Kalpana Nath

Tragedy Classics Others

4  

Kalpana Nath

Tragedy Classics Others

ಗಾಯಕಿ

ಗಾಯಕಿ

5 mins
369ಛಳಿಗಾಲದ ಒಂದುದಿನ. ಕೇರಳದ ಎರ್ನಾಕುಲಮ್ ಜಿಲ್ಲೆಯ ಒಂದು ಹಳ್ಳಿಯಲ್ಲಿ ಸುಮಾರು ಮೂವತ್ತು ಮೂವತ್ತೈದು ವರ್ಷದ ಹೆಂಗಸು ಐದು ವರ್ಷದ ಹುಡುಗನ ಜೊತೆ ಬೆಳಗ್ಗೆ ನದಿ ದಡದಲ್ಲಿ ದೋಣಿ ನಡೆಸುವನ ಹತ್ತಿರಬಂದು , ಕೈಯಲ್ಲಿ ಕಾಸಿಲ್ಲ ಮಗು ನೆನ್ನೆ ರಾತ್ರಿಯಿಂದ ಏನೂ ತಿಂದಿಲ್ಲ , ದಯವಿಟ್ಟು ನದಿಯ ಆ ಕಡೆ ಬಿಡು. ಅಲ್ಲಿ ಯಾರನ್ನಾದರೂ ಕೇಳಿ ಇವನಿಗೆ ತಿಂಡಿ ಕೊಡಿಸ್ತೀನಿ ಅಂದಳು. ಹತ್ತು ಜನ ಬರದೇ ನಾನು ಹೋಗಲ್ಲ. ಒಂಭತ್ತು ಜನ ಬರೋ ವರೆಗೂ ಕಾದರೆ ಕರೆದು ಕೊಂಡು ಹೋಗ್ತೀನಿ , ಕಾಸೇ ನೂ ನೀನು ಕೊಡಬೇಡ ಅಂದ. ಬೇರೆ ದಾರಿ ಕಾಣದೆ ನಡುಗುವ ಛಳಿಯಲ್ಲಿ ಅಲ್ಲೇ ಕಾದಳು. ಮಗು ಹಸಿವು ತಡೆಯಲಾರದೆ ಜೋರಾಗಿ ಅಳುತ್ತಿದೆ. ಏಯ್ ಅಳು ನಿಲ್ಲಿಸು ಅಂತ ದಪ್ಪ ಮೀಸೆಯ ಕಪ್ಪುಮೈಕಟ್ಟಿ ನ ಆ ಮನುಷ್ಯ ಗಟ್ಟಿ ಧ್ವನಿಯಲ್ಲಿ ಹೇಳಿದಾಗ ಹೆದರಿ ಅಳು ನಿಲ್ಲಿಸಿ ಸುಮ್ಮನಾಗಿ ಅಮ್ಮನ ಸೀರೆ ಸೆರಗನ್ನೇ ಹೊದ್ದು ಮರಳಲ್ಲಿ ಏನೋ ಗೀಚುತ್ತಿತ್ತು. ಆಗ ಅಲ್ಲಿಗೆ ಒಂದು ಹೆಂಗಸು ಬೇಗ ಬೇಗನೆ ಬಂದು ನಾನು ಆ ಕಡೆ ಬೇಗ ಹೋಗ ಬೇಕು ನಡಿ ಅಂದಾಗ. ಆಗಲ್ಲ ಇನ್ನೂ ಎಂಟು ಜನ ಬರಬೇಕು ಅಂದ. ನಾನು ದಿನವೂ ಬರೋಳು ನನಗೆ ಗೊತ್ತು ನೀನು ಹತ್ತು ಜನ ಇದ್ದರೆ ಮಾತ್ರ ಹೋಗೋ ದು ಅಂತ . ನಾನು ಇವತ್ತು ಅಲ್ಲಿಂದ ಹೇಗಾದರೂ ಮಾಡಿ ರೈಲ್ವೆ ಸ್ಟೇಷನ್ ಗೆ ಹೋಗಿ ಊರಿಗೆ ಹೋಗ ಬೇಕು . ಹತ್ತು ಜನರಿಗೆ ಎಷ್ಟು ಆಗತ್ತೋ ಅಷ್ಟು ಹಣ ನಾನೇ ಕೊಡ್ತೀನಿ ಅಂದಾಗ ಬಾ ಅಂತ ಮೊದಲು ಆಟ ಆಡ್ತಿದ್ದವನನ್ನ ಕರೆದು ನಂತರ ಬನ್ನಿ ಅಂತ ಅವರಿಬ್ಬರನ್ನೂ ಕರೆದ .ಅವರು ಕೂತ ಮೇಲೆ ದೋಣಿಗೆ ಕಟ್ಟಿದ್ದ ಹಗ್ಗ ಬಿಚ್ಚಿದ. ತನ್ನ ಚೀಲದಿಂದ ಒಂದು ಡಬ್ಬ ತೆಗೆದು ಅದರಲ್ಲಿದ್ದ ಇಡ್ಲಿಯನ್ನ ಹಸಿದ ಆ ಹುಡುಗನಿಗೆ ಕೊಟ್ಟು ತಿನ್ನಲು ಹೇಳಿದ ಕೂಡಲೇ ಗಬಗಬ ಅಂತ ತಿಂದಿದ್ದು ನೋಡಿ ಉಳಿದ ಇನ್ನೂ ಎರಡು ಇಡ್ಲೀ ಕೊಟ್ಟು ,.ಅವನ ತಾಯಿಯನ್ನೇ ದುರುಗುಟ್ಟಿ ನೋಡಿ ,ನಿನಗೇ ತಿನ್ನಕ್ಕಿಲ್ಲ ಮಗು ಬೇರೆ ಅಂದ. ಅದುವರೆಗೆ ಸುಮ್ಮನೆ ಇವರನ್ನ ನೋಡ್ತಾ ಇದ್ದ ಆ ಹೆಂಗಸು ಪಕ್ಕದಲ್ಲಿ ಬಂದು ಕೂತು ಮುಖವನ್ನೇ ನೋಡ್ತಾ ಯಾವ ಊರು ಎಲ್ಲಿಗೆ ಹೋಗ ಬೇಕು ಅಂದರೆ ಉತ್ತರ ಕೊಡಲಿಲ್ಲ. ಕಣ್ಣಲ್ಲಿ ಬಳಬಳ ನೀರು ಹರಿದರೂ ಸೀರೆ ಅಂಚಲ್ಲಿ ಒರೆಸಲಿಲ್ಲ. ಆಗ ದೋಣಿ ನಡೆಸುತ್ತಿದ್ದವ ಇವರಿಗೆ ಒಂದು ಊರು ಅಂತ ಇರತ್ತೇನಮ್ಮ ಇವತ್ತು ಈ ಊರು ನಾಳೆ ಇನ್ನೊಂದು ಊರು ಅಂದ. ಅಭ್ಯಾಸಬಲದಂತೆ ಅಲ್ಲೇ ತನ್ನ ಪಕ್ಕದಲ್ಲಿ ಇಟ್ಟು ಕೊಂಡದ್ದ ಹಳೆಯ ಟ್ರಾನ್ಸಿಸ್ಟರ್ ರೇಡಿಯೋ ಆನ್ ಮಾಡಿದ .ಯಾವುದೋ ಹಳೆಯ ಮಲೆಯಾಳಂ ಹಾಡು ಬಂತು. ಕೇಳಿದ ತಕ್ಷಣ ಕಣ್ಣೀರು ಇನ್ನೂ ಹೆಚ್ಚಾಗಿ ಭಾವುಕಳಾದಂತೆ ಕಂಡಳು. ದೋಣಿ ನಡೆಸುತ್ತಿದ್ದವ ತಾನೂ ಜೊತೆಗೆ ಜೋರಾಗಿ ಅದೇ ಹಾಡನ್ನು ಹಾಡು ತ್ತಿದ್ದ. ಕಣ್ಣು ಮುಚ್ಚಿದ್ದವಳು ಕಣ್ಣು ಬಿಟ್ಟು ನೋಡಿ ದಳು‌ ಗಟ್ಟಿ ಧ್ವನಿಯಲ್ಲಿ ಹಾಡುತ್ತಿದ್ದ ಅವನನ್ನೇ ನೋಡುತ್ತಿದ್ದಾಳೆ.ಅವನು ಮಾತ್ರ ಕಣ್ಣು ಮುಚ್ಚಿ ಆ ಇಂಪಾದ ಹಾಡನ್ನ ಹಾಡ್ತಾನೇ ಇದ್ದ. ಎಲ್ಲಾ ಏನೋ ವಿಚಿತ್ರ ವಾಗಿದೆಯಲ್ಲ ಅಂತ ಇಬ್ಬರ ಮುಖವನ್ನೂ ಆಗೊಮ್ಮೆ ಈಗೊಮ್ಮೆ ನೋಡ್ತಾ ಕೂತಿದಾಳೆ ಮತ್ತೊಬ್ಬ ಹೆಂಗಸು. ಅಷ್ಟರಲ್ಲಿ ಆ ಹಾಡು ಮುಗಿಯಿತು. ಹತ್ತು ನಿಮಿಷದಲ್ಲಿ ಆಕಡೆಯ ದಡ ತಲುಪ ಬಹುದಾಗಿದೆ. ದೂರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಕಾಣುತ್ತಿದೆ. ಆ ಹೆಂಗಸು ನೂರು ರೂಪಾಯಿ ತೆಗೆದು ಅವನಿಗೆ ಕೊಟ್ಟಾಗ ಐವತ್ತು ವಾಪಸ್ ಕೊಟ್ಟು ಆ ನೂರರ ನೋಟನ್ನು ಈ ಹೆಂಗಸಿಗೆ ಕೊಟ್ಟು ,ಮೊದಲು ಒಂದು ಹೋಟೆಲ್ ಗೆ ಹೋಗಿ ಊಟ ಮಾಡು . ಈ ಹುಡುಗನ್ನ ಇಟ್ಟು ಕೊಂಡು ಜೀವನ ಹೇಗೆ ಮಾಡ್ತಿ .ಇವನನ್ನ ಯಾರಿ ಗಾದರೂ ಕೊಟ್ಟು ಬಿಡು ಎಂದ. ಮುಂದೆ ಕೂತಿದ್ದ ಮಗನನ್ನ ಹತ್ತಿರಕ್ಕೆ ಎಳೆದುಕೊಂಡು ಗಟ್ಟಿಯಾಗಿ ತಬ್ಬಿ ಹಿಡಿದಳು. ಇವನು ಇಲ್ಲ ಅಂದಮೇಲೆ ನಾನು ಏಕೆ ಬದುಕಿರ ಬೇಕು ಅನ್ನುವಂತೆ ಅತ್ತು ಅತ್ತು ಊದಿದ ಆ ಕಣ್ಣುಗಳೇ ಉತ್ತರ ಹೇಳಿತ್ತು. ಕೋಪ ದಿಂದ ಅವನು ಕೊಟ್ಟ ನೂರು ರೂಪಾಯಿಯನ್ನ ಅವನಿಗೇ ವಾಪಸ್ ಕೊಟ್ಟು ದೋಣಿಯಿಂದ ಇಳಯಲು ನಿಂ ತಾಗ ನೀರಿನಲ್ಲಿ ಬಿದ್ದು ಬಿಡುತ್ತಿದ್ದಳು. ತಕ್ಷಣ ಅವಳ ಕೈ ಹಿಡಿದು ಇಳಿಸಿದ. ಹೀಗೆ ಅವನದೇ ಭಾಷೆಯಲ್ಲಿ ಗೊಣಗುತ್ತಾ ಮೂರು ಜನರನ್ನೂ ಕೈ ಹಿಡಿದು ಕೆಳಗೆ ಇಳಿಸಿದ.


ನೀನು ಏನು ಕೇಳಿದರೂ ಉತ್ತರ ಕೊಡಲಿಲ್ಲ. ತಿಂಡಿ ತಿನ್ನೋದಕ್ಕಾದರೂ ಬರ್ತೀಯ ಅಂದಾಗ ತಾಯಿ ಮಗ. ಆ ಹೆಂಗಸನ್ನು ಹಿಂಬಾಲಿಸಿದರು .ಇಡ್ಲಿ ಮಾತ್ರ ಸಾಕು ಅಂತ ತಿಂದಳು. ಆ ಹುಡುಗ ಏನೂ ತಿನ್ನಲಿಲ್ಲ. ಕಾಫಿ ಕುಡಿದು ಆಚೆ ಬಂದಾಗ ಇಲ್ಲಿಂದಎಲ್ಲಿಗೆ ಹೋಗ್ತೀರಿ ಅಂದರೆ ಉತ್ತರ ಇಲ್ಲ. ಆಗ ಅಯ್ಯೋ ದೇವರೆ ಎಲ್ಲಗೆ ಹೋಗಬೇಕಂತ ಗೊತ್ತಿಲ್ಲ ವೇ, ಹಾಗಾದರೆ ಹೀಗೆ ನಿಮ್ಮನ್ನ ಹೀಗೆ ಬಿಡಕ್ಕಾಗಲ್ಲ. ನನ್ನ ಜೊತೆಗೆ ಸುಮ್ಮನೆ ಇಬ್ಬರೂ ಬನ್ನಿ ಅಂತ ಕೈ ಹಿಡಿದು ಕೊಂಡಾಗ ,ಬೇಡ ನಿಮಗೆ ಏಕೆ ಆ ಕಷ್ಟ ಅಂದರೂ ಕೇಳದೆ ಅಲ್ಲೇ ನಿಂತಿದ್ದ ಸೈಕಲ್ ರಿಕ್ಷಾ ದವನನ್ನ ಕರೆದು ಎಲ್ಲರೂ ಹತ್ತಿ ರೈಲ್ವೇ ಸ್ಟೇಷನ್ ಗೆ ಹೋಗಲು ಹೇಳಿದಳು. ಇಬ್ಬರ ಮಧ್ಯೆ ಕೂತ ಆ ಹುಡುಗನ ಮುಖ ಒಂದು ಕ್ಷಣ ನೋಡಿದ ಳು .ಎಂದೂ ರಿಕ್ಷಾ ಹತ್ತಿಲ್ಲದ ಮಗೂಗೆ ಎಲ್ಲಾಏನೋ ಕುತೂಹಲ. ಆ ಕಡೆ ಈ ಕಡೆ ನೋಡುತ್ತಾ ತಾನೊ ಬ್ಬನೇ ನಗ್ತಾ ಇದಾನೆ. ಏನೋ ಖುಷಿ.ರೈಲ್ವೆ ಸ್ಟೇಷನ್ ಗೆ ಬಂದಾಗ ತಪ್ಪಿಸಿಕೊಳ್ಳಲು ಬಿಡದೆ ಕೈ ಹಿಡಿದು ಕೊಂಡೇ ಇನ್ನೊಂದು ಟಿಕೆಟ್ ತೆಗೆದು ಕೊಂಡು ರೈಲು ಹತ್ತಿ ಕೂಡುವವರೆಗೂ ಒಂದೂ ಮಾತನಾಡಿರಲಿಲ್ಲ. ರೈಲು ಹೊರಟಾಗ ನೋಡು ನನಗೆ ನಿನ್ನ ಬಗ್ಗೆ ತಿಳಿಯುವ ಕುತೂಹಲ ಹುಟ್ಟಿದ್ದು ದೋಣಿಯಲ್ಲಿ ಅವನ ರೇಡಿಯೋದಲ್ಲಿ ನನಗೂ ಇಷ್ಟವಾದ ಆ ಹಳೆಯ ಹಾಡು ಬಂದು ಅವನೂ ಹಾಡಿ ನಿನ್ನ ಕಣ್ಣಲ್ಲಿ ನೀರು ತರಸಿದಾಗ.ಅದಕ್ಕೆ ನಿನ್ನನ್ನ ಬಿಡದೆ ನನ್ನ ಜೊತೆ ಕರೆದು ಕೊಂಡು ಬಂದೆ. ಈಗಲಾದರೂ ಹೇಳು ಅಂದಾಗ, ಅಲ್ಲಿಯವರೆಗೂ ಮೌನವಾಗಿದ್ದವಳು ಮಾತನಾಡಿದಳು. ಹೇಳ್ತೀನಮ್ಮ ಎಲ್ಲಾ ಹೇಳ್ತೀನಿ .ಆ ಹಾಡು ನಾನೇ ಹಾಡಿರೋದು. ಹತ್ತು ವರ್ಷಗಳ ಹಿಂದೆ ಸುಮಾರು ಐವತ್ತು ಹಾಡು ಹಾಡಿದೆ.ಅದರಲ್ಲಿ ಹತ್ತು ಹಾಡು ಸಿನಿಮಾಗೆ ಹಾಡಿದ್ದು. ಆ ಹತ್ತು ಹಾಡುಗಳೂ ಇಲ್ಲಿನ ಜನ ಬಹಳ ಮೆಚ್ಚಿ ಕೊಂಡಿರೋ ಕಾರಣ ಒಂದಲ್ಲಾ ಒಂದು ಕಾರ್ಯಕ್ರಮದಲ್ಲಿ ಪ್ರತಿದಿನವೂ ರೇಡಿಯೋದಲ್ಲಿ ಬಿತ್ತರವಾಗುತ್ತೆ ಅಂದಳು. ನಿನ್ನ ಈ ಸ್ಥಿತಿಗೆ ಕಾರಣ ಏನು ಅಂತ ಇಲ್ಲಿ ನಾನು ಕೇಳಲ್ಲ. ಅದನ್ನ ನಿಧಾನವಾಗಿ ಮಾತನಾಡೋಣ. ಮೊದಲು ನಿನ್ನ ಹೆಸರು ಹೇಳು ಅಂದಾಗ ಕರ್ಪಗಂ ಅಂದಳು. ಅಂದರೆ ನಿನ್ನದು ತಮಿಳ್ನಾಡು .ಮತ್ತೆ ಮಲೆಯಾಳದಲ್ಲಿ ಇಷ್ಟು ಚೆನ್ನಾಗಿ ಹಾಡ್ತೀಯಲ್ಲ . ಅದು ಮತ್ತೊಂದು ಕಥೆ. ನೀವು ಮಾಜಿ ಮಂತ್ರಿಯ ಮಗ ಸಿನಿಮಾ ಪ್ರೊಡ್ಯೂ ಸರ್ ಜೇಕಬ್ ಹೆಸರು ಕೇಳಿದ್ದೀರಾ. ಅಯ್ಯೋ ಅವನ ಹೆಸರು ಯಾರಿಗೆ ಗೊತ್ತಿಲ್ಲ ಹೇಳು.ಅವನೇ ನನ್ನ ಈ ಸ್ಥಿತಿಗೆ ತಂದೋನು.ಅವನ ಮಗನೇ ಇದು ಅಂತ ಪಕ್ಕದಲ್ಲಿ ಇದ್ದ ಹುಡುಗನ ಕಡೆ ತೋರಿಸುವಾಗ , ಕಟಕಿ ಆಚೆ ನೋಡ್ತಾ ಅಮ್ಮನಂತೆಯೇ ಬೆಳಗ್ಗೆ ಕೇಳಿದ ಅದೇ ಹಾಡನ್ನು ಹಾಡ್ತಿದಾನೆ ಅವನು..ಈಗ ಅರ್ಥ ಆಯಿತು ಆ ಪಾಪಿ ಕೈ ಗೆ ಸಿಕ್ಕಿ ನರಳಾಡಿ ಜೀವನವನ್ನು ಕೊನೆ ಮಾಡಿಕೊಂಡವರು ಬಹಳ ಹುಡುಗಿಯರು ಇದ್ದರು ಅಂತ ಕೇಳಿದ್ದೆ . ಈಗ ನಿನ್ನ ನೋಡಿದ ಮೇಲೆ ನನಗೆ ಸುಮ್ಮನೆ ಇರಲು ಸಾಧ್ಯ ವಿಲ್ಲ. ಕರ್ಪಗಮ್ ಇನ್ನು ನಿನ್ನ ಕಷ್ಟ ಎಲ್ಲಾ ದೂರಾ ಯ್ತು ಅಂತಾನೆ ತಿಳ್ಕೋ .ನಾನು ಒಬ್ಬಳು ಲಾಯರ್. ನನ್ನ ಹೆಸರು ಸುಗಂಧಿ .ನಾನೂ ತಮಿಳ್ ನಾಡಿನ ವಳೇ.ಮದುವೆ ಆದಮೇಲೆ ನಾನು ಇಲ್ಲಿಗೆ ಬಂದೆ. ನನ್ನ ಗಂಡಾನೂ ಕ್ರಿಮಿನಲ್ ಲಾಯರ್. ನಿನಗೆ ನ್ಯಾಯ ಕೊಡಿಸೋದು ಈಗ ನನ್ನ ವ್ರುತ್ತಿ ಧರ್ಮ . ನಾನು ಹೇಳಿದ ಹಾಗೆ ಮಾಡು ಅಂದಳು ಸುಗಂಧಿ. ಸುಮಾರು ಒಂದು ಗಂಟೆ ಪ್ರಯಾಣ ಮಾಡಿದ ಮೇಲೆ ಇವರು ಇಳಿಯ ಬೇಕಾದ ಸ್ಟೇಷನ್ ಬಂತು. ಇಳಿದು ಮನೆ ಹತ್ತಿರವೇ ಇದೆ ಅಂತ ಹೇಳಿನಡೆದೇ ಹೋದರು. 

ಇವಳನ್ನು ಒಂದು ತಿಂಗಳು ತಮ್ಮ ಮನೆಯಲ್ಲೇ ಇಟ್ಟುಕೊಂಡು ಕೇಸ್ ಹಾಕಿಸಿದಳು. ಆರು ತಿಂಗಳು ಕೇಸ್ ನಡೆದು ಇನ್ನೇನು ಕೇಸ್ ಇವರ ಕಡೆಯೇ ಆಗಿ, ಇವಳಿಗೆ ನ್ಯಾಯ ದೊರೆಯುತ್ತೆ ಅನ್ನುವ ಸಮ ಯದಲ್ಲಿ ಒಂದು ದಿನ ಮನೆ ಎದುರಲ್ಲಿ ಆಟ ಆಡ್ತಾ ಇದ್ದ ಇವಳ ಮಗ ನಾಪತ್ತೆ . ಎಲ್ಲಾ ಕಡೆ ಹುಡುಕಿ ಕೊನೆಗೆ ಪೋಲಿಸ್ ಕಂಪ್ಲೇಂಟ್ ಕೊಟ್ಟರೂ ಪ್ರಯೋ ಜನವಾಗಲಿಲ್ಲ. ಸಹಾಯ ಮಾಡುವ ಸಲುವಾಗಿ ಕರೆದು ತಂದು ಹೀಗೆ ಆಯಿತು ಅಂತ ಲಾಯರ್ ಸುಗಂಧಿ ಬಹಳ ನೊಂದಳು.ಒಂದು ದಿನ ಕರ್ಪಗಂ ಒಬ್ಬಳೇ ಮನೆಯಲ್ಲಿ ಇರುವುದನ್ನ ತಿಳಿದು ಐದಾರು ಜನ ರೌಡಿಗಳು ಒಳಗೆ ನುಗ್ಗಿ ಹೆದರಿಸಿ ಹೇಳಿದರು ನಿನ್ನ ಮಗ ನಮ್ಮ ಹತ್ತಿರ ಇದಾನೆ .ನಾಳೆ ಕೋರ್ಟ್ ನಲ್ಲಿ ಎಲ್ಲಾ ನಂದೇ ತಪ್ಪು ಹಣದ ಆಸೆಗೆ ಹೀಗೆಲ್ಲಾ ಮಾಡಿದೆ ಅಂತ ಹೇಳಬೇಕು. ಇಲ್ಲಾಂದ್ರೆ ನಿನ್ನ ಮಗನ ಹೆಣ ತಂದು ಕೊಡ್ತೀವಿ ಅಂತ ಹೇಳಿ ಹೋದರು. ಮಾರನೆಯ ದಿನ ಅವರು ಹೇಳಿ ಕೊಟ್ಟ ಹಾಗೆ ಹೇಳಿದಾಗ ,ಯಾರಾದರೂ ಬಂದು ನಿನ್ನನ್ನ ಹೆದರಿಸಿ ದ್ದಾರೆಯೇ ಅಂತ ನ್ಯಾಯಾದೀಶರು ಕೇಳಿದಾಗ ಅಳು ತಡೆಯಲಾಗದೆ ,ಹೌದು ಸ್ವಾಮಿ ಇಲ್ಲದಿದ್ದರೆ ನನ್ನ ಮಗನನ್ನು ಕೊಂದು ಬಿಡ್ತಾರೆ ಅಂದಾಗ , ಆ ಲಾಯ ರ್ ಸುಗಂಧಿ ಹೇಳಿದ್ದು ನನಗೆ ಈ ಸಂಶಯ ಇದ್ದೇ ಇತ್ತು ಸ್ವಾಮಿ ಅದಕ್ಕಾಗಿ ಪೋಲೀಸರಿಗೂ ತಿಳಿಸಿ ದ್ದೆ.ಅವರು ಬಲೆ ಬೀಸಿ ಆ ಐದು ಜನರನ್ನು ನೆನ್ನೆ ಹಿಂ ಬಾಲಿಸಿ ಹಿಡಿದು ಇವಳ ಮಗನನ್ನು ಬಿಡಿಸಿಕೊಂಡು ಬಂದರು. ಇಲ್ಲೇ ಇದ್ದಾನೆ ಅಂದಾಗ ಲೇಡಿ ಪೋಲೀ ಸ್ ಇನ್ಸ್ಪೆಕ್ಟರ್ ಒಬ್ಬರು ಕರೆದುಕೊಂಡು ಬಂದು ಅಮ್ಮನ ಹತ್ತಿರ ಕೊಟ್ಟರು. ಕಟ ಕಟೆಯಲ್ಲೇ ಅಪ್ಪಿ ಕಣ್ಣೀರು ಸುರಿಸಿದಾಗ ಗಾಯಕಿಯ ಕಷ್ಟದ ದಿನ ಗಳನ್ನು ಒಂದು ಸಿನಿಮಾ ಕಥೆಯಂತೆ ಈ ಗಾಗಲೇ ಕಂಡಿದ್ದ ನ್ಯಾಯಾಲಯವೇ ಸ್ಥಭ್ದ ವಾಗಿ , ನ್ಯಾಯಾದೀಶರೂ ಸಹಾ ತಮ್ಮ ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಂಡು ಕೇಸನ್ನು ಮಾರನೆ ದಿನಕ್ಕೆ ಮುಂದೂಡಿದರು.

ಐದು ಲಕ್ಷ ರೂಪಾಯಿ ಅವಳಿಗೆ ಪರಿಹಾರವಾಗಿ ಕೊಟ್ಟು ಆ ಹುಡುಗನ ವಿಧ್ಯಾಭ್ಯಾಸದ ಖರ್ಚು ಅವರೇ ನೋಡಿಕೊಳ್ಳ ಬೇಕು ಎಂದು ತೀರ್ಮಾನ ವಾಯ್ತು. ಕೋರ್ಟ್ ಹೊರಗೆ ಬಂದಾಗ ಕರ್ಪಗಮ್ ಸುಗಂಧಿಯ ಕಾಲಿಗೆ ಬಿದ್ದಳು. ಎಲ್ಲರೂ ನೋಡುತ್ತಾ ರೆ ಏನಿದು ಏಳು ಅಂದಾಗ ಅಳು ತಡೆಯಲಾಗಲಲ್ಲ.ಅಲ್ಲೇ ಕೋರ್ಟ್ ಕ್ಯಾಂಟೀನ್ ಗೆ ಹೋಗಿ ತಿಂಡಿ ತಿಂದರು.ಮುಖ್ಯ ರಸ್ತೆಯವರೆಗೂ ನಡೆದು ಹೋದರೆ ಅಲ್ಲಿಂದ ರಿಕ್ಷಾದಲ್ಲಿ ಮನೆಗೆ ಹೋಗಬಹುದೆಂದು ಯೋಚಿಸಿ ಮೂರೂ ಜನ ನಡೆದು ಬರುತ್ತಿದ್ದಾಗ ರಭಸದಿಂದ ಬಂದ ಕಾರೊಂದು ಮೂವರ ಮೇಲೆ ಹರಿದು ಲಾಯರ್ ಸುಗಂಧಿ ಸ್ಥಳದಲ್ಲೇ ಪ್ರಾಣ ಬಿಟ್ಟ ಳು. ಕರ್ಪಗಮ್ ಮತ್ತು ಅವಳ ಮಗು ಇಬ್ಬರಿಗೂ ತಲೆಗೆ ಪೆಟ್ಟಾಗಿ ಯಾರೋ ಆಸ್ಪತ್ರೆಗೆ ಸೇರಿಸಿದರು .

ಒಂದು ವಾರದ ನಂತರ ಇಬ್ಬರೂ ಚೇತರಿಸಿ ಕೊಂಡ ರು. ಕರ್ಪಗಮ್ ಕಣ್ಣು ತೆರೆದು ಮೇಡಂ ಮೇಡಂ ಅಂತ ಕನವರಿಸಿದಾಗ ದೂರದಲ್ಲಿ ತಾನೇ ಹಾಡಿದ ಹಳೆಯ ದುಃಖಭರಿತ ಚಿತ್ರ ಗೀತೆ ಕೇಳಿಸುತ್ತಿತ್ತು.


Rate this content
Log in

Similar kannada story from Tragedy