Shridevi Patil

Tragedy Classics Inspirational

4  

Shridevi Patil

Tragedy Classics Inspirational

ನಾಳೆ ಎನ್ನುವ ಭವಿಷ್ಯ.

ನಾಳೆ ಎನ್ನುವ ಭವಿಷ್ಯ.

1 min
391


ನಾನ್ ಸ್ಟಾಪ್ ನವಂಬರ್ ಎಡಿಷನ್ -ಆರಂಭಿಕ ಹಂತ.

ನಾಳೆ.


ರಾಮ್ ಒಬ್ಬ ಬಿಗ್ ಬ್ಯುಸಿನೆಸ್ ಮ್ಯಾನ್. ಪ್ರತಿಯೊಂದು ಹಂತದಲ್ಲೂ ವ್ಯಾವಹಾರಿಕ ಬುದ್ಧಿಯೇ ಮುಂದಿರುತ್ತಿತ್ತು. ಆಫೀಸ್ ಆಗಲಿ , ಪರ್ಸನಲ್ ಆಗಲಿ ಎಲ್ಲವನ್ನು ಬ್ಯುಸಿನೆಸ್ ಮೈಂಡಲ್ಲಿ ಮಾತ್ರ ನೋಡುತ್ತಿದ್ದನು. ದೊಡ್ಡ ಬಂಗಲೆಯಿದ್ದರೂ ಆ ಮನೆಯಲ್ಲಿ ಪ್ರೀತಿಗೆ ಕೊರತೆ ಇದೆ ಎನ್ನುವುದು ದೊಡ್ಡದಾಗಿ ಎದ್ದು ಕಾಣುತ್ತಿತ್ತು. 


ಇದ್ದೊಬ್ಬ ಮಗಳೊಂದಿಗೆ ಅಲ್ಪ ಸ್ವಲ್ಪ ಸಮಯ ಕಳೆಯದೆ, ಇವತ್ತು ಒಂದು ಊರಲ್ಲಿ, ನಾಳೆ ಮತ್ತೊಂದು ಊರಲ್ಲಿ ಕಳೆಯುತ್ತಿದ್ದನು. ಇತ್ತ ಮಗಳು ಕೂಡ ಪ್ರೀತಿಯನ್ನರಸಿ ಹಾದಿ ತಪ್ಪಿದ್ದಳು. 


ಹೀಗೆಯೇ ಬ್ಯುಸಿನೆಸ್ , ಬ್ಯುಸಿನೆಸ್ ಅಂತ ಯೋಚಿಸುತ್ತಾ, ಕೇವಲ ನಾಳೆ ಹಾಗಿರಬೇಕು , ನಾಳೆ ಹೇಗಿರಬೇಕು ಎನ್ನುತ್ತಾ ಕೇವಲ ನಾಳಿನ ಬದುಕಿಗಾಗಿ ದುಡಿಯುತ್ತ ಇವತ್ತಿನ ಸುಖ ಹಾಳು ಮಾಡಿಕೊಂಡನು. ಹೀಗೆಯೇ ಒಂದು ದಿನ ಕೆಲಸದ ಒತ್ತಡದಲ್ಲಿ ನಾಳಿನ ಬ್ಯುಸಿನೆಸ್ ಮೀಟಿಂಗ್ ಸಲುವಾಗಿ , ತರಾತುರಿಯಲ್ಲಿ ರೆಡಿ ಆಗುತ್ತಿದ್ದಾಗ , ಹೃದಯಾಘಾತ ಆಗಿ ತೀರಿಕೊಂಡನು. ನಾಳೆ , ನಾಳೆ ಎನ್ನುತ್ತಾ ತನ್ನ ಸುಖಕರವಾದ ಜೀವನವನ್ನು ತನ್ನ ಕೈಯ್ಯಾರೆ ತಾನೇ ಹಾಳು ಮಾಡಿಕೊಂಡನು. 


Rate this content
Log in

Similar kannada story from Tragedy