Vadiraja Mysore Srinivasa

Drama Fantasy Thriller

3  

Vadiraja Mysore Srinivasa

Drama Fantasy Thriller

ತೀರ್ಪಿನ ಆ ದಿನ - ಎರಡನೇ ಅಧ್ಯಾಯ

ತೀರ್ಪಿನ ಆ ದಿನ - ಎರಡನೇ ಅಧ್ಯಾಯ

8 mins
528


ಇದುವರೆಗೂ


ಪೋಸ್ಟ್ಮನ್ ಇಕ್ಬ್ಯಾಲ್, ಪೋಸ್ಟ್ ಸಾರ್ಟ ಮಾಡುವಾಗ ಅವನಿಗೆ ಜಡ್ಜ್ ಸೀತಾರಾಮಯ್ಯ ರವರ ಹೆಸರಿಗೆ ಬಂದಿರುವ ಫ್ರಮ್ ಅಡ್ರೆಸ್ ಇಲ್ಲದ ಕವರ್ ಒಂದು ಡೆಲಿವರಿ ಮಾಡುತ್ತಾನೆ. 

ಒಳಗೆ ಕೇವಲ ಅಪೂರ್ಣವಾದ ಚಿತ್ರವೊಂದಿರುತ್ತದೆ. ಇನ್ನೊಮ್ಮೆ ಎರಡು ಕವರ್ ಇದೆ ರೀತಿ ಡೆಲಿವರಿ ಮಾಡುತ್ತಾನೆ ಇಕ್ಬಾಲ್. ಎರಡನೇ ಕಾವೇರ್ಗಳಲ್ಲಿ ಬರೆದಿರುವ ಚಿತ್ರ ಪ್ರೊಸೆಕ್ಯುಷನ್ ಲಾಯರ್ 

ನವ್ವೆನ್ ಕೃಷ್ಣ ರವರನ್ನೇ ಹೋಲುತ್ತಿರುತ್ತ್ತದೆ .......


ಎರಡನೇ ಅಧ್ಯಾಯ- ಒಮ್ಮನ್ ಕುಟ್ಟಿ


ತಮ್ಮ ಕೈಯ್ಯಲ್ಲಿದ್ದ ಚಿತ್ರವನ್ನೇ ನೋಡುತ್ತಾ, ಏನು ತೋಚದೆ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತರು ಜಡ್ಜ್ ಸೀತಾರಾಮಯ್ಯ.


ಕೆಲ ಸಮಯದ ನಂತರ, ಎದುರಿಗಿದ್ದ ಮೈಸೂರ್ ಮರ್ಡರ್ ಫೈಲ್ ತೆಗೆದು ನೋಡತೊಡಗಿದರು. ರಾತ್ರಿ ಸುಮಾರು 12 ಘಂಟೆಗೆ ಫೈಲ್ ಬದಿಗಿಟ್ಟು ಮಲಗಲು ಸಿದ್ಧತೆ ನಡೆಸಿದರು. ಸೀತಾರಾಮಯ್ಯನವರ ಹೆಂಡತಿ ತವರು ಮನೆಗೆ ಹೋಗಿದ್ದರು - ಯಾವುದಾದರೋ ಕೋರ್ಟ್ ಕೇಸಿನ ತೀರ್ಪು ಹತ್ತಿರ ಬರುತ್ತಿದಂತೆ, ಹೆಂಡತಿಯನ್ನು ತವರಿಗಿ ಕಳುಹಿಸುತ್ತಿದ್ದರು ಜಡ್ಜ್. ಒಬ್ಬನೇ ಮಗ, ಅಮೆರಿಕದ ಲಾ ಕಂಪನಿಯೊಂದರಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದ.

ಮಲಗಿ ಎಷ್ಟೋ ಹೊತ್ತಾದರೂ, ನಿದ್ರೆ ಬರದೇ ಹೊರಳಾಡಿದರು ಸೀತಾರಾಮಯ್ಯ. ಕಣ್ಣು ಮುಚ್ಚಿದರೆ ಪೆನ್ಸಿಲ್ನಲ್ಲಿ ಬಿಡಿಸಿದ್ದ ಆ ಚಿತ್ರ ಮುಂದೆ ಬರುತ್ತಿತ್ತು.


ಕೊನೆಗೆ ತಡೆಯಲಾಗದೆ ಎದ್ದು ಲೈಟ್ ಹಾಕಿ, ಟೇಬಲ್ ಮೇಲಿದ್ದ ಆ ಚಿತ್ರಗಳನ್ನು ಒಂದೊಂದಾಗಿ ಜೋಡಿಸಿದರು. ಮೊದಲನೇ ಚಿತ್ರದಿಂದ ಮೂರನೇ ಚಿತ್ರದ ವರೆಗೆ, ಒಬ್ಬನೇ ಬರೆದಂತಿತ್ತು; ಯಾರೋ ನಿಪುಣ ಕಲಾವಿದನೇ ಇರಬೇಕು; ಏಕೆಂದರೇ, ಕಣ್ಣು ಹಾಗು ಮೂಗು ಬಿಡಿಸಿದಂತಿತ್ತು ಮತ್ತು, ಕಿವಿಯಲ್ಲಿದ್ದ ಕಡಗ, ಹೊಳೆಯುವಂತೆ ಬಿಡಿಸಿದ್ದ ಆ ಚಿತ್ರವನ್ನೇ ನೋಡುತ್ತಾ ಕುರ್ಚಿಯ ಮೇಲೆ ಕುಳಿತ ಜಡ್ಜ್ ಏನೋ ನಿರ್ಧಾರ ಮಾಡಿದವರಂತೆ, ಹೋಗಿ ಹಾಸಿಗೆಯ ಮೇಲೆ ಮಲಗಿದರು.


ಬೆಳಾಗಾದಾಗ ಸುಮಾರು ಘಂಟೆ ಏಳಾಗಿತ್ತು; ದಿನಾ, 5 ವರೆಗೆ ಏಳುವ ಜಡ್ಜ್ ತಡವಾಗಿದ್ದಕ್ಕೆ ಸ್ವಲ್ಪ ಬೇಸರದಿಂದಲೇ ತಮ್ಮ ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಬ್ರೇಕ್ಫಾಸ್ಟ್ ಟೇಬಲ್ ಮುಂದೆ ಕುಳಿತು, ಅಲ್ಲೇ ಇದ್ದ ಭಾನುವಾರದ ಪೇಪರ್ ತಿರುವಿ ಹಾಕಿದರು.


ಬ್ರೇಕ್ಫಾಸ್ಟ್ ಮುಗಿಸಿ, ನಾಣಿಯನ್ನು ಕರೆದು ಹೇಳಿದರು. "ನಾನು ಲೈಬ್ರರಿಯಲ್ಲಿ ಇರುತ್ತೇನೆ; ಲಾಯರ್ ರಂಗಯ್ಯ ಬರಬಹುದು ಇನ್ನು ಸ್ವಲ್ಪ ಹೊತ್ತಿಗೆ. ಅವರು ಬಂದೊಡನೆ, ಲೈಬ್ರರಿಗೆ ಕರೇತಾ. ಬೇರೆ ಯಾರಾದರೂ ಫೋನ್ ಮಾಡಿದರೆ, ಸಾಹೇಬ್ರು ಬ್ಯುಸಿ ಅಂತ ಹೇಳು. ನನಗೆ ಡಿಸ್ಟರ್ಬ್ ಮಾಡೋದು ಬೇಡ."


ನಾಣಿ ಜಡ್ಜ್ ಮುಖವನ್ನೇ ನೋಡಿ ತಲೆಯಾಡಿಸಿದ. ಇದು ಅವನಿಗೇನು ಹೊಸದಲ್ಲ; ಆಗಾಗ, ಒಬ್ಬಂಟಿಯಾಗಿ ಕುಳಿತು ಆಲೋಚನೆ ಮಾಡುವುದು ಜಡ್ಜ್ ರವರ ಸ್ವಭಾವ.


ಲೈಬ್ರರಿಯಲ್ಲಿ ಕುಳಿತು, ಮೊಬೈಲ್ ತೆಗೆದು ರಂಗಯ್ಯನವರ ನಂಬರ್ ಡಯಲ್ ಮಾಡಿದರು ಜಡ್ಜ್.

ಫೋನ್ ಎರಡೇ ರಿಂಗಿಗೆ ತೆಗೆದುಕೊಂಡ ಲಾಯರ್ ರಂಗಯ್ಯ ಫೋನ್ ನಂಬರ್ ನೋಡಿ ಆಶ್ಚರ್ಯದಿಂದ ಕೇಳಿದರು. "ಗುಡ್ ಮಾರ್ನಿಂಗ್ ಸರ್. ಹೇಳಿ ಸಾರ್. ನನ್ನಿದ ಏನಾಗ್ಬೇಕಿತ್ತು?"

ಜಡ್ಜ್ ಹೇಳಿದರು "ರಂಗಯ್ಯ, ಒಂದ್ ಕೆಲಸ ಮಾಡ್ಬೇಕು. ನೀವು ಆದಷ್ಟು ಬೇಗ ನಮ್ಮನೆಗೆ ಬನ್ನಿ. ಹಾನ್ ಕಾರಲ್ಲಿ ಬರೋದು ಬೇಡ; ಸ್ವಲ್ಪ ಡಿಸ್ಕ್ರೀಟ್ ಆಗಿ ಬಂದರೆ ಒಳ್ಳೇದು. ಒಂದ್ ರಿಕ್ಷಾ ಮಾಡ್ಕೊಂಡ್ ಬನ್ನಿ."

ವಿಷಯಾ ಏನೋ ಗಂಭೀರವಾಗಿರಬೇಕು ಇಲ್ಲದಿದ್ದರೆ, ಜಡ್ಜ್ ಸುಮ್ಮನೆ ಹಾಗೆಲ್ಲ ಮನೆಗೆ ಬರಲು ಹೇಳುವುದಿಲ್ಲ ವೆಂದು ಯೋಚಿಸುತ್ತ, ರಂಗಯ್ಯ ಬ್ರೇಕ್ಫಾಸ್ಟ್ ಬೇಗ ಮುಗಿಸಿ, ಆಟೋ ಹಿಡಿದು ಜಡ್ಜ್ ಮನೆಗೆ ಹೊರಟರು.


ಬೆಲ್ ರಿಂಗಾದೊಡನೆ, ನಾಣಿ ಹೊರಗೆ ರಂಗಯ್ಯನವರು ಬಂದಿರುವುದು ನೋಡಿ, ತಲೆ ಬಾಗಿ ನಮಸ್ಕರಿಸಿ ಲೈಬ್ರರಿ ಕಡೆ ಕರೆದುಕೊಂಡು ಹೋಗಿ ಸ್ವಲ್ಪ ಹೊತ್ತು ಅಲ್ಲೇ ನಿಂತ. ಜಡ್ಜ್, ನಿಂತ ನಾಣಿಯನ್ನು ನೋಡಿ ಹೇಳಿದರು. "ಎರಡು ಲೆಮನ್ ಟೀ ತೆಗೆದುಕೊಂಡು ಬಾ. ಬಿಸಿ ಇರಲಿ."


ನಾಣಿ ಬಂದು ಟೀ ಇಟ್ಟು ಹೋಗುವವರೆಗೂ ಹೆಚ್ಚು ಮಾತನಾಡದೇ ಕುಳಿತಿದ್ದ ಜಡ್ಜ್, ಅವನು ಬಾಗಿಲು ಹಾಕಿಕೊಂಡು ಹೋದೊಡನೆ ರಂಗಯ್ಯನ ಕಡೆ ನೋಡಿ ನುಡಿದರು.


"ಹೀಗೆ ಫೋನ್ ಮಾಡಿ ಕರೆಸಿದ್ದಕ್ಕೆ ನಿಮಗೆ ಆಶ್ಚರ್ಯ ಆಗಿರಬೇಕು, ಅಲ್ಲವೇ ರಂಗಯ್ಯ? ವಿಷ್ಯ ಸ್ವಲ್ಪ ಗಂಭೀರವಾಗೇ ಇದೆ. ನೀವು ಅವತ್ತುಚೇಂಬರ್ನಲ್ಲಿ ಕುಳಿತು ಆರೋಪಿಮಹದೇವಪ್ಪ ನವೀನ ಕೃಷ್ಣ ರವರ ದೂರದ ಸಂಬಂಧಿಯೊಬ್ಬರ ತೋಟದಲ್ಲಿ ಕೆಲಸ ಮಾಡ್ತಾ ಇದ್ದ ಅಂತ ಹೇಳಿದ್ರಲ್ವಾ? ಇನ್ನೇನು ಗೊತ್ತು ಆಮಹದೇವಪ್ಪ ನ ಬಗ್ಗೆ? ಹೆಂಡತಿ, ಮಕ್ಕಳೂ?"


ರಂಗಯ್ಯ ಕಿಟಕಿಯಿಂದ ಹೊರಗೆ ನೋಡುತ್ತಾ ನುಡಿದರು.


"ಬಹಳಷ್ಟು ವಿಷಯಗಳನ್ನೆಲ್ಲಾ ಪರಿಶೀಲನೆ ಮಾಡುವುದಕ್ಕಾಗಲಿಲ್ಲ. ಆದರೂ, ಸ್ವಲ್ಪ ಮಟ್ಟಿಗೆ ಇನ್ವೆಸ್ಟಿಗೇಷನ್ ಮಾಡಿದಾಗೆ ತಿಳೀತು ಅವನ ಹೆಂಡತಿ ಹಾಗು ಒಬ್ಬಳೇ ಮಗಳು ಊರಲಿಲ್ಲವೆಂದು. ಯಾರಿಗೂ ಅವರು ಎಲ್ಲಿ ಹೋದರೆಂದು ಗೊತ್ತಿಲ್ಲವಂತೆ; ಹೀಗಂತ ನನ್ನ ಅಸಿಸ್ಟೆಂಟ್ ಶ್ರೀನಿವಾಸ ಪತ್ತೆ ಹಚ್ಚಿದ್ದ. ಯಾಕೆ ಸರ್? ಕೇಸಿನಲ್ಲಿ ಏನಾದರೂ ಹೊಸ ಎಳೆ ಸಿಕ್ಕಿದ್ದೀಯ?"


ಅನುಭವಿ ರಂಗಯ್ಯನ ಮಾತು ಕೇಳಿ ಇನ್ನು ಸುಮ್ಮನಿದ್ದರೆ ಕೆಲಸ ಪೂರ್ತಿಯಾಗುವುದಿಲ್ಲವೆಂದು ಅರಿತ ಜಡ್ಜ್ ನುಡಿದರು.


"ರಂಗಯ್ಯ ಈ ಮರ್ಡರ್ ಕೇಸ್ ನಾನು ಅಂದುಕೊಂಡಷ್ಟು ಸ್ಟ್ರೈಟ್ ಫಾರ್ವರ್ಡ್ ಅಲ್ಲಾ ಅಂತ ಅನ್ನಿಸ್ತಾ ಇದೆ. ನಿಮಗೆ ಇತ್ತೀಚೆಗೆ ರಿಟೈರ್ಡ್ ಅಗೀರೋ ಪೊಲೀಸ್ ಆಫೀಸರ್ ಯಾರದ್ರೋ ಗೊತ್ತಿರ್ಬೇಕಲ್ವಾ?"

ರಂಗಯ್ಯ ಮುಖದಲ್ಲಿ ಯಾವ ಬದಲಾವಣೆಯನ್ನೂ ತೋರದೆ ಹೇಳಿದರು. "ಖಂಡಿತ ಗೊತ್ತು ಸರ್. ಲಾಸ್ಟ ಮಂತ್ ರಿಟೈರ್ಡ್ ಆಗಿರು ಆಲ್ಬರ್ಟ್ ಪಿಂಟೋ ಅಂತ ಒಬ್ಬ ಬಹಳ ಬುದ್ದಿವಂತ ಇನ್ಸ್ಪೆಕ್ಟರ್ ಇದ್ದಾರೆ . ಯಾಕೆ ಸರ್? ಏನಾಗ್ಬೇಕಿತ್ತು? ನಿಮಗೂ ಗೊತ್ತಲ್ಲಾ ಸರ್ ಆ ಪಿಂಟೋ. ಬಹಳಷ್ಟು ಕ್ರಿಮಿನಲ್ ಕೇಸ್ಗಳಿಗೆ ತುಂಬಾ ಸಹಾಯ ಮಾಡಿರೋ ನಿಷ್ಠಾವಂತ ಇನ್ಸ್ಪೆಕ್ಟರ್. ನನ್ನ ಮಾತಿಗೆ ತುಂಬಾ ಬೆಲೆ ಕೊಡೊ ವ್ಯಕ್ತಿ”


“ಸರಿ ಹಾಗಿದ್ರೆ; ಎರಡು ಕೆಲಸ ಆಗ್ಬೇಕು ಆ ಪಿಂಟೋ ಕಡೆ ಯಿಂದ. ಇದು ಡೆಪಾರ್ಟ್ಮೆಂಟ್ನಿಂದ ಹೊರತಾದಂತ ಕೆಲಸ ಅಂತ ಮುಂಚೆನೇ ಹೇಳ್ಬಿಡಿ. ಸ್ವಲ್ಪ ಜಾಗರೂಕತೆಯಿಂದ ಮಾಡ್ಬೇಕು. ಮೊದಲನೇಯದು, ಆಮಹದೇವಪ್ಪ ನ ಹೆಂಡತಿ ಹಾಗು ಮಗಳನನ್ನ ಪತ್ತೆ ಹಚ್ಹೋದು. ಎರಡನೇ ಕೆಲಸ " ಕುಳಿತಿದ್ದ ಕುರ್ಚಿಯಿಂದ ಎದ್ದು ಜಡ್ಜ್ ಸೀತಾರಾಮಯ್ಯ, ಟೇಬಲ್ ಮೇಲಿದ್ದ ಅಪೂರ್ಣ ಚಿತ್ರಗಳನ್ನು, ಏನು ಮಾತನಾಡದೆ ರಾಮಯ್ಯನವರ ಮುಂದೆ ಹಿಡಿದು ಹೇಳಿದರು. " ಮೊದಲು ಈ ಚಿತ್ರಗಳನ್ನು ನೋಡಿ ರಾಮಯ್ಯ. ಆ ನಂತರ ಮುಂದೆ ಮಾತನಾಡೋಣ."


ಜಡ್ಜ್ ಕೈಯಲ್ಲಿ ಕೊಟ್ಟ ಚಿತ್ರಗಳನ್ನು ಒಂದೊದಾಗಿ ನೋಡುತ್ತಾ ಬಂದ ರಾಮಯ್ಯ, ಮೂರನೇ ಚಿತ್ರ ನೋಡುತ್ತಿದಂತೆ, ಎದ್ದು ನಿಂತರು.


"ಏನ್ ಸಾರ್ ಇದು? ಈ ಚಿತ್ರ ನಮ್ಮ ಪ್ರೊಸೆಕ್ಯುಷನ್ ಲಾಯರ್ ನವೀನ ಕೃಷ್ಣಥರಾನೇ ಇದೆಯಲ್ಲಾ? ಯಾರು ಸಾರ್ ಬರೆದಿರೋದು ಈ ಚಿತ್ರಗಳನ್ನಾ? ಮತ್ತೆ, ಈ ಕೆಳೆಗೆ ಬರೆದಿರೋ ಬಾಶೆ ಯಾವುದು ಸರ್? ಅಕ್ಷರ ಏನೋ ಹಿಂದಿ ಇದ್ದಹಾಗಿದೆ, ಆದ್ರೆ ಬಾಶೆ ಬೇರೆ ಯಾವುದೋ ಇದ್ದಹಾಂಗಿದೇ?"


ರಾಮಯ್ಯ ಕೈಯಿಂದ ಪೇಪರ್ ತೆಗೆದುಕೊಂಡು ಕುರ್ಚಿಯ ಮೇಲೆ ಕುಳಿತ ಜಡ್ಜ್ ಸೀತಾರಾಮಯ್ಯ ಭಾರವಾದ ಧ್ವನಿಯಲ್ಲಿ ಅಲ್ಲಿಯವರೆಗೂ ನಡೆದಿರುವ ವಿಷಯಗಳನ್ನೆಲ್ಲಾ ಹೇಳಿದರು.

ಜಡ್ಜ್ ಮಾತು ಕೇಳಿ ಹೌಹಾರಿದರು ರಾಮಯ್ಯ. "ಏನ್ ಸಾರ್ ಇಷ್ಟೊಂದು ವಿಚಿತ್ರವಾಗಿದೆ? ನನ್ನ 25 ವರ್ಷದ ಸೆರ್ವಿಸ್ನಲ್ಲಿ ಈ ತರಹದ ವಿಚಿತ್ರವಾದ ವಿಷಯಾನೇ ಕೇಳಿಲ್ಲ ನಾನು. ಹಾನ್, ಈಗ ಹೇಳಿ ಸಾರ್ ಎರಡನೇ ಕೆಲಸ ಏನು ಅಂತ."


ಜಡ್ಜ್ ಸೀತಾರಾಮಯ್ಯ ಲಾಯರ್ ರಾಮಯ್ಯನವರನ್ನೇ ನೋಡುತ್ತಾ ಹೇಳಿದರು. "ಕೆಳೆಗೆ ಬರೆದಿರೋ ಬಾಷೆ ಮರಾಠಿ. ಅದರರ್ಥ್ ಏನಂದ್ರೆ, ಸ್ವಲ್ಪ ನಿಲ್ಲಿ ಅಂತ. ಮತ್ತೆ, ಈ ಕಾಗದ ಬಂದಿರೋದು ಎರ್ನಾಕುಲಂ, ಕೇರಳ ಇಂದ ಯಾರೋನನಗೆ ಸೂಚನೆ ಕೊಡ್ತಾ ಇರೋ ಹಾಗಿದೆ; ಈ ಕೇಸಿನ ತೀರ್ಪಿಗೂ, ಈಗ ಬಂದಿರೋ ಮೂರು ಪತ್ರಗಳಿಗೂ, ಏನು ಒಂದು ನಂಟಿದೆ ಅಂತ ನನಗನ್ನಿಸ್ತಾ ಇದೆ. ಪತ್ರ ಬರ್ದೋರು ಯಾರು?

ಯಾವ ಕಾರಣಕ್ಕಾಗಿ ಅಂತ ತಿಳ್ಕೊಳೋ ಅವಶ್ಯಕತೆ ಇದೆ. ಮೊದಲು ನಾನು ಯಾರೂ ಕಿಡಿಗೇಡಿಗಳ ಕೆಲಸ ಇರಬೇಕು ಅಂತ ಇಗ್ನೋರ್ ಮಾಡ್ದೆ. ಆದ್ರೆ, ಈ ಮೂರನೇ ಚಿತ್ರ ನನ್ನ ಮನಸ್ಸನ್ನು ವಿಚಿಲಿತಗೊಳಿಸಿದೆ.

ನಿಮ್ಮ ಪಿಂಟೋಗೆ ಬ್ರೀಫ್ ಮಾಡಿ; ಅವ್ರು ಎರ್ನಾಕುಲಂಗೆ ಹೋಗಿ, ಈ ಕಾಗದ ಬರೆದಿರೋ ವ್ಯಕ್ತಿ ಯಾರು ಅಂತ ಪತ್ತೆ ಹಚ್ಚಲಿ. ಆದ್ರೆ, ಈ ವಿಷಯ ಹೊರಗೆಲ್ಲೂ ಬರಬಾರದು. ಆ ಮಾತನ್ನ ಸ್ಪಷ್ಟವಾಗಿ ಹೇಳಿ ಪಿಂಟೋಗೆ. ಮತ್ತೆ, ಯಾವುದೇ ಕಾರಣಕ್ಕೂ, ನನ್ನ ಹೆಸರು ಹೊರಗೆ ಬರೋದು ಬೇಡ. ಗೊತ್ತಾಯ್ತಲ್ವಾ?”

ತಮಗಾಗುತ್ತಿದ್ದ ಆಶ್ಚರ್ಯವನ್ನು ತಡೆ ಹಿಡಿದು ನುಡಿದರು ಲಾಯರ್ ರಾಮಯ್ಯ. "ಸಾರ್, ನೀವೇನ್ ಯೋಚ್ನೆ ಮಾಡ್ಬೇಡಿ; ನೀವ್ ಹೇಳಿದ ಹಾಗೆ ಎಲ್ಲ ನಡೆಯತ್ತೆ. ಪಿಂಟೋ ತುಂಬಾ ನಂಬಿಕಸ್ತ ಮತ್ತೆ ಒಳ್ಳೆ ಚುರುಕು ಬುದ್ದಿಯವನು. ಆದ್ರೇ, ನೀವು 15 ರ ಒಳಗೆ ಈ ಕೆಲಸ ಆಗ್ಬೇಕು ಅಂತ ಅಂದ್ಕೊಂಡಿದೀರಾ? ಯಾಕಾಂದ್ರೆ, ಈ ಕೆಲಸಕ್ಕೆ ಏನಿಲ್ಲ ಅಂದ್ರು ಒಂದ್ 10 ದಿನಾನಾದ್ರೋ ಬೇಕಲ್ಲ ಸರ್?"

ಜಡ್ಜ್, ರಾಮಯ್ಯನವರ ಮುಖ ನೋಡುತ್ತಾ ಹೇಳಿದರು. "ಅವಶ್ಯಕತೆ ಬಂದರೆ, ತೀರ್ಪು ಪೋಸ್ಟ್ ಫೋನ್ ಮಾಡೋಣ. ಇನ್ನು 6 ದಿನಾ ಅಂತೂ ಇದೆಯಲ್ಲಾ? ಇವತ್ತಿನಿಂದಾನೇ ಕೆಲಸ ಶುರು ಮಾಡ್ಲಿ."

ಜಡ್ಜ್ ಮನೆಯಿಂದ ಹೊರಟ ರಾಮಯ್ಯ, ಆಟೋದಲ್ಲಿ ಕುಳಿತೊಡನೆ, ಪಿಂಟೋಗೆ ಫೋನ್ ಮಾಡಿ ಮನೆಗೆ ಬರ ಹೇಳಿದರು.


ಸುಮಾರು 12 ಘಂಟೆಗೆ ಬಂದ ಪಿಂಟೋ ಯಾವ ಮಾತು ಆಡದೆ ರಾಮಯ್ಯ ಹೇಳಿದ ಎಲ್ಲ ವಿಷಯ ಕೇಳಿ ಕೊನೆಗೆ ಮಾತನಾಡಿದ. "ಸಾರ್, ಈ ಕೆಲಸ ಬೇಗ್ ಆಗ್ಬೇಕು ಅಂದ್ರೆ, ಇನ್ನೊಬ್ಬ ಸಹಾಯಕ್ಕೆ ಬೇಕಾಗಬಹುದು. ನೀವು ಯೋಚ್ನೆ ಮಾಡ್ಬೇಡಿ, ನನ್ನ ಬಂಟ ಒಬ್ಬ ಇದ್ದಾನೆ; ಅವ್ನ ಸಹಾಯ ತೊಗಂಡ್ ಕೆಲಸ ಮಾಡ್ತೀನಿ. ನೀವು ಇಷ್ಟು ವಿಶ್ವಾಸ, ನಂಬಿಕೆ ನನ್ನ ಮೇಲಿಟ್ಟಿದ್ದಕ್ಕೆ ತುಂಬಾನೇ ಥ್ಯಾಂಕ್ಸ್ ಸಾರ್. ಇನ್ನೊಂದ್ ವಿಷಯ ಸರ್. ನೀವು ಬೇರೆ ಯಾವುದಾದರೋ ನಂಬರ್ ಇದ್ರೆ ಕೊಡಿ; ನಿಮ್ಮ ಹೆಸ್ರಲ್ಲಿರೋ ಮೊಬೈಲ್ ಬೇಡ."

ರಾಮಯ್ಯ ತಮ್ಮ ಮಗನ ಹೆಸರಿನಲ್ಲಿದ್ದ ಇನ್ನೊಂದ್ ಮೊಬೈಲ್ ನಂಬರ್ ಕೊಟ್ಟು ಹೇಳಿದರು. "ಇದು ಎಕ್ಸ್ಟ್ರಾ ಮೊಬೈಲ್ ಯಾರಿಗೂ ಈ ನಂಬರ್ ಕೊಟ್ಟಿಲ್ಲ. ಈ ಮೊಬೈಲ್ ನನ್ನ ಹತ್ರನೇ ಇರತ್ತೆ. ಸರಿನಾ?"

ಪಿಂಟೋ ರಾಮಯ್ಯ ಕೊಟ್ಟ ನಂಬರ್ ತನ್ನ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು, ರಾಮಯ್ಯನವರಿಗೆ ಸಲ್ಯೂಟ್ ಹೊಡೆದು ಹೊರಟ.


ಪಿಂಟೋ ಹೇಳಿದ್ದಂತೆ, ಅವನ ಅಸಿಸ್ಟೆಂಟ್ ಶೈಲೇಶ್ ಮೈಸೂರ್ ಕಡೆ ಹೊರಟಮಹದೇವಪ್ಪ ನ ಹೆಂಡತಿ ಹಾಗು ಮಕ್ಕಳ ಬಗ್ಗೆ ತಿಳಿದುಕೊಳ್ಳಲಿಕ್ಕೆ.


ಇತ್ತ, ಪಿಂಟೋ ಎರ್ನಾಕುಲಂ ಬಸ್ ಹತ್ತಿ, ರಾತ್ರಿಯಿಡೀ ಪ್ರಯಾಣ ಮಾಡಿ ತಲುಪಿದವನಿಗೆ ಎರ್ನಾಕುಲಂ ನಲ್ಲಿ ಕಾದಿತ್ತು ಒಂದು ಸರ್ಪ್ರೈಸ್! 


ಬಸ್ಸಿನಿಂದ ಇಳಿಯುತ್ತಿದ್ದಂತೆ ಅವನ ಹೆಸರು ಹಿಡಿದು ಯಾರೋ ಕೂಗಿದಂತಾಯಿತು. ನೋಡಿದರೇ, ಕಾನ್ಸ್ಟೇಬಲ್ ಈರಣ್ಣ!

"ಏನ್ ಪಿಂಟೋ ಸಾರ್? ಇಷ್ಟು ದೂರ ಬಂದಿದೀರ?" ಮುಖವನ್ನು ಅನುಮಾನದಿಂದ ನೋಡುತ್ತಾ ಕೇಳಿದ ಈರಣ್ಣ.

ಈರಣ್ಣ ಕೇವಲ ಕಾನ್ಸ್ಟೇಬಲ್ ಆದರೂ, ಮೇಲಿನ ತನಕ ತನ್ನ ಪ್ರಾಬಲ್ಯವನ್ನು ಬೆಳಿಸಿಕೊಂಡಿದ್ದ. ಮೇಲಿನ ಆಫೀಸರ್ಗಳಿಗೆ ಇವನೇ ಕಿವಿ ಹಾಗು ಕಣ್ಣು; ಡಿಪಾರ್ಟ್ಮೆಂಟ್ ಒಳಗಾಗಲಿ ಅಥವಾ ಹೊರಗಾಗಲಿ ಈರಣ್ಣನ ಗಮನಕ್ಕೆ ಬಾರದ ವಿಷಯಗಳೇ ಇರಲಿಲ್ಲ. ಇನ್ಕಮ್ ಟ್ಯಾಕ್ಸ್ ರೇಡ್ ಇರಬಹುದು ಅಥವಾ ಡಿಪಾರ್ಟ್ಮೆಂಟ್ ಇನ್ವೆಸ್ಟಿಗೇಷನ್; ಮೊದಲು ಸುದ್ದಿ ಗೊತ್ತಾಗುತ್ತಿದ್ದದ್ದು ಈರಣ್ಣನಿಗೆ!

ಇದನ್ನು ತಿಳಿದಿದ್ದ ಪಿಂಟೋ ಹುಷಾರಾಗಿ ಮಾತನಾಡಿದ; "ಒಹ್ ನೀನಾ ಈರಣ್ಣ? ನನ್ನ ತುಂಬಾ ದೂರದ ಸ್ನೇಹಿತರ ಮಗನ ಮದುವೆಗೆ ಬಂದಿದೀನಿ. ಮತ್ತೆ ನೀನು?"

"ಅಯ್ಯೋ... ನಿಮಗೇ ಗೊತ್ತಲ್ಲ ಪಿಂಟೋ ಸಾರ್? ನಮ್ಮ ನವೀನ ಕೃಷ್ಣ ಲಾಯರ್ ಸಾಹೇಬರಿಗೆ ಸ್ವಲ್ಪ ಅರ್ಜೆಂಟ್ ಆಗಿ ಏನೋ ಬೇಕಾಗಿತ್ತು ಅದಿಕ್ಕೆ ಅವ್ರು ನಮ್ಮ ಕಮಿಷನರ್ ಸಾಹೆಬ್ರುಗೆ ಹೇಳಿ ಈರಣ್ಣನೇ ಈ ಕೆಲಸ ಮಾಡ್ಬೇಕು ಅಂತ ಹೇಳಿದ್ರಂತೆ. ಅದಿಕ್ಕೆ ಬಂದಿದ್ದೆ. ಇವತ್ತು ರಾತ್ರಿ ಬಸ್ ನಲ್ಲಿ ವಾಪಸ್ ಹೋಗ್ಬೇಕು." ಪಿಂಟೋ ಮುಖವನ್ನೇ ನೋಡುತ್ತಾ ನುಡಿದ ಈರಣ್ಣ.

ಸಧ್ಯ ಪ್ರಾಣಿ ತೊಲಗತ್ತಲ್ಲ. ಶ್ವಾನ ಮುಂಡೇದು ಅಂತ ಮನಸ್ಸಲ್ಲೇ ಬೈಕೊಂಡು ಮೇಲೆ ಮುಗುಳುನಗೆ ತೋರುತ್ತಾ ಹೇಳಿದ ಪಿಂಟೋ. " ಒಹ್? ಹಾಗೇನು. ನಾನು ಇನ್ನು ಎರಡು ದಿನ ಇಲ್ಲಿದ್ದು ಆಮೇಲೆ ಬೆಂಗಳೂರಿಗೆ ಬರ್ತೀನಿ. ಅಲ್ಲೇ ಸಿಗೋಣ. ಓಕೇನ?"

ತಿರುಗಿ ನೋಡದೆ ಹೊರಟ ಪಿಂಟೋ.

ಈರಣ್ಣ ಪಿಂಟೋ ಹೋದ ದಿಕ್ಕಿನತ್ತ ನೋಡಿ ತನಗೆ ತಾನೇ ಮಾತನಾಡಿಕೊಂಡ, ಅನುಮಾನದಿಂದ. ಮದುವೇನಾ? ಯಾವುದೂ ಇಂಪಾರ್ಟೆಂಟ್ ಕೆಲಸ ಇರಬೇಕು; ಯಾವುದಕ್ಕೂ ಸಾಹೇಬ್ರಿಗೆ ಒಂದ್ ಮಾತ್ ಹೇಳಿಬಿಡೋಣಾ. ತನ್ನ ಜೋಬಿನಿಂದ ಮೊಬೈಲ್ ಹೊರತೆಗೆದು ಕಮಿಷನರ್ಗೆ ಫೋನ್ ಮಾಡಿದ ಈರಣ್ಣ.


ಇತ್ತ, ಮೈಸೂರಿಗೆ ಬಂದ ಶೈಲೇಶ್ಗೆ ಮಹದೇವಪ್ಪ ಕೆಲಸ ಮಾಡುತಿದ್ದ ತೋಟ ಹುಡುಕಲು ಅಷ್ಟೇನು ಕಷ್ಟವಾಗಲಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೆ ತನಗೆ ತಿಳಿದ ಬುದ್ದಿಯಲ್ಲವನ್ನು ಖರ್ಚು ಮಾಡಿ, ಇದ್ದ ಬದ್ದ ಕಾಂಟಾಕ್ಟ್ ಗಳನ್ನೂ ಗೋಳು ಹೊಯ್ದಕೊಂಡ ಮೇಲೆ ತಿಳಿದ ವಿಷಯ ಕೇಳಿ ಶೈಲೇಶ್ ದಿಗ್ಬ್ರಮೆ ಗೊಂಡ.

ರಾತ್ರಿ ಎಷ್ಟು ಹೊತ್ತಾದರೋ ಪರವಾಗಿಲ್ಲ ಕಾಲ್ ಮಾಡಿ ವಿಷಯ ತಿಳಿಸು ಎಂದು ಹೇಳಿದ್ದಾ ಪಿಂಟೋ. ಹಾಗಾಗಿ, ರಾತ್ರಿ 11ರ ಹೊತ್ತಿಗೆ ಶೈಲೇಶ್ ಪಿಂಟೋಗೆ ಫೋನ್ ಮಾಡಿದ.


"ಏನ್ ಶೈಲೇಶ್? ಏನಾದರೂ ಸುಳಿವು ಸಿಕ್ತ?" ಕೇಳಿದ ಪಿಂಟೋ.

ಏನು ಹೇಳಬೇಕೆಂದು ತಿಳಿಯದ ಶೈಲೇಶ್ ಕೆಲವು ಹೊತ್ತು ಸುಮ್ಮನಿದ್ದವನು ನಿಧಾನವಾಗಿ ಹೇಳಿದ.

"ಅಣ್ಣ, ವಿಷ್ಯ ಸ್ವಲ್ಪ ಗಂಭೀರವಾಗಿದೆ. ಮಹದೇವಪ್ಪನ ಹೆಂಡತಿ ಪಕ್ಕದಲ್ಲೇ ಇರೋ ಪಾಂಡವಪುರದಲ್ಲಿ ಅವಳ ಅಕ್ಕನ ಮನೆಯಲ್ಲಿ ಇದ್ದಾಳೆ ಆದರೇ....." ಮುಂದೆ ಹೇಳಲಾಗದೆ ಮೌನ ತಾಳಿದ ಶೈಲೇಶ್. ಉತ್ತರ ಬರದಿದ್ದನ್ನು ಕಂಡ ಪಿಂಟೋ ಬೆಸರಿಂದ ಕೇಳಿದ. " ಏನಾಯ್ತೂ? ಹಾಗ್ಯಾಕ್ ಸುಮ್ನೆ ಆಗ್ಬಿಟ್ಟೆ? ಮುಂದೆ ಹೇಳು."

 "ಅಣ್ಣ,ಮಹದೇವಪ್ಪನ ಮಗಳು, ಆ ಮಹದೇವಪ್ಪ ಅರೆಸ್ಟ್ ಆದಾಗಿಂದ ಎಲ್ಲೋ ಹೋಗಿದ್ದಾಳಂತೆ.... ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಯಾರು ಮಾತಾಡಕ್ಕೂ ರೆಡಿ ಇಲ್ಲ.”

ಪಿಂಟೋ ಕೆಲ ಕಾಲ ಸುಮ್ಮನಿದ್ದವನು ಯೋಚಿಸಿ ಹೇಳಿದ. "ಶೈಲೇಶ್, ನೀನು ಇನ್ನು ಎರಡು ದಿನ ಮೈಸೂರ್ನಲ್ಲೇ ಇರು. ನನ್ನ ಕೆಲವು ಕಾಂಟ್ಯಾಕ್ಟ್ಸ್ ಗಳಿದ್ದಾರೆ; ಹುಡುಕಿ ಅವರ ಅಡ್ರೆಸ್ ಕೊಡ್ತೀನಿ. ಅವ್ರು ಸಹಾಯ ಮಾಡ್ತಾರೆ. ಹೇಗಾದರೋ ಮಾಡಿ ಆ ಹುಡುಗೀನ ಪತ್ತೆ ಹಚ್ಬೇಕು."


ಎರ್ನಾಕುಲಂನಲ್ಲಿದ್ದ ಕೆಲವು ಕಾಂಟ್ಯಾಕ್ಟ್ಸ್ ಗಳನ್ನೂ ಪತ್ತೆ ಹಚ್ಚಿ, ಅವ್ರ ಮೂಲಕ ಪೋಸ್ಟ್ ಆಫೀಸ್ ಯಾವುದೆಂದು ಕಂಡುಹಿಡಿದು, ತನ್ನ ಹತ್ತಿರ ಇದ್ದ ಕವರ್ ತೋರಿಸಿದ ಪಿಂಟೋ. ಬಾಷೆಯ ಸಮಸ್ಯೆ ಇದ್ದುದರಿಂದ, ತನ್ನ ಸ್ನೇಹಿತ ಹರಿಗೆ ಸ್ವಲ್ಪ ಮಟ್ಟಿಗೆ ಸತ್ಯ ಹೇಳಿ ಒಲಿಸಿದ. ಹರಿ ಮಲಯಾಳಂ ಬಾಷೆಯಲ್ಲಿ ಕವರ್ ಯಾವ ಪೋಸ್ಟ್ ಆಫೀಸಿನಿಂದ ಬಂದಿರಬಹುದೆಂದು ತಿಳಿದುಕೊಂಡು ಪಿಂಟೋನನ್ನು ಕರೆದು ಕೊಂಡು ಎರ್ನಾಕುಲಂಗೆ ಸೇರಿದ ಪಕ್ಕದ ಕೊಚ್ಚಿನ್ಗೆ ಕರೆದುಕೊಂಡು ಹೋದ.


ಕೊಚ್ಚಿನ್ ಪೋಸ್ಟ್ ಆಫೀಸ್ನಲ್ಲಿ ಪೋಸ್ಟ್ಮನ್ ಪತ್ರ ನೋಡಿ ಅದು ಅದೇ ಪೋಸ್ಟಾಫಿಸಿನಿಂದು ಅಂತ ಹೇಳಿದರು ಸಹ, ಕಳ್ಸಿದವ್ರು ಯಾರೆಂದು ತಿಳಿಯಲು ಸಾಧ್ಯವಾಗಲಿಲ್ಲ.

ಬೇಸರದಿಂದ ಪಿಂಟೋ ಹೊರಗೆ ಬಂದವನು, ಅಲ್ಲಿ ಹೊರಗಡೆ ಇದ್ದ ಪೋಸ್ಟ್ ಬಾಕ್ಸ್ ಹತ್ತಿರ ನಿಂತು ಅನುಮಾನಾಸ್ಪದವಾಗಿ ಪೋಸ್ಟ್ಮಾಡಲು ಹಿಂದೆ ಮುಂದೆ ನೋಡುತ್ತಿದ್ದ ವ್ಯಕ್ತಿಯನ್ನು ನೋಡಿ ಹತ್ತಿರ ಹೋದೊಡನೇ, ಆ ವ್ಯಕ್ತಿ ಅಲ್ಲಿಂದ ಓಡ ತೊಡಗಿದ.

ಹಿಂಬಾಲಿಸಿ ಹೋಗಿ ಆ ವ್ಯಕ್ತಿಯನ್ನು ಹಿಡಿದು ತನ್ನ ಸ್ನೇಹಿತ ಹರಿ ಮುಖಾಂತರ ಕೇಳಿದಾಗ ಪಿಂಟೋಗೆ ಆಘಾತ ಕಾದಿತ್ತು.

ಲಾಯರ್ ರಂಗಯ್ಯ ತಮ್ಮ ಇನ್ನೊಂದು ಮೊಬೈಲ್ ರಿಂಗ ಆದ ಕೂಡಲೇ ರೂಮಿನ ಬಾಗಿಲು ಹಾಕಿದರು. ಫೋನ್ ತೆಗೆದೊಡನೆ ಪಿಂಟೋ ಧ್ವನಿ ಕೇಳಿ ರಂಗಯ್ಯ ನಿಟ್ಟುಸಿರು ಬಿಟ್ಟು ಕೇಳಿದರು. " ಹೇಳು ಪಿಂಟೋ ಸುಳಿವು ಸಿಕ್ಕಿತ"

ಪಿಂಟೋ ಏನು ಹೇಳಬೇಕೆಂದು ತೋಚದೆ ಸುಮ್ಮನಿದ್ದವನು, ಸುಧಾರಿಸಿಕೊಂಡು ನುಡಿದ.

“ಸಾರ್, ಮೊದಲಿಗೆ, ಆಮಹದೇವಪ್ಪನ ಹೆಡತಿಯೇನು ಪಂಡವಪುರದಲ್ಲಿದ್ದಾಳಂತೆ. ಆದರೆ...... ಅವಳ ಮಗಳು ಮಾತ್ರ ಮಹದೇವಪ್ಪ ಅರೆಸ್ಟ್ ಆದ ದಿನದಿಂದ ಪತ್ತೇನೆ ಇಲ್ವಂತೆ. ಇದು ಮೈಸೂರ್ ವಿಷಯ.

ಇಲ್ಲಿ ಎರ್ನಾಕುಲಂ ನಲ್ಲಿ ಆ ಪತ್ರ ಬರೆದಿರೋ ವ್ಯಕ್ತಿ ಯಾರು ಅಂತ ಗೊತ್ತಾಯ್ತು - ಒಬ್ಬ 8 ವರ್ಷದ ಹುಡುಗ.

ಪೋಸ್ಟ್ ಮಾಡಿದ್ದು ಅವನ ತಂದೆ. ಇದು ತುಂಬಾನೇ ಜಟಿಲವಾದ ವಿಷಯ; ಯಾಕಂದ್ರೆ, ಆ ಹುಡುಗನಿಗೆ ಮಲಯಾಳಂ ಮಾತಾಡಕ್ಕೆ ಬರಲ್ಲ. ಆದ್ರೆ, ಮೂರ್ಹೊತ್ತು ಪೇಪರ್ ಪೆನ್ ಹಿಡ್ಕೊಂಡು ಚಿತ್ರ ಬಿಡಿಸ್ತಿರ್ತಾನೆ ಅಂತ ಅವರಪ್ಪ ಹೇಳಿದ್ರು.


ಜಡ್ಜ್ ಸೀತಾರಾಮಯ್ಯನವರ ಹೆಸರಿಗೆ ಪತ್ರ ಬರೆದವನು ಅವನೇ.


ಸಾರ್ ನಾನು ಹೋಗಿ, ನನ್ನ ಒಬ್ಬ ಮಲಯಾಳೀ ಸ್ನೇಹಿತನ ಮುಖಾಂತರ ಆ ಹುಡುಗನ ಅಪ್ಪನ ಹತ್ತಿರ ಮಾತನಾಡಿದಾಗ ಗೊತ್ತಾಯ್ತು ಆ ಹುಡುಗನಿಗೆ ಏನೋ ಪ್ರಾಬ್ಲಮ್ ಇದೆ ಅಂತ.


ಅವರಪ್ಪ ನನ್ನೊಟ್ಟಿಗೆ ಮಾತನಾಡುತ್ತಿದ್ದಾಗ, ಆ ಹುಡುಗ ಬಂದವನೇ ನನ್ಹತ್ರ ಏನು ಹೇಳಿದ. ನನಗೆ ಅರ್ಥ ಆಗಲಿಲ್ಲ. ತಕ್ಷಣ ಒಂದು ಪೇಪರ್ನಲ್ಲಿ ಕಾಡಿನ ಚಿತ್ರ ಬರೆದುಕೊಟ್ಟ; ಹಾಗೆ ಕೆಳೆಗೆ ಬೇರೆ ಯಾವುದೋ ಬಾಷೆಯಲ್ಲಿ ಏನೋ ಬರ್ದಿದ್ದಾನೆ. ಅವತ್ತು ನೀವು ಹೇಳಿದ್ರಲ್ಲ ಮರಾಠಿ ಅಂತ. ಬಹುಶ ಇದು ಅದೇ ಬಾಷೆ ಇರಬಹುದು. ಅವ್ನ ಮಾತು ಇಲ್ಲಿ ಯಾರಿಗೂ ಅರ್ಥ ಆಗಲ್ಲ. ಬಹುಶ ಅದು ಕೂಡ ಮರಾಠಿನೇ ಇರಬಹುದು. ಆ ಹುಡುಗನ ಅಪ್ಪ ತುಂಬಾ ಹೆದರ್ಕೊಂಡು ಯಾರಿಗೂ ವಿಷ್ಯ ಹೇಳದೇ, ಮುಚ್ಚಿಟ್ಟಿದ್ದಾರೆ.

ನಿಮಗೆ ಆ ಚಿತ್ರ ವಾಟ್ಸಾಪ್ ಮಾಡ್ತಾ ಇದ್ದೀನಿ. ಅದರರ್ಥ ಏನು ಅಂತ ನೀವು ತಿಳಿಸಿದರೆ, ಮುಂದೆ ಏನ್ ಮಾಡ್ಬೇಕು ಅಂತ ಯೋಚ್ನೆ ಮಾಡೋಣ."

ಫೋನ್ ಡಿಸ್ಕನೆಕ್ಟ್ ಮಾಡಿ, ಬಿಳೀ ಹಾಳೆಯಲ್ಲಿ ಬರೆದಿದ್ದ ಚಿತ್ರವೊಂದನ್ನು ರಾಮಯ್ಯನವರ ಫೋನ್ ಗೆ ಕಳುಹಿಸಿದ ಪಿಂಟೋ.

ಚಿತ್ರವನ್ನು ನೋಡಿ ಏನು ಅರ್ಥವಾಗದೆ ರಾಮಯ್ಯ ಜಡ್ಜ್ ಸೀತಾರಾಮಯ್ಯನವರ ನಂಬರ್ಗೆ ಫೋನ್ ಮಾಡಿದರು.

ಜಡ್ಜ್ ಸೀತಾರಮಯ್ಯ ಲಾಯರ್ ರಾಮಯ್ಯನವರ ಮಾತನ್ನು ಕೇಳಿ ಏನು ತೋಚದೆ ಕೆಲ ಕಾಲ ಕುರ್ಚಿಯ ಮೇಲೆ ಕುಳಿತರು. ಪೋಸ್ಟ್ಮನ್ ಮರಾಠಿ ಎಂದು ಓದಿ ಹೇಳಿದ್ದನು ನೆನೆಸಿಕೊಂಡು, ಪೋಸ್ಟ್ ಆಫೀಸಿಗೆ ಫೋನ್ ಮಾಡಿದರು ಜಡ್ಜ್ ಸೀತಾರಾಮಯ್ಯ.

ಪೋಸ್ಟ್ಮಾಸ್ಟರ್ ಜಡ್ಜ್ ಮಾತು ಕೇಳಿ ಇಕ್ಬಾಲ್ನನ್ನು ಕರೆದು ತಕ್ಷಣ ಜಡ್ಜ್ ಮನೆಗೆ ಹೋಗಲು ಹೇಳಿದರು.

ಇಕ್ಬಾಲ್ ಬಂದವನೇ ಮೊಬೈಲ್ನಲ್ಲಿದ್ದ ಚಿತ್ರ ನೋಡಿ, ಕೆಳಗೆ ಬರೆದಿದ್ದ ಅಕ್ಶರಗಳ್ಳನ್ನು ಓದಿ ಹೇಳಿದ "ಸಾರ್, ಇಲ್ಲಿ, ‘ನಾನು ಸತಾರದ ಕಾಡಿನಲ್ಲಿದ್ದೇನೆ’ ಅಂತ ಬರೆದಿದೆ." ಎಂದು ಹೇಳಿದ.

ರಾಮಯ್ಯನವರ ನಂಬರ್ಗೆ ಫೋನ್ ಮಾಡಿ ಕೇಳಿದರು ಜಡ್ಜ್ "ಆ ಹುಡುಗ ಏನು ಮಹಾರಾಷ್ಟ್ರದವನ ಸ್ವಲ್ಪ ಕೇಳಿ? ಹಾಗೆ ಅವನ ಹೆಸರು ಏನು ಅಂತಾನೂ ಕೇಳಿ"

ಜಡ್ಜ್ ಹೇಳಿದಂತೆ ರಾಮಯ್ಯ ಪಿಂಟೋಗೆ ಫೋನ್ ಮಾಡಿ ಕೇಳಿದರು; ಪಿಂಟೋ ಹೇಳಿದ್ದು ಕೇಳಿ ರಾಮಯ್ಯ ದಿಕ್ಕು ತೋಚದೆ ನಿಂತರು.

ಸ್ವಲ್ಪ ಹೊತ್ತು ಸುಧಾರಿಸಿಕೊಂಡು, ಜಡ್ಜ್ ಸೀತಾರಾಮಯ್ಯನವರಿಗೆ ಮತ್ತೆ ಫೋನ್ ಮಾಡಿದರು ಲಾಯರ್ ರಾಮಯ್ಯ.

"ಸಾರ್, ಆ ಹುಡುಗ ಹುಟ್ಟಿದ್ದು ಕೊಚ್ಚಿನ್ನಲ್ಲೆ. ಅವನ ತಂದೆ ಮಲಯಾಳೀ. ಮನೆಯಲ್ಲಿ ಯಾರಿಗೂ ಮರಾಠಿ ಇರಲಿ, ಮಲಯಾಳಂ ಬಿಟ್ಟು ಬೇರೆ ಬಾಶೆ ಬರಲ್ವಂತೆ. ಆದರೇ, ಆ ಹುಡುಗ ಮಾತ್ರ ಬೇರೇನೇ ಬಾಷೆ ಮಾತಾಡ್ತಾನಂತೆ; ಬಹುಶ ಮರಾಠಿನೇ ಇರಬಹುದು ಅಂತ ಹೇಳಿದ ಪಿಂಟೋ.


ಆ ಹುಡುಗನ ಹೆಸರು, ಒಮ್ಮನ್ ಕುಟ್ಟಿ!!"


Rate this content
Log in

Similar kannada story from Drama