Akshatha S

Drama

1.8  

Akshatha S

Drama

ಪ್ರೀತಿ ಮಧುರ ತ್ಯಾಗ ಅಮರ

ಪ್ರೀತಿ ಮಧುರ ತ್ಯಾಗ ಅಮರ

2 mins
1.0K


ಒಂದು ಮಧ್ಯಮ ವರ್ಗದ ಕುಟುಂಬ. ಆ ಕುಟುಂಬದ ಯಜಮಾನ ದಯಾನಂದ್ ಇವರು ಸರ್ಕಾರಿ ಕಛೇರಿಯಲ್ಲಿ ಗುಮಾಸ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.


ದಯಾನಂದ್ ರವರ ಪತ್ನಿ ಶಾರದ. ಇವರು ಗೃಹಿಣಿ ಗಂಡನ ಮಾತೆ ವೇದ ವಾಕ್ಯ ಎಂದು ಪಾಲಿಸುವ ಮಹಿಳೆ. ಇವರಿಗೆ ಇಬ್ಬರು ಮಕ್ಕಳು. ಇವರ ಮೊದಲ ಮಗಳು ದೀಪ ಈಕೆ ಡಿಗ್ರಿ ಮುಗಿಸಿ ಒಂದು ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.


ಇವಳನ್ನು ಅವರ ಸ್ನೇಹಿತ ಪರಿಚಯದ ಮೂಲಕ ಸಂದೀಪ್ ಎಂಬ ಹುಡುಗನಿಗೆ ಮದುವೆ ಮಾಡಿದ್ದರು. ಇವನು ಒಂದು ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ರಜೆಯ ಸಂದರ್ಭದಲ್ಲಿ ಮಾತ್ರ ತವರು ಮನೆಗೆ ಬರುತ್ತಿದ್ದಳು.


ಇವರ ಎರಡನೇ ಮಗ ರಾಜೇಶ್ ಇವನು ಎಂ.ಎ ಮತ್ತು ಎಂ.ಎಡ್ ಮಾಡಿ ಕಾಲೇಜ್ ನಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದನು.


ಇವನು ಕಾಲೇಜಿನಲ್ಲಿ ಓದುವಾಗ ದೀಕ್ಷಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದನು. ಇವರ ಪ್ರೀತಿಗೆ ಅಡ್ಡ ಬಂದಿದ್ದೆ ಜಾತಿ ಎಂಬ ಮಹಾ ಪಿಡುಗು.


ಜಾತಿಯ ವಿಷಯದಲ್ಲಿ ರಾಜಿಯಾಗಲೂ ಒಪ್ಪದ ದಯಾನಂದ್ ರವರು ಸ್ನೇಹಿತರ ನೆರವಿನಿಂದ ಸದಾನಂದ್ ಎಂಬ ಉದ್ಯಮಿಯ ಸಂಬಂಧ ದೊರೆಯುತ್ತು. ಸದಾನಂದ್ ರವರ ಒಬ್ಬಳೆ ಮಗಳು ದಿವ್ಯ. ಚಿಕ್ಕ ವಯಸ್ಸಿನಲ್ಲಿ ತಾಯಿ ಪ್ರೀತಿ ಕಾಣದ ಹುಡುಗಿ.


ಇವಳು ತಂದೆ ಉದ್ಯಮಿಯಾದರೂ ಕಾಲೇಜ್ ನಲ್ಲಿ ಉಪನ್ಯಾಸಕಳಾಗಿ ಕಾರ್ಯ ನಿರ್ವಹಿಸುತ್ತಿದ್ದಳು. ಅಲ್ದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ರಾಜೇಶ್ ಮೇಲೆ ಪ್ರೀತಿಯ ಮೊಳಕೆ ಚಿಗುರಿತು.


ರಾಜೇಶ್ ನ ಸರಳತೆ, ಎಲ್ಲರಲ್ಲಿ ಒಬ್ಬನಾಗಿ ಬೆರೆತು ಒಂದಾಗುವುದು ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳನ್ನಾಗಿ ನೋಡದೆ ಸ್ನೇಹಿತನಂತೆ ಬೆರೆತು ವಿದ್ಯಾರ್ಥಿಗಳ ಸ್ಫೂರ್ತಿಯಾಗಿದ್ದನು. ದೂರದಿಂದ ಇವನನ್ನು ಗಮನಿಸುತ್ತಿದ್ದ ದಿವ್ಯಳಿಗೆ ಅವನ ಮೇಲೆ ಒಲವು ಮೂಡಿತ್ತು.


ತಂದೆಯಿಂದ ಬಂದ ಸಂಬಂಧದಿಂದ ವಿಚಲಿತಳಾದ ಅವಳು ರಾಜೇಶ್ ಬಳಿ ಪ್ರೀತಿ ವಿಚಾರ ತಿಳಿಸಲು ಮುಂದಾದಳು. ಆದರೆ ಅದಕ್ಕೆ ಸರಿಯಾದ ಸಮಯವೇ ಬರಲಿಲ್ಲ.


ಒಂದು ಭಾನುವಾರ ಹುಡುಗಿ ನೋಡುವ ಶಾಸ್ತ್ರ ಏರ್ಪಾಡು ಮಾಡಿದರು. ಅದರಂತೆ ದಯಾನಂದ್, ಶಾರದ ಮತ್ತು ರಾಜೇಶ್ ದಿವ್ಯ ಮನೆಗೆ ಬಂದರು.


ದಿವ್ಯಳಿಗೆ ರಾಜೇಶೇ ಮದುವೆ ಗಂಡು ಎಂದು ತಿಳಿದಾಗ ಆಕಾಶಕ್ಕೆ ಮೂರೇ ಗೇಣು ಎನ್ನುವಂತಾಗಿತ್ತು.


ಬಂದವರಿಗೆ ಉಪಚಾರದ ನಂತರ ಹುಡುಗಿಯನ್ನು ಕರೆಯಿಸಿದರು. ಹುಡುಗಿಯನ್ನು ಕಂಡ ದಯಾನಂದ್ ಮತ್ತು ಶಾರದ ರವರು ಒಪ್ಪಿದರು.


ಸದಾನಂದ್ ರವರೇ ಹುಡುಗ ಹುಡುಗಿ ಮಾತನಾಡಲು ಅವಕಾಶ ಮಾಡಿಕೊಟ್ಟರು. ದಿವ್ಯ ರಾಜೇಶ್ ನನ್ನು ತನ್ನ ರೂಂ ಗೆ ಕರೆದುಕೊಂಡು ಹೋದಳು.


ರಾಜೇಶ್ ದಿವ್ಯಳ ಬಳಿ ತನ್ನ ಪ್ರೀತಿಯ ವಿಷಯವನ್ನು ಹೇಳಿಕೊಂಡು ಮದುವೆ ನಿರಾಕರಿಸಲು ಕೇಳಿಕೊಂಡನು.


ರಾಜೇಶ್ ನ ಪ್ರೀತಿ ವಿಷಯ ಕೇಳಿದ ದಿವ್ಯ ತನ್ನ ಪ್ರೀತಿಗೆ ಮನದಲ್ಲೇ ಸಮಾಧಿ ಕಟ್ಟಿ ಅವನ ಪ್ರೀತಿಗೆ ಆಕೆ ಅನುಮತಿಸಿದಳು.


ದಿವ್ಯ ತನ್ನ ನಿರ್ಧಾರ ಯೋಚಿಸಿ ಹೇಳುವುದಾಗಿ ತಿಳಿಸಿದರು. ಬಂದವರೆಲ್ಲಾ ಹೊರಟ ನಂತರ ದಿವ್ಯ ತನ್ನ ತಂದೆಯ ಬಳಿ ರಾಜೇಶ್ ಪ್ರೀತಿ ಅದಕ್ಕೆ ದಯಾನಂದ್ ರವರ ನಿರಾಕರಣೆಯನ್ನು ವಿವರಿಸಿದರು. ಜೊತೆಗೆ ಅವರ ಮದುವೆ ನೀವೆ ಮಾಡಿಸಬೇಕು ಎಂದು ಕೇಳಿಕೊಂಡಳು.


ಸದಾನಂದ್ ರವರು ಮಗಳ ಮಾತಿನಿಂದ ದಯಾನಂದ್ ರವರ ಬಳಿ ಮಾತನಾಡಿ ಅವರ ಮನವೊಲಿಸಿ ಅವರ ಮನದ ಜಾತಿ ಎಂಬ ಪಿಡುಗನ್ನು ಅಳಿಸಿ ಶುಭ ಮಹೂರ್ತದಲ್ಲಿ ರಾಜೇಶ್ ಮತ್ತು ದೀಕ್ಷಾ ವಿವಾಹ ನಡೆಯಿತು.


ಇವರ ಮದುವೆ ನಂತರ ದಿವ್ಯ ಮದುವೆ ಮಾಡಲು ಮುಂದಾದವರಿಗೆ ದಿವ್ಯ ರಾಜೇಶ್ ನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿಯಿತು. ಪ್ರೀತಿಯಲ್ಲಿ ಸ್ವಾರ್ಥ ಬಯಸದೆ ತನ್ನ ಪ್ರೀತಿಯ ಖುಷಿಯನ್ನು ಬಯಸಿದ ಮಗಳ ಮೇಲೆ ಹೆಮ್ಮೆ ಉಂಟಾಯಿತು.


ದಿವ್ಯ ಬದುಕಲ್ಲಿ ಪ್ರೀತಿ ಎಂಬುದು ಮಧುರವಾದರೆ ಅದೇ ಪ್ರೀತಿ ತ್ಯಾಗದ ರೂಪದಲ್ಲಿ ಅಮರವಾಯಿತು.



Rate this content
Log in

Similar kannada story from Drama