ದೈವ ಲೀಲೆ
ದೈವ ಲೀಲೆ


ತಮಿಳು ನಾಡಿನ ಕುಂಭಕೋಣದಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಶ್ರೀ ಸಾರಂಗಪಾಣಿ ದೇವಾಲಯ ಇದೆ. ಬಹಳ ಹಿಂದೆ ಇಲ್ಲಿ
ನಾರಾಯಣ ಸ್ವಾಮಿ ಎನ್ನುವ ಒಬ್ಬರುಸಾರಂಗಪಾಣಿಯ ಪರಮ ಭಕ್ತ. ಅವರು ವಿವಾಹವನ್ನೂ ಮಾಡಿ ಕೊಳ್ಳದೆ ತಮ್ಮ ಜೀವನವನ್ನು ದೇಗುಲದ ಪ್ರತಿ ನಿತ್ಯದ ಸೇವಾ ಕಾರ್ಯಗಳಿಗೆ ಮೀಸಲಿಟ್ಟು ಪ್ರತಿ ಕ್ಷಣವೂ ಆ ದೇವರನ್ನೇ ನೆನೆಯುತ್ತಾ ಜೀವನ ಕಳೆದು ನಲವತ್ತರ ವಯಸ್ಸಿನಲ್ಲಿ ಆ ದೇವರ ಪಾದ ಸೇರಿದರು.ಅವರು ಅವಿವಾಹಿತರಾದ ಕಾರಣ ಅವರ ದೇಹವನ್ನು ದೇವಾಲಯದ ಸಿಬ್ಬಂದಿಯೇ ಸಂಸ್ಕಾರ ಮಾಡಿದರಾದರೂ,ಅವರ ತಿಥಿ ಯಾರು ಮಾಡಬೇಕೆನ್ನುವ ದೊಡ್ಡ ಪ್ರಶ್ನೆ ಎದುರಾಯಿತು. ಅವರ ದೂರದ ಸಂಭಂದೀಕರು ಇದ್ದರಾದರೂ ಅವರಲ್ಲಿ ಯಾರೂ ಮುಂದೆ ಬರದ ಕಾರಣ ಇದು ಪ್ರಶ್ನೆಯಾಗಿ ಉಳಿದಾಗ , ಅಲ್ಲಿಗೆ ಒಬ್ಬ ಬ್ರಾಹ್ಮಣ ಬಂದು ಇದು ಬಹಳ ಶ್ರೇಷ್ಟವಾದ ಕೆಲಸ ನಾರಾಯಣ ಸ್ವಾಮಿ ಅನಾಥನಲ್ಲ . ನಿಮ್ಮ ಒಪ್ಪಿಗೆ ಇದ್ದರೆ ನಾನೇ ಮಾಡುತ್ತೇನೆ ಎಂದಾಗ ಸರಿಯಾದ ಸಮಯಕ್ಕೆ ಆ ದೇವರೇ ನಿಮ್ಮನ್ನು ಕಳುಹಿಸಿ ಕೊಟ್ಟಿದ್ದಾನೆ. ದಯವಿಟ್ಟು ನೀವೇ ಮಾಡಿ ಎಂದಾಗ ಅಲ್ಲಿ ದ್ದ ಎಲ್ಲರಿಗೂ ಆಶ್ಚರ್ಯವಾಗುವಂತೆ ಯಾರ ಸಹಾಯ ವನ್ನೂ ಅಪೇಕ್ಷಿಸದೆ ತಾವೇ ಪ್ರತಿ ಮಂತ್ರದ ಅರ್ಥ ವನ್ನೂ ಅಲ್ಲಿದ್ದವರಿಗೆ ತಿಳಿ ಸುತ್ತಾ ಮುಗಿಸಿದಾಗ ಎಲ್ಲರಿಗೂ ಆಶ್ಚರ್ಯ. ಕಾರಣ ಇದುವರೆಗೂ ಇವರನ್ನು ಊರಲ್ಲಿ ಯಾರೂ ನೋಡಿರಲಿಲ್ಲ ಮತ್ತು
ಅಲ್ಲಿ ಇದ್ದ ವರೆಲ್ಲಾ ಪ್ರಖಾಂಡ ಪಂಡಿತರೇ ಆದರೂ ಅವರೆಲ್ಲರನ್ನೂ ಮೀರಿಸುವ ಪಾಂಡಿತ್ಯ ಹೊಂದಿದ್ದು ಅವರ ಬಾಯಿಂದ ಹೊರಡುತ್ತಿದ್ದ ಪ್ರತಿ ಮಂತ್ರದ ಶಬ್ದ ಇಡೀ ಪರಿಸರದಲ್ಲಿ ವಿಧ್ಯುತ್ ಸಂಚಾರ ವಾಗುವಂತೆ ಅವರಿಗೆಲ್ಲಾ ಅನುಭವವಾಯ್ತು. ಕಾರ್ಯ ಮುಗಿಸಿಹೊರಟಾಗ ಯಾರಿಗೂ ಅವರನ್ನು ಮಾತನಾಡಿಸುವ ಧೈರ್ಯ ಬರದೇ ಎಲ್ಲರೂ ಆ ವ್ಯಕ್ತಿ ಯ ಮುಖವನ್ನೇ ನೋಡುತ್ತಾ ನಿಂತು ಬಿಟ್ಟ ರು .ಕೆಲವು ನಿಮಿಷಗಳ ನಂತರ ಅವರಲ್ಲಿ ಒಬ್ಬರು ಮಾತ್ರ ಓಡಿ ಹೋಗಿ ಆ ವ್ಯಕ್ತಿಯನ್ನು ಊಟ ಮಾಡಿಕೊಂಡು ಹೋಗಲು ಹೇಳಬೇಕೆಂದು ತಕ್ಷಣ ಮನಸ್ಸಿಗೆ ಹೊಳೆದು ಹಿಂಬಾಲಿಸಿದರು.ಆದರೆ ಆ ವ್ಯಕ್ತಿ ನೇರವಾಗಿ ಗರ್ಭ ಗುಡಿ ಒಳಗೆ ಹೋಗಿದ್ದು ನೋಡಿ , ಅಪರ ಕಾರ್ಯ ಮಾಡಿ ಸ್ನಾನ ಮಾಡದೇ ಗರ್ಭ ಗುಡಿಯೊಳಗೆ ಹೋಗಿದ್ದಾನೆ ಅಂತ ಗಟ್ಟಿಯಾಗಿ ಕಿರುಚಿ ಕೊಂಡಾಗ ಉಳಿದವರೂ ಅಲ್ಲಿಗೆ ಬಂದು ಬಾಗಿಲಲ್ಲಿ ನಿಂತರು.ಅದೇ ಸಮಯಕ್ಕೆ ಮುಖ್ಯ ದ್ವಾರದಲ್ಲಿ ನಗಾರಿಯ ಶಭ್ದ ಕೇಳಿ ಬಂದು ಅಲ್ಲಿ ಹೋಗಿ ನೋಡಿದರೆ ನಗಾರಿ ಭಾರಿಸುವ ವ್ಯಕ್ತಿ ಅಲ್ಲಿ ಇಲ್ಲ.ಧೈರ್ಯ ಮಾಡಿ ಒಬ್ಬರು ಗರ್ಭ ಗುಡಿ ಒಳಗೆ ಹೋಗಿ ನೋಡಿದರೆ ಯಾರೂ ಇಲ್ಲ .ಆಗ ಅವರಿಗೆಲ್ಲಾ ಅರಿವಾಯಿತು, ಅದು ಸಾರಂಗ ಪಾಣೀಯೇ ಅಂತ . ತನ್ನ ಪರಮ ಭಕ್ತನ ತಿಥಿ ಮಾಡಲುಯಾರೂ ಇಲ್ಲವೆಂದು ಸ್ವಾಮಿಯೇ ಹೊರ ಬಂದಿದ್ದಾನೆಂದು ಇಂದಿಗೂ ನಂಬಿರುವ ಇಲ್ಲಿ ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆ ದಿನ ತಿಥಿ ಊಟವೇ ಪ್ರಸಾದ.