ಪರಿಸರ ಪ್ರೇಮಿ
ಪರಿಸರ ಪ್ರೇಮಿ


-
ತಮಿಳು ನಾಡಿನ ಪಾಲಕ್ಕಾಡಿನಲ್ಲಿನ ಒಂದು ಶಾಲೆಗೆ ಅಂದಿನ ರಾಷ್ಟ್ರಪತಿಗಳು ಬರುವ ಕಾರ್ಯಕ್ರಮ. ರಸ್ತೆ ಸಂಪರ್ಕ ಸರಿ ಇಲ್ಲದ ಕಾರಣ ಅವರನ್ನ ಹೆಲಿಕಾಪ್ಟರ್ ನಲ್ಲಿ ಕರೆದು ತರುವುದೆಂದು ನಿರ್ಧರಿಸಿದರು. ಕಾರ್ಯಕ್ರಮಕ್ಕೆ ಬಂದು ಮಕ್ಕಳನ್ನ ಮಾತನಾಡಿಸುವಾಗ ನಿಮ್ಮ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿ ಒಂದು ಸಸಿ ನೆಟ್ಟರೆ ನೀವು ದೊಡ್ಡವರಾಗಿ ಎಂದಾದರೂ ಇಲ್ಲಿಗೆ ಬಂದರೆ ನೀವು ನೆಟ್ಟಸಸಿ ಅಂದು ದೊಡ್ಡಮರವಾಗಿ ಬೆಳೆದು ನಿಂತಿದ್ದರೆ ನಿಮಗೆ ಎಷ್ಟು ಸಂತೋಷಾಗುತ್ತಲ್ಲವೇ ಎಂದರು. ಎಲ್ಲರೂ ಹೌದು ಹೌದು ಎಂದಾಗ ಒಬ್ಬ ಹುಡುಗ ಇಲ್ಲಾ ಇಲ್ಲಾ ಅಂದಿದ್ದು ಅವರಿಗೆ ತಿಳಿದು ಅವನನ್ನ ಹತ್ತಿರ ಕರೆದು ಏಕೆ ನೀನೊಬ್ಬ ಮಾತ್ರ ಇಲ್ಲಾ ಎನ್ನುವೆ. ನನ್ನ ಪ್ರಶ್ನೆ ಅರ್ಥಆಗಲಿಲ್ಲವೇ ಎಂದಾಗ, ಸಾರ್ ಪ್ರಶ್ನೆ ಅರ್ಥ ಆಗಿದೆ. ಆದರೆ ನಾವು ನೆಟ್ಟಸಸಿ ಮರ ಆಗಲು ಜನ ಬಿಡುತ್ತಾರೆಂಬ ನಂಬಿಕೆ ಇಲ್ಲಾ. ಕಾರಣ ನೀವು ಹೆಲಿಕಾಪ್ಟರ್ನಲ್ಲಿ ಬರುವುದಕ್ಕಾಗಿ ಹೆಲಿಪ್ಯಾಡ್ ಮಾಡಿದ್ದಾರೆ. ಅದಕ್ಕೆ ದೊಡ್ಡ ದೊಡ್ಡ ಐನೂರು ಮರಗಳನ್ನು ಕಡಿದು ಹಾಕಿದ್ದಾರೆ. ಅದಕ್ಕೆ ಹಾಗೆ ಹೇಳಿದ್ದು ಅಂದ. ತಕ್ಷಣ ಇದು ಯಾರ ಕೆಲಸ. ಇಲ್ಲಿಂದ ನಾನು ರಸ್ತೆಯಲ್ಲೇ ಹೋಗುವೆ ಹೆಲಿಕ್ಯಾಪ್ಟರ್ ಹತ್ತಲ್ಲ ಅಂತ ಬಹಳ ನೊಂದು ಹೇಳಿದರು. ಅವರು ಮತ್ತಾರೂ ಅಲ್ಲ ದಿವಂಗತ Dr APJ ಅಬ್ದುಲ್ ಕಲಾಂ.