Akshatha S

Comedy Drama Horror

3.5  

Akshatha S

Comedy Drama Horror

ಅಡುಗೆ ಮನೆಯಲ್ಲಿ ದೆವ್ವ

ಅಡುಗೆ ಮನೆಯಲ್ಲಿ ದೆವ್ವ

6 mins
1.3K


ಆ ದಿನ ನಾನು ಮನೆಯಲ್ಲಿ ಒಂಟಿಯಾಗಿದ್ದೆ. ಯಾರೋ ಬಾಗಿಲು ಬಡಿದಂತಾಯಿತು..... ಹೋಗಿ ನೋಡಿದರೆ ಯಾರು ಇಲ್ಲ ಬಾಗಿಲನ್ನು ಭದ್ರ ಪಡಿಸಿ ಅಡುಗೆ ಕೋಣೆಯನ್ನು ಸೇರಿಸಿದೆ. ಮತ್ತೊಮ್ಮೆ ಬಾಗಿಲು ಬಡಿದ ಶಬ್ದವಾಯಿತು. ಹೋಗಿ ನೋಡಿದರೆ ಯಾರು ಇಲ್ಲ ಮನೆಯಿಂದ ಆಚೆ ಬಂದು ಸುತ್ತಲು ನೋಡಿದೆ ಆದರೆ ಯಾರು ಕಾಣಲಿಲ್ಲ. ಆದರೆ ಹಿಂದೆ ಯಾರೋ ಹೋದಂತೆ ಆಯಿತು ತಿರುಗಿ ನೋಡಿದರೆ ಯಾರು ಇರಲಿಲ್ಲ. ಮತ್ತೆ ಬಾಗಿಲನ್ನು ಭದ್ರ ಪಡಿಸಿ ಅಡುಗೆ ಕೋಣೆ ಸೇರಿದೆ. ಮನೆಯಲ್ಲಿ ಯಾರು ಇರಲಿ ಬಿಡಲಿ ಹೊಟ್ಟೆ ಮಾತ್ರ ತನ್ನ ಇರುವನ್ನು ತೋರಿಸಿಕೊಳ್ಳುತ್ತಿತ್ತು. ಅದನ್ನು ಸಮಾಧಾನಿಸುವ ಸಲುವಾಗಿ ಅಡುಗೆ ತಯಾರಿಸಲು ನೋಡಿದರೆ ಮನೆಯಲ್ಲಿ ಯಾವುದೇ ಪದಾರ್ಥಗಳು ಸಹ ಇರಲಿಲ್ಲ.

ನನಗೆ ಶಾಕ್ ಇದೇನು ನಿನ್ನೆ ತಾನೇ ಎಲ್ಲ ದಿನಸಿ ತಂದು ನಾನೇ ಜೋಡಿಸಿದ್ದೆ ಆದರೇ ಇವಾಗ ಎಲ್ಲ ಡಬ್ಬಿಗಳು ಖಾಲಿಯಾಗಿದೆ. ಮನೆಯಲ್ಲಿ ನಾನು ಇವರು ಬಿಟ್ಟರೆ ಮೂರನೇಯವರು ಬಂದಿಲ್ಲ ಇವರು ಮುಂಜಾನೆಯೇ ಆಫೀಸ್ ನಲ್ಲಿ ಮೀಟಿಂಗ್ ಅಂತ ಹೇಳಿ ಹೋದವರು ಇನ್ನು ಬಂದಿಲ್ಲ ಎಲ್ಲ ದಿನಸಿ ಏನಾಯಿತು ಅದು ತಿಂಗಳಿಗೆ ಆಗುವಷ್ಟು ದಿನಸಿ ಕತ್ತಲು ಕಳೆದು ಬೆಳಕು ಮೂಡುವ ಅಷ್ಟರಲ್ಲಿ ಖಾಲಿಯಾಗಿದೆ ಏನಿದರ ಮರ್ಮ. ಹೇ ಪರಮೇಶ್ವರ ಏನಿದು ನಿಗೂಢ ನೀನೇ ದಾರಿ ತೋರಿಸು ತಂದೆ.


ಇಲ್ಲ ನಾನೇ ಏನಾದರೂ ದಿನಸಿ ತಂದಿರೋ ತರ ಕನಸು ಕಂಡ್ನ ಹೇಗೆ. ಏನೋ ಒಂದೂ ಗೊತ್ತಾಗ್ತಿಲ್ಲ. ಮೊದಲು ಇದ್ದ ಮನೆನೆ ಚೆನ್ನಾಗಿತ್ತು ಇಲ್ಲಿ ಯಾಕೋ ಅಮಾನುಷ ಘಟನೆಗಳು ನಡಿತಾ ಇರೋ ಆಗಿದೆ ನೋಡೊಣ ಇದು ಕನಸ ಇಲ್ಲ ನಿಜನಾ ಅಂತ. ಯೋಚಿಸಿ ಮತ್ತೆ ದಿನಸಿ ಪಟ್ಟಿ ತಯಾರಿಸಿ ತರಲು ಅಂಗಡಿ ಹೋದೆ.


ಅಂಗಡಿಯ ಓನರ್ ನನ್ನ ಕಡೆ ಹೆಚ್ಚು ಗಮನ ಕೊಡಲಿಲ್ಲ ಆದರೆ ದಿನಸಿ ಪ್ಯಾಕ್ ಮಾಡುವ ಹುಡುಗ ನನ್ನನ್ನೆ ವಿಚಿತ್ರವಾಗಿ ನೋಡ ತೊಡಗಿದ. ನಾನು ಅವನನ್ನು ಪ್ರಶ್ನೆ ಮಾಡದೇ ಎಲ್ಲ ಸಮಾನನ್ನು ಖರೀದಿಸಿದೆ ಪ್ಯಾಕ್ ಮಾಡುವಾಗ ಆ ಹುಡುಗನನ್ನು ಆ ಅಂಗಡಿ ಮಾಲಿಕ ಅವನನ್ನು ಪ್ರಶ್ನಿಸಿದರು.

ಯಾಕೋ ಆ ಮೇಡಂನ ಆ ತರ ವಿಚಿತ್ರವಾಗಿ ನೋಡ್ತಾ ಇದೀಯಾ?

ಸರ್ ನಿನ್ನೆ ಈ ಮೇಡಂ ಮತ್ತೆ ಅವರ ಯಜಮಾನರು ಇದೇ ಸಮಯಕ್ಕೆ ಬಂದು ಇಷ್ಟೆ ಸಾಮಾನು ತೆಗೆದುಕೊಂಡು ಹೋಗಿದ್ರು ಇವಾಗ ಮತ್ತೆ ತಗೊಂಡು ಹೋಗ್ತಾ ಇದಾರೆ ಅದಕ್ಕೆ ನೋಡಿದೆ.

ನನ್ನ ಮನದಲ್ಲಿ ಅರಿವಾಯಿತು ನಿನ್ನೆ ದಿನಸಿ ಖರೀದಿ ಮಾಡಿದ್ದು ಕನಸಲ್ಲ ನಿಜನೇ ಆದರೆ ಎಲ್ಲ ಸಾಮಾನು ಏನಾಯ್ತು ಅಂತ? ಅಷ್ಟರಲ್ಲಿ ಅಂಗಡಿ ಮಾಲಿಕನ ಮಾತು ನನ್ನ ಎಚ್ಚರಗೊಳಿಸಿತು.

ಹೇ ಮಂಜು ಇವಾಗ ಕೊರೊನಾ ಟೈಂ ಅಲ್ವ ಯಾರಿಗಾದರೂ ಸಹಾಯ ಮಾಡೋಕೆ ತಗೊತಾ ಇರ್ಬಹುದು.

ಸರಿ ಅಣ್ಣಾ, ಸಹಾಯಕ್ಕೆ ಇರಬಹುದು ಆದರೆ ಸಹಾಯಕ್ಕೆ ತಗೊಳ್ಳುವವರು ತಿಂಗಳಿಗೆ ಆಗುವಷ್ಟು ಮಾತ್ರ ತಗೋತಾರಾ.

ಒಬ್ಬರಿಗೆ ತಿಂಗಳಿಗೆ ಇಲ್ಲ ಎರಡು ತಿಂಗಳಿಗೆ ಆಗೋ ಅಷ್ಟು ಸಾಮಾನು ಮಾತ್ರ ಕೊಡೊದು ಅವರ ಜೀವನ ಪರ್ಯಂತ ಕೊಡೊಕೆ ಆಗುತ್ತಾ.

ಅದು ಗೊತ್ತು ಅಣ್ಣಾ, ದಾನ ಮಾಡುವವರು ತಗೊಂಡ್ರು ಒಂದೇ ಸಾರಿ ಮೂಟೆಗಟ್ಟಲೆ ತಗೊಂಡು ಅವರೇ ಅದನ್ನು ತಿಂಗಳಿಗೆ ಆಗೋ ಅಷ್ಟು ಬೇರೆ ಮಾಡ್ತಾರೆ ಇಲ್ಲ ನಮಗೆ ಇಷ್ಟು ಬೇಕು ಅಂತ ಆರ್ಡರ್ ಮಾಡಿ ಒಲ್ಸೇಲ್ ರೇಟ್ ಹಾಕಿಸಿಕೊಂಡು ಹೋಗ್ತಾರೆ ಆದರೆ ಇವರು?

ಸುಮ್ನೆ ಇಲ್ಲದೆ ವಿಚಾರನ ನೀನು ತಲೆಗೆ ತುಂಬಿಕೊಂಡು ನನ್ನ ತಲೆಗೂ ತುಂಬಾ ಬೇಡ ಅವರ ದುಡ್ಡು ಅವರ ಇಷ್ಟ ನಿನಗ್ಯಾಕೆ ಬೇರೆಯವರ ವಿಷ್ಯ ಹೋಗಿ ಕೆಲಸ ನೋಡು.

ಸರಿ ಅಣ್ಣಾ.

ಆ ಹುಡುಗನಿಗೆ ಆ ಓನರ್ ಬುದ್ಧಿ ಮಾತನ್ನು ಹೇಳಿ ಅಲ್ಲಿಂದ ಕಳುಹಿಸಿದ ಆ ಹುಡುಗ ಏನೋ ಗೊಣಗುತ್ತಾ ಹೋದ ಅದು ನನಗೆ ಸ್ಪಷ್ಟವಾಗಿ ಕೇಳಲಿಲ್ಲ ನಾನು ನನ್ನ ಕಾರ್ ನಲ್ಲಿ ಎಲ್ಲ ಸಾಮಾನನ್ನು ಜೋಡಿಸಿ ಓನರ್ ಬಳಿ ಲೆಕ್ಕ ಹಾಕಿಸಿ ಬಿಲ್ ಪೇ ಮಾಡಿ ಹೊರಟೆ. ಮೊದಲೇ ತಲೆ ಕೆಟ್ಟಿದ್ದರಿಂದ ಅಡುಗೆ ಮಾಡಿ ತಿನ್ನೋಕೆ ಆಗಲ್ಲ ಅಂತ ಹೊರಗಿನಿಂದ ತಂದು ಊಟ ಮುಗಿಸಿದೆ.

ಸ್ವಲ್ಪ ಸಮಯ ಕಳೆದು ತಂದಿರೋ ಎಲ್ಲ ಸಾಮಾನುಗಳನ್ನು ಮತ್ತೆ ಜೋಡಿಸಿದೆ. ಅಲ್ಲಿಗೆ ಸಮಯ 6 ಗಂಟೆ. ಸಂಜೆ ಕಸಗೂಡಿಸಿ ಫ್ರೇಶ್ ಆಗಿ ದೇವರಿಗೆ ದೀಪ ಹಚ್ಚಿ ರಾತ್ರಿ ಊಟಕ್ಕೆ ರೆಡಿ‌ ಮಾಡಿ ನನ್ನವರಿಗೆ ಕಾಯುತ್ತಾ ಕುಳಿತೆ. ಅವರು ಒಂಬತ್ತು ಗಂಟೆಗೆ ಸರಿಯಾಗಿ ಬಂದರು. ಅವರಿಗೆ ಈ ವಿಷಯ ಹೇಳಿ ತಲೆ ಬಿಸಿ ಮಾಡಬಾರದು ಅಂತ ವಿಷಯ ಮುಚ್ಚಿ ಇಟ್ಟೆ. ಬಂದವರು ಬಟ್ಟೆ‌ ಬದಲಿಸಿ ಫ್ರೇಶ್ ಆಗಿ ಬಂದರು. ಅವರಿಗೆ ಊಟಕ್ಕೆ ಬಡಿಸಿ ನಾನು ಊಟ ಮಾಡಿದೆ.


ದಿನ ಬಂದವರು ತರ್ಲೆ ಮಾಡುವವರು ನಾನು ಸೈಲೆಂಟ್ ಆಗಿ ಇರೋದ್ರಿಂದ ಅವರು ಸೈಲೆಂಟ್ ಆಗಿ ಊಟ ಮುಗಿಸಿ ಎದ್ದರು. ನಾನು ಊಟ ಮುಗಿಸಿ ಮೊದಲು ಡೈನಿಂಗ್ ಟೇಬಲ್ ಕ್ಲೀನ್ ಮಾಡಿ ನಂತರ ಅಡುಗೆ ಮನೆ ಕ್ಲೀನ್ ಮಾಡಿ ರೂಂ ಗೆ ಹೋದೆ. ಅಲ್ಲಿ ಅವರು ಲ್ಯಾಪ್ ಟಾಪ್ ನಲ್ಲಿ ಮುಳುಗಿದ್ದರು. ನಾನು ಹೋಗಿ ಅವರ ಪಕ್ಕದಲ್ಲೇ ಕುಳಿತು ಅವರ ತೋಳುಗಳನ್ನು ಬಳಸಿ ಅವರ ಭುಜಕ್ಕೆ ಹೊರಗಿ ಕುಳಿತೆ.


ನಾನ್ ಏನು ಹೇಳಿಕೊಳ್ಳದೆ ಇದ್ದರು ನನ್ನವರಿಗೆ ನನ್ನ ಮನಸಿನ ತಳಮಳ ಅರ್ಥ ಮಾಡಿಕೊಳ್ಳುತ್ತಿದ್ದರು.

ಪ್ರಿಯೆ, ಹೇಳು ನಿನ್ನ ವೇದನೆ.

ಪ್ರಿಯೆ ಅಲ್ಲ ಪ್ರಿಯಾ.

ನನಗೆ ನೀನೂ ಪ್ರಿಯೆ ಬೇರೆಯವರಿಗೆ ಪ್ರಿಯಾ.

ನಿಮಗೆ ಹೇಳ್ತಿನಲ್ಲ ನನಗೆ ಬುದ್ಧಿ ಇಲ್ಲ. ಇವರು ನನ್ನ ಕಂಡಾಗಿನಿಂದ ಪ್ರಿಯೆ ಎಂದೆ ಕರೆಯುತ್ತಿದ್ದದ್ದು ನನಗೆ ಈ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅಣ್ಣವ್ರು ಪಿಯೆ ಪಿಯೆ ಅಂತ ಕರಿಯೋದೆ ನೆನಪಾಗುತ್ತೆ ಎಷ್ಟು ಸಾರಿ ಹೇಳಿದರು ಇವರು ಅದನ್ನು ಬದಲಾಯಿಸಿ ಕೊಂಡಿರಲಿಲ್ಲ. ನನಗೆ ಅವರ ಮೇಲೆ ಈ ವಿಚಾರಕ್ಕೆ ಸ್ವಲ್ಪ ಮುನಿಸು.

ಹೇ ಪ್ರಿಯೆ, ಯಾಕಿ ಮುನಿಸು.

ಚಂದು ಪ್ಲೀಸ್...

ಯಾಕಮ್ಮ ಬೇಜಾರಾ ನನಗೆ ಗೊತ್ತು ನಿನಗೆ ಈ ಮನೆ ಈ ಊರು ಇಷ್ಟ ಆಗಿಲ್ಲ ಅಂತ ಏನ್ ಮಾಡೋದು ಕೆಲಸ ಅಲ್ವ ಸ್ವಲ್ಪ ದಿನ ಅಡ್ಜೇಸ್ಟ್ ಮಾಡ್ಕೊ ಕಂಪನಿಯಲ್ಲಿ ಮಾತನಾಡಿ ಮತ್ತೆ ನಮ್ಮೂರಿಗೆ ಟ್ರಾನ್ಫರ್ ತಗೋತಿನಿ.

ಅವರು ಊರು ಮನೆಯವರಿಂದ ದೂರ ಬಂದಿರುವುದರಿಂದ ಬೇಜಾರ್ ಆಗಿರುವುದು ಎಂದು ತಿಳಿದು ಸಮಾಧಾನಿಸುತ್ತಿದ್ದರು. ಅವರು ಈ ಮನೆಯಲ್ಲಿ ಕಳೆದಿದ್ದು ಒಂದೇ ರಾತ್ರಿ ಬೆಳ್ಳಗಿನ ಘಟನೆಗಳ ಅನುಭವ ಇರಲಿಲ್ಲ ಹೇಳಲು ನನಗೂ ಮನಸು ಬರಲಿಲ್ಲ. ಅವರ ಮಾತಿಗೆ ಹ್ಮ್ ಗುಟ್ಟು ಅವರ ಮಡಿಲಿನಲ್ಲೆ ಮಲಗಿದೆ.


ನನಗೆ ಎಚ್ಚರವಾಗಿದ್ದೆ ನನ್ನವರ ಕೂಗಿಗೆ.

ಪ್ರಿಯೆ.... ಪ್ರಿಯೆ ಅಂತ ಒಂದೇ ಸಮನೇ ಅಡುಗೆ ಮನೆಯಿಂದ ಕೂಗುತ್ತಿದ್ದರು. ನನ್ನವರು ಎಷ್ಟೆ‌ ಬ್ಯೂಸಿ ಇದ್ದರು ನನಗಾಗಿ ಅವರು ಪ್ರತಿದಿನ ಮುಂಜಾನೆ ಕಾಫಿ ತಯಾರಿಸಿ ಕೊಡುತ್ತಿದ್ದರು. ನಿನ್ನೆ ಕೆಲಸದಿಂದ ಸುಸ್ತಾಗಿದ್ದರಿಂದ ನನ್ನನ್ನು ಏಳಿಸದೆ ಹೋಗಿದ್ದರಿಂದ ಅಡುಗೆ ಮನೆ ಘಟನೆ ಬಗ್ಗೆ ತಿಳಿದಿರಲಿಲ್ಲ. ಇಂದು ಅಡುಗೆ ಮನೆಗೆ ಹೋದಾಗ ಅವರಿಗೆ ವಿಷಯ ತಿಳಿದರಬಹುದು ಎಂಬ ಗಾಬರಿಯಲ್ಲೆ ಎದ್ದು ಅಡುಗೆ ಮನೆ ಕಡೆ ಓಡಿದೆ.

ಚಂದು ವಾಟ್ ಆಪನ್? ಏನಾಯ್ತು?

ಪ್ರಿಯೆ ಮೊನ್ನೆ ತಾನೇ ದಿನಸಿ ತಂದಿದೀವಿ ಇವಾಗ ನೋಡಿದ್ರೆ ಎಲ್ಲ ಖಾಲಿ ಆಗಿದೆ ಎಲ್ಲ‌ ಏನಾಯ್ತು?

ಅವರು ಹೇಳಿದ್ದು ಕೇಳಿ ಮತ್ತೆ ಶಾಕ್ ಆಯ್ತು ಸುಮ್ಮನೆ ತಲೆ ಮೇಲೆ ಕೈ ಹೊತ್ತು ಕುಳಿತೆ ಚಂದು ನನ್ನ ಪಕ್ಕ ಬಂದು ಕುಳಿತು ಕೇಳಿದ್ರು ಏನಮ್ಮ ಇದೆಲ್ಲಾ ಅಂತ. ಆಗಾ ಅನಿವಾರ್ಯ ಇಲ್ಲದೆ ಎಲ್ಲ ಸತ್ಯ ಹೇಳಿದೆ.

ಅವರು ಈ ಮನೆಯಲ್ಲಿ ದೆವ್ವ ಇರ್ಬೇಕು ಬೇಗ ಮನೆ ಖಾಲಿ ಮಾಡೋಣ ಅಂತ ಮನೆ ಓನರ್ ಜೊತೆ ಜಗಳ ಮಾಡಲು ಫೋನ್ ತೆಗೆದರು ನಾನು ಅವರನ್ನು ತಡೆದೆ.

ಚಂದು ಏನ್ ಮಾಡ್ತಾ ಇದೀರಾ ದೆವ್ವ ಭೂತ ಅಂತ ಅಂದುಕೊಂಡು. ನೀವ್ ಹೇಳೋ ತರ ದೆವ್ವ ಇದ್ದಿದ್ರೆ ನಮಗೆ ತೊಂದರೆ ಕೊಡ ಬೇಕಾಗಿತ್ತು ತಾನೇ ಅದು ಬಿಟ್ಟು ಮನೆ ರೇಷನ್ ಖಾಲಿ ಮಾಡಿದೆ ಅಂದ್ರೆ ಯೋಚನೆ ಮಾಡಿ ಇದು ದೆವ್ವದ ಕೆಲಸ ಅಲ್ಲ ಬೇರೆ ಏನೋ ಇದೆ.

ಅಂದ್ರೆ ? ಅಂತ ಚಂದು ನನ್ನನ್ನೆ ಪ್ರಶ್ನಿಸಿದರು?

ಚಂದು ದೆವ್ವ ಇದ್ದಿದ್ರೆ ಅದು ಸೈಲೆಂಟ್ ಆಗಿ ಇರೋದಾ ಅದರ ಜಾಗ ನಾವ್ ಆಕ್ರಮಿಸಿದಿವಿ ಅಂತ ಆದ್ರೂ ನಮಗೆ ತೊಂದರೆ ಕೊಟ್ಟಿರೋದು ಇಲ್ಲಿ ನೋಡಿದರೆ ಅದರಲ್ಲೂ ದಿನಸಿ ಸಾಮಾನು ಜೊತೆ ಸೋಪ್ ಪೇಸ್ಟ್ ಜೊತೆಗೆ ನಿಮ್ಮ ಶೇವಿಂಗ್ ಕ್ರೀಮ್ ಕೂಡ ಕಾಣೆ ಆಗಿದೆ ಇದು ನಮಗೆ ಗೊತ್ತಿಲ್ಲದೆ ಆಗೇ ಯಾರೋ ಮಾಡಿರೋ ಕೆಲಸ. ನೀವು ಈ ಮನೆಯಲ್ಲಿ ಒಂದು ವಿಚಾರ ಗಮನಿಸಿಲ್ಲ.

ಏನು?

ಅದು ಈ ಅಡುಗೆ ಮನೆ ಕದ ಕ್ಲೋಸ್ ಮಾಡಿ ಒಳಗೆ ಏನೇ ಶಬ್ಧ ಮಾಡಿದರೂ ಅದು ಹೊರಗಡೆ ಕೆಳಲ್ಲ.

ಅದು ಹೇಗೆ ಹೇಳ್ತಿಯಾ?

ನಿನ್ನೆ ನಾನು ಸ್ಟೌವ್ ಮೇಲೆ ಹಾಲಿನ ಪಾತ್ರೆ ಇಟ್ಟಿದ್ದೆ ಬೆಕ್ಕು ಒಳಗೆ ಹೋಗಿದೆ ಜೊತೆಗೆ ಗಾಳಿಗೆ ಡೋರ್ ಕ್ಲೋಸ್ ಆಗಿತ್ತು. ಕಾಫಿ ಕುಡಿಯೋಣ ಅಂತ ಹೋದಾಗ ಡೋರ್ ಒಪನ್ ಮಾಡಿ ನೋಡಿದಾಗ ಬೆಕ್ಕು ಹೊರಗೆ ಓಡಿ ಹೋಯ್ತು. ಒಳಗೆ ಹೋಗಿ ನೋಡಿದಾಗ ಗೊತ್ತಾಯ್ತು ಹಾಲಿನ ಪಾತ್ರೆ ಕೆಳಗೆ ಬೀಳಿಸಿ ಹಾಲು ಕುಡಿದಿದೆ ಅಂತ ಆದರೆ ಪಾತ್ರೆ ಬಿದ್ದ ಸದ್ದು ಕೇಳಿಸಲೇ ಇಲ್ಲ. ಇದನ್ನು ತಿಳಿದವರೆ ಯಾರೋ ಕಿತಾಪತಿ ಮಾಡಿರೋ ಆಗಿದೆ.


ಇವಾಗ ಏನ್ ಮಾಡೋದು ಅಂತ ಚಂದು ಕೇಳಿದಾಗ ನಾನು ಅವರ ಜೊತೆ ಯೋಚಿಸುತ್ತಾ ಕುಳಿತೆ ಸಮಸ್ಯೆ ಇರುವುದರಿಂದ ಚಂದು ಆಫೀಸ್ ಗೆ ಫೋನ್ ಮಾಡಿ ರಜೆ ಹಾಕಿದರು. ನಾನು ಅವರೊಟ್ಟಿಗೆ ಕುಳಿತು ಯೋಚಿಸುತ್ತಾ ಫೋನ್ ನೋಡುವಾಗ ಒಂದು ಹಿಡನ್ ಕ್ಯಾಮರಾಗಳ ಬಗ್ಗೆ ಆ್ಯಡ್ ಬಂತು. ಅದನ್ನ ಚಂದುಗೆ ತೋರಿಸಿ ಪ್ಲಾನ್ ಹೇಳಿದೆ ಅದಕ್ಕೆ ಚಂದು ಒಪ್ಪಿ ನನ್ನ ಬೆಂಬಲಕ್ಕೆ ನಿಂತರು. ತಿಂಡಿ ಮಾಡಲು ದಿನಸಿ ಇಲ್ಲದೆ ಇರುವುದರಿಂದ ಮೊದಲು ಮನೆ ಕ್ಲೀನ್ ಮಾಡಿ ಸ್ನಾನ ಮುಗಿಸಿ ಪೂಜೆ ಮುಗಿಸಿ ಪ್ಲಾನ್ ಎಕ್ಸಿಕ್ಯೂಟಿವ್ ಮಾಡೋಕೆ ಹೊರಟೆವು.


ಪ್ಲಾನ್ ಪ್ರಕಾರ ಮೊದಲು ಒಂದು ಶಾಪ್ ಗೆ ಹೋಗಿ ಅಲ್ಲಿ ನಮಗೆ ಬೇಕಾದಂತಹ ಹಿಡನ್ ಕ್ಯಾಮರಾಗಳನ್ನು ತೆಗೆದುಕೊಂಡೆವು. ನಂತರ ಮತ್ತೆ ತಿಂಗಳಿಗೆ ಬೇಕಾದ ದಿನಸಿ ತೆಗೆದುಕೊಂಡೆವು ಆ ಆಂಗಡಿಯ ಹುಡುಗನ ಜೊತೆ ಇಂದು ಆ ಮಾಲಿಕ ಸಹ ನಮ್ಮನ್ನು ವಿಚಿತ್ರವಾಗಿ ನೋಡಿದರು. ನಾನು ಚಂದುಗೆ ಎಲ್ಲ ಹೇಳಿದ್ದರಿಂದ ಚಂದು ನನ್ನ ಕಡೆ ನೋಡಿ ಕಣ್ಣಲ್ಲೇ ಧೈರ್ಯ ತುಂಬಿ ದಿನಸಿ ತೆಗೆದುಕೊಂಡರು. ನಂತರ ಅಲ್ಲೇ ಹೋಟೆಲ್ ನಲ್ಲಿ ಊಟ ಮುಗಿಸಿ ಮನೆಗೆ ಹೊರಟೆವು.

ದಿನಸಿ ಸಾಮಾನುಗಳನ್ನು ಜೋಡಿಸುವಾಗ ಕ್ಯಾಮರಾಗಳನ್ನು ಅಲಂಕಾರಿಕ ವಸ್ತುಗಳ ನಡುವೆ ಇಟ್ಟು ಅಡುಗೆ ಮನೆ ಕೆಲಸ ಮುಗಿಸಿದೆವು.


ಕ್ಯಾಮರಾಗಳ ಕನೆಕ್ಷನ್ ನನ್ನು ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿದರು. ಕೆಲವೊಂದು ಕ್ಯಾಮರಾಗಳನ್ನು ಮುಂದಿನ ಬಾಗಿಲು ಮತ್ತು ಹಿಂದಿನ ಬಾಗಿಲಿಗೆ ಅಳವಡಿಸಿದರು. ಹಿಂದಿನ ಬಾಗಿಲಿಗೆ ಕ್ಯಾಮರಾ ಅಳವಡಿಸುವಾಗ ಅಡುಗೆ ಮನೆ ಕಡೆ ಯಾರೋ ಹೋದಂತೆ ಅನುಭವ ಆಯಿತು ಹೋಗಿ ನೋಡಿದಾಗ ಯಾರು ಇರಲಿಲ್ಲ. ಕ್ಯಾಮರಾ ಇಟ್ಟಿದ್ದರಿಂದ ಜಾಸ್ತಿ ತಲೆ ಕೆಡಿಸಿಕೊಳ್ಳದೆ ಟೆಡ್ಡಿ ಕಣ್ಣುಗಳ ನಡುವೆ ಕ್ಯಾಮರಾ ಇಟ್ಟು ಮನೆಯನ್ನು ಅಲಂಕಾರ ಮಾಡುವ ರೀತಿ ಕ್ಯಾಮರಾ ಫಿಕ್ಸ್ ಮಾಡಿದರು.


ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಇವರ ಹಳೇ ಆಫೀಸ್ ಬಾಸ್ ಬಾಸ್ ಎನ್ನುವುದಕ್ಕಿಂತ ಇವರಿಗೆ ಸ್ನೇಹಿತರಂತೆ ಇದ್ದರು. ಇವರ ಬಗ್ಗೆ ವಿಚಾರಿಸಲು ಆಫೀಸ್ ಗೆ ಕಾಲ್ ಮಾಡಿದಾಗ ಇವರು ರಜೆಯಲ್ಲಿ ಇರುವುದನ್ನು ತಿಳಿದು ಮೊಬೈಲ್ ಗೆ ಕಾಲ್ ಮಾಡಿ ಆರೋಗ್ಯ ವಿಚಾರಿಸಿದರು. ಚಂದು ಎಲ್ಲ ವಿವರಿಸಿದರು.

ಅವರು ಅದೇ ಊರಿನಲ್ಲಿ ಇರುವ ಅವರ ಸ್ನೇಹಿತರಿಗೆ ತಿಳಿಸಿ ನಮ್ಮ ಸಹಾಯಕ್ಕೆ ಕಳುಹಿಸಿದರು. ಬಂದವರನ್ನು ಮುಂಬಾಗಿಲಿಗೆ ಇಬ್ಬರು ಹಿಂದಿನ ಬಾಗಿಲಿಗೆ ಇಬ್ಬರನ್ನು ಯಾರಿಗೂ ಕಾಣದಂತೆ ನಿಲ್ಲಲು ತಿಳಿಸಿ ಸೂಚನೆ ಕೊಡುವುದಾಗಿ ತಿಳಿಸಿದರು.


ರಾತ್ರಿ ಊಟ ಮುಗಿಸಿ ನಾವು ನಮ್ಮ ರೂಂನಲ್ಲಿ ಲ್ಯಾಪ್ ಟಾಪ್ ಮುಂದೆ ಕುಳಿತು ಕ್ಯಾಮರಾ ಫಿಕ್ಸ್ ಮಾಡಿರುವ ಕಡೆ ಗಮನ ಕೊಟ್ಟು ವಿಕ್ಷೀಸಿದೆವು. ಸಮಯ 12 ಗಂಟೆ ಸರಿಯಾಗಿ ಅಡುಗೆ ಮನೆ ಲೈಟ್ ಆನ್ ಆಗಿ ಡೋರ್ ಕ್ಲೋಸ್ ಆಯಿತು. ಅಲ್ಲಿರುವ ವ್ಯಕ್ತಿ ಮುಖಕ್ಕೆ ಅಡ್ಡವಾಗಿ ಬಟ್ಟೆ ಕಟ್ಟಿದ್ದರಿಂದ ಕಣ್ಣುಗಳು ಬಿಟ್ಟು ಬೇರೆ ಏನು ಕಾಣಲಿಲ್ಲ.


ಚಂದು ಮನೆಯ ಹೊರಗೆ ಇರುವವರಿಗೆ ಕಾನ್ಫೇರೆನ್ಸ್ ಕಾಲ್ ಮಾಡಿ ಬ್ಲೂಟೂತ್ ಡಿವೈಸ್ ಮೂಲಕ ಮಾತಾಡ್ತಾ ನನಗೆ ಮುಂದಿನ ಬಾಗಿಲನ್ನು ಅವರು ಹಿಂದಿನ ಬಾಗಿಲನ್ನು ತೆರೆದರು. ನಾಲ್ಕು ಜನ ಸದ್ದಿಲ್ಲದೆ ಬಂದರು. ಹಿಂದಿನ ಬಾಗಿಲಿನಲ್ಲಿ ಇದ್ದರವರು ಹೊರಗಡೆ ನಿಂತರೆ ಮತ್ತಿಬ್ಬರು ಅಡುಗೆ ಮನೆ ಬಾಗಿಲಿನಲ್ಲಿ ನಿಂತರು.


ಅಡುಗೆ ಮನೆ ಡೋರ್ ಒಳಗಿನಿಂದ ಕ್ಲೋಸ್ ಆಗಿದ್ದರಿಂದ ಒಳಗೆ ಹೋಗಲು ಆಗಲಿಲ್ಲ. ಸತತ 30 ನಿಮಿಷಗಳ ನಂತರ ಲೈಟ್ ಆಫ್ ಆಗಿ ಡೋರ್ ಒಪನ್ ಆಯಿತು. ಆ ವ್ಯಕ್ತಿ ಯಾವುದೇ ಭಯ ಇಲ್ಲದೆ ಹೊರಗಡೆ ಹೊರಟರು. ಹಿತ್ತಲಿನ ಬಾಗಿಲನ್ನು ಅವರು ತಲುಪಲು ಅಲ್ಲೆ ಇದ್ದವರು ಅವರಿಗೆ ಅಡ್ಡ ಬಂದರು. ಹಿಂದೆ ತಿರುಗಿ ಓಡಲು ನೋಡಿದವರಿಗೆ ನಾವು ಹಿಂದೆ ನಿಂತಿರುವುದು ಕಾಣಿಸಿತು.


ಆ ವ್ಯಕ್ತಿಗೆ ಬೆವರು ಶುರುವಾಯಿತು. ಬಂದಾ ನಾಲ್ಕು ಜನ ಆ ವ್ಯಕ್ತಿಯನ್ನು ಹಿಡಿದರು. ಆ ವ್ಯಕ್ತಿಯ ಮುಖಕ್ಕೆ ಕಟ್ಟಿದ ಬಟ್ಟೆ ತೆಗೆದಾಗಲೇ ಗೊತ್ತಾಗಿದ್ದು ಅದು ಆ ಮನೆಯ ಓನರ್ ಅಂತ!


ಯಾಕೆ ಈ ತರ ಕೆಲಸ ಮಾಡ್ತಾ ಇದೀರಾ ಅಂತ ಚಂದು ವಿಚಾರಿಸಿದಾಗ ಆ ಓನರ್ ನಿಜಾಂಶವನ್ನು ಬಾಯಿ ಬಿಟ್ಟ. ಈ ಮನೆಯ ಸಿಟಿಯ ಮಧ್ಯ ಭಾಗದಲ್ಲಿತ್ತು ಇಲ್ಲಿ ಬಾರ್ ಪಬ್ ನಂತಹ ರೆಸ್ಟೋರೆಂಟ್ ತೆಗೆದರೆ ಅನುಕೂಲ ಅಂತ ಆದರೆ ಈ ಮನೆಯ ಓನರ್ ಇದನ್ನು ಮಾರಲು ಒಪ್ಪಿರಲಿಲ್ಲ ಅದೇ ಸಮಯದಲ್ಲಿ ಕಂಪನಿಯ ಬಾಸ್ ಮಿನಿಸ್ಟರ್ ಮೂಲಕ ಈ ಮನೆ ಕೊಡಿಸಿದರು. ಆದರೆ ಆಗ ರೌಡಿಗಳ ಉಪಟಳ ಹೆಚ್ಚಾಗ ತೊಡಗಿತು. ಜೊತೆಗೆ ಅವರ ಮಗನನ್ನು ಕಿಡ್ನಾಪ್ ಮಾಡಿ ಮನೆ ಖಾಲಿ ಮಾಡಿಸಲು ಹೆದರಿಸಲು ಶುರು ಮಾಡಿದರು. ಪೊಲೀಸರಿಗೆ ಯಾವುದೇ ವಿಚಾರ ಹೇಳುವಂತಿಲ್ಲ ಅಂತ ಹೇಳಿದಾಗ ನೇರವಾಗಿ ಮನೆ ಖಾಲಿ ಮಾಡಿಸಲು ಸಾಧ್ಯವಿಲ್ಲ ಎಂದು ದೆವ್ವದ ತರ ಹೆದರಿಸಲು ಈ ಪ್ಲಾನ್ ಮಾಡಿದೆ ಎಂದು ಅವರು ತನ್ನ ಅಳನ್ನು ತೋಡಿಕೊಂಡರು.


ಈ ಘಟನೆ ರಾತ್ರಿ ನಡೆದಿದ್ದರಿಂದ ಇದು ಆ ರೌಡಿಗಳಿಗೆ ತಿಳಿಯಲಿಲ್ಲ. ನಂತರ ಚಂದು ಮತ್ತು ಅವರ ಬಾಸ್ ಮಿನಿಸ್ಟರ್ ಮತ್ತು ಪೊಲೀಸ್ ರವರ ಸಹಾಯ ಪಡೆದು ಓನರ್ ಮಗನನ್ನು ರಕ್ಷಿಸಿ ಆ ರೌಡಿಗಳಿಗೆ ಕಾನೂನಿನ ಮೂಲಕ ಶಿಕ್ಷೆ ಕೊಡಿಸಿದರು.


ಚಂದು ಮಾಡುತ್ತಿದ್ದ ಪ್ರಾಜೆಕ್ಟ್ ಕೆಲಸ ಆರು ತಿಂಗಳಿಗೆ ಮುಗಿದಿದ್ದರಿಂದ ಅವರ ಬಾಸ್ ಬಳಿ ಮಾತನಾಡಿ ಚಿತ್ರದುರ್ಗಕ್ಕೆ ಟ್ರಾನ್ಫರ್ ಮಾಡಿಸಿಕೊಂಡರು. ಇಷ್ಟು ದಿನ ಇದ್ದು ಕಾಪಾಡಿ ಸಲುಹಿದ ಬೆಂಗಳೂರಿಗೂ ನಮಿಸಿ ನಮ್ಮ ಗೂಡನ್ನು ತಲುಪಿದೆವು.



Rate this content
Log in

Similar kannada story from Comedy