ದುರಂತ
ದುರಂತ


ನಾಗರಾಜ್ ಅವನ ಅಪ್ಪ ಅಮ್ಮನಿಗೆ ಒಬ್ಬನೇ ಮಗ. ಹೆತ್ತವರು ತಮ್ಮ ಎಲ್ಲಾ ಪ್ರೀತಿಯನ್ನೂ ಧಾರೆ ಎರೆದು ಸಾಕಿದ ಮುದ್ದಾದ ಮಗ .SSLC ಆದ ತಕ್ಷಣ ಅವನ ಕೆಲವು ಸ್ನೇಹಿತರು ಸೈನ್ಯ ಕ್ಕೆ ಸೇರಬೇಕೆಂದು ಮನೆ ಯಲ್ಲಿ ಹೇಳದೆ ಬಂದಿದ್ದರು. ಅವರಲ್ಲಿ ನಾಗರಾಜ್ ಒಬ್ಬನೇ select
ಆಗಿದ್ದು ತಂದೆ ತಾಯಿಗೆ ಬೇಸರ . ಅವರ ಅಕ್ಕ ಪಕ್ಕದವರೆಲ್ಲಾ ಧೈರ್ಯ ಹೇಳಿ ಹೇಗೋ ಒಪ್ಪಿಗೆ ಕೊಡಿಸಿದ್ದರು. ಹತ್ತು ವರ್ಷಗಳಲ್ಲಿ ಎರಡು ಸಾರಿ ಮಾತ್ರ ಬಂದಿದ್ದ.
ಒಂದು ದಿನ ಅವನಿಂದ ಒಂದು ಪತ್ರ ಬಂತು .ಇಷ್ಟು ದಿನ ಯುದ್ಧ ನಡೆಯುತಿದ್ದ ವಿಷಯ ನಿಮಗೂ ತಿಳಿದಿರಬಹದು. ಅದರಲ್ಲಿ ನಾವೇ ಗೆದ್ದಾಯಿತು. ನಿಮ್ಮನ್ನ ನೋಡಬೇಕಂತ ನನಗೆ ಬಹಳ ಆಸೆ. ನಾಳೆ ರಾತ್ರಿ ಹೊರಟು ಎರಡು ದಿನದಲ್ಲಿ ಅಲ್ಲಿಗೆ ಬರ್ತೀನಿ ಮತ್ತೆ ನಾನು ಇಲ್ಲಿಗೆ ಬರಬೇಕಾಗಿಲ್ಲ. ನಿಮ್ಮ ಜೊತೆಯಲ್ಲಿ ಅಲ್ಲೇ ಇರ್ತೀನಿ ಅಂದಾ ಗ ಬಹಳ ಸಂತೋಷ ಆಯ್ತು. ಹಾಗೇ ಇನ್ನೊಂದು ವಿಷಯ ನನ್ನ ಜೊತೆ ನನ್ನ ಸ್ನೇಹಿತ ಒಬ್ಬ ಬರ್ತಿದಾನೆ ಅಂದಾಗ ಬರಲಿ ಬಿಡು ಅದಕ್ಕೇನು ಅಂದರು. ಅದು ಹಾಗಲ್ಲ ಅವನು ನಮ್ಮ ಮನೆಯಲ್ಲೇ ಇರ್ತಾನೆ ಅಂದಾಗ ಇರಲಿ ಅದಕ್ಕೇನು ಅಂದರು. ಅವನು ನಮ್ಮ ಜೊತೆ ಇರಕ್ಕೆ ಬರ್ತಾ ಇರೋದು.ಅವನು ಅನಾಥ ನಮ್ಮ ಮನೆಯಲ್ಲಿ ಇದ್ದರೆ ನಿಮಗೆ ಏನಾದರೂ ತೊಂದರೆ ಆಗತ್ತಾ ಅಂದ.ಅದು ಹೇಗೆ ಯಾರನ್ನೋ ಮನೆಯಲ್ಲಿ ಇಟ್ಟು ಕೊಳ್ಳೋದು ನೀನೇ ಹೇಳು.ನಿನ್ನ ಸ್ನೇಹಿತ ಅಂತ ಹೇಳ್ತಾ ಇರೋದರಿಂದ ಬರಲಿ ಏನಾದರೂ ಬೇರೆ ವ್ಯವಸ್ಥೆ ಮಾಡೋಣ ಅಂದರು. ಬೇರೆ ವ್ಯವಸ್ಥೆ ಅಂದರೆ ಅಂತ ಕೇಳಿದ. ಅದು ಒಂದು ರೂಮ್ ಮಾಡಿಕೊಟ್ಟು ಅಲ್ಲೇ ಇರೋದಕ್ಕೆ ವ್ಯವಸ್ಥೆ ಅಂತ. ಹೇಗಾಗತ್ತೆ ಅವನಿಗೆ ಬಾಂಬ್ ಸಿಡಿದು ಬಲ ಗೈ ಬಲಗಾಲು ಎರಡೂ ಇಲ್ಲ ಅದಕ್ಕೆ ನಾನು ಇಷ್ಟು ಹೇಳ್ತಾ ಇರೋದು ಅಂದಾಗ ಹಾಗಾದರೆ ನಾವು ಇಟ್ಟು ಕೊಳ್ಳೋದು ಕಷ್ಟ .ನಮಗೂ ವಯಸ್ಸಾಯ್ತು ಆಗಲ್ಲ ಅಂದು ಬಿಟ್ಟರು. ಸರಿ ಬೇರೆ ಏನಾದರೂ ಯೋಚನೆ ಮಾಡ್ತೀನಿ ಅಂತ ಹೇಳಿದ.
ಅವನು ಬೆಳಗ್ಗೆ ಐದು ಗಂಟೆ ರೈಲಿಗೆ ಬರಬೇಕಿತ್ತು. ಅಲ್ಲಿಂದ ಬಸ್ ನಲ್ಲಿ ಬರಬೇಕಾದ್ರೆ ಹತ್ತು ಗಂಟೆ ಆಗತ್ತೆ .ಮಗ ಬಂದು ಬಿಡ್ತಾನೆ ಅಂತ ಅಪ್ಪ ಅಮ್ಮನಿಗೆ ಸಡಗರ.ಹತ್ತು ಗಂಟೆಗೆ ಬರಲಿಲ್ಲ ರೈಲು ಎಲ್ಲೊ ಲೇಟ್ ಆಗಿರಬಹುದು ಅಂದು ಕೊಂಡರು. ಹನ್ನೊಂದು ಆಯ್ತು ಇಲ್ಲ. ರಾತ್ರಿ ಆಯ್ತು ಇಲ್ಲ. ಬೆಳಗ್ಗೆ ಸೀದಾ ಬಂದು ಅಪ್ಪ ಪೋಲಿಸ್ ಕಂಪ್ಲೇಂಟ್ ಕೊಟ್ಟರು. ಎರಡು ದಿನ ಕಳೆಯಿತು. ಒಬ್ಬ ಪೋಲಿಸ್ ಕಾನ್ಸ್ಟೇಬಲ್ ಬಂದು ಒಂದು ಬಾಡಿ ಸಿಕ್ಕಿದೆ ಅದು ನೀವು ಕೊಟ್ಟ ಫೋಟೋ ನ ಹೋಲುತ್ತೆ. ಹಾಗಂತ ಅದು ನಿಮ್ಮ ಮಗಾನೆ ಅಂತ ಅಲ್ಲ .ಅದೂ ಸಹಾ ನಿರ್ಮಾಣ ಆಗ್ತಾ ಇರೊ ಒಂದು ಕಟ್ಟಡ ದಿಂದ ಹಾರಿ ಬಿದ್ದಿರೋದು ಹೆದರಬೇಡಿ ಅಂತ ಅವನ ಗಾಡಿಯಲ್ಲೇ ಕರೆದು ಕೊಂಡು ಹೋದ. ಅಲ್ಲಿಗೆ ಬಂದು ಮುಖದ ಮೇಲಿನ ಬಟ್ಟೆ ನಿಧಾನವಾಗಿ ತೆಗೆದರು. ಅದು ಮಗನ ಮುಖ ಅನುಮಾನವೇ ಇಲ್ಲ. ಬಲಗೈ ಬಲ ಗಾಲು ಎರಡೂ ಇಲ್ಲ. ಆಗ ಎಲ್ಲಾ ಅರ್ಥ ವಾಯ್ತು. ಅಯ್ಯೋ ಅಂತ ರೋಧಿಸುತ್ತಾ ಕುಸಿದು ಬಿದ್ದರು ಅವನ ಅಪ್ಪ.