ಮಿಲನ
ಮಿಲನ
ನಾನ್ ಸ್ಟಾಪ್ ನವೆಂಬರ್ ಮಧ್ಯಂತರ ಹಂತ
ಇತ್ತೀಚಿಗಷ್ಟೇ ನಮ್ಮನ್ನು ಅಗಲಿದ ಪ್ರಸಿದ್ಧ ನಟ ಪುನೀತ್ ರಾಜ್'ಕುಮಾರ್ ಅವರ ಸೂಪರ್ ಹಿಟ್ ಚಿತ್ರವಿದು.
ಈ ನಾಯಕಿಗೆ ನಾಯಕನ ಜೊತೆ ಮದುವೆಯಾಗಿ, ಅವರ ಮೊದಲ ರಾತ್ರಿಯೇ ನಾಯಕಿಗೆ ನಾಯಕ ಇಷ್ಟವಿಲ್ಲದ ವಿಷಯ ತಿಳಿಯುತ್ತದೆ. ಕಾರಣ, ನಾಯಕಿ ಈಗಾಗಲೇ ಬೇರೊಬ್ಬನನ್ನು ಇಷ್ಟ ಪಡುತ್ತಿರುತ್ತಾಳೆ. ಚಿತ್ರದಲ್ಲಿ ನಾಯಕ ನಟ ಪುನೀತ್ ಅವರು, ನಾಯಕಿಯನ್ನು ಅವಳ ಪ್ರೇಮಿಯ ಜೊತೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಆದರೆ ಆ ಪ್ರೇಮಿ ಕೆಟ್ಟ ಭಾವನೆಯಿಂದ ನಾಯಕಿಯನ್ನು ಕಂಡಾಗ, ನಾಯಕಿಗೆ ನೈಜ ವಾಸ್ತವ ಅರಿವಾಗಿ ತಾಳಿ ಕಟ್ಟಿದ ಗಂಡನೇ ಶ್ರೇಷ್ಠ ಎನ್ನುವುದು ಗೊತ್ತಾಗುತ್ತದೆ. ನಾಯಕನ ಮೇಲೆ ನಾಯಕಿಗೆ ಪ್ರೀತಿ ಹುಟ್ಟುತ್ತದೆ. ಈ ದೃಶ್ಯವನ್ನು ನಾವೀಗ ಬದಲಿಸುವುದಾದರೆ,
ಆಕಾಶ್ : ಅಂಜಲಿ ಬೇಗ ರೆಡಿ ಆಗು, ಇವತ್ತು ನಿನ್ನನ್ನ ಒಬ್ಬರಿಗೆ ಪರಿಚಯ ಮಾಡಿಸ್ಬೇಕು.
ಅಂಜಲಿ : ಯಾರಿಗೆ?
ಆಕಾಶ್ : ನಿನ್ನ ಪ್ರೇಮಿಗೆ! ಹೇಮಂತ್ ಸಿಕ್ಕಿದ್ದಾನೆ, ಬೆಂಗಳೂರಲ್ಲೇ ಸೆಟಲ್ ಆಗಿದಾನೆ. ಇವತ್ತು ಸಿಗ್ತೀನಿ ಅಂದಿದಾನೆ ಬಾ ಹೋಗೋಣ.
ಅಂಜಲಿ : ನೋ ಆಕಾಶ್. ಕಷ್ಟನೋ ಸುಖಾನೋ, ಇಷ್ಟಾನೋ, ಕಷ್ಟಾನೋ ನೀವ್ ನಂಗ್ ತಾಳಿ ಕಟ್ಟಿದಿರಾ. ಈ ಜನ್ಮಕ್ಕೆ ನೀವೇ ನನ್ನ ಗಂಡ. ಗಂಡ ಇದ್ದಮೇಲೂ ಬೇರೊಬ್ಬರನ್ನ ಬಯಸೋದು ಭಾರತೀಯ ಹೆಣ್ಣಿನ ಲಕ್ಷಣ ಅಲ್ಲಾ ಅಲ್ವಾ ಆಕಾಶ್.
ಆಕಾಶ್ : ನೋ ಅಂಜಲಿ. ವೈ ಆರ್ ಯು ಥಿಂಕಿಂಗ್ ಲೈಕ್ ದಟ್? ಇಷ್ಟ ಇಲ್ಲ ಅಂದಮೇಲೆ ಯಾವ ಸಂಬಂಧಕ್ಕೂ ಬೆಲೆ ಇರಲ್ಲ. ಗಾಳಿ ಇಲ್ಲದ ಕಡೆ ಉಸಿರಾಡೋಕೆ ಸಾಧ್ಯನಾ? ನಿನ್ನ ಪ್ರೀತಿ, ನಿನ್ನ ಪ್ರೀತಿಸುವ ಹುಡುಗ, ಇವೆ ನಿಜವಾದದ್ದು. ಅವು ನಿನಗೆ ದಕ್ಕಲೇಬೇಕು. ಅವು ಈಗ ನಿನ್ನನ್ನು ಹುಡುಕಿಕೊಂಡು ಬರ್ತಿವೆ. ಹೋಗು, ನಿನ್ನ ಜೀವನ ನೀನು ಜೀವಿಸು. ಇದ್ದಷ್ಟು ದಿನ ನೆಮ್ಮದಿಯಿಂದ, ಪ್ರೀತಿಸೋರ ಮಧ್ಯ ಇರಬೇಕು. ನಾವಿಬ್ಬರೂ ಮುಂದೆಯೂ ಹೀಗೆ ಫ್ರೆಂಡ್ಸ್ ಆಗಿಯೇ ಉಳಿತೀವಿ. ಇಟ್ಸ್ ಮೈ ಪ್ರಾಮಿಸ್ ಟು ಯು.
ಅಂಜಲಿ : ಇಲ್ಲ ಆಕಾಶ್, ಮದುವೆ ಆದಾಗ ನನಗೆ ಹೇಮಂತ್ ಬೇಕು ಅನ್ಸಿದ್ದು ಸುಳ್ಳಲ್ಲ, ಆದರೆ ಈ ಕರಿಮಣಿ, ಬೆಳ್ಳಿ ಕಾಲುಂಗುರ ನನಗೆ ಗಂಡ, ಗಂಡನ ಬೆಲೆ ಏನು ಅಂತ ತೋರ್ಸಿವೆ. ಯಾವತ್ತಿದ್ರೂ ನೀವೇ ನನ್ನವರು.
ಹೇಮಂತ್ (ನಾಯಕಿಯ ಪ್ರೇಮಿ) : ನಿಜ ಅಂಜಲಿ. ನೀನು ಹೇಳ್ತಿರೋದು ಸತ್ಯ. ಇಂತಹ ಗಂಡನ ಬಿಟ್ಟು, ನೀನೇನಾದರೂ ಬಂದ್ರೆ ಅದು ನಿನಗೆ ಆಗೋ ದೊಡ್ಡ ನಷ್ಟ. ನಾನು ಕೂತೂಹಲಕ್ಕೆ ನಿಮ್ಮ ಮನೆಗೆ ಸರ್ಪ್ರೈಸ್ ಕೊಡೋಣ ಅಂತ ಬಂದೆ. ಆಕಾಶ್ ಅವರ ಬಗ್ಗೆ ಗೊತ್ತಾಯ್ತು. ನಿಮ್ಮಿಬ್ಬರನ್ನ ಬೇರೆ ಮಾಡಿದ್ರೆ ಆ ಶಾಪ ನನ್ನ ತಟ್ಟದೇ ಬಿಡತ್ತಾ. ನೀವಿಬ್ಬರು ಮೇಡ್ ಫಾರ್ ಈಚ್ ಅದರ್. ನನ್ನ ಮರೆತು ಆಕಾಶನ ಜೊತೆ ಚೆನ್ನಾಗಿರು ಅಂಜಲಿ. ಆಕಾಶ್ ನಂಗಿಂತ ಒಳ್ಳೆ ಹುಡುಗ. ಇನ್ನೆಂದೂ ನಿಮ್ಮ ಬಾಳಲ್ಲಿ ನಾನು ಬರುವುದಿಲ್ಲ.
ಆಕಾಶ್ ಅಂಜಲಿ ಒಂದಾಗಿ ನಗುನಗುತ್ತ ತಮ್ಮ ಜೀವನ ಶುರು ಮಾಡುತ್ತಾರೆ.
