Akshatha S

Drama Romance Others

2  

Akshatha S

Drama Romance Others

ಸೃಷ್ಟಿ 01

ಸೃಷ್ಟಿ 01

3 mins
201


ಒಂದು ಮುಂಜಾನೆ ಅಂಗೇ ಸುಮ್ಮನೆ ನಾವು ಹೋಗುವ ಬಾರೇ ನನ್ನ ತಾರೇ ಗೋಲಿ ಆಡ್ತಿದ್ದ ಟೈಂಲ್ಲಿ ಪ್ರೀತಿ ಶುರುವಾಗ್ತೂ ನೀ ಕಾಣೋ ಎಲ್ಲ ಕನಸ ಮಾಡುವೆನು ನಾನು ನನಸ ಕಾಸ ನಿನ್ನ ದಾಸ.


ಏನಪ್ಪ ಇದು ಹಾಡಿನ ಮೂಲಕ ಶುರು ಇದಾಳೆ ಅನ್ಕೊಬೇಡಿ ನಮ್ ಹುಡುಗಿ ನಮ್ ಡಿ ಬಾಸ್ ನ ಬಿಗೆಸ್ಟ್ ಫ್ಯಾನ್, ಎಸಿ ಎಲ್ಲ. ಎಷ್ಟರ ಮಟ್ಟಿಗೆ ಎಂದರೆ ಅವಳ ರೂಮ್ ಮಾತ್ರ ಅಲ್ಲ ದೇವರ ಮನೆಬಿಟ್ಟು ಎಲ್ಲ ಕಡೆನೂ ಡಿ ಬಾಸ್ ಫೋಟೋಗಳದ್ದೇ ದರ್ಬಾರ್.


ಇದಕ್ಕೆ ಒತ್ತಾಸೆಯಾಗಿ ಇವರ ಅಪ್ಪ ಅಮ್ಮನು ಕೂಡ ಇವಳಿಗೆ ಸಪೋರ್ಟ್ ಅದಕ್ಕಾಗಿ ಮನೆ ಫುಲ್ ಡಿ ಬಾಸ್ ಆವರಿಸಿರುವುದು.


ಈ ಹಾಡು ಕೂಡ ಅವಳಿಗೆ ಮುಂಜಾನೆಯ ಸುಪ್ರಭಾತ ಅಷ್ಟೇ, ಸದ್ಯಕ್ಕೆ ಅವಳ ಲವರ್ ಡಿ ಬಾಸ್ ಮಾತ್ರ. ಅವಳ ಮೊಬೈಲ್ ಪೂರ ಡಿ ಬಾಸ್ ಸಾಂಗ್ ಗಳೇ ಇರೋದು.


ಬರಿ ಡಿ ಬಾಸ್ ಬಗ್ಗೆನೇ ಹೇಳ್ತಾ ಇದಿನಿ ಬನ್ನಿ ನಮ್ ಹುಡುಗಿನ ಮೀಟ್ ಮಾಡ್ಸ್ತಿನಿ.


ಉಫ್ ಸಾರಿ ಫ್ರೇಂಡ್ಸ್ ನಮ್ ಹುಡುಗಿಗೆ ಇನ್ನು ಬೆಳ್ಳಿಗ್ಗೆನೆ ಹಾಗಿಲ್ಲ ಇನ್ನು ಮಲ್ಗೆ ಇದಾಳೆ ಕುಂಬಕರ್ಣನ ವಂಶದ ಕೊನೆ ತುಂಡು ಲೇಡಿ ಕುಂಬಕರ್ಣಿ.


ಅಮ್ಮ ತಾಯಿ ಸುಂದ್ರಿ ಎದ್ದೆಳೆ ಬೇಗ...


ಅಯ್ಯೋ ಏನೇ ನಿಂದು ಬೆಳ್ ಬೆಳ್ಳಿಗೆನೆ ನಿನ್ ಗೋಳು


ಏನು ಇವಾಗ ಬೆಳ್ಳಿಗ್ಗೆನ ಸೂರ್ಯ ಹುಟ್ಟಿ ಇವಾಗ ಟೈಂ 12 ಆಗಿದೆ ಊಟ ಮಾಡೋ ಸಮಯ ಆಗಿದೆ ನಿನ್ ಇನ್ನು ಬಿದ್ಕೊಂಡಿದ್ದಿಯಾ ಎದ್ದೋಳೆ ಮೇಲೆ ಕುಂಬಕರ್ಣಿ ನಿನ್ ಮೀಟ್ ಮಾಡೋಕೆ ನಮ್ ಸ್ಟೋರಿ ಮಿರರ್  ಓದುಗರು ಬರ್ತಾರೆ ಎದ್ದು ರೆಡಿ ಆಗಿರು ಅಂತ ಹೇಳಿದ್ದೆ ತಾನೇ? ಎದ್ದು ರೆಡಿಯಾಗಿ ಬಂದು ಮಾತಾಡ್ಸು.


ಏನು ಅವಾಗಲೇ 12 ಗಂಟೆನಾ ನಿನಗೆ ನನ್ ಮೇಲೆ ಯಾಕೆ ಇಷ್ಟು ದ್ವೇಷ ಪಾಪಿ ನಾನ್ ಏನೇ ನಿನಗೆ ದ್ರೋಹ ಮಾಡಿದ್ದೆ ಇವಾಗ ಎಳ್ಸ್ತಾ ಇದಿಯಲ್ಲ ನಿನಗೆ ಹೇಳಿದ್ದೇ ತಾನೇ 10 ಗಂಟೆಗೆ ಎಬ್ಸು ಅಂತ ಇವಾಗ ಬಂದ್ದಿಯಾ ಗೂಬೆನ್ತಂದು.


ಸರಿ ಸರಿ ಜಾಸ್ತಿ ಗುರಾಯ್ಸ್ ಬೇಡ ಬರ್ತಿನಿ ಹೋಗು ಮ್ಯಾನೇಜ್ ಮಾಡು... ಏನಪ್ಪ ಇವ್ಳು ಇವಾಗ ಎದ್ದು ಇಷ್ಟೊಂದು ರೋಫ್ ಹಾಕ್ತಾಳೆ ಅನ್ಕೊಬೇಡಿ ಅವಳು ನನ್ ಅತ್ತೆ ಮಗಳು ನನಗೆ ಅವಳ ಮೇಲೆ ಲವ್ ಜಾಸ್ತಿ ಅದಕ್ಕೆ ಅಷ್ಟೇ ಆಮೇಲೆ ಚಾಕೊಲೇಟ್ ಐಸ್ ಕ್ರೀಂ ಕೊಡ್ಸಿ ಸಮಾಧಾನ ಮಾಡ್ತಿನಿ ನೀವ್ ಬೇಜಾರ್ ಆಗ್ಬೇಡಿ ಓಕೆ ಇರಿ ನಾನ್ ರೆಡಿ ಆಗಿ ಬರ್ತಿನಿ ಮಾತಾಡೋಣ ಓಕೆ.


ನಮ್ ಹುಡ್ಗಿಗೆ ಟೈಂ ಮೆನ್ಟೈನ್ ಮಾಡೊದು ಗೊತ್ತೆ ಇಲ್ಲ ಹೇಳೊದು ಒಂದು ಟೈಂ ಬರೋದು ಒಂದು ಟೈಂ, ಕೆಲ್ಸ ಮಾತ್ರ ಅಂದುಕೊಂಡ ಟೈಂನಲ್ಲಿ ಮಾಡಿ ಮುಗ್ಸ್ತಾಳೆ ನಮ್ ಮುದ್ದು ಗೊಂಬೆ.


ಅಂತು ಫೈನಲಿ ನಮ್ ಹುಡ್ಗಿ ಬಂದ್ಲು. ಅಲಂಕಾರ ಪ್ರಿಯೆ ಅಲ್ಲ ನಮ್ ಹುಡ್ಗಿ ಎಷ್ಟು ಸಾದ್ಯವೋ ಅಷ್ಟು ಸಿಂಪಲ್ ಹಾಗಿ ರೆಡಿ ಆಗುವಳು. ಚಂದನದ ಗೊಂಬೆ ಈ ನಮ್ ಗೊಂಬೆ, ಅಪ್ಪ ಅಮ್ಮನ ಮುದ್ದಿನ ಮಗಳು ಅಣ್ಣನ ಪ್ರೀತಿಯ ತಂಗಿ, ಅಪ್ಪ ಅಮ್ಮನ ಮುದ್ದಿನಿಂದ ತಂಗಿ ಭವಿಷ್ಯ ಹಾಳ್ಗ್ಬಾರ್ದು ಅಂತ ಸ್ವಲ್ಪ ಸ್ಕ್ರಿಕ್ ಜಾಸ್ತಿ. ಅವನ ಉದ್ದೇಶ ಅವಳ ಕಣ್ಣಿಂದ ನೀರು ಬರ್ಬಾದು, ಇವಳಿಂದ ಮತ್ತೊಬ್ಬರಿಗೂ ನೋವು ಆಗಬಾರದ್ದು. ಇದಕ್ಕಾಗಿ ಅವಳ ಎದುರಿನಲ್ಲಿ ಬೈದ್ರು ಮರೆಯಲ್ಲಿ ಅಪ್ಪ ಅಮ್ಮನಿಂತ ಹತ್ತು ಪಟ್ಟು ಜಾಸ್ತಿ ಪ್ರೀತಿ ಮಾಡೋ ಅಣ್ಣ ಇವನು.


ಇವಳ ಅಪ್ಪ ವಿಷ್ಣು ಇವರು . SP ಗ್ರೂಪ್ ಆಫ್ ಕಂಪನಿಯ ಮಾಲಿಕರು, ತಾಯಿ ಲಕ್ಷ್ಮಿ ಇವರು ಗೃಹಿಣಿ. ಇವರು ಮೊದಲು ಗಂಡನಿಗೆ ಬೆಂಬಲವಾಗಿ ನಿಂತು ಕಂಪನಿಯ ಜವಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಮಕ್ಕಳು ಹುಟ್ಟಿದ ನಂತರ ಕಂಪನಿ ವ್ಯವಹಾರದಿಂದ ದೂರ ಇದ್ದು ಮಕ್ಕಳ ಭವಿಷ್ಯಕ್ಕೆ ಶ್ರಮಿಸಿದರು. ಆದರೆ ಸಂಪೂರ್ಣವಾಗಿ ಕಂಪನಿಯಿಂದ ದೂರ ಉಳಿದಿರುವುದಿಲ್ಲ ಕೆಲಸದ ಒತ್ತಡದ ಸಂದರ್ಭದಲ್ಲಿ ವರ್ಕ್ ಅಟ್ ಹೋಂ ಮೂಲಕ ವ್ಯವಹಾರವನ್ನು ನಿರ್ವಹಿಸುತ್ತಿದ್ದರು. ಇವರ ಮೊದಲ ಸಂತಾನವೆ ವಂಶೊದ್ಧಾಕರ ರಾಮ್, ಹೆಸರಿಗೆ ತಕ್ಕಂತ ವ್ಯಕ್ತಿತ್ವ. ಇವರ ಎರಡನೇ ಸಂತಾನವೇ ನಮ್ಮ ಗೊಂಬೆ ಸೃಷ್ಟಿ.


SP ಅಂದ್ರೆ ಏನು ಅಂತ ಯೋಚನೆ‌ ಮಾಡಿತು ಇದಿರಾ SP ಅಂದ್ರೆ ಶಿವ ಮತ್ತು ಪಾರ್ವತಿ ಅಂತ ಇವರು ವಿಷ್ಣುವಿನ ಜನ್ಮ ಕರ್ತರು. ಅವರು ಹೆಸರಿನಲ್ಲಿ ಶುರು ಮಾಡಿದ ಕಂಪನಿಗೆ SP ಅಂತ ನಾಮಕರಣ ಮಾಡಿದರು.


ತಂದೆ ತಾಯಿ ಆಶೀರ್ವಾದದಿಂದ ಕಂಪನಿ ಉತ್ತಮ ಸ್ಥಾನದಲ್ಲಿದೆ. ರಾಮ್ ಕಂಪನಿಯಲ್ಲಿ ಸಿ.ಇ.ಓ ಹಾಗಿ ತಂದೆಗೆ ಸಹಕಾರಿಯಾಗಿ ಕಂಪನಿಯಲ್ಲಿ ಈತರ ಕೆಲಸಗಾರರಲ್ಲಿ ಸ್ನೇಹ ಮಯವಾಗಿ ಉತ್ತಮ ನಡತೆಯಿಂದ ಮೆಚ್ಚುಗೆಯ ಬಾಸ್ ಎಂಬ ಪಟ್ಟವನ್ನು ಅಲಂಕರಿಸಿರುತ್ತಾನೆ.


ಸೃಷ್ಟಿ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಕಾಮರ್ಸ್ ವಿಭಾಗದಲ್ಲಿ ಪ್ರಥಮ ವರ್ಷದ ಡಿಗ್ರಿಗೆ ಜಾಯ್ನ್ ಆಗಿದ್ದಾಳೆ ಕಾಲೇಜ್ ಇನ್ನು ಓಪನ್ ಆಗಿಲ್ಲ ಆಗಾಗಿ 12 ಗಂಟೆಗೆ ಎದ್ದಿರೊದು, ಇವಳು ಅಷ್ಟೇ ಅಣ್ಣಂತೆ ಸ್ನೇಹಪರತೆ ವ್ಯಕ್ತಿತ್ವ ಹೊಂದಿರುವ ಹುಡುಗಿ ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಸ್ನೇಹ ಬೆಳೆಸುವ ಹುಡುಗಿ. ಹಾಲಿನ ಮೈಬಣ್ಣ, ಗುಲಾಬಿಯನ್ನು ನಾಚಿಸುವ ಕೆನ್ನೆಯ ರಂಗು, ಲಿಪ್ ಸ್ಟಿಕ್ ಬಳಸದೇ ರಂಗೇರಿರುವ ಕೆಂಪು ತುಟಿಗಳು, ಮೀನಿನ ಕಣ್ಣು, ಸಂಪಿಗೆಯನ್ನು ನಾಚಿಸುವ ಮೂಗು, ಕಾಡಿಗೆಯೆ ಇಲ್ಲದೇ ಕಪ್ಪಾಗಿ ಕಾಣುವ ಕಣ್ರೆಪ್ಪೆ ಕಾಮಾನಿನ ಬಿಲ್ಲಿನಂತೆ ಉಬ್ಬು. ಅಲಂಕಾರವಿಲ್ಲದೇ ದೇವಲೋಕದ ಅಪ್ಸರೆಯಂತಹ ಹುಡುಗಿ. ಮಾತಿನ‌‌ ಮಲ್ಲಿ ಕಲ್ಲನ್ನು ಮಾತಾಡಿಸುವ ಗುಣದವಳು ಈ ಗೊಂಬೆ. ಈ ರಾಜಕುಮಾರಿಗೆ ಎಂಥ ರಾಜಕುಮಾರ ಸಿಗ್ತಾನೇ ನೋಡೋಣ.


ಮುಂದುವರೆಯುವುದು...


Rate this content
Log in

Similar kannada story from Drama