kaveri p u

Tragedy Inspirational Children

4  

kaveri p u

Tragedy Inspirational Children

ಹಣ

ಹಣ

1 min
488


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ವಿನಯ ಮತ್ತು ವಿದ್ಯಾ ಅಣ್ಣಾ ತಂಗಿ. 


ಚಿಕ್ಕವರಿದ್ದಾಗ ಅಪ್ಪಾ ಅಮ್ಮನನ್ನು ಕಳೆದುಕೊಂಡವರು. ಅವರ ಓದು ಬರಹದ ಖರ್ಚನ್ನು ಅವರ ಚಿಕ್ಕಪ್ಪನೇ ನೋಡಿಕೊಳ್ಳುತ್ತಿದ್ದ. ಆ ಚಿಕ್ಕಪ್ಪನಿಗೂ ಒಬ್ಬಳು ಮಗಳಿದ್ದಳು.  ಆತನಿಗೆ ಪ್ರತಿ ದಿನ ಖರ್ಚು ಮಾಡಿದ್ದನ್ನು ಬರೆದು ಇಡುವ ಗುಣವಿತ್ತು. ಪ್ರತಿ ಹಣದ ಅವಶ್ಯಕತೆ 3 ಜನ ಮಕ್ಕಳಿಗೆ ತಿಳಿಸುತ್ತಿದ್ದ. ಚಿಕ್ಕಪ್ಪನ ಗುಣವೇ ವಿನಯ ವಿದ್ಯಾಗೆ ಬಂದಿತ್ತು. ಹತ್ತು ರೂಪಾಯಿ ಖರ್ಚು ಮಾಡುವುದಕ್ಕೆ 10 ಸಲ ವಿಚಾರ ಮಾಡುತ್ತಿದ್ದರು. ಕಾಲೇಜ್ ಜೊತೆ ಪಾರ್ಟ ಟೈಂ ಕೆಲಸಕ್ಕೂ ಹೋಗುತ್ತಿದ್ದರು.


ಒಂದು ದಿನ ಚಿಕ್ಕಪ್ಪ ಹುಷಾರು ತಪ್ಪುತ್ತಾರೆ. ಆಸ್ಪತ್ರೆ ಖರ್ಚು ತುಂಬಾ ಬಂದಿರುತ್ತೆ. ಆಗ ಉಪಯೋಗಕ್ಕೆ ಬಂದಿದ್ದು ಅವರು ಕೂಡಿಸಿ ಇಟ್ಟ ಹಣ. ಅದನ್ನೇ ಆ ದಿನ ಬಳಕೆ ಮಾಡಿದರು.


ಚಿಕ್ಕಪ್ಪನಿಗೆ ಖುಷಿಯಾಯಿತು. ನಾನು ಹೇಳಿ ಕೊಟ್ಟ ಹಾಗೆಯೇ ನಡೆದುಕೊಂಡು ನನ್ನ ಕಷ್ಟದ ಸಮಯದಲ್ಲಿ ನನ್ನ ಜೊತೆ ನಿಂತರು ಎಂದು.

ಹೀಗೆಯೇ ಮುಂದೆಯೂ ಸಹ ಮೂವರೂ ಮಕ್ಕಳು ಹಣದ ಅಗತ್ಯ ಅರಿತು ನಡೆಯತೊಡಗಿದರು. ದುಡಿಯುವುದು, ಗಳಿಸುವುದು ಸುಲಭ, ಗಳಿಸಿದ್ದನ್ನು ಉಳಿಸಿಕೊಳ್ಳುವುದೇ ನಿಜವಾದ ಸವಾಲು.


ಹಣದ ಅವಶ್ಯಕತೆ ಮಕ್ಕಳಿಗೆ ತಿಳಿಸುವುದು ಒಳ್ಳೆಯ ವಿಚಾರವೇ ಅಲ್ಲವೇ.



Rate this content
Log in

Similar kannada story from Tragedy