Kalpana Nath

Tragedy Classics Others


4  

Kalpana Nath

Tragedy Classics Others


ಅಗ್ನಿಪ್ರವೇಶ

ಅಗ್ನಿಪ್ರವೇಶ

5 mins 218 5 mins 218

 


ಶೀಲ ಗಂಗೋತ್ರಿ ಕಾಲೇಜಿನಲ್ಲಿ first PU ಮಾಡ್ತಿದಾಳೆ.

SSLC ಪರೀಕ್ಷೆ ಬರೀತಿದ್ದಾಗಲೇ ಅವಳ ತಂದೆ ರಸ್ತೆ ಅಫ ಗಾತದಲ್ಲಿ ತೀರಿಕೊಂಡರು. ಮನೇಲಿ ಒಬ್ಬ ತಮ್ಮ ಅಮ್ಮ ಮತ್ತೆ ಅಜ್ಜಿ ಇದಾರೆ.ಅಮ್ಮ ಭವಾನಿ ಬಹಳ ಕಷ್ಟಪಟ್ಟು ಇಬ್ಬರು ಮಕ್ಕಳನ್ನ ಓದಿಸ್ತಿದಾರೆ. ಜೊತೆಗೆ ವಿಧವೆ ಅತ್ತೆ .ಇವರ ಮನೆ ಇರೋದು ಚಾಮರಾಜಪೇಟೆಯ ಒಂದು ವಠಾರದಲ್ಲಿ . ಶೀಲಾ ಕಾಲೇಜಿಗೆ ದಿನಾ ಸಿಟಿ ಬಸ್ ನಲ್ಲೇ ಹೋಗೋದು. ಇವಳ ಮನೆ ಹತ್ತಿರದಿಂದ ಮೂರು ಹುಡುಗಿಯರು ಸಾವಿತ್ರಿ ,ಸರಸ್ವತ ಇವಳು ಒಂದೇ ಬಸ್ ಗೆ ಹತ್ತಿದರೂ ಅದು ಬೇರೆ ಬೇರೆ ಸ್ಟಾಪ್ ಗಳಲ್ಲಿ. ಸಾವಿತ್ರಿ ಮತ್ತು ಶೀಲಾ ಒಂದೇ ಕಾಲೇಜು ಆದರೆ ಬೇರೆ ಬೇರೆ section . ಸರಸ್ವತಿ ಮಾತ್ರ ಮೆಜೆಸ್ಟಿಕ್ ನಲ್ಲಿ ಇಳಿದು ಅವಳ ಕಾಲೇಜ್ ಗೆ ಇನ್ನೊಂದು ಬಸ್ ನಲ್ಲಿ ಹೊಗಬೇಕು. ದಿನವೂ ಮೆಜೆಸ್ಟಿಕ್ ನಲ್ಲಿ ಅವಳು ಬರೋವರೆಗೂ ಇವರಿಬ್ಬರೂ ಕಾದು ಒಟ್ಟಿಗೆ ಬರೋದು ರೂಡಿ. ಸರಸ್ವತಿಯ ಅಣ್ಣನ ಹತ್ತಿರ ಹಳೇ Fiat ಕಾರ್ ಇತ್ತು. ಕೆಲವು ಸಲ ಆಕಡೆ ಹೋಗೋದಿದ್ರೆ ಈ ಮೂವರನ್ನೂ ಕರೆದುಕೊಂಡು ಹೋಗ್ತಿದ್ದ. ಇದು ಮೂವರಿಗೂ ಇಷ್ಟ ಇಲ್ಲ. ಬಸ್ ನಲ್ಲಿ ಇರೋ ಮಜಾ ಕಾರ್ ನಲ್ಲಿ ಇರಲ್ಲ ಅಂತಿದ್ದರು.ಅಣ್ಣ ಡ್ರೈವ್ ಮಾಡ್ತಾ ಇದ್ದರೆ ಇವರಿಬ್ಬರೂ ಮಾತಾಡ್ತಿರಲಿಲ್ಲ.ಅಣ್ಣಾನೇ ಎಷ್ಟೋ ಸಲ ಕೇಳ್ತಿದ್ದ ನೀವು ಬಸ್ ನಲ್ಲೂ ಹೀಗೇ ಬಾಯಿ ಮುಚ್ಚಿ ಕೊಂಡು ಇರತೀರಾ ಅಂದಾಗ ಇಲ್ಲಾ ಕಣೋ ನೀನು ಇರೋದಕ್ಕೆ ಅವರಿ ಬ್ಬರೂ ಹೀಗೆ ಅಷ್ಟೆ ಅಂತ ಸರಸ್ವತಿ ಹೇಳಿದಾಗ ಎಲ್ಲರೂ ಒಟ್ಟಿಗೆ ನಗ್ತಾ ಇದ್ದರು. 

 .    ಒಂದಿನ ಸರಸ್ವತಿ ಬರಲಿಲ್ಲ . ಅವಳಿಗೋಸ್ಕರ 

ಕಾದು ಒಂದು ಬಸ್ ಬಿಟ್ಟು ಇನ್ನೊಂದು ಬಸ್ ನಲ್ಲಿ ಹೋಗೋಣ ಅಂತ ಇಬ್ಬರೂ ಕಾದರು. ಒಂದು ಬಸ್ ಮಿಸ್ ಆದರೆ ಆಮೇಲೆ ಬರೋ ಬಸ್ ಗಳೆಲ್ಲಾ ತುಂಬಿ ತುಳುಕುತ್ತಿರತ್ತೆ .ಅದು ಇವರಿಗೆ ಗೊತ್ತು ಆದರೆ ಅವಳು ಒಬ್ಬಳೇ ಆಗ್ತಾಳಲ್ಲ ಅಂತ ಕಾದಾಗಲೆಲ್ಲ ಹೀಗೆ ಕಷ್ಟ ಪಡ ಬೇಕಾಗಿತ್ತು‌ .ಮಾರನೆ ದಿನ ಬರಲ್ಲ ಅಂತ ಗೊತ್ತಿದ್ದರೆ ಮೊದಲೇ ಹೇಳ್ತಾಳೆ. ಆದರೆ ಇವತ್ತು ಏನಾಯ್ತೋ ಗೊತ್ತಿ ಲ್ಲ . ಕಾಲೇಜು ಮುಗಿಸಿಕೊಂಡು ಮೆಜೆಸ್ಟಿಕ್ ಗೆ ಬಂದಾಗ

ಇವರಿಬ್ಬರೂ ಬರೋದಕ್ಕೆ ಮೊದಲೇ ಸರಸ್ವತಿ ಬಂದು ಕಾದಿದ್ದಾಳೆ. ಏ ಏನೇ ನಿನ್ನಿಂದ ನಾವಿಬ್ಬರೂ ಇವತ್ತು ಕ್ಲಾಸ್ ಗೆ ಲೇಟ್ . ಫಸ್ಟ್ ಪಿರಿಯಡ್ ಹೋಯ್ತು ಅದೂ

ಇವಳಿಗೆ ಟೆಸ್ಟ್ ಬೇರೆ ಇತ್ತು ಪಾಪ ಅಂದಳು ಸಾವಿತ್ರಿ. ನಾಳೆ ಪ್ರಿನ್ಸಿಪಾಲ್ ನ ನೋಡು ಅಂತಾರೆ . ಅಯ್ಯೋ ಇನ್ನೋಂದಿನ ನನಗೊಸ್ಕರ ಕಾಯಬೇಡಿ. ನನ್ನಿಂದ ಇಷ್ಟೊಂದು ಕಷ್ಟ ಆಯ್ತಾ ವೆರಿ ಸಾರಿ ಅಂದಳು. ಅಷ್ಟು ಹೊತ್ತಿಗೆ ಬಸ್ ಬಂತು ಮೂವರೂ ಹತ್ತಿದರು. ಮಾರನೆ ದಿನವೂ ಸರಸ್ವತಿ ಬರಲಿಲ್ಲ. ಇವತ್ತು ಅವಳಿಗೆ ಕಾಯೋ ದು ಬೇಡ ಅಣ್ಣನ ಹತ್ತಿರ ಕಾರ್ ಇದೆ ಅಂತ ಅವಳಿಗೆ ಕೊಬ್ಬು . ನಾವಿಬ್ಬರೇ ಹೋಗೋಣ ಅಂದುಕೊಂಡ್ರೆ . ಏನಿದು ಬಸ್ ಬರ್ತಾ ಇದೆ ಸಾವಿತ್ರಿ ಯಾಕೆ ಇನ್ನೂ ಬರಲಿಲ್ಲ ಅಯ್ಯೋ ಬಸ್ ಬಂದಾಯ್ತು ಶೀಲಾ ಬಸ್ ಹತ್ತಿ ಅವಳ ಸೀಟ್ ನಲ್ಲಿ ಕೂತು ಏನಿವತ್ತು ಇಬ್ಬರೂ ಕೈ ಕೊಟ್ರಲ್ಲ ಅಂದುಕೊಳ್ತಿದ್ದಾಗ ದಿನವೂ ಬರೋ ಕಂಡ ಕ್ಟರ್ ಏನು ಎರಡು ಸೀಟು ಖಾಲಿ ಅಂದ ಉತ್ತರ ಕೊಡದೆ ಸುಮ್ಮನೆ ನಕ್ಕಳು ಶೀಲಾ. ನೆನ್ನೆ ಟೆಸ್ಟ್ ಮಿಸ್ ಮಾಡಿ ಕೊಂಡಿದ್ದಕ್ಕೆ ಏನು ರೀಸನ್ ಕೊಡೋದು ಅಂತ ಯೋ ಚನೆ ಮಾಡ್ತಾ ಕಣ್ಣು ಮುಚ್ಚಿದ್ರೂ ಕಂಡಕ್ಟರ್ ಎಲ್ಲರ ಹತ್ತಿರ ತಮಾಷೆಯಾಗಿ ಮಾತಾಡ್ತಾ ಇರೋದರ ಕಡೇನೆ ಗಮನ. .ಒಬ್ಬಳೇ ಇರೋದ್ರಿಂದ ಎಷ್ಟೊತ್ತಾದ್ರೂ ಮೆಜೆ ಸ್ಟಿಕ್ ಬಂದಿಲ್ಲ ಅನಿಸಿದೆ. ಒಂದು ವಾರದಿಂದ ದಿನಾ ಸಂಜೆ ಆದರೆ ಮಳೆ ಜೊತೆಗೆ ಛಳಿ .ಸಾವಿತ್ರಿ ಜೊತೆ ಅವಳ ಛತ್ರಿಯಲ್ಲೇ ತಲೆ.ತೂರಿಸಿ ಮೈಯೆಲ್ಲಾ ಒದ್ದೆ ಮಾಡ್ಕೊಂಡು ಮನೆಗೆ ಹೋಗಿ ಅಮ್ಮ ಅಜ್ಜಿ ಹತ್ತಿರ ವಾರದಿಂದ ಬೈಸ್ಕೊಳ್ಳೊದು ತಪ್ಪಿಲ್ಲ. ಇವತ್ತು ಸಾವಿತ್ರಿನೂ ಇಲ್ಲ . ದೇವರೇ ಇವತ್ತು ಮಳೆ ಬರೋದು ಬೇಡಪ್ಪ ಅಂತ ಕಾಲೇಜ್ ಗೇಟ್ ಒಳಗೆ ಹೋದಳು.

ಸಂಜೆ ಕಾಲೇಜು ಬಿಡೋ ಹೊತ್ತಿಗೆ ಅಂದುಕೊಂಡ ಹಾಗೆ ಮಳೆ ಶುರು ಆಯ್ತು .ಬಸ್ ಸ್ಟಾಪ್ ವರೆಗೂ ಸೀನಿಯರ್ ಹುಡುಗಿ ಒಬ್ಬಳ ಜೊತೆ ಬಂದಳು.ಆ ಲೇಡೀಸ್ ಛತ್ರಿ ಯನ್ನ ಕಂಡುಹಿಡಿದೋನ್ನ ಬೈಕೊಂಡು ತಲೆ ಒಂದು ನೆನಿ ದಿದ್ರೆ ಸಾಕು ಅಂತ ಬರ್ತಾ ಇದ್ದಾಗ , ಅಯ್ಯೋ ಚಪ್ಪಲಿ ಅಂತ ಶೀಲ ಕೂಗಿದ್ದು ನೋಡಿ ಏನಾಯ್ತು ಅಂದರೆ ಚಪ್ಪ ಲಿ ಕಿತ್ತೋಯ್ತು ಅಂತ ಹೇಳಿ ಮಳೆಯಲ್ಲೇ ಎರಡು ಚಪ್ಪಲಿ ಯನ್ನೂ ಎಡಗೈನಲ್ಲಿ ಹಿಡ್ಕೋಂಡ್ಲು . ಆಗಲೇ ಆ ಹುಡುಗಿ ಮೂರುನಾಲ್ಕು ಸಲ ಈಗಾಗ್ಲೇ ಹೊಲಿಗೆ ಹಾಕಿರೋ ಹಳೇ ಚಪ್ಪಲಿಯನ್ನ ಗಮನಿಸಿದ್ದು. ಒಂದು ನಿಮಿಷದಲ್ಲಿ ಇವಳ ಬಡತನ ಮನೆ ಪರಿಸ್ಥಿತಿ ಎಲ್ಲಾ ಊಹೆ ಮಾಡ್ಕೋಂಡ್ಲು. ಈ ಮಳೇಲಿ ಇದನ್ನ ಹೊಲ್ಸಕ್ಕಾಗಲ್ಲ. ಬರಿ ಕಾಲಲ್ಲಿ ನಡೆ ಯಕ್ಕೂ ಆಗಲ್ಲ ಏನ್ಮಾಡ್ತಿ ಅಂತ ಕೇಳಿದಳು. ಕಣ್ಣಲ್ಲಿ ನೀರು ಬಂತು ಆದರೆ ಮಳೇಲಿ ನೆಂದದ್ದರಿಂದ ಅವಳಿಗೆ ಕಣ್ಣೀರು ಕಾಣಲಿಲ್ಲ.

ಮಳೆ ಇನ್ನೂ ಜೋರಾಯ್ತು ಪಕ್ಕದ ಒಂದು ಅಂಗಡಿ ಯಲ್ಲಿ ಇಬ್ಬರೂ ನಿಂತರು. ಅದರ ಪಕ್ಕದ ಅಂಗಡಿಯೇ ಚಪ್ಪಲಿ ಅಂಗಡಿ. ಆ ಹುಡುಗಿ ಹೇಳಿದಳು ನನ್ನಹತ್ತಿರ ದುಡ್ಡಿದೆ ಇಲ್ಲೇ ಚಪ್ಪಲಿ ತೋಗೋ. ನೀನು ನಿಧಾನಕ್ಕೆ ಯಾವಾ ಗಾದ್ರು ಕೊಡು ಪರವಾಗಿಲ್ಲ ಅಂದಳು.ಬೇಡ ನಾನು ಹೇಗೋ ಮ್ಯಾನೇಜ್ ಮಾಡ್ತೀನಿ ಅಂದರೂ ಕೇಳದೆ ಕೈ ಹಿಡಿದು ಕರೆದುಕೊಂಡು ಹೋಗಿ ಕೊಡಿಸಿ ದಳು. ಹೊಸ ಚಪ್ಪಲಿ ಅಂತ ಸಂತೋಷ ಆದರೂ ಅಮ್ಮ ಏನಂತಾರೋ ಅನ್ನೋ ಭಯ .ಯಾರೋ ಪರಿಚಯ ಇಲ್ಲದವರ ಹತ್ತಿರ ತೊಗೋ ಬೇಕಾಯ್ತು ಅಂತ ಒಳಗೇ ದುಃಖ. ಗಡಿಯಾರ ಆರೂವರೆ ತೋರಿಸ್ತಿದೆ . ಮಳೆ ನಿಲ್ಲೋ ಹಾಗೆ ಕಾಣ್ತಾ ಇಲ್ಲ‌.ಆ ಹುಡುಗಿ ಮಲ್ಲೇಶ್ವರಂ ಬಸ್ ಇಲ್ಲೇ ಸಿಗ್ನಲ್ ನಲ್ಲಿ ನಿಲ್ಲತ್ತೆ ನಾನು ಹೋಗ್ಲಾ ಅಂದ್ಲು. ನೀವು ಹೋಗಿ ನಾನು ಹೇಗೋ ಮೆಜೆಸ್ಟಿಕ್ ಗೆ ಹೋಗ್ತೀನಿ ಅಂದಾಗ ಅಲ್ಲೇ ಬಸ್ ನಿಲ್ತು ಹುಷಾರ್ ಅಂತ ಹತ್ತಿ ಹೊರಟು ಹೋದಳು. ಕತ್ತಲಾಗ್ತಿದೆ ಮಳೆ ನಿಂತಿಲ್ಲ, ಬಟ್ಟೆ ಎಲ್ಲಾ ಒದ್ದೆ. ಪಕ್ಕದಲ್ಲಿ ನಿಂತಿದ್ದ ಐದಾರು ಜನ ಹೆಂಗಸರೂ ಹೊರಟು ಈಗ ಹೊರಟು ಹೋದ್ರು. ಇವಳನ್ನ ಬಿಟ್ಟರೆ ಎಲ್ಲಾ ಗಂಡಸರೇ .ನಿಜಕ್ಕೂ ಭಯ ಶುರು ಆಯ್ತು .ಮಳೆ ಬಂದರೆ ಬಸ್ ಗಳ ಸಂಖ್ಯೆ ನೂ ಕಡಿಮೆ ಆಗತ್ತೆ. ಮೆಜೆಸ್ಟಿಕ್ ಗೆ ಹೋದರೆ ಸಾಕು ಹೇಗಾದ್ರೂ ಮನೆ ತಲುಪ ಬಹುದು , ಹೇಗಿದ್ರು ನೆಂದಾ ಯ್ತು ಹೊರಟು ಹೊಗೋಣ ಅಂತ ರಸ್ತೆ ಗೆ ಬಂದಳು . ಆಗ ಅಲ್ಲಿಗೆ ಒಂದು ಕಾರ್ ಬಂದು ನಿಂತು ಕೊಳ್ತು. ಒಳಗಿಂದ ಒಂದು ಹುಡುಗಿ ನೀವು ಗಂಗೋತ್ರಿ ಕಾಲೇಜ್ ಅಲ್ವಾ ಮಳೆ ಜೋರಾಯ್ತು ಯಾವ ಕಡೆ ಹೋಗಬೇಕು ಅಂತ ಕೇಳಿ ಮೊದಲು ಒಳಗೆ ಬನ್ನಿ ಅಂತ ಡೋರ್ ತೆಗೆದು ಹತ್ತಿಸಿಕೊಂಡರು .ಮೆಜೆಸ್ಟಿಕ್ ಗೆ ಹೋದರೆ ಅಲ್ಲಿಂದ ನಂಗೆ ಬಸ್ ಸಿಗತ್ತೆ ಅಂದ್ಲು. ನಾವು ಮೂರು ಜನಾನೂ ಮೆಜಸ್ಟಿಕ್ ಗೆ ಅಂದಾಗ ಸ್ವಲ್ಪ ಧೈರ್ಯ ಬಂತು. ನೀವೆಲ್ಲಾ ನಮ್ಮ ಕಾಲೇಜಾ ಅಂದಾಗ ಇಲ್ಲ ಇಲ್ಲ ನಾನು ಒಬ್ಬಳೇ ಇವರು ನಮ್ಮ ಮನೆ ಪಕ್ಕದವರು ಅಂದಾಗ ಮುಂದೆ. ಕೂತಿದ್ದ ಹೆಂಗಸು ನಿಮ್ಮ ಮನೆ ಎಲ್ಲಿ ಅಂತ ಕೇಳಿದರು.

ಚಾಮರಾಜ ಪೇಟೆ ಅಂದಾಗ ನಮ್ಮ ಡ್ರೈವರ್ ಅಲ್ಲೇ ಇರೋದು .ಯೋಚನೆ ಮಾಡ ಬೇಡಮ್ಮ ಮಳೆ ಬರ್ತಾನೆ ಇದೆ ನಿಮ್ಮ ಮನೆ ಹತ್ತಿರ ಬಿಡ್ತಾನೆ ಅಂದರು .ನನಗೆ ಬಸ್ ಸಿಗತ್ತೆ ಮೆಜೆಸ್ಟಿಕ್ ಗೆ ಹೋದ್ರೆ ಸಾಕು ಅಂದರೂ ಕೇಳ್ಳಿಲ್ಲ.

ಅವರೆಲ್ಲರೂ ಒಂದು ಹಳೇ ಬಂಗಲೆಯ ಮುಂದೆ ಇಳ್ಕೋಂಡ್ರು. ಡ್ರೈವರ್ ಗೆ ಅವರು ಹೇಳಿದ್ರು ಇವಳನ್ನ ಮನೆಗೆ ಬಿಟ್ಟು ನಿಮ್ಮ ಮನೇಗೆ ಹೋಗು. ಬೆಳಗ್ಗೆ ಐದಕ್ಕೆ ಬಾ ಮೈಸೂರಿಗೆ ಹೋಗಬೇಕು ಅಂದರು. ಹೊರಗಡೆ ದೀಪಗಳೇ ಇಲ್ಲ. ಗಾಡಿಗಳ ಹೆಡ್ ಲೈಟ್ ಮಾತ್ರ ಇದೆ. ಸ್ವಲ್ಪ ದೂರ ಇವಳಿಗೆ ಯಾವ ರಸ್ತೆ ಅಂತ ಗೊತ್ತಾಯ್ತು 

ಆಮೇಲೆ ಇದು ಯಾವ ರಸ್ತೆ ಅಂತ ತಿಳೀದೆ ಅವನನ್ನ ಕೇಳಿದಳು. ಆಕಡೆ ಮರಗಳು ಬಿದ್ದು ರಸ್ತೆ ಬಂದ್ ಆಗಿದೆ ಸ್ವಲ್ಪ ದೂರಾ ಆದರೂ ಹೀಗೇ ಹೋಗಬೇಕು ಅಂದ ನಿಜ ಅಂದುಕೊಂಡ್ಲು. ಈಗಂತೂ ಯಾವುದೋ ಸಣ್ಣ ರಸ್ತೆ ಯಲ್ಲಿ ಕಾರು ಬರ್ತಿದೆ . ಹೊರಗೆ ಮಳೆ ನಿಂತಿದೆ. ಆದರೆ ಕತ್ತಲು. ಎಂಜನ್ ಆಫ್ ಆಯ್ತು. ಇವಳಿಗೆ ಭಯ ಆಗಿ ಏನಾಯ್ತು ಅಂದಾಗ ಏನೋ ಸೌಂಡ್ ಬರ್ತಿದೆ ಬೆಳಗ್ಗೆ ಮೈಸೂರಿಗೆ ಬೇರೆ ಹೋಗ್ಬೇಕು ಅಂತ ಕೆಳಗಿಳಿದು ಹಿಂದಿನ ಡೋರ್ ತೆಗೆದು ಇಲ್ಲಿ ಟೂಲ್ಸ್ ಇದೆ ತೋಗೋ ತೀನಿ ನೀವು ಕೂತ್ಕೊಳಿ ಅಂತ ಕಾಲ ಹತ್ತಿರ ಹುಡು ಕಾಡಿದ.ಎರಡು ಮೂರು ಸಲ ಬೇಕಾಗಿಯೇ ಕಾಲು ಮುಟ್ಟಿದ್ದು ಗೊತ್ತಾಯ್ತು. ಅಷ್ಟೆ. ಕಣ್ಣು ಬಿಟ್ಟಾಗ ಇವರ ಮನೆ ಹತ್ತಿರ ಬಂದಿತ್ತು. ಕೆಳಗೆ ಇಳಿದು ಮನೆಗೆ ಬಂದಾಗ ಒಂಭತ್ತು ಗಂಟೆ .ಅವಳ ತಮ್ಮ ಕಾರಿಂದ ಇಳಿದಿದ್ದನ್ನ ನೋಡಿದ. ಓಡಿಬಂದು ಅಜ್ಜಿ ಅಮ್ಮ ಎಲ್ಲಾ ಅಳ್ತಾ ಇದ್ರು ಇಷ್ಟು ಹೊತ್ತ ಕಾಲೇಜು ಮುಗಿಸಿ ಬರೋದು. ಅವಳಿಂದ ಉತ್ತರ ಇಲ್ಲ. ಮನೆ ಬಾಗಿಲಿಗೆ ಬಂದ ತಕ್ಷಣ ಮುಖಕ್ಕೆ. ಲಾಂದ್ರ ಹಿಡಿದು ನೋಡಿದ ಭವಾನಿಗೆ ಏನೋ ಅನಾಹುತ ಆಗಿದೆ ಅಂತ ಗೊತ್ತಾಯ್ತು ಎಷ್ಟೇ ಆದ್ರೂ ಹೆತ್ತ ತಾಯಿ. ಸೀದಾ ಬಚ್ಚಲು ಮನೇಗೆ ಕರೆದು ಕೊಂಡು ಹೋಗಿ ಅವಳ ಬ್ಯಾಗ್ ಕಿತ್ತು ಕೊಂಡು ಹೊರಗೆ ಎಸೆದು ದಢಾರ್ ಅಂತ ಬಾಗಿಲು ಹಾಕಿಕೊಂಡು ಅಳ್ತಾನೇ ಎರಡು ಬಕೆಟ್ ತಣ್ಣೀರು ಸುರಿದು ನೀನೇ ಓದಿ ಈ ಸಂಸಾರ ಉದ್ಧಾರ ಮಾಡ್ತಿ ಅಂತ ಅಂದು ಕೊಂಡು ಎಂಥ ತಪ್ಪು ಮಾಡಿಬಿಟ್ಟೆ ಅಂತ ಹಣೆ ಚಚ್ಚಿ ಕೂಂಡು ಇನ್ನೊಂದು ಬಕೆ ಟ್ ತಣ್ಣೀರು ಹಾಕಿ ಇದು ನೀರಲ್ಲ ಬೆಂಕಿ ಅಂತ ಹೇಳಿ ಆಚೆ ಬಂದಾಗ ಅಜ್ಜಿ ಪಕ್ಕದ ಮನೆ ಶಾರದಮ್ಮ ಇಬ್ಬರೂ 

ಯಾಕಂತೆ ಇಷ್ಟು ಹೊತ್ತು ಅಂದರು. ಕಾಲೇಜಿನಲ್ಲಿ ನಾಟಕ ಪ್ರಾಕ್ಟೀಸು ಅಂತ ಹೇಳಿದ್ಲು ಮಳೆ ಬೇರೆ. ಆಗ ಅಲ್ಲೇ ಇದ್ದೋನು ಅವಳ ತಮ್ಮ ಅಕ್ಕ ಯಾರದೋ ಕಾರಲ್ಲಿ ಬಂದ್ಲು ದೊಡ್ಡ ಕಾರು ಅಂದ..ತಕ್ಷಣ ಅದು ಕಾಲೇಜು ಪ್ರಿನ್ಸಿಪಾಲ್ ಇವರು ಐದಾರು ಹುಡುಗಿಯರನ್ನ ಮನೆ ಹತ್ತಿರ ಬಿಡೋದಕ್ಕೆ ಡ್ರೈವರ್ ಗೆ ಹೇಳಿದರಂತೆ ಎಲ್ಲರನ್ನೂ ಬಿಟ್ಟು ಬರೋಹೊತ್ತಿಗೆ ಲೇಟ್ ಆಯ್ತಂತೆ ಅಂತ ಹೇಳಿ ಅವರ ಬಾಯಿ ಮುಚ್ಚಿಸಿದರು ಭವಾನಿ.


.


Rate this content
Log in

More kannada story from Kalpana Nath

Similar kannada story from Tragedy