Akshatha S

Drama Romance Others

1  

Akshatha S

Drama Romance Others

ಪ್ರತ್ಯಕ್ಷ

ಪ್ರತ್ಯಕ್ಷ

4 mins
600ಒಂದು ಸಂಜೆಯ ವೇಳೆ ಪಡುವಣ ದಿಕ್ಕಿನಲ್ಲಿ ರಂಗನ್ನು ಭೂಮಿಗೆ ನೀಡುತ್ತಾ, ಸೂರ್ಯ ತನ್ನ ಕಾಯಕವನ್ನು ಮುಗಿಸಿ ಮನೆಯ ಕಡೆ ಹೋಗುತ್ತಿದ್ದನು. ಹಕ್ಕಿಗಳು ತನ್ನ ಗೂಡನ್ನು ಸೇರಲು ಚಿಲಿಪಿಲಿ ಸದ್ದು ಮಾಡುತ್ತಾ ಹೊರಡುತ್ತಿದ್ದವು.

ಪ್ರತೀಕ್ಷ್ ಮುಗುಳುಗವ ಸೂರ್ಯನನ್ನು ನೋಡುತ್ತಾ, ಗೂಡು ಸೇರುವ ಹಕ್ಕಿಗಳ ಕಲರವವನ್ನು ಕೇಳುತ್ತಾ ತನ್ನವಳ ನೆನಪಿನಲ್ಲಿ ಹಿಂದಿನ ದಿನಗಳಿಗೆ ತೆರಳಿದನು.

ಕಾಲೇಜಿನ ಮೊದಲ ದಿನ ಪ್ರತೀಕ್ಷ್ ತನ್ನ ಅಂಬಾರಿ ಪಲ್ಸರ್ ನಲ್ಲಿ ಬರುತ್ತಿದ್ದರೆ, ಇಡೀ ಕಾಲೇಜಿನ ಎಲ್ಲಾ ಹುಡುಗಿಯರ ಕಣ್ಣು ಇವನ ಮೇಲೆ. ಎತ್ತರವಾದ ನಿಲುವು ಯೋಗ, ಜಿಮ್ ನಲ್ಲಿ ದಂಡಿಸಿದ ದೇಹ ಗಾಳಿಗೆ ಹಾರಾಡುವ ಕೂದಲು, ಬ್ಲಾಕ್ ಪ್ಯಾಂಟ್, ವೈಟ್ ಟೀ ಶರ್ಟ್ ಅದರ ಮೇಲೆ ರೆಡ್ ಜಾಕೆಟ್ ಜೊತೆಗೆ ಕೂಲಿಂಗ್ ಗ್ಲಾಸ್. ಒಟ್ಟಿನಲ್ಲಿ ತಿರುಗಿ ನೋಡುವಂತೆ ಚೆಲುವು.

ಪ್ರತೀಕ್ಷ್ ಮೇಲೆ ಎಲ್ಲ ಹುಡುಗಿಯರ ಕಣ್ಣು ಇದ್ದರೆ ಅವನ ಕಣ್ಣು ಹುಡುಕಿದ್ದು ತನ್ನವಳಿಗಾಗಿ. ಪ್ರತೀಕ್ಷ್ ಪ್ರೀತಿ ನಾಲ್ಕು ವರ್ಷದ್ದೂ, ಅವಳ ಪ್ರೀತಿಗಾಗಿ ಅವಳು ಇರುವ ಕಾಲೇಜ್ ಅನ್ನೇ ಅರಸಿ ಬಂದಿದ್ದು. ಆದರೆ ಆಕೆ ಎಂದು ಅವನ ಕಡೆ ತಿರುಗಿ ನೋಡಿರಲಿಲ್ಲ. ಈ ವರ್ಷವಾದರು ತನ್ನ ಪ್ರೀತಿಯನ್ನು ಹೇಳಿ ಕೊಳ್ಳಲು ಸಿದ್ಧನಾಗಿ ಬಂದಿದ್ದ.

ಪ್ರತೀಕ್ಷ್ ನ ಹುಡುಕುವಿಕೆಗೆ ತಡೆಯಂತೆ ಕಂಡಳು. ಆ ನೀಲಿ ಕಣ್ಗಳ ಚೆಲುವೆ. ವೈಟ್ ಬ್ಲ್ಯೂ ಕಾಂಬಿನೇಷನ್ ಡ್ರೆಸ್ ನಲ್ಲಿ, ಮಾತನಾಡುವಾಗ ಆಕೆಯ ಕೆನ್ನೆಯನ್ನು ಮುತ್ತಿಕ್ಕುವ ಆಕೆಯ ಜುಮುಕಿ, ಗಾಳಿಗೆ ಹಾರಾಡುವ ಮುಂಗುರುಳು, ಆ ನೀಲಿ ಕಣ್ಣುಗಳಿಗೆ ತಿದ್ದಿ ತೀಡಿದ ಕಾಡಿಗೆ ತುಟಿಯ ರಂಗನ್ನು ಕೊಂಚ ಹೆಚ್ಚಿಸುವ ಲಿಪ್ಸ್ಟಿಕ್ ಒಟ್ಟಿನಲ್ಲಿ ಪ್ರತೀಕ್ಷ್ ನ ಕನಸಿನ ಕುವರಿ ಕಣ್ಣ ಮುಂದಿದ್ದಳು.

ಕಾಲೇಜ್ ಬೆಲ್ ಆದಾಗ ಒಳಗೆ ಹೋಗುವ ಸಂದರ್ಭದಲ್ಲಿ ಅವಳಿಗಿಂತ ಮುಂದೆ ಹೋಗಲು ಹೋಗಿ ನೇರವಾಗಿ ಅವಳಿಗೆ ಡಿಕ್ಕಿ ಹೊಡೆದನು. ಅವನ ಡಿಕ್ಕಿಯಿಂದ ಬೀಳುವವಳನ್ನು ಅವನ ತನ್ನ ತೋಳುಗಳಲ್ಲಿ ಬಳಸಿ ಬೀಳದಂತ್ತೆ ತಡೆದನು. ಆ ಸಂದರ್ಭದಲ್ಲಿ ಇಬ್ಬರ ಕಣ್ಣುಗಳು ಬೆರೆತವು. ತಕ್ಷಣ ಅಲ್ಲಿಂದ ವಾಸ್ತವವನ್ನು ಅರಿತ ಅವಳು ಅವನಿಂದ ಬಿಡಿಸಿಕೊಂಡು ಹೊರಟಳು. ಮಂತ್ರ ಮುಗ್ಧನಂತೆ ಅವಳನ್ನೇ ಹಿಂಬಾಲಿಸಿ ಅವನು ಸಹ ಹೋದನು. ತನ್ನ ಸ್ನೇಹಿತನ ಮಾತಿನಿಂದ ಎಚ್ಚರಗೊಂಡು ತನ್ನ ಸ್ಥಳಕ್ಕೆ ಹೋಗಿ ಕುಳಿತನು.

ಪ್ರತೀಕ್ಷ್ ನ ಈ ನಡವಳಿಕೆಯಿಂದ ಇವನನ್ನೇ ನೋಡುತ್ತಿದ್ದ ಹುಡುಗಿಯರಲ್ಲಿ ಕೆಲವರು ಒಳ್ಳೆ ಜೋಡಿ ಅಂದು ಕೊಂಡರೆ ಕೆಲವರಿಗೆ ಅಸೂಯೆ ಭಾವನೆ ಉಂಟಾಯಿತು.

ಹೀಗೆ ಪ್ರತಿದಿನ ಅವಳನ್ನು ನೋಡುವುದರಲ್ಲೆ ಸಮಯವನ್ನು ವ್ಯರ್ಥ ಮಾಡುತ್ತಿದ್ದನು. ಅವನ ಈ ನೋಟ ಅವಳಿಗೆ ಅರ್ಥವಾದರೂ ಅವನ ಕಡೆ ಹೆಚ್ಚು ಗಮನ ಕೊಡದೆ ತನ್ನ ಗಮನವನ್ನು ಓದಿನ ಕಡೆ ಕೊಟ್ಟಿದ್ದಳು. ಅವಳು ಎಷ್ಟೆ‌ ಓದಿದರು, ಅವನು ಎಷ್ಟೆ ಅವಳನ್ನು ನೋಡಿದರು ಅಂದಿನ ವರ್ಷದ ಕಾಲೇಜಿನ ಟಾಪರ್ ಪ್ರತೀಕ್ಷ್.

ಇದು ಸ್ವತಃ ಅವಳಿಗೆ ಆಶ್ಚರ್ಯ ಆದರು ಅವನ ಓದಿನಲ್ಲಿ ಆಸಕ್ತಿ ಅವನ ಕಡೆ ಗಮನ ಹರಿಸುವಂತೆ ಮಾಡಿತು. ನಂತರ ಅವಳೇ ಹೋಗಿ ಅವನ ಸ್ನೇಹವನ್ನು ಮಾಡಿದಳು. ಓದಿನಲ್ಲಿ ಯಾವುದೇ ಡೌಟ್ ಇದ್ದರು ಅವನ ಬಳಿಯಲ್ಲೇ ಪರಿಹರಿಸಿಕೊಳ್ಳುತ್ತಿದ್ದಳು. ಆದರೂ ಅವಳಿಗೆ ಅವನನ್ನು ಓದಿನಲ್ಲಿ ಹಿಂದೆ ತಳ್ಳಲು ಆಗಲಿಲ್ಲ. ಅವನಿಗೆ ಕಾರಣ ಕೇಳಿದಾಗ ಅವನು ಹೇಳಿದ ಮಾತು ಒಂದೇ ಯಾವುದೇ ಕೆಲಸವನ್ನು ಕಷ್ಟ ಪಟ್ಟು ಮಾಡದೆ ಇಷ್ಟ ಪಟ್ಟು ಪ್ರೀತಿಯಿಂದ ಮಾಡಿದರೇ ಯಶಸ್ಸು ಕಂಡಿತ ಎಂದು ಹೇಳಿದನು.

ಅದರಂತೆ ಅವಳು ಸಹ ಓದಲು ಶುರು ಮಾಡಿದಾಗ ಎರಡನೇ ವರ್ಷದಲ್ಲಿ ಕಾಲೇಜಿನಲ್ಲಿ ಮೊದಲ ಸ್ಥಾನ ಇಬ್ಬರಿಗೂ ಲಭಿಸಿತ್ತು.

ಹೀಗೆ ದಿನ ಕಳೆದಂತೆ ಅಂತಿಮ ವರ್ಷದ ಅಂತಿಮ ದಿನ ಆ ವರ್ಷದ ಸೆಂಡ್ ಆಫ್ ಫಂಕ್ಷನ್, ಜ್ಯೂನಿಯರ್ಸ್ ನ ಮಾತಿನಂತೆ ಎಲ್ಲರೂ ಟ್ರೆಡಿಷನ್ ಡ್ರೆಸ್ ನಲ್ಲಿ ಬಂದಿದ್ದರು. ಪ್ರತೀಕ್ಷ್ ಬಿಳಿ ಪಂಚೆ, ಶರ್ಟ್ ಧರಿಸಿದ್ದರೆ, ಅವಳು ಹಸಿರು ಸೀರೆಯಲ್ಲಿ ವನ ದೇವತೆಯಂತೆ ಕಂಗೊಳಿಸುತ್ತಿದ್ದರು.

ಫಂಕ್ಷನ್ ನ ಒಂದು ಭಾಗವಾದ ರ್ಯಾಂಪ್ ವಾಕ್ ಮಾಡುವಾಗ ಇವರು ಜೋಡಿಯಾಗಿ ಸ್ಟೇಜ್ ನಲ್ಲಿ ಬರುವಾಗ ಪ್ರತಿಯೊಬ್ಬರ ಬಾಯಲ್ಲಿ ಬಂದ ಮಾತು ಒಂದೇ ವಾವ್ ಮೇಡ್ ಫಾರ್ ಇಚ್ ಅದರ್ ಎಂಬುದು. ಈ ಮಾತು ಪ್ರತೀಕ್ಷ್ ನಲ್ಲಿ ಗರ್ವವನ್ನು ಉಂಟು ಮಾಡಿದರೆ, ಅವಳಲ್ಲಿ ಸಂಕಟವನ್ನು ಉಂಟು ಮಾಡಿತು. ಅವಳ ಕಣ್ಣಲ್ಲಿ ಬಂದ ಕಣ್ಣಿರನ್ನು ಯಾರಿಗೂ ಕಾಣದಂತೆ ಒರೆಸಿ ಅಲ್ಲಿಂದ ಹೊರ ಬಂದಳು.

ಅವಳು ಹೋಗುವುದನ್ನು ನೋಡಿದ ಪ್ರತೀಕ್ಷ್ ನಾಚಿಕೆಯಿಂದ ಹೋದಳು ಎಂದು ಭಾವಿಸಿ ಅವಳ ಹಿಂದೆಯೇ ಹೋದನು. ಹೋಗುವಾಗ ಅಲ್ಲೇ ಇರುವ ಕೆಲವು ಗುಲಾಬಿಗಳನ್ನು ಹಿಡಿದು ಕೊಂಡು ಅವಳ ಮುಂದೆ ಮಂಡಿಯೂರಿ ಕುಳಿತು ತನ್ನ ಪ್ರೇಮ ನಿವೇದನೆ ಮಾಡಿಕೊಂಡನು.

ತಕ್ಷಣ ಅವಳು ಅವನ ಮುಂದೆ ಕುಳಿತು ಅವನ ಕೈ ಹಿಡಿದುಕೊಂಡು ನೇರವಾಗಿ ಪ್ಲೀಸ್ ಪ್ರತೀಕ್ಷ್ ನನ್ನ ಮರೆತು ಬಿಡು ನಮ್ಮ ಮನೆಯಲ್ಲಿ ಇದಕ್ಕೆಲ್ಲಾ ಅವಕಾಶ ಇಲ್ಲ ಅಪ್ಪ ಅಮ್ಮನಿಗೆ ನೋವು ಕೊಟ್ಟು ನನ್ನ ಜೀವನ ರೂಪಿಸಿಕೊಳ್ಳಲು ಇಷ್ಟ ಇಲ್ಲ ಪ್ಲೀಸ್.

ಅವನು ಮಾತನಾಡುವ ಮೊದಲು ಅವಸರದಲ್ಲಿ ಇದ್ದ ವ್ಯಕ್ತಿ ಡಿಕ್ಕಿ ಹೊಡೆದನು. ಅದರಿಂದ ವಾಸ್ತವಕ್ಕೆ ಬಂದ ಪ್ರತೀಕ್ಷ್ ಅವಳ ಮುಖವನ್ನು ನೋಡಿದನು. ಅವಳು ಒಂದು ಬಾರಿ ಅವನನ್ನು ಮತ್ತೊಂದು ಬಾರಿ ಹೂವನ್ನು ನೋಡುತ್ತಿದ್ದಳು. ಎಚ್ಚೆತ್ತ ಪ್ರತೀಕ್ಷ್ ಇದು ಅಲ್ಲಿ ಆ ಹುಡುಗಿಯರು ಕೊಟ್ಟ ಹೂವು ಎಂದು ತೊದಲಿಸುತ್ತಾ ಹೇಳಿ ಅಲ್ಲಿಂದ ಕಾಲ್ಕಿತ್ತನು.

ಅವನು ಹಾಗೇ ಹೋಗಿದ್ದು ಅವಳಿಗೆ ಬೇಜಾರಾದರು, ತನ್ನಿಂದ ಅವನ ಮನಸ್ಸಿಗೆ ನೋವಾಗಲಿಲ್ಲ ಎಂದು ಸಮಾಧಾನಗೊಂಡು ಅವನ ಹಿಂದೆಯೇ ಹೋದಳು. ಕಾರ್ಯಕ್ರಮ ಎಲ್ಲ ಮುಗಿದ ನಂತರ ಪ್ರತೀಕ್ಷ್ ಅವಳನ್ನು ಅವಳ ಮನೆಗೆ ಬಿಟ್ಟನು.

ಹೀಗೆ ದಿನ ಕಳೆದಂತೆ ಪರೀಕ್ಷೆಗಳು ಮುಗಿದು ಇಬ್ಬರು ತಮ್ಮ ಜೀವನ ರೂಪಿಸಿ ಕೊಳ್ಳಲು ಉದ್ಯೋಗ ಪಡೆದು ಜೀವನದಲ್ಲಿ ಒಂದು ಅಂತವನ್ನು ತಲುಪಿದರು. ಆದರೆ ಎಂದು ಅವನು ತನ್ನ ಪ್ರೀತಿಯನ್ನು ಎಲ್ಲೂ ಹೇಳಿಕೊಳ್ಳಲಿಲ್ಲ.

ಒಂದು ಜಿನ ಪ್ರತೀಕ್ಷ್ ನ ತಾಯಿ ಅನಾರೋಗ್ಯದಿಂದ ಮಗನನ್ನು ಮಾಡಿಕೊಳ್ಳಲು ಕೇಳಿದಾಗ ಮನಸ್ಸಿಲ್ಲದಿದ್ದರು ತನ್ನ ತಾಯಿ ನನ್ನ ಪ್ರೀತಿಯನ್ನು ಒಪ್ಪುತಾಳೊ ಇಲ್ವೋ ಅಥವ ಅವಳು ನನ್ನ ನಿರಾಕರಿಸಿದರೆ ನಮ್ಮ ಸ್ನೇಹ ಉಳಿಯುವುದಿಲ್ಲ ಎಂದು ತಾಯಿಯ ಮಾತಿಗೆ ಒಪ್ಪಿಕೊಂಡನು.

ಅದರಂತೆ ಅಂದು ಆ ಹುಡುಗಿಯನ್ನು ಮೀಟ್ ಮಾಡುವ ಸಲುವಾಗಿ ತನ್ನ ಆಫೀಸ್ ಕೆಲಸ ಮುಗಿಸಿ ಆ ಹುಡುಗಿಯನ್ನು ನೋಡಲು ಪಾರ್ಕ್ ಬಳಿ ಹೋಗಿದ್ದನು. ಆ ಹುಡುಗಿ ಬಂದು ಎಚ್ಚರಿಸಿದಾಗ ವಾಸ್ತವಕ್ಕೆ ಬಂದ ಪ್ರತೀಕ್ಷ್ ಗೆ ತನ್ನ ಕಣ್ಣನ್ನೆ ತಾನು ನಂಬದಾದನು.

ಅಲ್ಲಿ ಇದ್ದಿದ್ದು ಅವನು ಇಷ್ಟು ವರ್ಷದ ಪ್ರೀತಿ ಆ ನೀಲಿ ಕಣ್ಣಗಳ ಚೆಲುವೆ ಅವನ ಮುಂದೆ ಪ್ರತ್ಯಕ್ಷವಾಗಿದ್ದಳು ಅವನ ಪ್ರತ್ಯಕ್ಷ. ಅವಳನ್ನು ಅವನು ಅನುಮಾನದಿಂದ ಕೇಳಿದಾಗ ಪ್ರತ್ಯಕ್ಷ ನಿನ್ನ ತಾಯಿ ನೋಡಿದ ಆ ಹುಡುಗಿ ನಾನೇ, ನನ್ನ ಮದುವೆ ಆಗ್ತಿರಾ ಪ್ರತೀಕ್ಷ್ ಅಂತ ಅವಳೇ ಕೇಳಿದ್ದಳು. ಆ ಕ್ಷಣ ಅವನಿಗೆ ಸ್ವರ್ಗವೇ ಸಿಕ್ಕ ಅನುಭವವಾಗಿತ್ತು.

ಇದಕ್ಕೆ ಹೇಗೆ ಎಂದು ಕೇಳಿದಾಗ ನಿನ್ನ ತಾಯಿಯನ್ನು ಕೇಳು ಎಂದು ಕೇಳಿದಳು. ಅದೇ ಖುಷಿಯಲ್ಲಿ ಪಾರ್ಕ್ ಎಂಬುದನ್ನು ಮರೆತ ಪ್ರತೀಕ್ಷ್ ಅವಳನ್ನು ಅಪ್ಪಿ ಆಕೆಯ ಕೆನ್ನೆಗೆ ಮುತ್ತಿಟ್ಟನು. ಅವನ ಈ ದಿಡೀರ್ ವರ್ತನೆಯಿಂದ ಕೆನ್ನೆ ಕೆಂಪಾದರೂ ಹುಸಿಮುನಿಸು ತೋರಿತು ಹುಡುಗಿ. ಅಲ್ಲೇ ಸ್ವಲ್ಪ ಸಮಯ ಕಳೆದು ಅವಳನ್ನು ಅವಳ ಮನೆಗೆ ಬಿಟ್ಟು ಹೊರಟನು.

ಮನೆಗೆ ಹೋದ ಪ್ರತೀಕ್ಷ್ ತಾಯಿಯ ಬಳಿ ಹೋದನು. ಅವನ ಮುಖದಲ್ಲಿ ಕಾಂತಿಯೇ‌ ಹೇಳುತ್ತಿತ್ತು ಅವನ ಖುಷಿಯನ್ನು ಪ್ರತೀಕ್ಷ್ ತಾಯಿಯ ಮಡಿಲಿನಲ್ಲಿ ತಲೆಯಿಟ್ಟು ಅಮ್ಮ ಎಂದು ಕರೆದ ಅಷ್ಟೆ ಆ ತಾಯಿಗೆ ಮಗನ ಮನಸ್ಸಿನ ಪ್ರಶ್ನೆಗಳು ಅರ್ಥವಾಗಿದ್ದವು.

ತಾಯಿಯೇ‌ ಮಾತನ್ನು ಮುಂದುವರೆಸಿದರು. ಏನು ಹೇಳ್ಬೇಡ ಕಂದ ನಿನ್ ತಾಯಿ ಅಷ್ಟೊಂದು ಕಠಿಣ ಅಲ್ಲ ನೀನು ಬಾಯಿ ಬಿಟ್ಟು ಹೇಳದಿದ್ದರು ನಿನ್ನ ಮುಖ ಎಲ್ಲ ಹೇಳುತ್ತೆ ಎಂದಾಗ ಪ್ರತೀಕ್ಷ್ ತನ್ನ ತಾಯಿ‌ ಮುಖವನ್ನು ನೋಡಿದನು.

ಅವರು ಮುಗುಳ್ನಕ್ಕು ನೀನು ಯಾವುದೋ ವಿಷಯನ ಚಿಂತೆ ಮಾಡ್ತಾ‌ ಇದಿಯಾ ಅಂತ ಗೊತ್ತಿತ್ತು ಪ್ರತ್ಯಕ್ಷ ಮತ್ತೆ ನಿನ್ನ ಫ್ರೇಂಡ್ಸ್ ನ ವಿಚಾರಿಸಿದಾಗ ನನಗೆ ತಿಳಿಯಲಿಲ್ಲ, ನಿನ್ನ ರೂಂ ಕ್ಲೀನ್ ಮಾಡುವಾಗ ನಿನ್ನ ಡೈರಿ ನೀನು ಪ್ರತ್ಯಕ್ಷ ಕಾಲೇಜಿನಲ್ಲಿ ತೆಗೆದ ಫೋಟೋ ಎಲ್ಲ ಸತ್ಯ ಹೇಳಿದವು.

ಪ್ರತ್ಯಕ್ಷನ ವಿಚಾರಿಸಿದಾಗ ನೀನು ಯಾವುದೇ ಭಾವನೆಗಳನ್ನು ಅವಳಲ್ಲಿ ಹೇಳಿಕೊಂಡಿಲ್ಲ ಎಂಬುದು ಗೊತ್ತಾಯಿತು. ಅವಳ ಅಭಿಪ್ರಾಯ ಕೇಳಿದಾಗ ಅವಳಿಗೂ ನಿನ್ನ ಮೇಲೆ ಪ್ರೀತಿ ಇರುವುದು ಗೊತ್ತಾಯಿತು. ಆದರೆ ಅವಳು ತನ್ನ ತಂದೆಯ ಮುಂದೆ ತನ್ನ ಪ್ರೀತಿಯ ವಿಚಾರವನ್ನು ಹೇಳಲು ಹೆದರಿ ನನ್ನಿಂದ ನಿನಗೆ ನೋವು ಆಗಬಾರದು ಎಂದು ನಿನ್ನಷ್ಟೆ ನೋವು ಪಡ್ತಾ ಇದ್ದಳು. ಅದಕ್ಕೆ ನಾನೇ ನೇರವಾಗಿ ಅವರ ಅಪ್ಪ ಅಮ್ಮನ ಬಳಿ ಮಾತನಾಡಿದಾಗ ನಿನ್ನ ಬಗ್ಗೆ ತಿಳಿದ ಅವರು ಜೊತೆಗೆ ಪಕ್ಕದ ಮನೆಯಲ್ಲಿ ಕಣ್ಮುಂದೆನೆ ಇರುತ್ತಾಳೆ ಎಂದು ಏನು ಯೋಚಿಸದೆ ಒಪ್ಪಿಕೊಂಡರು.

ತನ್ನ ತಾಯಿಯ ಮಾತನ್ನು ಕೇಳಿದ ಪ್ರತೀಕ್ಷ್ ಗೆ ಒಂದು ಕನಸಂತೆ ಭಾಸವಾಯಿತು. ತಾಯಿಯ ಬಗ್ಗೆ ಇದ್ದ ಗೌರವ ಮತ್ತಷ್ಟು ಹೆಚ್ಚಾಯಿತು. ಅದೇ ಖುಷಿಯಲ್ಲಿ ತಾಯಿಯನ್ನು ಅಪ್ಪಿ ಐ ಲವ್ ಯು ಅಮ್ಮ ಎಂದನು. ಜೆತೆಗೆ ಅದರಲ್ಲೂ ಪ್ರತ್ಯಕ್ಷ ತನ್ನನ್ನು ಪ್ರೀತಿಸುತ್ತಿದ್ದಳು ಎಂಬುದನ್ನು ತಿಳಿದು ಆಕಾಶಕ್ಕೆ ಏಣಿ ಹಾಕಿದಷ್ಟು ಸಂಭ್ರಮ ಪಟ್ಟನು. ಅವರ ಮದುವೆಗೆ ಮುಹೂರ್ತ ನೋಡಿದಾಗ ಮೂರು ತಿಂಗಳ ನಂತರ ಮದುವೆ ಎಂದು ನಿಶ್ಚಯಿಸಿದರು.

ಹಿರಿಯರು ನಿಶ್ಚಯಿಸಿದಂತೆ ಮೂರು ತಿಂಗಳ ನಂತರ ಪ್ರತೀಕ್ಷ್ ಮತ್ತು ಪ್ರತ್ಯಕ್ಷ ಸತಿಪತಿಗಳಾದರು. ಮೊದಲ ರಾತ್ರಿಯ ದಿನ ಪ್ರತೀಕ್ಷ್ ನೂರು ಹೂವುಗಳ ಗುಲಾಬಿ ಹೂವಿನ ಗುಚ್ಛವನ್ನು ನೀಡಿ ತನ್ನ ಪ್ರೀತಿಯನ್ನು ನಿವೇದಿಸಿಕೊಂಡನು ಅಷ್ಟೇ ಖುಷಿಯಿಂದ ಪ್ರತ್ಯಕ್ಷ ಸಹ ಅವನ ಪ್ರೀತಿಯನ್ನು ಒಪ್ಪಿ ಅವನನ್ನು ಅಪ್ಪಿದಳು.Rate this content
Log in

Similar kannada story from Drama