Akshatha S

Drama Romance

2  

Akshatha S

Drama Romance

ಸೃಷ್ಟಿ 04

ಸೃಷ್ಟಿ 04

3 mins
147


ಇಲ್ಲಿಯವರೆಗೆ...


ಸಾರ್ಥಕ್ ನ ಆಗಮನ ಮತ್ತು ಅವನು ರಾಜಕುಮಾರಿಗೆ ನೀಡಿದ ಸರ್ಪ್ರೈಸ್ ವಿಸಿಟ್ ನಿಂದ ಅವಳಿಂದ ಆದ ಮುನಿಸು ಮತ್ತು ಅವನು ಅವಳ ಓಲೈಕೆ.


ಮುಂದುವರೆದು...


ಸಾರ್ಥಕ್ ಲಂಡನ್ ನಿಂದ ವಾಪಸ್ ಇಂಡಿಯಾಕ್ಕೆ ಬಂದಾಗ ಏರ್ಪಡಿಸಿದ ಪಾರ್ಟಿಯಲ್ಲಿ ಸೃಷ್ಟಿ ಕುಟುಂಬದ ಅನುಪಸ್ಥಿತಿ ಇದ್ದಿದ್ದರಿಂದ ಒಂದು ಭಾನುವಾರ ಎರಡು ಕುಟುಂಬದವರು ತುಳಸಿ ನಿವಾಸದಲ್ಲಿ ಒಂದುಗೂಡುವ ನಿರ್ಧಾರವನ್ನು ಮಾಡಿದ್ದರು.


ಗಾಯತ್ರಿ ರವರು ಅಣ್ಣನ ಕುಟುಂಬದ ಆಗಮಕ್ಕೆ ಕಾತುರದಿಂದ ಕಾಯುತ್ತ ಮೃಷ್ಟಾನ್ನ ಭೋಜನವನ್ನೇ ತಯಾರಿಸಿ ಕಾಯುತ್ತಿದ್ದಾರೆ. ಸಾರ್ಥಕ್ ತನ್ನ ರಾಜಕುಮಾರಿಯ ಆಗಮಕ್ಕಾಗಿ ಮಧುಮಗನಂತೆ ತಯಾರಿಗಿದ್ದರೆ, ಸೂರ್ಯ ರವರು ತಂಗಿಯನ್ನು ಕಾಣಲು ಕಾತುರರಾಗಿದ್ದಾರೆ.


ಇನ್ನು ಸಾನ್ವಿ ರಾಮ್ ನನ್ನು ಕಾಣಲು ಅತ್ಯಂತ ನಿರೀಕ್ಷೆಯಲ್ಲಿ ಇದ್ದರೆ ಒಂದು ಕಡೆ ಬೇಜಾರಾಗಿದ್ದಾಳೆ ರಾಮ್ ಮೇಲಿನ ಪ್ರೀತಿಗಿಂತ ಅವಳ ಬೇಜಾರ್ ಅತಿ ಹೆಚ್ಚಾಗಿದೆ, ಆದರೆ ಅದನ್ನೆಲ್ಲಾ ಮರೆಮಾಚಿ ರಾಮ್ ಮತ್ತು ಮನೆಯವರಿಗಾಗಿ ನಗುವಿನ ಮುಖವಾಡ ಹಾಕಿ ತಯಾರಾಗಿ ಬಂದಿದ್ದಾಳೆ.


ವಿಷ್ಣುರವರು ತಂಗಿಯನ್ನು, ಲಕ್ಷ್ಮಿಯವರು ಅಣ್ಣನನ್ನು ಕಾಣಲು ಮುಂಜಾನೆಯೇ ತಯಾರಾಗಿ ತಮ್ಮ ಮುದ್ದು ಮಕ್ಕಳ ಆಗಮಕ್ಕಾಗಿ ಕಾಯುತ್ತಿದ್ದಾರೆ. ಸೃಷ್ಟಿ ಮೊದಲೆ ಕುಂಭಕರ್ಣಿ ಏಳೋದು ಲೇಟ್ ಅದಕ್ಕಾಗಿ ಕಾಯಲೇ ಬೇಕು, ಲಕ್ಷ್ಮಿ ಯವರು ಹೀಗಾಗಲೇ 6 ಗಂಟೆಯಿಂದ 5 ನಿಮುಷಕ್ಕೊಮ್ಮೆ ಎದ್ದೆಳೋಕೆ ಹೇಳಿದ್ದಾರೆ ಅದರೇ ಈ ರಾಜಕುಮಾರಿ 7 ಗಂಟೆಗೆ ಎದ್ದು ರೆಡಿಯಾಗಿ ಬಂದ್ದಿದ್ದಾಳೆ. ಇನ್ನು ರಾಮ್ ಇವನಿಗೆ ಸೀತೆಯೆ ನಮ್ಮ ಸಾನ್ವಿ ಇವಳಿಗಾಗಿ ಶ್ರದ್ಧೆಯಿಂದ ಸಿದ್ದನಾಗಿ ತಯಾರಾಗಲೂ ಸಮಯ ತೆಗೆದು ಕೊಂಡು 7.30 ಕ್ಕೆ ಎಲ್ಲರೂ ಸಾರ್ಥಕ್ ಮನೆಕಡೆ ಹೊರಟರು.


ಹೋ ಸಾರಿ ರಾಮ್ ಸಾನ್ವಿ ಲವ್ ಸ್ಟೋರಿ ನಿಮಗೆ ಗೊತ್ತಿಲ್ಲ ಅಲ್ವ, ಹೇಳ್ತಿನಿ ಕೇಳಿ. ಸಾರ್ಥಕ್ ಎರಡು ವರ್ಷದ ಹಿಂದೆ ಉನ್ನತ ಶಿಕ್ಷಣಕ್ಕಾಗಿ ಲಂಡನ್ ಗೆ ಹೋದಾ ಸಂದರ್ಭದಲ್ಲಿ ಸೂರ್ಯ ರವರು ಸಾನ್ವಿಗೆ ಕಂಪನಿಯ ವ್ಯವಹಾರಗಳನ್ನು ತಿಳಿಸುತ್ತಿದ್ದರು.


ಸೂರ್ಯ ರವರ ಉದ್ದೇಶ ಹೆಣ್ಣು ಅಬಲೆಯಲ್ಲ ಸಬಲೆ ಎಲ್ಲ ಕೆಲಸವನ್ನು ನಿರ್ವಹಿಸುಲು ಶಕ್ತಳು. ಮನೆಯ ಒಳಗಿನ ವ್ಯವಹಾರದ ಜೊತೆಗೆ ಹೊರಗಿನ ವ್ಯವಹಾರವನ್ನು ಜಾಗರೂಕತೆಯಿಂದ ನಿರ್ವಹಿಸಬಲ್ಲಳು ಎಂಬ ದೇಯವನ್ನು ಹೊಂದಿದ್ದರು, ಇದರಂತೆ ಲಕ್ಷ್ಮಿ ಯವರು ಸಹ ವ್ಯವಹಾರದಲ್ಲಿ ನೈಪುಣ್ಯತೆಯನ್ನು ಹೊಂದಿದ್ದರು.


ಅದರಂತೆಯೇ ಸಾನ್ವಿ ಸಾರ್ಥಕ್ ನ ಅನುಪಸ್ಥಿತಿಯಲ್ಲಿ ಕಂಪನಿಯ ವ್ಯವಹಾರಗಳ ಬಗ್ಗೆ ತಿಳಿದಿದ್ದಳು. ಕೆಲವೊಂದು ಸಂದರ್ಭದಲ್ಲಿ ಕಂಪನಿಯ ವ್ಯವಹಾರಗಳಲ್ಲಿ ರಾಮ್ ಗೆ ಸಹಾಯ ಮಾಡುತ್ತಿದ್ದಳು, ಜೊತೆಗೆ ಸೃಷ್ಟಿಯ ಮೇಲಿನ ಪ್ರೀತಿನ ಸೃಷ್ಟಿಯನ್ನು ಸಂಭಾಳಿಸುವುದು, ಅವಳನ್ನು ಕೇರ್ ಮಾಡುವುದು ಒಟ್ಟಾರೆಯಾಗಿ ಸೃಷ್ಟಿಗೆ ಎರಡನೇ ತಾಯಿಯಾಗಿದ್ದಳು. ಇವಳ ತಾಯಿಯಂತ ಮನವೇ ರಾಮ್ ನನ್ನು ಸಾನ್ವಿಯೆಡೆಗೆ ಆಕರ್ಷಿಸುವಂತೆ ಮಾಡಿದ್ದು.


ಸಾನ್ವಿ ರಾಮ್ ನ ಕೆಲಸದಲ್ಲಿನ ಶ್ರದ್ಧೆ, ಕೆಲಸಗಾರರ ಜೊತೆಗಿನ ಒಡನಾಟ, ಅಪ್ಪ ಅಮ್ಮ ಹಿರಿಯರು ಗುರುಗಳಿಗೆ ನೀಡುವ ಗೌರವ ಸೃಷ್ಟಿಯಲ್ಲದೇ ಇತರ ಹೆಣ್ಣು ಮಕ್ಕಳಲ್ಲಿ ಅಕ್ಕ ತಂಗಿಯರನ್ನು ಕಾಣುವ ಗುಣವೇ ಸಾನ್ವಿಗೆ ರಾಮ್ ನ ಮೇಲೆ ಪ್ರೇಮಾಂಕುರವಾಗಿತ್ತು.


ರಾಮ್ ತನ್ನ ಪ್ರೀತಿಯನ್ನು ಹೇಳಲು ಹಿಂಜರಿಕೆ ಕಾರಣ ಸಾನ್ವಿ ಕೂಡ ಸ್ವಲ್ಪ ಹುಡುಗಾಟದ ಹುಡುಗಿ ತನ್ನ ಪ್ರೀತಿಯನ್ನು ಎಲ್ಲಿ ತಮಾಷೆ ಮಾಡಿ ಮನೆಯವರ ಮುಂದೆ ಅವಮಾನ ಮಾಡಿದರೇ ಅನ್ನೋ ಭಯದಿಂದ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರಲಿಲ್ಲ. ಸಾನ್ವಿಯು ಸಹ ಇವನು ಸ್ವಲ್ಪ ಸ್ಟ್ರಿಕ್ಟ್ ಇರುವುದರಿಂದ ಮೊದಲು ಹಿಂಜರಿಯುತ್ತಿದ್ದಳು, ಕಂಪನಿಯ ಇತರ ಲೇಡಿ ಸ್ಟಾಫ್ ಗಳ ಜೊತೆಯಲ್ಲಿ ಮಾತಾನಾಡುವಾಗ ಇವಳಲ್ಲಿ ಈರ್ಷೆ ಶುರುವಾಗಿ ಆಗಿದ್ದು ಆಗೇ ಹೋಗಲಿ ಎಂದು ತನ್ನ ಪ್ರೀತಿಯ ವಿಚಾರವನ್ನು ತಿಳಿಸಲು ಸಮಯಕ್ಕಾಗಿ ಕಾದು ಪ್ರೇಮಿಗಳಿಗೆ ಮೀಸಲಾಗಿರುವ ದಿನ ಫೆಬ್ರವರಿ 14 ರಂದು ತನ್ನ ಪ್ರೀತಿಯ ನಿವೇದನೆಗೆ ತಯರಾದಳು.


ಅದರಂತೆ ಅದು ಸಂಜೆ ರಾಮ್ ಗೆ ತನ್ನ ಕಾಲೇಜ್ ಬಳಿ ಇರುವ ಪಾರ್ಕ್ ಗೆ ಬರೋದಿಕ್ಕೆ ಹೇಳಿದಳು. ಅವಳ ಆಮಂತ್ರಣ ದಿಂದ ರಾಮ್ ಗೆ ಹೇಳಿಕೊಳ್ಳಲಾಗದಂತಹ ಸಂತೋಷ, ಆದ್ರೇ ಪ್ರೀತಿಯನ್ನು ಹೇಳಿಕೊಳ್ಳೊಕೆ ಭಯ ಅದನ್ನು ತೋರ್ಪಡಿಸಿ ಕೊಳ್ಳದೇ ಅವಳು ಹೇಳಿದ ಸಮಯಕ್ಕೆ ಹೇಳಿದ ಜಾಗಕ್ಕೆ ಅವಳಿಗಿಂತ ಮುಂಚೆ ತಲುಪಿ ಅವಳಿಗಾಗಿ ಕಾಯುತ್ತಾ ಕುಳಿತ. ಅಂದು ಪ್ರತಿದಿನಕ್ಕಿಂತ ಹೆಚ್ಚು ಜನ ಪಾರ್ಕ್ ನಲ್ಲಿ ಇದ್ದರು. ಅದರಲ್ಲಿ ಪ್ರೇಮಿಗಳೇ ಹೆಚ್ಚು ಅವರನ್ನೇ ನೋಡುತ್ತಾ ತನ್ನ ಪ್ರೀತಿಯಲ್ಲಿ ಕಳೆದು ಹೋಗಿದ್ದನು.


ಚಂದ ಅವಳ ಕಿರು ಲಜ್ಜೆ,

ಮಧುರಾ ಬೆಳ್ಳಿ ಮಣಿ ಗೆಜ್ಜೆ,

ಶ್ವಾಸ ಏರಿ ಇಳಿದು,

ಸುತ್ತಲಿನ ಜಗವನೆ ಮೆರೆಯುತ್ತಿದೆ.


ಒಲಾವಾ ಓನಕೆ ಆಡಿ ಹಾಕಿ,

ಹೃದಯಾ ಬಿರಿಯುದು ಬಾಕಿ,

ಅವಳ ಕಣ್ಣ ಸಿಡಿಲು ಬಾಡಿದು,

ನನ್ನ ಧ್ವನಿ ಆದು ನಡುಗುತ್ತಿದೆ.


ಕಲೆದಾಂತ ಕನಸುಗಲು,

ಮರೆತಂತ ಮಿಡಿತಗಲು,

ತಾರಾ ತರಾದ ನಿನ್ನ ತರಗತಿಯಾಲ್ಲಿ,

ಹಾಜರಿ ಹಾಕುತೀದೆ.


ಕನಸಲ್ಲಿ ಮುಳುಗಿದ ರಾಮ್ ನನ್ನು ಎಚ್ಚರಿಸಿದ್ದು ಸಾನ್ವಿಯ ಧ್ವನಿ.


ಸಾನ್ವಿ:- ಹಾಯ್ ರಾಮ್ ಸಾರಿ ಕ್ಲಾಸ್ ಮುಗಿಯೋದು ಲೇಟ್ ಆಯ್ತು ಅದಕ್ಕೆ ಲೇಟ್ ಸಾರಿ.


ರಾಮ್:- ಇಟ್ಸ್ ಓಕೆ ನನ್ನ ಯಾಕೆ ಬರೋದಿಕ್ಕೆ ಹೇಳಿದ್ದು.


ಸಾನ್ವಿ:- ಅದು ರಾಮ್ssss


ರಾಮ್:- ಅ ಅದೇ ಏನು?


ಸಾನ್ವಿ:- (ಮನಸ್ಸಲ್ಲೇ) ದೇವರೇ ಕಾಪಾಡು...


ರಾಮ್:- ಹೇ ಸಾನ್ವಿ ಏನ್ ಯೋಚನೆ ಮಾಡ್ತಾ ಇದಿಯಾ ಏನ್ ಹೇಳು?


ಸಾನ್ವಿ:- ರಾಮ್ ಅದು ನಾನ್ ಏನೋ ಹೇಳಬೇಕು ಕೋಪ ಮಾಡ್ಕೊಬೇಡ, ಏನೇ ಇದ್ರು ನೇರವಾಗಿ ಹೇಳು ಓಕೆನಾ.


ರಾಮ್:- ಉಫ್ ಆಯ್ತು ಕೋಪ ಮಾಡ್ಕೊಳಲ್ಲ, ನೇರವಾಗಿ ಹೇಳ್ತಿನಿ.


ಸಾನ್ವಿ:- ಕಣ್ಮುಚ್ಚಿ ಯಾಕೆ ಏನು ಯಾವಾಗಿನಿಂದ ಅಂತ ಏನು ಕೇಳ್ಬೇಡ ಐ ಲವ್ ಯು ರಾಮ್ ಐ ಲವ್ ಯು ಸೋ ಮಚ್.


ರಾಮ್:- ಅವಳು ಹೇಳಿದ ರೀತಿಗೆ ಬರುವ ನಗುವನ್ನು ತಡೆದು ಅವಳನ್ನೇ ನೋಡುತ್ತಾ ಇದ್ದ.


ಸಾನ್ವಿ ಕಣ್ಬಿಟ್ಟು ನೋಡಿದಾಗ ಅವನು ಏನು ಹೇಳದೇ ಹೋಗಿಬಿಟ್ಟ ಸಾನ್ವಿ ಕೂಗಿದರು ಕೇಳದರು ತಿರುಗಿಯು ಸಹ ನೋಡದೇ ಹೋಗಿ ಬಿಟ್ಟ. ಸಾನ್ವಿ ರಾಮ್ ನ ಈ ವರ್ತನೆಯಿಂದ ಅಲ್ಲೇ ಕುಸಿದು ಹೋದ್ಲು ಸಾಧ್ಯವಾದಷ್ಟು ಬರುವ ಕಣ್ಣಿರನ್ನು ತಡೆಯುವ ಪ್ರಯತ್ನ ಮಾಡಿದಳು.


ರಾಮ್ ಹೋಗಿ 10 ನಿಮಿಷಕ್ಕೆ ಒಂದು ಸುಂದರವಾದ ಗುಲಾಬಿ ಹೂವಿನ ಗುಚ್ಛದೊಂದಿಗೆ ಸಾನ್ವಿಯ ಬಳಿ ಆಗಮಿಸಿದ.


ಸಾನ್ವಿ ಆ ಸ್ಥಿತಿಯನ್ನು ನೋಡಿ ರಾಮ್ ಗೆ ಸಂಕಟವಾಗಿ ಅವಳ ಬಳಿ ಬಂದು ಅವಳ ಹೆಗಲ ಮೇಲೆ ಕೈಯಿಟ್ಟ ಪ್ರಪಂಚದ ಅರಿವನ್ನೇ ಮರೆತ ಹುಡುಗಿ ಅವನ ಸ್ಪರ್ಶದಿಂದ ಎಚ್ಚೆತ್ತು ಅವನನ್ನು ತಿರುಗೆ ನೋಡಿದಳು. ಅವನನ್ನು ನೋಡಿದ ತಕ್ಷಣ ತಡೆದಿಂದ ದುಃಖ ಕಣ್ಣೀರ ರೂಪದಲ್ಲಿ ಹೊರಬಂದಿತು.


ರಾಮ್ ಅವಳ ಮುಂದೆ ಮಂಡಿಯೂರಿ ಕುಳಿತು ತಂದಾ ಗುಲಾಬಿ ಹೂವಿನ ಗುಚ್ಛವನ್ನು ನೀಡಿ ತನ್ನ ಪ್ರೀತಿಯ ನಿವೇದನೆ ಮಾಡಿಕೊಂಡನ್ನು.


ಇದರಿಂದ ಸಾನ್ವಿಗೆ ಆಕಾಶವೇ ಸಿಕ್ಕಷ್ಟು ಖುಷಿಯಾಯಿತು. ಸ್ವಲ್ಪ ಸಮಯ ಹರಟಿ ರಾಮ್ ತನ್ನ ಪ್ರೀತಿಯನ್ನು ತಿಳಿಸಿದನು ಜೊತೆಗೆ ಅವನ ಭಯವನ್ನು ತಿಳಿಸಿದಾಗ ಈ ಹುಡುಗಿಗೆ ಅವನನ್ನು ಗೋಳೋಯ್ಕೊಳ್ಳಲು ಒಂದು ಅಸ್ತ್ರ ಸಿಕ್ಕಂತಾಯ್ತು.


ಅಲ್ಲಿಂದ ಮನೆಗೆ ಹೋಗುವಾಗ ಈ ಸಾನ್ವಿ ಸೃಷ್ಟಿಯ ಕೈಗೆ ಸಿಕ್ಕಾಕಿಕೊಂಡಿದ್ದಳು. ಸೃಷ್ಟಿ ಇವರ ಪ್ರೀತಿಗೆ ಸೇತುವೆಯಾಗಿರುವುದರ ಜೊತೆಗೆ ಇವರಿಗಿಂತ ಹೆಚ್ಚಿನ ಖುಷಿ ಪಟ್ಟವಳು. ಹೀಗೆ ಇವರ ಪ್ರೀತಿ ಶುರುವಾಗಿ ಎರಡು ವರ್ಷಗಳೇ ಕಳೆದಿದ್ದವು, ಆದರೇ ಮನೆಯವರಿಗಾಗಲಿ ಸಾರ್ಥಕ್ ಗಾಗಿ ಇವರ ಪ್ರೀತಿಯ ವಿಷಯ ತಿಳಿದಿರಲಿಲ್ಲ.


ಮುಂದುವರೆಯುತ್ತದೆ...



Rate this content
Log in

Similar kannada story from Drama