ಆನ್ಲೈನ್ ಆರ್ಡರ್ ತಂದ ಫಜೀತಿ!!
ಆನ್ಲೈನ್ ಆರ್ಡರ್ ತಂದ ಫಜೀತಿ!!
ಉದ್ಯೋಗಕ್ಕೆ ಕೇರಳದಲ್ಲಿ ಬಂದು ನೆಲೆಸಿದ ಕನ್ನಡಿಗ ಕುಟುಂಬ. ಅಲ್ಲಿ ಕನ್ನಡ ಯಾರಿಗೂ ಬರುತ್ತಿರಲಿಲ್ಲ, ಎಲ್ಲರೂ ಮಲಯಾಳಂ ಮಾತನಾಡುವವರೇ ಆಗಿದ್ದರು. ಮನೆ ಯಜಮಾನನಿಗೆ ಮಲಯಾಳಂ ಗೊತ್ತಿತ್ತು ಹೊರತುಪಡಿಸಿದರೆ ಹೆಂಡತಿ ಹಾಗೂ ಮಗಳಿಗೆ ಗೊತ್ತಿರಲಿಲ್ಲ.
ಮಗುವಿಗೆ ಬೇರೆ ಮಕ್ಕಳ ಜೊತೆ ಬೆರೆತು ಆಡಬೇಕೆಂದು ಆಸೆ ಆದರೆ ಭಾಷೆ ಗೊತ್ತಿಲ್ಲದ ಕಾರಣ ಮಕ್ಕಳ ಜೊತೆ ಬೆರೆತು ಆಟವಾಡುವುದು ಕಷ್ಟವಾಗಿತ್ತು. ಮಗು ಪಕ್ಕದ ಮನೆಯಲ್ಲಿ, ಮಕ್ಕಳು ಜೋಕಾಲಿ ಆಡುವುದನ್ನು ಅವಳ ಮನೆಯ ಕಿಟಿಕಿಯಿಂದಲೇ ನೋಡುತ್ತಿರುತ್ತಾಳೆ. ಇದನ್ನು ಗಮನಿಸಿದ ಅವಳ ತಾಯಿಯು, ಏನು ನೋಡುತ್ತಿರುವೆ ಎಂದು ಮಗುವಿನಲ್ಲಿ ಕೇಳಿದಾಗ ಮಗುವು, ನನಗೆ ಆ ಜೋಕಾಲಿಯಲ್ಲಿ ಆಡಬೇಕೆಂದು ಆಸೆಯಾಗಿದೆ ಅಮ್ಮಾ ಆ ಮನೆಗೆ ನನ್ನನ್ನು ಕರೆದುಕೊಂಡು ಹೋಗುವೆಯಾ ಎಂದು ಕೇಳುತ್ತದೆ. ಅಮ್ಮ , ಸರಿ ಹೋಗೋಣ ಎಂದು ಮಗುವನ್ನು ಕರೆದುಕೊಂಡು ಹೋಗುತ್ತಾಳೆ ಹಾಗೂ ಮಗುವನ್ನು ಅವರ ಮನೆಯ ಜೋಕಾಲಿಯಲ್ಲಿ ಕುಳ್ಳಿರಿಸಿ ಆಟವಾಡಿಸುತ್ತಾಳೆ.
ಜೋಕಾಲಿಯಲ್ಲಿ ಆಡಿ ಖುಷಿಯಾದ ಮಗುವು ಮರುದಿನವೂ ಆ ಮನೆಗೆ ಹೋಗಿ ಜೋಕಾಲಿ ಆಡಿ ಬರೋಣ ಅಮ್ಮಾ ಎಂದು ಹೇಳುತ್ತದೆ. ಆಗ ಅಮ್ಮನು, ದಿನಾಲೂ ಈ ತರ ಬೇರೊಂದು ಮನೆಯ ಜೋಕಾಲಿಯಲ್ಲಿ ಆಡುವುದು ಸರಿ ಇಲ್ಲ ಮಗಳೇ ನಾವು ಅಪ್ಪನಲ್ಲಿ ಜೋಕಾಲಿ ತರಿಸಲು ಹೇಳೋಣ ಎನ್ನುತ್ತಾಳೆ. ಇದಕ್ಕೆ ಮಗುವು ಅಸಮಾಧಾನದಿಂದ ಒಪ್ಪಿಗೆ ಸೂಚಿಸುತ್ತದೆ.
ಯಜಮಾನಿಯು ತನ್ನ ಗಂಡನಲ್ಲಿ ವಿಷಯ ಪ್ರಸ್ತಾಪಿಸಿದಾಗ ಗಂಡನು, ಮೊದಲಿಗೆ ಒಪ್ಪಿಗೆ ಸೂಚಿಸಿರಲಿಲ್ಲ, ನಂತರ ಮಗುವಿನ ಹಠ ತಡೆಯಲಾಗದೆ ಆನ್ಲೈನ್ ನಿಂದ ನಾವು ಜೋಕಾಲಿ ತರಿಸುವ ಎನ್ನುತ್ತಾನೆ. ಆನ್ಲೈನ್ ನಲ್ಲಿ ವಿಧ ವಿಧವಾದ ಜೋಕಾಲಿಗಳ ಚಿತ್ರ ಇತ್ತು. ಯಾವುದೋ ಒಂದು ಜೋಕಾಲಿ ಮಗುವಿಗೆ ಇಷ್ಟವಾಯಿತು ಎಂದು ತಂದೆ ಆರ್ಡರ್ ಮಾಡುತ್ತಾನೆ.
1 ವಾರದಲ್ಲಿ ಓನ್ಲೈನ್ ಆರ್ಡರ್ ಮನೆಗೆ ತಲುಪಿತು ಹಾಗೂ ಜೋಕಾಲಿಯನ್ನು ಕಟ್ಟಿ ಮಗುವನ್ನು ಅದರಲ್ಲಿ ಕುಳ್ಳಿರಿಸಿ ತೂಗೋಣ ಎಂಬ ಯೋಜನೆಯಲ್ಲಿ ಇರುವಾಗ , ಜೋಕಾಲಿ ತುಂಬಾ ಸಣ್ಣದು , ಬಳ್ಳಿ ಉದ್ದವೇ ಇರಲಿಲ್ಲ!!! ಮಗುವಿಗೆ ಯಾರಾದರೊಬ್ಬರು ಕುಳ್ಳಿರಿಸದೆ ಸ್ವಂತ ಕೂರಲು ಆಗದು ಆ ಜೋಕಾಲಿಯಲ್ಲಿ. ಮಗುವಿನ ಹಠ ಬೇರೆ, ಯಾರಾದರೂ ಕುಳ್ಳಿರಿಸಿ ಕುಳ್ಳಿರಿಸಿ ಎಂದು. ದೊಡ್ಡ ಫಜೀತಿಯಲ್ಲಿ ಸಿಲುಕಿದ ಅನುಭವ ಕೆಲಸದ ಒತ್ತಡ ಇರುವಾಗ. ಅದನ್ನು ಬದಲಿಸಿ ಬೇರೆ ಜೋಕಾಲಿ ಆರ್ಡರ್ ಮಾಡೋಣ ಎಂದು ಯೋಜನೆ ಹಾಕಿದಾಗ , ಅದರಲ್ಲಿ ಇದ್ದಿದ್ದು ಒಂದೇ ಜೋಕಾಲಿ, ಬೇರೆಲ್ಲಾ ಜೋಕಾಲಿಗಳು ಮಾರಾಟ ಆಗಿದ್ದವು. ಅದರಲ್ಲಿ ಉಳಿದಿದ್ದ ಒಂದು ಜೋಕಾಲಿಯ ಬಳ್ಳಿಯೂ ಕೂಡ ಖರೀದಿಸಿದ ಜೋಕಾಲಿಯ ಬಳ್ಳಿಯಷ್ಟೇ ಉದ್ದವಿತ್ತು!!
ಕೆಲಸದ ಒತ್ತಡದಲ್ಲಿ ಮಗುವಿನ ಹಠ ತಡೆಯಲಾಗುತ್ತಿಲ್ಲ ಏನು ಮಾಡುವುದೆಂದು ಯೋಚಿಸಿದಾಗ ಅವರಿಗೆ ಒಂದು ಉಪಾಯ ಹೊಳೆಯುತ್ತದೆ. ತಂದೆ ಜೋಕಾಲಿ ಯ ಕೆಳಗೆ ಒಂದು ಎತ್ತರದ ಸ್ಟೂಲ್ ಇಟ್ಟು ಅದರ ಮೇಲೆ ಹತ್ತಿ ಜೋಕಾಲಿಯಲ್ಲಿ ಕುಳ್ಳುವಂತೆ ಮಗುವಿನಲ್ಲಿ ಹೇಳಿದನು. ಮಗುವು ಹಾಗೆಯೇ ಮಾಡಿ ಪ್ರತಿ ದಿನ ಆಡಲು ಆರಂಭಿಸಿತು. ಒಂದು ದಿನ ಸ್ಟೂಲ್ ಹತ್ತಿ ಮಗುವು ಕೂತಾಗ , ಆಯತಪ್ಪಿ ಮಗುವು ಎತ್ತರದ ಜೋಕಾಲಿಯಿಂದ ಕೆಳಗೆ ಬಿದ್ದು ಮೈ, ಕೈಗೆ ಎಲ್ಲಾ ಗಾಯ ಮಾಡಿಕೊಂಡು ಅತ್ತಿತು ಅಲ್ಲದೇ ಮೂಗಿನಲ್ಲಿ, ಬಾಯಿಯಲ್ಲಿ, ಕೈ ಕಾಲಿನಲ್ಲಿ ರಕ್ತ ಸೋರುತ್ತಿತ್ತು. ಆನ್ಲೈನ್ ಆರ್ಡರ್ ತಂದಿಟ್ಟ ಫಜೀತಿಯಿಂದ ಆಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳುವಂತೆ ಆಯಿತು.
