ಹೃದಯ ಸ್ಪರ್ಶಿ
ಹೃದಯ ಸ್ಪರ್ಶಿ


ಇಂಗ್ಲೆಂಡ್ ನಲ್ಲಿ ನಡೆದ ಒಂದು ಘಟನೆ. ಕೆಲವು ವರ್ಷಗಳ ಕೆಳಗೆ ಅಲ್ಲಿನ ನಿವಾಸಿಯೊಬ್ಬ ಅತಿ ದುಭಾರಿ ಹೊಚ್ಚ ಹೊಸ "ಬೆಂಟ್ಲಿ" ಕಾರೊಂದರಲ್ಲಿ ಅತಿ ವೇಗವಾಗಿ ಅವನ ಮಗಳನ್ನ ನೋಡಲು ಶಾಲೆಗೆ ಹೋಗುತ್ತಿದ್ದಾಗ . ಎದುರಿನಿಂದ ದಪ್ಪ ಕಲ್ಲೊಂದು ಮುಂದಿನ ಗಾಜಿಗ ಬಿತ್ತು. ಹೆದರಿ ತಕ್ಷಣ ಬ್ರೇಕ್ ಹಾಕಿದ. ಬಹಳ ಮುಂದೆ ಹೋಗಿ ನಿಂತು ಕೋಪದಿಂದ ಕೆಳಗೆ ಇಳಿದು ಬಂದು ನೋಡಿದರೆ ಅಲ್ಲಿ ಯಾರೂ ಕಾಣುತ್ತಿಲ್ಲ. ಇನ್ನೂ ಸ್ವಲ್ಪ ಹಿಂದೆ ಬಂದ. ಅಲ್ಲಿ ಹತ್ತು ವರ್ಷದ ಹುಡುಗ, ಅವನ ತಂಗಿ ವೀಲ್ ಚೇರ್ ನಿಂದ ಬಿದ್ದು ಹೋಗಿದ್ದಕ್ಕೆ ಎತ್ತಲು ಪ್ರಯತ್ನಮಾಡುತ್ತಿದ್ದಾನೆ ಅವನಿಗೆ ಆಗುತ್ತಿಲ್ಲ. ಅಲ್ಲಿಗೆ ಬಂದವನೇ ಸಹಾಯಮಾಡಿ ಆ ಹೆಣ್ಣು ಮಗುವನ್ನ ವೀಲ್ ಚೇರ್ ನಲ್ಲಿ ಎತ್ತಿ ಕೂಡಿಸಿದ. ಆ ಹುಡುಗ ಧನ್ಯವಾದ ವೆಂದ. ಆಗ ಕಾರಲ್ಲಿ ಬಂದ ವ್ಯಕ್ತಿ ಆ ಹುಡುಗನಿಗೆ ಹೇಳಿದ ಇಲ್ಲಿ ನಿನ್ನ ಬಿಟ್ಟರೆ ಬೇರೆ ಯಾರೂ ಇಲ್ಲ. ನನ್ನ ಕಾರಿಗೆ ಕಲ್ಲು ಹೊಡೆದವನು ನೀನೇ ಇರಬೇಕು ಅಂದಾಗ ಹೌದು ನಾನೇ ಸುಮಾರು ಒಂದು ಗಂಟೆಯಿಂದ ಯಾವುದಾದರೂ ಕಾರು ನಿಲ್ಲುತ್ತೇನೋ ಸಹಾಯಮಾಡ್ತಾರೇನೋ ಅಂತ ಪ್ರಯತ್ನ ಮಾಡಿ ಸುಸ್ತಾದೆ. ಆದರೆ ಅತಿ ವೇಗವಾಗಿ ಹೋಗೋ ಈ ಕಾರುಗಳು ಒಂದೂ ನಿಲ್ಲಲಿಲ್ಲ. ನನಗೆ ಹೊಳೆದ ಉಪಾಯ ಇದೊಂದೇ ಅದಕ್ಕೆ ಹಾಗೆ ಮಾಡಿದೆ. ನೀವಲ್ಲದೆ ಯಾವ ಕಾರು ಬಂದಿದ್ದರೂ ಅದೇ ಕೆಲಸ ಮಾಡ್ತಾಯಿದ್ದೆ ಅಂತ ಹೇಳಿದಾಗ ಅವನು ಏನೂ ಮಾತನಾಡಲಿಲ್ಲ ಮಗಳಿಗಾಗಿ ತೆಗೆದುಕೊಂಡಿದ್ದ ಚಾಕೊಲೇಟ್ ಗಳನ್ನ ಇವನ ಕೈಲಿಟ್ಟು ಹೊರಟ. ಎದುರಿಗಿರುವ ಗಾಜು ಒಡೆದು ಸೀಳಿದೆ. ಅವನಿಗೆ ಗೊತ್ತು ಅದನ್ನ ಬದಲಾಯಿಸಲು ಬಹಳ ವೆಚ್ಚವಾಗುತ್ತೆ ಅಂತ ಅದಕ್ಕೂ ಮೊದಲು ಎರಡು ಮೂರು ದಿನಗಳ ಹಿಂದೆಯಷ್ಟೆ ಮಗಳಿಗಾಗಿ ತೆಗೆದುಕೊಂಡಿದ್ದ ಕಾರು. ಶಾಲೆಯ ಬಳಿ ಬಂದಾಗ ಅಂಗ ವೈಫಲ್ಯದ ಮಗಳನ್ನ ಎತ್ತಿಕೊಂಡು ಹೊರಗೆ ಅವಳ ಟೀಚರ್ ನಿಂತಿದ್ದಾರೆ. ನಿಧಾನವಾಗಿದ್ದಕ್ಕೆ ಕ್ಷಮಿಸಿ ಎಂದು ನಡೆದ ಘಟನೆ ವಿವರಿಸುತ್ತಿದ್ದಾಗ ಮಾತನಾಡಲಾಗದ ಅಂಗವಿಕಲ ಮಗಳ ಕಣ್ಣಲ್ಲಿ ನೀರು. ಕಾರಲ್ಲಿ ಹಾಗೆ ತಂದು ಮಗಳನ್ನ ಕೂಡಿಸಿ ಕಣ್ಣೀರು ಒರಿಸಿದ. ದಾರಿ ಉದ್ದಕ್ಕೂ ಆ ಹುಡುಗ ಅಂಗವಿಕಲನ ಆ ತಂಗಿ, ಮುಂದಿರುವ ಸೀಳಿದ ಗಾಜು ಮನೆಗೆ ಬರುವವರೆಗೂ ನೆನಪಿಸುತ್ತಲೇ ಇತ್ತು.
ಮಗಳು ಒಡೆದ ಗಾಜನ್ನೇ ಒದ್ದೆ ಕಣ್ಣುಗಳಿಂದ ದಿಟ್ಟಿಸಿ ಹಾಗೇ ನೋಡುತ್ತಿದ್ದಳು.