murali nath

Tragedy Inspirational Others

4.0  

murali nath

Tragedy Inspirational Others

ಹೆಣ್ಣು ಸಂಸಾರದ ಕಣ್ಣು

ಹೆಣ್ಣು ಸಂಸಾರದ ಕಣ್ಣು

2 mins
56



ನಾನೊಂದು ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿದ್ದಾಗ ನಡೆದ ಘಟನೆ. ಒಬ್ಬ ನೌಕರ ಬಹಳ ದಿನಗಳಿಂದ ಕೆಲಸಕ್ಕೆ ಬರುತ್ತಿರಲಿಲ್ಲ.ಅವನಿಗೆ ಕುಡಿಯುವ ಹವ್ಯಾಸವಿತ್ತು .ಆದರೆ ಒಳ್ಳೆಯ ಫುಟ್ ಬಾಲ್ ಆಟಗಾರ. ನೊಟೀಸ್ ಕಳುಹಿಸಿದರೂ ಕೆಲಸಕ್ಕೆ ಹಾಜರಾಗಲಿಲ್ಲ. ಒಂದು ಕಮಿಟಿ ಮಾಡಿ ಅವನ ಬಗ್ಗೆ ತಿಳಿದು ಮುಂದಿನ ಕ್ರಮ ಜರುಗಿಸುವುದು ಎಂದು ತೀರ್ಮಾನಿಸಿ ಸತ್ಯಾಂಶ ತಿಳಿಯಲು ಅವನ ಮನೆಗೆ ಹೋದೆವು. ಮನೆಮುಂದೆ ಕುಳಿತಿದ್ದ ಹೆಂಗಸು ನಮ್ಮ ಜೀಪ್ ನೋಡಿ ಓಡಿ ಬಂದುಅಳುತ್ತಾ ನಿಂತಾಗ ಕಾರಣ ಕೇಳಿದೆವು. ಆ ಹೆಂಗಸು  ಅವನ ಪತ್ನಿ ಎಂದು , ಹದಿನೈದು ದಿನದಿಂದ ಗಂಡ ಮನೆಗೆ ಬಂದಿಲ್ಲವೆಂದು ತಿಳಿಯಿತು. ಮಾರನೇ ದಿನ ಆಫೀಸ್ ಗೆ ಬರಲು ಹೇಳಿ ಹಿಂದಿರುಗಿದೆವು. ಹೇಳಿದಂತೆ ಮಾರನೇ ದಿನ ಗೇಟ್ ಬಳಿ ಹರಿದ ಸೀರೆ ಉಟ್ಟುಕೊಂಡು ಬಂದು ನಿಂತಿದ್ದಾಳೆ. ( ಯಾರೋ ಹೇಳಿದರಂತೆ ಹೀಗೆ ಹೋದರೆ ಗಂಡನ ಕೆಲಸ ನಿನಗೆ ಬೇಗ ಕೊಡ್ತಾರೆ ಅಂತ) ಯಾರೂ ವಿಚಾರಿಸಿಲ್ಲ . ಸುಮಾರು ಹೊತ್ತು ಆದಮೇಲೆ ನಮ್ಮವರೇ ಯಾರೋ ನೋಡಿ ಅವರ ಮನೆಗೆ ಕರೆದುಕೊಂಡು ಹೋಗಿ ( ಪಕ್ಕದಲ್ಲೇ ನಮ್ಮ ಕ್ವಾರ್ಟರ್ಸ್) ಬೇರೆ ಸೀರೆ ಕೊಟ್ಟು ಕರೆದುಕೊಂಡು ಬಂದಿದ್ದಾರೆ. ಕಮಿಟಿಯಲ್ಲಿ ಒಬ್ಬರು ಆ ಹೆಂಗಸನ್ನು ಕೇಳಿದರು ನಿಮ್ಮ ಯಜಮಾನರು ಇಲ್ಲಿ ಏನಾಗಿ ಕೆಲಸ ಮಾಡ್ತಾರೆ .ಗೊತ್ತಿಲ್ಲ ಎಷ್ಟು ವರ್ಷಗಳಿಂದ ಇಲ್ಲಿ ಇದ್ದಾರೆ , ಗೊತ್ತಿಲ್ಲ . ಹೋಗಲಿ ಎಷ್ಟು ಸಂಬಳ ಬರ್ತಿತ್ತು ,ಗೊತ್ತಿಲ್ಲ .ಮನೆಗೆ ಎಷ್ಟು ಹಣ ಖರ್ಚಿಗೆ ಅಂತಕೊಡ್ತಾ ಇದ್ದರು ಮುನ್ನೂರು ರೂಪಾಯಿ. ಉಳಿದದ್ದು ಏನ್ಮಾಡ್ತಾ ಇದ್ದರು ಗೊತ್ತಿಲ್ಲ.. ಬೇರೆ ಕೆಟ್ಟ ಅಭ್ಯಾಸಗಳು ಏನಾದರೂ ಇತ್ತಾ ಗೊತ್ತಿಲ್ಲ. ಅಂತ ಮುಗ್ಧತೆಯಿಂದ ಹೇಳಿದಾಗ ಮತ್ತೊಬ್ಬರು ಆ ಹೆಂಗಸಿಗೆ ತಿಳಿಸಿದರು ನಿಮ್ಮಯಜಮಾನ ನಿಗೆ ಎಲ್ಲ ಹೋಗಿ ಕೈಗೆ ಇಪ್ಪತ್ತು ಸಾವಿರ ರೂಪಾಯಿ ಸಂಬಳ. 700  ರೂಪಾಯಿ ಮನೆಗೆ ಕೊಡ್ತಾನೆ ಅಂದರೆ ನಮಗೆಲ್ಲಾ ನಂಬಲು ಸಾಧ್ಯ ವಿಲ್ಲ. ಇನ್ನುಮುಂದೆ ಹೇಗಾದರೂ ಮಾಡಿ ಅವನನ್ನ ಕೆಲಸಕ್ಕೆ ಬರುವ ಹಾಗೆ ನೀನು ಮಾಡಿದರೆ ಅವನಿಗೆ 700

ರೂಪಾಯಿ ಕೊಟ್ಟು ನಿನ್ನ ಸಂಸಾರಕ್ಕೆ ಉಳಿದ ಹಣ ಕೊಡೋ ಹಾಗೆ ಮಾಡಬಹುದು ಎಂದದ್ದಕ್ಕೆ ಅದು ಸಾಧ್ಯವಿಲ್ಲ ಸಾರ್ ನನ್ನ ಮಾತು ಎಲ್ಲಿ ಕೇಳ್ತಾನೆ ಅಂತ ಕಣ್ಣೀರು ಸುರಿಸಿದಳು . ಒಂದು ಸಂಸಾರ ಹಾಳಾ ಗೋದನ್ನ ತಪ್ಪಿಸುವ ಉದ್ದೇಶದಿಂದ . ಅವನ ಸಂಬಳ ಪ್ರತಿ ತಿಂಗಳು ನಮ್ಮಲ್ಲಿರುವ ಬ್ಯಾಂಕ್ ಗೆ ಬಂದು ತೆಗೆದುಕೊಳ್ಳುವ ಹಾಗೆ ಮಾಡ ಬಹುದೆಂದು ಆಗ ನಮ್ಮಗಳ ಮುಂದೆ ಮನೆಗೆ ನ್ಯಾಯವಾಗಿ ಹಣ ಕೊಡಿಸಬಹುದು ಎಂದು ತೀರ್ಮಾನ ಆಯ್ತು.ಆ ಹೆಂಗಸಿಗೂ ಸಮಾಧಾನವಾಯ್ತು.ನಮ್ಮ ಕಮಿಟಿ ಚೇರ್ಮನ್ ತಮ್ಮ ಕೈಯಿಂದ ಐದು ಸಾವಿರ ಕೊಟ್ಟು ಕಳುಹಿಸಿದರು. ಒಂದು ವಾರ ಕಳೆದಿರಬಹುದು ಒಂದು ಆಘಾತಕಾರಿ ಸುದ್ದಿ ಆ ಮನುಷ್ಯ liver damage ಆಗಿ ನಿಧನನಾಗಿದ್ದಾನೆ. ಕೆಲವೇ ದಿನಗಳಲ್ಲಿ ಅವನಿಗೆ ಸಂಸ್ಥೆ ಯಿಂದ ಬರಬೇಕಾದ ಹಣ ಪತ್ನಿಗೆ ಬಂತು. ಆಕೆ ಬಯಸಿದಂತೆ ನಮ್ಮಲ್ಲೇ ಕೆಲಸವೂ ದೊರೆತು ಜೀವನ ಎಷ್ಟು ಬದಲಾವಣೆ ಕಂಡಿತೆಂದರೆ ಆ ಹೆಂಗಸು ಬೇರೆಯವರಿಗೆ ಬಡ್ಡಿಗೆ ಹಣ ಕೊಡೋ ಅಷ್ಟು.


ಇದೊಂದು ಸಣ್ಣ ಘಟನೆ ಅಷ್ಟೇ. ಕೆಟ್ಟ ಹವ್ಯಾಸಗಳ ದಾಸ ರಾದವರ ಸಂಸಾರ ಅವರ ಮರಣದ ನಂತರ ಬಹಳ ಸುಧಾರಿಸಿರುವುದನ್ನ ನಾನು ಅಲ್ಲಿದ್ದಾಗ ಬಹಳ ಕಂಡಿದ್ದೇನೆ. 






Rate this content
Log in

Similar kannada story from Tragedy