ಬಿರುಗಾಳಿ
ಬಿರುಗಾಳಿ


ದೊರೆಸ್ವಾಮಿ ಮತ್ತು ಕೃಷ್ಣಪ್ಪ ಒಳ್ಳೆಯ ಸ್ನೇಹಿತರು. ದೊರೆಸ್ವಾಮಿಯ ತಂದೆ ಬಹಳ ಹಿಂದೆ ತಮಿಳುನಾಡಿಂದ ಬಂದು ಇಲ್ಲಿ ನೆಲೆಸಿದ್ದರು. ಕೃಷ್ಣಪ್ಪನವರ ತಂದೆ ಜಮೀನ್ದಾರರು . ದೊರೆಸ್ವಾಮಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೇ ಕೃಷ್ಣಪ್ಪನಿಗೂ ಇಬ್ಬರು ಹೆಣ್ಣು ಮಕ್ಕಳು. ದೊರೆಸ್ವಾಮಿಗೆ ನಿರ್ಧಿಷ್ಟ ವರಮಾನದ ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿತ್ತು. ಇದು ಕೃಷ್ಣಪ್ಪನಿಗೂ ತಿಳಿದ ವಿಷಯ. ಕೃಷ್ಣಪ್ಪನ ಹೆಂಡತಿ ಶಾರದಾ ಒಂದು ದಿನ ಗಂಡನಿಗೆ ಹೇಳಿದಳು, ನಮ್ಮ ಎರಡು ಎಕರೆ ಮೂಲೆ ಹೊಲ ಖಾಲಿಬಿದ್ದಿದೆ. ನೀವೂ ವ್ಯಯಸಾಯ ಮಾಡಲ್ಲ ಬೇರೆಯವರಿಗೂ ಕೊಡಲ್ಲ. ದೊರೆಸ್ವಾಮಿಯನ್ನ ಕೇಳಿ ಅವನೇನಾದರೂ ಮಾಡೋ ಹಾಗಿದ್ದರೆ ಮಾಡಲಿ. ನಮಗೂ ಬೆಳೆದಿದ್ದರಲ್ಲಿ ಸ್ವಲ್ಪ ಕೊಡಲಿ. ಅವರಿಗೂ ಅನುಕೂಲ ಆಗುತ್ತೆ ಅಂದಾಗ, ಹೌದಲ್ಲ ನನಗೆ ಹೊಳಿದಿರಲಿಲ್ಲ. ಕೇಳ್ತೀನಿ ಅಂದ. ಮಾರನೇದಿನವೇ ಮಾತಾಡಿ ಸುತ್ತಲೂ ಬೇಲಿ ಹಾಕಿಸಿ ಜಮೀನು ಕೊಡೋದು ಅಂತ ಆಯ್ತು. ದೊರೆಸ್ವಾಮಿ ಎರಡುವರ್ಷ ರಾಗಿ ಜೋಳ ಬೆಳೆಯುತ್ತಿದ್ದ. ನೀರಿನ ಅನುಕೂಲ ಇದ್ದರೆ ತೋಟ ಮಾಡಬಹುದು ಬ್ಯಾಂಕಲ್ಲಿ ಸಾಲ ತೊಗೊಂಡು ಬೋರ್ ಹಾಕಬಹುದು. ಸಾಲ ನಾನು ತೀರಿಸ್ತೀನಿ ಅಂದಾಗ ಕೃಷ್ಣಪ್ಪ ಒಪ್ಪಿ ಲೋನ್ ತೊಗೊಂಡ. ಬೋರ್ ಹಾಕಿಸಿ ನೀರಿನ ಅನುಕೂಲ ಆದಮೇಲೆ ಊರಿಂದ ಇಬ್ಬರನ್ನ ಕರೆದು ತಂದು ತೋಟದ ಕೆಲಸ ಶುರು ಮಾಡಿದ. ಕೆಲಸದವರಿಗೆ ಶೀಟ್ ಹಾಕಿ ಚಿಕ್ಕದಾಗಿ ಒಂದು ಮನೆ ಮಾಡಿಕೊಟ್ಟ. ಕೆಲವು ದಿನ ಆದಮೇಲೆ ದೊರೆಸ್ವಾಮಿ ಸಹಾ ತೋಟದಲ್ಲಿ ಮನೆ ಮಾಡಿಕೊಂಡು ಅಲ್ಲೇ ಇದ್ದ. ಮೊದಮೊದಲು ಪುಟ್ಟಮನೆ ಕ್ರಮೇಣ ದೊಡ್ಡ ಮನೆ ಆಯ್ತು. ಒಂದೊಂದೇ ಅನುಕೂಲ ಮಾಡ್ಕೊಂಡ. ಹೆಣ್ಣುಮಕ್ಕಳನ್ನ ಒಳ್ಳೆಯ ಶಾಲೆಗೆ ಕಳಿಸಿದ. ಕೃಷ್ಣಪ್ಪ ಮತ್ತು ಶಾರದಾ ವಾರಕ್ಕೊಂದು ದಿನ ಇವರ ತೋಟಕ್ಕೆ ಹೋಗಿ ಇವರ ಮನೆಯಲ್ಲೇ ಊಟ ತಿಂಡಿ ಮಾಡಿ ಮಕ್ಕಳೊಂದಿಗೆ ದಿನ ಕಳೆಯುತ್ತಿದ್ದರು. ದೊರೆಸ್ವಾಮಿ ಕಷ್ಟಪಟ್ಟು ಮುಂದೆ ಬಂದಿರುವುದು ಕೃಷ್ಣಪ್ಪನಿಗೆ ಸಂತೋಷ. ಆದರೆ ಸಹಾಯ ಮಾಡಕ್ಕೆ ಹೇಳಿದ ಶಾರದಳಿಗೆ ಏಕೋ ಇವರು ದಿನದಿಂದ ದಿನಕ್ಕೆ ಬೆಳೆಯುತ್ತ ಇರೋ ವೇಗ ಇಷ್ಟವಾಗಲಿಲ್ಲ. ಆದರೆ ಯಾರಿಗೂ ಹೇಳುವ ಹಾಗಿಲ್ಲ. ಪ್ರತಿವಾರ ಹೋಗುತ್ತಿದ್ದವಳು ಏನೋ ಕಾರಣಕೊಟ್ಟು ಹೋಗುವುದನ್ನ ನಿಲ್ಲಿಸಿದಳು. ಮಕ್ಕಳನ್ನೂ ಹೋಗಲು ಬೇಡ ವೆನ್ನುತ್ತಿದ್ದಳು. ಒಂದು ದಿನ ನಾವು ತಪ್ಪು ಮಾಡಿದ್ದೇವೆ ಅಂತ ಈಗ ಅನಿಸುತ್ತೆ. ದೊರೆಸ್ವಾಮಿ ಮಾಡ್ತಾಯಿರೋ ತೋಟದ ಜಮೀನು ಮೇನ್ ರೋಡ್ ಗೆ ಹತ್ತಿರ ಇದೆ. ನಾಳೆ ಅದಕ್ಕೇನಾದರೂ ಒಳ್ಳೇ ಬೆಲೆ ಬಂದು ಮಾರಬೇಕಾಗಿ ಬಂದರೆ ಅವರನ್ನ ಖಾಲಿ ಮಾಡಿ ಅಂತ ತಕ್ಷಣ ಹೇಳೋದು ಕಷ್ಟ. ಸ್ವಲ್ಪ ಯೋಚನೆ ಮಾಡಿ ಅಂದಳು. ಹೆಂಡತಿ ಹೇಳೋದು ಸರಿಯಾಗಿದೆ. ಹಾಗೇ ನಾದರೂ ಆದರೆ ಇಬ್ಬರಲ್ಲೂ ಮನಸ್ಥಾಪ ಬಂದೇ ಬರುತ್ತೆ ಅಂತ ತಾನೂ ಹಾಗೇ ಯೋಚನೆ ಮಾಡಿದ. ಹೀಗಿರುವಾಗ ಒಂದು ದಿನ ಸಾಲ ತೊಗೊಂಡ ಬ್ಯಾಂಕ್ ನಿಂದ ಮೂರು ತಿಂಗಳು, ಕಂತು ಹಣ ಕಟ್ಟಿಲ್ಲ ಅಂತ ಕೃಷ್ಣಪ್ಪನಿಗೆ ನೋಟೀಸ್ ಬಂತು. ಸೀದ ದೊರೆಸ್ವಾಮಿ ಮನೆಗೇ ಹೋದ. ಅವನ ಹೆಂಡತಿ ಮಾತ್ರ ಮನೇಲಿ ಇದ್ದಳು. ಕೋಪದಿಂದ ನೋಟೀಸ್ ತೋರಿಸಿ ಮೂರು ತಿಂಗಳಿಂದ ಕಟ್ಟಿಲ್ಲ ಅಂದಾಗ ವಿಚಿತ್ರ ಕಾರಣ ಕೊಟ್ಟು, ಕಟ್ಟೋಣ, ಬಡ್ಡಿ ಸಮೇತ ಕಟ್ಟೋಣ. ಬರಲಿ ಅವರಿಗೆ ಹೇಳ್ತೀನಿ ಅಂತ ಬೇಜವಾಬ್ದಾರಿಯಿಂದ ಉತ್ತರ ಕೊಟ್ಟಾಗ ಕೃಷ್ಣಪ್ಪನಿಗೂ ಬೇಜಾರಾಯ್ತು.
ಇದೇ ಸಮಯಕ್ಕೆ ಸರ್ಕಾರ ಉಳುವವನೇ ಒಡೆಯ ಅನ್ನೋ ಕಾನೂನು ಬೇರೆ ತಂತು. ಈಗ ಕೃಷ್ಣಪ್ಪ ಮತ್ತು ಶಾರದಾ ಚಿಂತೆಗೀಡಾದರು. ಕೃಷ್ಣಪ್ಪನನ್ನ ಕರೆದು ಇಂತಹ ಕಾನೂನ
ು ಬಂದಿದೆ. ನಾವು ಮಾಡಿದ ಸಹಾಯ ಮರೆತು ನೀವು ನಮಗೆ ಮೋಸಮಾಡಲ್ಲ ಅಂತ ತಿಳಿದಿದ್ದೇವೆ ಅಂದಾಗ, ಎಲ್ಲಾದರೂ ಉಂಟೇ ಜಮೀನು ನನ್ನದಾಗಲು ಸಾಧ್ಯವೇ. ಅಂದಾಗ ಇಬ್ಬರೂ ಸ್ವಲ್ಪ ನಿರಾಳವಾದರು. ನಾನು ಬೇರೋಂದು ಕಡೆ ನಮ್ಮೂರಲ್ಲಿ ಜಮೀನು ಖರೀದಿ ಮಾಡಿದ್ದೀನಿ ಅದಕ್ಕೇ ಬ್ಯಾಂಕ್ ಗೆ ಮೂರುತಿಂಗಳಿಂದ ಹಣ ಕಟ್ಟಕ್ಕೆ ಆಗಲಿಲ್ಲ. ಅಂದಾಗ ಈ ವಿಷಯ ನಮಗೆ ಮೊದಲೇ ಹೇಳಲಿಲ್ಲ ಅಂತ ಮನಸಲ್ಲಿ ಬೇಜಾರಾದರೂ ತೋರಿಸಿಕೊಳ್ಳಲಿಲ್ಲ.
ಮೂರುವರ್ಷಗಳು ಹೀಗೆ ಕಳೆಯಿತು. ಒಂದುದಿನ ನಿಮ್ಮ ಜಮೀನಿನ ಬೆಲೆ ಎಷ್ಟು ನಾನೇ ಹಣ ಕೊಟ್ಟು ಖರೀದಿಮಾಡ್ತೀನಿ, ಒಳ್ಳೇ ಸಮಯದಲ್ಲಿ ನನಗೆ ಕೊಟ್ಟಿದ್ದೀರಿ. ಅದರಿಂದ ನನಗೆ ಎಲ್ಲಾ ಒಳ್ಳೆಯದಾಗಿದೆ. ನನ್ನ ಹೆಂಡತಿ ಮಕ್ಕಳು ಸಹಾ ಇದನ್ನೇ ಹೇಳ್ತಾರೆ ಅಂದ. ಮಾರುವ ಮನಸ್ಸಿಲ್ಲ ಮತ್ತು ಅದು ಬೈಪಾಸ್ ರೋಡ್ ಪಕ್ಕದಲ್ಲೇ ಇರೋದ್ರಿಂದ ಇಂದಲ್ಲ ನಾಳೆ ಬಂಗಾರದ ಬೆಲೆ ಬರುತ್ತೆ ಅಂದು ಬಿಟ್ಟ. ಜಮೀನು ಯಾವಾಗ ಮಾರುವುದಿಲ್ಲ ಅಂದನೋ ಅಂದಿನಿಂದ ಇಬ್ಬರ ಸ್ನೇಹದಲ್ಲಿ ಒಡಕು ಕಾಣಿಸಿತು. ಕೊನೆಗೆ ಮಾತನಾಡುವುದೂ ಕಡಿಮೆ ಆಯ್ತು.ಒಂದು ದಿನ ನಮ್ಮ ಸ್ನೇಹ ಹೀಗೆ ಚೆನ್ನಾಗಿರ ಬೇಕಾದರೆ ನಾವೇನಾದರೂ ಒಂದು ನಿರ್ಧಾರಕ್ಕೆ ಬರಲೇ ಬೇಕು ಅಂತ ಕೃಷ್ಣಪ್ಪ ಹೇಳಿದ. ಆಯ್ತು ಯೋಚನೆ ಮಾಡೋಣ ಅಂತ ನಿಲ್ಲದೆ ಹೊರಟೇ ಹೋದ. ಬರಬರುತ್ತಾ ಅವನ ನಡವಳಿಕೆ ಮಾತು ಎಲ್ಲದರಲ್ಲೂ ಬದಲಾವಣೆ. ಹತ್ತುವರ್ಷಗಳಿಂದ ನಾವು ಜಮೀನು ಗುತ್ತಿಗೆಗೆ ಮಾಡ್ತಾಯಿದ್ದೇವೆ. ಈಗ ಬಿಡು ಅಂತ ಒತ್ತಡ ಹಾಕ್ತಾ ಇದ್ದೀರಿ. ಇದು ಕಾನೂನಿನಪ್ರಕಾರ ಶಿಕ್ಷಾರ್ಹಅಪರಾಧ ಅಂತ ಕೋರ್ಟ್ ನೋಟಿಸ್ ಬಂದಾಗ ಹೆದರಿದ. ಆರೇ ತಿಂಗಳಲ್ಲಿ. ತೋಟ ಇವನ ಕೈ ಬಿಟ್ಟು ಹೋಯ್ತು. ಬೈಪಾಸ್ ರಸ್ತೆ ಕಡೆ ಗೇಟ್ ಓಪನ್ ಮಾಡ್ಕೊಂಡ. ಹಳ್ಳಿಯ ಒಳಗೆ ಬರದೇ ಮುಖ್ಯರಸ್ತೆ ಇಂದಲೇ ಸಂಪರ್ಕ ರಸ್ತೆ ಮಾಡಿಕೊಂಡ. ಹಳ್ಳಿಯಲ್ಲಿ ಎಲ್ಲರೂ ಕೃಷ್ಣಪ್ಪನ ಸಹಾಯಕ್ಕೆ ನಿಂತರೂ,ಎಲ್ಲಾ ಕೈ ಮೀರಿತ್ತು. ಪಕ್ಕದ ಹಳ್ಳಿಯಲ್ಲಿ ಒಬ್ಬ ಬುಲೆಟ್ ಬಾಬು ಅಂತ ಇದ್ದಾನೆ. ಅವನೊಬ್ಬನಿಂದಲೇ ನಿನಗೆ ಸಹಾಯ ಆಗತ್ತೆ. ನೀನು ಪೊಲೀಸು ಕೋರ್ಟು ಅಂದರೆ ಅಗಲ್ಲಅಂತ ಪಕ್ಕದಮನೆ ರಾಮಣ್ಣ ಹೇಳಿದಾಗ. ಅಲ್ಲಿಗೆ ಹೋದ. ಬುಲೆಟ್ ಬಾಬು ದೊಡ್ಡ ರೌಡಿ. ಮತ್ತು ಅವನಿಗೆ ಪೊಲೀಸ್, ರಾಜಕಾರಣಿಗಳು ಇವರೆಲ್ಲಾ ಪರಿಚಯ. ಇಂತಹ ಎಷ್ಟೋ ಕೇಸ್ ಗಳನ್ನ ನೋಡಿದ್ದಾನೆ. ಮಾತನಾಡಿದಾಗ ಅದಕ್ಕೆ ಸಂಭಂದ ಪಟ್ಟ ಪತ್ರಗಳನ್ನ ತರಿಸಿ ನೋಡಿ, ಐದು ಲಕ್ಷ ಸಾಲ ಇದರಮೇಲೆ ತೆಗೆದುಕೊಂಡ ಹಾಗೇ ಮೊದಲು ಪತ್ರಕ್ಕೆ ಋಜು ಹಾಕಿ ಕೊಡಿ. ನಾನು ನಿಮಗಸಾಲ ತೀರಿಸಿಲ್ಲ ಅಂತ ಮೊದಲು ನೋಟಿಸ್ ಕೊಡ್ತೀನಿ. ಆಮೇಲೆ ಅದರ ಜವಾಬ್ದಾರಿ ನನ್ನ ಮೇಲೆ ಬಿಡಿ. ನನಗೆ ಎರಡು ಲಕ್ಷ ನಿಮಗೆ ಜಮೀನು ವಾಪಸ್. ಆಗಬಹುದಾ ಅಂದ. ಒಪ್ಪಿದರು. ಮೂರು ತಿಂಗಳಲ್ಲಿ. ಸ್ನೇಹಿತ ಮನೆ ಖಾಲಿ ಮಾಡಿದ ವಿಷಯ ತಿಳಿಯಿತು. ಜಮೀನು ವಾಪಸ್ ಬಂತು.
ಎಷ್ಟೋ ವರ್ಷಗಳ ನಂತರ ಈ ಮೇಲಿನ ಕಥೆ ಕೃಷ್ಣಪ್ಪನ ದೊಡ್ಡಮಗಳು ಒಮ್ಮೆ ಬೆಂಗಳೂರಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಮಾಡ್ತಿದ್ದಾಗ ಅಕಸ್ಮಾತ್ ದೊರೆಸ್ವಾಮಿ ಮಗಳನ್ನ ಕಂಡಾಗ ಇಬ್ಬರೂ ಮಾತನಾಡುವಾಗ ಹಿಂದಿನ ಕಥೆಯನ್ನೆಲ್ಲ ಹಂಚಿ ಕೊಂಡಾಗ ತಿಳಿದದ್ದು. ದೊರೆಸ್ವಾಮಿ ಮತ್ತು ಅವನ ಹೆಂಡತಿ ಇಬ್ಬರೂ ಗಲಾಟೆ ಆದಾಗ ಊರಿಗೇ ಹೊರಟು ಹೋದರಂತೆ. ಒಂದೇ ವರ್ಷದಲ್ಲಿ ಇಬ್ಬರೂ ತೀರಿಕೊಂಡರಂತೆ. ಮೊದಲ ಮಗಳಿಗೆ ಹೇಗೋ ಮದುವೆ ಆಗಿದೆ. ಎರಡನೇ ಮಗಳ ಬಗ್ಗೆ ಕೇಳಿದಾಗ ಅಳುತ್ತಾ ತಂಗಿಯ ಜೀವನವೇ ಅಂದು ಬುಲೆಟ್ ಬಾಬು ಕಡೆಯವರು ಹಾಳುಮಾಡಿದರೆಂದು ಹೇಳಿದಾಗ ಇಬ್ಬರೂ ಅಳುತ್ತಾ ಒಬ್ಬರಿಗೊಬ್ಬರು ಸಮಾಧಾನ ಮಾಡಿ ಕೊಂಡರು.