Turn the Page, Turn the Life | A Writer’s Battle for Survival | Help Her Win
Turn the Page, Turn the Life | A Writer’s Battle for Survival | Help Her Win

murali nath

Tragedy Inspirational Others

3  

murali nath

Tragedy Inspirational Others

ಪಾಪದ ಕೊಡ

ಪಾಪದ ಕೊಡ

1 min
56ಒಂದು ಊರಿನಲ್ಲಿ ಬಹಳ ಕೆಟ್ಟ ವ್ಯಕ್ತಿಯೊಬ್ಬನಿದ್ದ .ಅವನು ಇಡೀ ಜೀವನದಲ್ಲಿ ಯಾರಿಗೂ ಒಂದು ಸಹಾಯ ಮಾಡಿದವನಲ್ಲ. ಅಪಾರ ಹಣ ಆಸ್ತಿ ಇದ್ದರೂ ಹೆಂಡತಿ ಮಕ್ಕಳು ಸಹಾ ಸುಖವಾಗಿ ಇರಲು ಬಿಡಲಿಲ್ಲ. ಒಂದುದಿನ ನಡೆದು ಮನೆಗೆ ಬರುವಾಗ ಒಂದು ಎಮ್ಮೆ ಎಲ್ಲಿಂದಲೋ ಓಡಿ ಇವನನ್ನ ತಳ್ಳಿ ಬಿಟ್ಟಿತು. ಕೆಳಗೆ ಬಿದ್ದ . ತಲೆಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಕೆಲವು ದಿನಗಳು ನರಳಿ ಒಂದು ದಿನ ಪ್ರಾಣ ಬಿಟ್ಟ. ನೇರವಾಗಿ ನರಕದ ಮುಖ್ಯದ್ವಾರದಲ್ಲಿ ಬಂದವನೇ ದಪ್ಪ ಕಲ್ಲೊಂದನ್ನು ಎಡವಿ ಭಾವಿಯಂತಿದ್ದ ದೊಡ್ಡ ಹಳ್ಳದಲ್ಲಿ ಬಿದ್ದುಬಿಟ್ಟ. ಅಲ್ಲಿ ನೋಡಿದರೆ ಇವನಂತೆ ಬಹ ಜನ ಮೊದಲೇ ಇದ್ದಾರೆ. ಇವನ ಕೂಗಾಟ ನರಳಾಟ ಎಲ್ಲರಿಗಿಂತ ಜೋರಾಗಿದ್ದ ಕಾರಣ ಅಲ್ಲೇ ಹೋಗುತ್ತಿದ್ದ ಒಬ್ಬ ನರಕದ ಅಧಿಕಾರಿಗೆ ಕೇಳಿಸಿತು. ಈಗತಾನೆ ಬಂದಿರುವ ವಿಷಯ ಅರಿತು ಇವನೇನಾದರೂ ಯಾರಿಗಾದರೂ ಸಣ್ಣ ಉಪಕಾರ ಮಾಡಿದ್ದರೆ ಸಹಾಯ ಮಾಡೋಣವೆಂದು ಅವನ ಜಾತಕ ಜಾಲಾಡಿದ . ಪುಸ್ತಕದ ಕೊನೇ ಪುಟದ ಮೂಲೆಯಲ್ಲಿ ಸಣ್ಣದಾಗಿ ಕಂಡರೂ ಕಾಣದಂತೆ ಇದ್ದ ಬರಹದಲ್ಲಿ ಇವನು ಒಂದು ದಿನ ಸಣ್ಣ ಇರುವೆ ಒಂದನ್ನ ತುಳಿಯದೆ ದಾಟಿರುವ ಸಂಗತಿ ಇತ್ತು. ಆಗ ಹೋಗಲಿ ಇದರಿಂದಲಾದರೂ ಮೇಲೆ ಬರಲಿ ಎಂದು ಸಣ್ಣದಾರವನ್ನು ಬಿಟ್ಟು ಅದರ ಕೊನೆಯನ್ನು ಹಿಡಿದುಕೊಳ್ಳಲು ಕೂಗಿಹೇಳಿದ. ಆದರೆ ಅಷ್ಟು ಸಣ್ಣ ದಾರವನ್ನು ಹಿಡಿದುಕೊಳ್ಳಲು ಧೈರ್ಯ ಬರಲಿಲ್ಲ . ಮೇಲಿದ್ದವ ಮತ್ತೊಮ್ಮೆ ಹೇಳಿದಮೇಲೆ ಹಿಡಿದುಕೊಂಡ ಮೇಲಿನವರು ಎಳೆಯುತ್ತಿದ್ದಂತೆ ಇವನ ಮೇಲೆ ಬರುತ್ತಿದ್ದ . ಆದರೆ ಇವನ ರೀತಿಯೇ ಬಹಳ ಪಾಪ ಮಾಡಿದವರೂ ಅಲ್ಲಿ ಇದ್ದು ಅವರುಗಳೂ ಇವನ ಕಾಲು ಹಿಡಿದು ಮೇಲೆ ಬರಲು ಪ್ರಯತ್ನ ಮಾಡಿದ ಕಾರಣ ಎಲ್ಲರೂ ಮತ್ತೆ ಒಳಕ್ಕೆ ಬಿದ್ದು ಬಿಟ್ಟರು. ನೀನು ಮಾಡಿದ್ದ ಸಣ್ಣ ಸಹಾಯದ ಲೆಕ್ಕ ಇಲ್ಲಿಗೆ ಮುಗಿಯಿತು.ಇನ್ನು ಮುಂದೆ ಇವರ ಜೊತೆಯಲ್ಲೇ ಈ ಕೂಪದಲ್ಲಿ ಇರಬೇಕು ಎಂದು ಹೇಳಿ ಅವನು ಹೊರಟು ಹೋದ.

 
Rate this content
Log in

More kannada story from murali nath

Similar kannada story from Tragedy