Akshatha S

Drama Romance

2  

Akshatha S

Drama Romance

ಸೃಷ್ಟಿ 03

ಸೃಷ್ಟಿ 03

5 mins
143


ಇಲ್ಲಿಯವರೆಗೆ...


ಸೃಷ್ಟಿಯ ತರಲೆ, ನಮ್ ಹೀರೋ ಸಾರ್ಥಕ್ ನ ಪರಿಚಯ ಮತ್ತು ಅವನ ಮತ್ತು ಅವನ ರಾಜಕುಮಾರಿಯ ಮುದ್ದಾದ ಮಾತುಕತೆ.


ಮುಂದುವರೆದು..


ಶುಕ್ರವಾರ ನಮ್ ಹೀರೋ ಸಾರ್ಥಕ್ ಲಂಡನ್ ಎಂಬ ಮಾಯಾ ಲೋಕದಿಂದ ಭಾರತ ಎಂಬ ವಾಸ್ತವ ತಿಳಿಸುವ ದೇಶಕ್ಕೆ ಆಗಮಿಸಿದ.


ತುಳಸಿ ನಿವಾಸದ ಅಲಂಕಾರ ನೋಡಿ ಒಂದು ಕ್ಷಣ ಸಾರ್ಥಕ್ ಗೆ ಅನುಮಾನ ಶುರು ಆಯ್ತು ಯಾವ ಕಾರ್ಯ ಇದೆ ಅಂತ, ಅನುಮಾನ ವ್ಯಕ್ತ ಪಡಿಸಿದೆ ತುಳಸಿ ನಿವಾಸವನ್ನು ಪ್ರವೇಶಿದ.


ತುಳಸಿ ನಿವಾಸ


ಹೆಸರಿಗೆ ತಕ್ಕಂತೆ ಬೃಂದಾವನ ದಂತಹ ಮನೆ ಮನೆಯ ಗೇಟ್ ನ್ನು ಪ್ರವೇಶಿಸಿದಂತೆ ಎರಡು ಬದಿಯಲ್ಲೂ ಹಸಿರನ್ನೆ ಮೈಗೂಡಿಸಿಕೊಂಡ ಗಿಡ ಮರಗಳ ಸಸ್ಯ ರಾಶಿ ಮುಂದುವರೆದು ಎಲ್ಲರನ್ನು ಆಮಂತ್ರಿಸುವಂತೆ ತನ್ನ ಕುಟುಂಬದ ಪರಿವಾರ ಸಮೇತ ನೆಲೆಗೊಂಡ ಪರಶಿವನ ಕುಟುಂಬ ಅದರ ಸುತ್ತಾ ಪರಶಿವನ ನಂದಿ, ಪಾರ್ವತಿಯ ಹುಲಿ, ಸ್ಕಂದನ ಮಯೂರ ಮತ್ತು ಗಣೇಶನ ಮೂಷಿಕ ಇವುಗಳೇ ಬರುವವರನ್ನು ಮೊದಲು ಆಹ್ವಾನಿಸುವುದು. ಪಕ್ಕದಲ್ಲಿ ಚಿಕ್ಕದಾದ ಪಾರ್ಕ್ ಅಲ್ಲಿ ನಾಲ್ಕು ಕುರ್ಚಿಗಳ ಮದ್ಯೆ ಒಂದು ಚಿಕ್ಕ ಟಿಪಾಯಿಗಳನ್ನು ಅಳವಡಿಸಲಾಗಿತ್ತು. ಮನೆಯ ಒಳಾಂಗಣವೇ ಆಧುನಿಕತೆಯನ್ನು ಮೈಗೂಡಿಸಿಕೊಂಡಿಸಿದೆ.


ಮೂರು ಅಂತಸ್ಥಿನ ಮನೆಯಾಗಿದ್ದು, ಗ್ರೌಂಡ್ ಪ್ಲೋರ್ ನಲ್ಲಿ ಲಿವಿಂಗ್ ಏರಿಯಾ, ಅಡುಗೆ ಮನೆ ಒಂದು ಬೆಡ್ ರೂಂ ಮತ್ತು ದೇವರ ಮನೆ. ಲಿವಿಂಗ್ ಏರಿಯಾ ಸೋಫಾ, ಟಿವಿ, ಇತರೇ ಡೆಕೋರೆಟೆಡ್ ವಸ್ತುಗಳಿಂದ ಅಲಂಕೃತಗೊಂಡಿತ್ತು. ಅಡುಗೆ ಮನೆಯ ಪರಿಚಯ ಎಲ್ಲರಿಗೂ ಇದೆ ಅಡುಗೆ ಮನೆಯ ಒಂದು ಭಾಗ ಡೈನಿಂಗ್ ಟೇಬಲ್ ಅಲಂಕಾರಗೊಂಡಿತ್ತು. ಬೆಡ್ ರೂಂ ಸೂರ್ಯ ಮತ್ತು ಗಾಯತ್ರಿ ಯವರಿಗೆ ಸಂಬಂಧಿಸಿದ್ದು. ಇನ್ನು ದೇವರ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಆ ಪರಶಿವನ ಶಿವಲಿಂಗ ಅದರ ಮುಂದಿನ ದೀಪಗಳು ಹೂವಿನ ಅಲಂಕಾರ ಆ ಕೈಲಾಸವೇ ಭೂ ಲೋಕದಲ್ಲಿ ಮರುಸೃಷ್ಟಿಯಾದಂತೆ ಇತ್ತು. ಎಷ್ಟೇ ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರು, ಆಚಾರ ಸಂಪ್ರದಾಯ ಸಂಸ್ಕೃತಿಯಿಂದ ದೂರ ಉಳಿದವರಲ್ಲ. 


ಮೊದಲ ಅಂತಸ್ತಿನ ಒಂದು ಕೋಣೆಯಲ್ಲಿ ಸಾನ್ವಿಯ ದರ್ಬಾರ್ ಅವಳ ಕೋಣೆಗೆ ಮುಕ್ತ ಪ್ರವೇಶ ಯಾರಿಗೂ ತೊಂದರೆ ಕೊಡದೆ ಸುತ್ತಲಿನ ವಾತಾವರಣವನ್ನು ಸಂತೋಷಗೊಳಿಸುವ ಚೈತನ್ಯದ ಚಿಲುಮೆ.


ಎರಡನೇ ಅಂತಸ್ತಿನ ಒಂದು ಕೋಣೆಯಲ್ಲಿ ಎಲ್ಲ ತರಹದ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ನಿಶಬ್ಧಕ್ಕೆ ಪ್ರತಿರೂಪವಾದಂತಹ ಕೋಣೆ, ಸಾನ್ವಿ ಸಾರ್ಥಕ್ ನ ನೆಚ್ಚಿನ ಜಾಗ ಅಣ್ಣ ತಂಗಿಯಿಂದನೆ ಈ ಗ್ರಂಥಾಲಯ ಶುರು ಆಗಿದ್ದು.


ಸಾರ್ಥಕ್ ಸಾಧು ಸ್ವಭಾವದ ವ್ಯಕ್ತಿಯಾಗಿದ್ದು ಕೆಲಸದ ವಿಚಾರದಲ್ಲಿ ಅಷ್ಟೇ ಕೋಪಿಷ್ಟ, ಒಂದು ಸಣ್ಣ ಲೋಪವನ್ನು ಸಹಿಸದ ವ್ಯಕ್ತಿ ಮೊದಲು ಎಚ್ಚರ ನೀಡಿ ಮತ್ತೆ ತಪ್ಪು ಸಂಭವಿಸಿದರೇ ಆ ಸಂದರ್ಭದಲ್ಲಿ ಶಿವನ ರೌದ್ರಾವತಾರವನ್ನು ಇವನಲ್ಲಿ ಕಾಣಬಹುದು.


ತನ್ನ ಕೆಲಸಕ್ಕೆ ತೊಂದರೆಯಾಗಬಾರದೆಂದು ತನ್ನ ಕೋಣೆಯನ್ನು ಮೂರನೇ ಅಂತಸ್ತಿನಲ್ಲಿ ಏರ್ಪಾಡು ಮಾಡಿಕೊಂಡಿದ್ದ ಅವನ ಪರ್ಮಿಷನ್ ಇಲ್ಲದೆ ಒಂದು ಸೊಳ್ಳೆ ಸಹ ಪ್ರವೇಶಿಸುವಂತಿರಲಿಲ್ಲ. ಆದರೇ ಅವನ ರಾಜಕುಮಾರಿಗೆ ಮಾತ್ರ ಮುಕ್ತ ಪ್ರವೇಶ. ಕಾರಣ ಇಷ್ಟೇ ಅವನ ಕಂಪನಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರ ಕಾಗದ ಪತ್ರ ಫೈಲ್ ಗಳು ಇವನ ಕೋಣೆಯನ್ನು ಅಲಂಕರಿಸಿದ್ದವು,‌‌ ಇಂತಹ ವಿಚಾರದಲ್ಲಿ ಅವನ ರಾಜಕುಮಾರಿ ಸಾರ್ಥಕ್ ಗಿಂತ ಹೆಚ್ಚು ಜಾಗೃತಿ ವಹಿಸುತ್ತಿದ್ದಳು. ಇದರಿಂದ ಸಾರ್ಥಕ್ ನ ಕೆಲಸಕ್ಕೆ ಯಾವುದೇ ತೊಂದರೆ ಆಗುತ್ತಿರಲಿಲ್ಲ ಆದ್ದರಿಂದ ಅವಳಿಗೆ ಮುಕ್ತ ಪ್ರವೇಶ.


ಎಷ್ಟೇ ಸ್ನೇಹಮಯಿಯಾದರೂ ಸುಲಭಕ್ಕೆ ಎಲ್ಲರನ್ನೂ ನಂಬುವ ವ್ಯಕ್ತಿಯಲ್ಲ, ಅವನ ಜಾಗೃತಿಯಲ್ಲಿ ಅವನು ಸಾದಾ ಇರುವನು. ಇವನ ಈ ಜಾಗೃತಿಯೆ ಅವನ ಜೀವನದ ಒಂದು ಉತ್ತಮ ಗುಣ.


ಇವನು ಮನೆಯನ್ನು ಪ್ರವೇಶಿಸುತ್ತಿದ್ದಂತೆ, ಅವನ ತಾಯಿ ಆರತಿಯನ್ನು ಹಿಡಿದು ಬಾಗಿಲ ಬಳಿ ನಿಂತಿದ್ದರು. ಅವರ ರೀತಿಗೆ ಮನದಲ್ಲೆ ನಕ್ಕು ಸುಮ್ಮನಾದ ತಾಯಿಗೆ ಇದೆಲ್ವಾ ಬೇಡ ಅಂತ ಹೇಳಿದರೆ ನೋವಾಗುತ್ತದೆ ಎಂದು. ಅರತಿಯ ನಂತರ ಮನೆಯನ್ನು ಪ್ರವೇಶಿಸಿದ ನಂತರ ಅವನಿಗೆ ಮನೆಯ ಅಲಂಕಾರದ ಬಗ್ಗೆ ತಿಳಿಯಿತು ಇಷ್ಟೆಲ್ಲಾ ಕೇವಲ ನನ್ನ ಆಗಮನಕ್ಕಾಗಿ ಅಂತ ಅವರ ಪ್ರೀತಿಯ ಪರಿಗೆ ಮೂಕನಾದ.


ಮನೆನೇ ಇಷ್ಟು ಚೆಂದ ಅಲಂಕಾರ ಮಾಡಿರೋರು ಊಟಕ್ಕೆ ಕೊರತೆ ಮಾಡಿರ್ತಾರಾ ನೋ ವೇ ಚಾನ್ಸೇ ಇಲ್ಲ. ಸಾರ್ಥಕ್ ಫ್ರೇಶ್ ಆಗಿ ಬರೋದರೊಳಗೆ ಎಲ್ಲ ಅಡುಗೆ ಸಿದ್ಧವಾಗಿ ಡೈನಿಂಗ್ ಟೇಬಲ್ ಅನ್ನು ಅಲಂಕರಿಸಿದ್ದವು.


ಅಡುಗೆ ಘಮವೇ ಅವನನ್ನು ಆಮಂತ್ರಿಸಿತ್ತು. ಒಬ್ಬಟ್ಟು, ಹೆಸರು ಬೇಳೆ ಕೀರು, ಜಾಮೂನು, ಮೈಸೂರ್ ಪಾಕ್, ಪೂರಿ, ಸಾಗು, ಪಲ್ಯ, ಕೊಸಂಬರಿ, ಅನ್ನ, ಸಾರು, ಹಪ್ಪಳ ಮತ್ತು ಉಪ್ಪಿನ ಕಾಯಿ ಎಲ್ಲಾನು ನಮ್ ಹೀರೋ ಫೇವರಿಟ್ ತಿಂಡಿಗಳು ಸಿದ್ಧವಾಗಿತ್ತು (ಪೂರಿ ಬಿಟ್ಟು ಎಲ್ಲ ನನ್ ಫೇವರಿಟ್ ಫುಡ್) ಅಪ್ಪ, ಅಮ್ಮ, ತಂಗಿ ಮತ್ತು ಇತರ ಸಂಬಂಧಿಕರೊಡನೆ ಊಟ ಮುಗಿಸಿ ತನ್ನ ಅಂದಿನ ದಿನಕ್ಕೆ ಮುಕ್ತಾಯ ಆಡಿ ಪ್ರಯಾಣದ ಧಣಿವನ್ನು ನೀಗಿಸಲು ನಿದ್ರಾ ದೇವಿಯ ಮೊರೆ ಹೋಗುತ್ತಾನೆ (ಸದ್ಯಕ್ಕೆ ಇತರ ಸಂಬಂಧಗಳ ಪರಿಚಯ ಅನಗತ್ಯ ಸಂದರ್ಭ ಬಂದಾಗ ಅವರ ಬಗ್ಗೆ ತಿಳಿಸುವೆ ನಿಮಗೆ ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗದಿರಲಿ ಅಂತ)


ಸಂಜೆಯ ವೇಳೆಗೆ ತನ್ನ ನಿದ್ದೆಯನ್ನು ಮುಗಿಸಿ ಎದ್ದು ಫ್ರೇಶ್ ಆಗಿ ತನ್ನವರ ಬಳಿ ಬರುತ್ತಾನೆ. ಎಲ್ಲರಿಗೂ ತಾನು ತಂದಿರುವ ಗಿಫ್ಟ್ ಎಲ್ಲ ಕೊಟ್ಟು ತನ್ನ ರಾಜಕುಮಾರಿಗೆ ತಂದ ಗಿಫ್ಟ್ ನ್ನು ಜೋಪಾನ ಮಾಡಿದ. ಮರು ದಿನ ಬೆಳ್ಳಗ್ಗೆ ತನ್ನ ರಾಜಕುಮಾರಿ ನೋಡುವ ತಯಾರಿ ನಡೆಸಿದನು.


ಸಾರ್ಥಕ್ ಮುಂಜಾನೆ 6-30 ರ‌ ಸಮಯಕ್ಕೆ ಸರಿಯಾಗಿ ರೆಡಿಯಾಗಿ ತನ್ನ ಮನದರಸಿಯನ್ನು ಕಾಣಲು ಅವಳ ಮನೆಯ ದಾರಿಗೆ ಹೊರಟ. 7-00 ರ ಸಮಯಕ್ಕೆ ಸರಿಯಾಗಿ ಅವಳ‌ ಮನೆಯನ್ನು ಪ್ರವೇಶಿಸಿದ ಅವನ ಆಗಮನಕ್ಕಾಗಿ ಅವನ ಅತ್ತೆ ಮಾವ ಅವನಿಗಾಗಿ ಕಾದು ಕುಳಿತಿದ್ದರು. ಇವನನ್ನು ಕಂಡ ಕ್ಷಣ ನಿಧಿಯೆ ಸಿಕ್ಕಷ್ಟು ಖುಷಿ ಪಟ್ಟರು ಅವರ ಯೋಗ ಕ್ಷೇಮ ವಿಚಾರಿಸಿ ಅವರಿಗೆ ಉಡುಗೊರೆ ನೀಡಿ ತನ್ನ ಮನದರಸಿಯನ್ನು ಹುಡುಕಿದನು, ಅವನ ಪ್ರಯತ್ನ ಫಲಿಸಲಿಲ್ಲ ಅಲ್ಲಿ ಎಲ್ಲೋ ಅವಳು ಇರಲಿಲ್ಲ. ಅವನ ಹುಡುಕಾಟಕ್ಕೆ ಅವನ ಅತ್ತೆ ನಿನ್ನ ರಾಜಕುಮಾರಿ ಇನ್ನು ಮಲಗಿರುವುದಾಗಿ ತಿಳಿಸಿದಾಗ ಅವರಿಗೆ ರಾಜಕುಮಾರಿಯಂತ ಯಾರು ಕರೆಯಬಾರದು ನಾನು ಮಾತ್ರ ಹಾಗೇ ಕರೆಯಬೇಕು ಅಂತ ಹೇಳಿ ಅವನು ಅವಳನ್ನು ಹರಸಿ ಅವಳ ರೂಂ ಗೆ ಪಾದಯಾತ್ರೆ ಬೆಳೆಸಿದನು.


ಅವಳ ರೂಂ ಗೆ ಅವನು ಹೋದಾಗ ಅವಳ ರೂಂನ್ನು ನೋಡಿ ನಸುನಕ್ಕು ಅವಳನ್ನು ಗಮನಿಸಿದ, ಅವಳು ಇನ್ನು ಮುದ್ದಾದ ಟೆಡ್ಡಿಯನ್ನು ತಬ್ಬಿ ಮಗುವಿನಂತೆ ನಿದ್ರಿಸುತ್ತಿದ್ದಳು.


ಮುಂಜಾನೆಯ ತಂಪಾದ ಗಾಳಿಗೆ ಕೂದಲು ಅವಳ ಮುಖವನ್ನು ಸೊಕುತ್ತಿದ್ದವು. ಅವಳನ್ನು ಏಳಿಸುವ ಮನಸ್ಸಾಗದೆ ಅವಳನ್ನೇ ನೋಡುತ್ತಾ ವಾಸ್ತವವನ್ನು ಮರೆತು ಕನಸಿನ ಲೋಕದಲ್ಲಿ ಸಂಚರಿಸುತ್ತಿದ್ದ.


ಈ ಉಸಿರಿಗೇ... ಗಾಳಿಯೇ ನೀನಾಗಿರೂ...

ನಾ ನಡೆಯುವ ದಾರಿಯೇ ನೀನಾಗಿರೂ...


ಈ ಉಸಿರಿಗೇ ಗಾಳಿಯೇ ನೀನಾಗಿರೂ...

ನಾ ನಡೆಯುವ ದಾರಿಯೇ ನೀನಾಗಿರೂ...

ಬೇರೇನು ಬೇಕು ಹೇಳೂ... ಈ‌ ಜೀವಕೆ...

ಈ ಪ್ರೀತಿಯನು ನೋಡಿ ಆ ಮೋಡ ಕರಗುತಾ

ಮತ್ತೆ ಮಳೆಯಾಗಿದೆ...

ಮತ್ತೆ ಮಳೆಯಾಗಿದೆ...

ಮತ್ತೆ ಮಳೆಯಾಗಿದೆ...

ಮತ್ತೆ ಮಳೆಯಾಗಿದೆ...


ಅವಳ ಒದ್ದಾಟದಿಂದ ಕನಸಿನಿಂದ ಎಚ್ಚೆತ್ತು ಅವನು ಅವಳ ಪಕ್ಕದಲ್ಲಿ ಮಲಗಿ ಅವಳನ್ನು ತನ್ನ ಎದೆಗೆ ಹೊರಗಿಸಿ ಕೊಂಡನು.


ಅವನ ಆ ಸ್ಪರ್ಶಕ್ಕೆ ಎಚ್ಚೆತ್ತ ರಾಜಕುಮಾರಿ, ಹೇ ಸಾರಿ ಬರಿ ರಾಜಕುಮಾರಿ ಅಂತ ಹೇಳಿದೆ ಯಾರು ಅಂತ ಹೇಳಲೇ ಇಲ್ಲ ಅಲ್ವ, ಅವಳು ಬೇರೆ ಯಾರು ನಮ್ಮ ಲೇಡಿ ಕುಂಭಕರ್ಣಿ ಮನೆಯ ಮುದ್ದು ಗೊಂಬೆ ಸೃಷ್ಟಿ.


ಸೃಷ್ಟಿಯ ತಾಯಿ ಲಕ್ಷ್ಮಿ ಯವರು ಮತ್ತು ಸಾರ್ಥಕ್ ತಂದೆ ಸೂರ್ಯ ಅಣ್ಣ ತಂಗಿ. ಸೂರ್ಯ ಮತ್ತು ಗಾಯತ್ರಿಯವರ ಮದುವೆ ಹಿರಿಯರು ನಿಶ್ಚಯಿಸಿದಂತೆ ಮದುವೆಯಾಗಿದ್ದರು. ವಿಷ್ಣುರವರು ಗಾಯತ್ರಿಯವರ ಅಣ್ಣ, ಗಾಯತ್ರಿಯವರ ಮದುವೆ ನಂತರ ಸೂರ್ಯರವರ ತಂಗಿ ಲಕ್ಷ್ಮಿಯವರನ್ನು ನೋಡಿ ಇಷ್ಟ ಪಟ್ಟು ತನ್ನ ಪ್ರೀತಿಯನ್ನು ಹಿರಿಯರಿಗೆ ತಿಳಿಸಿ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟರು. ವಿಷ್ಣುವಿನ ವ್ಯಕ್ತಿತ್ವ ಪರಿಚಯವಿದ್ದ ಹಿರಿಯರು ಲಕ್ಷ್ಮಿಯವರ ಅಭಿಪ್ರಾಯದ ಮೇಲೆ ಶುಭ ಮಹೂರ್ತವನ್ನು ನಿಶ್ಚಯಿಸಿದರು. ಹಿರಿಯರು ನಿಶ್ಚಯಿಸಿದ ಶುಭ ಮಹೂರ್ತದಲ್ಲಿ ವಿಷ್ಣು ಲಕ್ಷ್ಮಿಯವರು ಸತಿಪತಿಗಳಾದರು.


ಮನೆಯ ಎಲ್ಲ ಸದಸ್ಯರಿಗೆ ಇವಳು ಗೊಂಬೆಯಾದರೆ ಸಾರ್ಥಕ್ ಗೆ ರಾಜಕುಮಾರಿ ಅವಳನ್ನು ಯಾರು ಹಾಗೇ ಕರೆಯುವಂತಿಲ್ಲ. ಆ ಹೆಸರು ಅವನಿಗೆ ಮಾತ್ರ ಸೀಮಿತ, ಆದ್ದರಿಂದ ಎಲ್ಲರೂ ಅವಳನ್ನು ಗೊಂಬೆ ಎಂದರೆ ಇವನು ರಾಜಕುಮಾರಿ ಎಂದು ಕರೆಯುತ್ತಿದ್ದನು. ಅವಳು ಸಹ ರಾಜಕುಮಾರ ಅಂತ ಕರೆಯುತ್ತಿದ್ದಳು. ಇವನ ತರ ನನಗೆ ಮಾತ್ರ ಸೀಮಿತ ಅಂತ ಏನು ಹೇಳ್ತಾ ಇರ್ಲಿಲ್ಲ.


ಅವನ ಸ್ಪರ್ಶಕ್ಕೆ ಎಚ್ಚೆತ್ತು ಟೆಡ್ಡಿಯನ್ನು ಬಿಟ್ಟು ಅವನನ್ನೆ ತಬ್ಬಿ ಮತ್ತೆ ಮಲಗಿದಳು ಎರಡು ದಿನದ ಹಿಂದೆ ಸದ್ಯಕ್ಕೆ ಬರೋದಿಲ್ಲ ಅಂತ ಸುಳ್ಳನ್ನು ಹೇಳಿರುವ ಕಾರಣಕ್ಕೆ ಅವನ ಮೇಲಿನ ಮುನಿಸಿಗೆ ಮಾತಾಡದೆ ಮತ್ತೆ ಮಲಗಿದಳು. ಅವಳ ಕೋಪ ಅರಿತ ಸಾರ್ಥಕ್ ಅವಳು ಏಳುವ ಸಮಯಕ್ಕೆ ಕಾಯುತ್ತಾ ಹಾಗೇ ಅವಳ ತಲೆ ಸವರುತ್ತಾ ಅವಳ ನೆತ್ತಿಯನ್ನು ಚುಂಬಿಸಿ ಮಲಗಿದ.


(ಮನಸ್ಸಲ್ಲೇ ಹೇ ರಾಜಕುಮಾರಿ ಈ ಕ್ಷಣಿಕ ಮನೋ ಖುಷಿಯನ್ನು ಯಾವಾಗ ಶಾಶ್ವತ ಮಾಡುವೇ ಈ ಹೃದಯ ಅದರ ಬಡಿತ ಎಲ್ಲ ನಿಂದೆ ಕಣೇ ರಾಜಕುಮಾರಿ


ಅವನು ಬಂದಿರುವುದು ಅವಳಿಗೆ ಆಕಾಶವೇ ಸಿಕ್ಕಷ್ಟು ಖುಷಿ ಆದರೂ ಹುಸಿಕೋಪ ಅವನ ಅಪ್ಪುಗೆಯಲ್ಲಿ ಹುಡುಗಿ ಕಳೆದು ಹೋಗಿದ್ದಳು. ಆದರೂ ಅವಳ ಈ ಭಾವನೆಯನ್ನು ಅರಿಯಲು ಸೋತು ಹೋಗಿದ್ದಳು. ಅವನ ಸನಿಹವನ್ನು ಬಯಸುವ ಮನ ಬುದ್ದಿ ಮಾತ್ರ ಸ್ನೇಹ ಮತ್ತು ಸಂಬಂಧಿ ಎಂಬ ಮುಖವಾಡವನ್ನು ಹಾಕಿತ್ತು. ಕೊನೆಗೂ ತನ್ನ ಕೋಪ ಕಡಿಮೆ ಮಾಡಿಕೊಂಡು 8-00 ಗಂಟೆಗೆ ಸರಿಯಾಗಿ ಎದ್ದು ಅವನ ಮುಖ ನೋಡಿದಳು.


ಅವನ ಮುಖದಲ್ಲಿನ ಆ ನಗುವೇ ಅವಳ ಕೋಪವನ್ನು ಕಡಿಮೆ ಮಾಡಿತ್ತು. ಆದರೂ ಮುನಿಸನ್ನು ತೋರಿಸುತ್ತಾಳೆ, ಅವಳನ್ನು ಮಗುವಿನಂತೆ ಮುದ್ದಿಸಿ ರಮಿಸಿ ಅವಳ ಮನವೋಲೈಕೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಅವಳಿಗಾಗಿ ತಂದ ಉಡುಗೊರೆಯನ್ನು ಅವನು ನೀಡುತ್ತಾನೆ. ಆ ಉಡುಗೊರೆ ನೋಡಿದ ಅವಳ ಕಣ್ಣುಗಳಲ್ಲಿನ ಖುಷಿಯೇ ಅವನಿಗೆ ಸ್ವರ್ಗವೇ (ನಿಶ್ಕಳಂಕವಾಗಿ ಪ್ರೀತ್ಸೋ ಎಲ್ಲ ಹೃದಯಗಳ ಭಾವನೇ ಇದೆ ಅನ್ಸುತ್ತೆ) ಸಿಕ್ಕಷ್ಟು ಸಂತೋಷವಾಗಿದೆ.


ಸಾರ್ಥಕನ ಆಗಮನದಿಂದ ಈ ಗೊಂಬೆ 9-00 ಗಂಟೆಗೆ ರೆಡಿಯಾಗಿ ತಿಂಡಿ ತಿನ್ನೋಕೆ ಬಂದ್ಲು, ಇವಳ ಬಂದಿದ್ದು ನೋಡಿ ಮನೆಯವರಿಗೆ ಆಶ್ಚರ್ಯ ಆದರು ಇದರ ಹಿಂದಿನ ರೂವಾರಿ ಸಾರ್ಥಕ್ ಎಂದು ಮನದಲ್ಲೇ ಹರ್ಷಿಸಿದರು.


ಹಿರಿಯ ಜೀವನಗಳು ಈ ಜೋಡಿಗೆ ಬೆಸುಗೆಯ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಏನು ಇದೆ ಎಂದು ತಿಳಿಯದೇ ಮದುವೆ ಮಾತಿನಿಂದ ಮಕ್ಕಳ ಮನಸ್ಸಿಗೆ ನೋವು ಆಗಬಾರದು ಅಂತ ಮಾತಾಡದೇ ಸುಮ್ಮನಿದ್ದಾರೆ. ಈ ಸಾರ್ಥಕ್ ಮನದಲ್ಲಿ ಸೃಷ್ಟಿ ಎಂದೋ ಸ್ಥಾಪಿತವಾಗಿದ್ದಳು, ಆದರೆ ಸೃಷ್ಟಿ ಮನದಲ್ಲಿ ಸಾರ್ಥಕ್ ಮತ್ತು ಅವಳ ಸಂಬಂಧ ಗೊಂದಲವನ್ನು ಉಂಟುಮಾಡಿದೆ. ಅವಳಲ್ಲಿರೊ ಆಕರ್ಷಣೆ ಅಥವಾ ಪ್ರೀತಿ ಎಂಬುದನ್ನು ತಿಳಿಸಲು ಯಾರಿಗೇ ಸಾದ್ಯವಾಗುತ್ತೊ ಏನೋ.


ಮುಂದುವರೆಯುವುದು...


Rate this content
Log in

Similar kannada story from Drama