STORYMIRROR

ಹೃದಯ ಸ್ಪರ್ಶಿ

Romance Classics Others

4  

ಹೃದಯ ಸ್ಪರ್ಶಿ

Romance Classics Others

ಒಲವು ಮೂಡಿದಾಗ...

ಒಲವು ಮೂಡಿದಾಗ...

1 min
296


ನಾನೇನು ಹೇಳಲಿ..?

ನೀನೆಲ್ಲವ ದೋಚಿರಲು..!

ನಾ ಕೊಡದ ಉಡುಗೊರೆಗಳಿಗೆ

ನೀನಿಡುವ ಹೆಸರುಗಳ

ಪಟ್ಟಿ ಉದ್ದವಿರಲು...


ನನ್ನೆಲ್ಲ ಸಮಯವ

ನಿನಗಾಗಿ ಇರಿಸುವ ಪತ್ರಕ್ಕೆ

ಹೃದಯದ ಸಹಿ ಬಿದ್ದಾಗಿದೆ..

ಏನೊಂದು ಬೇಡಿಕೆ

ಇಲ್ಲದೆಯೂ ಒಲವಿನೂರ

ಪಯಣ ಆರಂಭವಾಗಿದೆ..


ಮಾತಿನಲ್ಲಿ ಮಹಲು ಕಟ್ಟುವ

ಹೊಸ ಪರಿಪಾಠವೊಂದು

ಸದ್ದಿಲ್ಲದೇ ಸುದ್ದಿಯಾಗಿದೆ..

ಗದ್ದಲದ ನಡುವೆಯೂ ಏಕಾಂತದ 

ಸುಖ ಅರಿವಿಲ್ಲದೆ ನನ್ನದಾಗಿದೆ..


ಕನಸುಗಳಿಗೆ ಬಣ್ಣ ತುಂಬಿ

ಬದುಕಿನ ಹಾದಿ ತಾನಾಗೇ

ತೆರೆದುಕೊಂಡಿದೆ..

ಮಧುರ ನೋವಿನ ಮೊಗ್ಗೊಂದು

ಅರಳಿ, ಹೃದಯದಿ ಸಾವಿರ

ಹೂವ ಕಂಪು ಬೀರಿದೆ...






Rate this content
Log in

Similar kannada poem from Romance