ನಂಬಿಕೆ ದ್ರೋಹ
ನಂಬಿಕೆ ದ್ರೋಹ
ಸಾವಿತ್ರಮ್ಮ ಅಂತ ಒಬ್ಬ ಹೆಂಗಸು ಅಷ್ಟು ಓದುಬರಹ ಇಲ್ಲದಿದ್ದರೂ ತಮ್ಮ ಗಂಡ ಹೋದಮೇಲೆ ಬಹಳ ಕಷ್ಟ ಪಟ್ಟು ಕೋರ್ಟು ಕಚೇರಿ ಹತ್ತಿ ತಮಗೆ ಬರಬೇಕಿದ್ದ ಆಸ್ತಿಯನ್ನೆಲ್ಲ ಪಡೆದುಕೊಂಡರು. ಇದ್ದ ಒಬ್ಬನೇ ಮಗನನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾಕ್ಕೆ ಕಳಿಸಿದರು.ಮಗಳ ಮನೆಯಲ್ಲಿ ಇರಬಾರದೆಂಬ ಸ್ವಾಭಿಮಾನದಿಂದ ಬೇರೆ ಮನೆ ಮಾಡಿ ತಮ್ಮನ ಮಗನನ್ನೇ ಜೊತೆಯಲ್ಲಿ ಇಟ್ಟುಕೊಂಡು ಜೀವನ ಮಾಡುತ್ತಿದ್ದರು.ಮೊದಮೊದಲು ಪ್ರತಿದಿನ ಫೋನ್ ಮಾಡ್ತಾ ಇದ್ದವನು ಈಚೆಗೆವಾರಕ್ಕೊಂದು ದಿನ ಮಾತಾಡ್ತ ಇದ್ದ .ಅದು ಹದಿನೈದು ದಿನಕ್ಕೊಂದು ಸಾರಿ ಆಯ್ತು ಕೇಳಿದರೆ ಏನೋ ಒಂದು ಕಾರಣ ಹೇಳಿಬಿಡ್ತಿದ್ದ. ಕೆಲವು ದಿನ ಆದಮೇಲೆ ಇವರ ತಮ್ಮನ ಮಗನಿಗೂ ಅಮೆರಿಕದಲ್ಲಿ ಕೆಲಸ ಸಿಕ್ಕಿ ಹೊರಡುವ ಅವಕಾಶ ಬಂತು.ವಯಸ್ಸಾದ ಅತ್ತೆಯನ್ನ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆದರೆ ಅವನನ್ನ ಬೇಟಿ ಮಾಡಬಹುದು ಅನ್ನೋ ಆಸೆಗೆ ಹೊರಟ. ಅವನು ಇದ್ದ ಸ್ಥಳಕ್ಕೂ ಇವನು ಇರುವ ಸ್ಥಳಕ್ಕೂ ಸಾವಿರ ಮೈಲು ದೂರ. ಒಂದುದಿನ ಹೇಗೋ ಹುಡುಕಿಕೊಂಡು ಹೊರಟ. ಆದರೆ ಅವನು ಆ
ವಿಳಾಸದಲ್ಲಿ ಇರಲಿಲ್ಲ. ಅವನು ಓದುತ್ತಿದ್ದ ಕಾಲೇಜಿನಲ್ಲಿ ವಿಚಾರಿಸಲು ಎಂದೋ ಬಿಟ್ಟು ಹೋಗಿರುವ ವಿಷಯ ಮಾತ್ರ ತಿಳಿಯಿತು.
ಅತ್ತೆಗೆ ಏನೋ ಸುಳ್ಳುಹೇಳಿ ನಂಬಿಸಿದ.ಆದರೆ ಹೆಚ್ಚುದಿನ ಮುಚ್ಚಿಡಲು ಸಾಧ್ಯವಾಗಲಿಲ್ಲ.ರಜದಲ್ಲಿ ಬಂದಾಗ ಎಲ್ಲಾ ತಿಳಿಸಿ ಬಿಟ್ಟ. ಮತ್ತೆ ವಾಪಸ್ ಹೋಗುವುದಿಲ್ಲ ಅಂತ ಅತ್ತೆಯ ಜೊತೆಗೆ ಉಳಿದ. ಒಂದುದಿನ ಇದ್ದಕ್ಕಿದ್ದಹಾಗೆ ಮಗ ಬಂದ ಆದರೆ ಮದುವೆಯಾಗಿದ್ದ ಒಬ್ಬ ಜಪಾನ್ ದೇಶದ ಹುಡುಗಿಯನ್ನ ತನ್ನೊಂದಿಗೆ ಕರೆದು ತಂದಿದ್ದ. ನೋಡಿದ ತಾಯಿ ಏನನ್ನೂ ಮಾತನಾಡಲಿಲ್ಲ .ಹೋಟೆಲ್ ನಲ್ಲಿ ಇರುವುದಾಗಿ ಹೇಳಿ ಕೆಲವೇ ಸಮಯ ಇದ್ದು ಇಬ್ಬರೂ ಹೊರಟು ಹೋದರು. ಅತ್ತೆಯ ಮಗ ಸಮಾಧಾನ ಮಾಡಿದ. ಸಂಜೆಯ ಹೊತ್ತಿಗೆ ದೇವಸ್ಥಾನಕ್ಕೆ ಹೋಗಿಬರ್ತಿನಿ ಅಂತ ಹೊರಟವರು ಎಲ್ಲಿ ಹೋದರೆಂದು ತಿಳಿಯದೆ ಪೊಲೀಸ್ ಕಂಪ್ಲೇಂಟ್ ಕೊಟ್ಟರೂ ಪ್ರಯೋಜನವಾಗಲಿಲ್ಲ . ಎರಡು ವರ್ಷಗಳ ನಂತರ ಕಾಶಿಗೆ ಹೋಗಿದ್ದ ಅವರ ನೆಂಟರೊಬ್ಬರು ಕಂಡಿದ್ದರಂತೆ. ಆದರೆ ಹಿಂದಿನ ಯಾವ ವಿಷಯವೂ ನೆನಪೇ ಇರಲಿಲ್ಲವಂತೆ.