kaveri p u

Tragedy Others Children

4  

kaveri p u

Tragedy Others Children

ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ,

ಕಷ್ಟಗಳ ಕೊಡಬೇಡ ಎನ್ನಲಾರೆ ರಾಮ,

2 mins
434


ರಾಮಪ್ಪ ಮತ್ತು ಭಾರತಿ ಎಂಬ ದಂಪತಿಗೆ ಅನಿತಾ, ವನಿತಾ ಮಕ್ಕಳಿಬ್ಬರು ಇದ್ದರು. ತುಂಬಾ ಬಡತನದ ಪರಿಸ್ಥಿತಿ ಇತ್ತು. ಇಬ್ಬರು ಕೂಲಿ ಮಾಡಿ ಹೆಣ್ಣುಮಕ್ಕಳನ್ನು ಚನ್ನಾಗಿ ನೋಡಿ ಕೊಂಡಿದ್ದರು. ಓದಿನಲ್ಲಿ ಸದಾ ಮುಂದೆ ಆ ಇಬ್ಬರು ಮಕ್ಕಳು. ಇಡೀ ಊರಿಗೆ ಅಚ್ಚುಮೆಚ್ಚು ಆ ಮಕ್ಕಳು. ಸರಳ ಸ್ವಭಾವ ಅವರದ್ದು. ಅಪ್ಪಾ ಅಮ್ಮನ ಜೊತೆ ಮನೆಗೆಲಸ ಹೊಲದ ಕೆಲಸ ಎಲ್ಲವನ್ನು ನಿಭಾಯಿಸುತ್ತಿದ್ದರು. 


ಹೀಗೆ ದಸರಾ ಹಬ್ಬ ಶುರುವಾಗಿತ್ತು. ಹಳ್ಳಿಗಳಲ್ಲಿ 9 ದಿನ 

ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇರುತ್ತವೆ. ಬನ್ನಿ ಮರ ಪೂಜೆ ಮಾಡುವುದು ಪ್ರಾತೀತ ಇದೆ. ಅನಿತಾ ಮತ್ತು ವನಿತಾ ಕೂಡಾ ಈ ಪೂಜೆ ದಿನವೂ ಮಾಡುತಿದ್ದರು.

ಬೆಳಿಗ್ಗೆ 5ಗಂಟೆಗೆ ಪೂಜೆಗೆ ಎಂದು ಅವರು ಬಣ್ಣಿಮರಕ್ಕೆ ಬಂದಿದ್ದರು. ಅದ್ಯಾಕೋ ಆ ದಿನ ಅವರಿಗೆ ಅಶುಭವಾಗಿತ್ತು ಅಂತಾ ಅನಿಸುತ್ತೆ. ಒಂದು ಹಾವು ಅನಿತಾಳಿಗೆ ಕಚ್ಚಿತು ಅದನ್ನು ನೋಡಿ ವನಿತಾ ಅಳುತ್ತಾ ಮನೆಗೆ ಹೋಗಿ ಅಪ್ಪ ಅಮ್ಮನನ್ನು ಕರೆದು ಓಡೋಡಿ ಬಂದಳು. ಅಷ್ಟರಲ್ಲಿ ಅನಿತಾ ಅರಿವಿಲ್ಲದೆ ಬಿದ್ದಿದ್ದಳು. ಅದನ್ನು ಕಂಡ ಅಪ್ಪಾ ಅಮ್ಮ ಹೆದರುತ್ತಾ ಅವಳ ಉಸಿರಾಟವನ್ನು ನೋಡಿದರು. 


ಜೀವ ಇದೆ ಬೇಗನೆ ಆಸ್ಪತ್ರೆಗೆ ಹೋಗಲು ಅಲ್ಲಿ ಇಲ್ಲಿ ಕೇಳಿ ಒಂದು ಕಾರಿನ ವ್ಯವಸ್ತೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿ ದಾಖಲು ಮಾಡಿದರು. ಅವಳಿಗೆ ಹಾವು ಕಾಲಿಗೆ ಕಚ್ಚಿದ ಪರಿಣಾಮ ಅವಳ ಕಾಲನ್ನು ತೆಗೆಯಲಾಗುತ್ತದ್ದೆ ಎಂದು ಹೇಳಿದರು. ನಮ್ಮಲ್ಲಿ ಅಷ್ಟು ದುಡ್ಡು ಇಲ್ಲಾ ಡಾಕ್ಟರ ನಾವು ಬೇರೆ ಕಡೆ ಹೋಗ್ತೀವಿ ಬಿಡಿ ಅಂತಾ ಹೇಳಿದರು.

ಅಯ್ಯೋ ರಾಮಪ್ಪ ಇದು ಗೌರ್ಮೆಂಟ್ ಆಸ್ಪತ್ರೆ ನೀವು ಮೊದಲು ರೆಸ್ಟ್ ತಗೊಳಿ ಹೆದರಬೇಡಿ ನಿಮ್ಮ ಮಗಳು ತುಂಬಾ ಗಟ್ಟಿ ಇದ್ದಾಳೆ. 3 ತಿಂಗಳು ಸಾಕು ಅವಳಿಗೆ ಪ್ಲಾಸ್ಟಿಕ್ ಕಾಲು ನೀಡುತ್ತೇವೆ ಅದರ ಮೂಲಕ ಅವಳು ನಡೆಯುತ್ತಲೇ ಮೊದಲಿನಂತೆ. 

ರಾಮಪ್ಪ ನನ್ನ ಮಗಳು ಯಾವದೇ ಗಂಡು ಮಗುವಿಗೂ ಸಾಟಿ ಇಲ್ಲದ ಹುಡುಗಿ. ಅವಳು ಬಲ ಹೀನಳಾಗಿ ಆ ಪ್ಲಾಸ್ಟಿಕ ಕಾಲು ಹಾಕಿಕೊಂಡು ಮಲಗಿರುವುದನ್ನು ನೋಡಲು ಆಗುತ್ತಿಲ್ಲಾ ಎಂದು ಕಣ್ಣೀರು ಒರೆಸಿಕೊಂಡು ಮಲಗಿದನು.

 ಇದೆಲ್ಲವೂ ಮುಗಿಯುವದರೊಳಗೆ ಅವಳ 10ನೆ ತರಗತಿ ಪರೀಕ್ಷ ಬರೆಯಲು ಸಾಧ್ಯವಾಗಲಿಲ್ಲಾ. ಅವಳ ಕನಸು ನುಚ್ಚು ನೂರಾಯಿತು ಎಂದು ಅಪ್ಪಾ ಅಮ್ಮನಿಗೆ ಹೇಳಿ ಅಳುತ್ತಿದ್ದಳು. ತಾಯಿ ಭಾರತಿ ಜೀವನದಲ್ಲಿ ನೀನು ಗೆದ್ದಿರುವೆ ಮಗಳೇ. ಯಾವುದರ ಚಿಂತೆ ನಿನಗೆ ಬೇಡಾ ನಿನಗೆ ಈಗ ವಿಶ್ರಾಂತಿ ಬೇಕು ಮಲಗು ಎಂದು ಅಮ್ಮಾ ಹೇಳಿದರು.


ಕಷ್ಟಗಳನ್ನು ನೀಡುವವನು ನೀನು.

ಅದಕ್ಕೆ ಪರಿಹಾರ ನೀಡುವವನು ನೀನು ದೇವ.

ರಕ್ಷಿಸಿ ದೇವ ನಮ್ಮೆಲ್ಲರನ್ನು.



Rate this content
Log in

Similar kannada story from Tragedy