Vadiraja Mysore Srinivasa

Action Crime Thriller

3  

Vadiraja Mysore Srinivasa

Action Crime Thriller

ತೀರ್ಪಿನ ಆ ದಿನ

ತೀರ್ಪಿನ ಆ ದಿನ

8 mins
1.2K


 ಮೊದಲನೇ ಅಧ್ಯಾಯ – ಅಪೂರ್ಣ ಚಿತ್ರ


ಇಕ್ಬಾಲ್ ತನಗಾಗುತಿದ್ದ ಅಸಮಾಧಾನವನ್ನು ಬದಿಗಿಟ್ಟು, ಪತ್ರಗಳನ್ನೊಳಗೊಂಡ ದೊಡ್ಡ ಮೂಟೆಯನ್ನು ಟೇಬಲ್ ಮೇಲೆ ಸುರಿದು, ನಿಟ್ಟುಸಿರು ಬಿಡುತ್ತ, ವಿಂಗಡಣೆ ಮಾಡಲು ಶುರು ಮಾಡಿದ.


ಆ ಪೋಸ್ಟಾಫಿಸ್ನಲ್ಲಿ ಇಕ್ಬಾಲ್ನ ಹೊರತಾಗಿ ಮೂವರು ಪೋಸ್ಟ್ಮ್ಯಾನ್ಗಳಿದ್ದರೂ, ಇಬ್ಬರು ರಜೆಯಲ್ಲಿದ್ದರು ಮತ್ತೊಬ್ಬ, ಬೆಳೆಗಿನ ಡೆಲಿವರಿ ಮಾಡಲು ಹೋಗಿದ್ದ. ಬೆಟ್ಟದಂತಿದ್ದ ಪೋಸ್ಟ್ಗಳನ್ನು ಒಂದೊಂದಾಗಿ, ಪಿನ್ ಕೋಡ್ ನೋಡುತ್ತಾ, ಅಲ್ಲಿಟ್ಟಿದ್ದ ಬಾಸ್ಕೆಟ್ಗಳೊಳಗೆ ಹಾಕುತ್ತಿದ್ದ ಇಕ್ಬಾಲ್ ಇದ್ದಕಿದ್ದಂತೆ ಆ ವಿಚಿತ್ರವಾದ ಲಕೋಟೆಯನ್ನು ಕೈಯಲ್ಲಿ ಹಿಡಿದು ತಿರುಗಿಸಿ ನೋಡಿದ.


ಸ್ಟ್ಯಾಂಪ್ ಇರದ ಪತ್ರ ಅದು; ಮರಾಠಿ ಬಾಷೆಯಲ್ಲಿ ಅಡ್ರೆಸ್ ಬರೆದ್ದು ಮತ್ತುಷ್ಟು ಆಶ್ಚರ್ಯಕ್ಕೆ ಕಾರಣ ವಾಯಿತು; ಬೆಳೆಗಾಂವ್ನಲ್ಲಿ ಕೆಲವು ವರುಷ ಇದ್ದ ಇಕ್ಬಾಲ್ಗೆ ಮರಾಠಿ ಬಾಷೆ ಬರುತ್ತಿದ್ದುದರಿಂದ, ಅಡ್ರೆಸ್ ಓದಲು ಸಾಧ್ಯವಾಯಿತು.


ಅಡ್ರೆಸ್ ಓದುತ್ತಿದ್ದಂತೆ, ಇಕ್ಬಾಲ್ ಎದ್ದು ನಿಂತ


ಫ್ರಮ್ ಅಡ್ರೆಸ್ ಕೂಡ ಇರದಿದ್ದ, ಸ್ಟ್ಯಾಂಪ್ ಇಲ್ಲದಿದ್ದ ಮರಾಠಿ ಬಾಷೆಯಲ್ಲಿ ಅಡ್ರೆಸ್ ಬರೆದಿದ್ದ ಆ ಪತ್ರ ಬೇರೆ ಯಾರಿಗೂ ಅಲ್ಲದೇ, ಹೈ ಕೋರ್ಟ್ ಜಡ್ಜ್ , ಸೀತಾರಾಮಯ್ಯ ನವರ ಹೆಸರಿನದಾಗಿತ್ತು. ಇಕ್ಬಾಲ್ ಏನು ಮಾಡಲು ತೋಚದೆ ಕೆಲ ಸಮಯ ಹಾಗೆ ನಿಂತ.


ಪೋಸ್ಟ್ ಮಾಸ್ಟರ್ ತಮ್ಮ ಕೋಣೆಯಳೊಗೆ, ಟೆಲೆಫೋನ್ನಲ್ಲಿ ಯಾರೊಟ್ಟಿಗೂ ಮಾತನಾಡುತಿದ್ದರು. ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದ ಇಕ್ಬಲ್ನನ್ನ ನೋಡಿ, ಮಾತು ಮುಗಿಸಿ, ಏನೆಂಬಂತೆ ತಲೆ ಎತ್ತಿ ನೋಡಿದರು, ಪೋಸ್ಟ್ ಮಾಸ್ಟರ್.


ರಿಟೈರ್ ಆಗಲು ಕೇವಲ ಮೂರು ತಿಂಗಳು ಮಾತ್ರ ಉಳಿದಿತ್ತು, ಪೋಸ್ಟ್ಲ ಮಾಸ್ಟರ್ ಲಕ್ಷ್ಮೀಕಾಂತ್ಗೆ.

ಇಕ್ಬಾಲ್ ಕೈಯಲ್ಲಿದ್ದ ಲಕೋಟೆಯನ್ನು, ಅವರ ಮುಂದಿಟ್ಟ.


ತಮ್ಮ ಮುಂದಿದ್ದ ಲಕೋಟೆಯನ್ನು ತಿರುಗಿಸಿ ಮುರುಗಿಸಿ ನೋಡುತ್ತಾ, "ಅಲ್ಲಯ್ಯ, ಏನು ಮಾಡ್ತಾಇದ್ದೀಯ ನೀನು?, ಸುಮ್ನೆ ಕವರ್ ಮುಂದಿಟ್ಟರೆ ಏನರ್ಥ?" ತಲೆ ಕೆರೆದುಕೊಳ್ಳುತ್ತಾ ಹೇಳಿದರು, ಲಕ್ಷ್ಮಿಕಾಂತ್.

ಏನು ಹೇಳಲು ತೋಚದೆ ಪೋಸ್ಟ್ಮಾಸ್ಟರ್ ಮುಖವನ್ನೇ ನೋಡುತ್ತಾ ನುಡಿದ ಇಕ್ಬಾಲ್ . "ಸಾರ್, ಒಂದ್ ಪತ್ರ ಬಂದಿದೆ, ನಮ್ಮ ಹೈಟ್ ಕೋರ್ಟ್ ಜಡ್ಜ್ ಸಾಹೇಬ್ರ ಹೆಸರಲ್ಲಿ. ಆದ್ರೆ, ಅದಕ್ಕೆ ಸ್ಟ್ಯಾಂಪ್ ಇಲ್ಲ.... ಮತ್ತೇ.." ತಡವರಿಸುತ್ತ ನುಡಿದ ಇಕ್ಬಾಲ್ . "ಮರಾಠಿ ಭಾಷೇಲಿ ಅಡ್ರೆಸ್ ಬರ್ದಿದೆ."

"ಏನು? ಮರಾಠಿ ಭಾಷೇಲೇ? ಅಲ್ಲಯ್ಯ... ಒಂದಾ ಕನ್ನಡದಲ್ಲಿ ಬರೀಬೇಕು ಅಥವಾ... ಇಂಗ್ಲಿಷ್ ನಲ್ಲಿ... ಯಾರಯ್ಯ ಅದು ಮರಾಠಿಲೀ ಬರೆದಿರುವರು? ಹೌದು, ನಿಂಗ್ಹ್ಯಾಗಯ್ಯಾ ಗೊತ್ತಾಯ್ತು ಅದು ಮರಾಠಿ ಅಂತ?" ಆತಂಕದಿಂದ ಕೇಳಿದರು ಪೋಸ್ಟ್ ಮಾಸ್ಟರ್ ಸಾಹೇಬ್ರು.


"ಸಾರ್, ಬೆಳಗಾವಿಯಲ್ಲಿ ಕೆಲವು ವರ್ಷ ಕೆಲಸ ಮಾಡಿ ನಾನು ಬೆಂಗಳೂರಿಗೆ ಬಂದಿರೂದು. ಅಲ್ಲಿಗೆ ತುಂಬಾ ಮರಾಠಿ ಪತ್ರಗಳು ಬರ್ತಾ ಇದ್ವು. ಸ್ನೇಹಿತರಿಂದ ನಾನು ಸ್ವಲ್ಪ ಬಾಷೆ ಕಲಿತುಕೊಂಡೆ. ಸಾರ್ ಅಷ್ಟೇ ಅಲ್ಲ.... ಇನ್ನು ವೊಂದು ವಿಚಿತ್ರ ವಿಷ್ಯ ಅಂದ್ರೆ, ಫ್ರಮ್ ಅಡ್ರೆಸ್ ಇಲ್ಲ ಆದ್ರೆ, ಪೋಸ್ಟ್ ಆಫೀಸ್ ಸ್ಟ್ಯಾಂಪ್ ನೋಡಿದ್ರೆ, ಇದು ಎರ್ನಾಕುಲಂ, ಕೇರಳ ಇಂದ ಬಂದಿರು ಹಾಗಿದೆ. ಸಾರ್, ಅಷ್ಟೇ ಅಲ್ಲ... ಆ ಅಡ್ರೆಸ್ ಪಕ್ಕದಲ್ಲಿ ನೋಡಿ ಏನಿದೆ ಅಂತ?"


ಲಕ್ಷ್ಮಿಕಾಂತ್ ಏನು ತೋಚದೆ, ಆ ಕವರ್ ತಿಗುಗಿಸಿ ಮುರುಗಿಸಿ ಅಡ್ದ್ರೆಸ್ ಇದ್ದೆಡೆ ನೋಡಿ, ಘಾಬರಿಯಿಂದ ಎದ್ದು ನಿಂತರು.


ಮರಾಠಿ ಬಾಷೆಯಲ್ಲಿ ಬರೆದಿದ್ದ ಹೆಸರಿನ ಪಕ್ಕದಲ್ಲಿ, ಜಡ್ಜ್ ವೇಷ ಕಾಕಿಕೊಂಡಿದ್ದ ವ್ಯಕ್ತಿಯ ಚಿತ್ರ ಬಿಡಿಸಲಾಗಿತ್ತು!

ಕವರ್ ಬೆಳಕಿಗೆ ಹಿಡಿದು ನೋಡಿದರು. ಅದು ಬೆಳೀ ಬಣ್ಣದ ಕವರ್ ಹಾಗಾಗಿ, ಒಳಗೆ ಇದ್ದ ಒಂದೇ ಶೀಟ್ ಪತ್ರ ಮಾಡಿಸಿಟ್ಟಿದ್ದಾದರು, ಒಳಗೇನಿದೆಯೆಂದು ಸ್ವಲ್ಪ ಮಟ್ಟಿಗೆ ಕಾಣುತಿತ್ತು; ನೋಡಿದ ಲಕ್ಷ್ಮಿಕಾಂತ್ ಹೌಹಾರಿದರು.

ಒಳಗೆ ಇಟ್ಟಿದ್ದ ಪತ್ರದಲ್ಲಿ ಅಕ್ಷರಗಳೇನು ಇರಲಿಲ್ಲ; ಬದಲಿಗೆ, ಯಾವುದೋ, ಚಿತ್ರ ಬಿಡಿಸಿದಂತಿತ್ತು!

ಸಮಸ್ಯೆ, ಜಟಿಲವಾಗಿದೆಯೆಂದು ತಿಳಿದು, ಲಕ್ಷ್ಮಿಕಾಂತ್, ಒಂದು ನಿರ್ಧಾರಕ್ಕೆ ಬಂದವರಂತೆ ನಿಟ್ಟುಸಿರು ಬಿಡುತ್ತ, ಕುರ್ಚಿಯ ಮೇಲೆ ಕುಳಿತು, ಇಕ್ಬಾಲ್ ಕಡೆ ತಿರುಗಿ ಹೇಳಿದರು.


"ಒಂದ್ ಕೆಲಸ ಮಾಡು, ನೀನೆ ಜಡ್ಜ್ ಮನೆಗೆ ಡೆಲಿವರಿ ಮಾಡಿ ಬಾ. ಯಾಕೋ ವಿಚಿತ್ರವಾಗಿದೆ ಅಂತ ಅನ್ನಿಸ್ತಾ ಇದೆ. ಆಮೇಲೆ ನಮ್ಮ ಮೇಲೆ ಯಾವುದೇ ದೂರು ಬರಬಾರದು."


ಇಕ್ಬಾಲ್ ತಲೆಯಾಡಿಸುತ್ತಾ, ಪತ್ರವನ್ನು ತನ್ನ ಬ್ಯಾಗಿನಲ್ಲಿಟ್ಟುಕೊಂಡು, ಉಳಿದ ಪತ್ರಗಳನ್ನು ಜೋಡಿ ಕೊಂಡು, ಹೊರಗೆ ಬಂದವನೇ, ತನ್ನ ಬೈಕ್ ಸ್ಟಾರ್ಟ್ ಮಾಡಿ, ಜಡ್ಜ್ ಸೀತಾರಾಮಯ್ಯನವರ ಮನೆ ಕಡೆ ನಡಿಸಿದ.

ಜಡ್ಜ್ ಸೀತಾರಾಮಯ್ಯ, ಕೇವಲ ಕರ್ನಾಟಕ ಮಾತ್ರವಲ್ಲದೆ, ಇಡೀ ದೇಶದಲ್ಲೇ ಹೆಸರು ಮಾಡಿರುವ ಹೈ ಕೋರ್ಟ್ ಜಡ್ಜ್; ಅವರು ತೀರ್ಪು ನೀಡಿರುವ ಒಂದೇ ಒಂದು ಕೇಸು ಕೂಡ, ಸುಪ್ರೀಂ ಕೋರ್ಟ್ನಲ್ಲಿ ಅವರ ವಿರುದ್ಧವಾಗಿ ಹೋಗಿದ್ದೆ ಇಲ್ಲ.


55 ವರ್ಷದ 6 ಅಡಿ ಎತ್ತರದ ಆಜಾನು ಭಾಹು ಸೀತಾರಾಮಯ್ಯನವರನ್ನು ಕಂಡರೆ, ವಕೀಲರುಗಳು ನಡುಗುತ್ತಿದ್ದರು. ಬಹಳ ನಿಷ್ಠೆ ಹಾಗು ಪ್ರಾಮಾಣಿಕತೆಗೆ ಹೆಸರಾಗಿದ್ದ ಅವರು, ಕೆಲವು ತಿಂಗಳಿಂದ ನಡೆಯುತ್ತಿದ್ದ ಒಂದು ಮರ್ಡರ್ ಕೇಸಿಗೆ ಕೆಲವೇ ದಿನಗಲ್ಲಿ ತೀರ್ಪು ಕೊಡಬೇಕಿತ್ತು.


ಮೈಸೂರ್ ಮರ್ಡರ್ ಕೇಸ್ ಎಂದೇ ಪ್ರಸಿದ್ಧವಾಗಿದ್ದ ಆ ಕೇಸಿನ ಪ್ರೊಸೆಕ್ಯುಷನ್ ಲಾಯರ್  ನವೀನ ಕೃಷ್ಣ ಕೇಸಿಗೆ ಸಂಬಂಧ ಪಟ್ಟ ಎಲ್ಲ ಸಾಕ್ಷಿಗಳನ್ನು ಸರಿಯಾಗಿ ತರಾಟೆ ತೆಗೆದುಕೊಂಡು, ಡಿಫೆನ್ಸ್  ಲಾಯರ್ ರಂಗಯ್ಯ ದಿಕ್ಕು ತೋಚದೇ ಶರಣಾಗತಿಗೆ ಬರುವಂತೆ ವಾದ ಮಂಡಿಸುತ್ತಿದ್ದರು.


ಮೊದಲಿಗೆ ಓಪನ್ ಅಂಡ್ ಶಟ್ ಕೇಸ್ ಎನ್ನುವಂತೆ, ಮರ್ಡರ್ ಅಚ್ಚುಸ್ಡ್, ಮಹದೇವಪ್ಪ ಮರ್ಡರ್ ಆಗಿದ್ದ ವ್ಯಕ್ತಿಯ ದೂರದ ಸಂಬಂಧಿಯಾಗಿದ್ದು, ಮರ್ಡರ್ ಮಾಡಿದ ವೇಳೆ ತಾನೆಲ್ಲಿದ್ದ ಎಂಬುದರ ಬಗ್ಗೆ ತನ್ನ ಪರವಾಗಿ ಯಾವ ಸಾಕ್ಷಿಗಳನ್ನು ಕೊಟ್ಟಿರಲಿಲ್ಲ. ಅಷ್ಟೇ ಅಲ್ಲದೇ, ಮರ್ಡರ್ ಗೆ ಬೇಕಾದ ಮೋಟಿವ್, ತಾನು ತೆಗೆದು ಸಾಲದ ಹಣವನ್ನು ಪಾವತಿ ಮಾಡಲಾಗದೇ, ಮರ್ಡರ್ ಆದ ವ್ಯಕ್ತಿಯನ್ನು ಬೆದರಿಸುತ್ತಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿತ್ತು. ಅದಕ್ಕೆ ಪೂರಕವಾಗಿ ಸಾಕ್ಷಿಗಳನ್ನು ಕೂಡ ಮುಂದಿಟ್ಟಿದ್ದರು ಡಿಫೆನ್ಸ್ ಲಾಯರ್. ಎಷ್ಟೋ ಕಠಿಣವಾದ ಕೇಸುಗಳಿಗೆ ಜಡ್ಜ್ ಆಗಿ ತೀರ್ಪು ನೀಡಿದ್ದ ಸೀತಾರಾಮಯ್ಯನವರಿಗೆ, ಇದು ಬಹಳ ಸುಲಭವಾದ ಕೇಸೆನ್ದಿನಿಸಿತಾದರೂ, ಎಲ್ಲೋ ಒಂದು ಕಡೆ ಅವರಿಗೆ ತಮಗೆ ತಿಳಿಯದ ಯಾವುದೂ ಆತಂಕ ಕಾಡುತ್ತಿತ್ತು. ಹಾಗಾಗಿ, ತೀರ್ಪು ಕೊಡಲು ಸಾಮಾನ್ಯಕ್ಕಿಂತ, ಸ್ವಲ್ಪ ಹೆಚ್ಚಿನ ಸಮಯವನ್ನೇ ತೆಗೆದು ಕೊಂಡಿದ್ದರು, ಜಡ್ಜ್.

ಬೆಳಗಿನ ನಿತ್ಯ ಕರ್ಮಗಳೊಂದಾದ, ಪೂಜೆಯನ್ನು ಮಾಡಿ, ಬ್ರೇಕ್ಫಾಸ್ಟ್ ಟೇಬಲ್ ಮುಂದೆ ಕುಳಿತಿದ್ದ ಸೀತಾರಾಮಯ್ಯ ನವರಿಗೆ ಸೆಕ್ಯೂರಿಟಿ ಗಾರ್ಡ್ ಬಂದು ದೂರ ನಿಂತು, ಪೋಸ್ಟ್ ಮ್ಯಾನ್ ಬಂದಿರುವುದಾಗಿ ತಲೆ ತಗ್ಗಿಸಿ ಹೇಳಿದ.

"ಅರೆ, ಪೋಸ್ಟ್ ಮ್ಯಾನ್ ಬಂದರೆ, ಪೋಸ್ಟ್ ಇಸ್ಕೊಂಡು ಕಳಿಸುವುದು ತಾನೇ? ಮತ್ತೇ, ನನ್ನ ಹತ್ತಿರ ಬಂದು ಹೇಳುವುದಾದರೋ ಏಕೆ?" ತಮಗಾಗುತಿದ್ದ ಬೇಸರವನ್ನು ತಡೆ ಹಿಡಿಯುತ್ತಾ ಹೇಳಿದರು ಸೀತಾರಾಮಯ್ಯ.

"ಸಾರ್, ತಮ್ಮನು ನೋಡಿಯೇ ಪತ್ರ ಕೊಡಬೇಕೆಂದು ಹೇಳಿದ ಪೋಸ್ಟ್ ಮ್ಯಾನ್. ಅರ್ಜೆಂಟ್ ಅಂತ ಕೂಡ ಹೇಳಿದ, ಅದಿಕ್ಕೇ......" ತಡವರಿಸುತ್ತ ಹೇಳಿದ ಸೆಕ್ಯೂರಿಟಿ.

ಪೇಪರ್ ಬದಿಗಿಟ್ಟು ನುಡಿದರು, ಸೀತಾರಾಮಯ್ಯ.

"ಸರಿ, ಬರಲು ಹೇಳು. ಏನೋ ಇಂಪಾರ್ಟೆಂಟ್ ಇರಬೇಕು."

ಒಳಗೆ ಬಂದು ನಿಂತ ಪೋಸ್ಟ್ಮನ್ ಇಕ್ಬಾಲ್ ಜಡ್ಜ್ ಮುಂದೆ ತಲೆ ತಗ್ಗಿಸಿ ನಿಂತು ವಿನಯ ದಿಂದ ನುಡಿದ. "ಸಾರ್ ತಮಗೆ ಬೆಳಿಗ್ಗೆನೇ ಬಂದು ತೊಂದರೆ ಕೊಟ್ಟದ್ದಕೆ ಕ್ಷಮೆ ಇರಲಿ. ತಮ್ಮ ಹೆಸರಿನಲ್ಲಿ, ಒಂದು ವಿಚಿತ್ರ ವಾದ ಪತ್ರ ಬಂದಿದೆ. ಅದು, ಅಡ್ರೆಸ್....." ಹೇಳುವುದನ್ನು ನಿಲ್ಲಿಸಿ, ತಲೆ ಎತ್ತಿ ನುಡಿದ ಇಕ್ಬಾಲ್ .

"ಸಾರ್ ಅಡ್ರೆಸ್ ಮರಾಠಿ ಭಾಷೆಯಲ್ಲಿದೆ."

ಆಶ್ಚರ್ಯ ಹಾಗು ಬೇಸರ ಎರಡರ ಭಾವನೆಯನ್ನು ತೋರಿಸುತ್ತ ನುಡಿದರು ಜಡ್ಜ್.

"ಏನು? ಮರಾಠಿ ಭಾಷೆಯಲ್ಲಿ ಅಡ್ರೆಸ್ ಬರೆದಿದ್ದಾರಾ? ಯಾರಯ್ಯ ಅದು ಪತ್ರ ಕಳಿಸಿರೋದು?"

ತಡವರಿಸುತ್ತ ನುಡಿದ ಇಕ್ಬಾಲ್

"ಸಾರ್, ಫ್ರಮ್ ಅಡ್ರೆಸ್ ಇಲ್ಲ."

"ವಾಟ್? ಫ್ರಮ್ ಅಡ್ರೆಸ್ ಇಲ್ಲದೇ ಇರು ಲೆಟರ್? ಏನ್ ಹೇಳ್ತಿದೀಯಾ ನೀನು ಗೊತ್ತಿದೀಯಾ?"

ಪತ್ರ ಮುಂದೆ ಹಿಡಿದು, ಜಡ್ಜ್ ಕೈಯಲ್ಲಿಡುತ್ತ ಹಿಂದೆ ಸರಿದ ಇಕ್ಬಾಲ್ .

ಪತ್ರವನ್ನು ಕೈಯಲ್ಲಿ ಹಿಡಿದು ಅಡ್ದ್ರೆಸ್ಸಿನ ಮುಂದೆ ಬರೆದಿದ್ದ ಚಿತ್ರವನ್ನು ನೋಡಿಯೇ ಆಶರ್ಯದಿಂದ ಇಕ್ಬಾಲ್ ಕಡೆ ನೋಡಿದರು ಜಡ್ಜ್.

ಗೊಂದಲಕ್ಕೊಳಗಾದ ಜಡ್ಜ್ ಸೀತಾರಾಮಯ್ಯ, ಏನು ಹೇಳಲು ತಿಳಿಯದೆ ಇಕ್ಬಾಲ್ ಕಡೆ ತಿರುಗಿ ಕೇಳಿದರು. "ಈ ಪತ್ರ ಮುಂಬಯಿಇಂದ ಬಂದಿದೆಯಾ?"

ತಲೆ ತಗ್ಗಿಸಿ ಉತ್ತರ ನೀಡಿದ ಇಕ್ಬಾಲ್

"ಇಲ್ಲ ಸಾರ್. ಎರ್ನಾಕುಲಂ ಪೋಸ್ಟ್ ಆಫೀಸ್ ಸ್ಟ್ಯಾಂಪ್ ಇದೆ. ಹಾಗಾಗಿ, ಇದು ಕೇರಳ ಇಂದ ಬಂದಿದೆ."

ಲಕೋಟೆಯನ್ನು ಒಡೆದು, ಒಳಗಿದ್ದ ಬೆಳೀ ಹಾಳೆಯನ್ನು ಹೊರ ತೆಗೆದು ನೋಡಿ, ಸಿಟ್ಟಿನಿಂದ ಹಾಗು ಆಶರ್ಯದಿಂದ ಇಕ್ಬಾಲ್ ಕಡೆ ದುರುಗುಟ್ಟಿ ನೋಡಿ ಕೇಳಿದರು ಜಡ್ಜ್. " ಏನಯ್ಯ ಇದು? ಏನು ಬೆಳಿಗ್ಗೆ ಬೆಳಿಗ್ಗೆ ಬೆಳಗ್ಗೇ ತಮಾಷೇನಾ? ಯಾವುದೂ ಮಗು ಬರೆದಿರೋ ಅಪೂರ್ಣ ಚಿತ್ರಾನಾ ತಂದು ನನ್ನ ಟೈಮ್ ವೇಸ್ಟ್ ಮಾಡ್ತಾ ಇದ್ದೀಯಾ?."

ಇಕ್ಬಾಲ್ ಗಾಭರಿಯಿಂದ, ಜಡ್ಜ್ ಕೈಯಲ್ಲಿ ಹಿಡಿದಿದ್ದ ಬಿಳೀ ಹಾಳೆಯತ್ತ ನೋಡಿದ.

ಯಾವುದೋ ವ್ಯಕ್ತಿಯ ಚಿತ್ರ ಇದ್ದಹಾಗಿತ್ತು; ಆದರೆ, ಕೇವಲ ಮೂಗು, ಗಲ್ಲ ಹಾಗು ಒಂದು ಕಣ್ಣು ಮಾತ್ರ ಬರೆದಿದ್ದ ಚಿತ್ರವಾಗಿತ್ತು.


ಏನೋ ಹೇಳಬೇಕೆಂದು ಹೊರಟವನಿಗೆ, ಪುಟದ ಕೊನೆಯಲ್ಲಿ ಬರೆದಿದ್ದ ಮರಾಠಿ ಶಬ್ದವನ್ನು ನೋಡಿ ಆಶ್ಚರ್ಯದಿಂದ ಬಾಯಿ ತೆರುದು ನಿಂತ.


ಏನನ್ನು ಹೇಳದ ಸುಮ್ಮನೆ ಬಾಯಿ ತೆರುದು ನಿಂತ ಇಕ್ಬಾಲ್ನನ್ನ ನೋಡಿ, ಮತ್ತಷ್ಟು ಸಿಟ್ಟಿ ನಿಂದ ನುಡಿದರು ಜಡ್ಜ್.

"ಏನಯ್ಯ ಇದು? ಉತ್ತರ ಕೊಡೋದು ಬಿಟ್ಟು ಹಾಗೆ ಬಾಯಿ ಬಿಟ್ಕೊಂಡು ನೋಡ್ತಿದೀಯಾ?"

ಸಾವರಿಸಿಕೊಂಡು ನುಡಿದ ಇಕ್ಬಾಲ್ . "ಸಾರ್, ಚಿತ್ರ ಅಪೂರ್ಣವಾಗಿದೆ ಆದರೆ, ಅದರ ಕೆಳೆಗೆ ಮರಾಠಿ ಭಾಷೆಯಲ್ಲಿ ಬರೆದಿರುವುದನ್ನು ನೋಡಿದಿರಾ? ಪ್ಲೀಸ್ ತಾಂಬಾ ಎಂದು ಬರೆದಿದೆ. ಅದರರ್ಥ, 'ದಯವಿಟ್ಟು, ನಿಲ್ಲಿ' ಎಂದು."

ಜಡ್ಜ್ ಇಕ್ಬಾಲ್ ಹೇಳಿದ ಕಡೆ ನೋಡಿ ಮೂಗಿನ ಮೇಲೆ ಬೆರಳಿಟ್ಟು ನುಡಿದರು. "ಹೌದಲ್ವಾ? ಏನಯ್ಯಾ ಇದು? ಲೆಟರ್ ಬಂದಿರೂದು ಕೇರಳದಿಂದ, ಬಾಶೆ ಮರಾಠಿ ಮತ್ತೆ, ಅಡ್ರೆಸ್ ಮಾಡಿರೋದು ನನಗೆ. ಇದರ ಮಧ್ಯೆ, ಬರೆದುರೋದು ಮಾತ್ರ, ಯಾವುದು ವ್ಯಕ್ತಿಯ ಚಿತ್ರ, ಅದು ಅಪೂರ್ಣವಾದದ್ದು.

ಸುಮ್ನೆ ಯಾರೋ ಕಿಡಿಗೇಡಿಗಳ ಕೆಲಸ ಇರಬೇಕು." ಲೆಟರ್ ಅನ್ನು, ಅಲ್ಲೇ ಇದ್ದ ಟೇಬಲ್ನ ಡ್ರಾಯರ್ ನಲ್ಲಿಡುತ್ತ ನುಡಿದರು ಜಡ್ಜ್. "ಆಯಿತು. ನೀನಿನ್ನೂ ಹೋಗಬಹುದು.ಕೋರ್ಟ್ಗೆ ಲೇಟ್ ಆಗ್ತಾ ಇದೆ."

ಇಕ್ಬಾಲ್ ಬೈಕ್ ಓಡಿಸುತ್ತಾ, ತನಗೆ ತಾನೇ ಮಾತನಾಡಿಕೊಂಡ. "ಹುಡುಗಾಟಕ್ಕೆ ಬರೆದಿರು ಲೆಟರ್ ಅಲ್ಲ ಇದು. ವಿಷಯ ಬೇರೇನೇ ಇದ್ದಂಗಿದೆ. ನನಗ್ಯಾಕ್ಕೆ.

ಎಂದಿನಂತೆ, ಬೆಳಿಗ್ಗೆ ಎದ್ದ ಇಕ್ಬಾಲ್ ಪೋಸ್ಟಾಫೀಸು ಸೇರುವಷ್ಟರಲ್ಲಿ ಗಂಟೆ ಒಂಬತ್ತಾಗಿತ್ತು. ಪೋಸ್ಟ್ ಮಾಸ್ಟರ್ ಬಾಗಿಲ ಬಳಿ ನಿಂತು ಎದುರು ನೋಡುತ್ತಿದ್ದವರು ಇಕ್ಬಾಲ್ನನ್ನು ನೋಡಿ ನಿಟ್ಟುಸಿರು ಬಿಡುತ್ತಾ ಹೇಳಿದರು. "ಅಲ್ಲಯ್ಯ ಇಷ್ಟು ಲೇಟ್ ಆಗ ಬರೋದು? ಇವತ್ತು ನೀನು ಬರದೇ ಇದ್ದಿದ್ದರೇ, ನಾನೇ ಪೋಸ್ಟ್ ಹಂಚಕ್ಕೆ ಹೋಗ್ಬೇಕಾಗಿತ್ತು. ಹೋಗಿ ಬೇಗ ಡೆಲಿವರಿಗೆ ರೆಡಿ ಮಾಡ್ಕೋ ಹೋಗು."

ಇಕ್ಬಾಲ್ ಬೇಸರ ವಾದರೂ ತೋರಿಸದೆ ತನ್ನಷ್ಟಕ್ಕೆ ತಾನು, ಪೋಸ್ಟ್ಬ್ಯಾಗ್ ಟೇಬಲ್ ಮೇಲೆ ಸುರಿದು

ವಿಂಗಡಣೆ ಮಾಡತೊಡಗಿದ.

ಸ್ವಲ್ಪ ಸಮಯದ ನಂತರ, ಮತ್ತೆ ಅವನಿಗೆ, ಜಡ್ಜ್ ಹೆಸರಿಗೆ ಬರೆದಿದ್ದ ಪತ್ರಗಳು ಕಂಡವು; ಈ ಸಾರಿ ಒಂದಲ್ಲ ಎರಡು!

ಆಶ್ಚರ್ಯದಿಂದ ಎದ್ದು ಪೋಸ್ಟ್ಮಾಸ್ಟರ್ ಮುಂದೆ ನಿಂತು ಎರಡು ಕವರ್ ತೋರಿಸಿದ ಇಕ್ಬಾಲ್.

ಪೋಸ್ಟ್ಮಾಸ್ಟರ್ ಘಾಬರಿಯಿಂದ ಎದ್ದು ನಿಂತು ಇಕ್ಬಾಲ್ ಕಡೆ ನೋಡಿದರು.

"ಸಾರ್, ಟೈಮ್ ವೇಸ್ಟ್ ಮಾಡ್ತಾ ಇದ್ದೀಯಾ ಅಂತ ನಿನ್ನೇನೆ ಬೇಜಾರ್ ಮಾಡ್ಕೊಂಡ್ರು ಜಡ್ಜ್ ಸಾಹೇಬ್ರು. ಇವತ್ತು, ಒಂದಲ್ಲ ಅಂತ ಎರಡು ಕವರ್ ಇದೆ. ಏನ್ ಮಾಡ್ಲಿ ನೀವೇ ಹೇಳಿ?"

ಏನು ತೋಚದೆ ನಿಂತ ಪೋಸ್ಟ್ ಮಾಸ್ಟರ್ ಕೆಲವು ಕಾಲ ಯೋಚಿಸಿ ನುಡಿದರು. "ಜಡ್ಜ್ ಮನೆ ಒಳಗೆ ಹೋಗಬೇಡ; ಆ ಸೆಕ್ಯೂರಿಟಿ ಗಾರ್ಡ್ ಇರ್ತಾನಲ್ವ, ಅವ್ನ ಕೈಗೆ ಕೊಟ್ಟು ಬಾ" ತಲೆಯಾಡಿಸಿದ ಇಕ್ಬಾಲ್, ಪತ್ರಗಳ ವಿಂಗಡಣೆ ಮಾಡಿ, ಜಡ್ಜ್ ಹೆಸರಿನ ಕವರ್ ಸಪರೇಟ್ ಆಗಿ ಇಟ್ಟುಕೊಂಡು ಹೊರಟ.

ಪೋಸ್ಟ್ ಮಾಸ್ಟರ್ ಹೇಳಿದ್ದಂತೆ, ಸೆಕ್ಯೂರಿಟಿ ಗಾರ್ಡ್ ಕೈಯಲ್ಲಿ ಎರಡು ಪತ್ರಗಳನಿಟ್ಟು, ತಿರುಗಿ ನೋಡದೆ ಹೊರಟ ಇಕ್ಬಾಲ್.

ಸೆಕ್ಯೂರಿಟಿ ಗಾರ್ಡ್ ಒಳಗೆ ಬಂದು, ಕೋರ್ಟ್ಗೆ ಹೊರಡಲು ರೆಡಿಯಾಗಿದ್ದ ಜಡ್ಜ್ ಮುಂದೆ ಕವರ್ ಇಟ್ಟು ಹೊರಗೆ ಹೊರಟ. ಟೇಬಲ್ ಮೇಲಿದ್ದ ಕವರ್ ನೋಡಿ ಹಣೆಯ ಮೇಲೆ ಸುಕ್ಕುಗಳಾದವು ಚಿಂತೆಯಿಂದ. ಮತ್ತೆ ಬಂತೇ? ಓಪನ್ ಮಾಡಿ ನೋಡುವ ಮನಸ್ಸಾದರೂ, ಕೋರ್ಟ್ಗೆ ಲೇಟ್ ಆದೀತೆಂದು, ಕವರ್ ಡ್ರಾಯ್ರ್ನಲ್ಲಿಟ್ಟು ಹೊರಟರು ಜಡ್ಜ್ ಲಕ್ಷ್ಮೀಕಾಂತ.

ಕೋರ್ಟ್ನಲ್ಲಿ ಮೊದಲನೇ ಕೇಸೇ ಮೈಸೂರ್ ಮರ್ಡರ್.

ಎಂದಿನಂತೆ, ತಮ್ಮ ಮುಖದಲ್ಲಿ ಮುಗುಳು ನಗೆ ಬೀರುತ್ತಾ, ಪ್ರಾಸಿಕ್ಯೂಷನ್ ಲಾಯರ್  ನವೀನ ಕೃಷ್ಣ ಎದ್ದು ನಿಂತು ನುಡಿದರು.

"ಮಹಾ ಸ್ವಾಮಿಗಳೇ, ಮೈಸೂರ್ ಮರ್ಡರ್ ಕೇಸ್ನಲ್ಲಿ ಎಲ್ಲಾ ಸಾಕ್ಷಿ ಹಾಗು ಸಂಬಂಧಪಟ್ಟ ಎಲ್ಲಾ ವಿವರಗಳನ್ನು ತಮ್ಮ ಮುಂದಿಟ್ಟು, ಕೋರ್ಟ್ ನ ಹೆಚ್ಚಿನ ಸಮಯ ವ್ಯರ್ಥ ಮಾಡದೇನೆ, ಆರೋಪಿ ತಪ್ಪಿತಸ್ಥ ಹಾಗು, ಆಲೋಚನೆ ಮಾಡಿಯೇ, ಸತ್ತಿರುವ ವ್ಯಕ್ತಿಯ ಮರ್ಡರ್ ಮಾಡಿರುವುದಲ್ಲಿ ಯಾವ ಸಂಶಯವೂ ಇಲ್ಲದಿರುವುದರಿಂದ, ಆರೋಪಿಗೆ ಐಪೀಸೀ ಸೆಕ್ಷನ್ 354 (5) ರ ಪ್ರಕಾರ, ಮರಣ ದಂಡನೆಯ ಶಿಕ್ಷೆ ಕೊಡಬೇಕೆಂದು ತಮ್ಮಲ್ಲಿ ಪ್ರಾಥಿಸುತ್ತ, ನನ್ನ ವಾದವನ್ನುಇಲ್ಲಿಗೆ ಮುಗಿಸುತ್ತಿದ್ದೇನೆ."

ಡಿಫೆನ್ಸ್ ಲಾಯೆರ್, ರಂಗಯ್ಯ ಒಮ್ಮೆ ನವೀನ ಕೃಷ್ಣ ಕಡೆ ನೋಡಿ, ಜಡ್ಜ್ ಮುಂದೆ ತಲೆ ಬಾಗಿಸಿ ನುಡಿದರು. "ಸಾಕ್ಷಿಗಳು ಸಾಕಷ್ಟಿದ್ದರೂ, ಇದುವರೆಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗು ನನ್ನ ಸ್ನೇಹಿತರಾದ ನವೀನ ಕೃಷ್ಣ ರವರು, ಕೊಲೆಯನ್ನು ಪ್ರತ್ಯಕ್ಷವಾಗಿ ನೋಡಿರುವ ಯಾವುದೇ ಸಾಕ್ಷಿಯನ್ನು ಕೋರ್ಟ್ ನಲ್ಲಿ ಹಾಜರು ಪಡಿಸಿಲ್ಲ. ಅಷ್ಟೇ ಅಲ್ಲದೆ, ಕೊಲೆಗೆ ಸಂಬಂಧ ಪಟ್ಟ ಆಯುಧವನ್ನು ಕೂಡ ಕೋರ್ಟ್ ನಲ್ಲಿ ಪ್ರಸ್ತುತ ಪಡಿಸಿಲ್ಲ. ಕೊಲೆಯಾದ ದಿವಸ ಹಾಗು ಪೋಸ್ಟ್ಮಾರ್ಟಮ್ ರೆಪೋರ್ಟ್ನಲ್ಲಿ ಕೊಲೆಯಾದ ವ್ಯಕ್ತಿ ಸತ್ತ ಸಮಯದಲ್ಲಿ, ನನ್ನ ಕಕ್ಷಿದಾರರು ಬೇರೆ ಊರಿನಲ್ಲಿದ್ದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಕೇವಲ ಸಂದರ್ಬೋಜಿತ ಸಾಕ್ಷಿಗಳ ಆಧಾರಗಳ ಮೇಲೆ ಆರೋಪಿಯೇ ಅಪರಾಧಿಯೆಂದು ಹೇಳಲಾಗುವುದಿಲ್ಲ. ಹೀಗಾಗಿ, ಆರೋಪಿಯನ್ನು, ತಪ್ಪಿತಸ್ಥನೆಂದು ಪರಿಗಣಿಸದೆ, ನಿರಪರಾಧಿಯೆಂದು ಪರಿಗಣಿಸಿ ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಾ, ನನ್ನ ವಾದವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ."

ಕಟಕಟೆಯಲ್ಲಿ ನಿಂತಿದ್ದ, ಆರೋಪಿಯನ್ನು ನೋಡುತ್ತಾ, ತಮ್ಮ ಕನ್ನಡಕ ಸರಿಪಡಿಸಿಕೊಂಡು ನುಡಿದರು, ಜಡ್ಜ್. "ಈ ಕೇಸಿಗೆ ಸಂಬಂಧಿಸಿದಂತ ಎಲ್ಲಾ ವಾದ ಪ್ರತಿವಾದಗಳು ಮುಗಿದಿದೆ. ಇದರ ತೀರ್ಪನ್ನು ಮುಂದಿನ ವಾರ, 15 ನೇ ತಾರೀಕು ಕೊಡಲು ಕೋಟ್ ನಿರ್ಧರಿಸಿದೆ. ಕೋರ್ಟ್ ಈಸ್ ಡಿಸ್ಮಿಸ್ಸ್ಡ್." ಹೀಗೆ ಹೇಳಿ ಎದ್ದು ನಿಂತರು ಜಡ್ಜ್ ಸೀತಾರಾಮಯ್ಯ; ಅಲ್ಲಿ ನೆರಿದಿದ್ದ ಎಲ್ಲರೂ ನಿಂತೊಡನೆ, ಸೀತಾ ರಾಮಯ್ಯ ತಮ್ಮ ಚೇಂಬರ್ ಕಡೆ ಹೊರಟರು.

ಜಡ್ಜ್ ಹೊರಗೆ ಬಂದೊಡನೆ, ಡಿಫೆನ್ಸ್ ಲಾಯರ್ ಅವರ ಹತ್ತಿರ ಬಂದು ನುಡಿದರು. "ಮಹಾ ಸ್ವಾಮಿಗಳೇ, ತಮಗೆ ಅಭ್ಯಂತರ ವಿಲ್ಲದಿದ್ದರೆ, ತಮ್ಮ ಚೇಂಬರ್ ನಲ್ಲಿ ಒಂದು ಐದು ನಿಮಿಷ ಮಾತನಾಡ ಬಹುದೇ?"

ಸೀತಾರಾಮಯ್ಯ ಒಮ್ಮೆ ಡಿಫೆನ್ಸ್ ಲಾಯೆರ್ ಕಡೆ ನೋಡಿ ತಲೆ ಯಾಡಿಸಿದರು.

ಚೇಂಬರ್ ಒಳಗೆ ಕುಳಿತು, ಲಾಯರ್ ಮುಖವನ್ನೇ ನೋಡುತ್ತಾ ಹೇಳಿದರು ಜಡ್ಜ್. "ನಮ್ಮ ನಿಮ್ಮ ಒಡನಾಟ ಸುಮಾರು 15 ವರ್ಷಕ್ಕೂ ಮೀರಿದ್ದು. ಯಾವ ಕೇಸಿನಲ್ಲೂ ಸಹ, ಚೇಂಬರ್ ಒಳಗೆ ಕುಳಿತು ಅದರ ಬಗ್ಗೆ ಮಾತನಾಡಿದ್ದಿಲ್ಲ. ಇವತ್ತು ನಿಮ್ಮ ಮುಖ ನೋಡಿದರೆ, ಮುಂದಿನ ವಾರದ ತೀರ್ಪಿನ ಬಗ್ಗೆ ನಿಮಗೇನು ಕಳಕಳಿ ಇದೆ ಎಂದೆನಿಸುತ್ತಿದೆ, ಹೌದ?"

"ಸಾರ್, ತಮ್ಮ ಅನುಭವದ ಮುಂದೆ ನಾವೆಲ್ಲರೂ ಯಾವಾಗಲೂ ವಿದ್ಯಾರ್ಥಿಗಳೇ. ಎಷ್ಟು ಸುಲಭವಾಗಿ ನನ್ನ ಮನಸ್ಸಿನಲ್ಲಿರುವುದನ್ನೇ ಹೇಳಿಬಿಟ್ಟಿರಿ ನೋಡಿ! ಹೌದು ಸಾರ್. ತೀರ್ಪಿನ ಬಗ್ಗೆ ಎನ್ನುವುದಕ್ಕಿಂತ, ಕೇಸಿನ ಬಗ್ಗೆ ಎಂದರೆ ಸೂಕ್ತ.

ಸಾರ್, ಆರೋಪಿ ಚೆನ್ನ ಬಹಳ ವರ್ಷಗಳ ಕಾಲ ಮೈಸೂರ್ ಹತ್ತಿರದ ಹಳ್ಳಿಯೊಂದರಲ್ಲಿ, ನಮ್ಮ ಡಿಫೆನ್ಸ್ ಲಾಯರ್ ನವೀನ ಕೃಷ್ಣರವರ ಸಂಬಂಧಿಗಳಿಗೆ ಸೇರಿದ ಒಂದು ತೋಟದಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಆದರೆ, ನಮ್ಮ ಕೃಷ್ಣರವರು ಈ ಬಗ್ಗೆ ಯಾವುದೇ ವಿಷಯ ಹೊರತರಲಿಲ್ಲ. ಅಷ್ಟೇ ಅಲ್ಲ, ನಂಬಿಕಸ್ತ ಆಳು ಎಂದೇ ಹೆಸರುಮಾಡಿರುವ ಆರೋಪಿಯ ಬಗ್ಗೆ ಸ್ವಲ್ಪವೂ ಅನುಕಂಪ ತೋರದೆ, ಅವರಿಗೆ ಕಠಿಣ ವಾದ ಶಿಕ್ಷೆ ಕೊಡಲು ತಮ್ಮ ಬಳಿ ಅಪೀಲ್ ಮಾಡಿದ್ದಾರೆ. ಕಾನೂನಿನ ದೃಷ್ಟಿಯಿಂದ ಅವರು ಮಾಡಿರುವ ಕೆಲಸ ಸರಿಯೆನಿಸಿದರೂ, ಎಲ್ಲೋ ಒಂದು ಕಡೆ ಸ್ವಲ್ಪ ಅನುಮಾನಕ್ಕೆ ಎಡೆ ಮಾಡಿದೆ. ತಾವು ದಯವಿಟ್ಟು, ತೀರ್ಪನ್ನು ಸ್ವಲ್ಪ ಕಾಲ ಮುಂದೂಡಿದರೆ, ನನಗೆ ಕಾಲಾವಾಕಾಶ ಸಿಗುತ್ತದೆ. ತಮ್ಮಂತೆ ನನಗೂ ಕೂಡ, ಆರೋಪಿಗೆ ಸರಿಯಾದ ನ್ಯಾಯ ದೊರೆಯಬೇಕೆಂಬುದು ಮಾತ್ರವೇ ಈ ರಿಕ್ವೆಸ್ಟ್ ಗೆ ಕಾರಣ. ತಾವು ಅನ್ಯಥಾ ಬಾವಿಸ ಬಾರದು."

ಜಡ್ಜ್ ಸೀತಾರಾಮಯ್ಯ ತಮ್ಮ ಮುಂದೆ ಕುಳಿತಿದ್ದ ಲಾಯರ್ ಮುಖವನ್ನೇ ನೋಡಿ ಏನೋ ತೀರ್ಮಾನಕ್ಕೆ ಬಂದವರಂತೆ ನುಡಿದರು.

"ನೋಡಿ ರಂಗಯ್ಯನವರೇ, ಕೋರ್ಟಿಗೆ ನೀವೇನು ಹೊಸಬರಲ್ಲ. ಇದು ಅಷ್ಟೇನು ಜಟಿಲವಾದ ಕೇಸಲ್ಲ. ನಿಮ್ಮ ಅನುಮಾನ ಕೃಷ್ಣ ರವರ ವರ್ತನಯ ಬಗ್ಗೆ ಇರುವುದಾದರೆ, ಅವರ ಕರ್ತವ್ಯ ಪ್ರಜ್ಞೆ ಹಾಗು ನ್ಯಾಯಕ್ಕಾಗಿ ಮಾಡುವ ವಾದ ವಿವಾದ ನಿಮಗೆ ಚೆನ್ನಾಗಿ ಗೊತ್ತಿದೆ. ತಮ್ಮ ಸ್ವಂತ ಅಣ್ಣನೇ ಅಪರಾಧಿಯ ಸ್ಥಾನದಲ್ಲಿದ್ದರೂ, ಬಹುಶ ಅವರು ಹೀಗೆ ವಾದಿಸುತ್ತಿದ್ದರೂ ಏನು. ಹಾಗಾಗಿ ತೀರ್ಪು ಮುಂದೆ ಹಾಕುವುದು ಬೇಡ."

ಇನ್ನು ಮಾತನಾಡಿ ಉಪಯೋಗವಿಲ್ಲವೆಂದರಿತ ಲಾಯರ್, ಎದ್ದು ನಿಂತು ಕೈ ಮುಗಿದು ಹೊರಟರು.

ಸೀತಾರಾಮಯ್ಯ ಸಂಜೆ ಲೈಬ್ರರಿಗೆ ಹೋಗಿ ಸ್ವಲ್ಪ ಸಮಯ ಓದಿ ಮನೆಗೆ ಮರಳಿದಾಗ, ರಾತ್ರಿ ಎಂಟಾಗಿತ್ತು. ತಮ್ಮ ಎಂದಿನ ದಿನಚರಿಯಂತೆ, ಊಟ ಮುಗಿಸಿ, ರೀಡಿಂಗ್ ರೂಮ್ ಸೇರಿ, ಮೈಸೂರ್ ಮರ್ಡರ್ ಕೇಸಿನ ಫೈಲ್ ತರಲು, ಪರಿಚಾರಿಕ ನಾಣಿಗೆ ಬೆಲ್ ಮಾಡಿ ಹೇಳಿದರು. ಮತ್ತೆ ಏನೋ ಮರೆತವರಂತೆ, ಬೆಳಿಗ್ಗೆ ಬಂದಿದ್ದ ಕವರ್ ಜ್ಞಾಪಿಸಿ ಕೊಂಡು ಅದನ್ನು ಕೂಡ ತರಲು ಹೇಳಿದರು ಜಡ್ಜ್.

ಟೇಬಲ್ ಮೇಲೆ ಫೈಲ್ ಹಾಗು ಕವರ್ ಇಟ್ಟು ನಾಣಿ ತೆರಳಿದ.

ಕವರ್ ತೆಗೆದು ತಿರುಗಿಸಿ ನೋಡಿದರು ಸೀತಾರಾಮಯ್ಯ. ಅದು ಕೂಡ ಎರ್ನಾಕುಲಂ ಪೋಸ್ಟ್ ಆಫೀಸ್ ಸ್ಟ್ಯಾಂಪ್ ಹೊಂದಿತ್ತು. ಇನ್ನೊಂದು ಕವರ್ ಒಂದು ದಿವಸದ ನಂತರದ ಡೇಟ್ ಹೊಂದಿತ್ತು; ಕುತೂಹಲ ತಡೆಯಲಾಗದೆ, ಎರಡೂ ಕವರ್ ಒಡೆದು ನೋಡಿದರು ಜಡ್ಜ್ ಸೀತಾರಾಮಯ್ಯ.

ಹಿಂದಿನ ಪತ್ರದಂತೆ, ಬಿಳೀ ಹಾಳೆಯಲ್ಲಿ ಬರೆದಿದ್ದ ಚಿತ್ರ..... ಅದೇ ವ್ಯಕ್ತಿಯ ಚಿತ್ರ ಆದರೆ, ಈ ಸಾರಿ ಇನ್ನಷ್ಟು ವಿವರಗಳನ್ನೊಳಗೊಂಡಿತ್ತು. ಆತಂಕದಿಂದ, ಎರಡನೆಯ ಕವರ್ನಲ್ಲಿದ್ದ ಪತ್ರ ಹೊರತೆಗೆದ ಸೀತಾರಾಮಯ್ಯ ತಮಗರಿವಿಲ್ಲದಂತೆ, ಎದ್ದು ನಿಂತರು.

ಹಳೆಯ ಪತ್ರದಂತೆ ಈ ಪತ್ರದ ಕೊನೆಯಲ್ಲೂ ಮರಾಠಿಯಲ್ಲಿ ಬರಿತಿತ್ತು; 'ಪ್ಲೀಸ್ ತಾಂಬಾ' ಎಂದು.

ಈಗ ಇನ್ನಷ್ಟು ಸ್ಪಷ್ಟವಾಗಿದ್ದ ಆದರೇ, ಇನ್ನು ಅಪೂರ್ಣವಾಗಿದ್ದ ಚಿತ್ರದಲ್ಲಿದ್ದ ವ್ಯಕ್ತಿ ಒಬ್ಬ ಗಂಡಸಿನದಾಗಿತ್ತು; ಹೊಳಪಾದ ಕಣ್ಣುಗಳು, ಉದ್ದನೆಯ ನಾಸಿಕ, ಕೆಳೆಗೆ ಕತ್ತಿ ಮೀಸೆ ಹಾಗು, ಕಿವಿಯಲ್ಲಿ ಫಳ ಫಳನೆ ಹೊಳೆಯುತ್ತಿದ್ದ ವಜ್ರದ ಕಡಗ!

ಸೀತಾರಾಮಯ್ಯನವರ ಕೈಯಿಂದ ಪತ್ರ ಜಾರಿ ಬಿತ್ತು.

ಆ ಚಿತ್ರದಲ್ಲಿದ್ದ ವ್ಯಕ್ತಿ ಬೇರೆ ಯಾರೋ ಅಲ್ಲದೆ, ಪಬ್ಲಿಕ್ ಪ್ರಾಸಿಕ್ಯೂಟರ್ ಲಾಯರ್ ಕೃಷ್ಣನನ್ನೇ ಹೋಲುತ್ತಿತ್ತು!


                                                                                                                                                                      ……….. ಮುಂದುವರೆಯುವುದು


Rate this content
Log in

Similar kannada story from Action