Shridevi Patil

Tragedy Classics Inspirational

3  

Shridevi Patil

Tragedy Classics Inspirational

ಮಳೆಯಲಿ ಸಂಗಾತಿ ಜೊತೆಯಲಿ

ಮಳೆಯಲಿ ಸಂಗಾತಿ ಜೊತೆಯಲಿ

1 min
376


ನಾನ್ ಸ್ಟಾಪ್ ನವಂಬರ್ ಎಡಿಷನ್. ಆರಂಭಿಕ ಹಂತ.

ಮಳೆ.


ಮೊದಲ ಮಳೆಯಂತೆ 

ಎದೆಗೆ ಇಳಿದೆ ಮೆಲ್ಲಗೆ.

ತೊದಲ ಕನಸಂತೆ

 

ಹೀಗೆ ರಾಹುಲ್ ಹಾಡುತ್ತಾ ಶ್ವೇತಾಳ ಹಿಂದಿಂದೆ ಓಡುತ್ತಾ ಬಂದನು. ಶ್ವೇತಾ ಬಣ್ಣ ಬಣ್ಣದ ಪಟ್ಟಿಯ ಛತ್ರಿಯನ್ನು ಹಿಡಿದುಕೊಂಡು ಅದೇಕೋ ಅವಸರವಾಗಿ ಹೊರಟಿದ್ದಳು. ಮಳೆಯ ರಭಸಕ್ಕೆ ರಾಹುಲ್ ಕೂಗಿದ್ದು ಕೇಳದೆ , ತನ್ನ ಪಾಡಿಗೆ ತಾನು ಹೊರಟಿದ್ದಳು. ಬೇಜಾರು ಮತ್ತು ದುಃಖ ಮುಖದಲ್ಲಿ ಎದ್ದು ಕಾಣುತ್ತಿತ್ತು. ರಾಹುಲ್ ಶ್ವೇತಾಳ ಎದುರು ಬಂದವನೇ ಆಕೆಯ ಮುಖ ನೋಡಿದ ಕೂಡಲೇ , ಏನೇ ಶ್ವೇತಾ ಯಾಕೆ ಹೀಗಿದ್ದಿಯ? ಏನಾಯ್ತು ಎಂದು ಕೇಳಿದನು. 


ಶ್ವೇತಾ ರಾಹು ನನ್ನು ನೋಡಿದವಳೇ ಅಳುತ್ತ ಛತ್ರಿಯನ್ನು ಬಿಸಾಕಿ ಆ ಮಳೆಯಲ್ಲಿ ನೆನೆಯುತ್ತ , ಅಪ್ಪ ನನ್ನ ಮದುವೆಯನ್ನು ನಿಶ್ಚಯ ಮಾಡಿದರು . ನಾಳೆಯೇ ನಿಶ್ಚಿತಾರ್ಥ. ಹುಡುಗ ವಿದೇಶದಲ್ಲಿದ್ದಾನೆ. ಮದುವೆ ಮಾಡಿಕೊಂಡು ನನ್ನ ಕರೆದುಕೊಂಡು ಹೋಗ್ತಾನಂತೆ , ನೀನು ಬಂದು ಅಪ್ಪನ ಹತ್ತಿರ ಮಾತಾಡು ಅಂದ್ರೂ ಮಾತಾಡಲಿಲ್ಲ, ಈಗ ನೋಡು ಏನಾಯ್ತು , ನಿನ್ನ ಬಿಟ್ಟು ಬದುಕುವ ಶಕ್ತಿ ನನಗಿಲ್ಲ ಎಂದು ಆ ಮಳೆಯಲ್ಲಿ ಅಳುತ್ತ , ರಾಹುಲ್ ನನ್ನು ಬಿಟ್ಟು ಮನೆಕಡೆ ಓಡಿದಳು.


Rate this content
Log in

Similar kannada story from Tragedy