Win cash rewards worth Rs.45,000. Participate in "A Writing Contest with a TWIST".
Win cash rewards worth Rs.45,000. Participate in "A Writing Contest with a TWIST".

kaveri p u

Tragedy Crime Thriller


4  

kaveri p u

Tragedy Crime Thriller


ಅಂತ್ಯವಲ್ಲ, ಆರಂಭ

ಅಂತ್ಯವಲ್ಲ, ಆರಂಭ

3 mins 308 3 mins 308


ಅಲ್ಲೊಂದು ಅರಳಬೇಕಿದ್ದ ಯುವತಿಯ ಬದುಕು, ದೇಹ ನದಿಯ ತೀರದಲ್ಲಿ ಕಾಣುತ್ತಿತ್ತು.

 ದೇಹ ನೋಡಿ ಓಡುತ್ತಿದ್ದ ಒಬ್ಬ ಯುವಕ. ಸುಮಾರು 17 ವರ್ಷದ ಹುಡುಗಿ ಅವಳು. ಅಕ್ಕಪಕ್ಕ ಎಲ್ಲ ಕಡೆ ಅದೇ ದೊಡ್ಡ ಸುದ್ದಿ. ಯಾರಿವಳು? ಎಲ್ಲಿಗೆ ಹೋಗುತಿದ್ದಳು? ಅಲ್ಲಿಯೇಕೆ ಅವಳು ಹೋದಳು? ಅವಳ ಮೇಲೆ ಅತ್ಯಾಚಾರವಾಗಿತ್ತಾ? ಹೀಗೆ ಕೆಲವರು ಚಿಂತೆಯಲ್ಲೇ ಇದ್ದರು. ಅದರ ಮೂಲವನ್ನು ಹುಡುಕುವುದು ಸಾಮಾನ್ಯವಾಗಿರಲ್ಲ.


ಆಕೆಯಯನ್ನು ಪರಿಶೀಲಿಸಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ಕಳುಹಿಸಿದರು. ಅವರಿಗೆ ಸಿಕ್ಕ ಮೊದಲ ಅಸ್ತ್ರ

ಅವಳ ಬಟ್ಟೆ ಒಂದು ಕಾಲೇಜೀನ ಯೂನಿಫಾರ್ಮ್ ಆಗಿತ್ತು. ಹಾಗೂ ಅಂಗಿಯ ಕಾಲರ್ ಪಟ್ಟಿಯಲ್ಲಿ ಅಂಟಿಸಿದ ಟೈಲರ್ ಅಡ್ರೆಸ್. ಅದನ್ನೇ ಬಳಸಿಕೊಂಡು ಮುಂದಿನ ಕಾರ್ಯಚರಣೆ ನಡೆಸಿದ ಪೊಲೀಸರು, ಅವಳನ್ನು ಪರೀಕ್ಷಿಸಿದ ಡಾಕ್ಟರ್ ಕೂಡ ಅವಳ ಮೇಲೆ ಅತ್ಯಾಚಾರವಾಗಿದೆ ಹಾಗೂ ತಲೆಗೆ ಜೋರಾಗಿ ಹೊಡೆದ ಕಾರಣ ಅವಳ ಉಸಿರು ತುಂಬಾ ನಿಧಾನವಾಗಿತ್ತು. ಹೀಗೆ ಅವಳ ಸ್ಥಿತಿಯು ಚಿಂತಾಜನಕವಾಗಿದೆ, ಅದರಷ್ಟೇ ಕಷ್ಟ ಈ ಕೇಸ್ ಬಿಡಿಸುವುದು ಎಂದರು ಅಲ್ಲಿಗೆ ಬಂದ ಪೊಲೀಸರು.


ಆ ವಿಷಯ ದೊಡ್ಡದಾಗಿ ಊರು ಕೇರಿಗಳಲ್ಲೂ ಗೊತ್ತಾಯಿತು. ಅಲ್ಲೊಬ್ಬ ವೃದ್ಧ ಇನ್ನೊಂದು ಠಾಣೆಗೆ ಬಂದು ನನ್ನ ಮಗಳು ಮೂರು ದಿನದಿಂದ ಕಾಣುತ್ತಿಲ್ಲ. ನನಗೆ ಇದ್ದದ್ದು ಮಗಳೋಬ್ಬಳೇ, ಹೆಂಡತಿ ಸಹಾ ವರುಷದ ಹಿಂದೆ ಇಹಲೋಕ ತ್ಯಜಿಸಿದ್ದಾಳೆ. 

ನಾನು ಕೂಲಿ ಮಾಡುವನು . ಮಗಳು ನನ್ನ ನೋಡಿಕೊಂಡು ಕಾಲೇಜಿಗೆ ಹೋಗುತ್ತಿದ್ದಳು.  ಅವಳಿಲ್ಲದ್ದಕ್ಕೆ ಜನ ಅವಳ ನಡತೆಯ ಬಗ್ಗೆ ಮಾತಾಡುತ್ತಿದ್ದಾರೆ, ಸಾಹೇಬ್ರೆ ನನ್ನ ಮಗಳು ಚಿನ್ನದಂತವಳು, ಅವಳಿಗೇನೋ ತೊಂದರೆಯಾಗಿದೆ. ದಯವಿಟ್ಟು ನನ್ನ ಮಗಳನ್ನು ಹುಡುಕಿ ಕೊಡಿ ಎಂದು ವೃದ್ಧ ಪೋಲೀಸರ ಮುಂದೆ ಗೋಗರೆದ. ಪೊಲೀಸರು ನದಿ ತೀರದಲ್ಲಿ ಸಿಕ್ಕ ಹುಡುಗಿಯ ಭಾವಚಿತ್ರವನ್ನು ವೃದ್ಧನಿಗೆ ತೋರಿಸಿದಾಗ ಆ ವೃದ್ಧ ಅವಳು ತನ್ನ ಮಗಳೆಂದು ಗುರುತಿಸಿ ಕಂಬನಿ ಮಿಡಿದ. ಮಗಳನ್ನು ಸೇರಿಸಿದ ಆಸ್ಪತ್ರೆಗೆ ಅವಸರವಸರವಾಗಿ ಓಡಿದ.


ಪೊಲೀಸರು ಮೊದಲಿಗೆ ಸಿಕ್ಕ ಸುಳಿವಿನ ಆಧಾರದ ಮೇಲೆ ಟೈಲರ್ ಅಂಗಡಿಗೆ ಹೋದರು. ಆತ ಇವರು ಕೇಳುವ ಪ್ರಶ್ನೆಗಳಿಗೆ ಸಹಕರಿಸಿ ಉತ್ತರ ನೀಡಿದನು . ಅದೇ ಕಾಲೇಜೀನ ಆರು ಮಕ್ಕಳಿಗೆ ನಾನು ಯುನಿಫಾರ್ಮ್ ಹೋಲಿದಿರುವೆ, ಆ ಆರೂ ಮಕ್ಕಳು ಒಂದೇ ಊರಿನ ವಿದ್ಯಾರ್ಥಿಗಳು ಆಗಿದ್ದರು. ಅಷ್ಟು ತಿಳಿದ ಪೊಲೀಸರು ಅವರ ಊರಿನ ಹೆಸರು ತಿಳಿದುಕೊಂಡು ಹೊರಟರು. ಆ ಕಾಲೇಜಿಗೆ ಬಂದು ಉಳಿದ ಐವರು ವಿದ್ಯಾರ್ಥಿಗಳನ್ನು ಕರೆದು ವಿಚಾರಿಸಿದರು. ಅವರು ಹೇಳುವಂತೆ ಸುಟ್ಟ ಹುಡುಗಿ ತುಂಬಾನೇ ಸೂಕ್ಷ್ಮ. ತಾನಾಯಿತು, ತನ್ನ ಪಾಡಾಯಿತು ಎನ್ನುವ ಹುಡುಗಿಯೆಂದು ಪೊಲೀಸರಿಗೆ ತಿಳಿಯಿತು. ಪೊಲೀಸರಿಗೆ ಅವಳ ಹತ್ರ ಫೋನ್ ಇರುವುದು ಗೊತ್ತಾಗತ್ತೆ. ನಂಬರ್ ಚೆಕ್ ಮಾಡಿದಾಗ ಪದೇ ಪದೇ ಮಿಸ್ಡ್ ಕಾಲ್ ಲಿಸ್ಟಲ್ಲಿ ಇದ್ದ ನಂಬರ್ ಚೆಕ್ ಮಾಡಿದ ಪೊಲೀಸರಿಗೆ ಅವಳ ಗೆಳತಿಯರು ಅವಳನ್ನೊಬ್ಬ ಪೀಡಿಸುತ್ತಿದ್ದ, ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ ಎಂದರು. 

 ಅವನು ಇಲ್ಲಿಯೇ ಒಂದು ಮೊಬೈಲ್ ಶಾಪ್ ಇಟ್ಟಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು. ಇಷ್ಟು ತಿಳಿದ ಪೊಲೀಸರಿಗೆ ಅವನ ಮೇಲೆ ಅನುಮಾನ ಬಲವಾಯಿತು.


ಅವನನ್ನು ವಿಚಾರಿಸಿಲಾಗಿ, ಅವನು ಭಯವಿಲ್ಲದೆ ಅವಳನ್ನ ಪ್ರೀತಿಸುತ್ತಿದ್ದಾಗಿ ಒಪ್ಪಿಕೊಂಡ . ಆದರೆ ಅವಳದಕ್ಕೆ ಒಪ್ಪಿಗೆ ಸೂಚಿಸಿಲ್ಲ, ಅವಳಿಗಾಗಿ ನಾನು ಈಗಲೂ ಕಾಯುತ್ತಿದ್ದೇನೆ ಎಂದು ಹೇಳುತ್ತಿದ್ದಂತೆ

ಪೊಲೀಸ್ ರಪ್ ಎಂದು ಅವನ ಕೆನ್ನೆಗೆ ಹೊಡೆದು ಅವನನ್ನು ಬಂಧಿಸಿದರು. ಅವನು ಮಾತ್ರ ನಾನು ತಪ್ಪು ಮಾಡಿಲ್ಲ ಸರ್, ಬೇಕಾದ್ರೆ ಯಾವ ದೇವರ ಮೇಲೆ ಆಣೆ ಮಾಡು ಎಂದರೂ ಮಾಡುವೆ ಸರ್ ಎಂದ. ಅವನ ಮಾತಿನ ಮೇಲೆ ನಂಬಿಕೆಯುಂಟಾಗಿ ಪೊಲೀಸರು ಅವನಿಗೆ ಕರೆದಾಗ ಸ್ಟೇಷನ್ನಿಗೆ ಬರುವಂತೆ ತಿಳಿಸಿ ಕಳುಹಿಸಿದರು.


 ಪೊಲೀಸರು ಮತ್ತೊಮ್ಮೆ ಅವಳ ಮೊಬೈಲ್ ಚೆಕ್ ಮಾಡಿದಾಗ ಅದರಲ್ಲಿ ಚಿಕ್ಕ ಚಿಕ್ಕ ಅಶ್ಲೀಲ ವೀಡಿಯೋ ತುಣುಕುಗಳಿದ್ದವು. ಅವಳಿಗದನ್ನು ಅವರ ಊರಿನ ಪೋಲಿ ಹುಡುಗ ಪದೇ ಪದೇ ಕಳುಹಿಸಿ ಕಾಡುತ್ತಿದ್ದ. ತಡ ಮಾಡದೇ ಪೊಲೀಸರು ಆ ಹುಡುಗನನ್ನು ಬಂಧಿಸಿ ವಿಚಾರಣೆ ಮಾಡುತ್ತಾರೆ . ಒಪ್ಪಿಕೊಳ್ಳದ ಆ ಹುಡುಗನಿಗೆ ಪೋಲೀಸರ ಲಾಟಿ ಏಟು ಬಿದ್ದ ಮೇಲೆ ಹುಡುಗ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಅವನ ಮೊದಲ ಹೇಳಿಕೆಯೇ ಪೊಲೀಸರನ್ನು ದಂಗು ಬಡಿಸಿತ್ತು.

"ಅವಳ ಸೌಂದರ್ಯ ನನ್ನನ್ನು ಕೆಣಕಿತ್ತು "!!

ಕಾಲೇಜಿನಿಂದ ಬರುತಿದ್ದ ಅವಳನ್ನು ಎಷ್ಟೋ ಸಲ ಹೊಂದಬೇಕೆಂದು ಪ್ರಯತ್ನಿಸುತ್ತಿದ್ದೆ. ಅವಳನ್ನು ಪ್ರಚೋದಿಸಲು ಅವಳ ಮೊಬೈಲ್ ನಂಬರ್ ಪಡೆದು ಅವಳಿಗೆ ವಿಡಿಯೋಗಳನ್ನು ಸಹ ಕಳಿಸುತ್ತಿದ್ದೆ. ಒಮ್ಮೆ ಅವಳನ್ನು ಪ್ರೀತಿಸುತ್ತಿದ್ದ ಹುಡುಗ ನನ್ನನ್ನು ಹೊಡೆಯಲು ಬಂದಿದ್ದ. ಅವತ್ತೇ ನಿರ್ಧರಿಸಿದ್ದೆ ಇವಳು ಅವನಿಗೆ ಸಿಗುವುದಾದರೆ ಎಂಜಲಾಗಿಯೇ ಸಿಗಬೇಕು, ಇವಳನ್ನು ಮೊದಲು ನಾನು ರುಚಿ ನೋಡಬೇಕೆಂದು ಶಪಥ ಮಾಡಿದ್ದೆ.

 ಅದೇಕೋ ಅವಳು ಆ ದಿನ ತುಂಬಾ ಸುಂದರವಾಗಿ ಕಂಡಳು. ಅವಳ ಅಪ್ಪ ಸಂತೆಗೆ ಪಕ್ಕದೂರಿಗೆ ಹೋಗಿದ್ದನ್ನು ನೋಡಿದದ್ದೆ. ಪಕ್ಕದ ಓಣಿಯಲ್ಲೊಂದು ಕಾರ್ಯಕ್ರಮವಿದ್ದುದರಿಂದ ಜೋರಾಗಿ ಸ್ಪೀಕರ್ ಹಾಕಿದ್ದರು. ನನಗೇನಾಯಿತೋ ತಿಳಿಯಲಿಲ್ಲ ಅವಳ ಮನೆಗೆ ಹೋಗಿ ಬಾಗಿಲು ಹಾಕಿದೆ. ಕುಡಿದ ನಶೆಯಿತ್ತು, ಅವಳನ್ನು ಅತ್ಯಾಚಾರಗೈದೆ. ತಪ್ಪಿಸಿಕೊಳ್ಳಲು ಓಡುತ್ತಿದ್ದ ಅವಳಿಗೆ ಅಲ್ಲಿಯೇ ಇದ್ದ ಕಬ್ಬಿಣದ ಸಲಾಕೆಯಿಂದ ಜೋರಾಗಿ ಹೊಡೆದು ಬಿಟ್ಟೆ. ಅವಳು ಸತ್ತಳೆಂದುಕೊಂಡು ನದಿಯಲ್ಲಿ ಅವಳನ್ನು ಎಸೆದು ಬಂದೆ. ಈಗಲೇ ತಿಳಿದಿದ್ದು ಅವಳಿನ್ನು ಜೀವಂತ ಇರುವುದು. ನನ್ನನ್ನು ಕ್ಷಮಿಸಿ ಸರ್ ಎಂದು ಅಳುವಂತೆ ನಾಟಕವಾಡಿದ. ಪೊಲೀಸರು ಅವನ ಕೆನ್ನೆಗೆ ಹೊಡೆದು ಅವನನ್ನು ಜೈಲಿಗಟ್ಟಿದರು. 

 

ಇತ್ತ ಪೊಲೀಸರು ಹುಡುಗಿಯ ಅಪ್ಪನೊಂದಿಗೆ ಆಸ್ಪತ್ರೆಗೆ ದೌಡಾಯಿಸಿದರು. ಅಲ್ಲಿ ಹುಡುಗಿಯ ಮೊದಲ ಪ್ರೇಮಿ ಮೊದಲೇ ಬಂದು ಹುಡುಗಿಯ ಬೆಡ್ ಪಕ್ಕ ಕೂತಿದ್ದ. ಸಲಾಕೆಯಿಂದ ಬಿದ್ದ ಪೆಟ್ಟಿಗೆ ರಕ್ತಸ್ರಾವ ಅಧಿಕವಾಗಿದ್ದರಿಂದ ಇವನೇ ರಕ್ತವನ್ನೂ ನೀಡಿದ್ದ. ಅವಳಿಗೆ ಆಗಷ್ಟೇ ಪ್ರಜ್ಞೆ ಬಂದಿತ್ತು. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಹೇಳಿಕೆ ಕೊಟ್ಟಳು. ಇನ್ನೇನು ಸತ್ತೇ ಬಿಟ್ಟಳು, ಅವಳ ಅಂತ್ಯವಾಯಿತು ಎಂದು ಎಲ್ಲರೂ ಅಂದುಕೊಂಡಾಗ ಅವಳ ಬದುಕು ಮತ್ತೊಮ್ಮೆ ಚಿಗುರಿತ್ತು.


(ಇದು ನಮ್ಮ ಊರಿನ ಸಮೀಪ ನಡೆದ ನೈಜ ಘಟನೆ. ಕಥೆಯಲ್ಲಿ ಹುಡುಗಿಯನ್ನು ಬದುಕಿಸಿದೆ. ಆದರೆ ನಿಜ ಜೀವನದಲ್ಲಿ ಅವಳು ನೀರಿಗೆ ಬಿದ್ದಾಗಲೇ ಶವವಾಗಿದ್ದಳು. ಇದನ್ನೇ ಕಥೆಯ ರೂಪವಾಗಿ ಬರೆದೆ )


Rate this content
Log in

More kannada story from kaveri p u

Similar kannada story from Tragedy