Revati Patil

Drama Tragedy Inspirational

4  

Revati Patil

Drama Tragedy Inspirational

ಎರಡನೇ ಅಪ್ಪನೆಂಬ ಒಗಟು

ಎರಡನೇ ಅಪ್ಪನೆಂಬ ಒಗಟು

4 mins
218


ತನ್ನ ಕನ್ನಡಕವನ್ನು ಸೆರಗಿನಂಚಿಂದ ಮತ್ತೊಮ್ಮೆ ಒರೆಸಿಕೊಂಡು ದಾರ ಪೋಣಿಸಲು ಪ್ರಯತ್ನಿಸಿ ಸೋತಲು ಸರಯೂ. ಆಕೆಗೆ ಇಂದೇಕೊ ಬಟ್ಟೆಗಳ ಸಾಂಗತ್ಯ ಬೇಡವಾಗಿತ್ತು. ಮನಸ್ಸು ಯಾಕೊ ಬದಲಾದ ಅಭಿ ಬಗ್ಗೆ ಚಿಂತಿಸುತ್ತಿತ್ತು. ಅವನಿಗಾಗಿಯೇ ಅಲ್ವಾ ನಾನು ಇಂಥ ನಿರ್ಧಾರ ಮಾಡಿದ್ದು, ಅವನಿಗೆ ಎಲ್ಲರಂತೆ ತಂದೆ ತಾಯಿ ಪ್ರೀತಿಯೂ ಸಿಗಲಿ ಎಂದದ್ದು. ಹೌದು;ಸರಿ. ಮತ್ತೆ ತಪ್ಪಾಗಿದ್ದೆಲ್ಲಿ? ಏನು? ಸರಯೂ ತನಗೇ ಪ್ರಶ್ನಿಸಿಕೊಂಡಳು. ಅಭಿ ಒಪ್ಪಿದ ಮೇಲೇಯೇ ಅಲ್ವಾ ತಾನು ರವಿಯನ್ನು ಮದ್ವೆ ಆಗಿದ್ದು. ಇನ್ನೊಂದು ಮಗು ಬೇಡವೆಂದಿದ್ದು ಅದಕ್ಕೆ ರವಿಯೂ ಆಗಲಿ ಎಂದಿದ್ದು.. ಇಂದೇನಾಯ್ತು ಅಭಿಗೆ? ತನಗಾಗಿ ಎಂದು ಬಾಳಿದವಳಲ್ಲ ಸರಯೂ. ಸಮಯ ಚಕ್ರ ಹಿಂದೆ ಉರುಳಿತು.


ಸುಮಾರು ನಲವತ್ತೈದು-ಐವತ್ತು ವರ್ಷಗಳ ಹಿಂದೆ.

ನಾರಾಯಣ -ಲಕ್ಷ್ಮೀ ದಂಪತಿಗೆ ಇಬ್ಬರು ಮಕ್ಕಳು. ಹಿರಿಯವಳೇ ಸರಯೂ. ಮತ್ತೊಬ್ಳು ಸಾರಿಕಾ. ತಂದೆ ಜ್ಯೋತಿಷ್ಯ ಹೇಳುತ್ತಿದ್ದರು.ಲಕ್ಷ್ಮಮ್ಮ ಗೃಹಿಣಿ.ತುಂಬಾ ಸ್ಥಿತಿವಂತರಲ್ಲದಿದ್ದರೂ ನೆಮ್ಮದಿ ಎಂಬುದಿತ್ತು. ಆ ದಿನ ಯಾಕೊ ನಾರಾಯಣರಿಗೆ ತಳಮಳ . ಹೇಳಲಾರದಂತಹ ಸಂಕಟ. ಅವರೇ ಸ್ವತಃ ಹೆಂಡತಿ ಮಕ್ಕಳೊಂದಿಗೆ ಜಾತ್ರೆಗೆ ಹೋಗಲು ಅಣಿಯಾಗಿದ್ದರು. ಇವರ ಮುಖಲಕ್ಷಣ ನೋಡಿದ ಲಕ್ಷ್ಮಮ್ಮ ಜಾತ್ರೆಗೆ ಬೇಡವೆಂದರು. ಚಿಕ್ಕ ಮಗು ಸಾರಿಕಾ ಹಠ ಹಿಡಿದಳು ಹೋಗಲೇಬೇಕೆಂದು. ಕೊನೆಗೆ ನಾರಾಯಣರು ಮಕ್ಕಳನ್ನು ಕರೆದುಕೊಂಡು ಜಾತ್ರೆಗೆ ಹೋಗುವಂತೆ ಹೆಂಡತಿಗೆ ಒತ್ತಾಯಿಸಿದರು. ಸರಯೂ ಅಪ್ಪನ ಜೊತೆ ಇರಲು ಹಠ ಮಾಡಿದ್ದರಿಂದ ಲಕ್ಷ್ಮಮ್ಮ, ಸಾರಿಕಾ ಇಬ್ಬರೇ ಹೋದರು. ಹೋದವರು ಎಂದು ಬಾರದ ಲೋಕಕ್ಕೇ ಹೋದರು. ಆ ದಿನದ ಅಪಘಾತದಲ್ಲಿ ಹೋದವರೇಷ್ಟೋ?

ಅಮ್ಮಾ.....!! ಸರಯೂ ತನ್ನ ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಂಡಳು. ಆ ದಿನ ತಾನೂ ಸಾರಿಕಾಳಂತೆ ಹಠ ಮಾಡಬೇಕಿತ್ತು. ಯಾವ ಅರ್ಥವಿದೆ ತನ್ನ ಬಾಳಿಗೆ. ಅಭಿ? ಸರಯೂಗೆ ತಿಳಿದಿತ್ತು. ಇಂದಲ್ಲ ನಾಳೆ ರವಿಯ ಬಗ್ಗೆ ಅಭಿಯ ಅಭಿಪ್ರಾಯ ಬದಲಾಗಬಹುದೆಂದು. ಆದರೆ ಅಲ್ಲಿಯವರೆಗೂ ತಾನು ಬದುಕಬಹುದೆ? ಮತ್ತೆ ಕನ್ನಡಕ ಹಾಕಿದಳು.


ರಾಮಜ್ಜ ಓಡಿ ಬಂದ. ಕುಂಟೆಬಿಲ್ಲೆ ಆಡುತ್ತಿದ್ದ ಸರಯೂ ಕಂಡು ಅಪ್ಪನೆಲ್ಲಿ ಎಂದರು. ಅಪ್ಪನ ಆರೋಗ್ಯ ಸರಿಯಿಲ್ಲ ರಾಮಜ್ಜಾ. ಮಲಗಿದ್ದಾರೆ. ಯಾಕೆ? ರಾಮಜ್ಜ ಮನೆಯೊಳಗೇ ಹೋಗಿ ನಾರಾಯಣರಿಗೆ ಲಕ್ಷ್ಮಮ್ಮ ಸಾರಿಕಾ ತೀರಿಹೋದ ವಾರ್ತೆ ಹೇಳಿದರು. ಬರಸಿಡಿಲೊಂದು ಬಂದೆರಗಿತ್ತು . ಸರಯೂ ಅತ್ತು ಅತ್ತು ತಂದೆಯ ಬಳಿ ಮಲಗಿತು. ಐದು ತಿಂಗಳು ಕಳೆಯಿತು. ನಾರಾಯಣರ ಹಿತೈಷಿಗಳು, ಸ್ನೇಹಿತರು ಮತ್ತೊಂದು ಮದುವೆ ಆಗಲು ಸೂಚಿಸಿದರು. ಸರಯೂಗಾಗಿ ನಾರಾಯಣರು ಇನ್ನೊಂದು ಮದುವೆ ಬೇಡವೆಂದು ತಮ್ಮ ಧೃಡ ನಿರ್ಧಾರ ತಿಳಿಸಿದರು. ಸರಯೂ ಬೆಳೆಯುತ್ತಿದಳು. ತಾಯಿ ತಂದೆ ಎರಡೂ ಆಗಿದ್ದ ನಾರಾಯಣರ ತ್ಯಾಗ ಸರಯೂಗೆ ಅಸ್ಪಷ್ಟವಾಗಿ ತಿಳಿಯುತ್ತಿತ್ತು. ಮಗಳನ್ನು ಬಹು ಜೋಪಾನವಾಗಿ ಸಾಕಿದರು. ಅವಳಿಗೂ ಅಷ್ಟೇ. ಅಪ್ಪನೇ ಅವಳ ಲೋಕವಾಗಿತ್ತು.


ಮತ್ತೆ ಕಣ್ಣೀರು ಇಣುಕಿತು. ಕನ್ನಡಕ ತೆಗೆದಳು. ಅಭೀಗೂ ಅವನ ಅಪ್ಪನೇ ಲೋಕವಾಗಿದ್ದಿದ್ದರೇ ? ತಾನೇ ಪ್ರಶ್ನಿಸಿಕೊಂಡಳು. ಸರಯೂಗೆ ಕೆಲ ವರ್ಷಗಳ ಹಿಂದೆ ಕಿಡ್ನಿ ತೊಂದರೆ ಇದೆ ಎಂದು ಡಾಕ್ಟರ್ ಹೇಳಿದ್ದರು . ಆದರೆ ಅಪ್ಪನಂತಿರುವ ಈ ಮನುಷ್ಯ ತಾಯಿಯ ಆರೋಗ್ಯ ವಿಚಾರಿಸುವುದಿಲ್ಲ. ಹಗಲು ಹೊತ್ತು ಕೆಲಸದ ನೆಪ ಹೇಳೋ ಈ ಮನುಷ್ಯ ರಾತ್ರಿಯೂ ಮನೆಗೇ ಬರಲ್ಲಾ. ತನ್ನ ತಾಯಿ ಅಲ್ಲದೇ ಬೇರೆ ಯಾರೋ ಇರಬಹುದು ಎಂದುಕೊಂಡ.  ನನಗಾಗಲೀ, ನನ್ನ ತಾಯಿಗಾಗಲೀ ಈ ಮನುಷ್ಯ ಮಾಡಿದ್ದೇನು? ನಾನು ಇಷ್ಟಪಡುತ್ತಿದ್ದ ರವಿ ಅಂಕಲ್ ಇವರೇನಾ? ತನಗೆ ತಿಳಿಯದಂತೆ ಅಭಿ ರವಿಯ ಬಗ್ಗೆ ತಿರಸ್ಕಾರ ಬೆಳೆಸಿಕೊಂಡಿದ್ದ.


ನಾರಾಯಣರಿಗೇ ಕೈ ಮುಗಿದರು ನರಸೇಗೌಡರು. ತುಂಬಾಹಳೆಯ ಪರಿಚಯವದು. ಮಾತ ಶುರುವಾಯಿತು. ಗ್ರಾಮದೇವಿ ತೇರಿಗೆ ಬಂದಿರುವುದಾಗಿ ಹೇಳಿದರು. ಮುಂದಿನ ವಾರವೇ ಮೈಸೂರಿಗೆ ಹೋಗಬೇಕೆಂದರು.ಸರಯೂ ಅವರಿಗೆ ಚಹ ತಂದಳು. ಚಹ ಮುಗಿಸಿ ಹೊರಡಲು ಅನುವಾದರು ಗೌಡರು . ನಾರಾಯಣಾ ನಿನ್ನೆ ಜಾತ್ರೆಯಲ್ಲಿ ನಮ್ಮ ಶಶಿ ನಿನ್ನ ಮಗಳು ಸರಯೂನ ನೋಡಿ ಮೆಚ್ಕೊಂಡಿದಾನೆ. ನೀವೇನಂತಿರಾ? ನಾರಾಯಣರಿಗೆ ಸಂತಸವಾಯ್ತು. ಗೊತ್ತಿರೊ ಹುಡುಗ ಅಲ್ವಾ ಅಂತ ಮದುವೆಗೆ ಒಪ್ಪಿದರು. ಮದುವೆಯಾಗಿ ಸರಯೂ ಗಂಡನ ಮನೆ ಸೇರಿದಳು. ಏಕಾಂಗಿಯಾಗಿ ನಾರಾಯಣರು ಮಂಕಾಗಿ ಹಾಸಿಗೆ ಹಿಡಿದರು. ಕೊನೆಯುಸಿರೆಳೆದರು. ಸರಯೂ ಗೋಳಾಡಿದಳು. ರಾಮಜ್ಜ ಒಂದು ಪತ್ರ ಸರಯೂಗೆ ನೀಡಿದ. ಬೀರುವಿನಲ್ಲಿ ಅಮ್ಮನ ಕೆಲ ವಡವೆಗಳಿದ್ದವು. ಅದರ ಜೊತೆ ಮನೆಯನ್ನು ಸರಯೂ ಹೆಸರಿಗೆ ಮಾಡಿದ್ದರು. ಕೇವಲ ನನ್ನೊಬ್ಬಳಿಗಾಗಿ ನನ್ನ ತಂದೆ ಬದುಕಿದ್ದರಾ? ಸರಯೂಗೆ ಅಪ್ಪ ಒಗಟಾಗಿದ್ದರು.


ಕೆಲಸದ ಮೇಲೆ ಹೊರ ಹೋಗಿದ್ದ ಶಶಿಯೂ ಮನೆಗೆ ಬಂದಿರಲಿಲ್ಲ. ಕರೆದುಕೊಂಡು ಬರುತ್ತೆನೆ ಎಂದು ಸರಯೂ ನಡೆದಳು. ಬಿಸಿಲಿನ ತಾಪಕ್ಕೆ ಮುರ್ಛೆ ಹೋದಳು. ಎಚ್ಚರವಾದಾಗ ಡಾಕ್ಟರ್ ಇದ್ದರು. ಯಾವ್ ಊರು ನಿಮ್ದು? ಹೇಸರೇನು ಎಂದರು. ಅವರು ನಿಮ್ಮನ್ನಿಲ್ಲಿ ತಂದಿದ್ದು ಎಂದರು. ನಂಗೇನಾಗಿದೆ ಡಾಕ್ಟರ್? ಸರಯೂ ಕೇಳಿದಳು. ನೀವೀಗಾ ಗರ್ಭಿಣಿ. ಸ್ವಲ್ಪ ಆರೈಕೆ ಮಾಡ್ಕೊಳ್ಳಿ. ಎಂದು ಕಳಿಸಿದರು. ಗೊತ್ತಿಲ್ಲದ ಊರು. ಏಲ್ಲಿ ತನ್ನ ಗಂಡನನ್ನ ಹುಡುಕೊದು? ಮರದ ನೆರಳಿಗೆ ಕೂತಳು ಅಲ್ಲಿಗೆ ಬಂದವನೊಬ್ಬ ಹೇಳಿದ. ನಿಮ್ಮನ್ ನಾನೇ ಸೇರ್ಸಿದ್ದು ಆಸ್ಪತ್ರೆಗೆ. ಈಗ ಹೇಗಿದ್ದಿರಾ ಯಾವ್ ಊರು ನಿಮ್ದು? ಇಲ್ಲಿ ಯಾರ್ ಮನೆಗೆ ಹೋಗಬೇಕು ಎಂದಾಗ ನಾನು ಸರಯೂ. ಮೈಸೂರು ನಮ್ಮ ಊರು ಎಂಂದಳು. ಶಶಿ ಹುಡುಕಲು ಬಂದೆ ಎಂದಳು. ನೀವ್ ಯಾರು? ಎಂದಳು. ನಾನು ರವಿ ಅಂತಾ..ಗಾರ್ಮೆಂಟ್ಸಲ್ಲಿ ಸೆಕ್ಯೂರಿಟಿ ಗಾರ್ಡ. ಬಸ್ ಸ್ಟಾಪ್ ಹಿಂದೆ ಇರೋ ಚಿಕ್ಕ ಮನೆ ನಮ್ದೆ ಎಂದನು. ಮನೇಲಿ ನಾನು ಅಮ್ಮ ಇಬ್ರೆ ಎಂದ. ಮನೆಗೆ ಬಂದು ಊಟಾ ಮಾಡಿ ನಿಮ್ಮ ಗಂಡನ್ನ ಹುಡುಕೋಕೆ ನಾನ್ ‌ಸಹಾಯ ಮಾಡ್ತಿನಿ ಎಂದ.ಹೀಗೆ ಒಂದು ತಿಂಗಳು ಮುಗಿತು. ಗಂಡನ ಪತ್ತೆ ಆಗಲಿಲ್ಲ. ಅತ್ತ ಅತ್ತೆ ಮಾವನ ಸಂಪರ್ಕವೂ ಇಲ್ಲವಾಯ್ತು. ಸರಯೂ ತನಗೊಂದು ಕೆಲಸ ಕೊಡಿಸುವಂತೆ ರವಿಗೆ ಕೇಳಿದಳು. ಆವತ್ತಿಂದ ಅವಳ ಮತ್ತು ಸೂಜಿದಾರದ ಸಾಂಗತ್ಯ ನಡೆದಿದೆ.ಅವಳೊಂದು ಚಿಕ್ಕ ಬಾಡಿಗೆ ಮನೆ ಮಾಡಿದಳು.ರವಿಯ ತಾಯಿ ಹಾಗೂ ಸರಯೂನ ಸಹೋದ್ಯೋಗಿಗಳ ಸಹಕಾರದಿಂದ ಅವಳ ಬಾಣಂತನವೂ ಸುಸೂತ್ರವಾಗಿ ನಡೆಯಿತು. ಮಗುವಿಗೆ ಅಭಿ ಎಂದು ಹೆಸರಿಟ್ಟರು‌. ದಿನಗಳು ಕಳೆದವು ರವಿಯ ತಾಯಿ ಇಲ್ಲಲವಾದರು. ಅಭಿಗೆ ಹನ್ನೊಂದು ವರ್ಷ . ರವಿಯ ಜೊತೆ ತುಂಬಾ ಪ್ರೀತಿ ಒಡನಾಟ ಬೆಳೆದಿತ್ತು. ಕೆಲ ಅನಿವಾರ್ಯ ಕಾರಣಗಳಿಂದ ಮತ್ತು ಅಭಿಯ ಭವಿಷ್ಯದ ದೃಷ್ಟಿಯಿಂದ ಸರಯೂ ರವಿಯ ಕೈ ಹಿಡಿದಳು. ಅದು ಅಭಿಯ ಆಸೆಯಂತೆಯೇ. ಈಗ ರವಿ ಸರಯೂ ಮದುವೆ ಆಗಿ ಹದಿನೆಂಟು ವರ್ಷಗಳು ಕಳೆದಿವೆ. ರವಿ ಅಭಿಯಿಂದ ಆಗಲಿ ಅಥವಾ ಸರಯೂಳಿಂದ ಆಗಲಿ ಏನನ್ನೂ ಅಪೇಕ್ಷಿಸಿರಲಿಲ್ಲ. ಆದರೆ ಅಭಿಯ ಬದಲಾದ ಧೋರಣೆ ಅವನನ್ನು ಘಾಸಿ ಮಾಡಿತ್ತು.


ಸರಯೂ ಅಭಿಯನ್ನು ಕರೆದಳು. "ನೋಡು ಅಭಿ ನಿನಗೆ ತುಂಬಾ ವರ್ಷಗಳಿಂದ ಹೇಳಬೇಕು ಅನ್ಕೊಂಡಿದ್ದ ಸತ್ಯ ಇದೆ. ರವಿ ಬಗ್ಗೆ ನಿನಗೆ ಸಂಶಯ ಇದೆ ಅಲ್ವಾ. ಅವರು ರಾತ್ರಿ ಮನೆಗೆ ಬರಲ್ಲಾ ಅಂತಾ ಅಲ್ವಾ. ಅವ್ರ ಈಗ್ಲೂ ಸೆಕ್ಯೂರಿಟಿ ಆಗಿ ರಾತ್ರಿ ಕೆಲಸಾ ಮಾಡ್ತಾರೆ.ಮತ್ತೆ ಬೆಳಿಗ್ಗೆ ಈ ಆಫೀಸ್ ಕೆಲಸಾ. ನನಗೆ ಕಿಡ್ನಿ ತೊಂದರೆ ಆದಾಗಾ ರವಿ ಹಿಂದೆಮುಂದೆ ನೋಡದೇ ನನಗೆ ಒಂದು ಕಿಡ್ನಿ ಕೊಟ್ಟದಾರೆ.ಅವಾಗವಾಗಾ ರಾತ್ರಿ ಅವರಿಗೆ ನೋವು ಬರ್ತಿತ್ತು. ನಿಂಗೆಲ್ಲಿ ಗೊತ್ತಾಗ್ಬಿಡತ್ತೋ ಅಂತಾ ಅವತ್ತಿಂದಾ ನೈಟ್ ಡ್ಯೂಟಿ ಮಾಡ್ತಿದಾರೆ.ನನಗೆ ಅಂತಾ ಏನ ಮಾಡಿದಾರೆ ಅಂತಾ ಕೇಳ್ದೆ ಅಲ್ವಾ. ಇನ್ನೊಂದು ಮಗು ಬೇಡಾ ಅಭಿನೇ ನಂಗ್ ಮಗಾ ಅಂತಾ ಹೇಳ್ದೋರ್ ಅವ್ರು. ನೀನೆನೋ ಫ್ರೆಂಡ್ಸ ಜೊತೆ ಬಿಸಿನೆಸ್ ಮಾಡತಿನಿ ಹದಿನೈದು ಲಕ್ಷ ಬೇಕು ಅಂದೆ. ಅದಿಕ್ಕೆ ಎರೆಡೆರಡು ಕಡೆ ಕೆಲಸ ಮಾಡ್ತಿದಾರೆ.ನೆನ್ನೆ ಹೇಳ್ತಿದ್ರು ಐದು ಲಕ್ಷಾ ಅರೆಂಜ್ ಆಗಿದೆ . ಇನ್ನೊಂದ್ ವಾರದಲ್ಲಿ ಮಿಕ್ಕ ಹತ್ತು ಲಕ್ಷ ಸಿಗತ್ತೆ ಅಂತಾ. ಇದನ್ನೇಲ್ಲ ನಾ ನಿನಗೆ ಹೇಳಬಾರದು ಅಂತಾ ನನ್ನಿಂದಾ ಭಾಷೆ ತಗೊಂಡಿದ್ರು. ಈಗ ಹೇಳೋ ನಿಮ್ಮಪ್ಪಾ ಕೆಟ್ಟವ್ರಾ? ಈ ಜಗತ್ತಿಗೆ ತಾಯಿ ಪ್ರೀತಿ ಕಂಡಷ್ಟು ತಂದೆ ಪರಿಶ್ರಮ ಕಾಣಲ್ಲ. ಅಪ್ಪ ಅಂದ್ರೆ ಹೆಬ್ಬೆಟ್ಟಿನ ತರಾ , ಹೆಬ್ಬೆಟ್ಟ್ ಇಲ್ಲದೆ ಕೈ ಅಪೂರ್ಣ. ಹಾಗೇ ಅಪ್ಪ ಇಲ್ದೆ ಮನೆ ಅಪೂರ್ಣ. ಗೊತ್ತಾಯ್ತಾ ಅಭಿ.


ತಪ್ಪಾಯ್ತು ಅಮ್ಮಾ. ಇಲ್ಲಿವರ್ಗು ಅಪ್ಪಾ ನಂಗೊಂದು ಒಗಟಾಗಿದ್ರು. ಆದರೆ ಅಪ್ಪಾನೇ ನನ್ನ ಲೋಕಾ. ನನಗೆ ಇದು ಇವತ್ತು ಅರ್ಥ ಆಯ್ತು. ಇನ್ಮೇಲೆ ಅಪ್ಪ ದೂಡಿಯೋದು ಬೇಡಾ, ನೀನು ಹೋಲಿಯೋದು ಬೇಡಾ. ಆಯ್ತಾ ಅಮ್ಮಾ. ಸರಿ ಅಭಿ ನಿಮ್ಮ ತಂದೆಗೆ ಮಾತ್ರೆ ಕೊಡಬೇಕು ಇರು ಬಂದೆ."


"ರವಿ....ರವಿ...ಯಾಕ್ರಿ ಮಾತ್ರೆ ತಗೊಂಡಿಲ್ಲಾ? ಏಳೀ.... ರವಿ."


"ಅಭಿ ಬಾರೋ ಇಲ್ಲಿ ರವಿ ಏಳ್ತಿಲ್ಲಾ.. ರೀ ರೀ.."


"ಅಪ್ಪಾ . ಅಪ್ಪಾ."


"ಅಭಿ ಅವರ ಕೈಲಿ ಏನೋಚೀಟಿ ಇದೆ ನೋಡು."


"ಅಮ್ಮಾ , ಅಪಾ ಇನ್ಶುರನ್ಸ ಮಾಡ್ಸಿದಾರೆ. ಅವರು ಸತ್ರೆ ಇಪ್ಪತ್ತು ಲಕ್ಷಾ ಬರೋ ಹಾಗೆ. ಅದ್ರಲ್ಲಿ ಹತ್ತು ನನ್ ಬಿಸಿನೆಸ್ಗೆ ಇನ್ ಹತ್ ಲಕ್ಷಾ ನಿನ್ನ ಆಪರೇಷನ್ಗಂತೆ. ಥೂ ! ನಾನ್ ಪಾಪಿ. ಅಪ್ಪಾ ಇದ್ದಾಗ ಅವರ ಬೆಲೆ ಗೊತ್ತಾಗಲಿಲ್ಲಾ. ಅಮ್ಮಾ ಮಾತಾಡು ಈ ಮೌನಾ ನನ್ನಾ ಸಾಯಿಸ್ತಿದೆ."

ಅಭಿಗೆ ತಂದೆ ಮತ್ತೆ ಒಗಟಾಗಿದ್ದರು.


"ಪಿತೃ ದೇವೋಭವ"



Rate this content
Log in

Similar kannada story from Drama