Kalpana Nath

Tragedy Inspirational Others

3.6  

Kalpana Nath

Tragedy Inspirational Others

ಹೀಗೊಂದು ಮದುವೆ

ಹೀಗೊಂದು ಮದುವೆ

1 min
55



ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಮದುವೆಗೆ ಬಂದಿದ್ದೆ. ಅದು ಚಿಕ್ಕಬಳ್ಳಾಪುರದ ಒಬ್ಬ ದೊಡ್ಡ ವ್ಯಾಪಾರಿಯ ಮಗಳ ಮದುವೆ .ಎಲ್ಲಾ ಮದುವೆ ಮನೆಯಂತೆಯೇ ಸಡಗರ ಸಂಭ್ರಮ ಸುಮಾರು ಬೆಳಗ್ಗೆ ಹತ್ತು ಗಂಟೆಯವರೆಗೂ ಇತ್ತು. ಆದರೆ ಇದ್ದಕ್ಕಿದ್ದಹಾಗೆ ಗುಸುಗುಸು ಮಾತು. ಗುಂಪು ಗುಂಪಾಗಿ ಜನ ಸೇರಿ ಏನೋ ಮಾತನಾಡಿಕೊಳ್ಳುತ್ತಿದರು. ನನಗೆ ಗಂಡಿನ ತಂದೆ ಬಿಟ್ಟರೆ ಯಾರೂ ಪರಿಚಿತರಿರಲಿಲ್ಲ ಹಾಗಾಗಿ ಯಾರನ್ನೂ ಹೋಗಿ ಕೇಳುವುದು ಸ್ವಲ್ಪ ಕಷ್ಟವಾಯ್ತು. ಅಷ್ಟರಲ್ಲಿ ಅಲ್ಲೇ ಓಡಾಡಿಕೊಂಡಿದ್ದ ಒಬ್ಬ ಯುವಕನ ಜೊತೆ ಒಂದು ರೂಮಿಗೆ ಹೋಗಿ ಆ ವ್ಯಾಪಾರಿ ಸುಮಾರು ಹೊತ್ತು ಏನೋ ಮಾತನಾಡುತ್ತಿದ್ದರು. ಹೊರಗೆ ಯಾರೂ ಇದರ ವಿಷಯ ಬಾಯಿ ಬಿಡುತ್ತಿಲ್ಲ. ಏನೋ ತೊಂದರೆಯಾಗಿದೆ ಎಂದು ಮಾತ್ರ ನಾನು ಊಹಿಸಿದೆ.


ಎಲ್ಲರ ಕಣ್ಣು ರೂಮಿನ ಬಾಗಿಲ ಕಡೆಯೇ ಇತ್ತು. ಸ್ವಲ್ಪ ಸಮಯದ ನಂತರ ಇಬ್ಬರೂ ಹೊರಬಂದರು. ಆ ಯುವಕ ಮಧುಮಗನ ಪೋಷಾಕಿನಲ್ಲಿದ್ದ . ಮುಖದಲ್ಲಿ ಮಾತ್ರ ನಗು ಇರಲಿಲ್ಲ ಬದಲಿಗೆ ಏನೋ ಭಯ ಆತಂಕವಿತ್ತು. ಅದೇ ಮಹೂರ್ತದಲ್ಲಿ ತಾಳಿಕಟ್ಟಿದ್ದು ಆಯ್ತು. ಮದುವೆಯ ಉಳಿದೆಲ್ಲ ಶಾಸ್ತ್ರಗಳು ನಡೆಯುತ್ತಿತ್ತು. ನಂತರ ಊಟಕ್ಕೆ ಹೋದಾಗ ನನಗೆ ತಿಳಿದ ವಿಷಯವೇನೆಂದರೆ ತಾಳಿ ಕಟ್ಟಬೇಕಾದ ಹುಡುಗ ತನಗೆ ಮದುವೆ ಇಷ್ಟವಿಲ್ಲವೆಂದು ಪರಾರಿಯಾಗಿದ್ದು ಅವನ ಅಪ್ಪ ಅಮ್ಮ ಸಹಾ ಅವನ ನಡವಳಿಕೆಗೆ ಬೇಸರಗೊಂಡಿದ್ದರೂ ಅಲ್ಲೇ ಇದ್ದರು. ಬೇರೆ ದಾರಿಕಾಣದೆ ಅವರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಆ ಯುವಕನನ್ನ ಒಪ್ಪಿಸಿ ತಾಳಿ ಕಟ್ಟಿಸಿ ಎಲ್ಲರೂ ಹೊಗಳು ವಂತೆ ಮಾಡಿದ್ದರು. ಅದಕ್ಕೆ ಮೊದಲೇ ಅವರ ಮಗಳ ಸಮ್ಮತಿ ಪಡೆದಿದ್ದರಂತೆ. ನಂತರದಲ್ಲಿ ಆ ಅಂಗಡಿಯನ್ನು ಅವನಿಗೇ ಕೊಟ್ಟು ಹಣ ಸಹಾಯವನ್ನೂ ಮಾಡಿ ಚೆನ್ನಾಗಿ ನೋಡಿಕೊಂಡರಂತೆ.


Rate this content
Log in

Similar kannada story from Tragedy