Akshatha S

Drama Crime Inspirational

4  

Akshatha S

Drama Crime Inspirational

ಅನ್ವೇಷಣೆ

ಅನ್ವೇಷಣೆ

55 mins
687


ಈ ಕತೆ ಒಂದು ಕಾಲ್ಪನಿಕ, ಒಂದು ಕನ್ನಡ ಚಲನಚಿತ್ರದಿಂದ ಪ್ರೇರಣೆಗೊಂಡು ಸೃಷ್ಟಿಸಿದ ಕತೆ. ಚಲನಚಿತ್ರದ ಹೆಸರನ್ನು ಕೊನೆಯ ಸಂಚಿಕೆಯಲ್ಲಿ ಹೇಳುವೆ. ಇಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇವಲ ಕಾಲ್ಪನಿಕ. ಇಲ್ಲಿ ಯಾವುದೇ ಮಾಧ್ಯಮ, ರಾಜಕೀಯ ವ್ಯಕ್ತಿಗಳು, ಇಲಾಖೆಯನ್ನು ಅವಹೇಳನ ಮಾಡುವ ಉದ್ದೇಶವನ್ನು ಹೊಂದಿಲ್ಲ. ಕತೆಗೆ ಪೂರಕವಾಗಿ ಮಾತ್ರ ಸಂದರ್ಭಗಳನ್ನು ಸೃಷ್ಟಿಸಲಾಗಿದೆ. ಈ ಕತೆ ಅಂತ್ಯವಾಗುವ ವೇಳೆಗೆ ಯಾರಿಗಾದರೂ ಸ್ಪೂರ್ತಿಯಾಗಬಹುದು ಅಥವಾ ಕಿರಿಕಿರಿಯಾಗಬಹುದು. ಅದು ಓದುಗರ‌ ಮನಸ್ಥಿತಿ ಮೇಲೆ ಅವಲಂಬಿತವಾಗಿದೆ. ಯಾರಿಗಾದರೂ ಮುಂದೆ ಕಿರಿಕಿರಿ ಸಂಭವಿಸಿದರೆ ಮೊದಲಿಗೆ ಕ್ಷಮೆ ಯಾಚಿಸುವೆ. ಕ್ಷಮಿಸಿ.


"ಬ್ರೇಕಿಂಗ್ ನ್ಯೂಸ್!"


ನಗರದ ಪ್ರಸಿದ್ಧ ಸೈಂಟಿಸ್ಟ್ "ಅಮರ್" ಮತ್ತು ಅವರ ಪ್ರಿಯತಮೆ "ಅನಿಕ" ನಿನ್ನೆ ಸಂಜೆ ಕಾರವಾರದ ಸಮುದ್ರತೀರದಲ್ಲಿ ಸುತ್ತಾಡುವಾಗ ದುಷ್ಕರ್ಮಿಗಳು ಇಬ್ಬರನ್ನು ಅಪಹರಿಸಿದ್ದಾರೆ.


ದುಷ್ಕರ್ಮಿಗಳ ಬೇಡಿಕೆಗಳು ಏನು ಎಂಬುದು ಖಚಿತವಾಗಿ ತಿಳಿದಿಲ್ಲ. ಇಬ್ಬರ ಹುಡುಕಾಟದಲ್ಲಿ ಪೊಲೀಸ್ ಪಡೆ ನಿರಂತರವಾಗಿ ಕೆಲಸದಲ್ಲಿ ತೊಡಗಿದೆ. ನಗರದ ಪ್ರತಿ ಮೂಲೆ ಮೂಲೆಯನ್ನು ಜಾಲಾಡುತ್ತಿದ್ದಾರೆ. ಆದರೆ ಯಾವುದೇ ಸುಳಿವು ಸಿಗುತ್ತಿಲ್ಲ.


ಹಾಗಾದರೆ ಅಮರ್ ಮತ್ತು ಅನಿಕಾ'ರನ್ನು ಅಪಹರಿಸಿದ್ದು ಯಾರು? ಯಾವ ಕಾರಣಕ್ಕೆ ಅಪಹರಿಸಿದ್ದಾರೆ? ಇಬ್ಬರನ್ನು ಅಪಹರಿಸಲು ಪ್ರಮುಖ ಕಾರಣವೇನು? ಅಮರ್ ಯಾರೊಂದಿಗಾದರೂ ಜಗಳ ಕೋಪ ಏನಾದರೂ ಮಾಡಿಕೊಂಡಿದ್ದಾರಾ? ಯಾರೊಂದಿಗಾದರೂ ದ್ವೇಷವನ್ನು ಬೆಳೆಸಿಕೊಂಡಿದ್ದಾರಾ? ಹೀಗೆ ಹಲವಾರು ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ ಇದರಲ್ಲಿ ರಾಜಕೀಯ ವ್ಯಕ್ತಿಗಳು ಅಥವಾ ಪೊಲೀಸರ ಕೈವಾಡ ಇರಬಹುದಾ? ನೋಡಬೇಕು.


""ಅಮರ್" ಮತ್ತು "ಅನಿಕ"ರ ತಂದೆ-ತಾಯಿಗಳ ದುಃಖ ಮುಗಿಲು ಮುಟ್ಟಿದೆ ಇಬ್ಬರೂ ಯಾವುದೇ ಅಪಾಯಕ್ಕೆ ಸಿಲುಕದೆ ಸುರಕ್ಷಿತವಾಗಿ ತಮ್ಮ ಗೂಡುಗಳನ್ನು ಸೇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಹೆಚ್ಚಿನ ಮಾಹಿತಿಗಾಗಿ ವೀಕ್ಷಿಸಿ ನಾಲೆಡ್ಜ್ ಚಾನಲ್ ಅನ್ನು." ಎಂದು ನ್ಯೂಸ್ ಆಂಕರ್ ಹೇಳುತ್ತಿದ್ದರೆ ನಗರದ ಪ್ರತಿ ಮನೆ ಅಂಗಡಿಗಳಲ್ಲಿ ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.


"ಅಯ್ಯೋ ಅಮ್ಮ ಮೊದಲು ಆ ಟಿವಿನಾ ಆಫ್ ಮಾಡು ಒಂದು ವಾರದಿಂದ ಅದೇ ಕೇಳಿ ಕೇಳಿ ಕಿವಿಲಿ ರಕ್ತ ಬರ್ತಿದೆ. ಹುಡುಕೋಕೆ ಆಗಲ್ಲ ಸುಮ್ನೆ ಕ್ಯಾಮರಾ ಮುಂದೆ ನಿಂತು ಬಾಯಿ ಬಡ್ಕೋತಾರೆ. ಇನ್ನು ಆ ಪೊಲೀಸ್ ನವರು ಹುಡುಕೋ ನಾಟಕ ಮಾಡ್ತಾ ಇದಾರೆ. ಇನ್ನು ಈ ರಾಜಕಾರಣಿಗಳು ತಮಗೂ ಇದಕ್ಕೂ ಸಂಬಂಧ ಇಲ್ಲದೇ ಇರೋ ತರ ಇದಾರೆ. ಪಾಪಾ ಅವರಿಬ್ಬರು ಈ ದೇಶಕೋಸ್ಕರ ಸ್ವಾರ್ಥವಿಲ್ಲದೆ ದುಡಿತಾ ಇದ್ರು." ಎಂದು "ಅನಿಕೇತ್" ತನ್ನ ತಾಯಿಗೆ ಹೇಳಿದನು.. 


"ಅನಿಕೇತ್" "ಆಧ್ಯಾ ಗ್ರೂಪ್ ಆಫ್ ಕಂಪನಿ ಅಂಡ್ ಇಂಡಸ್ಟ್ರೀಸ್" ಕಂಪನಿಯ ಸ್ಥಾಪಕ ಮತ್ತು ಚೇರ್ಮನ್ ಆದಂತಹ ಸೂರ್ಯ ಮತ್ತು ಸಂಧ್ಯಾರವರ ಮಗ. ಅನಿಕೇತ್ ಹೊರದೇಶದಲ್ಲಿ, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿ ತನ್ನ ತಾಯ್ನಾಡಿಗೆ ಮರಳಿದ್ದನು. ಸೂರ್ಯ ಮತ್ತು ಸಂಧ್ಯಾರವರ ಮೊದಲ ಮಗಳು "ಆಧ್ಯಾ". ಇವಳು ಕಾಲೇಜ್ ನಲ್ಲಿ ಓದುವಾಗ ತನ್ನ ಸೀನಿಯರ್ "ಅರ್ಜುನ್" ನ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದಳು. ಇವರ ಪ್ರೀತಿಯ ಸಂಕೇತ "ಆರ್ನಾ". ಅರ್ಜುನ್ ಒಬ್ಬ ಚಾರ್ಟೆಡ್ ಅಕೌಂಟೆಂಟ್ ಆಗಿ ತನ್ನದೇ ಆದಾ ಒಂದು ಕಂಪನಿಯನ್ನು ಶುರು ಮಾಡಿದ್ದನು.


__________________________________________________


"ಅಮರ್" ಒಬ್ಬ ಸಾಮಾನ್ಯ ಕುಟುಂಬದ ಹುಡುಗ ಬುದ್ಧಿವಂತ. ಆದರೆ, ಅವನಿಗೆ ಹಣದ ಯಾವುದೇ ವ್ಯಾಮೋಹವಿಲ್ಲದೆ ಸರ್ಕಾರಕ್ಕೆ ಉಪಯೋಗವಾಗುವಂತಹ ಕೆಲಸ ಮಾಡುವುದು ಇವನ ಗುರಿಯಾಗಿತ್ತು.. ಇವನ ತಂದೆ ಶಂಕರ್. ಒಬ್ಬ ಸ್ಕೂಲ್ ಟೀಚರ್. ತಾಯಿ ಗೌರಿ. ಮನೆಯಲ್ಲಿಯೇ ಇದ್ದು ಟೈಲರಿಂಗ್ ಕೆಲಸ ಮಾಡುತ್ತಿದ್ದರು.


ಸೈಂಟಿಸ್ಟ್ ಆಗುವ ಆಸೆಯಿಂದ ಪ್ರಸಿದ್ದ ಸೈಂಟಿಸ್ಟ್ ಆದಂತಹ, ಪ್ರೋಫೇಸರ್ ವಿಶ್ವನಾಥ್ ಬಳಿ ಸೇರಿ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳುವತ್ತ ಮುಖ ಮಾಡಿದ್ದನು. ವಿಶ್ವನಾಥ್ ಸಹ ಅಮರ್'ನಂತೆ ದೇಶ ಸೇವೆಯ ಕನಸಿನಲ್ಲಿ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದರು. ಅವರಿಗೆ ಬಲವಾಗಿ ಅಮರ್ ಕೈ ಜೋಡಿಸಿದ್ದನು.


ವಿಶ್ವನಾಥ್ ಮತ್ತು ಕಮಲರವರ ಪುತ್ರಿಯೇ ಅನಿಕ. ಈಕೆ ಸಹ ತನ್ನ ತಂದೆಯೊಂದಿಗೆ ಕೆಲಸ ಮಾಡುತ್ತಿದ್ದಳು. 


ಒಟ್ಟಾಗಿ ಕೆಲಸ ಮಾಡುತ್ತಿದ್ದ ಅಮರ್ ಮತ್ತು ಅನಿಕ ನಡುವೆ ಪ್ರೀತಿ ಶುರುವಾಗಿ ಮನೆಯವರ ಬಳಿ ಹೇಳಿದಾಗ ಎರಡು ಕುಟುಂಬದವರು ಸಂತೋಷದಿಂದಲೇ ಒಪ್ಪಿಗೆಕೊಟ್ಟಿದ್ದರು. ಜೊತೆಗೆ ಇಬ್ಬರ ಮದುವೆಯು ಸಹ ನಿಗದಿಯಾಗಿತ್ತು. ಮದುವೆ ಕೆಲಸಗಳು ಆರಂಭವಾದರೆ, ಬಿಡುವು ಸಿಗುವುದಿಲ್ಲ ಎಂದು ಸಮುದ್ರ ತೀರಕ್ಕೆ ಸುತ್ತಾಡಲು ಹೊರಟಾಗ ಈ ಘಟನೆ ನಡೆದು ಎರಡು ಕುಟುಂಬಕ್ಕೂ ಬರ ಸಿಡಿಲು ಬಡಿದಂತೆ ಆಗಿತ್ತು.


___________________________________________________


"ಆಧ್ಯಾ ನಿಲಯ" 


ಸಮಯ ಮುಂಜಾನೆ 8 ಗಂಟೆ.


ಈ ಮನೆಯ ಒಡತಿ ಸಂಧ್ಯಾ ಇವರು ಮನೆಯಲ್ಲಿ ಎಷ್ಟೇ ಕೆಲಸದವರಿದ್ದರು ಗಂಡ ಮಕ್ಕಳಿಗಾಗಿ ತಾವೇ ತಿಂಡಿ ಅಡುಗೆ ಮಾಡಿ ಬಡಿಸುತ್ತಿದ್ದರು. ಅದರಲ್ಲೇ ಅವರು ಖುಷಿಯನ್ನು ಕಾಣುತ್ತಿದ್ದರು.


"ರೀ ಸೂರ್ಯ.. ಅನಿ.. ಬನ್ನಿ ಬೇಗ. ಆಫೀಸ್ಗೆ ಲೇಟ್ ಆಗಿಲ್ವ? ತಿಂಡಿ ತಿನ್ನಿ. ಆಮೇಲೆ ನನ್ನ ಮೇಲೆ ರೇಗಾಡಿ ತಿಂಡಿ ಬಿಟ್ಟು ಹೋಗ್ತೀರಾ ಇಬ್ಬರು." ಎಂದು ಸಂಧ್ಯಾರವರು‌ ಮುಂಜಾನೆಯೇ ಗಂಡ ಮಗನ‌ ಮೇಲೆ ರೇಗಾಡುತ್ತಿದ್ದರು.


"ಅಮ್ಮ ಕೂಲ್ ಬರ್ತಾರೆ ಅವರು." ಎಂದು ಆಗಾ ತಾನೇ ಮನೆಗೆ ಬಂದ ಆದ್ಯಾ ತಾಯಿಯ ಕೂಗಾಟ ಕೇಳಿ, ನಗುತ್ತಾ ಸಮಾಧಾನಗೊಳಿಸಿದಳು.


"ಆದ್ಯ ಬಾ ಮಗಳೇ.. ಏನೇ ಇದು ಬೆಳ್ ಬೆಳಿಗ್ಗೆನೇ ದರ್ಶನ ಕೊಡುತ್ತಾ ಇದಿಯಾ. ಬಂಗಾರಿ ಆರ್ನ ಬಾ ಕಂದ." ಸಂಧ್ಯಾರವರು ಮನೆಗೆ ಬಂದ ಮಗಳು ಮೊಮ್ಮಗಳನ್ನು ಆದರದಿಂದ ಬರಮಾಡಿಕೊಂಡರು.


"ಅಮ್ಮ ಅರ್ಜುನ್ ಮಾರ್ನಿಂಗ್ ಫ್ಲೈಟ್ ಗೆ ಡೆಲ್ಲಿಗೆ ಹೋದರು. ಅವ್ರನ್ನ ಏರ್ಪೋರ್ಟ್ಗೆ ಬಿಟ್ಟು ನಿಮ್ಮನ್ನ ನೋಡಿ ಹೋಗೋಣ ಅಂತ ಬಂದೆ." ಎಂದು ಆದ್ಯಾ ಬಂದ ವಿಷಯ ತಿಳಿಸಿದಳು.


"ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ?" ಸಂಧ್ಯಾ ರವರು ಆದ್ಯಾಳ ಗಂಡನ ಮನೆಯವರ ಯೋಗ ಕ್ಷೇಮವನ್ನು ವಿಚಾರಿಸಿದರು.


"ಎಲ್ಲರೂ ಸೂಪರ್, ನೀನು ಹೇಗಿದ್ದೀಯಾ?" ಆದ್ಯಾ ತಾಯಿ ಪ್ರಶ್ನೆಗೆ ಉತ್ತರಿಸಿ ತಾಯಿಯನ್ನು ವಿಚಾರಿಸಿದಳು.


"ನಮ್ಮ ಮೇಲೆ ರೇಗಾಡ್ತಾ, ಬಿಪಿ ಶುಗರ್ ಜಾಸ್ತಿ ಮಾಡಿಕೊಳ್ಳುತ್ತಾರೆ. ಅಕ್ಕ ನೀನೇ ಹೇಳು ಈ ಅಮ್ಮನಿಗೆ ಸ್ವಲ್ಪ ಸಮಾಧಾನವಾಗಿ ಇರೋದಕ್ಕೆ." ಎಂದು ಆದ್ಯಾಳ ಪ್ರಶ್ನೆಗೆ ಉತ್ತರಿಸುತ್ತಾ ಅನಿಕೇತ್ ಬಂದನು.


"ಏನೇ ಮಾಡಲಿ ಯಾವಾಗ ನೋಡಿದರೂ ಅಪ್ಪ ಮಗ ಆ ಲ್ಯಾಪ್ಟಾಪ್ ನ ಮಡಿಲಲ್ಲಿ ಇಟ್ಟುಕೊಂಡಿರುತ್ತಾರೆ, ಊಟ ತಿಂಡಿ ಸರಿಯಾಗಿ ಮಾಡಲ್ಲ ಇದನ್ನೆಲ್ಲಾ ನೋಡಿ ರೇಗಾಡದೆ ಇರ್ಲ?" ಅನಿಕೇತ್ ನೀಡಿದ ಉತ್ತರಕ್ಕೆ ಬೇಸರದಿಂದಲೇ ಸಂಧ್ಯಾರವರು ಸಮಜಾಯಿಷಿ ಕೊಡುತ್ತಿದ್ದರು.


"ಅಪ್ಪ ಅನಿ ಯಾಕೆ ಈ ತರ ಮಾಡ್ತೀರಾ? ಪಾಪ ಅಮ್ಮನ ನೋಡಿ ಎಷ್ಟು ಬೇಜಾರ್ ಆಗಿದ್ದಾಳೆ. ನೀವು ಸರಿಯಾಗಿ ಆರೋಗ್ಯದ ಕಡೆ ಗಮನ ಹರಿಸಿದರೆ ಅವಳು ರೇಗಾಡಲ್ಲ." ತಾಯಿಯ ಬೇಜಾರನ್ನು ಗಮನಿಸಿದ ಆದ್ಯಾ ತಂದೆ ತಮ್ಮನಿಗೆ ಬುದ್ಧಿ ಹೇಳಿದಳು.


"ಸರಿ ಬಿಡೇ ಅಕ್ಕ. ಇನ್ಮೇಲೆ ಸರಿಯಾಗಿ ಊಟ ತಿಂಡಿ ಮಾಡುತ್ತೇನೆ. ಅಮ್ಮ ಪ್ಲೀಸ್ ನಗು. ಈ ತರ ಎಲ್ಲ ಇರಬೇಡ." ಅನಿಕೇತ್ ಅಕ್ಕನ ಮಾತಿಗೆ ಒಪ್ಪಿ ತಾಯಿಯನ್ನು ಸಮಾಧಾನಿಸಿದನು.


"ಬನ್ನಿ ಎಲ್ಲ ತಿಂಡಿ ತಿನ್ನಿ, ಆರ್ನ ಬಾ ಕಂದ ತಿಂಡಿ ತಿನ್ನೋಣ." ಮೊಮ್ಮಗಳ ಸಮೇತ ಸಂಧ್ಯಾ ರವರು ಎಲ್ಲರಿಗೂ ತಿಂಡಿ ಬಡಿಸಿ ತಾವು ತಿಂದು ಮುಗಿಸಿದರು. 


ಸಮಾಧಾನಗೊಂಡ ಸಂಧ್ಯಾ ಶಾಂತಿಯಿಂದಲೇ ತಿಂಡಿ ಮುಗಿಸಿದರು.


ಅನಿಕೇತ್ ಮತ್ತು ಸೂರ್ಯ ರವರು ಆಫೀಸ್ ಕಡೆ ಹೊರಟರೆ ಸಂಧ್ಯಾ ರವರ ಜೊತೆ ಆದ್ಯ ಮತ್ತು ಆರ್ನ ಉಳಿದರು. 


ಆದ್ಯ ಮಗಳೊಂದಿಗೆ ಸಂಜೆಯವರೆಗೆ ತಾಯಿ ಜೊತೆ ಸಮಯ ಕಳೆದು ತನ್ನ ಗಂಡನ ಮನೆಗೆ ಹೊರಟಳು.


_______________________________________________


ಸೂರ್ಯ ರವರು ಚಿಕ್ಕದಾಗಿ ಶುರುಮಾಡಿದ ಕೆಲಸ ಆದ್ಯ ಹುಟ್ಟಿದ ನಂತರ ಇನ್ನಷ್ಟು ಅಭಿವೃದ್ಧಿ ಹೊಂದಿದ್ದರಿಂದ "ಆದ್ಯ ಗ್ರೂಪ್ ಆಫ್ ಕಂಪನಿ" ಎಂಬ ಶೀರ್ಷಿಕೆಯಲ್ಲಿ ಶುರು ಮಾಡಿ ನಾಲ್ಕು ಜನರಿಗೆ ಆಧಾರವಾಗಿದ್ದರು. ಕಾಲಕ್ರಮೇಣ ಅವರ ಪರಿಶ್ರಮದಿಂದ ಕಂಪನಿ, ಇಂಡಸ್ಟ್ರೀಸ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿ ಸಾವಿರಾರು ಜನರಿಗೆ ಬೆಳಕಾಯಿತು.


ಈ ಕಂಪನಿಯು ಗಾರ್ಮೆಂಟ್, ಕನ್ಸ್ಟ್ರಕ್ಷನ್, ಹೋಟೆಲ್, ಆಟೋಮೊಬೈಲ್ ಹೀಗೆ ಹಲವಾರು ಶಾಖೆಗಳನ್ನು ಹೊಂದಿದ್ದು ಇದರ ಪೂರ್ತಿ ಜವಾಬ್ದಾರಿ ಸೂರ್ಯ ರವರು ಹೊಂದಿದ್ದರು. ಅನಿಕೇತ್ ಎಜುಕೇಶನ್ ಮುಗಿದ ನಂತರ ಫ್ಯಾಬ್ರಿಕ್, ಹೋಟೆಲ್, ಆಟೋಮೊಬೈಲ್ ಮತ್ತು ಹಾಸ್ಪಿಟಾಲಿಟಿ ಬಗ್ಗೆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದನು.


ಇನ್ನು ಕನ್ಸ್ಟ್ರಕ್ಷನ್, ಸಾಫ್ಟ್ವೇರ್, ಹಾಸ್ಪಿಟಲ್, ಸ್ಕೂಲ್ ಮತ್ತು ಕಾಲೇಜ್ ಬಗ್ಗೆ ಸಚಿನ್ ಜವಾಬ್ದಾರಿಯನ್ನು ವಹಿಸಿಕೊಂಡನು. "ಸಚಿನ್" ಇವನು ಸಂಧ್ಯಾ ರವರ ಅಕ್ಕನ ಮಗ. 


ಸಂಧ್ಯಾರವರಿಗೆ ಸೂರ್ಯರೊಂದಿಗೆ ಮದುವೆಯಾಗಿ 8 ವರ್ಷ ಕಳೆದಿತ್ತು. ಆ ಸಮಯದಲ್ಲಿ ಸಚಿನ್ ಗೆ ಹತ್ತು ವರ್ಷ, ರಸ್ತೆ ಅಪಘಾತದಲ್ಲಿ ಸಚಿನ್ ತನ್ನ ತಂದೆ ತಾಯಿಯನ್ನು ಕಳೆದುಕೊಂಡಿದ್ದನು ಅಂದಿನಿಂದ ಸೂರ್ಯ ಮತ್ತು ಸಂಧ್ಯಾರವರೇ ಸಚಿನ್ ತಂದೆ ತಾಯಿಯಾದರು. ಸಚಿನ್ ಸಹ ಹೆತ್ತವರನ್ನು ಮರೆತು ಸೂರ್ಯ ಮತ್ತು ಸಂಧ್ಯಾ ಅವರಲ್ಲಿ ಹೆತ್ತವರನ್ನು ಕಾಣತೊಡಗಿದ್ದನು.


ಅನಿಕೇತ್ ಜವಾಬ್ದಾರಿಯನ್ನು ತೆಗೆದುಕೊಳ್ಳುವವರೆಗೂ ಎಲ್ಲಾ ಕೆಲಸವನ್ನು ನಿರ್ವಹಿಸುತ್ತಿದ್ದನು. ಸಚಿನ್ ಸ್ವಲ್ಪ ಧೈರ್ಯವಂತ, ಶಿಸ್ತು, ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡಿದ್ದನು. ಕೆಲಸದ ವಿಚಾರದಲ್ಲಿ ಯಾವುದೇ ರೀತಿಯ ರಾಜಿಗೆ ಅವಕಾಶ ಕೊಡುತ್ತಿರಲಿಲ್ಲ ತನ್ನ ಶಿಸ್ತಿನಿಂದ ಎಲ್ಲವನ್ನು ನಡೆಸುತ್ತಿದ್ದನು.


ಆದ್ಯ ಸಚಿನ್ ನಿಂದ ಮೂರು ವರ್ಷ ಚಿಕ್ಕವಳಾದರೂ ಧೈರ್ಯವಂತೆಯಾಗಿದ್ದಳು, ಅದನ್ನು ಯಾವಾಗ ಉಪಯೋಗಿಸಬೇಕು ಆಗ ಉಪಯೋಗಿಸುತ್ತಿದ್ದಳು. ಉಳಿದ ಸಮಯದಲ್ಲಿ ಸಾಧುವಿನಂತೆ ಇರುತ್ತಿದ್ದಳು.


ಅನಿಕೇತನ್ ಆದ್ಯಳಿಗಿಂತ ಮೂರು ವರ್ಷ ಚಿಕ್ಕವನು. ಕೆಲಸ ಕಾರ್ಯ ಸರಿಯಾಗಿ ಮಾಡಿದರು ತುಂಬಾ ಮೃದು ವ್ಯಕ್ತಿತ್ವ ಹೊಂದಿದವನು. ಅವನ ಮಾತು ಮನೆಯವರ ಮುಂದೆ ಮಾತ್ರ. ಮೀಟಿಂಗ್ ಹೊರತುಪಡಿಸಿ ಬೇರೆಲ್ಲೂ ಹೆಚ್ಚು ಮಾತನಾಡುವುದನ್ನು ಯಾರು ಕಂಡಿಲ್ಲ. ಇನ್ನು ಜಗಳ ಗಲಾಟೆಗಳಿಂದ ತುಂಬಾ ದೂರ. ಹುಡುಗಿಯರ ಕಣ್ಣಿಗೆ ಅಮೂಲ್ ಬೇಬಿ ಈ ಅನಿಕೇತ್. 


ತಾಳ್ಮೆ ಸಮಾಧಾನ ನಗುಮುಖದಲ್ಲೇ ಕೆಲಸಗಾರರಿಂದ ಕೆಲಸವನ್ನು ಮಾಡಿಸುತ್ತಿದ್ದನು. ಕಾರ್ಮಿಕರಲ್ಲಿ ತಾನೊಬ್ಬ ಕಾರ್ಮಿಕನಾಗಿ ಹಗಲು ರಾತ್ರಿ ಶ್ರಮವಹಿಸಿ ದುಡಿಯುತ್ತಾನೆ. ಅದರ ಪರಿಣಾಮವೇ ಇವನ ನಿಯಂತ್ರಣದಲ್ಲಿದ್ದ ಫ್ಯಾಬ್ರಿಕ್ಸ್ ಮತ್ತು ಹೋಟೆಲ್ ಬಿಸಿನೆಸ್ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದರೆ, ಆಟೋಮೊಬೈಲ್ ಭಾರತದಲ್ಲಿ ಹೆಸರುವಾಸಿಯಾಗಿತ್ತು. 


ಹಾಸ್ಪಿಟಾಲಿಟಿ ಹೊಸದಾಗಿ ಶುರು ಮಾಡಿದ್ದರಿಂದ ಕರ್ನಾಟಕದಲ್ಲಿ ಮಾತ್ರ ಚಿರಪರಿಚಿತವಾಗಿತ್ತು.


ಬೆಂಗಳೂರಿನಲ್ಲಿ ಮಾತ್ರವಲ್ಲದೆ ಮೈಸೂರು, ಮಂಗಳೂರು, ಚಿಕ್ಕಮಗಳೂರು, ಕೊಡಗು, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ರೆಸಾರ್ಟ್ ಗಳನ್ನು ನಿರ್ಮಿಸಿ ಅಲ್ಲಿ ಸುಸಜ್ಜಿತವಾದ ವ್ಯವಸ್ಥೆಯನ್ನು ಮಾಡಿದ್ದನು.


ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಅಂಧ್ರಗಳೊಂದಿಗೆ ಉತ್ತರ ಭಾರತದಲ್ಲಿ ರೆಸಾರ್ಟ್ ಸ್ಥಾಪನೆಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಅದರ ಅನುಮತಿಗಾಗಿ ಕಾಯುತ್ತಿದ್ದನು.


ಇವನ ಈ ಕಾರ್ಯದಕ್ಷತೆ ಸೂರ್ಯರವರಿಗೆ ಮಾತ್ರವಲ್ಲದೆ ಇತರ ಬಿಸಿನೆಸ್ ಮ್ಯಾನ್ ಗಳನ್ನು ತನ್ನಡೆ ನೋಡುವಂತೆ ಮಾಡಿಕೊಂಡಿದ್ದನು.


ಇವನ ಕೆಲಸಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಹೋಗುತ್ತಿದ್ದವೆ ಹೊರತು ಎಂದು ಕಡಿಮೆಯಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಹಾಯಕವಾಗಿ ನೇಮಕಗೊಂಡವಳೇ "ಆಕಾಂಕ್ಷ". ಅನಿಕೇತ್'ನಂತೆ ಕೆಲಸದಲ್ಲಿ ಚುರುಕಾಗಿದ್ದರು ಧೈರ್ಯವಂತೆ, ಮಾತುಗಾರಳು. ಅನಿಕೇತ್ ಜೊತೆ ಆಕಾಂಕ್ಷ ಮೀಟಿಂಗ್ನಲ್ಲಿ ಭಾಗವಹಿಸಿದರೆ ಅವರ ಎದುರಾಳಿಗಳು ಯಾವುದೇ ರೀತಿಯ ಸ್ಪರ್ಧೆಗಳಿಗೆ ಭಾಗವಹಿಸದೆ ತಾವಾಗಿಯೇ ಹಿಂದೆ ಸರಿಯುತ್ತಿದ್ದರು.


ಅದನ್ನು ಮೀರಿ ಅಖಾಡಕ್ಕೆ ಇಳಿದರೆ ತಮ್ಮ ಕೆಲಸದ ಮೂಲಕ ಮಣ್ಣು ಮುಕ್ಕಿಸುತ್ತಿದ್ದರು. ಆಕಾಂಕ್ಷಳ ಮಾತು, ಧೈರ್ಯ, ಕೆಲಸದಲ್ಲಿನ ಚಾಕಚಕ್ಯತೆ ಅನಿಕೇತ್ ಮನಸ್ಸಲ್ಲಿ ಪ್ರೀತಿಯ ಹೂವನ್ನು ಅರಳುವಂತೆ ಮಾಡಿತ್ತು. ತನ್ನ ಪ್ರೀತಿಯನ್ನು ಹೆತ್ತವರ ಮುಂದೆ ಇಟ್ಟಾಗ ಆಕಾಂಕ್ಷಳ ಗುಣ ನಡತೆ ಬಗ್ಗೆ ಅರಿವಿದ್ದ ಸೂರ್ಯ ಅವರು ಒಪ್ಪಿದರೆ, ಸಂಧ್ಯಾ ರವರು ಮಗನ ಖುಷಿಗಾಗಿ ಒಪ್ಪಿದರು. ಸಚಿನ್ ಆದ್ಯ ಸಹ ತಮ್ಮನ ಖುಷಿಗೆ ಒಪ್ಪಿದರು.


ಆಕಾಂಕ್ಷ ಒಂದು ಬಡಕುಟುಂಬದ ಹುಡುಗಿ ಸ್ಕಾಲರ್ಶಿಪ್ ನಲ್ಲಿ ಓದಿ ಆದ್ಯ ಗ್ರೂಪ್ ಆಫ್ ಕಂಪನಿಯಲ್ಲಿ ಅನಿಕೇತ್ ನ ಪರ್ಸನಲ್ ಸೆಕ್ರೆಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು.


ಅನಿಕೇತ್ ಹೆತ್ತವರೆ ಆಕಾಂಕ್ಷ ಮನೆಯಲ್ಲಿ ಮದುವೆಯ ಪ್ರಸ್ತಾಪ ಮಾಡಿದಾಗ ಅಂತಸ್ತಿನ ವ್ಯತ್ಯಾಸದಿಂದ ಮೊದಲು ನಿರಾಕರಿಸಿದರೂ, ಆದ್ಯ ಮತ್ತು ಸಂಧ್ಯಾ ಅವರ ಮಾತು ಭರವಸೆಯಿಂದ ಒಪ್ಪಿದರು. ಸಚಿನ್ ಮದುವೆ ನಂತರ ಅನಿಕೇತ್ ಮತ್ತು ಆಕಾಂಕ್ಷ ಮದುವೆ ಎಂದು ತೀರ್ಮಾನಿಸಿದರು.


ಅನಿಕೇತ್ ಮತ್ತು ಆಕಾಂಕ್ಷ ಪ್ರೇಮಿಗಳಾದರೂ, ದೊಡ್ಡವರ ಒಪ್ಪಿಗೆ ಇದ್ದರು ಎಂದು ಎಲ್ಲೆ ಮೀರಿ ವರ್ತಿಸಿದವರಲ್ಲ. ಆಫೀಸ್ನಲ್ಲಿ ವರ್ಕರ್ ತರ ದುಡಿದರೆ ಸಿಕ್ಕ ಸಮಯದಲ್ಲಿ ಮುಂದಿನ ಜೀವನದ ಕನಸುಗಳಿಗೆ ಅಣೆಕಟ್ಟು ಕಟ್ಟುವ ಯೋಜನೆಯನ್ನು ಮಾಡುತ್ತಿದ್ದರು.



____________________________________________________



"ಆದ್ಯಾ ಗ್ರೂಪ್ ಆಫ್ ಕಂಪನೀಸ್ ಅಂಡ್ ಇಂಡಸ್ಟ್ರೀಸ್."


ನಾನಾ ರೀತಿಯ ವ್ಯವಹಾರಗಳನ್ನು ನಡೆಸುತ್ತಿದ್ದರೂ ಎಲ್ಲ ವ್ಯವಹಾರಗಳ ಮುಖ್ಯ ಜವಾಬ್ದಾರಿಯನ್ನು ಸೂರ್ಯರವರು ನಿರ್ವಹಿಸುತ್ತಿದ್ದರು. ಅವರ ನಂತರದ ಜವಾಬ್ದಾರಿ ಸಚಿನ್ ಮತ್ತು ಅನಿಕೇತ್ ರವರದ್ದಾಗಿತ್ತು.


ಆ ವರ್ಷದ ವ್ಯವಹಾರಗಳ ಪರಿಶೀಲನೆಗಾಗಿ ಸಚಿನ್ ಮತ್ತು ಅನಿಕೇತ್ ಸೂರ್ಯರವರು ಏರ್ಪಡಿಸಿದ್ದ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು.


ಈ ಮೂವರೊಟ್ಟಿಗೆ ಆಯಾ ಡಿಪಾರ್ಟ್ಮೆಂಟ್ ನ ಹೆಡ್ ಮತ್ತು ಮ್ಯಾನೇಜರ್ ಗಳು ಸಚಿನ್ ಮತ್ತು ಅನಿಕೇತ್ ಪಿ.ಎ ಗಳು ಹಾಜರಿದ್ದರು.


10 ರಿಂದ 3 ರವರೆಗೆ ಸತತವಾಗಿ 5 ಗಂಟೆಗಳ ಕಾಲ ನಡೆದ ಮೀಟಿಂಗ್ ನಲ್ಲಿ ಈ ವರ್ಷದಲ್ಲಿ ಅನಿಕೇತ್ ಇನ್ನು ಹೆಚ್ಚು ಲಾಭ ಬರುವಂತೆ ಮಾಡಿದ್ದನು.


ಎಲ್ಲರು ಅನಿಕೇತ್ ಗೆ ಅಭಿನಂದನೆ ತಿಳಿಸಿದರೇ, ಅನಿಕೇತ್ ಎಲ್ಲ‌ಕ್ರೆಡಿಟ್ ನ್ನು ಕೆಲಸಗಾರರಿಗೆ ಅರ್ಪಿಸಿದನು. ಜೊತೆಗೆ ಅವನ ನಿರ್ವಹಣೆಯ ಕಂಪನಿಯ ಕೆಲಸಗಾರರ ಜೊತೆಗೆ ಸಚಿನ್ ನಿರ್ವಹಿಸುವ ಕಂಪನಿಯ ಕಾರ್ಮಿಕರು ಮತ್ತು ಅವರ ಮನೆಯವರಿಗೆ ಜೀವಾ ಮಿಮೆಯನ್ನು ಮಾಡಿಸುವಂತೆ ತಂದೆಯಲ್ಲಿ ಮನವಿಯಿಟ್ಟನು.


ಅದರ ಜೊತೆಗೆ ಅವರ ಕಂಪನಿಯ ಕಾರ್ಮಿಕರ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 1 ರಿಂದ 10ನೇ ತರಗತಿಯವರೆಗೆ ಓದಲು ಶಾಲೆಯನ್ನು ಆರಂಭಿಸುವುದು ಮೆಟ್ರಿಕ್ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆಯನ್ನು ಮಂಡಿಸಿದನು.


ಸೂರ್ಯ ಮತ್ತು ಸಚಿನ್ ಸಂಪೂರ್ಣ‌ ಒಪ್ಪಿಗೆಯನ್ನು ನೀಡುವುದರ ಜೊತೆಗೆ ಬೆಂಬಲವಾಗಿ ನಿಂತರು. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಂತೆ ಆಫೀಸ್‌ನ ನೋಟೀಸ್ ಬೋರ್ಡ್ ನಲ್ಲಿ ವಿಷಯವನ್ನು ತಿಳಿಸುವಂತೆ ಆಜ್ಞೆಯನ್ನು ಹೊರಡಿಸಿದ ಸೂರ್ಯರವರು ಅಂದಿನ ಮೀಟಿಂಗ್ ಗೆ ಅಂತ್ಯವನ್ನು ಆಡಿದರು.


ಅಂದಿನ ಮೀಟಿಂಗ್ ನಲ್ಲಿ ಭಾಗವಹಿಸಿದವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದರು. ವರ್ಷ ಪೂರ್ತಿ ದುಡಿಯುವ ಕೆಲಸಗಾರರ ಲ್ಲಿ ಅತಿ ಹೆಚ್ಚು ಶಿಸ್ತು ಶ್ರಮದಿಂದ ದುಡಿಯುವವರಿಗೆ ಸನ್ಮಾನಿಸಲು ಒಂದು ಕಾರ್ಯಕ್ರಮವನ್ನು ಏರ್ಪಡಿಸಿದರು. ಆ ಕಾರ್ಯದಲ್ಲಿ ಗೇಟ್ ಕಾಯುವ ವಾಚ್ ಮ್ಯಾನ್ ನಿಂದ ಹಿಡಿದು ಸೂರ್ಯರವರಿಗೂ ಎಲ್ಲರು ಭಾಗವಹಿಸಬೇಕಿತ್ತು.


ಬರುವ ಭಾನುವಾರವೇ ಕಾರ್ಯಕ್ರಮ ಎಂದು ನಿಗದಿ ಮಾಡಿದರು. ಉಳಿದ ಆರು ದಿನದಲ್ಲಿ ಎಲ್ಲ ರೀತಿಯ ಏರ್ಪಾಡುಗಳನ್ನು ಮಾಡುವ ಜವಾಬ್ದಾರಿ ಸಚಿನ್, ಅನಿಕೇತ್, ಆಕಾಂಕ್ಷ ಮತ್ತು ಸಚಿನ್ ಪಿ.ಎ ಪೂಜಾ ಇವರುಗಳೇ ಹೊತ್ತುಕೊಂಡರು.


ಆಯಾ ವಿಭಾಗದಲ್ಲಿ ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸುವಂತ ವ್ಯಕ್ತಿಗಳಿಗೆ ಆ ವಿಭಾಗದ ಬೆಸ್ಟ್ ಎಂಪ್ಲಾಯಿಸ್ ಲೀಸ್ಟ್ ತಯಾರಿಸಲು ಹೇಳಿದರು. ಅದರಂತೆ ವ್ಯಕ್ತಿ ನಿಷ್ಠೆಯಿಲ್ಲದೆ ಕಾರ್ಯದಕ್ಷತೆಯ ಆಧಾರದ ಮೇಲೆ ಕಾರ್ಮಿಕರನ್ನು ಆಯ್ಕೆ ಮಾಡಿದರು.


ಆಕಾಂಕ್ಷ ಮತ್ತು ಪೂಜಾ ಕಾರ್ಯಕ್ರಮಕ್ಕೆ ಬೇಕಾದ ವಸ್ತುಗಳ ಖರೀದಿ ಅಲಂಕಾರದಲ್ಲಿ ತೊಡಗಿದರೆ, ಸಚಿನ್ ಮತ್ತು ಅನಿಕೇತ್ ಅತಿಥಿಗಳ ಲೀಸ್ಟ್ ಮಾಡಿ ಅವರನ್ನು ಆಮಂತ್ರಿಸಿದರು.


6 ದಿನಗಳ ನಂತರ ಕಾರ್ಯಕ್ರಮಕ್ಕೆ ಒಂದು ವೇದಿಕೆ ಸಿದ್ದವಾಯಿತು. ಮಾರ್ನಿಂಗ್ 10 ಗಂಟೆಗೆ ವೆಲ್ಕಮ್ ಡ್ರಿಂಕ್ ನೊಂದಿಗೆ ಆರಂಭವಾದ ಫಂಕ್ಷನ್ ಮಧ್ಯಾಹ್ನದ ಊಟ ಸಂಜೆಯ ಸ್ಯ್ನಾಕ್ಸ್ ನೊಂದಿಗೆ ರಾತ್ರಿಯ ಮಂಜನೆಯವರೆಗೂ ನಿರಂತರವಾಗಿ ಸಾಗುತಲಿತ್ತು. ರಾತ್ರಿ 8 ರ ನಂತರ ಊಟದ ವ್ಯವಸ್ಥೆಯ ಬಳಿಕ ಕಾರ್ಯಕ್ರಮ ಅಂತಿಮ ಘಟ್ಟವನ್ನು ತಲುಪಿತು. ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬ ಕಾರ್ಮಿಕರನ್ನು ಸನ್ಮಾನಿಸಿದರು.


"ಆದ್ಯಾ ನಿಲಯ ಸಮಯ ಮುಂಜಾನೆ 8 ಗಂಟೆ."


ಸಂಧ್ಯಾರವರು ಸೂರ್ಯ ಮತ್ತು‌ ಸಚಿನ್ ಗೆ ತಿಂಡಿಯನ್ನು ಕೊಡುತ್ತಿದ್ದರು. ಅದೇ ವೇಳೆಗೆ ಅನಿಕೇತ್ ಸಹ ಹಾಜರಾದನು.


"ಅಪ್ಪ" ಎಂದು ಅನಿಕೇತ್ ತನ್ನ ಮಾತಿಗೆ ಪೀಠಿಕೆಯನ್ನು ಹಾಕಿದನು.


"ಹೇಳು ಅನಿ" ಸೂರ್ಯರವರು ಮಗನ ಮಾತಿಗೆ ಪ್ರತಿಕ್ರಿಯಿಸಿದರು.


ನೇರವಾಗಿಯೇ " ನಾನು ಆಫೀಸ್ ಗೆ ಬರಲ್ಲ" ಎಂದು ತಿಳಿಸಿದನು.


"ಯಾಕೋ‌ ಏನಾಯ್ತೋ?" ಎಂದು ಸಚಿನ್ ಆತಂಕದಿಂದ ಪ್ರಶ್ನಿಸಿದರೇ.


"ಕಂದ ಹುಷರಾಗಿ ಇದ್ದೀಯಾ ಅಲ್ವ" ಎಂದು ಸಂಧ್ಯಾರವರು ಗಾಬರಿಯಿಂದ ಮಗನ ಯೋಗ ಕ್ಷೇಮ ವಿಚಾರಿಸಿದರು.


"ಅಮ್ಮ ಅಣ್ಣ ನನಗೆ ಏನು ಆಗಿಲ್ಲ ಯಾಕೋ ಎಲ್ಲಾ ತಲೆ ಬಿಸಿಯಿಂದ ದೂರ ಇರಬೇಕು ಅನಿಸ್ತಾ ಇದೆ" ಎಂದು ತಾಯಿ ಅಣ್ಣನನ್ನು ಸಮಾಧಾನಿಸಿ, "ಅಪ್ಪ ಪ್ಲೀಸ್" ಎಂದು ತಂದೆಯಲ್ಲಿ ವಿನಂತಿಸಿಕೊಂಡನು.


"ಸರಿ ಕಂದ, ಆದರೇ ಹುಷಾರು ಪ್ರತಿದಿನ ನಿನ್ನ ಬಗ್ಗೆ ಅಪ್ಡೇಟ್ ಮಾಡಬೇಕು. ಆಗಿದ್ರೆ ಮಾತ್ರ ಹೋಗು." ಎಂದು ಸೂರ್ಯರವರು ಷರತ್ತಿನೊಂದಿಗೆ ಒಪ್ಪಿಗೆಯನ್ನು ಕೊಟ್ಟರು.


"ಸರಿ ಅಪ್ಪ ಮಾಡ್ತೀನಿ" ಎಂದು ಅನಿಕೇತ್ ಸಹ ಅಪ್ಪನ ಷರತ್ತಿಗೆ ಒಪ್ಪಿದನು.


"ರೀ ಒಬ್ನನ್ನೆ ಕಳಿಸ್ತಿರಾ?" ಸಂಧ್ಯಾರವರು ಆತಂಕದಿಂದ ಸೂರ್ಯರವರಲ್ಲಿ ಪ್ರಶ್ನಿಸಿದರು.


"ಅವನಿಗೂ ಸ್ವಲ್ಪ ಧೈರ್ಯ ಬರಲಿ ಸಂಧ್ಯಾ, ಯಾವಾಗಲೂ ಯಾರು ಜೊತೆಗಿರೋಕೆ ಆಗಲ್ಲ. ಇಲ್ಲಿ ನಾವುಗಳು ಆಫೀಸ್ ನಲ್ಲಿ ಆಕಾಂಕ್ಷ ಇವನ ಜೊತೆಗಿದ್ದು ಇವನು ಈ ತರ ಎಲ್ಲದಕ್ಕೂ ಪರ್ಮಿಷನ್ ಕೇಳೋದು ಮಾತನಾಡದೆ ಇರೋದು ಮಾಡೋದು. ಒಂಟಿಯಾಗಿದ್ದು ಪ್ರಪಂಚನ ಎದಿರಿಸೋದು ಕಲಿಬೇಕು" ಎಂದು ಅನಿಕೇತ್ ಗೆ ಬೆಂಬಲವಾಗಿ ನಿಂತರು.


"ಅದು ನಿಜ ಅಪ್ಪ, ಅನಿ ಎಷ್ಟು‌ ದಿನ ಈ ಪ್ಲಾನ್" ಸಚಿನ್ ತಂದೆಯ ಮಾತನ್ನು ಅನುಮೋದಿಸಿ ಅನಿಕೇತ್ ಬಳಿ ಅವನ ಟ್ರಿಪ್ ಬಗ್ಗೆ ವಿಚಾರಿಸಿದನು.


"ಮೂರು ತಿಂಗಳು ಅಂದುಕೊಂಡಿದ್ದೀನಿ ನೋಡಬೇಕು. ಅದರ ಒಳಗೆ ವಾಪಸ್ ಬರಬಹುದು ಇಲ್ಲ ಇನ್ನು ಜಾಸ್ತಿ ದಿನ ಆಗಬಹುದು ನಾನ್ ಅಂದು ಕೊಂಡ ರೀತಿಯಲ್ಲೇ ಆದರೇ ತಿಂಗಳ ಒಳಗೆ ಬರ್ತೀನಿ." ಎಂದು ತನ್ನ ಪ್ಲಾನ್ ಬಗ್ಗೆ ತಿಳಿಸಿದನು.


"ಅದರ ಬಗ್ಗೆ ಆಕಾಂಕ್ಷ ಹತ್ತಿರ ಮಾತನಾಡಿದ್ದಿಯಾ?" ಎಂದು‌ ಸಂಧ್ಯಾರವರು ಸೊಸೆಯನ್ನು ನೆನೆದು ಮಗನಲ್ಲಿ ಪ್ರಶ್ನಿಸಿದರು.


"ಅವಳೇ ಬ್ರೇಕ್ ತಗೊಳೋಕೆ ಐಡಿಯಾ ಕೊಟ್ಟಿದ್ದು, ಈ ಟ್ರಿಪ್ ಪ್ಲಾನ್ ಮಾತ್ರ ನಂದು" ಎಂದು ಅನಿಕೇತ್ ಉತ್ತರಿಸಿದನು.


"ಯಾವ ಯಾವ ಸ್ಥಳ ನೋಡಬೇಕು ಅಂತಿದೀಯಾ?" ಎಂದು ಸಚಿನ್ ಪ್ರಶ್ನಿಸಿದನು.


"ಮೊದಲು ಕಾರವಾರ, ಆಮೇಲೆ ಅಲ್ಲೇ ಸುತ್ತಾಮುತ್ತಾ ಸಾಧ್ಯ ಆಗಲೇ ಕರ್ನಾಟಕನೇ ಟ್ರಿಪ್ ಹೊಡಿಯೋದು" ಎಂದು ಉತ್ತರಿಸಿದನು.


"ಏನು ಕಾರವಾರನಾ? ಅಲ್ಲಿಗೆ ಬೇಡ್ವೆ ಬೇಡ ಹೋದ ವಾರ ತಾನೇ ಆ ಸೈಟಿಂಸ್ಟ್ ಕಿಡ್ನಾಪ್ ಆಗಿದೆ ನೀನು ಅಲ್ಲಿಗೆ ಹೋಗಬೇಡ." ಎಂದು ಸಂಧ್ಯಾರವರು ಗಾಬರಿಯಿಂದ ಅನಿಕೇತ್ ನನ್ನು ತಡಿಯಲು ಪ್ರಯತ್ನಿಸಿದರು.


"ಯಾರೋ ಯಾರನ್ನ ಕಿಡ್ನಾಪ್ ಮಾಡಿದ್ರು ಅಂದ ತಕ್ಷಣ ನಮ್ಮನ್ನು ಮಾಡ್ತಾರೆ ಅಂತನಾ, ಈ ನಿನ್ನ ಮುದ್ದೇ ಇವನು ಮುದ್ದೆ ತರ ಮಾಡಿರೋದು. ಅನಿ ನೀನ್ ಎಲ್ಲ ತಯಾರಿ ಮಾಡ್ಕೋ ಯಾವಾಗ ಹೊರಡೊದು?" ಎಂದು ಸೂರ್ಯರವರು ಸಂಧ್ಯಾರವರಿಗೆ ಗದರಿ ಅನಿಕೇತ್ ತಯಾರಿ ಬಗ್ಗೆ ಕೇಳಿದರು.


"ಇವತ್ತು ನೈಟ್ ಅಪ್ಪ" ಎಂದು ಉತ್ತರಿಸಿದನು.


"ಸರಿ ಹುಷಾರು" ಎಂದು ಎಚ್ಚರಿಸಿದರು.


"ಆಗಿದ್ರೆ ಅಪ್ಪ ಇವತ್ತು ನಾನು ಇವನ ಜೊತೆಗೆ ಶಾಪಿಂಗ್ ಹೋಗಿ ಬರ್ಲ" ಎಂದು ಅನುಮತಿ ಕೇಳಿದನು.


"ನಿಮ್ಮ ಜೊತೆಗೆ ಪೂಜಾ ಮತ್ತೆ ಆಕಾಂಕ್ಷಗಳನ್ನು ಕರೆದುಕೊಂಡು ಹೋಗಿ" ಎಂದು ಸಂಧ್ಯಾರವರು ತಿಳಿಸಿದರು.


"ತಗೊಳ್ಳಿ ಈ ಕಾರ್ಡ್" ಎಂದು ಸೂರ್ಯರವರು ತಮ್ಮ ಕಾರ್ಡ್ ಕೊಡಲು ಮುಂದಾದರು.


"ಬೇಡ ಅಪ್ಪ ನನ್ನ ಹತ್ತಿರನೇ ನಾಲ್ಕು ಕಾರ್ಡ್ ಇದೆ ಅದರಲ್ಲೇ ಸಾಕಾಗಬಹುದು ಇನ್ನು ಬೇಕಾದರೇ ಹೇಳ್ತೀನಿ ಮನಿ ಟ್ರಾನ್ಸ್ಫರ್ ಮಾಡುವಂತ್ರಿ" ಎಂದು‌ ಸಚಿನ್ ನಿರಾಕರಿಸಿದನು.


"ಅಪ್ಪ ಅಣ್ಣ ನನ್ನ ಹತ್ತಿರನು ನಾಲ್ಕು ಕಾರ್ಡ್ ಇದೆ" ಎಂದು ಅನಿಕೇತ್ ಹೇಳಿದರೇ.


"ಅದು ಹಾಗೇ ಇರಲಿ ಹೊರಗೆ ಹೋಗ್ತಾ ಇದೀಯಾ ಬೇಕಾಗುತ್ತದೆ. ಇಲ್ಲೇ ಎಲ್ಲ ಖರ್ಚು ಮಾಡಬೇಡ. ಹ ಅದು ಸಾಕಾಗಲಿಲ್ಲ ಅಂದ್ರೆ ಹೇಳು ಮನಿ ಟ್ರಾನ್ಸ್ಫರ್ ಮಾಡ್ತಿನಿ. ಹಾಗೇ ಸ್ವಲ್ಪ ಕ್ಯಾಶ್ ಕೂಡ ಇಟ್ಕೊಂಡಿರು ಎಲ್ಲ ಕಡೆ ಆನ್ಲೈನ್ ಪೇಮೆಂಟ್ ಆಗಲ್ಲ. ಎಂದು ಸಟಿನ್ ತಮ್ಮನಿಗೆ ಎಚ್ಚರಿಸಿದನು.


"ಸರಿ ಅಣ್ಣ, ಇವಾಗ ಹೊರಡೊಣ್ವಾ ಬೇಗ ಶಾಪಿಂಗ್ ಮುಗಿಸಿದರೆ ಬಂದು ಮಲ್ಕೊ ಬಹುದು ಅವಾಗ ನೈಟ್ ಜರ್ನಿಗೆ ಕಷ್ಟ ಆಗಲ್ಲ" ಎಂದು ಅನಿಕೇತ್ ಸಚಿನ್ ನನ್ನು ಹೊರಡಿಸಿದನು.


ಶಾಪಿಂಗ್ ಮಾಲ್ ಸಮಯ 10 ಗಂಟೆ


ಸಚಿನ್ ಮತ್ತು ಅನಿಕೇತ್ ಒಟ್ಟಿಗೆ ಮಾಲ್ ತಲುಪಿದರು. ಅವರು ಬಂದ 5 ನಿಮಿಷಕ್ಕೆ ಆಕಾಂಕ್ಷ ಮತ್ತು ಪೂಜಾ ಜಾಯ್ನ್ ಆದರು.


"ಅನಿ ಅಣ್ಣ ಏನಿದು ಸಡನ್ ಆಗಿ ಒಬ್ಬನೇ ಟ್ರಿಪ್ ಮಾಡಿದ್ದೀಯಾ?" ಎಂದು ಪೂಜಾ ಪ್ರಶ್ನಿಸಿದರೆ.


"ಅವನು ಎಲ್ಲಿ ಮಾಡ್ತಾನೆ ಕೆಲಸದಿಂದ ಸಾಕಾಗಿದೆ ಅಂದ ಅದಕ್ಕೆ ನಾನೇ ಬ್ರೇಕ್ ತಗೋ ಅಂತ ಹೇಳಿದಕ್ಕೆ ಈ ಟ್ರಿಪ್ ಪ್ಲಾನ್ ಮಾಡಿದ್ದಾನೆ." ಎಂದು ಆಕಾಂಕ್ಷ ಉತ್ತರಿಸಿದಳು.


"ಹೋ ಹಾಗೇ, ನಿನ್ನ ಜೊತೆ ಈ ಸರ್ ನ ಕರೆದುಕೊಂಡು ಹೋಗೊದಲ್ವ, ಸರ್ ನೀವು ಹೋಗಿ ಬನ್ನಿ ನಾನ್ ಎಲ್ಲ ಮ್ಯಾನೇಜ್ ಮಾಡ್ತೀನಿ" ಎಂದು ಸಚಿನ್ ಗೆ ಪೂಜಾ ಬಿಟ್ಟಿ ಸಲಹೆ ಕೊಟ್ಟಳು.


"ನಿನ್ ನನ್ನ ಜೊತೆ ಮಾತಾನಾಡಬೇಡ ಅಂಡ್ ನನ್ನ ಕಂಪನಿಗೂ ಬರ ಬೇಡ" ಎಂದು ಸಚಿನ್ ಪೂಜಾಳ ಮೇಲೆ ರೇಗಿದರೆ,


"ಯಾಕೋ ಅಣ್ಣ?" ಎಂದು ಅನಿಕೇತ್ ಸಚಿನ್ ನನ್ನು ಪ್ರಶ್ನಿಸಿದನು.


"ಇನ್ನೇನೋ ಅನಿ, ಇವಳು ನಿನಗೆ ಮಾತ್ರ ಅಣ್ಣ ಅಂತಾಳೆ ನಾನ್ ಹೇಗೆ ಕಾಣಿಸ್ತೀನಿ ಇವಳಿಗೆ" ಎಂದು ಸಚಿನ್ ಅನಿಕೇತ್ ಗೆ ಮರು ಪ್ರಶ್ನಿಸಿದನು.


"ಹೇಗೆ ಅಂದ್ರೆ ಕಾಡುಪಾಪ ತರ" ಎಂದು ಪೂಜಾ ಉತ್ತರಿಸಿದಳು.


"ಪೂಜಾ..." ಎಂದು ಸಚಿನ್ ರೇಗಿದರೇ


"ಅನಿ ಅಣ್ಣ ಏನು ಗೊತ್ತಾ? ಇವನು ಆಫೀಸ್ ನಲ್ಲಿ ಯಾರೇ ತಪ್ಪು ಮಾಡ್ಲಿ ನನಗೆ ಬೈತಾನೆ. ಅದಕ್ಕೆ ಇವನಿಂದ ದೂರ ಇರ್ತಿನಿ." ಎಂದು ಪೂಜಾ ಸಚಿನ್ ವಿರುದ್ಧ ದೂರನ್ನು ನೀಡಿದಳು.


"ನೀನು ನನ್ನ ತಂಗಿ ನನಗೆ ಇರೋ ಅಷ್ಟೇ ರೈಟ್ಸ್ ನಿನಗೂ ಇದೆ. ನೀನೇ ಸೋಂಬೇರಿ ಆಗಲೇ ಉಳಿದವರು ಹೇಗಾಗಬೇಡ ನೀನು ಅವರಿಂದ ಕೆಲಸ ತೆಗಿಸಬೇಕು ಗೊತ್ತಾ?" ಎಂದು ಸಚಿನ್ ಅವಳ ಕೆಲಸದ ಬಗ್ಗೆ ವಿವರಿಸಿದರೆ,


"ಹೆಲೋ ಬ್ರದರ್, ನಾನು ನಿಮ್ಮ ಪಿ. ಎ ಅಷ್ಟೇ ಎಚ್. ಆರ್ ಅಥವಾ ಅಡ್ಮಿನ್ ಅಲ್ಲ, ಅವರಿಗೆ ಕೆಲಸ ಮಾಡೋಕೆ ಹೇಳೋಕೆ. ನಿನ್ನ ಕೆಲಸ ಮಾಡೋದು ನನ್ನ ಕೆಲಸ" ಎಂದು ಪೂಜಾ ಸಮರ್ಥಿಸಿಕೊಂಡಳು.


"ಪೂಜಾ ಕೆಲಸ ಮಾಡಿಸೋದು ಇವರ ಪಿ. ಎ‌ ಆಗಿ ನಮ್ಮ ಕೆಲಸನು ಅದು. ಅವರು ಮಾಡಿಲ್ಲ ನಿನಗೆ ತಿರುಗಿ ಮಾತಾಡಿದ್ರು ಅಂದರೆ ರಿಪೊರ್ಟ್ ಮಾಡು ಸುಮ್ನೆ ಇರಬೇಡ, ಒಬ್ಬರ ಒಂದು ಚಿಕ್ಕ ತಪ್ಪು ಎಷ್ಟೋ ಕುಟುಂಬಕ್ಕೆ ಹೊಡೆತ ಬೀಳುತ್ತೆ" ಎಂದು ಆಕಾಂಕ್ಷ ಪೂಜಾಳಿಗೆ ತಿಳಿ ಹೇಳಿದಳು.


"ಆಕಾಂಕ್ಷಳನ್ನ ನೋಡಿ ಕಲಿ ಬರಿ ತರ್ಲೆ ಮಾಡೋದಲ್ಲ" ಎಂದು ಪೂಜಾಳ ತಲೆಗೆ ಸಣ್ಣದಾಗಿ ಮೊಟಕಿ ಹೇಳಿದನು.


"ಅಣ್ಣ ಬಿಡೋ ಹೋಗ್ಲಿ" ಎಂದು ಅನಿಕೇತ್ ತಂಗಿಯ ಪರ ವಹಿಸಿದನು.


"ನನ್ನ ಮುದ್ದು ಅಣ್ಣ, ಅತ್ತಿಗೆ ನೀವು ನನಗೆ ಹೇಳಿ ಕೊಡಿ ಆಯ್ತ" ಎಂದು ಅಣ್ಣನಿಗೆ ಮುದ್ದಿಸಿ ಆಕಾಂಕ್ಷಳ ಬಳಿ ಬೇಡಿಕೆ ಇಟ್ಟಳು.


"ಆಯ್ತು ಬಾ, ಬನ್ನಿ ಬೇಗ ಶಾಪಿಂಗ್ ಮುಗಿಸೋಣ ಇವನು ಸ್ವಲ್ಪ ರೆಸ್ಟ್ ಮಾಡಿದರೆ ನೈಟ್ ಜರ್ನಿಗೆ ಅರಾಮಾಗುತ್ತದೆ" ಎಂದು ಆಕಾಂಕ್ಷ ಬಂದ ಕೆಲಸವನ್ನು ಎಚ್ಚರಿಸಿದಳು.


"ಸಚ್ಚಿ ಅಣ್ಣ ನೈಲ್ ಆ ಕಡೆ ಹೋಗೊಣ ಬಾ" ಎಂದು ಅನಿಕೇತ್ ಮತ್ತು ಆಕಾಂಕ್ಷಳಿಗೆ ಪ್ರೈವಸಿ ಕೊಡಲು ಹೇಳಿದರೆ


"ಹೇ ತರ್ಲೆ ಒಟ್ಟಿಗೆ ಇರೋಣ ಬಾ" ಎಂದು ಜೊತೆಗೆ ಹೋಗಲು ಹೇಳಿದನು.


"ಅತ್ತಿಗೆ..." ಎಂದು ರಾಗ ತೆಗೆದವಳಿಗೆ


"ಬಾ ಒಟ್ಟಿಗೆ ತಗೊಳ್ಳೊಣ" ಎಂದು ಅನಿಕೇತ್ ಮಾತನ್ನೇ ಅನುಮೋದಿಸಿದಳು.


"ನೀವುನಾ" ಎಂದು ಪ್ರಶ್ನಿಸಿದವಳನ್ನ


"ನಡಿಯೇ ಮೊದಲು" ಎಂದು ಸಚಿನ್ ಎಳೆದು ಕೊಂಡು ಹೋದನು.


ನಾಲ್ಕು ಜನ ಎರಡು ಗಂಟೆಯವರೆಗೂ ಶಾಪಿಂಗ್ ಮುಗಿಸಿ ಹೊರಗಡೆನೆ ಊಟ ಮುಗಿಸಿ ಮನೆ ಕಡೆ ಹೊರಟರು. ಮನೆ ಸೇರುವ ಹೊತ್ತಿಗೆ ಮೂರು ಗಂಟೆಯಾಗಿತ್ತು. ಅನಿಕೇತ್ ಸಚಿನ್ ರೂಂ ನಲ್ಲಿ ಮಲಗಲು ಹೋದರೆ, ಸಚಿನ್, ಆಕಾಂಕ್ಷ ಮತ್ತು ಪೂಜಾ ಅನಿಕೇತ್ ಲಗೇಜ್ ಪ್ಯಾಕ್ ಮಾಡಲು ಹೋದರು. ಸಂಧ್ಯಾರವರು ಅವರಿಗೆ ಗೈಡ್ ಮಾಡುತ್ತಿದ್ದರು. ಅನಿಕೇತ್ ಏಳುವ ಹೊತ್ತಿಗೆ ಲಗೇಜ್ ಪೂರಾ ಸಿದ್ದವಾಗಿತ್ತು. ಅನಿಕೇತ್ ಮತ್ತೊಮ್ಮೆ ಲಗೇಜ್ ಚೆಕ್ ಮಾಡಿ ಬಿಟ್ಟಿರುವ ವಸ್ತುಗಳನ್ನು ಸೇರಿಸಿಕೊಂಡು ರೆಡಿಯಾಗಲು ಹೊರಟನು.


ಅಡುಗೆ ಮನೆಯಲ್ಲಿ ಸಂಧ್ಯಾರವರ ಜೊತೆಗೆ ಆಕಾಂಕ್ಷ ಮತ್ತು ಪೂಜಾ ಸೇರಿ ಅಡುಗೆ ಮಾಡುತ್ತಿದ್ದರು. 7 ಗಂಟೆಯ ಹೊತ್ತಿಗೆ ಸೂರ್ಯರವರು ಬಂದಾಗ ಅವರ ಜೊತೆ ಸ್ವಲ್ಪ ಹೊತ್ತು ಹರಟಿ ಊಟ ಮುಗಿಯುವ ಹೊತ್ತಿಗೆ 9 ಗಂಟೆಯಾಯಿತು. ಅನಿಕೇತ್ ಬಳಿ ಕಾರ್ಡ್ ಮತ್ತು ಕ್ಯಾಶ್ ಇದ್ದರು ಸೂರ್ಯ ಮತ್ತು ಸಚಿನ್ ಮತ್ತೆರಡು ಕಾರ್ಡ್ ಕ್ಯಾಶ್ ನೀಡಿದರು.


ಅನಿ ಹೊರಡುವ ಮೊದಲು ಮನೆಯವರಿಗೆ ತಾನು ಎಲ್ಲಿರುವೆ ಎಂಬ ಸುಳಿವು ಸಿಗಲು ಮೊಬೈಲ್ ನೆಟ್ ವರ್ಕ್ ಯೂಸ್ ಆಗದೇ ಇರುವಂತಹ ಸಮಯದಲ್ಲಿ ತಿಳಿಯಲು ಎರಡು ಜಿ. ಪಿ. ಎಸ್ ಡಿವೈಸ್ ಗಳ ಕನೆಕ್ಷನ್ ನ್ನು ಒಂದು ತಂದೆಯ ಲ್ಯಾಪ್ ಟಾಪ್ ಗೆ ಮತ್ತೊಂದು ಸಚಿನ್ ಲ್ಯಾಪ್ ಟಾಪ್ ಗೆ ಅಳವಡಿಸಿ ಒಂದನ್ನು ಕಾರಿನಲ್ಲಿ ಇಟ್ಟರೆ ಮತ್ತೊಂದನ್ನು ತನ್ನ ಲಾಕೇಟ್ ಗೆ ಸೇರಿಸಿಕೊಂಡು ಮನೆಯವರಿಗೆ ಸುರಕ್ಷಿತವಾಗಿರುವಂತೆ ತಿಳಿಸಿ ಪೂಜಾ ಮತ್ತು ಆಕಾಂಕ್ಷಳಿಗೆ ದಿನ ಕಾಲ್ ಮಾಡುವಂತೆ ತಿಳಿಸಿ ಹೊರಟನು.


ಅನಿ ಹೊರಟಾಗ ಸಮಯ ಆಗಿರುವುದರಿಂದ ಪೂಜಾ ಮತ್ತು ಆಕಾಂಕ್ಷ ಅಲ್ಲೆ ಉಳಿದರು.


_______________________________________________


"ಅನಿಕ ಮನೆ"


ಅಮರ್ ಮತ್ತು ಅನಿಕ ಕಾಣೆಯಾಗಿ ಸುಮಾರು 15 ದಿನಗಳೇ ಕಳೆದಿತ್ತು. ಪೊಲೀಸ್ ನವರ ಉತ್ತರ ಹುಡುಕುತ್ತಿದ್ದೆವೆ ಎಂಬುದೇ ಆಗಿತ್ತೇ ಹೊರತು ಅವರ ನಿರೀಕ್ಷೆಯ ಬೇರೆ ಯಾವ ಉತ್ತರವು ಇರಲಿಲ್ಲ. ಇದರಿಂದ ಅಮರ್ ಮತ್ತು ಅನಿಕರ ಪೋಷಕರು ಕುಗ್ಗಿ ಹೋಗಿದ್ದರು. ಅನಿಕ ತಾಯಿ ಕಮಲರವರು ಮಗಳಿಲ್ಲದೇ ಹಾಸಿಗೆ ಹಿಡಿದಿದ್ದರು ಅವರ ಸೇವೆಗೆ ಅಮರ್ ತಾಯಿ ಗೌರಿಯವರು ನಿಂತರೆ ಶಂಕರ್ ಮತ್ತು ವಿಶ್ವನಾಥ್ ರವರು ಮನೆಗೆ ಪೊಲೀಸ್ ಸ್ಟೇಷನ್ ಗೆ ಅಲೆದಾಡುತ್ತಿದ್ದರೆ ವಿನಃ ಸಮಾಧಾನಕರವಾದ ವಿಷಯಗಳು ತಿಳಿಯುತ್ತಿರಲಿಲ್ಲ. ಮಾನಸಿಕವಾಗಿ ಕುಗ್ಗುತ್ತಿದ್ದರು ನೋಡುವವರ ಕಣ್ಣಿಗೆ ಧೈರ್ಯದಲ್ಲಿ ಇರುವಂತೆ ತೋರಿಸಿಕೊಳ್ಳುತ್ತಿದ್ದರು.


ಎಲ್ಲ ಸರಿಯಾಗಿದ್ದರೆ ಅಂದು ಆ ಮನೆಯಲ್ಲಿ ಮದುವೆಯ ಕಳೆಯು ತುಂಬಿರುತ್ತಿತ್ತು. ಆದರೇ ಇವಾಗ ಸೂತಕದ ಮನೆಯಾಗಿ‌ ಪರಿವರ್ತನೆಗೊಂಡಿತು. ಇದು ತಂದೆ ತಾಯಿ ಮನಗಳಿಗೆ ಮತ್ತಷ್ಟು ನೋವು ಉಂಟುಮಾಡಿತ್ತು. ಈ ಟಿವಿ ಚಾನೆಲ್ ನವರು ಪ್ರತಿದಿನ ದಿನದ 24 ಗಂಟೆ ಇದೇ ವಿಷಯ ಹಿಡಿದು ಅದನ್ನೇ ಪ್ರಸಾರ ಮಾಡುತ್ತಿದ್ದರು.


"ರೀ, ಅಣ್ಣ, ಮಕ್ಕಳ ಬಗ್ಗೆ ಏನಾದ್ರೂ ಗೊತ್ತಾಯ್ತಾ?" ಎಂದು ಆಗಾ ತಾನೇ ಮನೆಗೆ ಬಂದ ವಿಶ್ವನಾಥ್ ಮತ್ತು ಶಂಕರ್ ರವರನ್ನು ಕಮಲರವರು ಪ್ರಶ್ನಿಸಿದರು.


"ಇಲ್ಲ ಕಮಲ ಪೊಲೀಸ್ ನವರದ್ದು ಒಂದೇ ಉತ್ತರ ಹುಡುಕ್ತಾ ಇದೀವಿ ಅಂತ ಬೇರೆ ಏನು ಅಪ್ಡೇಟ್ ಇಲ್ಲ" ಎಂದು ವಿಶ್ವನಾಥ್ ರವರು ಉತ್ತರಿಸಿದರು.


"ಯಾರು ಈ ಕೆಲಸ ಮಾಡಿರೋದು, ಅವರ ಉದ್ದೇಶ ಏನು?" ಎಂದು ಗೌರಿಯವರು ಕೇಳಿದರು.


"ಅದು ಗೊತ್ತಾಗಿದ್ರೆ ಇಷ್ಟೊತ್ತಿಗೆ ಮಕ್ಕಳು ವಾಪಸ್ ಬರ್ತಾ ಚಂದ್ರು" ಎಂದು ಶಂಕರ್ ಉತ್ತರಿಸಿದರು.


"ಹೀಗೇ ಆದರೇ ಮಕ್ಕಳು ಯಾವಾಗ ವಾಪಸ್ ಬರ್ತಾರೆ" ಎಂದು ಗೌರಿಯವರು ತಲೆ ಮೇಲೆ ಕೈ ಹೊತ್ತು ಕುಳಿತರು.


ದೊಡ್ಡದಾದ ಉಸಿರನ್ನು ಬಿಟ್ಟು "ಅದು ಆ ದೇವರಿಗೆ ಗೊತ್ತು, ಈ ಡಿಪಾರ್ಟ್ಮೆಂಟ್ ಗೆ ನಿಷ್ಠಾವಂತ ವ್ಯಕ್ತಿ ಬಂದಾಗಲೇ ನಮ್ಮ ಮಕ್ಕಳು ವಾಪಸ್ ಬರೋದು ಎಲ್ಲೇ ಇದ್ರು ಕ್ಷೇಮವಾಗಿ ಇರಲಿ ಅಂತ ಆ ದೇವರಲ್ಲಿ ಬೇಡಿಕೊಳ್ಳೊದು ಇರೋದು ನಮಗಿರೋ ದಾರಿ" ಎಂದು ಶಂಕರ್ ರವರು ತಮ್ಮ ಅಸಮಾಧಾನ ಹೊರ ಹಾಕಿದರು.


______________________________________________________


"ಬೆಂಗಳೂರು ಟು ಕಾರವಾರ"


ಅನಿಕೇತ್ ಬ್ಯುಸಿನೆಸ್ ತಲೆ ಬಿಸಿಯಿಂದ ಸ್ವಲ್ಪ ದಿನ ದೂರ ಇರುವ ಸಲುವಾಗಿ ಸಮುದ್ರ ತೀರಕ್ಕೆ ಮೈಂಡ್ ರೀಪ್ರೈಶ್ಮೆಂಟ್ ಗೆ ಹೊರಟನು. ರಾತ್ರಿ ಜರ್ನಿ ಆಗಿದ್ದರಿಂದ ದಾರಿಯಲ್ಲಿ ಸಿಗುವ ಟೀ ಅಂಗಡಿಗಳಲ್ಲಿ ಟೀ ಕುಡಿಯುತ್ತಾ ಪಯಣವನ್ನು ಮುಂದುವರಿಸುತ್ತಿದ್ದನು. ಅವನಿಗೆ ಜೊತೆಯಾಗಿ ಪ್ಲೇಯರ್ ನಲ್ಲಿ ಕಡಿಮೆ ಸದ್ದಿನೊಂದಿಗೆ ಹಾಡುಗಳು ಒಂದರ ಹಿಂದೆ ಒಂದು ಪ್ರಸಾರವಾಗುತ್ತಿದ್ದವು. ಗಂಟೆಗೊಂದು ಸಲ ಸರಿಯಾಗಿ ನಿದ್ದೆ ಮಾಡದೆ ಕಾಲ್ ಮಾಡಿ ವಿಚಾರಿಸುತ್ತಿದ್ದರು. ಕಾಲ್ ಮಾಡಿದವರು ಸತತ ಅರ್ಧ ಗಂಟೆ ಮಾತಾನಾಡುತ್ತಿದ್ದರು.


ಅನಿಕೇತ್ ನ ಜರ್ನಿಗೆ ಯಾವುದೇ ರೀತಿಯ ತೊಡಕುಗಳಾಗಂದತೆ ಸಚಿನ್ ಪೂಜಾ ಮತ್ತು ಆಕಾಂಕ್ಷ ನೋಡಿಕೊಳ್ಳುತ್ತಿದ್ದರು. ಮುಂಜಾನೆ 6ರ ವರೆಗೂ ಮಾತನಾಡಿ ನಿದ್ದೆಗೆ ಜಾರಿದರು.


ಅನಿಕೇತ್ ರೋಡ್ ಸೈಡ್ ನಲ್ಲಿ ಕಾರ್ ನಿಲ್ಲಿಸಿ ಅಲ್ಲೇ ಇದ್ದ ಚಹಾ ಅಂಗಡಿಯಲ್ಲಿ ನೀರು ಪಡೆದು ಮುಖ ತೊಳೆದು ಟೀ ಕುಡಿದು ಹೊರಟನು. 9 ಗಂಟೆಯ ಹೊತ್ತಿಗೆ ಮೊದಲೇ ಬುಕ್ ಮಾಡಿದ ಕಾರವಾರ ಹೋಟೆಲ್ ತಲುಪಿದನು. ರೂಂ ಗೆ ಚೆಕ್ ಇನ್ ಆಗಿ ಮೊದಲು ಸ್ನಾನ ಮುಗಿಸಿ ತಿಂಡಿ ಆರ್ಡರ್ ಮಾಡಿ ಬಂದ ತಿಂಡಿ ತಿಂದು ಈ ಮೂವರಿಗೆ ತಲುಪಿರುವ ವಿಚಾರ ತಿಳಿಸಿ ಸ್ವಲ್ಪ ಹೊತ್ತು ಮಲಗಿದನು.


ಆಕಾಂಕ್ಷ, ಪೂಜಾ ಮತ್ತು ಸಚಿನ್ ಮಧ್ಯಾಹನದ ನಂತರ ಆಫೀಸ್ ಗೆ ಹೊರಟರು. ಸೂರ್ಯರವರು ಮಾತ್ರ ಬೇಗ ಹೋಗಿದ್ದರು. ಅನಿಕೇತ್ ಅನುಪಸ್ಥಿತಿಯಲ್ಲಿ ಎಲ್ಲ ಕೆಲಸಗಳನ್ನು ಆಕಾಂಕ್ಷ ನಿರ್ವಹಿಸಬೇಕಿತ್ತು. ಅವಳಿಗೆ ಜೊತೆಯಾಗಿ ಅವಳ ಬಾಲ್ಯ ಗೆಳತಿ ಅದಿತಿ ಸೇರಿಕೊಂಡಳು.


ಸಮಯ 1 ಗಂಟೆ ಸಂಧ್ಯಾರವರು ಅನಿಕೇತ್ ಗೆ ಫೋನ್ ಮಾಡಿದಾಗ ನಿದ್ದೆಯಿಂದ ಎಚ್ಚೆತ್ತನು. ತಾಯಿ ಜೊತೆ ಸ್ವಲ್ಪ ಸಮಯ ಮಾತನಾಡಿ ಫ್ರೇಶ್ ಆಗಿ ಕಾರವಾರ ಸುತ್ತಲು ಹೊರಟನು. ಮೊದಲು ಊಟ ಮುಗಿಸಿ ಸಂಜೆಯವರೆಗೂ ಸಿಟಿ ಸುತ್ತಿ ಅಲ್ಲಿನ ಜಾಗಗಳನನ್ನು ಪರಿಚಯ ಮಾಡಿಕೊಂಡನು. ಸಂಜೆ 5 ರ ಸಮಯದಲ್ಲಿ ಬೀಚ್ ಬಳಿ ಹೋದನು. ಮೊದಲು ಸಮುದ್ರ ತೀರವನ್ನು ನೋಡುತ್ತಾ ಅಲ್ಲೆ ಇರುವ ಬಂಡೆ ಕಲ್ಲಿನ ಮೇಲೆ ಕುಳಿತನು. ಅಲ್ಲಿ ನೀರಿನಲ್ಲಿ ಆಟವಾಡುತ್ತಿದ್ದ ಜನರ ಖುಷಿಯನ್ನು ಕಣ್ತುಂಬಿಕೊಂಡನು.


ಸೂರ್ಯನು ಮುಳುಗುವ ಹೊತ್ತಿನಲ್ಲಿ ನೀರಿಗೆ ಇಳಿದು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದನು. ಸೂರ್ಯಾಸ್ತದ ಹತ್ತಾರು ಚಿತ್ರಗಳು ಸೆರೆಯಾಗುವುದರ ಜೊತೆಗೆ ಮನಸ್ಸಿಗೆ ಇನ್ನು ಸಿಹಿಯಾದ ಉತ್ಸಾಹ ತುಂಬಿತು. ಸಂಜೆಯ ತಂಗಾಳಿಯೊಂದಿಗೆ ನೀರಿನಲ್ಲಿ ಬೆರೆತು ಸಿಕ್ಕ ಸಿಕ್ಕ ಕಪ್ಪೆ ಚಿಪ್ಪು, ಶಂಖು, ಮುತ್ತುಗಳನ್ನು ಸಂಗ್ರಹಿಸಿ ಅಲ್ಲಿಂದ ಹೊರಟು ತಾನು ಇರುವ ಹೋಟೆಲ್ ತಲುಪಿದನು. ಸಮುದ್ರದಲ್ಲಿ ಸಿಕ್ಕ ವಸ್ತುಗಳು ಸೂರ್ಯಾಸ್ತದ ಪೋಟೊಗಳನ್ನು ಆಕಾಂಕ್ಷ ಪೂಜಾಳಿಗೆ ಕಳುಹಿಸಿ ಮನೆಯವರೊಂದಿಗೆ ಸ್ವಲ್ಪ ಸಮಯ ಹರಟಿದನು.


___________________________________________________


"ಸಮಯ ರಾತ್ರಿ 12 ಗಂಟೆ"


ಅನಿಕೇತ್ ಸಿಹಿಯಾದ ನಿದ್ದೆಯಲ್ಲಿ ಇರುವಾಗ ಅವನ ಫೋನ್ ರಿಂಗಣಿಸಿತು. ನಿದ್ದೆ ಗಣ್ಣಿನಲ್ಲಿಯೇ ಫೋನ್ ರಿಸೀವ್ ಮಾಡಿ "ಹಲೋ" ಎಂದನು.


"ಅನಿ ಲವ್ ಯು ಕಣೋ ಉಮ್ಮಾ..." ಎಂದು ಆ ಕಡೆಯಿಂದ ಬಂದ ಧ್ವನಿ ಮುತ್ತು ಕೊಟ್ಟು ಮಾತನಾಡಿಸುತ್ತಿದ್ದರು.


"ಛೀ, ಛೀ, ಯಾರಿದು ಇಷ್ಟೊತ್ತಲ್ಲಿ ಕಾಲ್ ಮಾಡಿ ಈ ತರ ಅಸಹ್ಯವಾಗಿ ನಡೆದುಕೊಳ್ಳೋದು" ಎಂದು ನಿದ್ದೆಗಣ್ಣಲ್ಲಿ ನಂಬರ್ ನೋಡದೆ ವಾಯ್ಸ್ ಕೂಡ ಕಂಡುಹಿಡಿಯೋದೆ ಬೈಯಲು ಶುರು ಮಾಡಿದನು.


"ಥೂ ಮಂಗ ನಾನು ಕಣೋ ಆಕಾಂಕ್ಷ" ಎಂದು ಹೇಳಿದಳು.


ಫೋನ್ ಒಮ್ಮೆ ನೋಡಿ "ಸಾರಿ ಚಿನ್ನ ನಿದ್ದೆ ಮೂಡ್ ನಲ್ಲಿ ಯಾರು ಅಂತ ನೋಡ್ಲಿಲ್ಲ" ಎಂದು ಸಮರ್ಥಿಸಿಕೊಂಡನು.


"ಮಲ್ಗಿದ್ಯ" ಎಂದು ಪ್ರಶ್ನಿಸಿದಳು.


"ಹೂಂ ಕಣೋ" ಎಂದು ಉತ್ತರಿಸಿದನು.


"ಸಾರಿ ಕಣೋ ಇವತ್ತು ಮಧ್ಯಾಹ್ನ ಹೋಗಿದ್ದು ಹಾಗೇ ಸ್ವಲ್ಪ ಕೆಲಸ ಜಾಸ್ತಿ ಇತ್ತು ಜೊತೆಗೆ ಕಾರ್ ಕೂಡ ಕೈ ಕೊಡ್ತು ಸಚ್ಚಿ ಭಾವ ಬಂದು ಬಿಟ್ಟೋದ್ರು ಅದಕ್ಕೆ ಇವಾಗ ಬಂದೆ ಫೋನ್ ನೋಡಿದಾಗ ನೀನ್ ಕಳಿಸಿದ ಪಿಕ್ ನೋಡಿ ಸಕತ್ ಖುಷಿಯಾಗಿ ಟೈಂ ನೋಡದೆ ಕಾಲ್ ಮಾಡಿ ಬಿಟ್ಟೆ ಸಾರಿ ಕಣೋ" ಎಂದು ಅವನ ನಿದ್ದೆ ಹಾಳು ಮಾಡಿದಕ್ಕೆ ಕ್ಷಮೆ ಕೇಳಿದಳು.


"ನೋಡು ಅಕ್ಷು ನಾನ್ ಇಲ್ಲ ಅಂತ ಮತ್ತೆ ಇಷ್ಟೋತ್ತಲ್ಲಿ ಬರೋ ಸಹಾಸ ಮಾಡಿದ್ರೆ ಸರಿ ಇರಲ್ಲ." ಮಧ್ಯ ರಾತ್ರಿ ಮನೆಗೆ ಬಂದವಳ ಮೇಲೆ ಕೋಪ ಬಂದು ರೇಗಿದನು.


"ಸಾರಿ ಬಂಗಾರಿ, ಸರಿ ಇವಾಗ ಮಲ್ಗು ಮಾರ್ನಿಂಗ್ ಕಾಲ್ ಮಾಡು ಮರಿಬೇಡ." ಎಂದು ಮತ್ತೊಮ್ಮೆ ಕ್ಷಮೆ ಕೇಳಿದಳು.


"ಓಕೆ ಚಿನ್ನಿ, ಊಟ ಮಾಡಿ ಮಲ್ಗು ಹಾಗೇ ಮಲ್ಗಿದ್ರೆ ಅಷ್ಟೇ" ಎಂದು ಎಚ್ಚರಿಸಿದನು.


"ಓಕೆ ಬಂಗಾರಿ, ಬಾಯ್ ಗುಡ್ ನೈಟ್ ಲವ್ ಯು" ಎಂದಳು.


"ಲವ್ ಯು‌ ಟು ಚಿನ್ನಿ ಗುಡ್ ನೈಟ್ ಟೇಕ್‌ ಕೇರ್" ಎಂದು ಕರೆ ತುಂಡರಿಸಿ ಮಲಗಿದನು.


_________________________________________________________



"ಆದ್ಯಾ ನಿಲಯ ಸಮಯ 9 ಗಂಟೆ"


"ಸಚ್ಚಿ, ಅನಿ ಫೋನ್ ಮಾಡಿದ್ನ" ಎಂದು ಸಂಧ್ಯಾರವರು ಮುಂಜಾನೆಯೇ ಮಗನ ಬಳಿ ವಿಚಾರಣೆ ಶುರು ಮಾಡಿದರು.


"ಅಮ್ಮ ನಾನೇ ಮಾಡಿದ್ದೆ, ಅವನು ಇನ್ನು ಮಲ್ಗಿದ್ದ. ಎದ್ದ‌ ಮೇಲೆ ನಿಮಗೆ ಮಾಡ್ತಾನೆ ಸಮಾಧಾನವಾಗಿ ಮಾತನಾಡಿ" ಎಂದು ಉತ್ತರಿಸಿದನು.


"ಸರಿ ಕಣೋ" ಎಂದರು


"ಸರಿ ಇವಾಗ ನಮಗೆ ತಿಂಡಿ ಕೊಡು ನಮಗೆ ಕೆಲಸ ತುಂಬಾ ಇದೆ. ಇವತ್ತು ಗಾರ್ಮೆಂಟ್ಸ್ ಮತ್ತು ಹೋಟೆಲ್ ಗೆ ವಿಸಿಟ್ ಕೊಡಬೇಕು. ಸಂಜೆ ಬರೋದು ಲೇಟ್ ಆಗುತ್ತೆ ಕಾಯಬೇಡ, ಸಂಜೆ ಮೀಟಿಂಗ್ ಮುಗಿಸಿ ಡಿನ್ನರ್ ಕೂಡ ಮುಗಿಸಿ ಬರ್ತೀನಿ" ಎಂದು ಸೂರ್ಯರವರು ಆ ದಿನದ ತಮ್ಮ ದಿನಚರಿಯನ್ನು ಹೆಂಡತಿಯ ಬಳಿ ಹೇಳಿದರು.


"ಸಚ್ಚಿ ನೀನು" ಎಂದು ಸಂಧ್ಯಾರವರು ಸಚಿನ್ ದಿನಚರಿಯ ಬಗ್ಗೆ ವಿಚಾರಿಸಿದರು.


"ಹ ಅಮ್ಮ ಇವತ್ತು ಕಾಲೇಜ್ ಅಡ್ಮಿನಿಸ್ಟ್ರೇಷನ್ ಫೈಲ್ಸ್ ಚೆಕ್ ಮಾಡೋದು, ಕಾಲೇಜ್ ಚೆಕ್ ಮಾಡೋದು, ಹಾಸ್ಪಿಟಲ್ ನಲ್ಲಿ ಡಾಕ್ಟರ್ಸ್ ಮತ್ತು ನರ್ಸ್ ಗಳ ಇಂಟರ್ವ್ಯೂವ್ ಇದೆ. ಜೊತೆಗೆ ಕನ್ಸ್ಟ್ರಕ್ಷನ್ ಗೆ ಸಂಬಂಧಿಸಿದಂತೆ ಮೀಟಿಂಗ್ ಇದೆ 9 ಗಂಟೆ ಒಳಗೆ ಬರೋಕೆ ಟ್ರೈ ಮಾಡ್ತೀನಿ" ಎಂದು ತನ್ನ ದಿನಚರಿಯನ್ನು ತಿಳಿಸಿದನು.


"ಇನ್ನು ಬೇರೆ ಪಟ್ಟಿ ಇದ್ರೆ ಅಪ್ಪ ಮಗ ಹೇಳಿ ಕೇಳ್ತಿನಿ ದಿನ ಇದೇ ಆಯ್ತು, ಆ ಅನಿ ನೋಡಿದ್ರೆ ಒಬ್ನೆ ಹೋಗಿದ್ದಾನೆ. ಈ ಭೂತ‌ ಬಂಗಲೆಯಲ್ಲಿ ಒಂಟಿ ಪಿಶಾಚಿಯಾಗಿದ್ದೀನಿ" ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದರು.


"ಸಂಧ್ಯಾ ಯಾಕೆ ಈ ತರ ಮಾತನಾಡ್ತೀಯಾ, ಈ ಸಚ್ಚಿಗೆ ಬೇಗ ಮದುವೆ ಮಾಡೋಣ ಅವಾಗ ನಿನಗೆ ಸೊಸೆ ಜೊತೆಯಾಗ್ತಾಳೆ" ಎಂದು ಸೂರ್ಯರವರು ಹೆಂಡತಿಯನ್ನು ಸಮಾಧಾನಿಸಿದರು.


"ಇದೊಂದು ಕಮ್ಮಿ ಇತ್ತು, ಆಕಾಂಕ್ಷ ಆದ್ರೂ ಕೆಲಸದ ವಿಚಾರವಾಗಿ ಅನಿ ಜೊತೆ ಇರ್ತಾಳೆ ಆದರೇ, ಇವನನ್ನು ಕಟ್ಟಿಕೊಳ್ಳೊಳು ನನ್ನ ತಾನೇ ಬರಿ ನಿರೀಕ್ಷೆಯಲ್ಲಿ ಕಾಲ ಕಳಿಯಬೇಕು. ಇವನಿಗೆ ಮನೆ ಜವಾಬ್ದಾರಿ ಇಲ್ಲ ಯಾವಾಗ ನೋಡಿದರು ಕೆಲಸ, ಮೀಟಿಂಗ್, ಟೆಂಡರ್ ಇದೆ ಆಯ್ತು" ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.


"ಸರಿ ಅಮ್ಮ ನನಗೆ ಲೇಟ್ ಆಯ್ತು ಬಾಯ್." ಎಂದು ತಾಯಿಯ ಬೇಜಾರಿನ ಮುಖ ನೋಡಲಾಗದೇ ಹೊರಟು ಹೋದನು.


"ನೋಡ್ರಿ ಇವನನ್ನು ಹೇಗೆ ಹೋದ ಅಂತ" ಎಂದು ತಿನ್ನದೆ ತನ್ನ ಮಾತಿಗೆ ಏನು ಹೇಳದೆ ಹೋದ ಮಗನ ಮೇಲೆ ಗಂಡನ ಬಳಿ ದೂರಿದರು.


"ನನಗೂ ಸಮಯ ಆಯ್ತು ಬರ್ತೀನಿ" ಎಂದು ಸೂರ್ಯರವರು ಹೆಂಡತಿಯ ಬೇಜಾರಿಗೆ ಸಮಾಧಾನಿಸಲು ಆಗದೇ ಹೊರಟರು.


"ಇದೇ ಆಯ್ತು, ನನ್ನ ಸಂಕಟ ಕೇಳೋರು ಇಲ್ಲ" ಎಂದು ಗಂಡ ಮಗ ಹೋದ ದಾರಿಯನ್ನು ನೋಡುತ್ತಾ ಕುಳಿತರು.


ಅನಿಕೇತ್ ಆಕಾಂಕ್ಷ ಮತ್ತು ತಾಯಿಗೆ ಫೋನ್ ಮಾಡಿ ಮಾತನಾಡಿ ಮತ್ತೆ ಕಾರವಾರ ಸುತ್ತಲು ಹೋದನು.


__________________________________________________



"ಅನಿಕ ಮನೆ, ಸಮಯ 10 ಗಂಟೆ"


ಮನೆಯ ಕರೆ ಗಂಟೆ ಸದ್ದು ಮಾಡಿದಾಗ ಗೌರಿಯವರು ಬಂದು ಬಾಗಿಲು ತೆಗೆದಾಗ "ನಮಸ್ತೆ ಆಂಟಿ" ಎಂದು ಹೊರಗೆ ನಿಂತ ಅನಾಮಿಕ ವ್ಯಕ್ತಿ ಮಾತನಾಡಿಸಿದನು.


"ಯಾರಪ್ಪ ನೀನು?" ಎಂದು ಗೌರಿಯವರು ಪ್ರಶ್ನಿಸಿದರು.


"ಆಂಟಿ ನಾನ್ ರಮೇಶ್ ಅಂತ ಅಮರ್ ಸ್ನೇಹಿತ" ಎಂದು ತನ್ನ ಪರಿಚಯ ಮಾಡಿಕೊಂಡನು.


"ಹೌದಾ ಬಾರಪ್ಪ ಒಳಗೆ" ಎಂದು ಬರ ಮಾಡಿಕೊಂಡರು.


"ಗೌರಿ ಇವರು ಯಾರು?" ಎಂದು ಮನೆಗೆ ಬಂದವರನ್ನು ಕುರಿತು ಶಂಕರ್ ರವರು ಗೌರಿಯವರನ್ನು ಪ್ರಶ್ನಿಸಿದರು.


"ರೀ ಇವನು ರಮೇಶ್ ಅಂತ ಅಮರ್ ಸ್ನೇಹಿತ ನಂತೆ" ಎಂದು ಪರಿಚಯಿಸಿದರು.


"ಅಮರ್ ಮನೆಯಲ್ಲಿ ಇಲ್ಲ ಕಣಪ್ಪ" ಎಂದು ಅಮರ್ ಬಗ್ಗೆ ತಿಳಿಸಿದರು.


"ಅಂಕಲ್ ಅದು ನನಗೆ ಗೊತ್ತು, ನಾನ್ ಇವಾಗ ವಿಶ್ವನಾಥ್ ಸರ್ ನ ಮೀಟ್ ಮಾಡೋಕೆ ಬಂದಿರೋದು" ಎಂದು ತನ್ನ ಉದ್ದೇಶ ತಿಳಿಸಿದನು.


"ನಾನೇ ವಿಶ್ವನಾಥ್ ಏನ್ ವಿಷಯನಪ್ಪ" ಎಂದು ತಮ್ಮ ಪರಿಚಯ ಮಾಡಿಕೊಂಡರು.


"ನನಗೆ ಅಮರ್ ಬಗ್ಗೆ ಕೆಲವು ಮಾಹಿತಿ ಬೇಕಿತ್ತು" ಎಂದು ನೇರ ವಿಷಯಕ್ಕೆ ಬಂದನು.


"ನೀನು ಯಾರು?" ಎಂದು ಮತ್ತೆ ಪ್ರಶ್ನಿಸಿದರು.


ರಮೇಶ್ ತನ್ನ ನಿಜವಾದ ಐಡೆಂಟಿಟಿ ಹೇಳದೆ ಸ್ನೇಹಿತ ಎಂದು ನಂಬಿಸಿ ಮಾಹಿತಿ ಪಡೆಯಲು ಮುಂದಾದನು. ಅವರು ತಮಗೆ ಗೊತ್ತಿರೋ ಎಲ್ಲ ವಿಷಯವನ್ನು ರಮೇಶ್ ನೊಂದಿಗೆ ಹಂಚಿಕೊಂಡರು.


________________________________________________



ಅನಿಕೇತ್ ಮತ್ತೊಮ್ಮೆ ಬಿಸಿಲಿನ ಹೊತ್ತಿನಲ್ಲಿ ಕಾರವಾರದ ಬೀಚ್ ಬಳಿ ಹೊರಟನು. ನೀರಿನಲ್ಲಿ ಇಳಿಯದೇ ಮರಳಿನ ಮೇಲೆ ಹೆಜ್ಜೆ ಹಾಕತೊಡಗಿದನು. ಮರಳಿನಲ್ಲಿ ಸಿಕ್ಕ ಕೆಲವೊಂದು ವಸ್ತುಗಳನ್ನು ಕಂಡು ಮುಗುಳ್ನಕ್ಕು ತನ್ನ ಜೇಬಿಗಿಳಿಸಿದನು.


ಅಲ್ಲೇ ಇದ್ದ ಜ್ಯೂಸ್ ಸೆಂಟರ್ ನಲ್ಲಿ ಜ್ಯೂಸ್ ಆರ್ಡರ್ ಮಾಡಿ ಆ ಜ್ಯೂಸ್ ಸೆಂಟರ್ ನ್ನು ಸೂಕ್ಷ್ಮವಾಗಿ ಗಮನಿಸತೊಡಗಿದನು. ಅಲ್ಲಿನ ಜನರ ಚಲನವಲನ ವ್ಯಕ್ತಿಗಳನ್ನು ಗಮನಿಸಿದವನಿಗೆ ಗೆಲುವಿನ ಮೊದಲ ಮೆಟ್ಟಿಲು ಸಿಕ್ಕಿದ ಖುಷಿ ಮುಖದಲ್ಲಿ ಪ್ರಜ್ವಲಿಸಿತು. ಆದರೇ, ಅದನ್ನು ಯಾರು ಗಮನಿಸಲಿಲ್ಲ. ಜ್ಯೂಸ್ ಕುಡಿದು ಬಿಲ್ ಪೇ ಮಾಡಿ ವೇಟರ್ ಗೆ ಟಿಪ್ಸ್ ರೂಪದಲ್ಲಿ ಜಾಸ್ತಿ ಹಣ ಕೊಟ್ಟು ತಾನು ಉಳಿದುಕೊಂಡ ಹೋಟೆಲ್ ಗೆ ಬರುವಂತೆ ತಿಳಿಸಿ ಹೊರಟನು.


ಸಂಜೆ 7 ರ ಹೊತ್ತಿಗೆ ಜ್ಯೂಸ್ ಸೆಂಟರ್ ನ ಆ ಹುಡುಗ ಬಂದು ಅನಿಕೇತ್ ನನ್ನು ಭೇಚಿಯಾದನು. ಆ ಹುಡುಗನೊಂದಿಗೆ ಮಾತನಾಡಿ ಅಲ್ಲಿನ ಸುತ್ತಮುತ್ತಲಿನ ಪರಿಸರದ ಬಗ್ಗೆ ತಿಳಿದುಕೊಂಡು ಇನ್ನು ಹೆಚ್ಚಿನ ಮಾಹಿತಿ ಬೇಕು ಎಂದಾಗ ಆ ಹುಡುಗ ಸರಿ ಎಂದು ಅಲ್ಲಿಂದ ಹೊರಟನು.


ಸಂಜೆ 8 ರ ಹೊತ್ತಿಗೆ ಆಕಾಂಕ್ಷಳಿಗೆ ಕರೆ ಮಾಡಿ ಮಾತನಾಡಿ ಬೀಚ್ ಸಮೀಪದಲ್ಲಿ ರೆಸಾರ್ಟ್ ನಿರ್ಮಿಸುವುದರ ಬಗ್ಗೆ ಮಾತನಾಡಿ ಅದರ ಬಗ್ಗೆ ವಿವರಿಸಿದನು. ಕರಾವಳಿ ಭಾಗದಲ್ಲಿ ರೆಸಾರ್ಟ್ ನಿರ್ಮಿಸುವುದು ಅವಳ ಕನಸಾಗಿತ್ತು. ಅದು ಅವಳಿಗೆ ಚಿಕ್ಕ‌ ವಯಸ್ಸಿನ ಕನಸು ಅದನ್ನು ನನಸಾಗಿಸಲು ಅನಿಕೇತ್ ಮುಂದಾಗಿದ್ದನು.


ಮರುದಿನ ಅನಿಕೇತ್ ಅದೇ ಜ್ಯೂಸ್ ಸೆಂಟರ್ ಗೆ ಬಂದು ಆ ಹುಡುಗನನ್ನು ಭೇಟಿ ಮಾಡಿ ಅದೇ ವಿಷಯವನ್ನು ನೆನಪಿಸಿ ಹೊರಟನು. ಕಾರವಾರ ಬಿಟ್ಟು ಸುತ್ತ ಮುತ್ತಲಿನ ಜಾಗಗಳನ್ನು ನೋಡಿಕೊಂಡು ಸಂಜೆ ಆರರ ಹೊತ್ತಿಗೆ ತನ್ನ ರೂಂ ಸೇರಿದನು. ಮತ್ತೆ 7 ಗಂಟೆಗೆ ಬಂದ ಹುಡುಗ ಒಂದು ಪೆನ್ ಡ್ರೈವ್ ಕೊಟ್ಚು ಎಲ್ಲ ಇದರಲ್ಲಿ ಇದೆ ಎಂದನು. ಅವನಿಗೆ ಹಣಕೊಟ್ಟು ಕಳುಹಿಸಿದನು.


ಆ ಹುಡುಗ ಕೊಟ್ಟ ಪೆನ್ ಡ್ರೈವನ್ನು ತನ್ನ ಲ್ಯಾಪ್ ಟಾಪ್ ಗೆ ಕನೆಕ್ಟ್ ಮಾಡಿ ಸೂಕ್ಷ್ಮವಾಗಿ ಪ್ರತಿಯೊಂದನ್ನು ಗಮನಿಸಿದನು. ಅಗತ್ಯವಾದದನ್ನು ನೋಟ್ ಮಾಡಿಕೊಂಡುನು. ತಂದೆಗೆ ಫೋನ್ ಮಾಡಿ ಕೆಲವೊಂದು ವಿಚಾರಗಳನ್ನು ವಿನಿಮಯ ಮಾಡಿಕೊಂಡನು. ರೆಸ್ಟ್ ಗೆ ಅಂತ ಬಂದವನು ತನ್ನ ಹಾಸ್ಪಿಟಾಲಿಟಿ ಅಭಿವೃದ್ಧಿ ಮಾಡುವತ್ತ ಪಣ ತೊಟ್ಟಿದ್ದನು.


____________________________________________



ಅನಿಕೇತ್ ಎಂದಿನಂತೆ ಮರುದಿನ ಊರು ಸುತ್ತಲು ಹೊರಟನು. ಹೊರಟವನಿಗೆ ಸಿಟಿಯ ಸಿಗ್ನಲ್ ನಲ್ಲಿ ಯಾರನ್ನೋ ನೋಡಿದನು. ಅವನನ್ನು ಎಲ್ಲೋ ನೋಡಿದ ಸಲುವಾಗಿ ಅವನನ್ನೇ ಹಿಂಬಾಲಿಸಿದನು. ಆ ವ್ಯಕ್ತಿ ಊರ ಹೊರಗಿನ ಕಾಡಿನಂತ ಪ್ರದೇಶವನ್ನು ಹೊಕ್ಕನು. ಆ ತರ ಕಾಡನ್ನು ಮೊದಲ ಸಲ ನೋಡಿದ್ದರಿಂದ ಅಲ್ಲಿಂದ ಹಿಂತಿರುಗಿದನು.


ಕಾರವಾರದ ಬಿಸಿಲಿಗೆ ಬಂದವನೇ ಸ್ನಾನ ಮಾಡಿ ಮಲಗಲು ಹೋದನು. ಆದರೇ, ನಿದ್ದೆ ಹತ್ತಿರವೇ ಸುಳಿಯಲಿಲ್ಲ. ಸಿಗ್ನಲ್ ನಲ್ಲಿ ನೋಡಿದ‌ ಮುಖವೇ ಎದುರಾದಾಗ ಧೈರ್ಯ ಮಾಡಿ ಸಂಜೆಯ ಸಮಯದಲ್ಲಿ ಅಲ್ಲಿಗೆ ಹೊರಟನು. ರಸ್ತೆ ಮಧ್ಯದಲ್ಲಿ ಗಾಡಿ ನಿಲ್ಲಿಸಿದವನು ನಡೆದೆ ಕಾಡಿನೊಳಗೆ ಹೋದನು.


ಕಾಡಿನೊಳಗೆ ಹೋದವನಿಗೆ ಕಂಡಿದ್ದು ಪಾಳು ಬಿದ್ದ ಮನೆ. ಮತ್ತಷ್ಟು ಧೈರ್ಯ ತೆಗೆದುಕೊಂಡು ಹತ್ತಿರ ಹೋದನು. ಆ ಮನೆಯನ್ನು ಹೊರಗಿನಿಂದ ಸುತ್ತಿ ಬಂದನು, ಯಾವ ನರಪಿಳ್ಳೆಯು ಕಾಣಲಿಲ್ಲ. ಮುಂಬಾಗಿಲಿಗೆ ಬಂದಾಗ ತೆರೆದ ಬಾಗಿಲು ನೋಡಿ ಒಳ ಹೋದನು. ಸುತ್ತಲು ನೋಡಿದವನಿಗೆ ಯಾರೋ ಇದ್ದಂತಹ ಕುರುಹುಗಳಿದ್ದವು. ವಾಟರ್ ಬಾಟಲ್, ತಿಂಡಿಯ ಪಾರ್ಸಲ್ ಪೇಪರ್ ಗಳು ಸಿಗರೇಟ್ ಬೈಟ್ಸ್, ಖಾಲಿ ವೈನ್ ಬಾಟಲ್ ಗಳು, ಮುರಿದು ಬಿದ್ದ ವಸ್ತುಗಳ ನಡುವೆ ಎರಡು ಚೇರ್ ಗಳು ಜೊತೆಗೆ ಹಗ್ಗಗಳು ಇದ್ದವು. ಅಲ್ಲಿನ ಸ್ಥಿತಿ ನೋಡಿದವನಿಗೆ ಯಾರನ್ನೋ ಕಿಡ್ನಾಪ್ ಮಾಡಿ ಇಟ್ಟಿದ್ದರು ಎನ್ನುವುದು ತಿಳಿಯಿತು. ಅಲ್ಲಿ ಕಿಡ್ನಾಪ್ ಮಾಡಿದಕ್ಕೆ ಸಿಕ್ಕ ಸಾಕ್ಷಿಗಳನ್ನು ಸಂಗ್ರಹಿಸಿ ಹೊರಟು ತನ್ನ ರೂಂ ಸೇರಿದನು.


ಅದೇ ಸಮಯಕ್ಕೆ ಸೂರ್ಯ ರವರಿಂದ ಫೋನ್ ಬಂದಿತ್ತು ಫೋನ್ ರಿಸೀವ್ ಮಾಡಿ "ಹಲೋ ಅಪ್ಪ" ಎಂದನು.


"ಎಲ್ಲೋಗಿದ್ದೆ" ಎಂದು ಸೂರ್ಯ ರವರು ಪ್ರಶ್ನಿಸಿದರು.


"ಅಪ್ಪ ಅದು" ಎಂದು ತೊದಲಿಸಿದನು.


"ಅನಿ ಒಬ್ಬನೇ ಹೋಗಿದ್ದೀಯಾ ಹುಷಾರು ನೀನ್ ಇರೋ ಜಾಗ ನೋಡಿ ಭಯ ಆಯ್ತು ಕಣೋ" ಎಂದು ಸೂರ್ಯ ಅವರು ಎಚ್ಚರಿಸಿದರು.


"ಹಾಗೇನು ಇಲ್ಲಪ್ಪ ಕಾರ್ ಕೆಟ್ಟಿತ್ತು ಹಾಗಾಗಿ ಅಲ್ಲಿ ಸಿಕ್ಕಿಕೊಂಡಿದ್ದೆ ಯಾರೋ ಮೆಕಾನಿಕ್ ಅದೇ ದಾರೀಲಿ ಸಿಕ್ರು ಸೇಫ್ ಆಗಿ ಬಂದೆ" ಎಂದು ಬಾಯಿಗೆ ಬಂದ ಸುಳ್ಳನ್ನು ಹೇಳಿದನು. ಇರೋ ವಿಚಾರ ಹೇಳಿದರೆ ಭಯಪಡುತ್ತಾರೆ ಹಂತ ಸತ್ಯಾಂಶ ಮುಚ್ಚಿದನು.


"ಸರಿ ಅನಿ ಹುಷಾರು ಏನೇ ಇದ್ರೂ ಕಾಲ್ ಮಾಡು ಒಬ್ಬನೇ ತೊಂದರೆಗೆ ಸಿಕ್ಕಾಗ ಬೇಡ" ಎಂದು ಮತ್ತೊಮ್ಮೆ ಎಚ್ಚರಿಸಿದರು.


"ಸರಿ ಅಪ್ಪ" ಎಂದು ಕರೆ ತುಂಡರಿಸಿದನು.


________________________________________________________



ಶಿವಮೊಗ್ಗ ಸರಹದ್ದಿನ ಕಾಡಿನೊಳಗೆ ಪಾಳುಬಿದ್ದ ಮನೆಯಲ್ಲಿ ಯಾವುದೋ ಆಕೃತಿಗಳು ಇರುವುದು ಕಂಡುಬರುತ್ತದೆ. ಆ ಆಕೃತಿಗಳಲ್ಲಿ ಒಂದು ಆಕೃತಿ ಕರೆ ಮಾಡಿ ಮಾತನಾಡುತ್ತದೆ "ಹಲೋ ಬಾಸ್" ಎಂದನು.


"ಎಲ್ಲೊ ಇದ್ದೀಯ" ಎಂದು ಆಕಡೆಯಿಂದ ವ್ಯಕ್ತಿ ಉತ್ತರಿಸಿದರು.


"ಅದು ಬಾಸ್ ಬೆಳಿಗ್ಗೆ ಸಿಗ್ನಲ್ ನಲ್ಲಿ ಯಾವನೋ ಫಾಲೋ ಮಾಡಿದ ಅದಕ್ಕೆ ಅಲ್ಲಿಂದ ಜಾಗ ಖಾಲಿ ಮಾಡಿ ಇವಾಗ ಶಿವಮೊಗ್ಗ ಬಂದಿದ್ದೀವಿ" ಎಂದನು.


"ಅವನ ಕಣ್ಣಿಗೆ ಯಾರು ಬಿದ್ದಿಲ್ಲ ತಾನೇ" ಎಂದು ಆಕಡೆಯಿಂದ ಆತಂಕದಿಂದ ಪ್ರಶ್ನಿಸಿದರು.


"ಇಲ್ಲ ಬಾಸ್ ಬೇಗ ಜಾಗ ಖಾಲಿ ಮಾಡಿದೆ." ಎಂದರೆ


"ಸರಿ ಅವರು ಹುಷಾರು ನಮ್ಮ ಕೆಲಸ ಆಗೋವರೆಗೂ ಅವರು ಬದುಕಿರಬೇಕು ಹಾಗೆ ಅವರಿಗೆ ಯಾವುದೇ ತೊಂದರೆ ಆಗಬಾರದು" ಎಂದು ಆಕಡೆಯಿಂದ ಎಚ್ಚರಿಸಿದರು.


"ಓಕೆ ಬಾಸ್" ಎಂದು ಕರೆ ತುಂಡರಿಸಿದನು. ಕರೆ ತುಂಡರಿಸಿದ ನಂತರ ತನ್ನ ಜೊತೆಯಲ್ಲಿದ್ದ ವ್ಯಕ್ತಿಯೊಂದಿಗೆ "ಬಸವ ಇವರನ್ನು ಚೆನ್ನಾಗಿ ನೋಡ್ಕೋ ಬೇಕಂತೆ ಕಣೋ" ಎಂದನು.


"ಸರಿ ತಗೋ ಅದರಲ್ಲೇನು ನೋಡ್ಕೊಂಡ್ರೆ ಆಯ್ತು" ಅಂತ ಹೇಳಿ "ಮುನ್ನ ನಾನು ಹೊರಗೆ ಸುತ್ತ ನೋಡಿ ಬರ್ತೀನಿ ಸರಿನಾ" ಎಂದು ಹೇಳಿ ಹೊರಗಡೆ ಹೋಗಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡಿಕೊಂಡು ಬರಲು ಹೋದನು.


ಅವನ ಮಾತಿಗೆ "ಸರಿ" ಎಂದು ಉತ್ತರಿಸಿದನು.



_____________________________________________________


ಮುಂಜಾನೆ ಸಮಯ 8:00 ಗಂಟೆ


ಅನಿಕೇತ್ ಮುಂಜಾನೆಯೇ ಆಕಾಂಕ್ಷಗಳಿಗೆ ಕರೆಮಾಡಿ ಮಾತನಾಡಿದನು.


"ಹಾಯ್ ಚಿನ್ನಿ" ಎಂದನು.


"ಹಲೋ ಬಂಗಾರಿ" ಎಂದಳು.


"ಹೊರಟಿದ್ದೀಯ ಆಫೀಸಿಗೆ? ಎಲ್ಲಿದ್ದೀಯಾ?" ಎಂದು ಪ್ರಶ್ನಿಸಿದನು.


"ರೆಡಿ ಆಗ್ತಾ ಇದ್ದೀನಿ ತಿಂದು ಹೊರಡೋದೇ" ಎಂದು ಉತ್ತರಿಸಿದಳು.


"ನಿನ್ನ ಹತ್ತಿರ ಏನು ಮಾತನಾಡಬೇಕಿತ್ತು ಕಣೋ" ಎಂದು ಪೀಠಿಕೆ ಹಾಕಿದನು.


"ಏನು ಅಂತದ್ದು" ಎಂದು ಕೇಳಿದಳು.


"ಅದು ಚಿನ್ನಿ" ಎಂದು ರಾತ್ರಿ ನಡೆದಿದ್ದೆಲ್ಲ ವಿವರಿಸಿದ್ದನು.


"ಬಂಗಾರಿ ಯಾಕೋ ಆತರ ರಿಸ್ಕ್ ತಗೊಳ್ಳೋಕೆ ಹೋಗಿದ್ದೆ" ಎಂದು ಸಮಾಧಾನದಿಂದಲೇ ಪ್ರಶ್ನಿಸಿದಳು.


"ಅದು ಯಾಕೋ ಕ್ಯೂರಿಯಾಸಿಟಿ ಆಯ್ತು" ಎಂದನು.


"ಅಯ್ಯೋ ನಿನ್ನ ಮುಖ ಮುಚ್ಚಾ ಗೂಬೆನ್ ತಂದು ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನೋ ಗತಿ" ಎಂದು ಬಾಯ್ ತುಂಬ ಬೈದಳು.


"ಸಾರಿ ಚಿನ್ನಿ ಯಾರಿಗೂ ಹೇಳಬೇಡ" ಎಂದು ಬೇಡಿಕೊಂಡನು.


ಸ್ವಲ್ಪ ಸಮಯ ಯೋಚಿಸಿ "ಹೂ ಸರಿ ಹೇಳಲ್ಲ ಮತ್ತೆ ಇಂಥ ಕೆಲಸ ಮಾಡಬೇಡ ಸರಿನಾ" ಎಂದು ಎಚ್ಚರಿಸಿದಳು.


"ಸರಿ ಚಿನ್ನಿ ಲವ್ ಯು ಕಣೋ" ಎಂದು ಖುಷಿ ಪಟ್ಟನು.


ಅವನ ಖುಷಿಯನ್ನು ಕಂಡು "ಲವ್ ಯು ಟೂ ಅನಿ, ಸರಿ ಅನಿ ಸಂಜೆ ಸಿಕ್ತೀನಿ ಇವಾಗ ಲೇಟಾಯ್ತು ಹೊರಡುತ್ತೀನಿ ಜೋಪಾನ್ ಆಯ್ತಾ" ಎಂದು ಮತ್ತೊಮ್ಮೆ ಎಚ್ಚರಿಸಿದಳು.


"ಸರಿ ಹುಷಾರು ರಾತ್ರಿ ತುಂಬಾ ಲೇಟ್ ಮಾಡ್ಬೇಡ ಬೇಗ ಮನೆಗೆ ಬಾ ಆಯ್ತ" ಎಂದು ಅವನು ಅವಳಿಗೆ ಎಚ್ಚರಿಸಿದನು.


"ಬಾಯ್ ಬಂಗಾರಿ" ಎಂದಳು.


"ಬಾಯ್ ಚಿನ್ನಿ" ಎಂದು ಕರೆ ತುಂಡರಿಸಿದನು.


ಸೂರ್ಯರವರು ಅನಿಕೇತ್ ಕೆಲಸ ಮಾಡುವ ಆಫೀಸಿಗೆ ಬಂದರು ಅಲ್ಲಿ ಆಕಾಂಕ್ಷ ಕಾರವಾರದಲ್ಲಿ ಸ್ಟೇ ಹೋಂ ಕಟ್ಟುವ ಐಡಿಯಾವನ್ನು ಹೇಳಿ ಅಲ್ಲಿನ ಜಾಗದ ಬಗ್ಗೆ ವಿವರಿಸಿದಳು. ಸೂರ್ಯರವರಿಗೆ ಅನಿಕೇತ್ ಪ್ಲಾನ್ ಇಷ್ಟವಾಗಿ ಅಲ್ಲಿನ ಬಗ್ಗೆ ಇನ್ನೂ ಮಾಹಿತಿ ತಿಳಿಯಲು ಸೂಚಿಸಿದರು.



_________________________________________________


ಕಮಿಷನರ್ ಆಫೀಸ್


"ಸರ್, ಕಮೀಷನರ್ ಇದಾರಾ?" ಎಂದು ಕಮೀಷನರ್ ಆಫೀಸ್ ಗೆ ಬಂದ ವಿಶ್ವನಾಥ್ ಮತ್ತು ಶಂಕರ್ ರವರಲ್ಲಿ ವಿಶ್ವನಾಥ್ ಪ್ರಶ್ನಿಸಿದರು.


"ಇದಾರೆ ಒಂದು ಮೀಟಿಂಗ್ ನಲ್ಲಿ ಇದೀರೆ." ಎಂದು ಕಾನ್ಸ್ಟೇಬಲ್ ಉತ್ತರಿಸಿದರು.


"ಎಷ್ಟೊತ್ತಿಗೆ ಫ್ರೀ ಆಗ್ತಾರೆ" ಎಂದು ಶಂಕರ್‌ ರವರು ಪ್ರಶ್ನಿಸಿದರು.


"ಗೊತ್ತಿಲ್ಲ ಸರ್" ಎಂದು ಕಾನ್ಸ್ಟೇಬಲ್ ಉತ್ತರಿಸಿದರು.


"ಹಾಗೆಂದರೆ ಹೇಗೆ ಸರ್ ನಾವು ಅವರನ್ನು ಮೀಟ್ ಮಾಡಬೇಕಿತ್ತು" ಎಂದು ವಿಶ್ವನಾಥ್ ಹೇಳಿದರು.


"ನೋಡಿ ಸರ್ ಇವಾಗ ಇಲ್ಲಿ ನಡೀತಾ ಇರೋ ಮೀಟಿಂಗ್ ಏನು ಅಂದ್ರೆ ಕಾಣೆಯಾಗಿರುವ ಅಮರ್ ಸರ್ ಮತ್ತೆ ಅನಿತಾ ಮೇಡಂ ಅವರ ಹುಡುಕಾಟದ ಬಗ್ಗೆ ಈ ದೇಶಕ್ಕೆ ಬೇಕಾದ ಪ್ರಮುಖ ವ್ಯಕ್ತಿಗಳು ಅವರು. ಆಗಿರುವಾಗ ಮೀಟಿಂಗ್ ಬಗ್ಗೆ ಹೇಳೋಕೆ ಆಗಲ್ಲ" ಎಂದು ಕಾನ್ಸ್ಟೇಬಲ್ ಹೇಳಿದರೆ.


"ನಾವು ಅವರ ಬಗ್ಗೆನೇ ಮಾತಾಡಬೇಕಿತ್ತು" ಎಂದು ಶಂಕರ್ ಹೇಳಿದರು.


"ಅವರ ಬಗ್ಗೆ ಏನಾದ್ರೂ ಮಾಹಿತಿ ಸಿಕ್ಕಿದೆಯಾ?" ಎಂದು ಕಾನ್ಸ್ಟೇಬಲ್ ಪ್ರಶ್ನಿಸಿದರು.


"ಅವರು ನಮ್ಮ ಮಕ್ಕಳು ಕೇಸ್ ಎಲ್ಲಿಯವರೆಗೆ ಬಂತು ಅಂತ ವಿಚಾರಿಸೋಕೆ ಬಂದಿರೋದು" ಎಂದು ವಿಶ್ವನಾಥ್ ಉತ್ತರಿಸಿದರು.


"ವೇಟ್ ಮಾಡಿ ಮೀಟಿಂಗ್ ಮುಗಿದ ನಂತರ ವಿಚಾರಿಸಿ ಸರ್" ಎಂದು ಕಾನ್ಸ್ಟೇಬಲ್ ಹೇಳಿದರು.


"ಸರಿ ಸರ್ ಥ್ಯಾಂಕ್ಯು" ಎಂದು ಶಂಕರ್ ಹೇಳಿದರೆ;


"ಬಾ ಶಂಕರ್ ನಾವು ಆಚೆ ಇರೋಣ ಸರ್ ಮೀಟಿಂಗ್ ಮುಗಿದ ಮೇಲೆ ತಿಳಿಸಿ ನಾವು ಹೊರಗಡೆ ಕಾಯುತ್ತಾ ಇರುತ್ತೇವೆ" ಎಂದು ವಿಶ್ವನಾಥ್ ಶಂಕರ್ ಅವರನ್ನು ಕರೆದುಕೊಂಡು ಹೋದರು.


"ಸರಿ ಸರ್" ಎಂದು ಕಾನ್ಸ್ಟೇಬಲ್ ಹೇಳಿದರು.


"ಏನು ವಿಶ್ವ ಇದು, ಇವರು ಬರೀ ಮೀಟಿಂಗ್ನಲ್ಲಿ ಮಕ್ಕಳನ್ನು ಹುಡುಕೋ ತರ ಇದೆ. ಹೀಗೆ ಆದರೆ ಮಕ್ಕಳು ಸಿಕ್ತಾರಾ?" ಎಂದು ಶಂಕರ್ ಹೇಳಿದರೆ;


"ನನಗೂ ಚಿಂತೆ ಆಗಿರೋದು ಶಂಕರ್ ಕಿಡ್ನಾಪರ್ಸ್ ಬೇಡಿಕೆ ಏನು ಅಂತ ಗೊತ್ತಿಲ್ಲ. ಗೊತ್ತಿದ್ದಿದ್ದರೆ ನಾವೇ ಮುಂದುವರಿಯಬಹುದಿತ್ತು." ಎಂದರು ವಿಶ್ವನಾಥ್.


"ಸರ್ ಕಮಿಷನರ್ ಕರೀತಾ ಇದ್ದಾರೆ" ಎಂದು ಕಾನ್ಸ್ಟೇಬಲ್ ವಿಷಯ ಮುಟ್ಟಿಸಿದರು.


"ಗುಡ್ ಮಾರ್ನಿಂಗ್ ಸರ್" ಎಂದು ವಿಶ್ವನಾಥ್ ಮತ್ತು ಶಂಕರ್ ಒಟ್ಟಿಗೆ ಹೇಳಿದರು.


"ಗುಡ್ ಮಾರ್ನಿಂಗ್ ಕುತ್ಕೊಳ್ಳಿ" ಎಂದು ಕಮಿಷನರ್ ಪ್ರತಿಕ್ರಿಯಿಸಿದರು.


"ಸರ್ ಮಕ್ಕಳ ವಿಚಾರ" ಎಂದು ಶಂಕರ್ ಪೀಠಿಕೆ ಹಾಕಿದರು.


"ನಮಗೂ ನಿಮ್ಮ ಸಂಕಟ ಅರ್ಥ ಆಗುತ್ತೆ. ಇದು ಬರೀ ನಿಮ್ಮ ಮನೆ ಸಮಸ್ಯೆಯಲ್ಲ, ದೇಶದ ಸಮಸ್ಯೆ. ಈ ಕೇಸಿಗೆ ಸಂಬಂಧಿಸಿದಂತೆ ಸ್ಪೆಷಲ್ ಆಫೀಸರ್ ನೇಮಕವಾಗಿದ್ದಾರೆ ಅವರು ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲ ಒಂದು ಗುಡ್ ನ್ಯೂಸ್ ನಿಮ್ಮ ಮಕ್ಕಳು ಜೋಪಾನವಾಗಿ ಇದ್ದಾರೆ, ಎಲ್ಲಿದ್ರೂ ಅನ್ನೋದು ಗೊತ್ತಾಗಿತ್ತು ಆದರೆ ಇವಾಗ ಅವರು ಸ್ಥಳ ಬದಲಾವಣೆ ಮಾಡಿದ್ದಾರೆ. ನಿಮ್ಮ ಮಕ್ಕಳನ್ನು ಜೋಪಾನ ಮಾಡುವುದರ ಜೊತೆಗೆ ದೇಶದ್ರೋಹ ಮಾಡುತ್ತಿರುವವರನ್ನು ಪತ್ತೆಹಚ್ಚಬೇಕು ಹಾಗಾಗಿ ಸ್ವಲ್ಪ ತಡ ಆಗುತ್ತೆ. ಒಂದು ಭರವಸೆ ಮಾತ್ರ ಕೊಡಬಹುದು ನಿಮ್ಮ ಮಕ್ಕಳಿಂದ ಅವರಿಗೆ ಯಾವುದೇ ಕೆಲಸ ಸಾಧನೆ ಆಗಬೇಕಿದೆ, ಆ ಕೆಲಸ ಎಷ್ಟು ತಡವಾಗುತ್ತೋ ಅಲ್ಲಿಯವರೆಗೂ ಅವರು ಸೇಫ್ ಹಾಗಂತ ನಾವು ತಡ ಮಾಡೋಕೆ ಆಗಲ್ಲ. ಆದಷ್ಟು ಬೇಗ ಅವರು ಇರೋ ಜಾಗನ ಪತ್ತೆ ಹಚ್ಚಬೇಕು ಈಗಾಗಲೇ ನಮ್ಮ ಆಫೀಸರ್ ಅವರ ಹಿಂದೇನೆ ಇದ್ದಾರೆ ಮಕ್ಕಳ ಜೊತೆಗೆ ದ್ರೋಹಿಗಳು ಸಿಕ್ಕಿಕೊಳ್ಳುತ್ತಾರೆ." ಎಂದು ಕಮಿಷನರ್ ವಿವರಿಸಿದರು.


"ಆದಷ್ಟು ಬೇಗ ಈ ಪ್ರಾಬ್ಲಮ್ ಸಾಲ್ವ್ ಮಾಡಿ ಸರ್" ಎಂದು ವಿಶ್ವನಾಥ್ ಕೇಳಿಕೊಂಡರು.


"ಖಂಡಿತ" ಎಂದು ಕಮಿಷನರ್ ಭರವಸೆ ನೀಡಿದರು.


"ಸರಿ ಸರ್ ನಾವಿನ್ನು ಬರ್ತೀವಿ" ಎಂದು ತಿಳಿಸಿ ಶಂಕರ್ ಮತ್ತು ವಿಶ್ವನಾಥ್ ಅಲ್ಲಿಂದ ಹೊರಟರು.


_____________________________________________________



ಹೋಟೆಲ್ ಕಾರವಾರ


ಎಷ್ಟು ಸಾಧ್ಯವೋ ಅಷ್ಟು ಕಾರವಾರವನ್ನು ಸುತ್ತಿದ ಅನಿಕೇತ್ ಕರಾವಳಿ ತೀರದಿಂದ ಮಲೆನಾಡಿಗೆ ಹೊರಡಲು ಅನುವಾದನು. ಅದಕ್ಕೂ ಮೊದಲು ಬೀಚ್ ಬಳಿ ಮತ್ತೊಮ್ಮೆ ಸುತ್ತಾಡಿ ಬಂದನು.


ಕಾರವಾರ ಬಿಟ್ಟು ಶಿವಮೊಗ್ಗ ತಲುಪುವ ಮೊದಲು ಆಕಾಂಕ್ಷಗಳಿಗೆ ಅನಿಕೇತ್ ಕಾಲ್ ಮಾಡಿ ತಿಳಿಸಿದನು.


"ಹಾಯ್ ಬಂಗಾರಿ." ಎಂದನು.


"ಎಲ್ಲೋ ಇದಿಯಾ?" ಎಂದು ಪ್ರಶ್ನಿಸಿದಳು.


"ಇವಾಗ ಕಾರವಾರ ಬಿಡಬೇಕು." ಎಂದು ಉತ್ತರಿಸಿದನು.


"ಹೋ ಸಾಹೇಬ್ರು ಕರ್ನಾಟಕ ಟ್ರಿಪ್ ಮಾಡಬೇಕು ಅನ್ನೋ ತರ ಇದೆ." ಎಂದು ಕೀಟಲೆ‌ ಮಾಡಿದಳು.


"ಇಲ್ವೋ ಆಫೀಸ್ ಕೆಲಸದಲ್ಲಿ ತಲೆ ಕೆಟ್ಟಿತ್ತು ಹಾಗಾಗಿ ಅಷ್ಟೇ." ಎಂದು ಸಮರ್ಥಿಸಿಕೊಂಡನು.


"ಇಟ್ಸ್ ಓಕೆ ಬೇಬಿ ಆರಾಮಾಗಿ ಸುತ್ತಾಡಿ ಬಾ ಆಫೀಸ್ ಚಿಂತೆ ಬಿಡು" ಎಂದು ತಿಳಿಸಿದಳು.


"ಬಂಗಾರಿ" ಎಂದು ಪೀಠಿಕೆ‌ ಹಾಕಿದನು.


ಅವನದೇ ದಾಟಿಯಲ್ಲಿ "ಹೇಳು ಚಿನ್ನಿ" ಎಂದಳು


"ನೀನು ನನ್ನ ಜೊತೆ ಇರಬೇಕಿತ್ತು" ಎಂದು ನಾಚುತ್ತಾ ಹೇಳಿದನು.


"ನೀನು ಒಬ್ಬನೇ ಯಾವುದೇ ಟೆನ್ಶನ್ ಇಲ್ಲದೆ ನಿನ್ನ ಕೆಲಸ ಮುಗಿಸಿ ಬಾ ನಿನಗಾಗಿ ಕಾಯ್ತಾ ಇರ್ತೀನಿ" ಎಂದು ಯಾವುದೇ ನಾಚಿಕೆ ಸಂಕೋಚವಿಲ್ಲದೆ ನೇರವಾಗಿ ಹೇಳಿದಳು.


"ನನ್ನ ಕೆಲಸ ನಾ! ಯಾವುದು?" ಎಂದು ತೊದಲಿಸುತ್ತಾ ಕೇಳಿದನು.


"ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಅಂತ ತಿಳ್ಕೊಂಡಿರೋ ಆಗಾಯ್ತು ಈ ನನ್ ಮುದ್ದು ಸಿಕ್ರೇಟ್ ಆಫೀಸರ್ ಕಥೆ" ಎಂದಳು.


"ಅಕ್ಷು ನಿನಗೆ ಈ ವಿಷಯ?" ಎಂದು ಪ್ರಶ್ನಿಸಿದನು.


"ಅನಿ ಅವತ್ತು ಬ್ಯಾಕ್ ಪ್ಯಾಕ್ ಮಾಡುವಾಗಲೇ ಗೊತ್ತಾಯ್ತು ನನ್ನ ಅಮೂಲ್ ಬೇಬಿ ಸೀಕ್ರೆಟ್ ಮಷೀನ್ ಮೇಲೆ ಆಚೆ ಹೋಗೋಕೆ ಈ ಆಫೀಸ್ ತಲೆಬಿಸಿ ಒಂದು ನೆಪ ಅಂತ ನನಗೆ ಗೊತ್ತು." ಎಂದಳು.


ವಿಷಯ ಮುಚ್ಚಿಟ್ಟಿದಕ್ಕೆ"ಸಾರಿ ಡಿಯರ್" ಎಂದು ಕ್ಷಮೆ ಕೇಳಿದನು.


"ಇಟ್ಸ್ ಓಕೆ ಬೇಬಿ ಅಮರ ಅನಿಕನ ಸೇಫ್ ಮಾಡ್ತೀಯಾ ಅನ್ನು ನಂಬಿಕೆ ನನಗಿದೆ ಅದರ ಕಡೆ ಗಮನ ಕೊಡು" ಎಂದು‌ ಅವನ ಗಮನವನ್ನು ಕೇಸ್‌ ಕಡೆ ಹರಿಯುವಂತೆ ಮಾಡಿದಳು.


"ಥ್ಯಾಂಕ್ಯು ಡಿಯರ್" ಎಂದನು.


"ಹುಷಾರು ಕಣೋ" ಎಂದು ಮತ್ತೊಮ್ಮೆ ಎಚ್ಚರಿಸಿದಳು.


"ಸರಿ ಬಂಗಾರಿ" ಎಂದು ಅವಳ‌ ಮಾತಿಗೆ ಒಪ್ಪಿದನು.


"ವಾಟ್ ನೆಕ್ಸ್ಟ್?" ಎಂದು ಮುಂದಿನ ಜಾಗದ ಬಗ್ಗೆ ಕೇಳಿದಳು.


"ಮಲೆನಾಡಿನ ಹೂವು ನೀನು" ಎಂದನು ರಾಗವಾಗಿ.


"ಓಹೋ ಮಲೆನಾಡು. ಶಿವಮೊಗ್ಗ ನಾ? ಹಾಸನ ನಾ?" ಎಂದು ಪ್ರಶ್ನಿಸಿದಳು.


"ಶಿವಮೊಗ್ಗ" ಎಂದನು.


"ಆಲ್ ದಿ ಬೆಸ್ಟ್" ಎಂದು ಶುಭಕೋರಿದಳು.


"ಥ್ಯಾಂಕ್ಯೂ ಅಂಡ್ ಒಂದು ವಿಷಯ" ಎಂದು ಯಾವುದೋ ಬೇಡಿಕೆಗೆ ಮುನ್ನುಡಿ ಹಾಕಿದನು.


ಅವನ ಮನಸ್ಸನ್ನು ಅರಿತವಳಂತೆ "ಯಾರಿಗೂ ಹೇಳಲ್ಲ ಬೇಬಿ" ಎಂದಳು.


"ನನ್ ಬಂಗಾರಿ ಲವ್ ಯು ಸರಿ ಬಾಯ್ ಅಪ್ಪನಿಗೆ ಕಾಲ್ ಮಾಡಬೇಕು" ಎಂದನು.


"ಓಕೆ ಚಿನ್ನಿ ಬಾಯ್" ಎಂದು ಕರೆ ತುಂಡರಿಸಿದಳು.


ಅನಿಕೇತನ ಸೀಕ್ರೆಟ್ ಮಿಷನ್ ಬಗ್ಗೆ ಆಕಾಂಕ್ಷಗೆ ತಿಳಿದಿದೆ ಮುಂದೆ ಅನಿಕೇತ್ ಯಾವ ತರ ಕಿಡ್ನಾಪರ್ಸ್ ನ ಕಂಡು ಹಿಡಿಯುತ್ತಾನೆ ಎಂಬುದೇ ಆಕಾಂಕ್ಷಳ ಚಿಂತೆಗೆ ಕಾರಣವಾಗಿದೆ.


______________________________________________



ಅನಿಕೇತ್ ಆಕಾಂಕ್ಷಗಳಿಗೆ ಫೋನ್ ಮಾಡಿದ ನಂತರ ಸೂರ್ಯ ರವರಿಗೆ ಫೋನ್ ಮಾಡಿ "ಹಲೋ ಅಪ್ಪ" ಎಂದನು.


"ಅನಿ ಹೇಗಿದ್ದೀಯಾ?" ಎಂದು ಸೂರ್ಯ ರವರು ಪ್ರಶ್ನಿಸಿದರು.


"ಸೂಪರ್ ಅಪ್ಪ "ಎಂದು ಉತ್ತರಿಸಿ "ಅಪ್ಪ ಅದು" ಎಂದು ಪೀಠಿಕೆ ಹಾಕಿದನು.


"ಹೇಳು" ಎಂದರು.


"ಅದು ನಾನು ನೆಕ್ಸ್ಟ್ ಶಿವಮೊಗ್ಗ ಹೋಗಬೇಕು" ಎಂದನು.


"ಹೋಗಿ ಬಾ ಆದರೆ ಹುಷಾರು" ಎಂದು ಪರ್ಮಿಷನ್ ಕೊಟ್ಟು ಎಚ್ಚರಿಸಿದರು.


"ಅದು" ಎಂದು ಮತ್ತೆ ರಾಗ ತೆಗೆದನು.


"ರೂಮ್ ಬುಕ್ ಮಾಡ್ತೀನಿ ಕಣೋ" ಎಂದರು.


"ಅದು ಆಲ್ರೆಡಿ ಆಗಿದೆ ಅಪ್ಪ" ಎಂದನು.


"ಮತ್ತೆ ಏನು?" ಎಂದು ಪ್ರಶ್ನಿಸಿದರು.


"ಹೋಟೆಲ್ ಅಡ್ರೆಸ್ ಸೆಂಡ್ ಮಾಡ್ತೀನಿ ಅಲ್ಲಿಗೆ ಬೇರೆ ಕಾರ್ ಕಳಿಸಿ" ಎಂದು ಕೇಳಿದನು.


"ಯಾಕೆ ಇವಾಗಿನ ಕಾರ್ ಸರಿ ಇಲ್ವಾ" ಎಂದು ಮರು ಪ್ರಶ್ನಿಸಿದರು.


"ಈ ಕಾರ್ ಬೋರಾಗಿದೆ" ಎಂದನು.


"ಸರಿ ಸರಿ ಕಳಿಸ್ತೀನಿ, ನಾವು ಓದುವಾಗ ಸೈಕಲ್ ಗತಿ ಇರಲಿಲ್ಲ. ನಿಮಗೆ ಸುತ್ತಾಡೋಕೆ ವೆರೈಟಿ ವೆರೈಟಿ ಕಾರ್ ಬೇಕು" ಎಂದು ರೇಗಿದರು.


"ಅಪ್ಪ ಹೀಗೆ ರೇಗಾಡಿದ ಅಮ್ಮನಿಗೆ ಹೇಳ್ತೀನಿ" ಎಂದು ತಂದೆಗೆ ಹೆದರಿಸಿದನು.


"ಅಪ್ಪ ತಂದೆ" ಎಂದವರ ಮಾತಿಗೆ


"ಎರಡು ಒಂದೇ ಅದು ನೀವು ನಾನಲ್ಲ" ಎಂದನು.


"ಕರ್ಮ ಕಣೋ ಯಾವಾಗ ನೀನು ದೊಡ್ಡವನು ಆಗೋದು" ಎಂದು ರೇಗಿಸಿದರು.


"ನಾನು ದೊಡ್ಡವನೆ ನನಗೆ ಇವಾಗ 27 ವರ್ಷ ಗೊತ್ತಾ?" ಎಂದು ನುಲಿಯುತ್ತಾ ಹೇಳಿದನು.


"ಕತ್ತೆಗೂ ವಯಸ್ಸಾಗುತ್ತೆ ಏನ್ ಲಾಭ" ಎಂದರು.


"ನಿಮ್ ಕಾರ್ ಬೇಡ ಹೋಗಿ, ನಾನ್ ಅಮ್ಮನಿಗೆ ಹೇಳ್ತಿನಿ ಅವರೇ ಕಳಿಸ್ತಾರೆ" ಎಂದು ಹುಸಿ ಮುನಿಸು ತೋರಿಸಿದನು.


"ಪುಣ್ಯಾತ್ಮ ಅಮ್ಮನ ಮಗನೇ ಅಳ್ಬೇಡ ಕಳಿಸ್ತೀನಿ" ಎಂದು ಸಮಾಧಾನಿಸಿದರು.


"ಅಪ್ಪನಿಗೆ ಅಮ್ಮನ ಕಂಡ್ರೆ ಭಯ" ಎಂದು ನಸು ನಕ್ಕು ತಂದಯನ್ನೆ ರೇಗಿಸಿದನು.


"ಭಯ ಅಲ್ಲಪ್ಪ ನೀನ್ ಬರೋವರೆಗೂ ಒಂದೇ ಕಣ್ಣಲ್ಲಿ ಅಳ್ತಾಳೆ ನಿಮ್ಮಮ್ಮ. ಸಮಾಧಾನ ಮಾಡೋ ಶಕ್ತಿ ಇಲ್ಲ, ಎನರ್ಜಿ ವೇಸ್ಟ್ ಮಾಡಿಕೊಳ್ಳೊಕೆ ಇಷ್ಟ‌ ಇಲ್ಲ" ಎಂದು ತನ್ನನ್ನು ತಾವೇ ಸಮರ್ಥಿಸಿಕೊಂಡರು.


"ಸರಿ ಸರಿ ಏನೋ ಒಂದು, ನಾಳೆ ಕಾರ್ ಕಳಿಸಿ ಮರಿ ಬೇಡಿ ನಾಳೆ ಮಾರ್ನಿಂಗ್ ಇಲ್ಲಿಂದ ಹೊರಡ್ತಾ ಇದೀನಿ" ಎಂದನು.


"ಸರಿ ಜೋಪಾನ" ಎಂದು ಮತ್ತೊಮ್ಮೆ ಎಚ್ಚರಿಸಿದರು.


"ಸರಿ ಅಪ್ಪ" ಎಂದನು.


"ಸರಿ ಗುಡ್ ನೈಟ್" ಎಂದರು.


"ಗುಡ್ ನೈಟ್ ಸ್ವೀಟ್ ಡ್ರೀಮ್ಸ್ ಲವ್ ಯು ಪ" ಎಂದು ಹೇಳಿ ಕರೆ ತುಂಡರಿಸಿದನು.



___________________________________________________



ಆದ್ಯಾ ನಿಲಯ ಸಮಯ 8:00 ಗಂಟೆ


ಆದ್ಯಾ ನಿಲಯದಲ್ಲಿ ಅನಿಕೇತ್ ಟ್ರಿಪ್ ಹೋದಾಗಿನಿಂದ ಸಂಧ್ಯಾರವರ ಪೂಜೆಯ ಅವಧಿ ಹೆಚ್ಚಾಗಿತ್ತು. ಮುಂಜಾನೆಯ ಎಲ್ಲ ಕೆಲಸಗಳನ್ನು ಕೆಲಸದವರಿಗೆ ವಹಿಸಿ ಹೆಚ್ಚಿನ ಸಮಯವನ್ನು ಪೂಜೆಯಲ್ಲಿಯೆ ಕಳೆಯುತ್ತಿದ್ದರು.


ಸೂರ್ಯ ಮತ್ತು ಸಚಿನ್ ಆಫೀಸ್ ಗೆ ಹೋಗುವಾಗ ಬರುವಾಗ ತಿಂಡಿ ಊಟದ ಸಮಯದಲ್ಲಿ ಮಾತ್ರ ಸಂಧ್ಯಾರವರು ದೇವರ ಮನೆಯಿಂದ ಆಚೆ ಬರುತ್ತಿದ್ದರು, ಅನಿಕೇತ್ ಎಡೆಗಿನ ಅತಿಯಾದ ಪ್ರೀತಿಯೇ ಸಂಧ್ಯಾರವರ ಭಯಕ್ಕೆ ಕಾರಣವಾಗಿತ್ತು.


ಆದ್ಯಾ ಹುಟ್ಟಿ ಮೂರು ವರ್ಷಗಳ ನಂತರ ಅನಿಕೇತ್ ಹುಟ್ಟಿದರು, ಅನಿಕೇತ್ ಹುಟ್ಟಿದಾಗ ಎಲ್ಲ ಮಕ್ಕಳಂತೆ ಸಾಮಾನ್ಯವಾಗಿ ಇರಲಿಲ್ಲ. ಡಾಕ್ಟರ್ ಮಗುವಿನ ಬಗ್ಗೆ ಯಾವುದೇ ಭರವಸೆಯನ್ನು ಕೊಟ್ಟಿರಲಿಲ್ಲ ಆದರೂ ಡಾಕ್ಟರ್ಸ್ ನ ಸತತ ಪ್ರಯತ್ನದಿಂದ ಹುಟ್ಟಿದ 5 ದಿನಗಳ ನಂತರ ಮಗುವಿನ ಆರೋಗ್ಯ ಪೂರ್ತಿ ಅಲ್ಲದಿದ್ದರೂ ಒಂದು ಹಂತಕ್ಕೆ ಬಂದಿತ್ತು. ಕಾಳಜಿ ಆರೈಕೆ ಚಿಕಿತ್ಸೆಯ ಫಲವಾಗಿ ಮೂರು ತಿಂಗಳ ನಂತರ ಮಗುವಿನ ಆರೋಗ್ಯ ಸುಧಾರಿಸಿತ್ತು. ಹಾಗಾಗಿ ಸಂಧ್ಯಾ ಅವರಿಗೆ ಅನಿಕೇತ್ ಮೇಲೆ ಅದ್ಯಾಳಿಗಿಂತ ಚೂರು ಜಾಸ್ತಿ ಕಾಳಜಿ. ಅನಿಕೇತ್ ಹೈಯರ್ ಸ್ಟಡೀಸ್ ಗೆ ಫಾರಿನ್ ಗೆ ಹೊರಟಾಗಲೂ ಮೊದಲು ತಡೆದರು, ಸೂರ್ಯರವರ ಒತ್ತಾಯ ಮತ್ತು ಅನಿಕೇತನ ಭವಿಷ್ಯಕ್ಕೆ ಒಲ್ಲದ ಮನಸ್ಸಿನಿಂದ ಒಪ್ಪಿ ಕಳುಹಿಸಿದ್ದರು.


"ಸೂರ್ಯ ಅನಿ ಫೋನ್ ಮಾಡಿದ್ನಾ?" ಎಂದು ಮುಂಜಾನೆಯೇ ಪ್ರಶ್ನಿಸಿದರು.


"ರಾತ್ರಿ ಮಾಡಿದ್ನಲ್ಲ, ಇವಾಗ ಶಿವಮೊಗ್ಗಕ್ಕೆ ಹೊರಟಿದ್ದಾನೆ ಬೇರೆ ಕಾರ್ ಬೇಕಂತೆ ಕಳಿಸಿದ್ದೇನೆ" ಎಂದು ಉತ್ತರಿಸಿದರು.

"ರೀ ಅವನು ನಿಜವಾಗಲೂ ಟ್ರಿಪ್ಪಿಗೆ ಹೋಗಿರೋದಾ?" ಎಂದು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದರು.


"ಹೌದಮ್ಮ ಯಾಕೆ ಈ ಅನುಮಾನ?" ಎಂದು ಕೇಳಿದರು.


"ಸತ್ಯ ಹೇಳ್ರಿ ನಾನೇನು ಅವಿದ್ಯಾವಂತೆ ಅಲ್ಲ, ನಾನು ಓದಿದ್ದೇನೆ" ಎಂದು ಮತ್ತೆ ಪ್ರಶ್ನಿಸಿದರು.


"ಅಂದ್ರೆ ಏನು ಮಾತಿನ ಅರ್ಥ?" ಎಂದು ರೇಗಿದ್ದರು.


"ತಗೊಳ್ಳಿ ಇವುಗಳನ್ನು ಅನಿ ಎಜುಕೇಶನ್ ಸರ್ಟಿಫಿಕೇಟ್" ಎಂದು ಸರ್ಟಿಫಿಕೇಟ್ಗಳನ್ನು ಸೂರ್ಯರವರಿಗೆ ಕೊಟ್ಟರು.


"ಸಂಧ್ಯಾ ಇದು ನಿನ್ನ ಹತ್ತಿರ ಹೇಗೆ?" ಎಂದು ಅನುಮಾನ ಮಿಶ್ರಿತ ಗಾಬರಿಯಿಂದ ಕೇಳಿದರು.


"ಹೈಯರ್ ಸ್ಟಡೀಸ್ ಅಂತ ಸುಳ್ಳು ಹೇಳಿ ಅವನನ್ನ ಡೆಲ್ಲಿಗೆ ಪೊಲೀಸ್ ಟ್ರೈನಿಂಗ್ ಕಳಿಸಿದ್ರಿ ಅಲ್ವಾ" ಎಂದು ಕೋಪದಿಂದ ಕೇಳಿದರು.


"ಸಂಧ್ಯಾ ಅದು ಏನು ಅಂದ್ರೆ" ಮಾತಿಗಾಗಿ ತಡಕಾಡಿದರು.


"ಬೇರೆ ಏನು ಸುಳ್ಳು ತಿಳೀತಾ ಇಲ್ವ" ಎಂದು ಮತ್ತೆ ರೇಗಿದರು.


"ಅದು ನನಗೂ ಗೊತ್ತಿರಲಿಲ್ಲ ಅವನು ಇಲ್ಲಿಂದ ಹೋಗಿ ಒಂದು ವಾರದ ನಂತರ ಗೊತ್ತಾಗಿದ್ದು" ಎಂದರೆ.


"ಸಾಕು ನಿಮ್ಮ ಸುಳ್ಳು ಇನ್ನು ಎಷ್ಟು ಅಂತ ನಂಬಿಸೋಕೆ ನೋಡ್ತೀರಾ?" ಎಂದು ರೇಗಿದರು.


"ನಿಜ ಸಂಧ್ಯಾ ಇವನು ಇಲ್ಲಿಂದ ಹೊರಟ ನಂತರ ಅವನ ಕಾಲೇಜಿನಿಂದ ಫೋನ್ ಬಂದಿತ್ತು. ನಿಮ್ಮ ಮಗ ಇನ್ನು ಬಂದು ಅಡ್ಮಿಶನ್ ಆಗಿಲ್ಲ ಅಂತ ಅನಿಗೆ ಫೋನ್ ಮಾಡಿದಾಗ ಅಡ್ಮಿಷನ್ ಆಗಿದ್ದೀನಿ ಅಂತ ಸುಳ್ಳು ಹೇಳಿದ, ಜಾಸ್ತಿ ಕೆದಕದೆ ಅವನ ಟ್ರಾವೆಲ್ ಡೀಟೇಲ್ಸ್ ಚೆಕ್ ಮಾಡಿದಾಗ ಡೆಲ್ಲಿಗೆ ಹೋಗಿರೋದು ಗೊತ್ತಾಯ್ತು ನಂತರ ವಿಚಾರಿಸಿದಾಗ ಬಾಯಿ ಬಿಟ್ಟ. ನಿನಗೆ ಭಯ ಜಾಸ್ತಿ ಹೇಳಬೇಡ ಅಂತ ಅವನೇ ತಡೆದದ್ದು" ಎಂದು ಸತ್ಯಾಂಶವನ್ನು ತಿಳಿಸಿದರು.


"ಇವಾಗ್ ಯಾಕೆ ಕಾರವಾರಕ್ಕೆ ಹೋಗಿರೋದು?" ಎಂದು ಮತ್ತೊಂದು ಪ್ರಶ್ನೆ ಕೇಳಿದರು.


"ಕಾಣೆಯಾಗಿರುವ ಅಮರ ಅನಿಕರ ಹುಡುಕಾಟದಲ್ಲಿ ಅಪಹರಿಸಿದವರ ಹೆಡೆಮುರಿಕಟ್ಟಲು ಹೋಗಿರೋದು" ಎಂದು ಯಾವುದೇ ಸತ್ಯವನ್ನು ಮುಚ್ಚಿಡದೇ ಹೇಳಿದರು.


"ಇದರಲ್ಲಿ ಅವನಿಗೆ ಏನಾದ್ರೂ ಆದ್ರೆ" ಎಂಬ ಆತಂಕವನ್ನು ಹೊರಹಾಕಿದರು


"ಹುಟ್ಟಿದಾಗಲೇ ಆ ಯಮನೊಂದಿಗೆ ಹೋರಾಡಿ ಸಾವನ್ನೇ ಗೆದ್ದಿರೋನು ನನ್ನ ಮಗ, ಈ ದೇಶದ್ರೋಹಿಗಳು ಅವನಿಗೆ ಏನು ಮಾಡೋಕೆ ಸಾಧ್ಯ." ಎಂದು ಹೆಮ್ಮೆಯಿಂದ ಹೇಳಿದರು.


"ಅದು ನಿಜಾನೆ ಬುದ್ಧಿ ಶಕ್ತಿ ಇಲ್ಲದೇ ಇದ್ದಾಗ ಹೋರಾಡಿದ ನನ್ನ ಮಗ ಇವಾಗ ಹೋರಾಡಲ್ವ, ಅವನು ಗೆದ್ದೆ ಬರುತ್ತಾನೆ." ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡರು.


"ಇದು ಸ್ಪಿರಿಟ್ ಅಂದ್ರೆ, ಆದರೂ ಈ ಸರ್ಟಿಫಿಕೇಟ್ ಹೇಗೆ ಸಿಕ್ತು?" ಎಂದು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದರು.


"ಅವನು ಟ್ರಿಪ್ ಗೆ ಹೋದ ಮೇಲೆ ರೂಮ್ ಕ್ಲೀನ್ ಮಾಡೋಕೆ ಹೋಗಿದ್ದೆ ಅವಾಗ ಸಿಕ್ತು" ಎಂದರು.


"ಸರಿ ಇವಾಗ ಅವನ ವಿಷಯ ಬಿಡು ಅವನು ನೀನ್ ತಿಳಿದಿರುವ ತರ ಅಮೂಲ್ ಬೇಬಿ ಅಲ್ಲ ಅವನು ಸೂಪರ್ಮ್ಯಾನ್" ಎಂದು ಮಗನನ್ನು ಹೊಗಳಿ "ನಮ್ಮ ಹೊಟ್ಟೆ ಕಡೆ ಗಮನಕೊಡು" ಎಂದರು.


"ನಡಿರಿ ಅದು ಸರಿ ಸಚಿನ್ ಎಲ್ಲಿ?" ಎಂದು ಮೊದಲ ಮಗನ ಬಗ್ಗೆ ವಿಚಾರಿಸಿದರು.


"ಅವನು ಬೇಗ ಹೋದಾ, ಮೀಟಿಂಗ್ ಇದೆ ಅಂತ" ಸಚಿನ್ ಬಗ್ಗೆ ತಿಳಿಸಿದರು.


"ಇದಕ್ಕೆ ನನಗೆ ಕೋಪ ಬರೋದು ಊಟ ತಿಂಡಿ ಸರಿಯಾಗಿ ಮಾಡಲ್ಲ" ಎಂದು ಮತ್ತೆ ರೇಗಿದ್ದರು.


"ಫೋನ್ ಮಾಡಿ ವಿಚಾರಿಸಿಕೊ ನನಗೆ ತಿಂಡಿ ಕೊಡು ಇಲ್ಲ ನಾನು ಹೋಗ್ತೀನಿ" ಎಂದು ಹೆದರಿಸಿದರು.


"ಬನ್ನಿ ತಿನ್ನಿ" ಎಂದು ಕರೆದುಕೊಂಡು ಹೋದರು.


ಸೂರ್ಯರವರು ತಿಂಡಿ ಮುಗಿಸಿ ಹೊರಟರೆ ಸಂಧ್ಯಾರವರು ಮೊದಲು ಸಚಿನ್ ಗೆ ಕಾಲ್ ಮಾಡಿ ತಿಂಡಿ ತಿನ್ನದೇ ಹೇಳದೆ ಹೋಗಿದ್ದಕ್ಕೆ ತರಾಟೆಗೆ ತೆಗೆದುಕೊಂಡರು, ನಂತರ ಅನಿಕೇತ್ ಗೆ ಕಾಲ್ ಮಾಡಿ ಸತ್ಯವನ್ನು ತಿಳಿದಿದ್ದರೂ ಅದರ ಬಗ್ಗೆ ಏನೊಂದು ಪ್ರಶ್ನಿಸಿದೆ ಸಾವಿರ ಬಾರಿ ಜೋಪಾನ ಎಂದು ಎಚ್ಚರಿಸಿ ಫೋನಿಟ್ಟರು. ಮತ್ತೆ ಯಥಾ ಪ್ರಕಾರ ಪೂಜಾ ಕಾರ್ಯದಲ್ಲಿ ತೊಡಗಿದರು.ಜೊತೆಗೆ ಪ್ರತಿದಿನ ಸಂಜೆ ಪಕ್ಕದ ಶಿವನ ದೇವಸ್ಥಾನಕ್ಕೆ ಹೋಗಿ ಅರ್ಚನೆಯನ್ನು ಮಾಡಿಸುತ್ತಿದ್ದರು.



___________________________________________________



ಹೋಟೆಲ್ ಶಿವಮೊಗ್ಗ


ಅನಿಕೇತ್ ಸುಮಾರು 5 ಗಂಟೆಯ ವೇಳೆಗೆ ಕಾರವಾರದ ಹೋಟೆಲ್ ನಿಂದ ಹೊರಟು ಸುಮಾರು 11 ಗಂಟೆಯ ವೇಳೆಗೆ ಶಿವಮೊಗ್ಗವನ್ನು ತಲುಪಿದನು. ದಾರಿ ಮಧ್ಯದಲ್ಲಿಯೇ ತಿಂಡಿ ಮುಗಿಸಿದ್ದರಿಂದಲೇ ಶಿವಮೊಗ್ಗ ತಲುಪಿದವನು ತಾನು ಬುಕ್ ಮಾಡಿದ ಹೋಟೆಲ್ ಸಮೀಪಿಸಿದನು.


ಅನಿಕೇತ್ ತಲುಪಿ ಒಂದು ಗಂಟೆಯ ನಂತರ ಸೂರ್ಯರವರು ಕಳುಹಿಸಿದ ಕಾರ್ ಬಂದು ತಲುಪಿತು. ಅನಿಕೇತ್ ಬಂದ ಡ್ರೈವರ್ ಜೊತೆ ತನ್ನ ಮನೆಯ ಬಗ್ಗೆ ಮಾಹಿತಿ ಪಡೆದು ಅವರೊಂದಿಗೆ ಊಟ ಮುಗಿಸಿ ಅವರಿಗೆ ಅಂದು ಅಲ್ಲೇ‌ ಉಳಿಯುವ ವ್ಯವಸ್ಥೆ ಮಾಡಿ ಮರುದಿನ ಕಾರನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದನು. ಅದರಂತೆ ಡ್ರೈವರ್ ಸಹ ಲಾಂಗ್ ಜರ್ನಿಯಿಂದ ಸುಸ್ತಾಗಿದ್ದರಿಂದ ಅನಿಕೇತ್ ಮಾತಿಗೆ ಒಪ್ಪಿ ಉಳಿದರು. ಅನಿಕೇತ್ ಮೊದಲು ಅವರಿಗೆ ತಿಂಡಿ ತರಿಸಿಕೊಟ್ಟು ತಿಂದ ನಂತರ ರೆಸ್ಟ್ ಮಾಡಲು ತಿಳಿಸಿ ಅವನು ಮಲಗಲು ಹೊರಟನು.


ಒಂದು ಚೆಂದದ ನಿದ್ದೆಯ ನಂತರ ಸಂಜೆಯ 5 ರ ವೇಳೆಗೆ ಎಚ್ಚರಗೊಂಡ ಅನಿಕೇತ್ ಡ್ರೈವರ್ ರನ್ನು ಎಚ್ಚರಿಸಿ ಫ್ರೇಶ್ ಅಪ್ ಆಗಲು ಹೊರಟನು. ತುಂಗೆಯ ನೀರಲ್ಲಿ ಮಿಂದು‌ ಬಂದ ಅನಿಕೇತ್‌ ಮೊದಲು ತಾಯಿಯ ಜೊತೆ ಮಾತನಾಡಿ ನಂತರ ಪೂಜಾ ನಂತರ ಆಕಾಂಕ್ಷಳೊಂದಿಗೆ ಮಾತನಾಡಿ ಡ್ರೈವರ್‌ ನೊಂದಿಗೆ ಶಿವಮೊಗ್ಗ ಸುತ್ತಲು ಹೊರಟನು.


ಸಂಜೆಯ ಸಮಯ ಆಗಿದ್ದರಿಂದ ಮೊದಲು ಕೋಟೆ ಆಂಜನೇಯ ಸ್ವಾಮಿಯ ದರ್ಶನ ಮಾಡಿ ಹಾಗೇ ಏರಿಯಾ ಪೂರ್ತಿ ಸುತ್ತಿ ಹೋಟೆಲ್ ನಲ್ಲಿ ಊಟ ಮುಗಿಸಿ ರೂಂ ಸೇರಿದರು. ಡ್ರೈವರ್‌ ಜೊತೆ ಇರುವುದರಿಂದ ತಂದೆ ತಾಯಿ ಆಕಾಂಕ್ಷಳೊಂದಿಗೆ ಮೊದಲು ಮಾತು ಮುಗಿಸಿದನು. ನಂತರ ಡ್ರೈವರ್‌ ನೊಂದಿಗೆ ಮಾತಿಗಿಳಿದನು.


"ಸರ್ ನನ್ನದೊಂದು ಡೌಟ್ ಇದೆ ಕೇಳ್ಲ" ಎಂದು ಮೊದಲು ಡ್ರೈವರ್ ತಾನೇ ಮಾತು ಶುರು ಮಾಡಿದರು.


"ರಾಮು ಅಂಕಲ್‌ ನೀವು ನನಗಿಂತ ದೊಡ್ಡವರು, ಅದರಲ್ಲೂ ನನ್ನ ನೀವು ಚಿಕ್ಕ ವಯಸ್ಸಿನಿಂದ ಆಟ ಆಡಿಸಿ ಮುದ್ದಿಸಿ ಬೆಳೆಸಿದವರು. ನೀವು ನನ್ನನ್ನು ಸರ್‌ ಅಂತ ಎಲ್ಲ ಕರೆಯ ಬೇಡಿ ಎಲ್ಲರು ಕರೆಯೋ ತರ ಅನಿ ಅಂತನೇ ಕರೆಯಿರಿ" ಎಂದು ಅನಿಕೇತ್‌ ತಿಳಿಸಿದನು.


"ಆದ್ರೂ ನಾನು ನಿಮ್ಮನ್ನು ಹೆಸರಿಡಿದು ಕರೆಯೋದು" ಎಂದು ರಾಮಣ್ಣ ರಾಗ ಎಳೆಯುವಾಗ, ಅನಿಕೇತ್ ಅದನ್ನು ಅರ್ಧದಲ್ಲಿ ತಡೆದು "ಅಂಕಲ್ ನೀವು ನನ್ನ ತಂದೆ ಸಮಾನ ಹೆಸರಿಟ್ಟೆ ಕರೆಯಿರಿ ತೊಂದರೆ ಇಲ್ಲ" ಎಂದು ಸ್ಪಷ್ಟ ಪಡಿಸಿದನು.


"ಸರಿ ಇನ್ಮೇಲೆ ಅನಿ‌ ಅಂತನೇ ಕರಿತೀನಿ ಸರಿನಾ" ಎಂದು ರಾಮಣ್ಣ ಒಪ್ಪಿಕೊಂಡರು.


"ಥ್ಯಾಂಕ್ಯೂ ಅಂಕಲ್ ಅದೇನೋ ಡೌಟ್ ಅಂದ್ರಲ್ಲ ಏನದು?" ಎಂದು ರಾಮಣ್ಣನ ಡೌಟ್ ಅನ್ನು ಅನಿಕೇತ್ ಪ್ರಶ್ನಿಸಿದನು.


"ಸಂಧ್ಯಾಮ್ಮೋರು ನೀವು ಬಂದಾಗಿನಿಂದ ದೇವರ ಮನೆ ಬಿಟ್ಟು ಬಂದಿಲ್ಲ ಒಂದಿನ ಕುತೂಹಲದಿಂದ ವಿಚಾರಿಸಿದಾಗ ಅವರು ಹೇಳಿದ ವಿಷಯ ಕೇಳಿ ಶಾಕ್ ಆಯ್ತು" ಎಂದು ತಿಳಿಸಿದನು.


"ಅಂಕಲ್ ಅಮ್ಮ ಏನು ಹೇಳಿದರು" ಎಂದು ಭಯ ಮಿಶ್ರಿತ ಕುತೂಹಲದಿಂದ ಕೇಳಿದನು.


"ಅದು ನೀನು ಇಲ್ಲಿಗೆ ಬಂದಿರೋದು ಯಾವುದೋ ಕೇಸ್ ವಿಷಯದ ಮೇಲೆ ಅಂತೇ, ಜೊತೆಗೆ ನೀನು ಪೊಲೀಸ್ ಅಂತೆ, ಹೌದಾ?" ಎಂದು ಪ್ರಶ್ನಿಸಿದರು.


"ನಾನು ಪೊಲೀಸ್ ಅನ್ನೋದು ಹೇಗೆ ಗೊತ್ತಾಯ್ತು?" ಎಂದು ಮತ್ತೆ ರಾಮಣ್ಣನಿಗೆ ಪ್ರಶ್ನಿಸಿದನು.


"ಅದು ನನಗೆ ಗೊತ್ತಿಲ್ಲ ಅನಿ, ಅಮ್ಮೋರು ಯಾವಾಗಲೂ ಪೂಜೆ ಪುನಸ್ಕಾರ ಅಂತ ಇರೋದು ನೋಡಿ ಕೇಳಿದಾಗ ಅವರು ಹೇಳಿದ್ದು, ಅದು ಬಿಟ್ಟು ಬೇರೆ ಏನು ಹೇಳಿಲ್ಲ" ಎಂದು ತನಗೆ ಗೊತ್ತಿರೋ ಅಷ್ಟು ಸತ್ಯವನ್ನು ತಿಳಿಸಿದರು.


"ಹೌದು ಅಂಕಲ್, ನಾನು ಪೊಲೀಸ್ ಒಂದು ಕೇಸ್ ವಿಚಾರವಾಗಿ ಬಂದಿರೋದು. ಹಾಗೇ ಈ ವಿಷಯ ಎಲ್ಲೂ ಹೊರಗೆ ಬರೋದು ಬೇಡ. ಬಂದರೆ‌ ಕೇಸ್ ಗೆ ತೊಂದರೆ ಆಗುತ್ತದೆ" ಎಂದು ಹೇಳಿದನು.


"ಅನಿ ನಿನ್ನ ಜೊತೆ ನಾನು ಇರ್ಲಾ" ಎಂದು ರಾಮಣ್ಣ ಕೇಳಿದರು.


"ಬೇಡ ಅಂಕಲ್ ನನ್ನ ಕೆಲಸದಿಂದ ನಿಮಗೆ ತೊಂದರೆ ಆಗೋದು ಬೇಡ ನಾಳೆ ನೀವು ಹೊರಡಿ ಮನೆ ಕಡೆ ಗಮನ ಕೊಡಿ" ಎಂದು ತಿಳಿಸಿದನು.


ರಾಮಣ್ಣನಿಗೆ ಅನಿಕೇತ್ ನನ್ನು ಬಿಟ್ಟು ಹೋಗಲು ಮನಸ್ಸಿಲ್ಲದೆ ಅವನ ಮಾತಿಗೆ ಎದುರಾಡುವ ಮನಸ್ಸಿಲ್ಲದೆ ಒಪ್ಪಿದರು. ಹೀಗೆ ಸ್ವಲ್ಪ ಸಮಯ ಹರಟಿದ ನಂತರ ಇಬ್ಬರು ನಿದ್ದೆಗೆ ಜಾರಿದರು.


________________________________________________


ಮುಂಜಾನೆ 6 ಗಂಟೆ


ರಾತ್ರಿ ಕಳೆದು ಹಗಲು ಮೂಡಿದಾಗ ನಿದ್ದೆಯಿಂದ ಎದ್ದ ಅನಿಕೇತ್ ಮೊದಲು ನಿತ್ಯ ಕರ್ಮಗಳನ್ನು ಮುಗಿಸಿ ಮನೆಯವರ ಜೊತೆ ಮಾತನಾಡಿ ರಾಮಣ್ಣನ ಜೊತೆ ತಿಂಡಿಯನ್ನು ಮುಗಿಸಿದನು.


"ಅನಿ ನಾನು ಇನ್ನು ಬರ್ಲಾ" ಎಂದು ರಾಮಣ್ಣ ಮನಸ್ಸಿಲ್ಲದೆ ಅನಿಕೇತ್ ಬಳಿ ಹೋಗಲು ಅನುಮತಿಯನ್ನು ಕೇಳಿದರು.


"ಅಂಕಲ್ ನೀವು ಅಷ್ಟು ಹೇಳಿದ ಮೇಲೆ ರಾತ್ರಿಯೆಲ್ಲ ಯೋಚನೆ ಮಾಡಿದೆ ನೀವು ನನ್ನ ಜೊತೆ ಇರಿ" ಎಂದು ರಾಮಣ್ಣನನ್ನು ಉಳಿಸಿಕೊಂಡನು.


"ಅನಿ ನಿಜ ಹೇಳ್ತಾ ಇದೀಯಾ?" ಎಂದು ಕನ್ಫರ್ಮೇಷನ್ ಗೆ ಕೇಳಿದರು.


"ಹೌದು ಅಂಕಲ್ ನಿಜನೇ ಹೇಳ್ತಾ ಇರೋದು. ಅಪ್ಪನೂ ಒಪ್ಪಿಕೊಂಡರು, ನಾನ್ ಮಾಡಿರೋ ಪ್ಲಾನ್ ಪ್ರಕಾರನೇ ನಡೆದರೆ ನನಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ ಮಾಡ್ತೀರಾ?" ಎಂದು ಕೇಳಿಕೊಂಡನು.


"ನಿಮಗೆ ಬರಿ ಸಹಾಯ ಮಾತ್ರ ಅಲ್ಲ ನನ್ನ ಪ್ರಾಣ ಕೊಡೊಕು ನಾನ್ ಸಿದ್ದ" ಎಂದು ಹೇಳಿದರು.


"ಪ್ಲೀಸ್‌ ಅಂಕಲ್ ಈ ಹೋರಾಟದಲ್ಲಿ ನಾನ್‌ ಯಾರನ್ನು ಕಳೆದು ಕೊಳ್ಳೊಕೆ ತಯಾರಿಲ್ಲ ದಯವಿಟ್ಟು ಸಾವಿನ ವಿಚಾರ ಮಾತ್ರ ಮಾತಾಡಬೇಡಿ" ಎಂದು ಕೇಳಿಕೊಂಡನು.


"ನಿನ್ನ ಕೆಲಸ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಆಗುತ್ತೆ ಚಿಂತೆ ಬಿಟ್ಟು ಕೆಲಸದ ಕಡೆ ಗಮನ ಕೊಡು" ಎಂದು ಸಮಾಧಾನಿಸಿ ಕೆಲಸದ ಕಡೆ ಗಮನಕೊಡುವಂತೆ ಹೇಳಿದರು.


ಅನಿಕೇತ್ ಮತ್ತು ರಾಮಣ್ಣನ ನಡುವೆ ಹೀಗೆ ಮಾತುಕತೆ ಮುಂದುವರೆದು ಸಾಕು ಎನಿಸಿದ ನಂತರ ತಮ್ಮ ಪ್ಲಾನ್‌ ನನ್ನು ಎಕ್ಸಿಕ್ಯೂಟಿವ್‌ ಮಾಡಲು ಹೊರಟರು. ರಾಮಣ್ಣ ಮತ್ತು ಅನಿಕೇತ್ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಹೊರಟರು. ಹೊರಟವರಿಗೆ ಊರಿನ ಹೊರಗೆ ಅರಣ್ಯ ಪ್ರದೇಶದಂತೆ ಇರುವ ಜಾಗದಲ್ಲಿ ಕೃತಕವಾಗಿ ನಿರ್ಮಿಸಿದ ಮನೆಯು ಅನಿಕೇತ್‌ ಕಣ್ಣಿಗೆ ಕಾಣಿಸಿತು. ಮೊದಲು ಅನಿಕೇತ್‌ ಸುತ್ತಲಿನ ಪ್ರದೇಶವನ್ನು ಗಮನಿಸಿ ಅಲ್ಲಿ ಯಾರು ಇಲ್ಲದಿರುವುದನ್ನು ಕಂಡು ಆ ಮನೆಯತ್ತ ಹೋದನು. ಮನೆಯ ಸುತ್ತಮುತ್ತಲೂ ಅಂತ ಯಾವುದೇ ರೀತಿಯ ಅನುಮಾನ ಬರುವಂತಹದ್ದು ಏನು ಕಾಣಲಿಲ್ಲ. ಬರಿ ಮನೆಯ ಹೊರಗಡೆ ಮಾತ್ರ ನೋಡದೆ ಒಳಗಡೆ ಏನು ಇದೆ ಎಂದು ತಿಳಿಯಲು ಮನೆಯ ಹತ್ತಿರ ಹೋದನು. ಅಲ್ಲಿ ಹೋದವನಿಗೆ ಮನೆಯ ಒಳಗಡೆ ಯಾರೋ ಇರುವಂತಹ ಅನುಭವವಾಯಿತು. ಮತ್ತೊಮ್ಮೆ ಸುತ್ತಲು ಗಮನಿಸಿ ಮನೆಯನ್ನು ಪ್ರವೇಶಿಸಿದನು.


__________________________________________________



ಆ ಮನೆ ಕಾಡಿನ ಮಧ್ಯ ಇರೋದ್ರಿಂದ ಅಲ್ಲಿಗೆ ಯಾರು ಬರುವುದಿಲ್ಲ ಎಂಬ ಅತಿಯಾದ ನಂಬಿಕೆಯಿಂದ ಬಸವ ಮತ್ತೆ ಮುನ್ನ ಇಬ್ಬರು ಅಲ್ಲಿಂದ ಸಿಟಿ ಕಡೆ ಊಟ ತರಲು ಹೋಗಿದ್ದರು. ಅದೇ ಸಮಯದಲ್ಲಿ ಅನಿಕೇತ್‌ ಆ ಮನೆಯನ್ನು ಪ್ರವೇಶಿಸಿದನು. ಜೊತೆಗೆ ರಾಮಣ್ಣನಿಗೆ ಆ ಸ್ಥಳಕ್ಕೆ ಬರಲು ಹೇಳಿ ಕಾರನ್ನು ದೂರದಲ್ಲಿ ಯಾರಿಗೂ ಕಾಣದಂತೆ ನಿಲ್ಲಿಸಿ ಆ ಮನೆಯ ಬಳಿ ಬರಲು ತಿಳಿಸಿದನು.


ಮನೆಯೊಳಗೆ ಬಂದಾಗ ಕೆದರಿದ ಕೂದಲು, ಹೊಳಪನ್ನು ಕಳೆದು ಕೊಂಡ ಕಣ್ಣುಗಳು, ಕಳೆಯೇ ಇಲ್ಲದ ಮುಖ, ಗಲೀಜಾದ ಅಲ್ಲಲ್ಲಿ ಹರಿದ ಬಟ್ಟೆಯೊಂದಿಗೆ ಕುರ್ಚಿಗಳಲ್ಲಿ ಬಂಧಿಯಾದ ಅಮರ್‌ ಮತ್ತು ಅನಿಕ ಕಂಡರು. ಅವರನ್ನು ಕಂಡ ಅನಿಕೇತ್‌ ಮನ ಚುರ್ ಎಂದರು ಕರ್ತವ್ಯದ ಕರೆಯಿಂದ ಅವರ ಮುಂದೆ ನಿಂತನು.


ತಮ್ಮ ಮುಂದೆ ಯಾರೋ ನಿಂತಿರೋ ಅನುಭವವಾಗಿ ಕಷ್ಟಪಟ್ಟು ಇಬ್ಬರು ಕಣ್ಣು ತರೆದರು. ಅಪರಿಚಿತ ವ್ಯಕ್ತಿಯನ್ನು ಕಂಡವರ ಮನದಲ್ಲಿ ಭಯ ಶುರುವಾದರು ತೋರಿಸಿಕೊಳ್ಳದೇ ಅಮರ್‌ ಮಾತು ಆರಂಭಿಸಿದನು.


"ಯಾರು? ಯಾರ್ ನೀನು? ನೀನು ಈ ಪಾಪಿಗಳ ಗುಂಪಿನವನ?" ಎಂದು ಪ್ರಶ್ನಿಸಿದನು.


ಮುಗುಳು ನಕ್ಕ ಅನಿಕೇತ್ "ನಾನು ಇವರ ಕಡೆಯವನು ಅಲ್ಲ ಪೊಲೀಸ್ ಡಿಪಾರ್ಟ್ಮೆಂಟ್ ಕಡೆಯವನು" ಎಂದು ತನ್ನ ಐಡಿ ಕಾರ್ಡ್ ತೋರಿಸಿದನು.


ಅನಿಕೇತ್ ತೋರಿಸಿದ ಐಡಿ ಕಾರ್ಡ್ ನೋಡಿದ ಇಬ್ಬರ ಮನಸ್ಸಲ್ಲೂ ತಾವು ಇಲ್ಲಿಂದ ಹೋಗಬಹುದು ಎಂಬ ಹೊಸ ಆಶಾಕಿರಣ ಮೂಡಿತು. ಆದರೇ ಅವರ ಆ ಆಶಾಕಿರಣಕ್ಕೆ ಅನಿಕೇತ್ ಭಂಗ ತಂದನು.


"ಹಾಗಿದ್ರೆ ನೀವು ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗೊಕೆ ಬಂದಿದ್ದೀರಾ ಅಲ್ವಾ?" ಎಂದು ಅನಿಕ ಪ್ರಶ್ನಿಸಿದಳು.


"ಇಲ್ಲಾ" ಎಂದು ಅನಿಕೇತ್ ಉತ್ತರಿಸಿದನು. ಇಬ್ಬರು ಪ್ರಶ್ನಾತ್ಮಕವಾಗಿ ಅವನನ್ನು ನೋಡಿದಾಗ ಅನಿಕೇತ್ ತನ್ನ ಪ್ಲಾನ್ ನನ್ನು ವಿವರಿಸಿದನು. ಅನಿಕ ಮೊದಲು ಒಪ್ಪದೇ ಇದ್ರು ಅಮರ್ ಮತ್ತು ಅನಿಕೇತ್ ನ ಬಲವಂತಕ್ಕೆ ಒಪ್ಪಿಕೊಂಡಳು. ಅಷ್ಟರಲ್ಲಿ ಅಲ್ಲಿಗೆ ಬಂದ ರಾಮಣ್ಣ ಅನಿಕೇತ್ ನನ್ನು ಎಳೆದುಕೊಂಡು ಹೋದರು. ಅವರ ಮುಖದಲ್ಲಿನ ಗಾಬರಿ ಅಮರ್ ಮತ್ತು ಅನಿಕಾರಿಗೆ ಅರ್ಥವಾಗಿ ಏನು ಹಾಗೇ ಇಲ್ಲ ಅನ್ನುವ ಹಾಗೇ ಕಣ್ಣು ಮುಚ್ಚಿ ಕುಳಿತರು. ರಾಮಣ್ಣ ಮತ್ತು ಅನಿಕೇತ್ ಹೊರ ಬಂದ ತಕ್ಷಣ ಬಸವ ಮತ್ತು ಮುನ್ನ ಆ ಮನೆಯನ್ನು ಪ್ರವೇಶಿಸಿದರು. ಕೂದಲೆಳೆಯ ಅಂತರದಲ್ಲಿ ಅನಿಕೇತ್ ಅವರಿಂದ ಮರೆಯಾಗಿದ್ದನು.


__________________________________________________



"ಅಂಕಲ್ ಯಾಕೆ ಏನಾಯ್ತು? ಯಾಕೆ ಆ ತರ ಎಳೆದುಕೊಂಡು ಬಂದ್ರಿ" ಎಂದು ಅನಿಕೇತ್ ಆತಂಕದಿಂದ ಪ್ರಶ್ನಿಸಿದನು.


"ಅಯ್ಯೋ ಅನಿ, ನಾನ್ ಬರೋದು ಒಂದು ನಿಮಿಷ ಲೇಟ್ ಆಗಿದ್ರು ನೀನು ಆ ರಾಕ್ಷಸರ ಕೈಯಲ್ಲಿ ಸಿಕ್ಕಾಕೊಳ್ತಾ ಇದ್ದೆ" ಎಂದು ಗಾಬರಿಯ ಧ್ವನಿಯಿಂದ ಹೇಳಿದರು.


"ಅಂಕಲ್ ಮೊದಲು ಸಮಾಧಾನ ಮಾಡಿಕೊಳ್ಳಿ ನನಗೆ ಏನು ಆಗೋದಿಲ್ಲ" ಎಂದು ಸಮಾಧಾನಿಸಿ "ಸರಿ ಅಂಕಲ್‌ ಬನ್ನಿ ಅಲ್ಲಿ ಏನು ನಡಿತಾ ಇದೆ ಎಂದು ಗಮನಿಸೋಣ" ಎಂದು ರಾಮಣ್ಣನನ್ನು ಕರೆದುಕೊಂಡು ಮನೆಯ ಹಿಂಭಾಗಕ್ಕೆ ಬಂದರು. ಅದು ತಾತ್ಕಾಲಿಕವಾಗಿ ನಿರ್ಮಿಸಿದ್ದರಿಂದ ಅಷ್ಟೊಂದು ಸುರಕ್ಷಿತ ಮನೆಯಲ್ಲ ಅಲ್ಲಿ ನಡೆಯುವ ಪ್ರತಿ ಮಾತುಕತೆಗಳು ಹೊರಗಿನವರಿಗೆ ಕೇಳಿಸುವಂತೆ ಇತ್ತು.


"ಲೇ ಬಸವ ಎಬ್ಸೋ ಇವರನ್ನ" ಎಂದು ಮುನ್ನ ಹೇಳಿದರೆ, "ಹೇ ವಿಜ್ಞಾನಿ ಜೋಡಿಗಳೇ ಏಳಿ, ತಿಂದು ಮತ್ತೆ ಮಲಗಿ" ಎಂದು ಬಸವ ಇಬ್ಬರ‌ ಮುಖದ ಮೇಲೂ ಸ್ವಲ್ಪ ಸ್ವಲ್ಪ ನೀರು ಹಾಕಿ ಎಚ್ಚರಿಸಿದನು.


ಪ್ರತಿದಿನ ಇವರು ಒಂದು ಹೊತ್ತು ಊಟ ಅದರಲ್ಲೂ ನಾಲ್ಕೂ ತುತ್ತಿಗಿಂತ ಹೆಚ್ಚಿಗೆ ತಿನ್ನುತ್ತಿರಲಿಲ್ಲ. ಇದರಿಂದ ಸುಸ್ತಾಗಿ ಪ್ರಜ್ಞೆ ತಪ್ಪುತ್ತಿದ್ದವರನ್ನು ನೀರು ಹಾಕಿ ಎಚ್ಚರಿಸಿ ತಿನ್ನಲು ಕೊಡುತ್ತಿದ್ದರು. ಅರ್ಧ ಲೋಟಕ್ಕಿಂತ ಹೆಚ್ಚಿಗೆ ನೀರನ್ನು ಸಹ ಕೊಡುತ್ತಿರಲಿಲ್ಲ.


ಕಣ್ಣು ಬಿಟ್ಟವರ ಮುಂದೆ ರಾಕ್ಷಸರಂತೆ ಬಸವ ಮತ್ತು ಮುನ್ನ ನಿಂತಿದ್ದರು. ಇವರಂತು ಒಬ್ಬರೇ ಮೂರು ಹೊತ್ತು ನಾಲ್ಕು ಜನ ತಿನ್ನುವಷ್ಟು ತಿಂದು ಕುಡಿದು ರಾಕ್ಷಸರಂತೆ ದೇಹ ಬೆಳೆಸಿದ್ದರು.


"ಹೇ ಬಸವ ಕಟ್ಟು ಬಿಚ್ಚು ತಿನ್ಲಿ ಇಲ್ಲ‌ ಅಂದ್ರೆ ಸಾಯ್ತಾರೆ, ಆಮೇಲೆ ಮತ್ತೊಂದು ತಲೆನೋವು ಯಾರಿಗೆ ಬೇಕು" ಎಂದು ಮುನ್ನ ಹೇಳಿದರೆ ಬಸವ ಅವರ ಕಟ್ಟು ಬಿಚ್ಚಲು ಮುಂದಾದರು.


"ಛೀ, ಪಾಪಿಗಳ ಹತ್ತಿರ ಬರಬೇಡಿ, ನಮಗೆ ಊಟನೂ ಬೇಡ ಏನು ಬೇಡ?" ಎಂದು ಅನಿಕ ಮೊದಲ‌ ಬಾರಿ ಇವರ ವಿರುದ್ಧ ಧ್ವನಿ ಎತ್ತಿ ಮಾತನಾಡಿದಳು.


"ಏನೇ ಸೊಕ್ಕಿನ ರಾಣಿ ನಮ್ಮ ಬಂಧನದಲ್ಲಿ ಇದ್ದು ಒಂದು ಹೊತ್ತು ತಿಂದು ನಿನಗೆ ಇಷ್ಟು ಕೊಬ್ಬು ಬಂದಿದೆ, ಇನ್ನು ಮೂರು ಹೊತ್ತು ತಿಂದಿದ್ರೆ ಇನ್ನು ಹೇಗೆ ಆಡ್ತಾ ಇದ್ದೆ" ಎಂದು ಬಸವ ಗುಡುಗಿದನು.


"ಹೇ ಇದು ನೀವು ಕೊಡೊ ಈ ಅನ್ನ ತಿಂದು ಬಂದಿರೊದಲ್ಲ, ಇದು ಹುಟ್ಟಿದಾಗಿನಿಂದನೇ ಇರೋದು. ನೀವು ಯಾರು ನಮ್ಮನ್ನ ಯಾಕೆ ಬಂಧಿಸಿದ್ದಿರಾ ಅಂತ ತಿಳಿಯೋಕೆ ಸುಮ್ಮನಿದ್ದದ್ದು ಇನ್ನು ಸುಮ್ನಿದ್ದು ಸರಿ ಹೋಗಲ್ಲ ಅಂತಾನೇ ಮಾತಾಡ್ತಾ ಇರೋದು" ಎಂದು ಉತ್ತರಿಸಿದಳು.


ಅನಿಕ ಮಾತು ಅವಳ ಮಾತಲ್ಲಿನ ದೃಢತೆ ಎದುರಿಗೆ ಇದ್ದವರ ಕೋಪಕ್ಕೆ ಕಾರಣವಾಯಿತು. "ಏನೇ ನಾನು ನೋಡ್ತಾನೆ ಇದೀನಿ ತುಂಬಾ ಮಾತಾಡ್ತಾ ಇದೀಯಾ" ಎನ್ನುತ್ತಾ ಊಟದ ಪೊಟ್ಟಣ ಬಿಚ್ಚುತ್ತಿದ್ದ ಮುನ್ನ ಅನಿಕಾಳ ಬಳಿ ಬಂದು ಅವಳ ಕೆನ್ನೆಗೆ ಬಾರಿಸಿದನು. ಆ ಹೊಡೆತಕ್ಕೆ ತುಟಿ ಸೀಳಿ ರಕ್ತ ಬರಲು ಶುರುವಾಯಿತು. ಸರಿಯಾಗಿ ಊಟ ಇಲ್ಲದೆ ನಿತ್ರಾಣಗೊಂಡವಳು ಹೊಡೆತದ ದಾಳಿಗೆ ಪ್ರಜ್ಞೆ ತಪ್ಪಿದಳು.


ತನ್ನ ಮುಂದೆಯೇ ತಾನು ಮದುವೆಯಾಗುವ ಹುಡುಗಿಯ ಮೇಲೆ ಕೈ ಮಾಡಿದ್ದು ಅಮರ್ ಗೆ ಕೋಪ ತರಿಸಿದರು ಆ ಸಂದರ್ಭದಲ್ಲಿ ಅವನು ಅಸಹಾಯಕನಾಗಿದ್ದನು.


ಹೊರಗಡೆಯಿಂದ ಇವರ ಮಾತು ಕೇಳುತ್ತಿದ್ದ ಅನಿಕೇತ್ ಗೂ ಕೋಪ ತರಿಸಿದರು ಮಧ್ಯ ಹೋದರೆ ಕೆಲಸ ಕೆಡುತ್ತದೆ ಎಂದು ಮುಷ್ಟಿ ಬಿಗಿ ಮಾಡಿ ಮನಸ್ಸನ್ನು ಕಲ್ಲಾಗಿಸಿಕೊಂಡು ಕಣ್ಣಲ್ಲೇ ಕೋಪವನ್ನು ಹೊತ್ತುಕೊಂಡು ನಿಂತನು.


ಬಸವ ನೀರು ಹಾಕಿ ಎಚ್ಚರಿಸಲು ಪ್ರಯತ್ನ ಪಟ್ಟನು. ಆದರೇ, ಅವನ ಪ್ರಯತ್ನ ಫಲಿಸಲಿಲ್ಲ. ಮುನ್ನ ಅವಳ ಮೂಗಿನ ಬಳಿ ಕೈ ಇಟ್ಟು ಪರೀಕ್ಷಿಸಿದಾಗ ಅವಳು ಬದುಕಿರುವ ಸೂಚನೆ ಸಿಗಲಿಲ್ಲ. ತಕ್ಷಣ ತಮ್ಮ ಬಾಸ್ ಗೆ ಕರೆ ಮಾಡಿ ವಿಷಯ ತಿಳಿಸಲು ಮುಂದಾದರು.


"ಹಲೋ" ಅತ್ತಲಿನಿಂದ ಅಪರಿಚಿತ ಧ್ವನಿ.


"ಬಾಸ್ ಒಂದು ಎಡವಟ್ಟು ಆಗೋಗಿದೆ" ಎಂದು ಬಸವ ಹೇಳಿದನು.


"ಮತ್ತೆ ಯಾರಾದರು ಫಾಲೋ‌ ಮಾಡ್ತಾ‌ ಇದಾರಾ?" ಎಂದರು.


"ಇಲ್ಲ ಬಾಸ್ ಅದು" ಎಂದು ತೊದಲಿದನು.


"ಏನು ಅಂತ ಸರಿಯಾಗಿ ಬೊಗಳು ಇಲ್ಲ ಅಂದರೆ ನೀನ್ ಇರೋ ಹತ್ತಿರನೇ ಬಂದು ನಿಮ್ಮನ್ನ ಯಮನ ಪಾದ ಸೇರಿಸಬೇಕಾಗುತ್ತದೆ" ಎಂದರು.


"ಬಾಸ್ ಈ ಹುಡುಗಿ ಇಷ್ಟು ದಿನ ಇಲ್ಲದೇ ಇದ್ದದ್ದು ಇವತ್ತು ಬೇಜಾನ್ ಎಗರಾಡಿದ್ಲು ಅದಕ್ಕೆ" ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿದನು.


"ಅದಕ್ಕೆ ಅಂದ್ರೆ ಏನು ಮುಂದಕ್ಕೆ ಹೇಳು ಏನಾಯ್ತು?" ಎಂದರು.


"ಆ ಹುಡುಗಿ ಮಾತು ಕೇಳಿ ಕೋಪ ಬಂದು ಕೈ ಮಾಡಿದೆ" ಎಂದನು.


"ಅಷ್ಟೇ ತಾನೇ ಬಿಡು, ಸುತ್ತಾಮುತ್ತಾ ಗಮನಿಸಿ ಬೇಗ ಅವರನ್ನು ಇಲ್ಲಿಗೆ ಕರೆದುಕೊಂಡು ಬಾ" ಎಂದರು.


"ಅಷ್ಟೆ ಅಲ್ಲ ಬಾಸ್" ಎಂದು ರಾಗ ಎಳೆದನು.


"ಮತ್ತೆ ಏನಾಯ್ತು?" ಎಂದು ಪ್ರಶ್ನಿಸಿದರು.


"ಹೊಡೆತ ತಾಳಲಾಗದೆ ಆ ಹುಡುಗಿ ಸತ್ತು ಹೋಗಿದ್ದಾಳೆ ಬಾಸ್" ಎಂದನು.


"ಲೇ ಥೂ ನನ್ಮಕ್ಕಳ ಗಣೇಶನ ಮಾಡು ಅಂದರೆ ಅವರಪ್ಪನ ಮಾಡಿದ್ದೀರಾ ಏನ್ ಹೇಳೇಬೇಕು ಈ ನಿಮ್ಮ ಹಲ್ಕ ಕೆಲಸಕ್ಕೆ" ಎಂದು ಗುಡುಗಿದರು.


"ಕ್ಷಮಿಸಿ ಬಾಸ್ ಅದು ಕೋಪದಲ್ಲಿ" ಎಂದು ಮಾತು ಮುಂದುವರಿಸುವ ಮೊದಲೇ


"ನೀನು ಹೋಗಿ ಸಾಯಿ ಇದರಿಂದ ನಮ್ಮ ಕೆಲಸಕ್ಕೆ ಏನಾದ್ರೂ ತೊಂದರೆ ಆಗಬೇಕು ಮಕ್ಳ ಇಬ್ರು ಹುಟ್ಟಿದ್ವಿ ಅನ್ನೋದನ್ನ ನಿಮ್ಮ ಮನೆಯವರು ಮರಿಬೇಕು" ಎಂದು ಕೂಗಾಡಿದರು.


"ಕ್ಷಮಿಸಿ ಬಾಸ್... ಬಾಸ್ ಇವಾಗ ಏನು ಮಾಡೋದು" ಎಂದು ಸಲಹೆ ಕೇಳಿದರು.


"ಆ ಬಾಡಿ ತಗೊಂಡು ಇಲ್ಲಿಗೆ ಬನ್ನಿ" ಎಂದರು.


"ಸರಿ ಬಾಸ್" ಎಂದು ಇಬ್ಬರು ಉತ್ತರಿಸಿದರು.


"ನಿಮ್ಮನ್ನ ಏನ್ ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಎದುರಿಗೆ ಇದ್ದಿದ್ರೆ ಇವತ್ತೆ ನಿಮ್ಮ ತಿಥಿ ಡೇಟ್ ಫಿಕ್ಸ್ ಆಗಿರೋದು. ನಾಲಾಯಕ್ ಗಳ" ಎಂದು‌ ತಮ್ಮ ಅಸಮಾಧಾನ ಹೊರ ಹಾಕಿದರು.


"ಮತ್ತೆ ಏನ್ ಮಾಡ್ಲಿ ಬಾಸ್" ಎಂದರು.


"ಆ‌ ಬಾಡಿನ ಅಲ್ಲೇ ಬಿಟ್ಟು ಆ ಅಮರ್ ನನ್ನ ಕರೆದುಕೊಂಡು ಅಲ್ಲಲ್ಲ ಎಳೆದುಕೊಂಡು ಇವಾಗಲೇ ಹೊರಟು ಇಲ್ಲಿಗೆ ಬನ್ನಿ ತಡ ಮಾಡಬೇಡಿ" ಎಂದರು.


"ಸರಿ ಅಣ್ಣ" ಎಂದು ಹೇಳಿ ಕಾಲ್ ಕಟ್ ಮಾಡಿ ಒಳ ಹೋದರು.


ಅತಿ ಬುದ್ಧಿವಂತರಾದ ಬಸವ ಮತ್ತು ಮುನ್ನ ಕಾಲನ್ನು ಸ್ಪೀಕರ್ ನಲ್ಲಿ ಇಟ್ಟು ಮಾತನಾಡಿದರು. ಅಲ್ಲೇ ಅವರ ಮಾತನ್ನು ಆಲಿಸುತ್ತಿದ್ದ ಅನಿಕೇತ್ ಮೊಬೈಲ್ ನಲ್ಲಿ ಆ ಎಲ್ಲ ಮಾತುಗಳು ಬೆಚ್ಚಗೆ ಕುಳಿತವು. ಜೊತೆಗೆ ಅನಿಕೇತ್ ಗೆ ಅತ್ತಲಿಂದ ಬಂದ ಧ್ವನಿ ಚಿರಪರಿಚಿತ ಎನಿಸಿ ಅವರೇ ಈ ಕಿಡ್ನಾಪ್ ಹಿಂದೆ ಇರುವ ಕಾಣದ ಕೈಗಳು ಎಂದು ತಿಳಿದುಕೊಂಡನು.


ಒಳ ಬಂದ ಬಸವ ಮತ್ತು ಮುನ್ನ ಅನಿಕಾಳ ಮುಂದೆ ಕಣ್ಣೀರಿಡುತ್ತಿದ್ದ ಅಮರ್ ನನ್ನು ಬಲವಂತದಿಂದ ಅಲ್ಲಿಂದ ಎಳೆದುಕೊಂಡು ಹೋದರು.


_______________________________________________________


ಅವರು ಆ ಕಡೆ ಹೋಗಿದ್ದು ಖಾತ್ರಿಯಾದ ನಂತರ ಮನೆಯ ಹಿಂದೆ ಇದ್ದ ಅನಿಕೇತ್ ಮತ್ತು ರಾಮಣ್ಣ ಒಳಗೆ ಬಂದರು. ಎಲ್ಲರು ಇದ್ದು ಯಾರು ಇಲ್ಲದಂತೆ ಹಸೆಮಣೆ ಏರಬೇಕಾದ ಹುಡುಗಿ ಇಂದು ಅನಾಥ ಶವವಾಗಿ ಬಿದ್ದಿದ್ದಳು. ಅನಿಕೇತ್ ರಾಮಣ್ಣನಿಗೆ ಕೆಲವೊಂದು ಸೂಕ್ಷ್ಮ ವಿಚಾರಗಳನ್ನು ತಿಳಿಸಿ ಅನಿಕಳನ್ನು ರಾಮಣ್ಣನಿಗೆ ಒಪ್ಪಿಗೆ ಅಲ್ಲಿಂದ ಹೊರಡುವಂತೆ ಹೇಳಿದನು.


"ಅನಿ ಇವಾಗ ಏನು ಮಾಡೋದು? ಅಮರ್ ನ ಅವರು ಎಲ್ಲಿಗೋ ಕರೆದುಕೊಂಡು ಹೋದರು" ಎಂದು ರಾಮಣ್ಣ ತಮ್ಮ ಆತಂಕ ವ್ಯಕ್ತ ಪಡಿಸಿದರು.


"ತೊಂದರೆ ಇಲ್ಲ ಅಂಕಲ್, ಅಮರ್ ನ ಜೇಬಲ್ಲಿ ಜಿ .ಪಿ. ಎಸ್ ಡಿವೈಸ್ ಹಾಕಿದೀನಿ ಎಲ್ಲೇ ಇದ್ರು ಗೊತ್ತಾಗುತ್ತದೆ" ಎಂದನು.


"ಮತ್ತೆ ಈ ಹುಡುಗಿ" ಎಂದು ಅನಿಕಳನ್ನು ತೋರಿಸಿದರು.


"ನಾನ್ ಹೇಳಿದ ಹಾಗೇ ಮಾಡಿ ಅಂಕಲ್, ಈ ಸುದ್ಧಿ ಇವಾಗಲೇ ಹೊರಗಡೆ ಬರೋದು ಬೇಡ ಬಂದರೇ ಮೀಡಿಯಾಕ್ಕೆ ಅವರ ಕುಟುಂಬಕ್ಕೆ ಉತ್ತರಿಸೋಕೆ ಆಗಲ್ಲ" ಎಂದನು.


"ಸರಿ ನೀನ್ ಹೇಳಿದಾಗೇ ಮಾಡ್ತೀನಿ, ಆದರೇ ನೀನು ಹುಷಾರು" ಎಂದು ಎಚ್ಚರಿಸಿದರು.


"ಸರಿ ಅಂಕಲ್ ನೀವು ಹೊರಡಿ, ನಿಮಗೆ ಅಪ್ಪ ಮತ್ತೆ ಅಣ್ಣ ಸಹಾಯ ಮಾಡ್ತಾರೆ, ಈ ಗುಟ್ಟು ನಮ್ಮ ನಾಲ್ಕು ಜನಗಳ ಮಧ್ಯ ಇರಲಿ" ಎಂದು ಎಚ್ಚರಿಸಿ ಕಳುಹಿಸಿದನು.


ಅವರು ಹೊರಟ ನಂತರ ಅನಿಕೇತ್ ಮತ್ತೊಂದು ಕಾರಲ್ಲಿ ಹೊರಟು ತನ್ನ ಲ್ಯಾಪ್ ಟಾಪ್ ತೆಗೆದು ಅಮರ್ ಬಳಿ ಇರುವ ಜಿ. ಪಿ. ಎಸ್ ಸಹಾಯದಿಂದ ಅವರನ್ನು ಹಿಂಬಾಲಿಸಿದನು. ಜೊತೆಗೆ ತನ್ನ ತಂದೆ ಅಣ್ಣನಿಗೆ ಕರೆ ಮಾಡಿ ಅನಿಕಳ ವಿಷಯ ತಿಳಿಸಿ ಈ ವಿಷಯ ಎಲ್ಲೂ ಹೊರಗೆ ಬರದಂತೆ ಇರಲಿ ಎಂದು ಎಚ್ಚರಿಸಿದನು.


ನಂತರ ಬಸವ ಮತ್ತು ಮುನ್ನರ ಜೊತೆ ಮಾತನಾಡಿದ ವ್ಯಕ್ತಿಯ ಧ್ವನಿಯ ಆಧಾರದ ಮೇಲೆ ಅಮರ್ ಮತ್ತು ಅನಿಕರ ಕಿಡ್ನಾಪ್ ಆಗುವುದಕ್ಕಿಂತ ತಿಂಗಳಿಗಿಂತ ಮುಂಚಿನ ಫೋನ್ ರೆಕಾರ್ಡ್ ಎಲ್ಲ ತೆಗೆಯುವಂತೆ ಜೊತೆಗೆ ಈ ವಿಷಯ ಗುಪ್ತವಾಗಿ ಇರುವಂತೆ ತನ್ನ ಆಪ್ತ ಗೆಳೆಯನಿಗೆ ತಿಳಿಸಿ ತನ್ನ ಜರ್ನಿಯನ್ನು ಮುಂದುವರೆಸಿದನು.


_______________________________________________________



ಕಂಪನಿಯಲ್ಲಿ ಎಷ್ಟೇ ಕೆಲಸವಿದ್ದರು ಪೂಜಾಳ ಜೊತೆಗೆ ಇತರೇ ಹೆಣ್ಣು ಮಕ್ಕಳು 6 ಗಂಟೆಯ ನಂತರ ಮತ್ತೆ ಶನಿವಾಗ ಭಾನುವಾರ ಫ್ರೀಯಾಗಿ ಇರುತ್ತಿದ್ದರು. ಕತ್ತಲಾದ ಮೇಲೆ ಒಬ್ಬೊಬ್ಬರೆ ಹೋಗುವುದು ಉಚಿತವಲ್ಲ. ಪ್ರತಿ‌ಸಲ ಎಲ್ಲರನ್ನು ರಕ್ಷಿಸಲು ಸಾಧ್ಯವಿಲ್ಲ ಎಂದೇ ಸಚಿನ್ ಈ ರೀತಿಯ ರೂಲ್ಸ್ ಗಳನ್ನು ತಂದು ಹುಡುಗಿಯರಿಗೆ ಅನುಕೂಲವಾಗುವಂತೆ ಮಾಡಿಕೊಟ್ಚಿದ್ದನು.


ಸಚಿನ್ ಕೆಲಸದ ವಿಚಾರದಲ್ಲಿ ಕಠಿಣತೆ ಹೊಂದಿದ್ದರು ಅವನ ರೂಲ್ಸ್ ಗಳು ಮಾತ್ರ ಮತ್ತೊಬ್ಬರಿಗೆ ಸ್ಪೂರ್ತಿಯ ಜೊತೆಗೆ ಕೆಲಸ ಮಾಡಲು ಪ್ರೇರೆಪಿಸುವಂತೆ ಮಾಡುತ್ತಿದ್ದವು.


ಅನಿಕೇತ್ ಇಲ್ಲದೆ ಆಫೀಸ್ ಕೆಲಸದಲ್ಲಿ ಮುಳುಗಿ ಹೋಗಿದ್ದ ಆಕಾಂಕ್ಷಗಳನ್ನು ಭಾನುವಾರ ಪೂಜಾಳೇ ಬಲವಂತವಾಗಿ ಶಾಪಿಂಗ್ ನೆಪ ಹೇಳಿ ಹೊರಗಡೆ ಕರೆದುಕೊಂಡು ಹೋಗಿದ್ದಳು.


ಇಬ್ಬರು ಅಲ್ಪ ಸ್ವಲ್ಪ ಶಾಪಿಂಗ್ ಮಾಡಿ ಫುಡ್ ಕೋರ್ಟ್ ನಲ್ಲಿ ಊಟ ಮುಗಿಸಿ ಅಲ್ಲೇ ಇರುವ ಥಿಯೇಟರ್ ಗೆ ಹೋದರು. ಸಿನಿಮಾದ ಮಧ್ಯಂತರದಲ್ಲಿ ಪಾಪ್ ಕಾರ್ನ್ ತರಲು ಬಂದ ಆಕಾಂಕ್ಷಗಳನ್ನು ನೋಡಿದ ಪೋಲಿ ಹುಡುಗರ ಗುಂಪು ಅವಳ ಬಗ್ಗೆ ಕೆಟ್ಟದಾಗಿ ಮಾತನಾಡಲು ಆರಂಭಿಸಿದರು. ಅಲ್ಲೇ ಸಿನಿಮಾ ನೋಡಲು ಬಂದ ಕರ್ನಾಟಕದ "ಆರೋಗ್ಯ ಸಚಿವ" "ಕಾಳೇಗೌಡ"ನ ಮಗ "ರಾಜೇಶ್" ಮತ್ತು ತಮಿಳು ನಾಡಿನ "ಆರ್ಥಿಕ ಸಚಿವ" "ರಾಮನಾಥ್"ನ ಮಗ "ರಾಹುಲ್" ಇಬ್ಬರು ಅಲ್ಲೇ ಇದ್ದರು.


ಆ ಪೋಲಿ ಹುಡುಗರ ಮಾತು ಕೇಳಿ ಆಕಾಂಕ್ಷಳ ಬಳಿ ಪರಿಚಯ ಇರುವಂತೆ ಮಾತನಾಡುತ್ತಾ ನಿಂತರು. ಸಚಿವರ ಮಕ್ಕಳನ್ನು ಕಂಡ ಗುಂಪು ಅಲ್ಲಿಂದ ಸರಿಯಿತು.


________________________________________________________



ಕಾಳೇಗೌಡ ಮತ್ತು ರಾಮನಾಥ ಬಾಲ್ಯ ಸ್ನೇಹಿತರು. ಕಾರಣಾಂತರಗಳಿಂದ ರಾಮನಾಥ ತಮಿಳುನಾಡು ಸೇರಿದರೇ ಕಾಳೇಗೌಡ ಕರ್ನಾಟಕದಲ್ಲೇ ಉಳಿದರು. ದೂರ ಇದ್ದರು ಇಬ್ಬರ ಸ್ನೇಹ ಮುರಿದಿರಲಿಲ್ಲ. ಜೊತೆಗೆ ರಾಜಕೀಯದಲ್ಲೂ ಮೆರೆಯುವ ಧೀಮಂತರು. ಅವರಂತೆ ಅವರ ಮಕ್ಕಳ ನಡುವೆ ಉತ್ತಮ ಸ್ನೇಹ ಬಾಂದವ್ಯ ಮೂಡಿತ್ತು. ರಾಮನಾಥ ತನ್ನ ಮಗನನ್ನು ಕಾಳೇಗೌಡನ ಮನೆಯಲ್ಲಿ ಬಿಟ್ಟು ಅಲ್ಲೇ‌ ಓದುವಂತೆ ತಿಳಿಸಿದ್ದರು. ಬಾಲ್ಯದಲ್ಲಿಯೇ ಜೊತೆಯಾಗಿ ಬೆಳೆದ ರಾಜೀವ್ ಮತ್ತು ರಾಹುಲ್ ನಡುವಿನ ಸಂಬಂಧ ಉತ್ತಮವಾಗಿತ್ತು. ನೋಡುವವರ ಕಣ್ಣಿಗೆ ಅವಳಿ ಮಕ್ಕಳಂತೆ ಕಾಣುತ್ತಿದ್ದರು.


"ಥ್ಯಾಂಕ್ಯೂ ಸರ್ ಕೇಳದೆ ಇದ್ರು ಬಂದು ಸಹಾಯ‌ ಮಾಡಿದಕ್ಕೆ" ಎಂದು ಆಕಾಂಕ್ಷ ಇಬ್ಬರಿಗೂ ಧನ್ಯವಾದ ತಿಳಿಸಿದಳು.


"ಪರ್ವಾಗಿಲ್ಲ, ನೀವುಗಳು ಈ ತರ ಸೈಲೆಂಟ್ ಆಗಿ ಇದ್ರೆ ಇಂತಹ ಹುಡುಗರ ಹಾವಳಿ ಹೆಚ್ಚಾಗ್ತಾ ಇರ್ತಾವೆ. ಸ್ವಲ್ಪ ಧೈರ್ಯ ವಹಿಸಿ ಮುನ್ನುಗಿದರೆ ಯಾರು ಬಾಲ ಬಿಚ್ಚಲ್ಲ." ಎಂದು ರಾಜೀವ್ ಆಕಾಂಕ್ಷಳಿಗೆ ತಿಳಿ ಹೇಳಿದರು.


"ಅದು ನಿಜನೇ ಸರ್, ನಾನೇನು ಸೈಲೆಂಟ್ ಅಲ್ಲ ಸುಮ್ನೆ ಗಲಾಟೆ ಯಾಕೆ ಅಂತ ಸುಮ್ನಾದೆ" ಎಂದು ಸಮರ್ಥಿಸಿಕೊಂಡಳು.


"ಸರಿ‌ ಒಬ್ರೆ ಇದೀರಾ ಅನ್ಸುತ್ತೆ ಹುಷರಾಗಿ ಹೋಗಿ" ಎಂದು ರಾಹುಲ್ ಎಚ್ಚರಿಸಿದನು.


"ಒಬ್ಳೇ ಏನು ಇಲ್ಲ ಒಳಗೆ ನನ್ನ ಸಿಸ್ಟರ್ ಇದಾರೆ ಇಬ್ರು ಜೊತೆಗೆ ಹೋಗ್ತಿವಿ" ಎಂದಳು.


"ಓಕೆ ಬಾಯ್" ಎಂದು ರಾಜೀವ್ ಮತ್ತು‌ ರಾಹುಲ್ ಇಬ್ಬರು ಅಲ್ಲಿಂದ ಹೊರಟರು.


ಆಕಾಂಕ್ಷ ಅಲ್ಲಿಂದ ಹೊರಟು ಪೂಜಾಳನ್ನು ಸೇರಿಕೊಂಡಳು. ಆದರೇ, ಹೊರಗಿನ ಯಾವುದೇ ವಿಚಾರವನ್ನು ಪೂಜಾಳಿಗೆ ತಿಳಿಸಲಿಲ್ಲ.


_________________________________________________________



ಸಿನಿಮಾ ನೋಡಿ ಆಚೆ ಬಂದವರು ಸಿನಿಮಾ ಬಗ್ಗೆ ಮಾತನಾಡುತ್ತಾ ಎದುರಿಗೆ ಬಂದ ರಾಜೀವ್ ಮತ್ತು ರಾಹುಲ್ ಗೆ ಪೂಜಾ ಡಿಕ್ಕಿ ಹೊಡೆದಳು. ಬೀಳುವವಳನ್ನು ಆಕಾಂಕ್ಷ ಹಿಡಿದುಕೊಂಡು "ಮುಂದೆ ನೋಡ್ಕೊಂಡು ಬಾರೇ" ಎಂದು ಗದರಿದಳು.


ಪೂಜಾ ಆಕಾಂಕ್ಷಗಳ ಮಾತಿಗೆ ಗಮನ ಕೊಡದೆ ಜಗಳಕ್ಕೆ ನಿಂತಳು. "ಏನ್ರಿ ನಿಮಗೆ ಕಣ್ಣು ಕಾಣಲ್ವ, ಹುಡುಗಿಯರು ಎದುರುಗಡೆ ಬರ್ತಾ ಇದ್ರೆ ಇರೋ ಕಣ್ಣು ಕುರುಡಾಗಿ ಡಿಕ್ಕಿ ಹೊಡಿತೀರಿ ಅಲ್ವ. ನಿಮಗೆ ಯಾರು ಅಕ್ಕ ತಂಗಿಯರು ಇಲ್ವ" ಎಂದು ಒಂದೇ ಸಮನೇ ಬೈಯಲು ಶುರು ಮಾಡಿದಳು.


"ಪೂಜಾ ಸ್ಟಾಪಿಟ್, ಸಾರಿ ಸರ್‌ ಇವಳು ಸ್ವಲ್ಪ ಹೀಗೆ ಚಿಕ್ಕವಳು ತಪ್ಪು ತಿಳಿಯಬೇಡಿ" ಎಂದು ಆಕಾಂಕ್ಷಳೆ ರಾಜೀವ್ ಮತ್ತು ರಾಹುಲ್ ಬಳಿ ಕ್ಷಮೆ ಕೇಳಿದಳು.


"ಅತ್ತಿಗೆ ನೀವ್ ಯಾಕೆ ಸಾರಿ ಕೇಳೋದು, ಅವರು ಕೇಳಬೇಕಾಗಿರೋದು" ಎಂದು ತನ್ನ ಅಸಮಾಧಾನ ವ್ಯಕ್ತ ಪಡಿಸಿದಳು.


ಆಕಾಂಕ್ಷ ಪೂಜಾಳನ್ನು ಸಮಾಧಾನ ಪಡಿಸಿ ಇಂಟರ್ವಲ್ ನಲ್ಲಿ ನಡೆದ ಘಟನೆಯನ್ನು ತಿಳಿಸಿದಳು. "ಅಷ್ಟೆ ತಾನೇ ಬಿಡು, ಇವರೇನು ಮಹಾ ಕಾರ್ಯ ಮಾಡಿಲ್ಲ, ನನ್ನ ಅನಿ ಅಣ್ಣ ಇದ್ದಿದ್ದರೆ ಒಂದು ಡಿಶುಂ ಡಿಶುಂ ಪ್ರೋಗ್ರಾಮ್ ನಡೆದಿರೋದು ಮಿಸ್ ಆಯ್ತು" ಎಂದು ಪೂಜಾ ತನ್ನನ್ನು ತಾನು ಸಮರ್ಥಿಸಿಕೊಂಡು ಕಾಟಚಾರಕ್ಕೆ "ಸಾರಿ ಅಂಡ್ ಥ್ಯಾಂಕ್ಸ್" ಎಂದಳು.


"ಸಾರಿ ಸರ್ ಇವಳಿನ್ನು ಚಿಕ್ಕವಳು" ಎಂದು ಆಕಾಂಕ್ಷ ಅವರಿಬ್ಬರ ಬಳಿ ಮತ್ತೊಮ್ಮೆ ಸಾರಿ ಕೇಳಿ ಅಲ್ಲಿಂದ ಹೊರಟರು.


_______________________________________________



"ಎಷ್ಟು ಕೊಬ್ಬು ನೋಡು ಆ ಕುಳ್ಳಿಗೆ" ಆಕಾಂಕ್ಷ ಮತ್ತು ಪೂಜಾ ಆ ಕಡೆ ಹೋಗುತ್ತಿದ್ದ ಹಾಗೇ ರಾಹುಲ್ ತನ್ನ ಮನದ ಮಾತನ್ನು ರಾಜೀವ್ ಮುಂದೆ ತೆರೆದಿಟ್ಟನು.


"ಹೋಗ್ಲಿ ಬಿಡೋ ಚಿಕ್ಕ ಹುಡುಗಿ" ಎಂದು ಪೂಜಾ ಪರ ರಾಜೀವ್ ಮಾತನಾಡಿದನು.


"ಏನೋ ಆ ಕುಳ್ಳಿ ಚಿಕ್ಕ ಹುಡುಗಿನಾ? ಹೈಟ್ ನೋಡಿ ಯಾಮಾರ ಬೇಡ ರಾಜಿ ತುಂಬಾ ಕತರ್ನಾಕ್ ಇದಾಳೆ ಆ ಕುಳ್ಳಿ, ಆಕಾಂಕ್ಷ ಮುಖ ನೋಡಿ ಬಿಟ್ಟಿರೋದು" ಎಂದು ಹೇಳಿದನು.


"ಹೋ ಸಾಹೇಬ್ರಿಗೆ ಆ ಹುಡುಗಿ ಹೆಸರು ಗೊತ್ತಿರೋ ಆಗಿದೆ ಏನೋ ಸಮಾಚಾರ" ಎಂದು ಕಿಚಾಯಿಸಿದನು.


"ನಮ್ಮ ಫೀಲ್ಡ್ ನಲ್ಲಿ‌ ಅವರು ಯಾರಿಗೆ‌ ಗೊತ್ತಿಲ್ಲ ಹೇಳು, ಅವರು ಅಷ್ಟು‌ ಫೇಮಸ್" ಎಂದು ಆಕಾಂಕ್ಷ ಬಗ್ಗೆ ಹೇಳಿದನು.


"ಎಷ್ಟು ಫೇಮಸ್?" ಎಂದು ಮರು‌ ಪ್ರಶ್ನಿಸಿದನು.


"ಅದೇ ಕಣೋ ಲಾಸ್ಟ್ 3 ಮಂತ್ ಬ್ಯಾಕ್ ಮಿನಿಸ್ಟರ್ ಮಗಳ ಮದುವೆಗೆ ಕ್ಯಾಟರಿಯನ್ ಗೆ ಎಲ್ಲ ಫೇಮಸ್ ಹೋಟೆಲ್ ನವರನ್ನು ಕರೆಸಿದ್ರು. ಅಲ್ಲಿ ನಾನು ಮತ್ತೆ ಈ ಆಕಾಂಕ್ಷ ಟೀಮ್ ಸಹ ಇತ್ತು. ಇವರ ಫುಡ್ ಅದರ ಖರ್ಚು ಅದರ ನಿರ್ವಹಣೆಯನ್ನು ತಿಳಿದ ಮಿನಿಸ್ಟರ್ ಅವರನ್ನೇ ಫಿಕ್ಸ್ ಮಾಡಿದ್ರು. ಅವರ ಕೊಟೆಷನ್ ಗಿಂತ ನನ್ನ ಕೊಟೆಷನ್ ಅಮೌಂಟ್ ಕಡಿಮೆ ಇದ್ರು ಜೊತೆಗೆ ನಾನು ಒಬ್ಬ ಮಿನಿಸ್ಟರ್ ಮಗ ಅನ್ನೋದನ್ನು ನೋಡದೆ ಅವರನ್ನೇ ಫಿಕ್ಸ್ ಮಾಡಿದ್ರು. ಅಷ್ಟೇ ಅಲ್ಲ ಅವರ ಕೊಟೇಷನ್ ಅವರ ಪ್ರೇಸೆಂಟೆಷನ್ ನೋಡಿ ನಾನೇ ಫೀದಾ ಆಗೋದೆ. ಆಮೇಲೆ ಅವರನ್ನ ಪರ್ಸಲ್ ಆಗಿ ಮೀಟ್ ಮಾಡಿ ಅವರ ಸಕ್ಷಸ್ ಬಗ್ಗೆ ಕೇಳಿದಕ್ಕೆ ಅವರ ಗುಟ್ಟು ಬಿಟ್ಟು ಕೊಟ್ರು, ಅದನ್ನ ನನ್ನ ಬ್ಯೂಸಿನೆಸ್ ಮೇಲೆ ಇಂಪ್ಲಿಮೇಂಟ್‌ ಮಾಡಿದೆ ಆಮೇಲೆನೆ ನನ್ನ ಬ್ಯೂಸಿನೆಸ್ ಕ್ಲಿಕ್ ಆಗಿದ್ದು." ಎಂದು ಸಂಪೂರ್ಣ ಮಾಹಿತಿಯನ್ನು ಕೊಟ್ಟನು.


"ಏನಪ್ಪ ಆ ಗುಟ್ಟು ನಾನು ತಿಳ್ಕೊಬಹುದಾ?" ಎಂದು ಕೇಳಿದನು.


"ಅದು ತುಂಬಾ ಸಿಂಪಲ್‌ ನಮ್ಮದು ಹೋಟೆಲ್‌ ಬ್ಯೂಸಿನೆಸ್, ಇಲ್ಲಿ ನಮಗೆ ಬೇಕಾದಾಗೆ ಅಡುಗೆ ಮಾಡಿದರೆ ಯಾರು ಬರಲ್ಲ. ಅದೇ ಅವರಿಗೆ ಬೇಕಾದ ಹಾಗೇ ಮಾಡಿದರೆ ಬಂದೇ ಬರ್ತಾರೆ. ಯಾವುದೇ ಅಡುಗೆ ಮಾಡಿದರು ರುಚಿ ಅನ್ನೋದು ತಿನ್ನುವವರಿಗೆ ತಕ್ಕ ರೀತಿಯಲ್ಲಿ ಇರಬೇಕು. ನನಗಾಗಿ ಈ ಹೋಟೆಲ್ ಅನ್ನೋ ತತ್ವ ಬಿಟ್ಟು, ನಿಮಗಾಗಿ ಈ ಹೋಟೆಲ್ ಅನ್ನೋ ತತ್ವನ ಅಳವಡಿಸಿಕೊಳ್ಳಬೇಕು. ನಾನು ಅದನ್ನೇ ಫಾಲೋ ಮಾಡಿದೆ‌ ಕ್ಲಿಕ್‌ ಆಯ್ತು. ಆದರೇ‌ ಇನ್ನು ಅವರ ಮಟ್ಟಕ್ಕೆ ರೀಚ್ ಮಾಡೋಕೆ ಆಗಿಲ್ಲ ಆದರೂ ಪ್ರಯತ್ನ ಮಾತ್ರ ಬಿಡಲ್ಲ" ಎಂದು ಅವರು ಕೊಟ್ಟ ಐಡಿಯಾವನ್ನು ತಿಳಿಸಿದನು. ನಂತರ "ನಂದು ಬಿಡು ನೀನ್ ಏನು ಆ ಕುಳ್ಳಿ ಪರ ಮಾತಾಡ್ತಾ ಇದೀಯಾ ಏನ್ ಸಮಾಚಾರ" ಎಂದು‌ ರಾಜೀವ್ ನನ್ನು ಮರು ಪ್ರಶ್ನಿಸಿದನು.


"ಲೋ ಕುಳ್ಳಿ ಗುಳ್ಳಿ ಅಂತ ಎಲ್ಲ‌ ಕರಿಯಬೇಡ ಅವಳಿನ್ನು ಚಿಕ್ಕವಳು" ಎಂದು ಪೂಜಾಳನ್ನು ಸಮರ್ಥಿಸಿಕೊಂಡನು.


"ಏನು‌ ಚಿಕ್ಕ ಹುಡುಗಿನಾ ಮದ್ವೆ ಮಾಡಿದ್ರೆ ನಾಲ್ಕು ಮಕ್ಕಳಾಗ್ತಾವೆ ಅವಳನ್ನ ನೀನು ಚಿಕ್ಕ ಹುಡುಗಿ ಅಂತಿಯಾ" ಎಂದು ರೇಗಿದನು.


"ಛೀ ಹೋಗೊ ಆ ತರ ಎಲ್ಲ ಮಾತನಾಡಬೇಡ" ಎಂದು ನಾಚಿಕೊಂಡನು.


"ಲೋ ರಾಜಿ ನಾನು ಆ ಹುಡುಗಿ ಬಗ್ಗೆ ಹೇಳಿದ್ದು, ನಿನ್ನ ಬಗ್ಗೆ ಅಲ್ಲ ನೀನ್ ಯಾಕೆ ನಾಚ್ಕೋತೀಯಾ? ಹ್ಮ್ ನೀನ್ ನಾಚ್ಕೋತಿರೋದು ನೋಡಿದ್ರೆ‌ ನೀನು ಆ ಹುಡುಗಿನಾ?" ಎಂದು ಅನುಮಾನದಿಂದ ಪ್ರಶ್ನೆಯನ್ನು ಕೇಳಿದನು.


"ಹೂಂ ಮಗ ಅವಳು ನಿನ್ನ ಫ್ಯೂಚರ್ ಅತ್ತಿಗೆ" ಎಂದನು.


"ಏನು ಅತ್ತಿಗೆನಾ? ಯಾವಾಗಿನಿಂದ ಇದೆಲ್ಲಾ? ಅದು ಸರಿ ಇವಾಗ ಅವರು ಯಾಕೆ ಜಗಳ ಮಾಡಿದ್ದು" ಎಂದು ಪ್ರಶ್ನೆಯ ಮೇಲೆ ಪ್ರಶ್ನಿಸಿದನು.


"ಅದು ಏನಿಲ್ವೋ ನೀನು ತುಂಬಾ ದಿನದ ನಂತರ ಆಚೆ ಹೋಗೊಕೆ ಕರೆದೆ ನಾನು ಒಪ್ಪಿದೆ. ನಂತರ ಅವಳು ಕಾಲ್ ಮಾಡಿ ಆಚೆ ಬರೋಕೆ ಹೇಳಿದ್ಲು ನಾನು ನಿನ್ನ ಜೊತೆ ಬರೋಕೊಸ್ಕರ ಅವಳಿಗೆ ಬ್ಯೂಸಿ ಅಂತ ಸುಳ್ಳು ಹೇಳಿ ಇಲ್ಲಿ ತಗ್ಲಾಕೊಂಡೆ ಅದೇ ಕೋಪಕ್ಕೆ ಜಗಳ ಮಾಡಿದ್ಲು" ಎಂದು ವಿವರಿಸಿದನು.


"ಅಲ್ವೋ ಇದನ್ನ ಮೊದಲೇ ಹೇಳೋದಲ್ವ ಇನ್ಯಾವತ್ತಾದರೂ ಬರಬಹುದಿತ್ತು" ಎಂದನು.


"ನೋಡು ರಾಹುಲ್ ನನಗೆ ನೀವಿಬ್ಬರು ಮುಖ್ಯ ಅವಳನ್ನ ರಾತ್ರಿ ಮೀಟ್ ಮಾಡಿ ಸಮಾಧಾನ ಮಾಡ್ತಿನಿ ಬಿಡು" ಎಂದನು.


"ಅದೆಲ್ಲಾ ಬೇಡ ಇವಾಗಲೇ ನಾನೇ ಅವರನ್ನ ಸಮಾಧಾನ ಮಾಡಿ ಸಾರಿ ಕೇಳ್ತೀನಿ ಬೇಗ ಬಾ ಇಷ್ಟೊತ್ತಿಗೆ ಅವರು ಪಾರ್ಕಿಂಗ್ ಪ್ಲೇಸ್ ಗೆ ಹೋಗಿರ್ತಾರೆ" ಎಂದು ರಾಜೀವ್ ನನ್ನು ಹೆಚ್ಚು ಕಡಿಮೆ ಎಳೆದುಕೊಂಡೆ ಹೋಗುತ್ತಾನೆ.


______________________________________________



"ಹೇ ಪೂಜಾ ತಲೆ ಗಿಲೆ ಕೆಟ್ಟಿದಿಯಾ ಯಾಕೆ ಅವರ ಜೊತೆ ಆ ತರ ಜಗಳಕ್ಕೆ ನಿಂತೆ ಮೊದಲೇ ಅವರು ಮಿನಿಸ್ಟರ್‌ಮಕ್ಕಳು" ಎಂದು ಆಕಾಂಕ್ಷ ಪೂಜಾಳಿಗೆ ರೇಗುತ್ತಿದ್ದಳು.


"ಮಿನಿಸ್ಟರ್‌ ಮಕ್ಳು ಆದ್ರೇ ಏನು ಅತ್ತಿಗೆ‌ ಅವರು ತಪ್ಪು ಮಾಡಿದ್ರು ಅದಕ್ಕೆ‌ ಬೈದೆ ಅಷ್ಟೆ" ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಳು.


"ಇಷ್ಟೊಂದು ಕೋಪ ಒಳ್ಳೆದಲ್ಲ‌ ಪೂಜಾ ಸ್ವಲ್ಪ ಸಮಾಧಾನ ತಾಳ್ಮೆಯಿಂದ ಇರು" ಎಂದು ಹೇಳಿ ಮುಂದೆ ಹೋದಳು.


"ಅತ್ತಿಗೆ ನಿಲ್ಲಿ ಪ್ಲೀಸ್, ಮುಂದೆ ಯಾರ ಹತ್ತಿರನೂ ಜಗಳ ಆಡಲ್ಲ ನಿಲ್ಲಿ ಪ್ಲೀಸ್ ಅತ್ತಿಗೆ, ಯಾಕೋ ಇವತ್ತು ಸ್ವಲ್ಪ ಕೋಪ ಜಾಸ್ತಿನೇ ಬಂತು ಪ್ಲೀಸ್ ನಿಲ್ಲಿ" ಎನ್ನುತ್ತಾ ಆಕಾಂಕ್ಷ ಹಿಂದೆಯೇ ಓಡಿದಳು.


"ನೋಡು ಪೂಜಾ ನೀನ್ ಮತ್ತೆ ಈ ತರ ಜಗಳ ಮಾಡಿದ್ರೆ ನಾನ್ ಯಾವಾತ್ತು ನೀನ್ ಜೊತೆ ಹೊರಗಡೆ ಬರೋದಿಲ್ಲ" ಎಂದು ಎಚ್ಚರಿಸಿ ಪಾರ್ಕಿಂಗ್ ಪ್ಲೇಸ್ ಕಡೆ ಹೊರಟಳು.


ಇವರು ಇನ್ನೇನು ಪಾರ್ಕಿಂಗ್ ಪ್ಲೇಸ್ ನಿಂದ ಹೊರಗಡೆ ಹೋಗಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ರಾಜೀವ್‌ ಮತ್ತು ರಾಹುಲ್ ಬಂದರು.


"ಎಕ್ಸ್ ಕ್ಯೂಸ್ ಮಿ ಸ್ವಲ್ಪ ನಿಲ್ಲಿ" ಎಂದು ರಾಹುಲ್ ಆಕಾಂಕ್ಷ ಮತ್ತು ಪೂಜಾಳನ್ನು ನಿಲ್ಲಿಸಿದನು.


"ಹೇಳಿ ಸರ್ ಏನ್ ವಿಷಯ" ಎಂದು ಆಕಾಂಕ್ಷ ಪ್ರಶ್ನಿಸಿದಳು.


"ಸಾರಿ, ಅದು ನಾನು ಮತ್ತೆ ಇವನು ತುಂಬಾ ದಿನದ ನಂತರ ಆಚೆ ಬರೋ ಪ್ಲಾನ್ ಮಾಡಿದ್ದರಿಂದ ಇವನು ನಿಮಗೆ ಸುಳ್ಳು ಹೇಳಿದ ಇದು ನನಗೆ ಗೊತ್ತಿರಲಿಲ್ಲ ಪ್ಲೀಸ್ ಅವನ ಜೊತೆ ಜಗಳ ಮಾಡಬೇಡಿ ನನ್ನ ಕಡೆಯಿಂದ ತಪ್ಪಾಗಿರೋದು ಪ್ಲೀಸ್ ಕ್ಷಮಿಸಿ" ಎಂದು ರಾಹುಲ್ ಪೂಜಾ ಬಳಿ ಕ್ಷಮೆ ಕೇಳಿದನು.


"ಇಲ್ಲಿ ಏನು ನಡಿತಾ ಇದೆ ನೀವ್ಯಾಕೆ‌ ಕ್ಷಮೆ ಕೇಳ್ತಾ ಇದೀರಾ? ಎಂದು ಆಕಾಂಕ್ಷ ಗೊಂದಲದಲ್ಲಿ ರಾಹುಲ್ ಬಳಿ ಪ್ರಶ್ನಿಸಿದಳು.


ಆಕಾಂಕ್ಷ ಎದುರಲ್ಲಿ ರಾಹುಲಾ ಮಾತನಾಡಿದ್ದು ಪೂಜಾಳ ಕೋಪ ಮತ್ತಷ್ಟು ಹೆಚ್ಚಾಗಿ ರಾಜೀವ್ ಕಡೆ ಕೆಂಗಣ್ಣು ಬೀರಿದಳು.


"ಅದು ಮ್ಯಾಮ್" ಎಂದು ರಾಹುಲ್ ತಡವರಿಸಿದನು.


"ಏನ್ ನಡಿತಾ ಇದೆ ಅಂತ ಸರಿಯಾಗಿ ಹೇಳಿದರೆ ಸರಿ, ಇಲ್ಲ ಅಂದ್ರೆ" ಎಂದು ಗಡುಸಾಗಿ ಗದರಿಸಿದಳು.


ಆಕಾಂಕ್ಷಳ ಕೆಲಸ ಮಾತುಗಳಿಗೆ ಗೌರವ ಕೊಡೊ ರಾಹುಲ್ ಸ್ವಲ್ಪ ಅಂಜಿಕೆಯಲ್ಲಿಯೇ ರಾಜೀವ್ ಮತ್ತು ಪೂಜಾಳ ಪ್ರೀತಿಯ ವಿಷಯವನ್ನು ತಿಳಿಸಿದನು.


ಎಲ್ಲ ವಿಷಯ ಕೇಳಿದ ಆಕಾಂಕ್ಷ ಸುಮ್ನೆ ಕೈ ಕಟ್ಟಿ ಇದೆಲ್ಲಾ ನಿಜನಾ ಎನ್ನುವಂತೆ ಪೂಜಾ ಕಡೆ ನೋಡಿದಳು. ಆಗಾ ಪೂಜಾ ನಿಜ ಎನ್ನುವಂತೆ ತಲೆ ಆಡಿಸಿದಳು.


"ಹೋ ಈ ವಿಷಯಕ್ಕಾ ಅವಾಗಲೇ ಅಷ್ಟೊಂದು ಸೀನ್ ಕ್ರಿಯೇಟ್ ಮಾಡಿದ್ದು. ಅವರು ಬಂದಿಲ್ಲ ಅಂತ ನನ್ನ ಬಲವಂತವಾಗಿ ಕರೆದುಕೊಂಡು ಬಂದ್ಯಾ? ಎಂದು ಪ್ರಶ್ನಿಸಿದಳು.


ಅಷ್ಟೊತ್ತು ಹಾರಾಡ್ತಾ ಇದ್ದ ಪೂಜಾ ಇವಾಗ ಮಾತು ಮರೆತ ಹಕ್ಕಿಯಂತೆ ಸೈಲೆಂಟ್ ಆಗಿ ನಿಂತಳು. "ಮಾತಾಡು ಪೂಜಾ ಯಾಕೆ ಸೈಲೆಂಟ್ ಆದೆ?" ಎಂದು ಮತ್ತೆ ಪ್ರಶ್ನಿಸಿದಳು.


"ಅದು ಅತ್ತಿಗೆ" ಎಂದು ತಡವರಿಸಿದವಳನ್ನು ತಡೆದು "ಇರೋದನ್ನ ನೇರವಾಗಿ ಹೇಳು" ಎಂದು ಗಂಭೀರವಾಗಿ ಹೇಳಿದಳು.


"ಹೌದು ಅತ್ತಿಗೆ ನಾನು ಇವರನ್ನ ಪ್ರೀತಿಸ್ತಾ ಇದೀನಿ" ಎಂದು ಒಪ್ಪಿಕೊಂಡಳು.


"ಸರಿ‌ ನಾನು ಮನೆಯಲ್ಲಿ ಮಾತಾಡ್ತೀನಿ, ನೀವು ನಿಮ್ಮ ಮನೆಯಲ್ಲಿ ಮಾತನಾಡಿ ವಿಷಯ‌ ತಿಳಿಸಿ" ಎಂದು ರಾಜೀವ್ ನಲ್ಲಿ ಹೇಳಿದಳು.


"ಅದು ಮೇಡಂ ಅಪ್ಪ ಇವಾಗ ಊರಲ್ಲಿ ಇಲ್ಲ" ಎಂದು ರಾಜೀವ್ ಉತ್ತರಿಸಿದನು.


"ನೋಡಿ ಅದೆಲ್ಲಾ ನನಗೆ ಗೊತ್ತಿಲ್ಲ, ನೀವು ಎಷ್ಟು ಬೇಗ ಮಾತಾಡ್ತಿರೋ‌ ಅಷ್ಟೇ ಬೇಗ ಮದುವೆ ಆಗುತ್ತೆ ಇಲ್ಲ ಅಂದ್ರೆ" ಎಂದು ಮಾತನ್ನು ಅರ್ಧಕ್ಕೆ ನಿಲ್ಲಿಸಿದಳು.


"ಪ್ಲೀಸ್ ಆ ತರ ಎಲ್ಲ ಮಾತನಾಡ ಬೇಡಿ ನಾವು ನಾಳೆನೇ ಊರಿಗೆ ಹೋಗಿ ಅಪ್ಪನ ಹತ್ತಿರ ಮಾತಾಡ್ತೀವಿ‌, ಪ್ಲೀಸ್ ಅವರ ಪ್ರೀತಿನಾ ದೂರ ಮಾಡಬೇಡಿ" ಎಂದು ರಾಹುಲ್ ಆಕಾಂಕ್ಷಳ ಬಳಿ ಕೇಳಿಕೊಂಡನು.


"ಸರಿ ಸರಿ ಆದಷ್ಟು ಬೇಗ ಮಾತನಾಡಿ ವಿಷಯ ತಿಳಿಸಿ" ಎಂದು ಪೂಜಾಳನ್ನು ಕರೆದುಕೊಂಡು ಹೊರಟಳು.


"ಏನೋ ಇದು ಅವರು ಈ ತರ ಹೇಳಿದ್ರು" ಎಂದು ರಾಹುಲ್ ಹೇಳಿದರೆ


"ಏನ್ ಆಗುತ್ತೆ ನೋಡೋಣ ಬಿಡು ನಾಳೆ ಹೊರಡೋಕೆ ಏರ್ಪಾಡು ಮಾಡೋಣ ಬಾ" ಎಂದು ಇಬ್ಬರು ಅಲ್ಲಿಂದ ಹೊರಟರು.


________________________________________________________


ರಾಜೀವ್ ಮತ್ತು ರಾಹುಲ್ ಅವರ ತಂದೆಯನ್ನು ಭೇಟಿಯಾಗಿ ತಮ್ಮ ಪ್ರೀತಿಯ ವಿಷಯ ತಿಳಿಸಿ ಮುಂದಿನ ಶುಭಕಾರ್ಯಕ್ಕೆ ಮುನ್ನುಡಿ ಹಾಕಲು ಹೊರಟರು. ಆಕಾಂಕ್ಷ ಮತ್ತು ಪೂಜಾ ಮನೆ ಕಡೆ ಹೊರಟವರಲ್ಲಿ ಪೂಜಾಳೇ ಮಾತು ಶುರು ಮಾಡಿದಳು.


"ನೀವ್ ಮಾಡಿದ್ದು ಸರಿಯಿಲ್ಲ ಅತ್ತಿಗೆ" ಎಂದು ಪೂಜಾ ತನ್ನ ಅಸಮಾಧಾನ ವ್ಯಕ್ತ ಪಡಿಸಿದಳು.


"ನಾನ್ ಏನ್‌ ಮಾಡಿದೆ ಪೂಜಾ?" ಎಂದು ಅರ್ಥವಾಗದೆ ಪ್ರಶ್ನಿಸಿದಳು.


"ಇಷ್ಚು ಬೇಗ ಮದುವೆ ಮಾತುಕತೆ ಆಡೋ ಅವಶ್ಯಕತೆ ಇತ್ತಾ?" ಎಂದಳು.


"ಅದು ಆಗಲ್ಲ ಪೂಜಾ" ಎಂದು ಏನೋ ಹೇಳುವವಳನ್ನು ಅರ್ಧಕ್ಕೆ ತಡೆದು


"ಸಾಕು ನಿಮ್ಮ ಪ್ರವಚನ, ಅದು ಸರಿ ನನ್ನ ಮದುವೆ ವಿಷಯ ಮಾತಾಡೋಕೆ ನಿವ್ಯಾರು?" ಎಂದು ನಾಲಿಗೆ ಅರಿಬಿಟ್ಟಳು.


"ಪೂ...ಜಾ... ಏನಂದೆ?" ಎಂದು ತಡವರಿಸಿದಳು.


ಅಕಾಂಕ್ಷಳು ತಡವರಿಸಿದಾಗ ಪೂಜಾಳಿಗೆ ತಾನು ಅಂದ ಮಾತು ಅರಿವಾಗಿ "ಅದು ಅತ್ತಿಗೆ ಸಾರಿ, ಕೋಪದಲ್ಲಿ ಬಾಯಿ ತಪ್ಪಿ" ಮಾತು ಮುಂದುವರೆಸುವ ಮೊದಲೇ,


"ಸಾಕು ಪೂಜಾ, ಇಷ್ಟು ದಿನ ನನ್ನ ಬಗ್ಗೆ ನಿಮ್ಮ ಮನಸಲ್ಲಿ ಇದ್ದ ಭಾವನೆ ಇವಾಗ ಅರ್ಥ ಆಯ್ತು ಇನ್ನು ಮಾತನಾಡಿ ಪ್ರಯೋಜನ ಇಲ್ಲ. ಹಾಗೇ ಇವತ್ತು ಜಾಸ್ತಿ ಮಾತನಾಡಿದೆ ಕ್ಷಮಿಸು" ಎಂದಳು.


"ಅತ್ತಿಗೆ ಅದು" ಎಂದು ಏನೋ ಹೇಳುವವಳನ್ನು ಅರ್ಧಕ್ಕೆ ತಡೆದು


"ಬಾ ಲೇಟ್ ಆಯ್ತು, ನಿನ್ನ ಬಿಟ್ಟು ನಾನ್ ಹೋಗ್ತೀನಿ" ಎಂದು ಹೊರಟೆ ಬಿಟ್ಟಳು ಪೂಜಾಳ ಯಾವುದೇ ಮಾತು ಆಕಾಂಕ್ಷಳ ಕಿವಿಯ ಮೇಲೆ ಬೀಳಲೇ ಇಲ್ಲ. ಮೌನವಾಗಿಯೇ ಪೂಜಾಳನ್ನು ಮನೆಯ ಬಳಿ ಬಿಟ್ಟು ತಾನು ಮನೆಯ ಕಡೆ ಹೊರಟಳು.


ಮಾಲ್ ನಿಂದ ಬಂದವಳ ಮನಸ್ಸು ಇನ್ನು ಪೂಜಾಳ ಮಾತಿನ ಹಿಂದೆಯೇ ಇತ್ತು. ಅವರ ಇಬ್ಬರ ಪರಿಚಯದಿಂದ ಇಂದಿನವರೆಗೂ ಎಂದು ಅವಳನ್ನು ಒಬ್ಬ ಕೋಲಿಗ್ ಅಥವಾ ಬರಿ ಅನಿಕೇತ್ ನ ದತ್ತು ತಂಗಿ ಎಂದು ಭಾವಿಸದೆ ಒಡಹುಟ್ಟಿದ ತಂಗಿಯೆಂದೆ ತಿಳಿದು ಪ್ರೀತಿಸುತ್ತಿದ್ದಳು. ಆದರೇ ಪೂಜಾಳ ದುಡುಕಿನ ಒಂದು ಮಾತು ಆಕಾಂಕ್ಷಳನ್ನು ಭೂಮಿಯ ಆಳಕ್ಕೆ ತಳ್ಳಿದಂತೆ ಆಗಿತ್ತು.


_________________________________________________________


ಸುಮಾರು 11 ಗಂಟೆಯ ಹೊತ್ತಿಗೆ ಅಮರ್ ನ ಹೊತ್ತು ಕಾರು ಎಲ್ಲೂ ನಿಲ್ಲಿಸದೆ ಸತತ 10 ಗಂಟೆಗಳ ಪ್ರಯಾಣದ ನಂತರ ಚೆನೈನ ಒಂದು ಗೆಸ್ಟ್ ಹೌಸ್ ನ್ನು ತಲುಪಿತು. ಅವರನ್ನು ಹಿಂಬಾಲಿಸಿದ ಅನಿಕೇತ್ ಬೆಂಗಳೂರಿನ ಮಾರ್ಗವಾಗಿ ಹೋಗದೆ ಬೇರೆ ಮಾರ್ಗದಲ್ಲಿ ಹಿಂಬಾಲಿಸಿದನು. ಹಿಂಬಾಲಿಸುವ ಮುನ್ನ ಸಚಿನ್ ಗೆ ಕಾಲ್ ಮಾಡಿ ಚೆನೈನಲ್ಲಿ ರೂಂ ಬುಕ್ ಮಾಡುವಂತೆ ತಿಳಿಸಿ ಜೊತೆಗೆ ಚೆನೈನಲ್ಲಿ ಕಾರಿನ ವ್ಯವಸ್ಥೆ ಮಾಡುವಂತೆ ತಿಳಿಸಿ ಶಿವಮೊಗ್ಗಕ್ಕೆ ಓನ್ ಜೆಟ್ ವ್ಯವಸ್ಥೆ ಮಾಡಿಸಿಕೊಂಡನು. ವಾಯು ಮಾರ್ಗದ ಮೂಲಕ ಬಸವ ಮುನ್ನರಿಂಗಿಂತ ಚೆನೈ ತಲುಪಿದನು. ಕಾರವಾರದಲ್ಲೇ ಕಿಡ್ನಾಪರ್ ನ ಪಯಣ ಸೂಚನೆ ಸಿಕ್ಕಿದ್ದು, ಅನಿಕಳ ಸಾವಿನ ನಂತರ ಬಸವ ಮತ್ತು ಮುನ್ನ ತಮ್ಮ ಬಾಸ್ ಬಳಿ ಮಾತನಾಡುವಾಗ ಹೇಳಿದ ಜಾಗದ ಆಧಾರದ ಮೇಲೆ ಅನಿಕೇತ್ ನೇರವಾಗಿ ಅವರನ್ನು ಹಿಂಬಾಲಿಸದೆ ಅವರಿಗಿಂತ ಮುಂದೆ ಚೆನೈ ತಲುಪಿದನು.


ಚೆನೈ ತಲುಪಿದ ಅನಿಕೇತ್ ಮೊದಲು ಲ್ಯಾಪ್ ಟಾಪ್ ಚಾರ್ಜ್ ಗೆ ಹಾಕಿ ಅಮರ್ ಬಳಿ ಇರುವ ಲೋಕೆಷನ್ ಡಿವೈಸ್ ನಿಂದ ಅವರ ಜಾಗವನ್ನು ಗಮನಿಸುತ್ತಿದ್ದನು. ನಂತರ ಮನೆಯವರೊಟ್ಟಿಗೆ ಮಾತನಾಡಿದನು.


ಆಕಾಂಕ್ಷ ಮತ್ತು ಪೂಜಾ ಮಾಲ್ ಗೆ ಹೋಗುವುದಾಗಿ ಮೆಸೇಜ್ ಮಾಡಿದ್ದರಿಂದ 7 ರವರೆಗೆ ಅವರಿಗೆ ಯಾವುದೇ ಕರೆ ಮತ್ತು ಸಂದೇಶ ಕಳುಹಿಸದೆ ಕೆಲಸದಲ್ಲಿ ನಿರತನಾದನು.


___________________________________________________



ಮಾಲ್ ನಿಂದ ಬಂದ ಆಕಾಂಕ್ಷ ಯಾರಲ್ಲೂ ಮಾತನಾಡದೆ ತನ್ನ ರೂಂ ಸೇರಿದಳು. ಅನಿಕೇತ್ ಸಂಜೆ ತಂದೆ ತಾಯಿಯ ಬಳಿ ಮಾತನಾಡಿ ಆಕಾಂಕ್ಷಳಿಗೆ ಕಾಲ್ ಮಾಡಿದರೇ ಅವಳಿಂದ ಯಾವುದೇ ಪ್ರತ್ಯುತ್ತರವಿಲ್ಲ. ಬೇಸರದಲ್ಲಿ ಇದ್ದ ಆಕಾಂಕ್ಷ ಫೋನ್ ನನ್ನು ಸೈಲೆಂಚ್ ಮೂಡ್ ಗೆ ಹಾಕಿ ಇಟ್ಟಿದ್ದರಿಂದ ಅನಿಕೇತ್ ನ ಯಾವುದೇ ಕಾಲ್ ಗಳು ಬಂದಿದ್ದು ತಿಳಿಯಲಿಲ್ಲ. ಆಕಾಂಕ್ಷಳಿಗೆ ಕಾಲ್‌ ಮಾಡಿ‌ ಬೇಸತ್ತು ಕೊನೆಗೆ ತನ್ನ ಮಾವ ನಾರಾಯಣ್ ರವರಿಗೆ ಕಾಲ್ ಮಾಡಿದನು.


ನಾರಾಯಣ್ ರವರು ಫೋನ್ ತೆಗೆಯುತ್ತಿದ್ದ ಹಾಗೇ "ಹಲೋ ಮಾವ" ಆತಂಕದಿಂದ ಕೇಳಿದಳು.


ಅವನ ಆತಂಕ ಗಮನಿಸದೆ "ಹಲೋ ಅನಿ ಹೇಗಿದ್ದೀಯಾ?" ಎಂದರು.


ತನ್ನ ಆತಂಕ ಮರೆಮಾಚಿ "ನಾನ್ ಚೆನ್ನಾಗಿದ್ದೀನಿ, ನೀವ್ ಹೇಗಿದ್ದೀರಾ?" ಎಂದು ಉತ್ತರಿಸಿದನು.


"ನಾನು ಚೆನ್ನಾಗಿದ್ದೀನಿ" ಎಂದರು.


ಮಾವನ ಜೊತೆ ಸರಿಯಾಗಿ ಮಾತನಾಡದೆ ಆತಂಕವನ್ನು ಮರೆಮಾಚಿ "ಮಾವ ಅಕ್ಷು ಮನೆಯಲ್ಲಿ ಇದ್ದಾಳಾ?" ಎಂದು ನೇರವಾಗಿ ಕೇಳಿದನು.


"ಆ ಇದಾಳೆ ಯಾಕಪ್ಪ ಏನಾಯ್ತು?" ಎಂದು ಪ್ರಶ್ನಿಸಿದಳು.


"ತುಂಬಾ ಹೊತ್ತಿನಿಂದ ಕಾಲ್ ಮಾಡ್ತಾನೆ ಇದೀನಿ ರಿಸೀವ್ ಮಾಡ್ತಾ ಇಲ್ಲ ಮಾವ" ಎಂದನು.


"ಏನಾದ್ರೂ ಜಗಳ ಮಾಡಿದ್ರಾ?" ಎಂದು ಮತ್ತೆ ಪ್ರಶ್ನಿಸಿದರು.


"ಛೇ ಛೇ ಆ ತರ ಏನು ಇಲ್ಲ ಮಾವ ಇವತ್ತು ಪೂಜಾ ಜೊತೆ ಶಾಪಿಂಗ್ ಹೋಗ್ತೀನಿ ಬರೋದು ಸಂಜೆ ಆಗುತ್ತೆ ಅಂತ ಹೇಳಿದ್ಲು ಅದಕ್ಕೆ ಡಿಸ್ಟರ್ಬ್ ಮಾಡೋದು ಬೇಡ ಅಂತ ಕಾಲ್ ಮಾಡಿರಲಿಲ್ಲ ಇವಾಗ ಮಾಡಿದ್ರೆ ಪಿಕ್ ಮಾಡ್ತಿಲ್ಲ" ಎಂದು ಸಮಾಧಾನದಿಂದಲೇ ಉತ್ತರಿಸಿದನು.


"ಹೌದಾ, ನನಗೂ ಏನು ಅಂತ ಸರಿಯಾಗಿ ಗೊತ್ತಿಲ್ಲ. ಹೋಗುವಾಗ ಬರೋದು ಲೇಟ್ ಆಗುತ್ತೆ ಅಂತ ಹೇಳಿ ಹೋಗಿದ್ಲು 5 ಗಂಟೆಗೆ ಬಂದು ರೂಂ ಸೇರಿಕೊಂಡವಳು ಇನ್ನು ಆಚೆ ಬಂದಿಲ್ಲ. ಸುಸ್ತಾಗಿರಬೇಕು ಅಂತ ನಾವು ಯಾರು ಅವಳಿಗೆ ಡಿಸ್ಟರ್ಬ್ ಮಾಡಿಲ್ಲ" ಎಂದರು.


"ಮಾವ ಅವಳಿಗೆ ಫೋನ್ ಕೊಡೊಕೆ ಆಗುತ್ತಾ?" ಎಂದು ವಿನಂತಿಸಿಕೊಂಡನು.


"ಸರಿ ಇರು ಕೊಡ್ತೀನಿ" ಎಂದು ಹೇಳಿ ಆಕಾಂಕ್ಷ ರೂಂ ಬಳಿ ಹೋಗಿ ಮೂರು ನಾಲ್ಕು ಬಾರಿ ಕೂಗಿದರು. ಆದರೇ, ಆ ಕಡೆಯಿಂದ ಯಾವುದೇ ಉತ್ತರವಿಲ್ಲ ಕೊನೆಗೆ ಬೇಸತ್ತು ಜೋರಾಗಿ ಎರಡು ಮೂರು ಬಾರಿ ಬಾಗಿಲು ಬಡಿದಾಗ ಬಾಗಿಲಿನ ಸದ್ದಿಗೆ ಬಂದು ಬಾಗಿಲು ತೆಗೆದಳು.


ಬಾಗಿಲು ತೆಗೆದಾಗ ಎದುರಿಗೆ ಇರುವ ಅಪ್ಪನನ್ನು ಕಂಡು "ಏನ್ ಅಪ್ಪ" ಎಂದು ಪ್ರಶ್ನಿಸಿದಳು.


ನೇರವಾಗಿ "ಅನಿ ಫೋನ್ ಮಾಡಿದ್ದಾನೆ" ಎಂದರು.


ಅಪ್ಪನಿಗೆ ಮೊದಲು ಕ್ಷಮೆ ಕೇಳಿ "ಸಾರಿ ಅಪ್ಪ ಕೊಡಿ ಮಾತಾಡ್ತೀನಿ" ಎಂದಳು.


"ತಗೋ" ಎಂದು ಫೋನ್ ಕೊಟ್ಟು ಅಲ್ಲಿಂದ ಹೊರಟರು.


"ಹಲೋ ಅನಿ" ಎಂದಳು.


ಆಕಾಂಕ್ಷ ಧ್ವನಿ ಕೇಳುತ್ತಿದ್ದ ಹಾಗೇಯೇ "ಅಕ್ಷು ಹೇಗಿದ್ದೀಯಾ? ಯಾಕೆ ಫೋನ್ ಪಿಕ್ ಮಾಡ್ಲಿಲ್ಲ" ಎಂದು ಪ್ರಶ್ನಿಸಿದನು.


"ಸಾರಿ ಅನಿ ಶಾಪಿಂಗ್ ಹೋಗಿದ್ವಿ ಅಲ್ವ ಜೊತೆಗೆ ಮೂವಿ ಬೇರೆ ನೋಡಿದ್ನ ತಲೆನೋವು ಶುರು ಆಗಿತ್ತು. ಪಾಪ ಪೂಜಾನ ಕೂಡ ಬೇಗ ಕರೆದುಕೊಂಡು ಬಂದೆ ಬೇಜಾರ್ ಆದ್ಲೋ ಏನೋ?" ಎಂದು ಮನದ ನೋವನ್ನು ಮುಚ್ಚಿಟ್ಟು ಬಾಯಿಗೆ ಬಂದ ಸುಳ್ಳು ಹೇಳಿದಳು.


ಆಕಾಂಕ್ಷಳ ಮಾತು ಸತ್ಯ ಎಂದು ತಿಳಿದು "ಅವಳಿಗೆ ನಾನ್ ಹೇಳ್ತಿನಿ ನೀನು ರೆಸ್ಟ್ ಮಾಡು, ಊಟ ಮಾಡಿ ಮಲ್ಕೋ ಹಾಗೇ ಮಲ್ಕೋ ಬೇಡ" ಎಂದು ಸಮಾಧಾನಿಸಿದನು.


ಅದರ ಬಗ್ಗೆ ಮಾತನಾಡಲು ಇಚ್ಚಿಸದೆ ಟಾಪಿಕ್ ಬದಲಾಯಿಸಿದಳು. "ಸರಿ, ಇವಾಗ ಎಲ್ಲಿದ್ದೀಯಾ?" ಎಂದಳು.


"ಚೆನೈನಲ್ಲಿ, ಅಮರ್ ನ ಕೂಡ ಇಲ್ಲಿಗೆ ಶಿಫ್ಚ್ ಮಾಡಿದ್ದಾರೆ ಜೊತೆಗೆ ಮೇನ್ ಲೀಡರ್ ಕೂಡ ಇಲ್ಲೇ ಇರೋದು" ಯಾವುದೇ ಮುಚ್ಚು ಮರೆ ಇಲ್ಲದೆ ಹೇಳಿದನು.


"ಹೋ ಹೌದಾ, ನೀನು ಹುಷಾರು ಮತ್ತೆ ಅಮರ್ ಅಲ್ಲಿಗೆ ಹೋದ್ರೇ ಅನಿಕಾ ಎಲ್ಲಿ?" ಎಂದು ಪ್ರಶ್ನಿಸಿದಳು.


"ಅದು ಅಕ್ಷು" ಎಂದು ಅನಿಕಾಳ ಬಗ್ಗೆ ಸಂಪೂರ್ಣವಾಗಿ ವಿವರಿಸಿದನು.


"ಅನಿ ನೀನ್ ಹೇಳೋದು ಕೇಳಿದ್ರೆ ಭಯ ಆಗ್ತಾ ಇದೆ ಕಣೋ" ಎಂದು ಆತಂಕ ವ್ಯಕ್ತ ಪಡಿಸಿದಳು.


"ಭಯ ಬೇಡ ನೀನ್ ಹುಷಾರು. ಆ ಮತ್ತೊಂದು ವಿಷಯ ನಾಳೆಯಿಂದ ಸರಿಯಾಗಿ ಕಾಲ್ ಮಾಡೋಕೆ ಆಗುತ್ತೋ ಇಲ್ವೋ ಗೊತ್ತಿಲ್ಲ ನಾನ್ ಕಾಲ್ ಮಾಡಿಲ್ಲ ಪಿಕ್ ಮಾಡಿಲ್ಲ ಅಂದ್ರೆ ಬೇಜಾರ್ ಆಗ್ಬೇಡ ಸರಿನಾ" ಎಂದು ಸಮಾಧಾನಿಸಿದನು.


"ಹ್ಮ್, ಸರಿ" ಎಂದಳು.


"ಸರಿ ನೀನ್ ಊಟ ಮಾಡಿ ರೆಸ್ಟ್ ಮಾಡು ನಾನು ಅವರನ್ನ ಟ್ರೇಸ್ ಮಾಡ್ತೀನಿ" ಎಂದನು.


"ಸರಿ ಹುಷಾರು ಕೆಲಸದ ಮಧ್ಯ ಊಟ ತಿಂಡಿ ಮರಿಬೇಡ" ಎಂದು ಎಚ್ಚರಿಸಿದಳು.


"ಸರಿ ಚಿನ್ನಿ ಬಾಯ್ ಗುಡ್ ನೈಟ್" ಎಂದರೆ


"ಗುಡ್ ನೈಟ್ ಬಂಗಾರಿ" ಎಂದು ಕಾಲ್ ಕಟ್ ಮಾಡಿ ಫ್ರೇಶ್ ಆಗಲು ಹೊರಟಳು.


_____________________________________________________



ಸಂಜೆ 5 ಗಂಟೆಗೆ‌ ಹೊರಟ ರಾಜೀವ್ ಮತ್ತು ರಾಹುಲ್ ರಾತ್ರಿ 9 ರ ವೇಳೆಗೆ ಚೆನೈ ತಲುಪಿದವರು ಗೆಸ್ಟ್ ಹೌಸ್ ಕಡೆ ಹೊರಟರು. ಅಲ್ಲಿ ಉಳಿಯಲು ನಿರ್ಧರಿಸಿ ಮುಂಜಾನೆ ತಂದೆಯನ್ನು ಭೇಟಿಯಾಗಿ ತಮ್ಮ ಪ್ರೀತಿಯ ವಿಷಯ ತಿಳಿಸಲು ನಿರ್ಧರಿಸಿದರು.


ಮೊದಲು ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿ ಫ್ರೇಶ್ ಆಗಲು ಹೊರಟರು. ಫ್ರೇಶ್ ಆಗುವ ಹೊತ್ತಿಗೆ ಆರ್ಡರ್ ಮಾಡಿದ ಫುಡ್ ಬಂದಾಗ ಊಟ ಮಾಡಿ ಬಾಲ್ಕನಿಯಲ್ಲಿ ವಾಕ್ ಮಾಡುತ್ತಿದ್ದರು. ನಾಳೆ ತಂದೆಯ ಬಳಿ ಹೇಗೆ ಮಾತಾನಾಡೋದು ಎಂದು ಯೋಚಿಸುತ್ತಾ ಸಮಯ 11 ಆದರೂ ಬಾಲ್ಕನಿಯಲ್ಲಿಯೇ ಇದ್ದರು.


ಕಾರಿನ ಶಬ್ದ ಆದಾಗ ಇಬ್ಬರ ಗಮನ ಗೇಟ್ ಬಳಿ ಹೋಯಿತು. ಮೊದಲು ಕಾರ್ ನಿಂದ ಇಳಿದವರನ್ನು ನೋಡಿ ಇವರ ಎಂದು ಅಂದುಕೊಳ್ಳುವ ಮೊದಲೇ ಬಲವಂತವಾಗಿ ಕಾರಿನಿಂದ ಇಳಿದ ವ್ಯಕ್ತಿಯನ್ನು ಕಂಡು ಇಬ್ಬರ ಬಾಯಲ್ಲಿ ಬಂದ ಹೆಸರು "ಅಮರ್"


ಬಸವ ಮತ್ತು ಮುನ್ನರಿಗೆ ಅಲ್ಲಿ ರಾಜೀವ್ ಮತ್ತು ರಾಹುಲ್ ಇರುವ ವಿಚಾರ ತಿಳಿಯದೇ ಅಮರ್ ನನ್ನು ಬಲವಂತವಾಗಿ ಎಳೆದುಕೊಂಡು ಬಂದು ರೂಂ ನಲ್ಲಿ ಬಂಧಿಸಿ ಕೈ ಕಾಲು ಕಟ್ಟಿದರು. ಇದನ್ನೆಲ್ಲಾ ರಾಜೀವ್ ಮತ್ತು ರಾಹುಲ್ ಗಮನಿಸಿದರು. ಅವರ ದೈತ್ಯಾಕೃತಿಗೆ ಹೆದರಿ ಮುಂದೆ ಬರಲಿಲ್ಲ. ಆದರೇ, ಈ ವಿಚಾರವನ್ನು ತಮ್ಮ ತಂದೆಯವರಿಗೆ ತಿಳಿಸಿ ಅಮರ್ ನನ್ನು ರಕ್ಷಿಸಬೇಕು ಎಂದುಕೊಂಡರು.


ಬಸವ ಮತ್ತು ಮುನ್ನ ಮೇಲೆ ಹೋಗದೆ ಅಮರ್ ನ ಬಂಧಿಸಿದ ಕೋಣೆಯ ಪಕ್ಕ ಇದ್ದ ರೂಂ ಗೆ ಹೋದರು. ಫ್ರೇಶ್ ಆಗಿ ಬೆಳ್ಳಗ್ಗೆಯಿಂದ ಖಾಲಿ ಹೊಟ್ಟೆಯಲ್ಲಿ ಇದ್ದವರು ತಾವೇ ಸ್ವಯಂ ನಳಪಾಕಕ್ಕೆ ತಯಾರಾಗಿ ಇರೋದರಲ್ಲಿ ಏನೋ ಒಂದು ತಯಾರಿಸಿ ತಿಂದು ಅಮರ್ ಗೂ ಎರಡು ತುತ್ತು ತಿನ್ನಿಸಿದರು.



ಬಸವ ಮತ್ತು ಮುನ್ನರನ್ನು ಮರೆಯಲ್ಲಿ ನಿಂತು ಗಮನಿಸುತ್ತಿದ್ದ ರಾಜೀವ್ ಮತ್ತು ರಾಹುಲ್ ರಲ್ಲಿ ಅವರ ಕೆಲಸ ನೋಡಿ ರಾಜೀವ್ ತಟಸ್ಥನಾಗಿದ್ದ ರಾಹುಲ್ ಅವನನ್ನು ಎಚ್ಚರಿಸಿ ರೂಂ ಗೆ ಕರೆದುಕೊಂಡು ಹೋದನು.


"ರಾಜಿ ಯಾಕೋ ಈ ತರ ಇದೀಯಾ" ಎಂದು ರಾಹುಲ್ ಕೇಳಿದರೆ,


"ರಾಹುಲ್ ಇವರು ಅಪ್ಪ ಮತ್ತೆ ಅಂಕಲ್ ಜೊತೆ ಇರುವವರು ಇವರು ನೋಡಿದರೆ ಆ ಸೈಂಟಿಸ್ಟ್ ಅಮರ್ ನ" ಎಂದು ಅರ್ಧಕ್ಕೆ ಮಾತು ನಿಲ್ಲಿಸಿದನು.


"ರಾಜಿ ಕೂಲ್ ನಾವು ಅವರನ್ನ ಎದುರು ಹಾಕಿಕೊಳ್ಳೋಕೆ ಆಗಲ್ಲ. ಮುಂಜಾನೆಯೇ ಅಪ್ಪನಿಗೆ ಕಾಲ್ ಮಾಡಿ ಬರೋಕೆ ಹೇಳೋಣ ಅವರು ಬರುವ ಹೊತ್ತಿಗೆ ಇವರ ಜೊತೆಗೆ ಅವರ ಬಾಸ್ ಸಹ ಇರ್ತಾರೆ ಜೊತೆಗೆ ಪೊಲೀಸ್ ಫೋರ್ಸ್ ನ ಕರೆಸೋಣ" ಎಂದನು.


"ಇದಕ್ಕೆ ಮಾರ್ನಿಂಗ್ ತನಕ ಯಾಕೆ ಕಾಯೋದು ಇವಾಗಲೇ ವಿಷಯ ತಿಳಿಸೋಣ" ಎಂದನು.


"ಬೇಡ ಇವಾಗ ಮಲ್ಗಿರ್ತಾರೆ ಮೊದಲೇ ಕೆಲಸ ಕೆಲಸ ಅಂತ ಟೆನ್ಷನ್ ನಲ್ಲೇ ಇರ್ತಾರೆ ಸ್ವಲ್ಪ ಹೊತ್ತು ಮಲಗಲಿ" ಎಂದನು.


"ಸರಿ ಇವಾಗ ನಾವು ಸ್ವಲ್ಪ ಹೊತ್ತು ಮಲ್ಗೋಣ ಬಾ" ಎಂದು ಮಲಗಲು ಹೊರಟರು.


_____________________________________________________________

ಅಮರ್ ಬಳಿ ಇರುವ ಜೀ ಪಿ ಎಸ್ ಡಿವೈಸ್ ನಿಂದ ಅಮರ್ ಇರುವ ಸ್ಥಳವನ್ನು ಪರಿಶೀಲಿಸುತ್ತಿದ್ದ ಅನಿಕೇತ್ ಗೆ ಅವರು ಬೀಡು ಬಿಟ್ಟ ಸ್ಥಳದ ಬಗ್ಗೆ ಮಾಹಿತಿ ದೊರೆಯಿತು.


ಮನದಲ್ಲಿಯೇ ಎಲ್ಲ ಸರಿಯಾಗಿ ನಡೆದರೆ ನಾಳೆನೇ ಈ ಕೇಸ್ ಕೊನೆ ಅಂತ ತಲುಪುತ್ತದೆ ಎಂದು ಯೋಚಿಸಿದನು.


ಅದೇ ಸಮಯಕ್ಕೆ ಅವನ ಗೆಳೆಯ ಕರೆ ಮಾಡಿ ಅನಿಕೇತ್ ಕೇಳಿದ ಮಾಹಿತಿಯನ್ನು ತಿಳಿಸಿದನು. ಅವನ ಊಹೆಯಂತೆಯೇ ಅಮರ್ ಅನಿಕರ ಕಿಡ್ನಾಪ್ ಹಿಂದಿನ ಕೈಗಳು ಅವರೇ ಎಂದು ಖಚಿತವಾಯಿತು.


ಸಾಕ್ಷಿಗಳ ಸುಳಿವು ಯಾರಿಗೂ ಸಿಗಬಾರದು ಎಂದು ಎಚ್ಚರಿಸಿ ಸಾಕ್ಷಿಗಳು ಜೋಪಾನ ಮಾಡುವಂತೆ ತಿಳಿಸಿ ಕರೆ ತುಂಡರಿಸಿ ತಂದೆಗೆ 99% ಕೇಸ್ ಕಂಪ್ಲೀಟ್ ಎಂದು ತಿಳಿಸಿ ಮುಂಜಾನೆಯ ಸೂರ್ಯ ನಿರೀಕ್ಷೆಯಲ್ಲಿ ಕೇಸ್ ನ ಅಂತಿಮ ಅಂತಕ್ಕೆ ವೇದಿಕೆ ಸಿದ್ದ ಪಡಿಸಲು ಮುಂದಾದನು.


_________________________________________________________________

ಮುಂಜಾನೆ 5 ಗಂಟೆ


ರಾತ್ರಿಯೆಲ್ಲಾ ಮುಂಜಾನೆಯ ಆಗಮನಕ್ಕೆ ಕಾಯುತ್ತಿದ್ದ ಅನಿಕೇತ್ 5 ಗಂಟೆ ಆಗುತ್ತಿದ್ದ ಹಾಗೇಯೆ ಮೊದಲು ಸ್ನಾನ ಮಾಡಿ ರೆಡಿಯಾಗಿ ಚೆನೈ ಪೊಲೀಸ್ ಟೀಮ್ ಗೆ ಕರೆ ಮಾಡಿ ರಾಮನಾಥ್ ರವರ ಗೆಸ್ಟ್ ಹೌಸ್ ಬಳಿ ಯಾರಿಗೂ ಕಾಣದಂತೆ ಇರುವಂತೆ ತಿಳಿಸಿ ತಾನು ತಿಳಿಸಿದಾಗ ಗೆಸ್ಟ್ ಹೌಸ್ ನ ಒಳಗೆ ಬರುವಂತೆ ತಿಳಿಸಿ ಗೆಸ್ಟ್ ಹೌಸ್ ಕಡೆ ಹೊರಟನು.


ಹೋಗುವ ಮೊದಲು ಜೊತೆಯಲ್ಲಿ ತನ್ನ ಸೇಫ್ಟಿಗೆ ರಿವಲ್ವಾಲ್ ಹಿಡಿದು ಹೊರಟನು. ಅವನು ಗೆಸ್ಟ್ ಹೌಸ್ ತಲುಪುವ ಮೊದಲೇ ಪೊಲೀಸ್ ಪಡೆ ಹಾಜರಾಗಿತ್ತು. ಅಲ್ಲಿ ಯಾರ್ ಯಾರು ಎಲ್ಲೆಲ್ಲಿ ಇರಬೇಕು ಎಂದು ತಿಳಿಸಿ ಅವರ ಬಳಿ ಇರುವ ವಾಕಿ ಟಾಕಿ ಪಡೆದು ಅಲ್ಲಿನ ವಾಚ್ ಮ್ಯಾನ್ ನ ಕಣ್ಣು ತಪ್ಪಿಸಿ ಒಳಹೊಕ್ಕನು.


ಅವನು ನಿರೀಕ್ಷಿಸಿದಂತೆ ಸುಮಾರು 6 ಗಂಟೆಯ ಹೊತ್ತಿಗೆ ಬಸವ ಮತ್ತು ಮುನ್ನರಾ ಬಾಸ್ ಗೆಸ್ಟ್ ಹೌಸ್ ಪ್ರವೇಶಿಸಿದರು. ಪೊಲೀಸ್ ಪಡೆಯ ಜೊತೆಗೆ ಅಲ್ಲಿನ ಕಮೀಷನರ್ ಜೊತೆಗೆ ಇದ್ದಿದ್ದರಿಂದ ಆ ವ್ಯಕ್ತಿಗಳನ್ನು ಅಷ್ಟೊತ್ತಲ್ಲಿ ಅಲ್ಲಿ ಕಂಡು ಅವರು ಆಶ್ಚರ್ಯ ಪಟ್ಟರು ಜೊತೆಗೆ ಗೋಮುಖ ವ್ಯಾಘ್ರರು ಎಂಬ ಬಿರುದನ್ನು ಕೊಟ್ಟರು.


________________________________________________________


"ರಾಹುಲ್ ಎದ್ದೇಳೋ ಅವಾಗಲೇ 5 ಗಂಟೆ ಆಯ್ತು" ಎಂದು ರಾಜೀವ್ ಟ್ರಾವೆಲ್ ಮಾಡಿ ಸುಸ್ತಾಗಿ ಮಲಗಿದ್ದ ರಾಹುಲ್ ನನ್ನು ಒಂದೇ ಸಮನೆ ಎಚ್ಚರಿಸುತ್ತಿದ್ದನು.


ಸುಸ್ತಿಗೆ ರಾಹುಲ್ ತಂದೆಯರ ಬೆಂಬಲ ದೊರಕುವುದು ಎಂದು ನಂಬಿ ಯಾವುದೇ ಚಿಂತೆಯಿಲ್ಲದೆ ಮಲಗಿದ್ದರೆ ರಾಜೀವ್ ಗೆ ಭಯದಲ್ಲಿ ನಿದ್ದೆಯೇ ದೂರಾಗಿತ್ತು.


"ರಾಜಿ ಸುಸ್ತಾಗಿದೆ ಮಲ್ಗೋಕೆ ಬಿಡೋ" ಎಂದು ತಿರುಗಿ ಮುಸುಕೊದ್ದು ಮಲಗಿದನು.


ತಿರುಗಿ ಮಲಗಿದ ರಾಹುಲ್ ನನ್ನು ಕಂಡ ರಾಜೀವ್ ಮಂಚದಿಂದ ಕೆಳಗೆ ಬೀಳುವಂತೆ ಒದ್ದು ಬೀಳಿಸಿ "ನನಗೆ ಇಲ್ಲಿ ಪ್ರಾಣ ಹೋಗೊ ತರ ಆಗ್ತಾ ಇದೆ ಇವನಿಗೆ ನಿದ್ದೆ ಎದ್ದೆಳೋ ಪಾಪಿ" ಎಂದನು.


"ಥೂ ನನ್ನ ಕರ್ಮ ಲೋ ರಾಜಿ 6 ಗಂಟೆ ಆಗಲಿ ಇರೋ ಅಪ್ಪನಿಗೆ ಫೋನ್ ಮಾಡಿ ಪೊಲೀಸ್ ಜೊತೆ ಬರೋಕೆ ಹೇಳೋಣ ಯಾಕಿಷ್ಟು ಭಯ ಪಡ್ತೀಯಾ" ಎಂದು ಹೇಳುತ್ತಾ ಸೊಂಟ ಹಿಡಿದುಕೊಂಡೆ ಬಾತ್ ರೂಂ ಹೊಕ್ಕನು.


"ಥೂ ಇವನೊಬ್ಬ ನಾನ್ ನನ್ನ ಲೈಫ್ ಸ್ಮೂತ್ ಅಂಡ್ ಸಾಫ್ಟ್ ಇರಲಿ ಅಂತ ಬಯಸಿದರೆ ಇಲ್ಲಿ ಏನೇನೋ ಆಗ್ತಾ ಇದೆ ನನ್ನ ಭಾವನೆನ ಅರ್ಥ ಮಾಡಿಕೊಳ್ಳದೆ ಇವಾಗ ಅರ್ಧ ಗಂಟೆ ಆ ಶವರ್ ಕೆಳಗೆ ನಿಲ್ತಾನೆ" ಎಂದು ಗೊಣಗಿಕೊಂಡೆ ಕುಳಿತನು.


"ಲೋ ರಾಜಿ ಜಾಸ್ತಿ ಯೋಚನೆ ಮಾಡಬೇಡ ಮೊದಲು ಹೋಗಿ ಸ್ನಾನ ಮಾಡಿ ಬಾ ನಾನ್ ಅಷ್ಟರಲ್ಲಿ ಅಪ್ಪನಿಗೆ ಅಂಕಲ್ ಗೆ ವಿಷಯ ತಿಳಿಸ್ತಿನಿ" ಎಂದು ಬಂದ ರಾಹುಲ್ ಟವೆಲ್ ಕೊಟ್ಟು ಬಲವಂತದಿಂದ ಬಾತ್ ರೂಂ ಗೆ ತಳ್ಳಿ ಫೋನ್ ಹಿಡಿದು ಕೂತನು.


____________________________________________________________



"ಬಸವ ಬಾಸ್ ಬರೋ ಟೈಂ ಆಯ್ತು ಹೊರಗಡೆ ಯಾರು ಇಲ್ಲ ಅನ್ನೋದನ್ನ ನೋಡಿ ಬಾ" ಎಂದು ಮುನ್ನ ಬಸವನನ್ನು ಕಳುಹಿಸಿದನು.


"ಲೋ ವಿಜ್ಞಾನಿ ಎದ್ದೇಳೋ ಮೇಲೆ ಸಾಕು ಮಲ್ಗಿದ್ದು ಇವತ್ತು ನಮ್ಮ ಬಾಸ್ ಬರ್ತಾರೆ ಅವರು ಕೇಳಿದನ್ನ ನಕರ ಮಾಡದೇ ಕೊಟ್ರೇ ಇವತ್ತು ಇಲ್ಲಿಂದ ನಿನ್ನ ಬಿಡುಗಡೆ" ಎಂದು ಮುನ್ನ ಅಮರ್ ಮೇಲೆ ನೀರು ಹಾಕಿ ಎಚ್ಚರಿಸಿದನು.


"ಮುನ್ನ ಹೊರಗಡೆ ವಾಚ್ ಮ್ಯಾನ್ ಬಿಟ್ಟರೆ ಯಾರು ಇಲ್ಲ ಇವಾಗಲೇ ಬಾಸ್ ಇಲ್ಲಿಗೆ ಬಂದ್ರೆ ಬೇಗ ಕೆಲಸ ಮುಗಿಸ ಬಹುದು ಯಾರಿಗೂ ಅನುಮಾನ ಬರಲ್ಲ ಫೋನ್ ಮಾಡಿ ಬರೋಕೆ ಹೇಳು" ಎಂದು ಬಸವ ಹೇಳಿದನು.


"ಅದು ಸರಿನೇ ನಾನೇ ಫೋನ್ ಮಾಡ್ತೀನಿ" ಎಂದು ಫೋನ್ ಹಿಡಿದು ಹೊರಟನು.


"ಹಲೋ ಮುನ್ನ ಏನಾಯ್ತು ಏನಾದ್ರು ಸಮಸ್ಯೆನಾ?" ಎಂದು ಅತ್ತಲಿನಿಂದ ಪ್ರಶ್ನಿಸಿದರು.


"ಅಯ್ಯೋ ಅಂತಹದ್ದು ಏನು ಇಲ್ಲ ಬಾಸ್ ಇವನನ್ನ ಜಾಸ್ತಿ ದಿನ ಬಂಧಿಸೋದು ನಮಗೆ ಅಪಾಯ ಪೊಲೀಸ್ ನವರನ್ನ ನಂಬೋಕೆ ಆಗಲ್ಲ ಅದಕ್ಕೆ ನೀವು ಬೇಗ ಇಲ್ಲಿಗೆ ಬಂದ್ರೆ ಜನಗಳದ್ದು ಮೀಡಿಯದವರದ್ದು ಯಾರ ದೃಷ್ಟಿನೂ ಬೀಳಲ್ಲ ಬೇಗ ಕೆಲಸ ಮುಗಿಸಬಹುದು ಅಂತ ಬರೋಕೆ ಹೇಳೋಣ ಫೋನ್ ಮಾಡಿದ್ದು" ಎಂದನು.


"ಪರ್ವಾಗಿಲ್ಲ ನಿನಗೂ ತಲೆ ಇದೆ ಇನ್ನು ಅರ್ಧಗಂಟೆಯಲ್ಲಿ ಅಲ್ಲಿ ಇರ್ತಿವಿ ನೀವು ಹುಷಾರು" ಎಂದು ಕರೆ ತುಂಡರಿಸಿ ಗೆಸ್ಟ್ ಹೌಸ್ ಕಡೆ ಹೊರಡಲು ತಯಾರಾದರು.


________________________________________________________


"ಹಲೋ ಅಪ್ಪ" ಎಂದು ರಾಹುಲ್ ಮಾತನಾಡಿದನು.


"ಹಲೋ ರಾಹುಲ್" ಎಂದು ರಾಮನಾಥ್ ಉತ್ತರಿಸಿದರು.


"ಅಪ್ಪ ಒಂದು ಮುಖ್ಯವಾದ ವಿಷಯ ಮಾತನಾಡಬೇಕಿತ್ತು" ಎಂದು ನೇರವಾಗಿ ಮಾತಿಗೆ ಬಂದನು.


"ರಾಹುಲ್ ನಾನು ಅದಕ್ಕಿಂತ ಮುಖ್ಯವಾದ ಕೆಲಸದ ಮೇಲೆ ಹೋಗಬೇಕು ಈಗಾಗಲೇ ಲೇಟ್ ಆಯ್ತು ಸಂಜೆ ನಾನೇ ಕಾಲ್ ಮಾಡ್ತೀನಿ ಬಾಯ್" ಎಂದು ರಾಹುಲ್ ಗೆ ಮಾತನಾಡಲು ಅವಕಾಶಕೊಡದೆ ಕಾಲ್ ಕಟ್ ಮಾಡಿದರು.


"ರಾಹುಲ್ ಕಾಲ್ ಮಾಡಿದ್ಯ" ಎಂದು ರಾಜೀವ್ ಬಾತ್ ರೂಂ ನಿಂದ ತಲೆ ಹೊರೆಸುತ್ತಾ ಬಂದೆ ಕೇಳಿದನು.


"ಮಾಡಿದ್ದೆ ವಿಷಯ ಹೇಳೋ ಮುಂಚೆ ಬ್ಯೂಸಿ ಅಂತ ಹೇಳಿ ಕಾಲ್ ಕಟ್ ಮಾಡಿದ್ರು" ಎಂದು ಬೇಸರದಲ್ಲಿ ಹೇಳಿದನು.


"ಇರು ನಾನ್ ಕಾಲ್ ಮಾಡಿ ನೋಡ್ತಿನಿ" ಎಂದು ಫೋನ್ ಹಿಡಿದು ತನ್ನ ತಂದೆಗೆ ಕಾಲ್ ಮಾಡಿದನು. ಆದರೇ ಆ ಕಡೆಯಿಂದ ಬಂದ ಉತ್ತರ ನೀoಗಳ್ ಡಯಲ್ ಸೆಯ್ದ ವಾಡಿಕ್ಕಯಾಳರ್ ಎಂದ ಅಳಯ್ಪ್ಪುಗಳಯ್ಯುಂ ಪೆರವಿಲ್ಲಯ್. ಮೀoಡುo ಮುಯರ್ಚಿಕ್ಕವುಮ್ (ನೀವು ಕರೆ ಮಾಡಿರುವ ಚಂದದಾರರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ) ಎಂದು ಬರುತ್ತಲೆ ಇತ್ತು. ರಾಜೀವ್ ತನ್ನ ಕೋಪ ಅಸಹಾಯಕತೆ ಎಲ್ಲವನ್ನು ಫೋನ್ ಮೇಲೆ ತೋರಿಸುವವನ್ನು ತಕ್ಷಣ ರಾಹುಲ್ ತಡೆದು ಸಮಾಧಾನಿಸಿದನು.


ಅರ್ಧ ಗಂಟೆಯ ಬಳಿಕ ಕಾರಿನ ಸದ್ದು ಕೇಳಿ ಬಸವ ಮತ್ತು ಮುನ್ನ ಬಾಗಿಲಿಗೆ ಬಂದರೆ ರಾಹುಲ್ ಮತ್ತು ರಾಜೀವ್ ಬಾಲ್ಕನಿಗೆ ಬಂದರು. ಯಾರು ಇರಬಹುದು ಎಂದು ಕುತೂಹಲದಿಂದ ವೀಕ್ಷಿಸುತ್ತಿದ್ದ ಇಬ್ಬರಿಗೂ ಕಾರ್ ನಿಂದ ಇಳಿದ ವ್ಯಕ್ತಿಗಳನ್ನು ಕಂಡು ಶಾಕ್ ನಿಂದ ನಿಂತವರ ಬಾಯಿಂದ ಬಂದ ಮಾತು "ಅಪ್ಪ" ಎನ್ನುವುದು.


"ರಾಜಿ ಇದೇನೋ ನಾವ್ ಕನಸು ಕಾಣ್ತಾ ಇಲ್ಲ ತಾನೇ" ಎಂದು ರಾಹುಲ್ ತನ್ನ ಅನುಮಾನ ವ್ಯಕ್ತಪಡಿಸಿದನು. ಅಷ್ಟರಲ್ಲಿ ರಾಜೀವ್ ರಾಹುಲ್ ಕೈ ಚಿವುಟಿದನು. "ಔಚ್, ಯಾಕೋ ಗಿಂಡಿದೆ" ಎಂದು ರಾಹುಲ್ ಕೇಳಿದನು.


"ನೀನೇ ತಾನೇ ಕನಸೋ ಅಲ್ವೋ ಅಂತ ಕೇಳಿದ್ದು ಅದನ್ನ ಕನ್ಫರ್ಮ್ ಮಾಡೋಕೆ ಚಿವುಟಿದ್ದು" ಎಂದನು.


"ಸರಿ ಇದು ಬಿಡು, ಬೇಗ ನೀನು ನಿನ್ನ ಪ್ರೋಫೈಲ್ ಮೂಲಕ ಫೇಸ್ ಬುಕ್ ಲೈವ್ ಬಾ, ನಾನು ಯೂಟೂಬ್ ಮೂಲಕ ಲೈವ್ ಬರ್ತೀನಿ ಇನ್ನು ಭಯ ಪಡ್ತಾ ಕೂತ್ರೆ ನಾವು ಈ ದೇಶ ದ್ರೋಹಿಗಳ ಮಕ್ಕಳು ಎಂಬ ಹಣೆ ಪಟ್ಟಿ ಬೀಳುತ್ತೆ. ಇವತ್ತೆ ಇವರ ಮಕ್ಕಳಾಗಿ ಹುಟ್ಟಿದ ತಪ್ಪಿಗೆ ಇವರ ಆಟನಾ ಅಂತ್ಯ ಮಾಡೋಣ ಬಾ" ಎಂದು ಇಬ್ಬರು ಲೈವ್ ಹೋಗಿ ಮೊದಲು ತನ್ನ ಸ್ನೇಹಿತರಿಗೆ ವಿಡಿಯೋ ನೋಡುವಂತೆ ಹೇಳಿ ಎಲ್ಲರಿಗೂ ಆದಷ್ಟು ಬೇಗ ಲಿಂಕ್ ಶೇರ್ ಮಾಡಿ ಎಂದು ಹೇಳಿದರು. ನಂತರ ಅಲ್ಲಿರುವವರಿಗೆ ಮೊಬೈಲ್ ಕಾಣದಂತೆ ಇಟ್ಟುಕೊಂಡು ತಮ್ಮ ತಂದೆಯರ ಬಳಿ ಹೋದರು.


_______________________________________________________________________________



"ಗುಡ್ ಮಾರ್ನಿಂಗ್ ಬಾಸ್" ಎಂದು ಎದುರಿಗೆ ಬಂದ ಕಾಳೇಗೌಡ ಮತ್ತು ರಾಮನಾಥ್ ರವರಿಗೆ ಹೇಳಿದರು.


"ಗುಡ್ ಮಾರ್ನಿಂಗ್ ಲೇ ಬಸವ ಮುನ್ನ" ಅವನು ಹೇಗೆ ಇದ್ದಾನೆ" ಎಂದು ರಾಮನಾಥ್ ಪ್ರಶ್ನಿಸಿದರು.


"ಚೆನ್ನಾಗಿ ಇದ್ದಾನೆ ಬಾಸ್" ಎಂದು ಮುನ್ನ ಉತ್ತರಿಸಿದನು.


"ಮಾತನಾಡೋ ಸ್ಥಿತಿಯಲ್ಲಿ ಇದ್ದಾನಾ?" ಎಂದು ಕಾಳೇಗೌಡ ಪ್ರಶ್ನಿಸಿದರು.


"ಹ ಬಾಸ್ ಮಾತಾಡ್ತಾನೆ" ಎಂದು ಬಸವ ಹೇಳಿದನು.


"ನಡಿ ಎಲ್ಲಿ ತೋರಿಸು ಅವರನ್ನ" ಎಂದು ಅವರ ಜೊತೆ ಇವರು ಒಳಗೆ ಹೋದರು.


ಬಸವ ಮತ್ತು ಮುನ್ನ ಅವರಿಗೆ ಅಮರ್ ಇರುವ ರೂಂ ತೋರಿಸಿದರು.


"ಸರಿ ನೀವ್ ಹೊರಗಡೆ ಇರಿ ನಾವ್ ಕರೆದಾಗ ಬನ್ನಿ" ಎಂದು ಕಾಳೇಗೌಡ ಅವರನ್ನು ಹೊರಗಡೆ ಕಳುಹಿಸಿದನು.


"ಅವರನ್ನ ಯಾಕೆ ಕಳುಹಿಸಿದೆ" ಎಂದು ರಾಮನಾಥ್ ಪ್ರಶ್ನಿಸಿದನು.


"ನಾವ್ ಯಾಕೆ ಇವನನ್ನ ಕಿಡ್ಸಾಪ್ ಮಾಡಿದ್ದೀವಿ ಅನ್ನೋ ಈ ವಿಷಯ ನಮ್ಮ ಬಳಿ ಮಾತ್ರ ಇರಲಿ ಇವರಿಗೆ ಗೊತ್ತಾಗೋದು ಬೇಡ ಮುಂದೆ ಇವರೆ ನಮಗೆ ಉಲ್ಟಾ ಹೊಡೆದರೆ ಕಷ್ಟ" ಎಂದು ಹೇಳಿದನು.


"ಅದು ಸರಿನೇ ನಡಿ ಅವನ ಹತ್ತಿರ ಮಾತನಾಡಿ ಒಪ್ಪಿಸೋಣ ಒಪ್ಪಲಿಲ್ಲ ಅಂದರೆ ಆ ಡಿ. ಸಿ ಅವನ ಪ್ರೇಯಸಿ ಅನಿಕ ಹೋದ ಜಾಗಕ್ಕೆ ಇವನನ್ನು ಕಳಿಸೋಣ" ಎಂದು ಹೇಳಿ ಅಮರ್ ಇರುವ ಬಳಿ ಹೊರಟರು. ಅಷ್ಟರಲ್ಲಿ ಅಪ್ಪ ಎನ್ನುವ ಶಬ್ದ ಕೇಳಿ ಅಲ್ಲೇ ನಿಂತರು.


_______________________________________________________


ಮರೆಯಲ್ಲಿ ಇದ್ದ ಅನಿಕೇತ್ ಅವರ ಹಿಂದೆಯೇ ಒಳ ಹೋಗಿ ಅವರ ಸಂಭಾಷಣೆಯನ್ನು ರೆಕಾರ್ಡ್ ಮಾಡಲು ನೋಡಿದನು. ಜೊತೆಗೆ ನಾಲ್ವರು ಪೊಲೀಸ್ ಅಲ್ಲಿಗೆ ಬರುವಂತೆ ಹೇಳಿದನು. ಅಷ್ಟರಲ್ಲಿ ಬಸವ ಮತ್ತು ಮುನ್ನ ಹೊರ ಬಂದಿದ್ದನು ಕಂಡು ಅವರ ಹಿಂದೆಯಿಂದ ಬಂದು ಅವರು ಮಾತನಾಡುವ ಮುಂಚೆ ಪೊಲೀಸ್ ರವರ ಸಹಕಾರದೊಂದಿಗೆ ಬಂಧಿಸಿದರು.


_____________________________________________________________



"ರಾಹುಲ್, ರಾಜೀವ್ ನೀವ್ ಏನು ಇಬ್ರು ಇಲ್ಲಿ ಯಾವಾಗ ಬಂದ್ರಿ" ಎಂದು ರಾಮನಾಥ್ ಆತಂಕದಿಂದಲೇ ಪ್ರಶ್ನಿಸಿದರು.


"ಅಂಕಲ್, ಅಪ್ಪ ನಾವು ರಾತ್ರಿನೇ ಬಂದ್ವಿ" ಎಂದು ರಾಜೀವ್ ಹೇಳಿದನು.


"ನೀವ್ ಬಂದಿರೋದು ಬರೋದನ್ನ ನಮಗೆ ಯಾಕ್ರೋ ಹೇಳಲಿಲ್ಲ" ಎಂದು ಕಾಳೇಗೌಡ ಗದರಿದನು.


"ಅಂಕಲ್ ನಾವ್ ಇಲ್ಲಿಗೆ ಒಂದು ಮುಖ್ಯವಾದ ವಿಷಯದ ಬಗ್ಗೆ ಮಾತಾಡೋಕೆ ಅಂತ ಬಂದ್ವಿ ಮನೆಗೆ ಬಂದು ಮಲ್ಗಿರೋರ ನಿದ್ದೆ ಹಾಳು ಮಾಡೋದು ಬೇಡ ಅಂತ ಇಲ್ಲಿಗೆ ಬಂದ್ವಿ" ಎಂದು ರಾಹುಲ್ ಹೇಳಿದನು.


"ಏನದು ಅಂತ ಮುಖ್ಯವಾದ ವಿಷಯ" ಎಂದು ರಾಮನಾಥ್ ಕೇಳಿದನು.


"ಆ ವಿಷಯ ಬಿಡಿ ಅದಕ್ಕಿಂತ ಮುಖ್ಯವಾದ ಮತ್ತೊಂದು ವಿಷಯ ಇದೆ" ಎಂದು ಗುಟ್ಟು ಹೇಳುವಂತೆ ಹೇಳಿದನು.


"ಏನದು" ಎಂದು ಕಾಳೇಗೌಡ ಕೇಳಿದನು.


"ಅಪ್ಪ, ಅಂಕಲ್ ನೀವು ರಾಜಕೀಯದಲ್ಲಿ ಇದ್ದು ವೇಸ್ಟ್, ನಿಮ್ ಜೊತೆ ಇರೋ ಆ ಬಸವ ಮತ್ತೆ ಮುನ್ನನ ನೋಡಿ ಕಲಿರಿ ನೀವು ಬರಿ ಜನ ಸೇವೆ ಜನ ಸೇವೆ ಅಂತ ಅಂದುಕೊಂಡು ನಮ್ಮನ್ನ ಉದ್ದಾರ ಮಾಡೋ ಯಾವ ಲಕ್ಷಣನೂ ಕಾಣ್ತಿಲ್ಲ ಅದೇ ಅವರು ಆ ಸೈಂಟಿಸ್ಟ್ ಅಮರ್ ನ ಕಿಡ್ನಾಪ್ ಮಾಡಿ ದುಡ್ಡು ಮಾಡೋ ದಾರಿ ನೋಡ್ತಾ ಇದಾರೆ ಅವರ ಮುಂದೆ ನೀವು ವೇಸ್ಟ್" ಎಂದು ರಾಹುಲ್ ನಾಟಕೀಯವಾಗಿ ಅಸಮಾಧಾನ ಇರುವಂತೆ ಹೇಳಿದನು.


ಅವರ ಮಾತುಗಳನ್ನು ಕೇಳಿದ ಕಾಳೇಗೌಡ ಮತ್ತು ರಾಮನಾಥ್ ಗಹಗಹಿಸಿ ನಕ್ಕರೇ ಅನಿಕೇತ್ ಅಪ್ಪ ಮಕ್ಕಳು ಸರಿಯಾಗಿ ಇದಾರೆ ದೇಶ ಹಾಳು ಮಾಡೋಕೆ ಇಂತವರು ಊರಿಗೆ ಒಬ್ರು ಇದ್ರೆ ಸಾಕು ಎಂದುಕೊಂಡನು.


ಈ ಸುದ್ಧಿ ಎಲ್ಲ ಕಡೆ ವ್ಯಾಪಿಸಿತ್ತು, ಜನರ ಮನದಲ್ಲೂ ಇವರ ಬಗ್ಗೆ ಅಸಹ್ಯ ಭಾವನೆ ಮೂಡಿತ್ತು. ಕ್ಷಣಾರ್ಧದಲ್ಲೇ ಪೂಜಾಳ ಮನಸ್ಸು ರಾಜೀವ್ ನನ್ನು ಪ್ರೀತ್ಸಿದಕ್ಕೆ ಪಶ್ಚಾತಾಪ ಪಡುತ್ತಿತ್ತು. ರಾಜೀವ್ ಪೂಜಾಳಿಗೆ ಲೈನ್ ಬರಲು ಹೇಳಿದಾಗ ಅವಳು ತಮ್ಮ ಮದುವೆ ವಿಷಯ ಎಂದು ಭಾವಿಸಿ ಸೂರ್ಯ ರವರ ಮನೆಯವರ ಜೊತೆಗೆ ತನ್ನ ಮನೆಯವರು ಮತ್ತು ಆಕಾಂಕ್ಷ ಮನೆಯವರು ಎಲ್ಲ ಒಟ್ಟಿಗೆ ಇರಲು ನಿರ್ಧರಿಸಿ ಎಲ್ಲರನ್ನು ಸೂರ್ಯರವರ ಮನೆಗೆ ಬರುವಂತೆ ತಿಳಿಸಿ ಹೇಳಿದ್ದರಿಂದ ಎಲ್ಲರು ಒಂದೇ ಕಡೆಯಲ್ಲಿ ಆ ದೃಶ್ಯವನ್ನು ನೋಡುತ್ತಿದ್ದರು.


ಪೂಜಾಳನ್ನು ಗಮನಿಸುತ್ತಿದ್ದ ಆಕಾಂಕ್ಷ ಏನೋ ಹೊಳೆದವಳಂತೆ ಪೂಜಾಳಿಗೆ ಸಮಾಧಾನಿಸುವ ರೀತಿಯಲ್ಲಿ ಸೂರ್ಯರವರನ್ನು ಕುರಿತು "ಮಾವ ಇರುವ ಲೈವ್ ಬಂದು ತಮ್ಮ ಮಾನ ಜೊತೆ ಪ್ರೇಸ್ಟೀಜ್ ಕಳೆದುಕೊಳ್ಳೊ ಕೆಲಸ ಮಾಡ್ತಾ ಇದಾರೆ ಅಂದರೆ ಇವರು ಅಮರ್ ನ ಯಾವ ವಿಷಯಕ್ಕೆ ಕಿಡ್ನಾಪ್ ಮಾಡಿದ್ದಾರೆ ಅನ್ನೋದನ್ನ ಜನರಿಗೆ ತಿಳಿಸೋ ಪ್ರಯತ್ನದಲ್ಲಿ ತಮ್ಮನ್ನ ತಾವೇ ದೂಷಿಸಿಕೊಳ್ತಾ ಇದಾರೆ ಅನ್ಸುತ್ತೆ ಅಲ್ವ" ಎಂದಳು.


"ಹೌದು ನನಗೂ ಹಾಗೇ ಅನ್ಸುತ್ತೆ" ಎಂದರು.


ಆಕಾಂಕ್ಷಳ ಮಾತು ಕೇಳಿದ ಪೂಜಾ ಮನಸ್ಥಿತಿ ಡೋಲಾಯಮಾನವಾಗಿತ್ತು.


________________________________________________



ರಾಹುಲ್ ಮಾತು ಕೇಳಿ ನಗುತ್ತಿದ್ದ ಕಾಳೇಗೌಡ ಮತ್ತು ರಾಮನಾಥ್ ನನ್ನು "ನೀವ್ ಇಬ್ಬರು ಯಾಕೆ ಈ ರೀತಿ ನಗ್ತಾ ಇದೀರಾ?" ಎಂದು ರಾಜೀವ್ ಅಮಾಯಕನಂತೆ ಪ್ರಶ್ನಿಸಿದನು.


"ಕೆಲವೊಮ್ಮೆ ನಿಮ್ಮಿಬ್ಬರನ್ನ ನೋಡಿ ನೀವು ಯಾಕಾದ್ರು ಹುಟ್ಟಿದ್ರೋ ಅನಿಸೋದು ನಮಗೆ" ಎಂದು ಕಾಳೇಗೌಡ ಹೇಳಿದರೆ ಅವನಿಗೆ ಹೊಂದಿಕೆಯಾಗುವಂತೆ ರಾಮನಾಥ್ "ಹುಲಿ ಹೊಟ್ಟಿಲಿ ಹುಲಿನೇ ಹುಟ್ಟೊದು ಅನ್ನೋದು ನೀವು ಇವತ್ತು ಫ್ರೂವ್ ಮಾಡಿದ್ರಿ" ಎಂದನು.


"ಇಷ್ಟು ದಿನ ನೀವು ನ್ಯಾಯ ನೀತಿ ಧರ್ಮ ಅನ್ನೋದನ್ನ ನೋಡಿ ನಮಗೆ ನೀವುಗಳೇ ಕಂಟಕ ಅಂತ ಭಾವಿಸಿ ನಿಮ್ಮನ್ನ ನಮ್ಮಿಂದ ದೂರ ಇಟ್ಟಿದ್ವಿ ಆದ್ರೆ ಇವತ್ತು ಈ ನಿಮ್ಮ ಮಾತು ಕೇಳಿ ನಿಮಗೆ ಜನ್ಮ ಕೊಟ್ಟಿದ್ದು ಸಾರ್ಥಕ ಆಯ್ತು ಅನಿಸ್ತಾ ಇದೆ" ಎಂದು ಕಾಳೇಗೌಡ ಹೇಳಿದನು.


"ಅಂದ್ರೆ ನಿಮ್ಮ ಮಾತಿನ ಅರ್ಧ ಏನು ಅಂಕಲ್" ಎಂದು ರಾಹುಲ್ ಕೇಳಿದನು.


"ಇವಾಗ ನೀನೆ ಹೇಳಿದ್ಯಲ್ಲ ಬಸವ ಮತ್ತು ಮುನ್ನರ ಮುಂದೆ ನಾವ್ ವೇಸ್ಟ್ ಅಂತ ಅದು ಸುಳ್ಳು" ಎಂದು ರಾಮನಾಥ್ ಹೇಳಿದನು.


"ಅಂದ್ರೇ?" ಎಂದು ರಾಜೀವ್ ಮತ್ತೆ ಪ್ರಶ್ನಿಸಿದನು.


"ಅಂದ್ರೆ ಆ ಅಮರ್ ನ ಕಿಡ್ನಾಪ್ ಮಾಡಿರೋದು ಅವರಿಬ್ಬರು ಆದ್ರು ಮಾಡಿಸಿರೋದು ನಾವಿಬ್ಬರು" ಎಂದು ಹೇಳಿ ಕಾಳೇಗೌಡ ಮತ್ತೆ ವಿಕೃತವಾಗಿ ನಗಲು ಆರಂಭಿಸಿದನು.


"ಹೇ ಸಾಕು ನಿಲ್ಸು ಅಪ್ಪ" ಎಂದು ರಾಜೀವ್ ಜೋರಾಗಿ ಹೇಳಿದನು. ಅವನ ಧ್ವನಿಗೆ ಬೆಚ್ಚಿ ತನ್ನ ನಗುವನ್ನು ನಿಲ್ಲಿಸಿದನು.


"ಆ ಅಮರ್ ಎಲ್ಲಿ?" ಎಂದು ರಾಜೀವ್ ಪ್ರಶ್ನಿಸಿದನು.


"ಆ ರೂಂ ನಲ್ಲಿ" ಎಂದು ರಾಮನಾಥ್ ಹೇಳಿದನು.


"ಬನ್ನಿ" ಎಂದು ಎಲ್ಲರನ್ನು ಕರೆದುಕೊಂಡು ಅಮರ್ ಇರುವ ಬಳಿ ಹೋಗಿ "ನಿಮಗೆ ಬುದ್ಧಿ ಇಲ್ವ ಹೋಗಿ ಹೋಗಿ ಈ ಬಡ ಸೈಟಿಂಸ್ಟ್ ನ ಕಿಡ್ನಾಪ್ ಮಾಡಿದ್ದೀರಾ, ಇದರಿಂದ ನಿಮಗೆ ಏನಾದ್ರೂ ಲಾಭ ಇದೀಯಾ?" ಎಂದು ಮತ್ತೆ ಪ್ರಶ್ನಿಸಿದನು.


"ನಿಮ್ಮ ಮಾತಿನ ಅರ್ಥ ಏನು ರಾಜಿ" ಎಂದು ರಾಹುಲ್ ಕೇಳಿದನು.


"ಈ ಸೈಂಟಿಸ್ಟ್ ಗಳು ಬಣ್ಣ ಬಣ್ಣದ ನೀರು ಇಟ್ಕೊಂಡು, ಡ್ರೈ ಐಸ್ ಮೂಲಕ ಹೊಗೆ ಆಡಿಸಿಕೊಂಡು, ಎರಡು ಮೂರು ಬಣ್ಣದ ನೀರು ಹಾಕಿ ಅದಕ್ಕೆ ಚೂರು ಹೊಗೆ ಬಿಟ್ಟು ಯಾವುದೋ ಒಂದಕ್ಕೆ ಫಾರ್ಮುಲಾ ಕಂಡುಹಿಡಿದೀವಿ ಅಂತ ಬಿಗ್ತಾರೆ ಅದನ್ನೆ ಸರ್ಕಾರದವರು ಪ್ರಯೋಗ ಮಾಡೋಕೆ ಹೇಳ್ತಾರೆ ಇವರು ಮಾಡ್ತಾರೆ ಅದು ತೋಪೆದ್ದು ಹೋಗುತ್ತೆ ಆಮೇಲೆ ಇವರನ್ನು ಗಡಿಪಾರು ಹೆಸರಲ್ಲಿ ವಿದೇಶಕ್ಕೆ ಓಡಿಸ್ತಾರೆ. ಅಲ್ಲಿನವರ ಬೆಂಬಲ ಸಿಕ್ಕಿ ಇನ್ನು ಜಾಸ್ತಿ ಪ್ರಾಕ್ಟೀಸ್ ಮಾಡಿ ಅಲ್ಲಿ ಏನಾದ್ರು ಸ್ಟ್ರಾಂಗ್ ಆಗಿರೋದನ್ನ ಕಂಡುಹಿಡಿತಾರೆ. ಅದನ್ನ ನಮ್ಮಲ್ಲಿ ಎರಡು ಪಟ್ಟು ರೇಟ್ ಗೆ ಸೇಲ್ ಮಾಡ್ತಾರೆ ಇಲ್ಲಿನವರಾದರು ಅಲ್ಲಿಗೆ ಲಾಭ ಮಾಡ್ತಾರೆ ಇಂತವರಿಂದ ನಿಮಗೆ ಏನು ಲಾಭ" ಎಂದು ಕೇಳಿದನು.


"ಅದಕ್ಕೆ ಮಗನೇ ಇವರನ್ನ ಪರದೇಶಕ್ಕೆ ಓಡ್ಸಿದ್ರೇ ನಮಗೇನು ಲಾಭ ಇಲ್ಲ ಅಂತ ಇಲ್ಲಿ ಬಂಧಿಸಿದರು" ಎಂದು ಕಾಳೇಗೌಡ ಗರ್ವದಿಂದ ಹೇಳಿದನು.


"ಅಂತ ದೊಡ್ಡ ಘನಂದಾರಿ ಕೆಲಸ ಇವನು ಏನು ಮಾಡಿದ್ದಾನೆ ಅಂಕಲ್" ಎಂದು ರಾಹುಲ್ ಪ್ರಶ್ನಿಸಿದನು.


"ಅದು ಕೇಳೋಕೆ ನಿಮಗೆ ಚಿಕ್ಕ ವಿಷಯವಾದ್ರು ಸರಿಯಾಗಿ ಉಪಯೋಗಿಸಿಕೊಂಡರೆ ತಿಂಗಳಲ್ಲಿ ಲಕ್ಷಾಂತರ ರುಪಾಯಿ ಸಂಪಾದನೆ ಮಾಡಬಹುದು ಅದು ಸರ್ಕಾರಕ್ಕೆ ಗೊತ್ತಾಗೋ ಹಾಗೇ. ಇದರಲ್ಲಿ ಯಾವುದೇ ಕಾಂಪಿಟೇಷನ್ ಸಹ ಇರೋದಿಲ್ಲ ನಾವೇ ರಾಜರು" ಎಂದು ರಾಮನಾಥ್ ಹೇಳಿದನು.


"ಕಾಂಪಿಟೇಷನ್ ಇಲ್ಲದೆ ಇರೋ ಬ್ಯುಸಿನೆಸ್ ಯಾವುದು ಅಪ್ಪ" ಎಂದು ಕೇಳಿದನು.


"ಅದೇ ಮಗ ಇವಾಗ ಕೊರೊನಾ ಬಂದು ಸರಿಯಾಗಿ ಉಸಿರಾಡೋಕೆ ಆಗದೇ ಸತ್ತೊದ್ರಲ್ಲ ಅಂತವರಿಗೆ ಗಾಳಿ ಕೊಡೊ ಬ್ಯುಸಿನೆಸ್" ಎಂದು ಕಾಳೇಗೌಡ ಹೇಳಿದನು.


"ಏನು ಗಾಳಿ ಕೊಡೊ ಬ್ಯುಸಿನೆಸ್ ಹ, ಇದರಲ್ಲಿ ಕಾಂಪಿಟೇಷನ್ ಇಲ್ವ, ಅಂಕಲ್ ಗಾಳಿ ಕೊಡೊಕೆ ಫ್ಯಾನ್ ಮತ್ತೆ ಎಸಿ ಕಂಪನಿಯವರು ತುಂಬಾ ಜನ ಇದಾರೆ ನೀವು ಈ ಬ್ಯುಸಿನೆಸ್ ಗೆ ಕೈ ಹಾಕಿದ್ರೆ ನೀವು ಹೊಗೆನೇ ಜೊತೆಗೆ ಉಸಿರಾಟ ತೊಂದರೆ ಇರೋರಿಗೆ ಫ್ಯಾನ್ ಎಸಿ ಇಂದ ಸರಿ ಹೋಗಲ್ಲ" ಎಂದು ರಾಹುಲ್ ಜೋರಾಗಿ ನಕ್ಕಿದನು.


"ಥೂ ಹೆಬ್ಬೆಟ್ಟುಗಳ ಅದು ಗಾಳಿ ಕೊಡೊದು ಅಲ್ಲ ಆಕ್ಸಿಜನ್ ಕೊಡೊದು, ನಿಮಗೆ ಸರಿಯಾಗಿ ಮಾತಾಡೋಕೆ ಬರೋರಲ್ಲ ನಿಮ್ಮಂತವರನ್ನು ನಮ್ಮ ನಾಯಕರನ್ನಾಗಿ ಮಾಡಿದ್ದಾರೆ ನಮ್ಮ ಬುದ್ಧಿವಂತ ಜನರು" ಎಂದು ಅಮರ್ ಅಸಮಾಧಾನ ಹೊರ ಹಾಕಿದನು.


"ವಾಟ್ ಆಕ್ಸಿಜನ್ ಬ್ಯುಸಿನೆಸ್ ಹ" ರಾಹುಲ್ ಮತ್ತು ರಾಜೀವ್ ಇಬ್ಬರು ಒಟ್ಟಿಗೆ ಕೇಳಿದರು. ಜೊತೆಗೆ ಇವರ ಮಾತುಗಳಿಗೆ ಕಣ್ಣು ಕಿವಿಯಾಗಿ ಅನಿಕೇತ್ ಗೂ ಗೊಂದಲ ಉಂಟಾಯಿತು.


"ಹೂಂ ಹೂಂ ಅದೇ" ಎಂದು ಕಾಳೇಗೌಡ ಹೇಳಿದನು.


"ಇವಾಗ ಏನು ಅಂತ ಸರಿಯಾಗಿ ಹೇಳಿದ್ರೆ ಸರಿ" ಎಂದು ರಾಜೀವ್ ಕೇಳಿದನು.


ಅಮರ್ ನ ಸೂಕ್ಷ್ಮ ಕಣ್ಣಿಗೆ ಹೊರಗಡೆ ಇದ್ದ ಅನಿಕೇತ್ ವಿಡಿಯೋ ಮಾಡುತ್ತಿರುವುದನ್ನು ಕಂಡು "ಅದನ್ನ ನಾನು ಹೇಳ್ತಿನಿ" ಎಂದು ಅಮರ್ ಮಾತು ಶುರು ಮಾಡಿದನು.


"ಸರಿ ಸರಿ ಬೇಗ ಹೇಳು" ಎಂದು ರಾಹುಲ್ ತನ್ನ ಆತುರ ವ್ಯಕ್ತ ಪಡಿಸಿದನು.


"ನಾನ್ ಅಮರ್ ನಾನು ಹುಟ್ಟಿ ಬೆಳೆದದ್ದು ಕಾರವಾರದಲ್ಲಿ ತಂದೆ ತಾಯಿಗೆ ಒಬ್ಬನೇ ಮಗ ನಾನು ಚಿಕ್ಕ ವಯಸ್ಸಿನಲ್ಲಿ ಅಮ್ಮ ನನ್ನ ಯಾವಾಗಲೂ ಬೀಟ್ ಹತ್ತಿರ ಆಟ ಆಡೋಕೆ ಕರೆದುಕೊಂಡು ಹೋಗ್ತಾ ಇದ್ರು. ಅವಾಗ ನನಗೆ ಏನು ಅನಿಸ್ತಾ ಇರಲಿಲ್ಲ ಎಲ್ಲರಂತೆ ಸ್ಕೂಲ್ ಗೆ ಸೇರಿದಾಗ ಜೋಗ ಜಲಪಾತ, ಶಿವನ ಸಮುದ್ರ ಇಲ್ಲೆಲ್ಲಾ ನೀರಿನಿಂದ ಕರೆಂಟ್ ಉತ್ಪಾದಿಸ್ತಾರೆ ಅನ್ನೋದು ಗೊತ್ತಾಯ್ತು. ಅವಾಗ ನನಗೆ ನೀರಿನಿಂದ ಏನಾದ್ರೂ ಕಂಡುಹಿಡಿಯ ಬೇಕು ಅನ್ನೋ ಹಟ ಬಂತು. ಆದರೇ ಏನು ಕಂಡುಹಿಡಿಯ ಬೇಕು ಅನ್ನೋದು ಗೊತ್ತಾಗಲಿಲ್ಲ. ಬರಿ ಇದರ ಬಗ್ಗೆ ಮಾತ್ರ ಯೋಚಿಸ್ತಾ ಇದ್ದೆ ಹೈಸ್ಕೂಲ್ ಗೆ ಬಂದರು ಈ ಯೋಚನೆ ಹೋಗಿರಲಿಲ್ಲ ದಿನ ಕಳೆದಂತೆ ಯೋಚನೆ ಜಾಸ್ತಿ ಆಯ್ತೆ ಹೊರತು ಐಡಿಯಾ ಮಾತ್ರ ಸಿಗಲಿಲ್ಲ. ಇದರಿಂದ ಊಟ ತಿಂಡಿ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಿತು. ಒಮ್ಮೆ ಅಪ್ಪ ಕರೆದು ಕೇಳಿದಾಗ ನನ್ನ ಮನಸಿನ ಗೊಂದಲ ಹೇಳಿದೆ. ಅವಾಗ ಅಪ್ಪ ಒಂದು ಕ್ಯಾಸೆಟ್ ಕೈಗೆ ಕೊಟ್ಟು ಈ ಮೂವಿ ನೋಡು ಏನಾದ್ರು ಹೊಳಿಬಹುದು ಅಂದ್ರು. ಎಷ್ಟು ಪುಸ್ತಕ ಓದಿದರು ಐಡಿಯಾ ಸಿಕ್ಕಿಲ್ಲ .ಇನ್ನು ಪಿಕ್ಚರ್ ನೋಡಿದ್ರೆ ಸಿಗುತ್ತಾ ಅಂತ ಮೂಲೆಗೆ ಹಾಕಿದೆ. ಒಂದು ವಾರದ ನಂತರ ಅಪ್ಪ ಅದರ ಬಗ್ಗೆ ಕೇಳಿದರು. ನಾನ್ ನೋಡಿಲ್ಲ ಅಂಂತ ಹೇಳಿದೆ ಅವಾಗಲೇ ಅಪ್ಪ ಸಿನಿಮಾ ಹಾಕಿ ಪಕ್ಕದಲ್ಲಿ ಕೂರಿಸಿ ಕೊಂಡರು. ಮೊದ ಮೊದಲು ಆ ಹೀರೋನ ತರ್ಲೇ ತುಂಟಾಟ ಹೊಟ್ಟೆ ಪಾಡಿಗೆ ಯಾಮಾರಿಸೋದು ನಂತರ ಲವ್ ಇದೇ ಇತ್ತು. ಇದರಿಂದ ಬೇಜಾರ್ ಆಗಿ ಎದ್ದು ಹೋಗುವಾಗ ಅಪ್ಪ ನನ್ನ ಬಲವಂತವಾಗಿ ಕೂರಿಸಿಕೊಂಡರು. ಸೆಕೆಂಡ್ ಆಫ್ ನಲ್ಲಿ ಹೀರೋ ಡಬಲ್ ಆಕ್ಟಿಂಗ್ ಅದರಲ್ಲಿ ಒಬ್ಬ ಸೈಂಟಿಸ್ಟ್ ದುಷ್ಕರ್ಮಿಗಳಿಂದ ಅವನು ಹುಚ್ಚಾ ಆಗೋದು ಇತ್ತು. ಎಂದು ಅಮರ್ ಹೇಳುತ್ತಿದ್ದರೆ ರಾಹುಲ್ ಮಧ್ಯ ಮಾತನಾಡಿದ.


"ಹೋ ಹೌದ ಇಂಟ್ರಸ್ಟಿಂಗ್ ಯಾವ ಮೂವಿ ಅದು ಯಾರು ಹೀರೋ ಅವನನ್ನ ಯಾಕೆ ಹುಚ್ಚಾ ಮಾಡಿದ್ರು" ಎಂದು ಕೇಳಿದನು.


ರಾಜೀವ್ ಅವನ ತಲೆಯ ಮೇಲೆ ಮೊಟಕಿ" ಇದು ರೆಬಲ್ ಸ್ಟಾರ್ ಅಂಬರೀಷ್ ಅವರ ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ ಕನ್ನಡ ಮೂವಿದು. ಒಬ್ರು ನಿರುದ್ಯೋಗಿ ಅಮ್ಮನ ಹತ್ತಿರ ಬೆಳೆದವನು. ಮತ್ತೊಬ್ಬರು ಸೈಂಟಿಸ್ಟ್ ಅಪ್ಪನ ಹತ್ತಿರ ಬೆಳೆದವನು. ಮಕ್ಕಳು ಚಿಕ್ಕವರಿದ್ದಾಗ ಅಪ್ಪ ಅಮ್ಮ ದೂರಾ ಆಗಿರ್ತಾರೆ ಹಾಗಾಗಿ ಅವರು ಟ್ವಿನ್ಸ್ ಅಂತ ಗೊತ್ತಿರಲ್ಲ. ಸೈಂಟಿಸ್ಟ್ ನೀರಿನಿಂದ ಒಂದು ಫಾರ್ಮುಲಾ ಕಂಡುಹಿಡಿತಾರೆ ಅದನ್ನ ವಿಲ್ಹನ್ಸ್ ತಮ್ಮ ಲಾಭಕ್ಕೆ ಬಳಸೋಕೆ ನೋಡ್ತಾರೆ ಅವಾಗ ಹೀರೋ ಅದನ್ನು ಕೊಡಲು ನಿರಾಕರಿಸಿದಾಗ ಅವನನ್ನು ಬಂಧಿಸಿತ್ತಾರೆ ಜೊತೆಗೆ ಶಾಕ್ ಟ್ರಿಟ್ಮೆಂಟ್ ಕೊಟ್ಟು ಹುಚ್ಚನ ಮಾಡ್ತಾರೆ" ಎಂದು ರಾಜೀವ್ ಹೇಳಿದನು.


"ಆ ಮೂವಿನಲ್ಲಿ ಅವರು ಹುಚ್ಚ ಆದ್ರೋ ಇಲ್ವೋ ಗೊತ್ತಿಲ್ಲ ಇಬ್ರು ಸಿನಿಮಾ ಸ್ಟೋರಿ ಹೇಳಿ ನನ್ನನ್ನ ಮಾತ್ರ ಹುಚ್ಚಾ ಮಾಡ್ತಾ ಇದೀರಾ. ಅವರು ಕಂಡುಹಿಡಿದ ಫಾರ್ಮುಲಾ ಯಾವುದು ಅಂತ ಮಾತ್ರ ಹೇಳಿತ್ತಿಲ್ಲ" ಎಂದು ತನ್ನ ಗೋಳಾಟವನ್ನು ಶುರು ಮಾಡಿದನು.


"ಸರಿ ಸರಿ ಅಳಬೇಡ ನಾನ್ ಹೇಳ್ತೀನಿ ಕೇಳು" ಎಂದು ಅಮರ್ ಕೂತಲ್ಲಿಯೇ ಸಮಧಾನಿಸಿದನು.


"ಸರಿ ಹೇಳಿ ಬ್ರೋ ಏನದು" ಎಂದನು.


"ನೀರಿನ ಅಣು ಸೂತ್ರ ಏನು" ಎಂದನು.


"ಏನ್ ಬ್ರೋ ಚಿಕ್ಕ ಮಕ್ಕಳಿಗೆ ಕೇಳೋ ಪ್ರಶ್ನೆ ಕೇಳ್ತಾ ಇದೀರಾ" ಎಂದನು.


"ಮೊದಲು ನೀನ್ ಹೇಳು" ಎಂದನು.


"H2O" ಎಂದನು.


"H2O ಅಂದ್ರೆ"


"H ಅದ್ರೆ ಹೈಡ್ರೋಜನ್ O ಆಕ್ಸಿಜನ್ ಅಷ್ಟೆ"


"ಗುಡ್ ಈ ಮೂವಿನಲ್ಲಿ ಪೆಟ್ರೋಲ್ ಜಾಸ್ತಿ ಆಗಿದೆ ಅದಕ್ಕೆ ಅದನ್ನ ಸರಿದೂಗಿಸುವ ಸಲುವಾಗಿ ಹೈಡ್ರೋಜನ್ ಮೂಲಕ ಗಾಡಿ ಓಡುವಂತೆ ಫಾರ್ಮುಲಾ ಕಂಡು ಹಿಡಿದನು. ಅದನ್ನ ಅವರಿಗೆ ಕೊಡದೆ ಇದ್ದರಿಂದ ಅವರನ್ನ ಬಂಧಿಸ್ತಾರೆ" ಎಂದು ಹೇಳಿದನು.


"ಅದು ಅಲ್ಲಿಗೆ ಸರಿ ಇದರಿಂದ ನಿಮಗೆ ಏನ್ ಲಾಭ ಆಯ್ತು" ಎಂದು ಮರು ಪ್ರಶ್ನಿಸಿದನು.


"ಹೇ ಟ್ಯೂಬ್ ಲೈಟ್ ಹೈಡ್ರೋಜನ್ ಉಪಯೋಗಿಸಿದ ಮೇಲೆ ಉಳಿಯೋದು ಆಕ್ಸಿಜನ್ ತಾನೇ" ಎಂದು ರಾಜೀವ್ ಉತ್ತರಿಸಿದನು.


"ಅದು ಸರಿ ಆಕ್ಸಿಜನ್ ತಯಾರಿಸ್ತಿವಿ ಅಂತ ನೀರನ್ನ ಬಳಸೋಕೆ ಹೋದರೆ ಜನರು ಸುಮ್ನಿರ್ತಾರಾ?" ಎಂದು ಮರು ಪ್ರಶ್ನಿಸಿದನು.


"ಗುಡ್ ಕ್ವಷೇನ್. ಇವಾಗ ಕರೆಂಟ್ ತಯಾರಿಕೆನಾ ಹೇಗೆ ಜಲಪಾತ ಮತ್ತು ಅತಿ ವೇಗವಾಗಿ ಅರಿಯೋ ನೀರಲ್ಲಿ ಜೊತೆಗೆ ಗುಡ್ಡಗಾಡು ಪ್ರದೇಶಗಳಲ್ಲಿ ವೇಗವಾಗಿ ಬೀಸೋ ಗಾಳಿಯಿಂದ ಉತ್ಪಾದಿಸುತ್ತಾರೋ ಹಾಗೇ ಆಕ್ಸಿಜನ್ ಕೂಡ ಉತ್ಪಾದಿಸೋದು. ಇಲ್ಲಿ ಉತ್ಪಾದನೆ ಅನ್ನೋದಕ್ಕಿಂತ ಬೇರ್ಪಡಿಸೋದು ಅಂದರೆ ಉತ್ತಮವಾಗುತ್ತದೆ" ಎಂದು ಅಮರ್ ಹೇಳಿದನು.


"ಬೇರ್ಪಡಿಸೋದ ಹೇಗೆ ಮತ್ತೆ ಎಲ್ಲಿ?" ಎಂದನು.


"ನೀರಿನ ಮೂಲ ನದಿ ಕೆರೆ ಬಾವಿ ಮಾತ್ರ ಇಲ್ಲ. ಬೇರೆ ಮೂಲಗಳಲ್ಲೂ ಇವೆ. ಭಾರತ ಒಂದು ಪರ್ಯಾಯ ದ್ವೀಪ ಅನ್ನೋದು ಎಲ್ಲರಿಗೂ ಗೊತ್ತು. ದೇಶದ ಮೂರು ಭಾಗದಲ್ಲೂ ಸಮುದ್ರ ಇದೆ ಉತ್ತರ ಭಾಗದಲ್ಲಿ ಹಿಮಾಲಯ ಪರ್ವತ ಇದಾವೆ. ಹೌದಲ್ವ ಆದ್ದರಿಂದ ಸಮುದ್ರ ತೀರಗಳಲ್ಲಿ ಇದರ ಕಾರ್ಖಾನೆ ನಿರ್ಮಿಸಿ ಆಕ್ಸಿಜನ್ ಸಂಗ್ರಹಿಸಬೇಕು" ಎಂದನು.


"ಹೌದು ನಿಜ, ಇವಾಗಲೂ ನೀರಿನಿಂದ ತಾನೇ ಆಕ್ಸಿಜನ್ ತಯಾರಿಸ್ತಾ ಇರೋದು" ಎಂದು ಮತ್ತೊಂದು ಡೌಟ್ ನ್ನು ಕೇಳಿದನು.


"ಇಲ್ಲ ಇವಾಗ ಸಿಕ್ತಾ ಇರೋದು ಗಾಳಿಯಿಂದ ಗಾಳಿಯಲ್ಲಿನ ಆಕ್ಸಿಜನ್ ನ ಶೇಖರಿಸಿ ಸಿಲಿಂಡರ್ ಗಳ ಮೂಲಕ ಉಸಿರಾಟದ ತೊಂದರೆ ಇರೋರಿಗೆ ಕೊಡ್ತಾ ಇರೋದು" ಎಂದನು.


"ಮತ್ತೆ ನೀರಿನಿಂದ ಆಕ್ಸಿಜನ್ ಬೇರೆ ಮಾಡೋಕೆ ಆಗುತ್ತಾ" ಎಂದನು.


"ಸಾಧ್ಯ ಇದೆ. ಯಾವ ವಿದ್ಯುತ್ ನ್ನು ನೀರಿನಿಂದ ಉತ್ಪಾದಿಸುತ್ತಿವೋ ಅದೇ ವಿದ್ಯುತ್ ನ್ನು ಇಂತಿಷ್ಟು ಪ್ರಮಾಣದಲ್ಲಿ ನೀರಿನಲ್ಲಿ ಅರಿಸಿಬೇಕು. ವಿದ್ಯುತ್ ನೀರಿನಲ್ಲಿ ಹಾದು ಹೋಗುವಾಗ ಆಕ್ಸಿಜನ್ ಮತ್ತು ಹೈಡ್ರೋಜನ್ ವಿಭಜನೆ ಆಗುತ್ತೆ ಅಂತಹ ಸಂದರ್ಭದಲ್ಲಿ ಆಕ್ಸಿಜನ್ ಸಂಗ್ರಹಣೆ ಮಾಡಿ ಸಿಲಿಂಡರ್ ನಲ್ಲಿ ಶೇಖರಿಸಬೇಕು. ಆಗಾ ಈ ಆಕ್ಸಿಜನ್ ಉಪಯೋಗಕ್ಕೆ ಬರುತ್ತದೆ. ಮತ್ತೊಂದು ಈ ವಿಭಜನೆ ಕ್ರಿಯೆಯನ್ನು ವಿಜ್ಞಾನದಲ್ಲಿ ವಿದ್ಯುತ್ವಿಭಜನೆ ಎಂದು ಕರೆಯುತ್ತಾರೆ. ಈ ರೀತಿಯಲ್ಲಿ ಮತ್ತೊಬ್ಬರಿಗೆ ತೊಂದರೆಯಾಗದಂತೆ ಸರ್ಕಾರ ಆಕ್ಸಿಜನೆ ತಯಾರಿಸಿದರೆ ಜನರಿಗೆ ಅನುಕೂಲ.ಇವಾಗ ಒಂದೇ ದಾರಿಯಲ್ಲಿ ತಯಾರಿಕೆ ಆಗ್ತಾ ಇರೋದ್ರಿಂದ ಅಗತ್ಯ ಇರೋರಿಗೆ ಸಿಕ್ತಾ ಇಲ್ಲ. ಎರಡು ಕಡೆಯಿಂದ ಉತ್ಪಾದನೆಯಾದರೆ ಜನರಿಗೆ ಉಪಯೋಗ" ಎಂದು ವಿವರಿಸಿದನು.


"ಇದರಿಂದ ಸರ್ಕಾರಕ್ಕೆ ಅಥವಾ ಜನರಿಗೆ ಹೇಗೆ ಉಪಯೋಗ?" ಎಂದು ರಾಜೀವ್ ಕೇಳಿದನು.


"ಇವಾಗ ಕೊರೊನಾ ಇರುವಾಗ ತುಂಬಾ ಜನ ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೇ ಸತ್ತಿರೋರನ್ನ ನೋಡಿದ್ದಿವಿ ಇದಕ್ಕೆ ಸರ್ಕಾರನೇ ಹೊಣೆ ಅಂತ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದಾರೆ. ಇಂತಹ ಹೊರಟಗಳಿಂದ ಸರ್ಕಾರಕ್ಕೆ ನಷ್ಟನೇ ಹೊರತು ಲಾಭ ಇಲ್ಲ ಅದೇ ಉತ್ಪಾದನೆ ಸರಿಯಾಗಿದ್ದರೆ ಇಂತಹ ಪರಿಸ್ಥಿತಿ ಎದುರಾಗ್ತಾ ಇರಲಿಲ್ಲ ಇದು ಸರ್ಕಾರಕ್ಕೆ ಲಾಭವಾದರೇ, ಜನರಿಗೆ ಹಣ ಮೂಲಕ ಲಾಭ ಆಗುತ್ತದೆ. ಅರ್ಥಶಾಸ್ತ್ರದ ಪ್ರಕಾರ ಹೇಳಬೇಕೆಂದರೆ ಎಲ್ಲಿ ಉತ್ಪಾದನೆ ಕಡಿಮೆ ಇದ್ದು ಬೇಡಿಕೆ ಜಾಸ್ತಿ ಇರುತ್ತೋ ಅಲ್ಲಿ ಆ ವಸ್ತುವಿನ ಬೆಲೆ ಹೆಚ್ಚಾಗೊದು ಸಹಜ ಅದೇ ತರ ಬೇಡಿಕೆ ಕಡಿಮೆ ಇದ್ದು ಉತ್ಪಾದನೆ ಜಾಸ್ತಿ ಆದರೇ ಬೆಲೆ ಕುಸಿತ ಸಹಜ. ಇಲ್ಲೂ ಅದೇ ಫಾರ್ಮುಲಾ ಬಳಸ್ತಾ ಇರೋದು, ಆಕ್ಸಿಜನ್ ಕೊರತೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ರೇಟ್ ಜಾಸ್ತಿ ಮಾಡಿದ್ರು ಅದೇ ಜಾಸ್ತಿ ಇದ್ದಿದ್ರೆ ಆ ಸ್ಥಿತಿ ಬರ್ತಾ ಇರಲಿಲ್ಲ. ಒಂದು ವ್ಯಕ್ತಿಗೆ ಒಂದೇ ಸಿಲಿಂಡರ್ ಬಳಸಿ ಅಲ್ಲಿ ಒಂದು 100 ಕಡಿಮೆ ಆದರೂ ಆ ಉಳಿದ ದುಡ್ಡು ಪೇಷಂಟನ್ ಒಂದು ಹೊತ್ತಿನ ಮಾತ್ರೆಗೊ ಅಥವಾ ಅವರನ್ನು ನೋಡಿಕೊಳ್ಳೊ ವ್ಯಕ್ತಿಯ ಎರಡು ಹೊತ್ತಿನ ಊಟಕ್ಕೆ ಅನುಕೂಲ ಆಗುತ್ತೆ ಅನ್ನೋ ದೃಷ್ಟಿಯಿಂದ ಈ ಪ್ರಯತ್ನಕ್ಕೆ ಕೈ ಹಾಕಿದ್ದು. ಆದರೇ, ನೀವು ನಿಮ್ನ ತಂದೆಯವರು ಸೇರಿ ಜನರಿಗೆ ಮೋಸ ಮಾಡ್ತಾ ಇದೀರಾ. ಸರ್ಕಾರದಿಂದ ಶುರುವಾಗ ಬೇಕಾದ ಕಂಪನಿನಾ ಸ್ವಂತಕ್ಕೆ ಶುರು ಮಾಡಿ ಜನರಿಂದ ಹಣ ವಸೂಲಿ ಕಾರ್ಯಕ್ಕೆ ಇಳಿದ್ದಿದ್ದಿರಾ. ನಿಮಗೆಲ್ಲಾ ಶಿಕ್ಷೆ ಕೊಡೊಕೆ ಒಬ್ಬ ಬರ್ತಾನೆ ನೋಡ್ತಾ ಇರಿ" ಎಂದು ತನ್ನ ಮಾತಿಗೆ ಮುಕ್ತಾಯ ಆಡಿದನು.


"ಇದೇ ತರ ಆ ಡಿ ಸಿ ಹಾರಾಡಿದ ಅದಕ್ಕೆ ಅವನನ್ನ ಕಳ್ಸಿದ್ದೀನಿ ನೀನು ನಮಗೆ ಸಹಾಯ ಮಾಡಿಲ್ಲ ಅಂದರೆ ನಿನ್ನನ್ನು ಕಳಿಸ್ತಿನಿ ನಿನ್ನ ಐಡಿಯಾ ಇಟ್ಕೊಂಡು ದುಡ್ಡು ಚೆಲ್ಲಿ ಬೇರೆ ನಿನ್ನಂತ ವಿಜ್ಞಾನಿನ ಹುಡುಕಿದರೆ ಆಯ್ತು" ಎಂದು ಕಾಳೇಗೌಡ ಗಹಗಹಿಸಿ ನಕ್ಕನು.


"ಅಂಕಲ್ ಈ ಡಿ ಸಿ ಯಾರು" ಎಂದು ರಾಹುಲ್ ಪ್ರಶ್ನಿಸಿದನು.


"ಅವನ, ಅವನು ಈ ವಿಜ್ಞಾನಿಯ ಸ್ನೇಹಿತನಂತೆ ಅವನು ಇವನ ತರ ದೇಶ ಸೇವೆ ಅಂತ ಮೇರಿತಾ ಇದ್ದ ಅದಕ್ಕೆ ದೇಶಸೇವೆ ಬೇಡ ದೇವರ ಸೇವೆ ಮಾಡು ಅಂತ ದೇವರ ಹತ್ತಿರ ಕಳುಹಿಸಿದ್ವಿ" ಎಂದು ರಾಮನಾಥ್ ಹೇಳಿದನು.


" ಅವರ ಹೆಸರು ಏನು?" ಎಂದು ಮತ್ತೆ ಕೇಳಿದನು.


"ಅವನ ಕಾರವಾರದಲ್ಲಿ ಇದ್ದ ಶಿವಕುಮಾರ ಅಂತ ದೇವರಸೇವೆ ಮಾಡೋಕೆ ಹೋಗಿ ಹೆಂಡತಿ ಮಕ್ಕಳನ್ನ ಅನಾಥರನ್ನಾಗಿ ಮಾಡಿ ಹೋದ" ಎಂದು ಕಾಳೇಗೌಡ ಹೇಳಿದನು.


ಶಿವಕುಮಾರನ ಸಾವು ಆಕ್ಸಿಡೆಂಟ್ ಅಂತ ತಿಳಿದಿದ್ದ ಅಮರ್ ಗೆ ಅದು ಇವರು ಮಾಡಿಸಿದ ಕೊಲೆ ಎಂದು ತಿಳಿದು ಕೋಪ ಉಂಟಾದರು ಕೈಗಳನ್ನು ಕುರ್ಚಿಗೆ ಕಟ್ಟಿದ್ದರಿಂದ ಏನು ಮಾಡಲಾಗಲಿಲ್ಲ.


ಇವರು ಕತೆ ಕೇಳಲು ಶುರು ಮಾಡಿದಾಗಲೇ ಅನಿಕೇತ್ ಕಾನ್ಸ್ಟೇಬಲ್ ನ ಕರೆದು ಫೋನ್ ಕೊಟ್ಟು ಪೂರ್ತಿ ಸನ್ನಿವೇಶ ರೆಕಾರ್ಡ್ ಮಾಡುವಂತೆ ತಿಳಿಸಿ ಅಮರ್ ಇರುವ ರೂಂ ಬಳಿ ನಾಲ್ಕು ಜನ ಪೊಲೀಸ್ ರನ್ನು ಕರೆದುಕೊಂಡು ಹೋಗಿದ್ದನು. ಆದರೇ ಅನಿಕೇತ್ ಗೆ ತಿಳಿಯದ ವಿಷಯ ಈ ಸನ್ನಿವೇಶ ಬರಿ ಕೋರ್ಟ್ ಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬ ಮನೆಯನ್ನು ತಲುಪಿರುವುದು ತಿಳಿದಿರಲಿಲ್ಲ.


ಜೊತೆಗೆ ಕಾರವಾರದಲ್ಲಿ ವಿಡಿಯೋ ನೋಡುತ್ತಿದ್ದ ತಂದೆ ತಾಯಿಯರಿಗೆ ಅಮರ್ ಜೊತೆ ಅನಿಕ ಇಲ್ಲದನ್ನು ಗಮನಿಸಿ ತಕ್ಷಣ ಪೊಲೀಸ್ ಸ್ಟೇಷನ್ ಬಳಿ ಹೋದರು. ಅಲ್ಲಿನ ಪೊಲೀಸ್ ಗಮನಿಸಿದಾಗ ಅನಿಕ ವಿಷಯ ತಿಳಿದು ನೆಟ್ ವರ್ಕ್ ಸಹಾಯದಿಂದ ಅದು ಚೆನೈ ಎಂದು ತಿಳಿದು ಅಲ್ಲಿನ ಪೊಲೀಸ್ ರನ್ನು ಸಂಪರ್ಕಿಸಿದಾಗ ಈಗಾಗಲೇ ಅಲ್ಲಿ ಇದ್ದಾರೆ ಎಂದು ತಿಳಿಯಿತು. ಆದರೇ ಅನಿಕ ವಿಷಯ ಮಾತ್ರ ತಿಳಿಯಲಿಲ್ಲ. ಸಮಾಧಾನದಿಂದ ವಿಡಿಯೋ ನೋಡಿದ್ದರೆ ಅನಿಕ ಬಗ್ಗೆ ತಿಳಿಯುತ್ತಿತ್ತು ಆದರೇ ಯಾರು ಅದನ್ನು ಗಮನಿಸಿರಲಿಲ್ಲ. ಗಮನಿಸಿದ್ದರೆ ಅವರ ದುಃಖ ಹಿಮ್ಮಡಿಯಾಗುತ್ತಿತ್ತು.


"ನೋಡ್ಲ ಸೈಂಟಿಸ್ಟು ಇವಾಗ ನಮ್ಮ ಜೊತೆ ಕೈ ಮೀಲಾಯಿಸಿ ನಮ್ಮ ಜೊತೆ ಸೇರಿ ದುಡ್ಡು ಮಾಡ್ತಿಯಾ ಇಲ್ಲ ನೀನು ದೇವರ ಸೇವೆ ಮಾಡೋಕೆ ಹೋಗ್ತೀಯಾ?" ಎಂದು ರಾಮನಾಥ್ ಕೇಳಿದನು.


"ನಿಮ್ಮಂಥ ದೇಶದ್ರೋಹಿಗಳಿಗೆ ಸಹಾಯ ಮಾಡಲ್ಲ" ಎಂದನು.


"ಸರಿ ನೀನು ದೇವರ ಸೇವೆ ಮಾಡು" ಎಂದು ಕಾಳೇಗೌಡ ಗನ್ ಹೊರ ತೆಗೆದನು.


"ಅಪ್ಪ ಒಂದು ನಿಮಿಷ, ನಾನು ನಿಮ್ಮ ತರ ಆಗೋಕೆ ಇಷ್ಟ ಸೋ ನಾನ್ ಶೂಟ್ ಮಾಡ್ಲ" ಎಂದು ಕೇಳಿದನು.


"ತಗೋ" ಎಂದು ಗನ್ ನನ್ನು ಕಾಳೇಗೌಡ ಮಗನಿಗೆ ಕೊಟ್ಟನು.


ಗನ್ ಪಡೆದ ರಾಜೀವ್ ರಾಹುಲ್ ಕಡೆ ತಿರುಗಿ ಅವನ ಕಡೆ ಸನ್ನೆ ಮಾಡಿ "ರಾಹುಲ್ ಅವನನ್ನು ಹಿಡಿದುಕೊ ನಾನ್ ಶೂಟ್ ಮಾಡಿದಾಗ ಅಲುಗಾಡಿ ಗುರಿ ತಪ್ಪಿಸಿದರೆ ಸುಮ್ಮನೆ ಬುಲೆಟ್ ವೇಸ್ಟ್ ಆಗುತ್ತೆ" ಎಂದನು. ಅದರಂತೆ ಅಮರ್ ನ ಹಿಂದೆ ರಾಜೀವ್ ಗೆ ಮರೆಯಾಗಿ ಕುಳಿತು ಕಾಳೇಗೌಡ ಮತ್ತು ರಾಮನಾಥ್ ಗೆ ತಿಳಿಯದಂತೆ ಅಮರ್ ಕೈ ಗೆ ಕಟ್ಟಿದ ಹಗ್ಗವನ್ನು ಸಡಿಲ ಮಾಡಿದನು. ಕಟ್ಟಿದ ಹಗ್ಗದ ಬೀಗುವು ಸಡಿಲ ಆಗಿದ್ದ ಅನುಭವ ಅಮರ್ ಗೆ ಆದಾಗ ಆಶ್ಚರ್ಯದಿಂದ ರಾಜೀವ್ ಮತ್ತು ರಾಹುಲ್ ಮುಖ ನೋಡಿದನು. ರಾಹುಲ್ ಕೆಲಸ ಮುಗಿತು ಎಂದು ಸನ್ನೆ ಮಾಡಿದಾಗ ಅಮರ್ ಗೆ ಗುರಿ ಇಟ್ಟ ಗನ್ ನನ್ನು ತಂದೆಯ ಕಡೆ ತಿರುಗಿಸಿದನು.


"ಕ್ಷಮಿಸಿ ಅಪ್ಪ, ನೀವು ನನಗೆ ಜನ್ಮ ಕೊಟ್ಟಿರೋದಕ್ಕೆ ಮಾತ್ರ ನಿಮ್ಮನ್ನ ಅಪ್ಪ ಅನ್ನುತ್ತಾ ಇರೋದು ಒಬ್ಬ ನಾಗರೀಕ ಪ್ರಜೆಯಾಗಿ ನಿಮ್ಮನ್ನ ಅಪ್ಪ ಅನ್ನೋಕೆ ಅಸಹ್ಯ ಆಗುತ್ತೆ. ನೀವು ಬದುಕಿದ್ದರೆ ಪ್ರತಿ ಬಾರಿ ಅಪ್ಪ ಅಂತ ಕರಿತಿರ್ಬೇಕು ಜೊತೆಗೆ ಇನ್ನು ಇಂತಹ ಎಷ್ಟೋ ದ್ರೋಹಗಳು ಆಗಬಹುದು. ನಿಮ್ಮಂಥ ದೇಶದ್ರೋಹಿಗಳ ಮಕ್ಕಳು ಅನ್ನೋ ಪಟ್ಟ ಬೇಡ ನನಗೆ, ನೀವು ನನಗೆ ಜನ್ಮ ಕೊಟ್ರಿ ಆದರೇ ನನಗೆ ಜನ್ಮ ಕೊಟ್ಟ ನಿಮ್ಮ ಜನ್ಮನೆ ನಾನ್ ತಗಿತಾ ಇದೀನಿ. ಇದು ಕಾನೂನಿನ ಪ್ರಕಾರ ಒಬ್ಬ ಮಗನ ಪ್ರಕಾರ ತಪ್ಪೆ ಆದರೇ ಒಬ್ಬ ಭಾರತೀಯ ಪ್ರಜೆಯಾಗಿ ನಿಮ್ಮಂಥ ದ್ರೋಹಿಗಳಿಗೆ ಇದು ನಾನ್ ಕೊಡೊ ಶಿಕ್ಷೆ" ಎಂದನು. ಅಷ್ಟರಲ್ಲಿ ಗನ್ ಫೈರ್ ಆದ ಸದ್ದು ಇಡೀ ಗೆಸ್ಟ್ ಹೌಸ್ ಪ್ರತಿಧ್ವನಿಸಿತು.


ಕ್ಷಣಾರ್ಧದಲ್ಲಿ ಘಟಿಸಿದ ಘಟನೆಗೆ ಎಲ್ಲರು ಸ್ತಂಬರಾಗಿದ್ದರು. ಅಮರ್ ನ ಹತ್ತಿರ ಇದ್ದ ರಾಹುಲ್ ರಾಜೀವ್ ಬಳಿ ಬಂದು ರಕ್ತ ಸುರಿಯುತ್ತಿದ್ದ ಕೈಗೆ ಕರ್ಚಿಫ್ ಕಟ್ಟಿದನು. ಗುರಿ ಇಟ್ಟಿದ್ದು ರಾಜೀವ್ ಆದರೂ ಫೈರ್ ಆಗಿದ್ದು ಅನಿಕೇತ್ ಗನ್. ತಕ್ಷಣ ಅಲ್ಲೇ ಇದ್ದ ಪೊಲೀಸ್ ಕಾಳೇಗೌಡ ಮತ್ತು ರಾಮನಾಥ್ ನನ್ನು ಬಂಧಿಸಿದರೆ ಮತ್ತೊಬ್ಬ ಪೊಲೀಸ್ ಸಹಾಯದಿಂದ ರಾಜೀವ್ ನನ್ನು ಹಾಸ್ಪಿಟಲ್ ಗೆ ಸೇರಿಸಿದರು. ಅಮರ್ ನನ್ನು ಅನಿಕೇತ್ ಮತ್ತು ಇತರ ಸಿಬ್ಬಂದಿಗಳು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋದರು. ಈ ಕೇಸ್ ಕರ್ನಾಟಕದಲ್ಲಿ ದಾಖಲಾಗಿದ್ದರಿಂದ ಅಲ್ಲಿನ ಕಾನೂನಿನ ಚೌಕಟ್ಟಿಗೆ ಸಂಬಂಧಿಸಿದ ಕೆಲಸಗಳನ್ನು ಮುಗಿಸಿ ಅಪರಾಧಿಗಳ ಜೊತೆಗೆ ಅಮರ್ ನನ್ನು ಕಾರವಾರ ತಲುಪಿಸುವ ವ್ಯವಸ್ಥೆ ಮಾಡಿದರು.


ಅನಿಕೇತ್ ಹೊರಡುವ ಮುನ್ನ ತನ್ನ ತಂದೆಗೆ ಅನಿಕ ವಿಷಯ ತಿಳಿಸಿ ತಕ್ಷಣ ಕಾರವಾರಕ್ಕೆ ಹೊರಡುವಂತೆ ತಿಳಿಸಿದನು.


ಅನಿಕೇತ್ ತನ್ನ ಓನ್ ಜೇಟ್ ಮತ್ತು ಅಲ್ಲಿಂದ ಇಬ್ಬರು ಸಿಬ್ಬಂದಿಯ ಜೊತೆಗೆ ಕಾರವಾರ ತಲುಪಿಸಿ ಅಪರಾಧಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ದಿನ ಸಾಕ್ಷಾಧಾರಗಳನ್ನು ನೀಡುವುದಾಗಿ ತಿಳಿಸಿದನು.


ಪೊಲೀಸ್ ಸ್ಟೇಷನ್ ನಲ್ಲಿ ಇದ್ದ ತಂದೆ ತಾಯಿಗೆ ಅಮರ್ ನನ್ನು ಒಪ್ಪಿಸಿದನು.


"ನೋಡಿ ನಿಮ್ಮ ಮಗನನ್ನು ವಾಪಸ್ ಕರೆದುಕೊಂಡು ಬಂದ್ದಿದೀನಿ" ಎಂದನು.


"ನೀನು ಅವತ್ತು ಇವನ ಫ್ರೇಂಡ್ ಅಂತ ರಮೇಶ್ ಹೆಸರಲ್ಲಿ ಬಂದವನು ನೀನೇ ಅಲ್ಲ"ಎಂದು ವಿಶ್ವನಾಥ್ ಪ್ರಶ್ನಿಸಿದರು.


"ಹೌದು ನಾನೇ ಬಂದಿದ್ದು ನನ್ನ ಹೆಸರು ರಮೇಶ್ ಅಲ್ಲ ಅನಿಕೇತ್, ಕೇಸ್ ವಿಷಯವಾಗಿ ಬಂದಿದ್ದು ಬಟ್ ಅರವತ್ತು ನಿಮ್ಮಿಂದ ಅಂತ ಮಾಹಿತಿ ಏನು ಸಿಗಲಿಲ್ಲ. ಸಿಗಲಿಲ್ಲ ಅನ್ನೋದಕ್ಕಿಂತ ನಿಮಗ ಏನು ಗೊತ್ತಿರಲಿಲ್ಲ" ಎಂದು ಹೇಳಿದನು.


"ಮಗ ಏನೋ ಬಂದ ಆದರೇ ಮಗಳು" ಎಂದು ಅನಿಕಳ ಬಗ್ಗೆ ಕೇಳಿದರು.


"ಚಿಂತೆ ಮಾಡಬೇಡಿ ನಿಮ್ಮ ಮಗಳು ಸೇಫ್ ಆಗಿದ್ದಾಳೆ. ಈ ಕೆಲಸ ರಿಸ್ಕ್ ಅಂತನೇ ಶಿವಮೊಗ್ಗದಲ್ಲೇ ಇವರನ್ನು ಬಂಧಿಸಿದಾಗ ಉಪಾಯದಿಂದ ಅವರನ್ನ ನಮ್ಮ ಮನೆಗೆ ಕಳುಹಿಸಿದ್ದೀನಿ ಏನು ಸಂಜೆ ಹೊತ್ತಿಗೆ ನಮ್ಮ ಅಪ್ಪ ಕರೆದುಕೊಂಡು ಬರ್ತಾರೆ. ಅವತ್ತೆ ನಿಮ್ಮ ಹತ್ತಿರ ಕಳಿಸೋದು ದೊಡ್ಡ ವಿಷಯ ಆಗಿರಲಿಲ್ಲ ಆದರೇ ಇದು ಅವರಿಗೆ ಗೊತ್ತಾಗಿ ಮತ್ತೊಂದು ತೊಂದರೆ ಆದರೇ ಕಷ್ಟ ಅಂತ ಅನಿಕ ಬದುಕಿದ್ರು ಅವರ ದೃಷ್ಟಿಯಲ್ಲಿ ಸಾಯಿಸಿ ಐಡ್ ಮಾಡಿದ್ವಿ ಇವಾಗ ಯಾವಾ ತೊಂದರೆನೂ ಇಲ್ಲ" ಎಂದು ಧೀರ್ಘವಾಗಿ ಹೇಳಿ ಮುಗಿಸಿದನು.


ಸುಮಾರು ಸಂಜೆ 5 ಗಂಟೆಯ ಸುಮಾರಿಗೆ ಸೂರ್ಯ ಮತ್ತು ಅನಿಕ ಕಾರವಾರದ ಅವರ ಮನೆ ತಲುಪಿದರು. ಅನಿಕಾಳಿಗೂ ಡ್ರೈವಿಂಗ್ ಬರುತ್ತಿದ್ದರಿಂದ ರಾಮಣ್ಣರವರಿಗೆ ಹೆಚ್ಚಿನ ತೊಂದರೆ ಏನು ಆಗಲಿಲ್ಲ.


"ಅಪ್ಪ ಅಮ್ಮ" ಎಂದು ತುಂಬಾ ದಿನದ ನಂತರ ನೋಡಿದ ತಂದೆ ತಾಯಿ ತೆಕ್ಕೆಗೆ ಬಿದ್ದು ಮಾತೃ ಪಿತೃ ಪ್ರೇಮದಲ್ಲಿ ಸಿಲುಕಿದಳು.


"ತುಂಬಾ ಧನ್ಯವಾದಗಳು ನಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಕ್ಕೆ" ಎಂದು ಕಮಲ ಮತ್ತು ಗೌರಿಯವರು ಕೈ ಮುಗಿದು ಧನ್ಯವಾದ ತಿಳಿಸಿದರು.


"ಇದೆಲ್ಲಾ ನನ್ನ ಕರ್ತವ್ಯ, ನಾನ್ ಪ್ಲಾನ್ ಮಾಡಿದೆ ಅದಕ್ಕೆ ತಕ್ಕನಾಗಿ ಅಮರ್, ಅನಿಕಾ ಮತ್ತು ರಾಮು ಅಂಕಲ್ ಸಹಕರಿಸಿದ್ರು ಅದರಿಂದ ಕೆಲಸ ಸುಲಭ ಆಯಿತು" ಎಂದನು.


"ಅನಿ ನಿನ್ನ ಇವತ್ತಿನ ಕೆಲಸ ಮುಗಿತು ಅಲ್ವ" ಎಂದು ಸೂರ್ಯರವರು ಕೇಳಿದರು.


"ಸಧ್ಯಕ್ಕೆ ಎಲ್ಲ ಮುಗಿತು ಕೋರ್ಟ್ ದಿನ ಬರಬೇಕಾಗುತ್ತೆ" ಎಂದನು.


"ಸರಿ ಆಗಿದ್ರೆ ಹೊರಡೋಣ್ವ" ಎಂದರು.


"ಏನು ಇವಾಗ ಹೊರಡೋದ ಇಲ್ಲಿಂದ ಅದು ಬೆಂಗಳೂರಿಗೆ ಏನು ಬೇಡ ಇವತ್ತು ಒಂದು ದಿನ ಇಲ್ಲೇ ಇದ್ದು ನಾಳೆ ಬೇಕಿದ್ದರೆ ಹೊರಡಿ" ಎಂದು ಕಮಲರವರು ಅವರು ಹೋಗುವುದನ್ನು ನಿರಾಕರಿಸಿದರು.


"ಹೌದು ಕಮಲ ಹೇಳೋದು ಸರಿಯಾಗಿದೆ ಇವತ್ತು ನೀವು ಇಲ್ಲೇ ನಿಲ್ಲಿ, ನಮ್ಮ ಉಪಚಾರ ಸ್ವೀಕರಿಸಿ" ಎಂದು ವಿಶ್ವನಾಥ್ ಸಹ ಹೇಳಿದರು.


ಸೂರ್ಯ ಮತ್ತು ಅನಿಕೇತ್ ರವರಿಗೆ ಮಾತನಾಡಲು ಅವಕಾಶ ಕೊಡದೆ ಶಂಕರ್ ಗೌರಿಯವರು ಅದನ್ನೇ ಹೇಳಿದರು. ಎಲ್ಲರ ಒತ್ತಾಯಕ್ಕೆ ಮಣಿದು ಮುಂಜಾನೆ ಹೊರಡಲು ನಿರ್ಧರಿಸಿದರು.


ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದವರಿಗೆ ಗೌರಿ ಮತ್ತು ಕಮಲರವರು ಉತ್ತಮ ರೀತಿಯಲ್ಲಿಯೇ ಉಪಚರಿಸಿದರು.


"ಇಷ್ಟೇ ಉಪಚಾರ ಸಾಕಾಗಲ್ಲ ಆದಷ್ಟು ಬೇಗ ಮದುವೆಗೆ ಕರೆದು ಮದುವೆ ಊಟ ಹಾಕಬೇಕು" ಎಂದು ಅನಿಕೇತ್ ಅಮರ್ ಮತ್ತು ಅನಿಕಳಿಗೆ ತಿಳಿಸಿದನು.


ಅವರ ಮನೆಯವರು ಆದಷ್ಟು ಬೇಗ ಇವರ ಮದುವೆ ನಿಶ್ಚಯ ಮಾಡ್ತೀವಿ ತಾವುಗಳು ತಪ್ಪದೆ ಬರಬೇಕು ಎಂದು ಮೊದಲೇ ಆಮಂತ್ರಿಸಿದರು.


ಸೂರ್ಯ, ಅನಿಕೇತ್ ಮತ್ತು ರಾಮಣ್ಣ ಮುಂಜಾನೆ ಏಳು ಗಂಟೆಗೆ ಕಾರವಾರದಿಂದ ಹೊರಟು ಸಂಜೆ ಐದು ಗಂಟೆಗೆ ಮನೆ ತಲುಪಿದರು.


ಅವರು ಮನೆಯನ್ನು ಸೇರುವ ಹೊತ್ತಿಗೆ ಮನೆಯಲ್ಲಿ ಮೂರನೇ ಯುದ್ಧಕ್ಕೆ ಸಿದ್ದವಾದ ರೀತಿಯಲ್ಲಿ ಸಿದ್ಧರಾಗಿದ್ದರು.


ಪೂಜಾಳ ತಾಯಿ ಸೂರ್ಯರವರ ಬಳಿ ರಾಜೀವ್ ಮತ್ತು ಪೂಜಾ ಪ್ರೀತಿಯ ವಿಷಯ ತಿಳಿಸಿ ಅದಕ್ಕೆ ವಿರೋಧವನ್ನು ವ್ಯಕ್ತ ಪಡಿಸಿದರು.


ಯಾರು ಎಷ್ಟು ಹೇಳಿದರು ಯಾರೋಬ್ಬರ ಮಾತಿಗೂ ಒಪ್ಪಿಗೆ ಕೊಡಲಿಲ್ಲ. ಸೂರ್ಯರವರು ಬಂದ ನಂತರ ಆಕಾಂಕ್ಷಗಳ ತಂದೆ ಈ ಮದುವೆ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ತಿಳಿಸಿದರು.


"ನೋಡಿ ಬೀಗರೇ ನನಗೆ ಇರೋದು ಆಕಾಂಕ್ಷ ಒಬ್ಬಳೇ ಪೂಜಾ ನನ್ನ ಮಗಳ ತರ ಅವಳ ಪ್ರೀತಿ ಉಳಿಬೇಕು. ರಾಜೀವ್ ತಂದೆ ಕೆಟ್ಟವನು ಒಪ್ತಿನಿ ಆದರೇ ಅವನು ಅಪ್ಪನ ತರ ಆಗಿದ್ರೆ ಅವನೇ ಅವನ ಅಪ್ಪನ ವಿಷಯವನ್ನು ರಾಜ್ಯಕ್ಕೆ ತಿಳಿಯುವಂತೆ ಮಾಡ್ತಾ ಇರಲಿಲ್ಲ. ಯೋಚನೆ ಮಾಡಿ ಅವನು ಕಾಳೇಗೌಡನ ಮಗ ಆಗಿರೋದಕ್ಕೆ ನೀವುಗಳು ಈ ಮದುವೆಗೆ ನಿರಾಕರಿಸಿದರೇ ನಾನು ಅವನನ್ನು ನನ್ನ ಮಗನಾಗಿ ದತ್ತು ಪಡಿತೀನಿ ಹಾಗಲಾದರು ಅವರ ಪ್ರೀತಿನಾ ಉಳಿಸ್ತಿರಾ?" ಎಂದು ನಾರಾಯಣ್ ರವರು ಕೇಳಿದರು.


"ನೋಡಮ್ಮ ಸರಳ ನಿನ್ನ ಸಂಕಟ ನನಗೂ ಅರ್ಥ ಆಗುತ್ತೆ ರಾಜೀವ್ ಕೆಟ್ಟವನಲ್ಲ ನಾನು ಬರಿ ಬ್ಯುಸಿನೆಸ್ ಮಾಡಲ್ಲ ಮಕ್ಕಳ ಮೇಲೂ ಗಮನ ಇರುತ್ತೆ ಪೂಜಾ ರಾಜೀವ್ ವಿಷಯ ತುಂಬಾ ದಿನದ ಹಿಂದೆನೇ ಗೊತ್ತಿತ್ತು. ಅವನ ಬಗ್ಗೆ ವಿಚಾರಿಸಿದಾಗ ಒಳ್ಳೆ ಹುಡುಗ ಅನ್ನೋದು ಗೊತ್ತಾಯ್ತು ಸ್ವಂತ ಬ್ಯುಸಿನೆಸ್ ಮಾಡ್ತಾನೆ ಮಗಳು ಸುಖವಾಗಿ ಖುಷಿಯಾಗಿ ಇರ್ತಾಳೆ ಒಪ್ಕೋ" ಎಂದು ಸೂರ್ಯರವರು ಹೇಳಿದರು.


ಅವರ ಹಿಂದೆ ಸಚಿನ್, ಅನಿಕೇತ್ ಮತ್ತು ಆಕಾಂಕ್ಷ ಸಹ ರಾಜೀವ್ ನ ಬಗ್ಗೆ ಸಮಾಧಾನವಾಗಿ ತಿಳಿಸಿದಾಗ ಒಪ್ಪಿಕೊಂಡರು.


ಪೂಜಾ ಆಕಾಂಕ್ಷಳ ಬಳಿ ಮಾತನಾಡಿ ಕ್ಷಮೆ ಕೇಳಿದಳು. ಆಕಾಂಕ್ಷ ಸಹ ಚಿಕ್ಕ ಹುಡುಗಿ ಆತುರ ಜಾಸ್ತಿ ಎಂದು ತಿಳಿದು ಅದನ್ನೇ ಜಾಸ್ತಿ ಎಳಿಯದೆ ಆ ಕತೆಗೆ ಅಲ್ಲೇ ಅಂತ್ಯವಾಡಿ ರಾಜಿಯಾದರು.


ಅದೇ ಸಂದರ್ಭದಲ್ಲಿ ಸಚಿನ್ ಇಷ್ಟು ದಿನದ ತಂದೆ ತಾಯಿ ಆಸೆಗೆ ಕಾಯಿಸದೇ ಆಕಾಂಕ್ಷಳ ಗೆಳತಿ ಅದಿತಿಯನ್ನು ಇಷ್ಟ ಪಡುತ್ತಿರುವುದಾಗಿ ತಿಳಿಸಿದಾಗ ಸೂರ್ಯ ಮತ್ತು ಸಂಧ್ಯಾರವರು ಅದಿತಿ ಬಗ್ಗೆ ತಿಳಿದಿದ್ದರಿಂದ ಒಪ್ಪಿಗೆ ನೀಡಿದರು.


ರಾಜೀವ್ ಚೆನೈನಿಂದ ಬಂದ ನಂತರ ಮಾತನಾಡಿ ಅವನನ್ನು ಮದುವೆಗೆ ಒಪ್ಪಿಸಿದರು. ಆದರೇ ರಾಜೀವ್ ಇನ್ನು ಎರಡು ವರ್ಷದ ನಂತರ ತನ್ನ ಬ್ಯುಸಿನೆಸ್ ಒಂದು ಹಂತಕ್ಕೆ ಬರಲಿ ಎಂದು ಮುಂದೂಡಿದನು. ಪೂಜಾಳ ತಂದೆ ತಾಯಿ ಇದಕ್ಕೆ ಒಪ್ಪಿದರು.


ರಾಜೀವ್ ಮತ್ತು ರಾಹುಲ್ ತಂದೆಗೆ ಕಾನೂನಿನ ಪ್ರಕಾರ ಸಲ್ಲಬೇಕಾದ ಶಿಕ್ಷೆ ದೊರೆತ ನಂತರ ರಾಹುಲ್ ಇಡೀ ಕುಟುಂಬ ಬೆಂಗಳೂರಿಗೆ ಬಂದಿಳಿದರು. ತಂದೆಯರಿಲ್ಲದ ಆ ಕುಟುಂಬಗಳಿಗೆ ಇವರೇ ಆಸರೇಯಾದರು.


_________________________________________________




ಇದೆಲ್ಲಾ ಆಗಿ ಒಂದು ತಿಂಗಳ ನಂತರ ಅಮರ್ ಮತ್ತು ಅನಿಕ ಮದುವೆಯು ನಿಶ್ಚಯವಾಯಿತು. ಅನಿಕೇತ್ ಆಕಾಂಕ್ಷ ಮತ್ತು ಸಚಿನ್ ಅದಿತಿ ಜೋಡಿಯಾಗಿ ಹೋಗಿ ಅವರನ್ನು ಹರಸಿ ಬಂದರು.


ಇವರ ಮದುವೆಯಾದ ಆರು ತಿಂಗಳ ಅಂತರದಲ್ಲಿ ಸಚಿನ್ ಅದಿತಿ ಮತ್ತು ಅನಿಕೇತ್ ಆಕಾಂಕ್ಷ ಹಣೆ ಮಣೆ ಏರಿದರು.


ಒಂದೇ ಮಂಟಪದಲ್ಲಿ ಜೋಡಿಯಾಗಿ ಅಣ್ಣ ತಮ್ಮಂದಿರನ್ನು ಸ್ನೇಹಿತೆಯವರು ವರಿಸಿ ಆದ್ಯಾ ನಿಲಯದ ಸೊಸೆಯರಾದರು.


ಸಚಿನ್ ಅದಿತಿ ಒಂದು ಕಡೆ ಆಕಾಂಕ್ಷ ಪೂಜಾ ಒಂದು ಕಡೆ ಆಫೀಸ್ ಕೆಲಸದಲ್ಲಿ ತೊಡಗಿದರೆ ಅನಿಕೇತ್ ತನ್ನ ಪೊಲೀಸ್ ವೃತ್ತಿಯಲ್ಲಿ ಮುಂದುವರೆದನು. ಅವನ ನಿಷ್ಟೆ ಕಾರ್ಯದಕ್ಷತೆಯಿಂದ ವೃತ್ತಿಯಲ್ಲಿ ಮುಂದುವರೆದಂತೆ ಕೆಲಸದ ಒತ್ತಡವು ಹೆಚ್ಚಾಗುತ್ತಿತ್ತು. ಆದರೂ ಕೆಲವೊಂದು ಸಹ ಆಫೀಸ್ ಕಡೆ ಗಮನಹರಿಸುತ್ತಿದ್ದನು.


ಹೀಗೆ ಎಲ್ಲೋ ಇದ್ದೋ ಜೀವಗಳು ಇನ್ನೇಲ್ಲೋ ಬೆರೆತು ಹುಡುಕಾಟ ಹೋರಾಟಗಳ ನಡುವೆ ಜೀವನವನ್ನು ಆರಂಭಿಸಿದರು.


ಮುಕ್ತಾಯ...


ಶಿವಾರ್ಪಣಮಸ್ತು...


ಈ ಕತೆ ಯಾರಿಗಾದರೂ ಸ್ಪೂರ್ತಿಯಾದರೆ ಸಂತೋಷ ಕಷ್ಟವಾಗಿತ್ತು ಅಂದರೆ ಕ್ಷಮಿಸಿ, ಈ ಕತೆಯನ್ನು ಆಯ್ದು ಕೊಂಡಾಗ ಪ್ರತ್ಯಕ್ಷವಾಗಿ ನೇರವಾಗಿ ಸಹಕರಿಸಿದ ರಮ್ಯ ಎನ್ ಮುರುಳಿ (ಚಿನ್ನು), ಪ್ರತಿಭಾ (ಭಜರಂಗಿ), ರೇಖಾ ಎಂ ಶಿವಕಾಂತಿ ಮತ್ತು ಪರೋಷಕವಾಗಿ ಸಹಕರಿಸಿದವರಿಗೂ ತುಂಬು ಹೃದಯದ ಧನ್ಯವಾದಗಳು.




Rate this content
Log in

Similar kannada story from Drama