kaveri p u

Drama Inspirational Others

4  

kaveri p u

Drama Inspirational Others

ಪೈಲ್ವಾನ

ಪೈಲ್ವಾನ

2 mins
554


ನಾನ್ ಸ್ಟಾಪ್ ನವೆಂಬರ್ - ಮಧ್ಯಂತರ 


ಸುದೀಪ್ ಕೃಷ್ಣನಾಗಿ ಪೈಲ್ವಾನ್ ಚಿತ್ರದಲ್ಲಿ ಮನೋಹರ ನಟನೆ ಮಾಡಿದ್ದಾರೆ. ಈ ಚಿತ್ರವೂ ಕುಸ್ತಿಗೆ, ದೈಹಿಕ ಕಸರತ್ತಿಗೆ ಸಂಬಂಧಿಸಿದೆ. ಈ ಚಿತ್ರವನ್ನು ನನ್ನ ದೃಷ್ಟಿಯಲ್ಲಿ ಬದಲಿಸುವುದಾದರೆ,


ಕೃಷ್ಣನಿಗೆ ಕುಸ್ತಿಯಲ್ಲಿ ಎದುರಾಳಿಯಿಂದ ಮುಖಕ್ಕೆ ಬಲವಾದ ಪೆಟ್ಟು ಬಿದ್ದಿತು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಕೃಷ್ಣನನ್ನು ಆಸ್ಪತ್ರೆಗೆ ಸಾಗಿಸಿ, ಅವನ ಸಾಕುತಂದೆಯನ್ನು ಕರೆಯಲು ವ್ಯವಸ್ಥೆ ಮಾಡುತ್ತಾರೆ. ಅವನ ಸಾಕು ತಂದೆ ಕೆಲಸದ ಮೇಲೆ ಬೇರೆ ಹಳ್ಳಿಗೆ ಹೋಗಿದ್ದರಿಂದ, ಕೃಷ್ಣ ಏಕಾಂಗಿಯಾಗಿ ಆಸ್ಪತ್ರೆಯಲ್ಲಿ ಉಳಿಯುತ್ತಾನೆ. ಈ ಮಧ್ಯೆ ಆಸ್ಪತ್ರೆಯ ಐವತ್ತು ವಯಸ್ಸಿನ ದಾದಿಯೊಬ್ಬರು, ಕೃಷ್ಣನ ಆರೈಕೆಗೆ ನಿಲ್ಲುತ್ತಾರೆ. ಕೃಷ್ಣನಿಗೂ ಆ ದಾದಿಯನ್ನು ನೋಡಿ, ಮಮತೆಯುಕ್ಕುತ್ತದೆ. ತನ್ನ ಅಮ್ಮನನ್ನು ಆ ದಾದಿಯ ಮುಖದಲ್ಲಿ ಕಾಣುತ್ತ, ಕೃಷ್ಣ ತನ್ನ ನೋವನ್ನು ಮರೆಯುತ್ತಿದ್ದ.

ಮಾರನೇ ದಿನ, ದಾದಿ ಕೃಷ್ಣನ ಗಾಯಕ್ಕೆ ಡ್ರೆಸ್ಸಿಂಗ್ ಮಾಡುತ್ತಿದ್ದಾಗ ಕೃಷ್ಣನ ಸಾಕು ತಂದೆ ಆಸ್ಪತ್ರೆಗೆ ಬರುತ್ತಾರೆ. ಕೃಷ್ಣನ್ನು ಮಾತಾಡಿಸುವಷ್ಟರಲ್ಲಿ, ದಾದಿಯು ಕೃಷ್ಣನ ಅಪ್ಪನ ಮುಂದೆ ನಿಲ್ಲುತ್ತಾಳೆ. ಕ್ಷಣ ಕಾಲ ಮೌನ! ಒಬ್ಬರ ಮುಖ ಇನ್ನೊಬ್ಬರು ನೋಡುತ್ತಾ ಅಚ್ಚರಿ ಪಡುತ್ತಾರೆ. ಕೃಷ್ಣನಿಗೆ ಏನೊಂದು ಅರ್ಥವಾಗುವುದಿಲ್ಲ.


ಕೃಷ್ಣನ ಸಾಕು ತಂದೆ ಮೌನ ಮುರಿಯುತ್ತಾರೆ.

ಕೃಷ್ಣನ ತಂದೆ : ಕೃಷ್ಣ, ನನ್ನ ಕ್ಷಮಿಸು. ನಿನಗೊಂದು ಗುಟ್ಟು ಹೇಳಬೇಕು.


ಕೃಷ್ಣ: ಏನಪ್ಪಾ ಹೇಳಿ? ಯಾಕೆ ಕ್ಷಮೆ ಕೇಳ್ತಿದೀರಾ?


ಅಪ್ಪಾ : ಈ ದಾದಿ ನಿನ್ನ ಹೆತ್ತಮ್ಮ ಕಣಪ್ಪಾ!


ಅಮ್ಮ : ಏನ್ ಹೇಳ್ತಿದೀರಾ ನೀವು? ಇವನು ನಾನು ಹೆತ್ತ ಮಗುನಾ?


ಅಪ್ಪಾ : ಹೌದು ಸರಸು, ಅವತ್ತು ಆಸ್ಪತ್ರೆಯಲ್ಲಿ ನೀವಿಬ್ಬರೂ ಕಾಣೆಯಾದ ಮೇಲೆ ನಿಮ್ಮಿಬ್ಬರನ್ನೂ ಹುಡುಕಲು ತುಂಬಾ ಕಷ್ಟಪಟ್ಟೆ. ಹೇಗೋ ಮಗು ಸಿಕ್ಕಿತು ನೀನು ಮಾತ್ರ ಸಿಗಲೇ ಇಲ್ಲ!


‌ಕೃಷ್ಣ : ಮತ್ತೇ ನೀವ್ಯಾಕೆ ನನ್ನ ಸಾಕು ಅಪ್ಪಾ ಅಂತ ಹೇಳ್ತಿದ್ರಿ?

‌ಅಪ್ಪಾ : ನನ್ನ ನಿರ್ಲಕ್ಷತನದಿಂದ ನೀನು ಅಮ್ಮನ ಪ್ರೀತಿ ಕಳ್ಕೊಂಡೆ. ಆ ಕಡೆ ನಿನ್ನ ತಾಯಿಗೂ ಮಗನ ಪ್ರೀತಿ ಸಿಗದ ಹಾಗೆ ಮಾಡ್ಬಿಟ್ಟೇ ಅನ್ನೋ ನೋವು ನನ್ನ ಕಾಡ್ತಿತ್ತು. ಅದಕ್ಕೆ ಅವಳಿಗೆ ಸಿಗದಿದ್ದ ಪ್ರೀತಿಯನ್ನ, ನಾನೊಬ್ಬಳೇ ಹೇಗೆ ಅನುಭವಿಸಲಿ ಅಂತ ನಾನು ನಿನಗೆ ಸಾಕು ತಂದೆ ಅಂತ ಹೇಳಿ ನನ್ನಷ್ಟಕ್ಕೆ ನಾನೇ ಶಿಕ್ಷೆ ಅನುಭವಿಸ್ತಿದ್ದೆ.

‌ಕೃಷ್ಣ : ಅಪ್ಪಾ, ನನಗೆ ಎಷ್ಟೋ ಸಲ ನೀವೇ ನನ್ನ ಅಪ್ಪಾ ಆಗಬಾರ್ದಾ ಅಂತ ಅನಿಸ್ತಿತ್ತು. ನಿನ್ನೆಯಿಂದ ಅಮ್ಮನನ್ನು ನೋಡಿದಾಗಲೂ ಇವರು ನನ್ನಮ್ಮ ಆಗಬಾರ್ದಾ ಅನ್ಸ್ತಿತ್ತು. ಫೈನಲಿ ನನ್ನ ಅಪ್ಪಾ ಅಮ್ಮ ನಂಗ್ ಸಿಕ್ಬಿಟ್ರು.

‌ಅಮ್ಮ : ನೀವು ನೋಂದ್ಕೋಬೇಡಿ. ಮಗನಿಗೆ ಒಳ್ಳೆ ಅಪ್ಪಾ ನೀವು. ಇನ್ಮೇಲೆ ಎಲ್ರು ಖುಷಿಯಾಗಿರೋಣ.

‌(ಚಿತ್ರದಲ್ಲಿ ಕೃಷ್ಣನ ತಾಯಿ ಸತ್ತಿರುತ್ತಾಳೆ, ಅವನಿಗೆ ಅಪ್ಪ ಸಹ ಇರುವುದಿಲ್ಲ.)


Rate this content
Log in

Similar kannada story from Drama