ಅನರ್ಘ್ಯ ರತ್ನ
ಅನರ್ಘ್ಯ ರತ್ನ
ನಾನಿಲ್ಲಿ ಇಂದು ನಾಗರಪಂಚಮಿಯ ಪೌರಾಣಿಕ ಕಥೆಯೊಂದನ್ನು ಹೇಳುತ್ತಿದ್ದೇನೆ. ನಾಗರ ಪಂಚಮಿ ಹಬ್ಬದ ಆಚರಣೆಯ ಹಿನ್ನಲೆಯ ಕುರಿತು ಪುರಾಣದಲ್ಲಿ ಅನೇಕ ಕಥೆಗಳಿವೆ, ಆ ಹಲವು ಕಥೆಗಳಲ್ಲಿ ಒಂದು ಕಥೆಯನ್ನು ನಾನಿಂದು ತಿಳಿಸುತ್ತಿದ್ದೇನೆ.
ಅಂದು ಒಬ್ಬ ರಾಜನ ಮನೆಯ ಹಿರಿ ಸೊಸೆಗೆ ದೊಡ್ಡ ಸರ್ಪವೊಂದನ್ನು ಕಂಡಾಗ ಆಕೆಯು, ಆ ಸರ್ಪವನ್ನು ಹೊಡೆದು ಕೊಲ್ಲಲು ಅನುವಾದಳು. ಇದನ್ನು ಕಂಡ ಕಿರಿಯ ಸೊಸೆಯು, ಸರ್ಪವನ್ನು ಕೊಲ್ಲಬಾರದು ಎಂದು ತನ್ನ ಅಕ್ಕನಲ್ಲಿ ಹೇಳಿ, ಅಕ್ಕನಿಂದ ಸರ್ಪವನ್ನು ಪಾರು ಮಾಡಿದಳು.
ಆ ಸರ್ಪವನ್ನು ಕಂಡ ತಕ್ಷಣ ಕಿರಿಯ ಸೊಸೆಯು, ಓ ಸರ್ಪ ದೇವನೇ ನೀನು ನನಗೇಕೆ ಕಂಡೆ?!, ಸ್ವಲ್ಪ ಹೊತ್ತು ತಾಳು ನಾನು ನಿನಗೆ ಕುಡಿಯಲೆಂದು ಹಾಲು ತರುತ್ತೇನೆ ಎಂದು ಒಳಹೋದಳು. ಒಳಹೋದ ಕಿರಿಯ ಸೊಸೆಗೆ ತರಾತುರಿಯ ಕೆಲಸಗಳ ನಡುವೆ ಸರ್ಪಕ್ಕೆ ಹಾಲು ತರಲು ಮರೆತುಬಿಟ್ಟಳು. ಸರ್ಪವು ಅಲ್ಲಿಯೇ ಕಾದು ಸುಸ್ತಾಗಿತ್ತು ಹಾಗೂ ಸರ್ಪಕ್ಕೆ ಕೋಪ ಬಂದಿತ್ತು.
ಮರುದಿನ ತಕ್ಷಣ ಸರ್ಪಕ್ಕೆ ಹಾಲು ಕೊಡಲು ಮರೆತುಬಿಟ್ಟೆ ಎಂದು ನೆನಪಾದಾಗ ಕಿರಿ ಸೊಸೆಯು, ಸರ್ಪದ ಬಳಿಗೆ ಹೋಗಿ, ಅಣ್ಣಾ ನನ್ನನ್ನು ಕ್ಷಮಿಸು, ಕೆಲಸಗಳ ಒತ್ತಡಗಳ ನಡುವೆ ನಾನು ನಿನಗೆ ಹಾಲು ಕೊಡಲು ಮರೆತುಬಿಟ್ಟೆ ಎಂದಳು.
ಆಗ ಸರ್ಪವು, ನನಗೆ ಹಾಲು ಕೊಡದಿದ್ದ ಕಾರಣ ನಾನು ಸಿಟ್ಟಿನಲ್ಲಿ ನಿನ್ನನ್ನು ನನ್ನ ವಿಷಪೂರಿತ ಹಲ್ಲುಗಳಿಂದ ಕಚ್ಚಿ ಸಾಯಿಸೋಣ ಅಂತಿದ್ದೆ ಆದರೆ ನೀನು ನನ್ನನ್ನು ಅಣ್ಣಾ ಎಂದು ಕರೆದೆ ಹಾಗಾಗಿ ನಾನು ನಿನ್ನನ್ನು ಸು
ಮ್ಮನೇ ಬಿಡುತ್ತಿದ್ದೇನೆ ಎಂದಿತು.
ಆಗ ಕಿರಿಯ ಸೊಸೆಯು, ಅಣ್ಣಾ ನಾನು ಈಗಲೇ ನಿನಗೆ ಹಾಲನ್ನು ಹಾಕುತ್ತೇನೆ ಎಂದು ಸರ್ಪಕ್ಕೆ ಹಾಲನ್ನು ಹಾಕಿದಳು. ಆಗ ಸರ್ಪವು ಸಂತುಷ್ಟಗೊಂಡು ಒಂದು ಅನರ್ಘ್ಯವಾದ ರತ್ನದ ಮಾಲೆಯೊಂದನ್ನು ಅವಳಿಗೆ ಉಡುಗೊರೆಯಾಗಿ ಕೊಟ್ಟಿತು.
ಉಡುಗೊರೆ ಕೊಟ್ಟ ಸರ್ಪಕ್ಕೆ ಕೈ ಮುಗಿದು, ಧನ್ಯವಾದ ಹೇಳಿ, ಆ ಉಡುಗೊರೆಯನ್ನು ತೆಗೆದುಕೊಂಡು ಒಳನಡೆದಳು ಕಿರಿಯ ಸೊಸೆ. ದಿನ ಕಳೆದಂತೆ ಆ ಅನರ್ಘ್ಯವಾದ ರತ್ನದ ಮಾಲೆಯ ಮೇಲೆ ಆ ರಾಜ್ಯದ ರಾಣಿಗೂ ಕಣ್ಣು ಬಿತ್ತು.
ಆಗ ರಾಣಿಯು ಆ ರತ್ನ ನನಗೆ ಬೇಕೆಂದು ತೆಗೆದುಕೊಳ್ಳುವಾಗ ರತ್ನದ ಮಾಲೆಯು ಸರ್ಪವಾಗಿ ಬದಲಾಯಿತು. ರಾಣಿಯು ಭಯದಲ್ಲಿ ಕೈ ಬಿಟ್ಟಳು ಹಾಗೂ ಆಶ್ಚರ್ಯದಿಂದ ನೋಡುತ್ತಾ ಈ ರತ್ನದ ಮಾಲೆಯ ಹಿನ್ನಲೆಯನ್ನು ತಿಳಿದುಕೊಂಡ ನಂತರ ಅನರ್ಘ್ಯವಾದ ರತ್ನದ ಮಾಲೆಯನ್ನು ಪುನಃ ಕಿರಿಯ ಸೊಸೆಗೆ ಕೊಟ್ಟಳು.
ಸರ್ಪಕ್ಕೆ ಕಿರಿಯ ಸೊಸೆಯು ಶ್ರಾವಣ ಮಾಸದ ಪಂಚಮಿಯ ದಿನ ಹಾಲೆರೆದಳು ಹಾಗೂ ಸರ್ಪವು ಅದೇ ದಿನ ಸಂತುಷ್ಟಗೊಂಡು ರತ್ನದ ಮಾಲೆಯನ್ನು ಆಕೆಗೆ ಉಡುಗೊರೆಯಾಗಿ ನೀಡಿತು ಎಂಬ ಪೌರಾಣಿಕ ಕಥೆಯಿದೆ ಹಾಗಾಗಿ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಹಾಗೂ ಆಕೆಯು ಸರ್ಪವನ್ನು ಅಣ್ಣಾ ಎಂದು ಕರೆದ ಕಾರಣ ನಾಗರ ಪಂಚಮಿಯನ್ನು ಸಹೋದರ ಸಹೋದರಿಯರಿಗೆ ಬಹಳ ವಿಶೇಷವಾದ ದಿನ ಓ ಸರ್ಪ ದೇವನೇ ನೀನು ನನಗೇಕೆ ಕಂಡೆ?!, ಸ್ವಲ್ಪ ಹೊತ್ತು ತಾಳು ನಾನು ನಿನಗೆ ಕುಡಿಯಲೆಂದು ಹಾಲು ತರುತ್ತೇನೆದೂ ಕರೆಯುತ್ತಾರೆ ಎಂಬ ಹಿನ್ನಲೆಯಿದೆ.