STORYMIRROR

murali nath

Tragedy Others

4.5  

murali nath

Tragedy Others

ಮೂಕ ರೋಧನ

ಮೂಕ ರೋಧನ

1 min
40



ನನ್ನ ಮನಸ್ಸು ಇದನ್ನ ಎಲ್ಲಿಂದ ಹೇಗೆ ಪ್ರಾರಂಭ ಮಾಡೋದು ಅಂತಾನೆ ಹೊಳಿಯುತಿಲ್ಲ . ಅದಕ್ಕೆ ಕಾರಣ ಇದೊಂದು ಮನ ಕಲಕುವ ಹೃದಯ ವಿದ್ರಾವಕ ಘಟನೆ. ಹೃದಯ ಹೀನರು ಮಾಡಿರುವ ಕ್ರೂರ ತನದ ಪರಮಾವಧಿ ಎನ್ನಬಹುದಾದ ಕೆಲಸ.


Lock down ನ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ಸಮೀಪದ ಎಡೆಯೂರು ಗ್ರಾಮದಲ್ಲಿ ಒಂದು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸು ಬರುತಿದ್ದ ನನ್ನ ಮಗಳು ಮತ್ತು ಅಳಿಯ 

ಹಳ್ಳಿಯಲ್ಲಿ ಕೆಲವರು ಗುಂಪು ಸೇರಿ ಒಂದು ನಾಯಿಗೆ ನೀರು ಕುಡಿಸಲು ಪ್ರಯತ್ನ ಮಾಡುತ್ತಿದ್ದ ದೃಶ್ಯ ಕಂಡು ವಿಚಾರಿಸಲು, ಆ ನಾಯಿ ಎರಡು ದಿನದಿಂದ ನೀರು ಕುಡಿದಿಲ್ಲವೆಂದು ಹೊಟ್ಟೆ ಸ್ವಲ್ಪ ಊದಿಕೊಂಡಿದೆ ಎಂತಲೂ ಹೇಳಿದ್ದಾರೆ. ಇವರಿಬ್ಬರೂ ಪ್ರಾಣಿ ಪ್ರಿಯರಾದ್ದರಿಂದ ಆ ನಾಯಿಯ ಬಾಯಿ ಮತ್ತು ಕಾಲಿಗೆ ದಾರ ಕಟ್ಟಿ ಕಾರ್ ನಲ್ಲಿ ಹಾಕಿಕೊಂಡು ಬಂದಿದ್ದಾರೆ . ಇವರ ಮನೆ ಪಕ್ಕದಲ್ಲಿ ಪರಿಚಯದ ಒಬ್ಬ ಪಶು ವೈದ್ಯರು ಇರುವುದರಿಂದ ಅಲ್ಲಿಂದಲೇ ಅವರಿಗೆ ವಿಷಯ ತಿಳಿಸಿದ್ದರು. ತಡರಾತ್ರಿ ಅವರಿಗೆ ತೋರಿಸಿದಾಗ ಸುಮಾರು ಅರ್ಧ ಗಂಟೆ ಪರೀಕ್ಷೆ ಮಾಡಿದರೂ ಅವರಿಗೂ ಕಾರಣ ಹೊಳೆಯಲಿಲ್ಲ .

ತಕ್ಷಣ ಅವರು ಓಹ್ ನೋಡಿ ಇಲ್ಲಿದೆ culprit ಅಂತ ತೋರಿಸಿದಂತೆ. ಏನೆಂದರೆ ಯಾರೋ ಅದರ ಮೂತ್ರ ಹೋಗುವ ಜಾಗಕ್ಕೆ ಎರಡು rubber bandಗಟ್ಟಿಯಾಗಿ ಹಾಕಿಬಿಟ್ಟಿದ್ದಾರೆ ಮೂತ್ರ ಹೋಗಕ್ಕೆ ಆಗದೆ ಊದಿ ಕೊಂಡಿದೆ ನೋವು ಹೆಚ್ಚಾಗಿ ಊಟ ತಿಂಡಿ ತಿನ್ನಲು ಅದಕ್ಕೆ ಆಗಿಲ್ಲ. ಅದಕ್ಕಿಂತ ಈಗ urgent ಆಗಿ ರಬ್ಬರ್ ಬ್ಯಾಂಡ್ ಗಳನ್ನ ತೆಗೆಯಬೇಕು .ಅದನ್ನ ಇಲ್ಲಿ ಮಾಡಲು ಸಾಧ್ಯವಿಲ್ಲ. ನಾಳೆಯವರೆಗೂ ಹೇಗಾದರೂ ನೋಡಿಕೊಳ್ಳಿ ಕ್ಲಿನಿಕ್ ನಲ್ಲಿ ಆಪರೇಟ್ ಮಾಡಿ ತೆಗೆಯೋಣ ಸುಮಾರು ಎರಡು ಮೂರು ದಿನದ ಹಿಂದೆಯೇ ಹಾಕಿರುವಂತೆ ಕಾಣುತ್ತೆ. ತೆಗೆಯೋದೆ ಈಗ ಚಾಲೆಂಜಿಂಗ್ ಪ್ರಶ್ನೆ ಅಂದರಂತೆ . ಒಂದು pain killer ಇಂಜೆಕ್ಷನ್ ಕೊಟ್ಟು ಕಳುಹಿಸಿದ್ದಾರೆ. ಇಡೀ ರಾತ್ರಿ ಮನೆಯವರಿಗೆಲ್ಲ ನಿದ್ದೆ ಇಲ್ಲ. ಪಾಪ ಆ ಮೂಕ ಪ್ರಾಣಿಗೂ ಮನುಷ್ಯರ ಮಾತುಗಳು ಅರ್ಥವಾಗಿರಬೇಕು. ಇವರಿಗೆಲ್ಲಾ ಏಕಿಷ್ಟು ಕಷ್ಟ ಕೊಡಬೇಕು, ಆಪರೇಷನ್ ಅಂತ ಬೇರೆ ಹೇಳ್ತಾ ಇದಾರೆ .ಇದೆಲ್ಲಾ ಏನು ಬೇಡ ಅಂತ ಬೆಳಗಿನಜಾವ ಇಹಲೋಕ ತ್ಯಜಿಸಿ ಇವರ ಮನೆಯ ಹಿಂದಿನ ಮರದ ಪಕ್ಕದಲ್ಲೇ ಭೂಗತವಾಯ್ತು .


  






Rate this content
Log in

Similar kannada story from Tragedy