸಾಕಷ್ಟು ಇದೆ ಎಂದಾಗ ಆತನು ಒಮ್ಮೆ ಜೋರಾಗಿ ಅಮ್ಮ ಅಮ್ಮ ಅಮ್ಮ ಎಂದು ಹೇಳುವಾಗ 


ಒಮ್ಮೆ ಜೋರಾಗಿ ಅಮ್ಮ ಅಮ್ಮ ಎಂದಾಗ ಆಕೆ ಯಾಕೆ ರೋಡಿಸುತ್ತೀಯಾ ನಿನಗಾಗಿ ನಾನು ಒಂದು ಅಮೂಲ್ಯ ಸಂಪತ್ತು ಬಿಟ್ಟು ಹೋಗಿದ್ದೇನೆ ಇದ್ದಾಗ....

  ಅಲ್ಲಿ ನೆರೆದಿದ್ದ ಜನರಿಗೆ ಅರ್ಥವಾಗದೆ ಹಾಗೆ ನಿಂತುಕೊಂಡಾಗ,ಆಕೆ ಕೂಡ ಮೌನವಾಗಿ ಇದ್ದಾಗ ಅಮ್ಮ ಅಮ್ಮ ಎಂದು ಶೇಖರನು ಕೇಳಿದಾಗ ಆಕೆ ಉತ್ತರ ನೀಡದೇ ಹೋದಾಗ ತಂದೆಯವರ ಕಾಲುಗಳಿಗೆ ಬಿದ್ದು ನೀವು ಮುಂದಿನ ಕಾರ್ಯಕ್ಕೆ ಸಿದ್ಧತೆ ಮಾಡಲು ಹೇಳಿದಾಗ...

   ಆ ಹೆಣ್ಣು ಮಗಳು ಒಮ್ಮೆ ಅಮ್ಮಾಜಿ ಅಣ್ಣಾಜಿ ಎಂದಾಗ ಶೇಖರಣ್ಣ ಮತ್ತು ಇತರ ಸಹ ಕಲಾವಿದರುಗಳು ಸಮಾಧಾನ ಮಾಡಿದಾಗ ಆಕೆ ಯಾಕೆ ಈ ಬಣ್ಣ ಮಾಯಾವಾಯಿತು? ಎಂದು ಪ್ರಶ್ನೆ ಮಾಡಿದಾಗ...

  ಸರಸ್ವತಿ ಅಮ್ಮನವರು ಆ ಹುಡುಗಿಗೆ ಹೇಳಿದರು ಬಣ್ಣದವರಿಗೆ ಬಣ್ಣವೇ ಬದುಕು, ಜೀವನದಲ್ಲಿ ಅವರಿಗೆ ಬಣ್ಣದಲ್ಲೇ ಸುಖ ಸಂತೋಷ ದುಃಖವನ್ನು ಕಾಣುತ್ತಾರೆ ಎಂದಾಗ.... ರಂಗುವಿನ ಭಾವಚಿತ್ರವೂ ನಿಜವಾದ ರೀತಿಯಲ್ಲಿ ಆಕೆಯ ಜೊತೆಯಲ್ಲಿ ಬಂದು ಮಾತುಗಳನ್ನು ಆಡಿದ ಭಾವ ಸೃಷ್ಟಿಸಿದಾಗ...

    ಆಕೆ ಹೌದು ಎಂದು ಉತ್ತರ ನೀಡಿದಾಗ, ಇತ್ತ ಶೇಖರ್ ಅವರು ತನ್ನ ತಾಯಿಯವರ ಕೋಣೆಗೆ ಹೋದಾಗ ಆತನಿಗೆ ಒಂದು ವಿಚಿತ್ರ ಎನಿಸುವಂತ ಒಂದು ಪುಸ್ತಕ ದೊರಕಿತು ಅದನ್ನು ತೆಗೆದುಕೊಂಡು ಬಂದು ಆಕೆ ಕೂತುಕೊಳ್ಳುವ ಜಾಗ ದಲ್ಲಿ ಕೂತುಕೊಂಡಾಗ 


ಆತನಿಗೆ ಆಕೆಯು ಹತ್ತಿರದಲ್ಲಿ ಬಂದು ನೋಡು ನೀನು ನಮ್ಮ ಅಪ್ಪಾಜಿಯವರು ಬೆಳೆಸಿದ ರಂಗಶಾಲೆಯನ್ನು ನೀನು ಮುಂದುವರಿಸಿಕೊಂಡು ಹೋಗಬೇಕು ಈ ಪುಸ್ತಕ ತಾನು ಬರೆದಿದ್ದು....

ಅದನ್ನು ಮುಂದುವರೆಸಿ ಬರೆಯುವ ಜವಾಬ್ದಾರಿ ನಿನ್ನದ್ದು ಎಂದಾಗ ಆತ ಅಮ್ಮ ನಿಮ್ಮ ಜೊತೆಯಲ್ಲಿ ಒಂದು ದಿನವೂ ಊಟವನ್ನು ಮಾಡಲೇ ಇಲ್ಲ...

  ಆದರೆ ನಿಮ್ಮ ಜೊತೆ ನಟಿಯಾಗಿ ಅಂದುಕೊಂಡು ನುಡಿದ್ದೇನೆ ಎಂದಾಗ ಅದು ಕಳೆದುಹೋದ ದಿನದ ಬಗ್ಗೆ ಯೋಚನೆ ಬೇಡ ಮುಂದೆ ಆಗಬೇಕಾದ ಮಹತ್ವದ ಕೆಲಸ ಮುಂದುವರೆಸು ಎಂದಾಗ...

  ಆತ ತನ್ನ ಅಮ್ಮಾಜಿಯವರ ರಂಗಮಂದಿರಕ್ಕೆ ಹೋದಾಗ ಅಲ್ಲಿ ತಾನು ತನ್ನ ಬಾಲ್ಯದಲ್ಲಿ ಇರುವಾಗ " ಭಕ್ತ ಪ್ರಹ್ಲಾದ ನಾಟಕದಲ್ಲಿ ತಾನು ನಾನು ಪಾತ್ರವನ್ನು ಮಾಡಿದ್ದೂ ಆತನಿಗೆ ನೆನಪು ಆಗಿ ಅಮ್ಮ ಅಮ್ಮ ಎಂದು ನುಡಿಯುವಾಗ...

   ಅಲ್ಲಿ ಪಾತ್ರವನ್ನು ಮಾಡಿದ ಸಾವಿರಾರು ಮಂದಿಯವರು ಹಾಗೆ ಒಂದು ಜಾಗದಲ್ಲಿ ಕೂತುಕೊಂಡು ನಾವು ನಡೆದ ಮಾರ್ಗದ ಬಗ್ಗೆ ನುಡಿಯುತ್ತಾ ಇರುವಾಗ ಇತ್ತ ಶೇಖರ್ ಹೇಗೆ ಇದ್ದೀರಾ? ಎಂದಾಗ ಎಲ್ಲರೂ ನೀನು ನೀನು ಎಂದು ಎಲ್ಲರೂ ಪ್ರಶ್ನೆ ಮಾಡಿದಾಗ.....

ನೀನು ನೀನು ಎಂದು ಪ್ರಶ್ನೆ ಮಾಡಿದಾಗ ಆತನು ನಾನು ಈ ಕನ್ನಡ ನಾಡಿನ ಹೆಮ್ಮೆಯ ಕುವರಿ ಎಂದು ಹೆಸರುವಾಸಿಯಾಗಿದ್ದ ರಂಗುವಿನ ಹೆಮ್ಮೆಯ ಕುವರ ಎಂದಾಗ ಎಲ್ಲರ ಕಣ್ಣಿನ ಅಂಚಿನಲ್ಲೂ ನೀರು ಬಂದು...

  ನೀನು ಕೂಡ ಅವರ ತರಹ ಬಣ್ಣ ಲೋಕದಲ್ಲಿ ಹೆಸರು ಮಾಡಬೇಕು ಎಂದಾಗ, ಶೇಖರ್ ಅವರು ಅಂದು ಅವರ ಕನಸು ಎಂದರೆ ದೊಡ್ಡ ರಂಗಮಂದಿರ ನಿರ್ಮಾಣ ಮಾಡುವುದು ಅದನ್ನು ನಾನು ಮಾಡುತ್ತೇನೆ ಎಂದು ಆ ಊರಿನ ಹಿರಿಯರಾದ ಕೃಷ್ಣ ಗುರುಗಳ ಬಳಿ ಕೇಳಲು ಹೋದಾಗ...

ಅಗತ್ಯವಾಗಿ ಎಂದು ಶಾಮಣ್ಣ, ರಾಮಣ್ಣ ಮತ್ತು ರಂಗು ಅವರ ಭಾವಚಿತ್ರ ತೆಗೆದುಕೊಂಡು ಬಂದು ಅಲ್ಲಿ ಹಾಕಿದಾಗ ಆ ಹೆಣ್ಣುಮಗಳು ಅಮ್ಮ ಎಂದು ಜೋರಾಗಿ ರೋದಿಸಲು ಪ್ರಾರಂಭ ಮಾಡಿದಾಗ ಯಾಕೆ ರೋದಿಸುತ್ತಿಯಾ ಎಂದಾಗ...

  ತನ್ನ ಹೊಟ್ಟೆಯನ್ನು ತೋರಿಸಿ ಹಸಿವು ಎಂದಾಗ ಆತ ಆ ಕೂಸುವನ್ನು ಎತ್ತಿಕೊಂಡು ಅಯ್ಯೋ ದೇವರೇ ಎಂದು ತಾನೇ ಒಂದು ಪಾತ್ರೆಯಲ್ಲಿ ಅನ್ನ ಮಾಡಲು ಹೊರಟಾಗ ಅಲ್ಲಿ ಎಲ್ಲಿ ಇದೆ ಅಕ್ಕಿ ಎಂದು ಹುಡುಕಿದಾಗ...

  ಪುಸ್ತಕದಲ್ಲಿ ಒಂದು ಹಳೆ ಬಂದು ಆತನ ಕೈಯನ್ನು ಸೇರಿದಾಗ ಆತನು ತೆಗೆದುಕೊಂಡು ಓದಲು ಪ್ರಾರಂಭ ಮಾಡಿದಾಗ...


ಅದರಲ್ಲಿ ಹಸಿವು ಇನ್ನೊಂದು ನನಗೆ ಮಾತ್ರ ಗೊತ್ತು, ಪ್ರತಿಯೊಂದು ಅನ್ನದ ಅಗಲನ್ನು ನೆಲಕ್ಕೆ ಬಿದ್ದಾಗ ಅದನ್ನು ತೆಗೆದುಕೊಂಡು ತಿಂದವಳು, ಇತ್ತ ಸಂಸಾರ ಎಂಬ ಸಾಗರಕ್ಕೆ ಬಂದಾಗ ನನಗೆ ಅವು ನಿಗಿಹೋದರೂ...

  ನನ್ನ ಹಸಿವು ರಂಗಮಂದಿರದಲ್ಲೇ ಹಾಗೆ ಇದೆ, ನನ್ನ ಹಾಗೆ ಸಾವಿರಾರು ಮಂದಿ ತುತ್ತು ಅನ್ನಕ್ಕಾಗಿ ಯಾಚಿಸುತ್ತಾ ಇದ್ದಾರೆ, ನೀನು ಅವರಿಗಾಗಿ ಅನ್ನದಾಸೋಹ ಎಂಬ ಹೊಸ ಶಾಲೆಯನ್ನು ತೆರೆ ಎಂದು ನುಡಿದಾಗ..

  ಅಗತ್ಯವಾಗಿ ಎಂದು ಶೆಟ್ಟರಿಗೆ ಸಂಪರ್ಕ ಮಾಡಿದಾಗ ಅವರ ನೇತೃತ್ವದಲ್ಲಿ ಅನ್ನ ದಾಸೋಹ ಕಟ್ಟಲಾಯಿತು ಅಲ್ಲಿ ಸಾವಿರಾರು ಕಲಾವಿದರಿಗೆ ಅಶ್ರಯ ದೊರಕಿತು ಈತನು ನನ್ನ ಮನೆಯಲ್ಲಿ ಹೆಣ್ಣುಮಗಳನ್ನು ಕರೆದುಕೊಂಡು ಊಟ ಮಾಡುವಾಗ...

    ಅಣ್ಣ ನೀನು ತಿನ್ನು ಎಂದಾಗ ಆತನಿಗೆ ತನ್ನ ರಂಗು ಅಮ್ಮ ಊಟ ಮಾಡಿಸಿದ ಹಾಗೆ ಎನಿಸಿ ಕಣ್ಣಿನ ಅಂಚಿನಲ್ಲಿ ನೀರು ಬರಲು...

  ಖಾರ ಆಯಿತಾ ನೀರು ತರುತ್ತೇನೆ ಎಂದಾಗ, ಇಲ್ಲ ನಿನ್ನ ಮುಖದಲ್ಲಿ ಅಮ್ಮನ ಕಳೆಯು ಕಂಡು ಬಂದಿತು ಎಂದಾಗ ಶೆಟ್ಟರು ಬಂದು ನಿಮ್ಮ ತಂದೆಯವರು ಬಂದಿದ್ದಾರೆ ಎಂದಾಗ ಎಲ್ಲಿ ಎಂದು ಪ್ರಶ್ನೆ ಮಾಡಿದಾಗ....

  ಆತ ನನ್ನ ರಂಗುವಿನ ಭಾವಚಿತ್ರದ ಅಡಿಯಲ್ಲಿ ನಿಂತುಕೊಂಡು ರೋದಿಸುವಾಗ ಶೇಖರ್ ಬಂದು ಅಪ್ಪಾಜಿ ಎಂದು ನುಡಿಯುವಾಗ..


ಶೇಖರ್ ಅವರ ತಂದೆಯವರು ರೋದಿಸುವುದನ್ನು ಕಂಡು ಆತನ ಹೆಗಲಮೇಲೆ ಕೈ ಇಟ್ಟಾಗ ಹೇಗೆ ಇದ್ದೀರಾ ಅಪ್ಪಾಜಿ ಯಾವಾಗ ಬಂದಿರಾ ಎಂದು ಹತ್ತು ಹಲವಾರು ಪ್ರಶ್ನೆ ಮಾಡಿದಾಗ....

    ಊಟ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದಾಗ ಆತನು ಅಲ್ಲೇ ಒರಗಿಕೊಳ್ಳಲು ಮುಂಜಾನೆ ಸುಮಾರು ನಾಲ್ಕುಗಂಟೆಗೆ ಹಾಕಿದ್ದ ರಂಗುಮ್ಮನವರ ಪುಷ್ಪದ ಮಾಲೆ ಆತನ ಕೊರಳಿಗೆ ಬಿದ್ದಾಗ ಶೇಖರ್ ಒಮ್ಮೆ ಜೋರಾಗಿ ಅಪ್ಪಾಜಿ ಅಪ್ಪಾಜಿ ಎಂದು ಕರೆದಾಗ ಎಲ್ಲರೂ ಒಮ್ಮೆ ಎಲ್ಲರೂ ಮೌನಲೋಕಕ್ಕೆ ತೆರಳಿದರು....

  ಹೀಗೆ ಕಾಲವು ಸರಿದಂತೆ ಶೇಖರ್ ಅವರು ಸಾವಿರಾರು ರಂಗಮಂದಿರಗಳಲ್ಲಿ ನಟನೆಗೆ ತನ್ನನ್ನು ತಾನು ತೊಡಗಿಕೊಂಡು ಮುಂದುವರಿಯುತ್ತಾ ಇರುವಾಗ ಆ ಹೆಣ್ಣುಮಗಳು ಬಂದು ಅಪ್ಪಾಜಿ ನಾನು ಪಾಠಶಾಲೆಗೆ ಹೋಗಿ ಬರುತ್ತೇನೆ ಎಂದಾಗ ಇತ್ತ ಶೇಖರ್ ಅವರು ಅಗತ್ಯವಾಗಿ ಹೋಗಿ ಬಾ ಎಂದು ನುಡಿದು ಆತ ಹೀಗೆ ರಂಗುಮ್ಮನವರ ಜಾಗದಲ್ಲಿ ತಾನು ದಿನನಿತ್ಯದಲ್ಲಿ ಬರೆಯುತ್ತಾ ಇದ್ದ ಪುಸ್ತಕ ಬರೆಯುವಾಗ..........

   ಇತ್ತ ನನ್ನ ಜವಾಬ್ದಾರಿ ಮುಗಿಯಿತು ಇನ್ನೂ ನನಗೆ ಏನು ಬೇಡ ಈ ಜೀವನ ಬಣ್ಣವು ಬಣ್ಣದ ಒಳಗಡೆ ಒಳ ಪ್ರವೇಶ ಮಾಡುವ ಕ್ಷಣ ಬಂದಿದೆ ಎಂದು ಬಣ್ಣಕ್ಕೆ ಅರ್ಥವನ್ನು ನೀಡುವ ಜವಾಬ್ದಾರಿ ನಿನ್ನ ಮೇಲೆ ಇದೆ ಎಂದು ಬರೆದು....

  ತನ್ನ ಪ್ರೀತಿ ಪಾತ್ರರ ಜೊತೆಯಲ್ಲಿ ಸಂತೋಷದಿಂದ ತಾನೇ ತರಕಾರಿಗಳನ್ನು ಹೆಚ್ಚಿಕೋಟ್ಟು ಊಟಕ್ಕೆ ಸಿದ್ಧತೆ ಮಾಡುವಾಗ ಆಕೆ ವಿದ್ಯಾಭ್ಯಾಸ ಮುಗಿಸಿ, ಮನೆಗೆ ಬರುವಾಗ ಶೇಖರ್ ನಿನ್ನ ಕೈಯಲ್ಲಿ ಊಟ ಮಾಡಬೇಕು ಮಲಗಬೇಕು ಎನಿಸುತ್ತದೆ ಎಂದಾಗ....

   ಯಾಕೆ ಅಪ್ಪಾಜಿ ಎಂಥ ಬಯಕೆ ನಿಮಗೆ ಅಗತ್ಯವಾಗಿ ಎಂದು ಊಟ ಮಾಡಿಸುವಾಗ, ಆತನ ಕೈಯಲ್ಲಿ ಇದ್ದ ಪುಸ್ತಕ ಆಕೆಗೆ ಕೊಟ್ಟು ಹಾಗೆ ಒರಗಿಕೊಳ್ಳಲು ಇತ್ತ ಪುಸ್ತಕ ಆಕೆಯ ಮಡಿಲು ಸೇರಿದಾಗ.......

  ಆಕೆ ಕುತೂಹಲದಿಂದ ಓದಲು ಆಕೆ ಒಮ್ಮೆ ಎಲ್ಲರನ್ನು ಎನಿಸಿಕೊಂಡು ಅಳತೊಡಗಿದಳು.ಆಕೆಯು ಎಲ್ಲರನ್ನು ಕಳೆದುಕೊಂಡು ತಾನು ಬಣ್ಣದಲ್ಲೇ ಮಾಯವಾಗಿ ಹೋದಳು.






Rate this content
Log in

Similar kannada story from Drama