Revati Patil

Tragedy Classics Others

3  

Revati Patil

Tragedy Classics Others

ಕಾಣದ ಕಡಲಿಗೆ ಹಂಬಲಿಸುವ ಮನ

ಕಾಣದ ಕಡಲಿಗೆ ಹಂಬಲಿಸುವ ಮನ

2 mins
297



ರಘುವಿನ ಒಳಮನಸ್ಸು ಇದೊಂದೇ ಸಾಲನ್ನು ನೂರಕ್ಕೂ ಹೆಚ್ಚು ಬಾರಿ ಗುನುಗಿತ್ತು. ಮನಸ್ಸಿನ ಆಂತರ್ಯ ಅವನ ಅಂಕುಶಕ್ಕೆ ಸಿಗದಾಗಿತ್ತು. ಅವನ ಮನಸ್ಸು ಅಕ್ಷರಶಃ ಕಾಣದ ಕಡಲಿಗೆ ಹಂಬಲಿಸುತ್ತಿತ್ತು. ಗೊತ್ತು, ತನ್ನ ಬಯಕೆ ಈಡೇರದೆಂದು, ಆದರೂ ಮನುಷ್ಯ ಸಹಜ ಆಸೆಗಳು ಹಾಗೆಯೇ ತಾನೇ?


ರಘು ಮೂಲತಃ ಹಳ್ಳಿಯವನು. ಜೊತೆಗೊಂದಿಷ್ಟು ಬೇಡವೆಂದರೂ ಮೈಮೇಲೆ ಬರುವ ಬಡತನದ ರೇಖೆಗಳು. ದಾಟಬೇಕೆನ್ನುವ ಕಾಲುಗಳು, ಹಾಸಿಗೆಯಿದ್ದಷ್ಟೇ ಕಾಲು ಚಾಚು ಎನ್ನುವ ಬಡತನದ ಬೇಗುದಿ!

ಎಲ್ಲವನ್ನೂ ಮೀರಿ ಒಂದು ದಿನ ತನ್ನ ಕಾಲಳತೆಯ ಹಾಸಿಗೆಯನ್ನು ತಾನು ಸಿದ್ಧ ಪಡಿಸಿಕೊಳ್ಳುತ್ತೇನೆ ಎನ್ನುವ ಬಿಸಿರಕ್ತದ ಆವೇಶವೂ ರಘುವಿನಲ್ಲಿತ್ತು.

ರಘು ಮುಂಗೋಪಿ, ಆದರೆ ಅಪ್ಪಟ ಅಪರಂಜಿ. ಕ್ಷಣದ ಕೋಪ ಬಾಯಲ್ಲಿ ಬರುತ್ತಿತ್ತೆ ವಿನಃ ಮನಸ್ಸಿನನಲ್ಲಿ ಏನನ್ನೂ ಅದುಮಿಡುವ ಜಾಯಮಾನ ರಘುವಿನದಲ್ಲ.


ತ್ಯಾಪೆ ಹಚ್ಚಿದ ಅಂಗಿಯನ್ನು ಧರಿಸಿದಾಗ ಅವನತ್ತ ಬೆರಳು ತೋರುತ್ತಿದ್ದ ಕೈಗಳನ್ನು ನೋಡಿದಾಗೆಲ್ಲ ತನ್ನ ಬಡತನವನ್ನು ಹಳಿಯದೆ, ತನ್ನ ಬಗ್ಗೆ ಕೆಲವರಾದರೂ ಮಾತಾಡುತ್ತಿದ್ದಾರಲ್ಲಾ ಅಷ್ಟೇ ಸಾಕೆಂದು ಬಡತನವನ್ನು ಧನಾತ್ಮಕವಾಗಿ ತೆಗೆದುಕೊಂಡಿದ್ದ.

ಹೀಗೆ ರಘುವಿನ ಓದು ಮುಗಿದು ಮುಂದೆ ಹೆಚ್ಚಿನ ಓದು ಸಾಧ್ಯವಾಗಲಿಲ್ಲ. ಓದಿದವರಿಗೆ ಒಂದು ಕೆಲಸ, ಓದದೇ ಇರುವವರಿಗೆ ಸಾವಿರ ಕೆಲಸ ಎಂದು ನಂಬಿದ್ದ ರಘು ತನ್ನ ಪರಿಚಯಸ್ಥರ ಕಟ್ಟಿಗೆ ಕೆಲಸದ ಅಂಗಡಿಗೆ ಸೇರಿಕೊಂಡ. ಆಕಾರವಿಲ್ಲದ ಕಟ್ಟಿಗೆಯ ಹಲಗೆಯಿಂದ ನಿರ್ಮಾಣವಾಗುತ್ತಿದ್ದ ಸುಂದರ ಚಿತ್ರಗಳ ಬಾಗಿಲು, ಕಿಡಕಿಗಳನ್ನು ನೋಡಿದಾಗ ತನ್ನ ಜೀವನವೂ ಹೀಗೆ ಸುಂದರವಾದ ಚಿತ್ರವಾಗಬಹುದೆಂದು ರಘು ಬಲವಾಗಿ ನಂಬಿದ್ದ. ತನ್ನಮ್ಮನ ಕೊರಳಿಗೆ ಎರಡೆಳೆ ಚಿನ್ನದ ಸರವನ್ನು ಮಾಡಿಸಬೇಕೆನ್ನುವ ಆಸೆಯೂ ರಘುವಿಗಿತ್ತು.


ದೇವಸ್ಥಾನದ ಬಾಗಿಲುಗಳ ಆರ್ಡರ್ ಸಹ ರಘುವಿನ ಅಂಗಡಿಗೆ ಬಂದಿತ್ತು. ಬಾಗಿಲ ಜೊತೆಗೆ ಘಂಟೆಗಳನ್ನು ಕಟ್ಟಿ, ಸುಂದರ ವಿನ್ಯಾಸ ಕೆತ್ತಿ ಅರಳಿಸಿದ ಬಾಗಿಲು ರಘುವಿನ ಮನಸ್ಸನ್ನು ತುಂಬಾ ಸೆಳೆದಿತ್ತು. ಸಾಮಾನ್ಯ ಕಟ್ಟಿಗೆ ಉರಿಸಿದರೆ ಕ್ಷಣಮಾತ್ರದಲ್ಲಿ ಬೂದಿಯಾಗುತ್ತದೆ, ಬಾಗಿಲಾಗಿ ಮಾಡಿದರೆ ಅಜರಾಮರವಾಗಿ ದೈವತ್ವಕ್ಕೆ ಸಾಕ್ಷಿಯಾಗುತ್ತದೆ ಎಂದು ರಘು ಒಳಾರ್ಥವನ್ನು ಅರ್ಥೈಸಿಕೊಂಡಿದ್ದ. ಹೀಗೆ ರಘು ಕಟ್ಟಿಗೆಯ ಕೆಲಸಕ್ಕೆ ಹೊಂದಿಕೊಂಡಿದ್ದ. ಮುಂದೆ ದಿನಗಳು ಕಳೆದಂತೆ ಒಳ್ಳೊಳ್ಳೆ ಆರ್ಡರ್'ಗಳು ಬಂದು ರಘುವಿಗೂ ಕೈತುಂಬ ಕೆಲಸ ಸಿಗುವಂತಾಯಿತು. ರಘು ಸಹ ಮಾಲೀಕನಿಂದ ಉತ್ತಮನೆಂದು ಕರೆಸಿಕೊಂಡಿದ್ದ. ಎಲ್ಲರ ಬಯಲ್ಲೂ ರಘುವಿನ ಹೆಸರು ಬರುತ್ತಿದ್ದಂತೆ ರಘು ಕೂಡ ತನಗೆ ಗೊತ್ತಿಲ್ಲದೇ ಬದಲಾಗತೊಡಗಿದ್ದ. ಅಂಗಡಿಗೆ ತನ್ನಿಂದಲೇ ಹೆಸರು ಬರುತ್ತಿದೆ, ದೊಡ್ಡ ದೊಡ್ಡ ದೇವಸ್ಥಾನದ ಆರ್ಡರ್ ಬರಲು ತನ್ನ ಕೆಲಸವೇ ಕಾರಣ ಎನ್ನುವ ಭ್ರಮಲೋಕಕ್ಕೂ ಸಾಗುತ್ತಾನೆ.


ಇನ್ನೊಬ್ಬರ ಕೈಕೆಳಗೆ ಸಾವಿರಕ್ಕೆ ದುಡಿಯುವ ಬದಲು ತಾನೇ ಒಂದು ಅಂಗಡಿಯ ಮಾಲೀಕನಾಗಿ ಲಕ್ಷ ಲಕ್ಷ ದುಡಿದು, ತನಗೆ ಅಂಟಿದ್ದ ಬಡತನವನ್ನು ಕಳೆಯಬೇಕೆಂದು ಯೋಚಿಸತೊಡಗಿದ.


ಮನುಷ್ಯನ ಭಾವಯಾನವೇ ಹೀಗೆ, ಇರುವುದನ್ನು ಬಿಟ್ಟು ಇರದುದರೆಡೆಗೆ ತುಡಿಯುತ್ತಾನಲ್ಲವೇ? ರಘು ಸಹ ಸಾಮಾನ್ಯ ಮನುಷ್ಯ. ಅವನ ಮನವು ಸಹ ಕಾಣದ ಕಡಲಿಗೆ, ತಕ್ಷಣಕ್ಕೆ ಆಗದ ಕೆಲಸಕ್ಕೆ ಹಂಬಲಿಸುತ್ತಿತ್ತು. ರಘುವಿನ ಅವಸರ ಮಾಲೀಕನ ಕೆಂಗಣ್ಣಿಗೆ ಗುರಿಯಾಯಿತು. ರಘು ಬರುವ ಮೊದಲೇ ತನ್ನ ಅಂಗಡಿ ಉತ್ತಮ ಎಂದು ಹೆಸರಾಗಿತ್ತು. ಆದರೆ ರಘು ತನ್ನಿಂದಲೇ ಹೆಚ್ಚಿನ ಆರ್ಡರ್ ಬರುತ್ತಿರುವುದಾಗಿ ಎಲ್ಲರ ಮುಂದೆಯೂ ಹೇಳಿಕೊಂಡು ಓಡಾಡುತ್ತಿದ್ದದ್ದು ಮಾಲೀಕನ ಕೋಪಕ್ಕೆ ಕಾರಣವಾಗಿ ರಘುವನ್ನು ಕೆಲಸದಿಂದ ತೆಗೆದೇಬಿಟ್ಟೆ!

ತನ್ನ ತಾಯಿಗೆ ಎರಡೆಳೆ ಚಿನ್ನದ ಸರ ಮಾಡಿಸುವ ಆಸೆಯೊಂದಿಗೆ ಕೈಯಲ್ಲಿದ್ದ ಕೆಲಸವನ್ನು ಸಹ ಕಳೆದುಕೊಂಡು ರಘು ಮೌನಿಯಾಗಿದ್ದ.


ಇದ್ದುದರಲ್ಲೇ ಸಾಗುವ ಬದಲು ಹೆಚ್ಚಿನದಕ್ಕೆ ಬಯಸುವುದು , ವಿಶಾಲ ಸಮುದ್ರವೇ ಕಣ್ಣಿಗೆ ಕಾಣದಂತಿರುವಾಗ ಅದರ ಕಡಲನ್ನು ಕಾಣುವ ಬಯಕೆಗಳು ಎಂದಿಗೂ ನಿರಾಸೆಯನ್ನೇ ಮೂಡಿಸುತ್ತವೆ. ರಘು ನಿಧಾನವಾಗಿ ಮಾಲೀಕನೊಂದಿಗೆ ಮಾತಾಡಿ, ಮಾಲೀಕನ ಹತ್ತಾರು ಅಂಗಡಿಗಳಲ್ಲಿ ಒಂದನ್ನು ನೋಡಿಕೊಳ್ಳುವ ಕೆಲಸವನ್ನು ಪಡೆಯಬಹುದಿತ್ತು, ಅದರ ಬದಲು ಇದ್ದ ಕೆಲಸ ಕಳೆದುಕೊಂಡ.


Rate this content
Log in

Similar kannada story from Tragedy