STORYMIRROR

Surabhi Latha

Romance Classics Inspirational

4  

Surabhi Latha

Romance Classics Inspirational

ಚಳಿ ಚಳಿ

ಚಳಿ ಚಳಿ

1 min
256

ಮುಸು ಮುಸು ಕೊರೆವ ಚಳಿಯಲಿ !

ಮುಸುಕು ಹೊದ್ದು ರಗ್ಗಿನಲಿ !!

ಮುದ್ದಾಡುವ ಬಳಿ ಬಾರ !

ಬಾನಲ್ಲಿಹನು ಚೆಂದಿರ !!೨!! 


ಸಣ್ಣ ನಡುವು ನಡುಗುತಿಹುದು !

ಕಣ್ಣು ತೇಲಿ ಬರುತಿಹುದು !

ಮಂದಾ ನೀಲಾಕಾಶದಲಿ !

ಮಿನುಗುವ ಚುಕ್ಕಿಗಳಲಿ !

ಒಂದಾಗುವ ಬಳಿ ಬಾರ !

ಸುರಿಸು ಒಲವ ಸಾರ !!೨!!


ಹಳೆಯದಾದರೇನು ಮದುವೆಯ ಬಂಧ !

ನವ ಜೋಡಿಯಂತೆ ಇರಲು ಚೆಂದ !

ಪ್ರತಿ ದಿನವೂ ಶುಭ ರಾತ್ರಿ !

ಜೀವನವೇ ನವರಾತ್ರಿ !

ಕೂಡಿ ನಲಿವ ಬಾರ !

ಸುರಿಸು ಒಲವ ಸಾರ !!೨!!



Rate this content
Log in

Similar kannada poem from Romance