STORYMIRROR

Vaishnavi S Rao

Tragedy Inspirational Children

4  

Vaishnavi S Rao

Tragedy Inspirational Children

ಸಿದ್ದಲಿಂಗಯ್ಯ

ಸಿದ್ದಲಿಂಗಯ್ಯ

5 mins
377


ಕನ್ನಡದ ದಲಿತ ಕವಿ ಸಿದ್ಧಲಿಂಗಯ್ಯನವರ ಪಿಹೆಚ್.ಡಿ. ಪ್ರಬಂಧ ಕೃತಿ ಗ್ರಾಮ ದೇವತೆಗಳು. ಗ್ರಾಮ ದೇವತೆಗಳು ಎನ್ನುವ ಕೃತಿಯಲ್ಲಿ ಒಂದು ಗ್ರಾಮ ಅಥವಾ ಒಂದು ಸೀಮೆಯ ರಕ್ಷಣೆ ಮತ್ತು ಸಂಮೃದ್ಧಿಗಾಗಿ ವಿಶೇಷವಾಗಿ ಪೂಜಿಸಲ್ಪಡುವ ದೇವತೆ.


ಸಿದ್ದಲಿಂಗಯ್ಯಯವರ " ಗ್ರಾಮ ದೇವತೆಗಳು" ಎನ್ನುವ ಕೃತಿಯಲ್ಲಿ ಎಷ್ಟು ಅರ್ಥಪೂರ್ಣ ಮತ್ತು ವೈಶಿಷ್ಟಪೂರ್ಣವಾಗಿ ವರ್ಣಿಸಿದ್ದಾರೆ. ಇಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು ಎನ್ನುವ ಆಲೋಚನೆಯನ್ನು ಇಟ್ಟುಕೊಂಡು ರಚಿಸಿದ್ದಾರೆ. ಗ್ರಾಮಜೀವನದಲ್ಲಿ ಇನ್ನೂ ಕೂಡ ನಮ್ಮ ಸಂಸ್ಕೃತಿ, ವಿಚಾರ, ಜೀವನಶೈಲಿಯು ಹಾಗೆ ಉಳಿಸಿಕೊಂಡಿರುವ ಬಗ್ಗೆ ತಿಳಿಸುತ್ತಾರೆ.ಆದರೆ ಗ್ರಾಮಜೀವನವು ತನ್ನ ಅವನತಿಯನ್ನು ಕಂಡುಬರುತ್ತಿದೆ ಎನ್ನುವ ವಿಚಾರ ಕೇಳಿ ಮನಕ್ಕೆ ನೋವು ತಂದಿದೆ ಎಂದರು.


ಗ್ರಾಮಜೀವನವು ಅವನತಿ ಹೊಂದಲು ಸಾಕಷ್ಟು ಕಾರಣಗಳನ್ನು ತಿಳಿಸುತ್ತಾರೆ. ಬಹುತೇಕ ಹಳ್ಳಿಯಲ್ಲಿ ನೆಲೆಸಿದ ಯುವಕರು ನಾವು ಹಳ್ಳಿಯ ಜೀವನ ಬಿಟ್ಟು ನಗರಜೀವನಕ್ಕೆ ಹೋಗುತ್ತಾ ಇದ್ದಾರೆ. ನಗರದಲ್ಲಿ ಬೆಳೆದಿರುವ ಕೈಗಾರಿಕೆಯಿಂದ ನಮ್ಮ ಸಂಸ್ಕೃತಿ ತನ್ನ ಸ್ಥಾನ ಕಳೆದುಕೊಂಡಿದೆ.


ವಿಮರ್ಶೆಗಳು


ಗ್ರಾಮ ದೇವತೆಗಳು ಪರಿಕಲ್ಪನೆ 


 ಕಷ್ಟಬಂದಾಗ ನಾವುಗಳು ಒಮ್ಮೆ ನಾವು ದೇವರಲ್ಲಿ ಭಕ್ತಿಯಿಂದ ಕರವನ್ನು ಮುಗಿದು ನಮ್ಮನ್ನು ರಕ್ಷಣೆ ಮಾಡಿ ಎಂದುಕೊಳ್ಳಿಕೊಳ್ಳುತ್ತೇವೆ. ಅದೇ ರೀತಿಯಲ್ಲಿ, ಗ್ರಾಮೀಣಭಾಗದಲ್ಲಿ ಗ್ರಾಮದೇವತೆಯವರು ನೆಲೆಸಿದ್ದು ಅವರು ಶಕ್ತಿಯನ್ನು ಹೊಂದಿದ್ದು ಆಗುಹೋಗುಗಳ ಬಗ್ಗೆ ತಿಳಿದುಕೊಂಡಿರುತ್ತಾರೆ. ಅವರ ಬಳಿ ಏನೇ ಕೇಳಿಕೊಂಡರು ಆಗುತ್ತದೆ ಎನ್ನುವ ನಂಬಿಕೆ ಗ್ರಾಮೀಣಭಾಗದವರದ್ದು ಎಂದೂ ಸಿದ್ದಲಿಂಗಯ್ಯಯವರು ತಿಳಿಸಿದ್ದಾರೆ.

  ಗ್ರಾಮದೇವತೆ ಎನ್ನುವ ಪರಿಕಲ್ಪನೆಯು ಪುರಾತನ ಮತ್ತು ಚಾರಿತ್ರಿಕ ಇತಿಹಾಸವನ್ನು ಹೊಂದಿಕೊಂಡಿದೆ. ಇಲ್ಲಿ ಜೀವನದಲ್ಲಿ ನಡೆಯುವ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಗ್ರಾಮದ ಅಮ್ಮ ಕೋಪ ಮಾಡಿಕೊಂಡಿದ್ದಾರೆ ಎಂದೂ ಬಲಿ ಕೊಡುವುದನ್ನು ಕಾಣಬಹುದು.ಗ್ರಾಮದಲ್ಲಿ ಯಾರು ಆದರೂ ಆಕಸ್ಮಿಕ ಮರಣಹೊಂದಿದರೆ ಸಂಸ್ಕಾರ ಮಾಡುವುದು ಸಹಜ ಆದರೆ ಕಾಲ ನಂತರದಲ್ಲಿ ಪ್ರೇತ, ಭೂತವಾಗಿ ಬಂದರೆ ಅದನ್ನು ಗ್ರಾಮದೇವತೆಯಾಗಿರುತ್ತಾರೆ ಎಂದೂ ಕರೆದರು.

  "ಗ್ರಾಮ" ಎಂಬ ಪರಿಕಲ್ಪನೆಯು ವೇದದಲ್ಲಿ ಉಲ್ಲೇಖವಾಗಿರುತ್ತದೆ.ವೇದಗಳ ಕಾಲವನ್ನು ನಾವು ಪೂರ್ವಕಾಲ ಮತ್ತು ವೇದನಂತರಕಾಲವೆಂದು ವಿಭಾಗೀಸಬಹುದು.ಕುಟುಂಬ ರಚನೆಯು ತನ್ನ ಪಾತ್ರವನ್ನು ಹೆಚ್ಚಿಸಿಕೊಂಡಿತು. ಇಲ್ಲಿ ಅವಿಭಕ್ತ ಕುಟುಂಬ ಹೆಚ್ಚಾಗಿ ಕಾಣಬಹುದು ಇಲ್ಲಿ ಸ್ತ್ರೀ ತನ್ನ ಕುಟುಂಬ ಜವಾಬ್ದಾರಿ ನಡೆಸುತ್ತಾರೆ.ನಂತರದಲ್ಲಿ ಪುರುಷ ಕುಟುಂಬ ಜವಾಬ್ದಾರಿ ಹೊತ್ತಿಕೊಂಡು ಸ್ತ್ರೀಯನ್ನು ಮನೆಗೆ ಸೀಮಿತವಾಗಿ ಆಕೆಯನ್ನು ಇನ್ನೊಂದು ಜೀವಿಗೆ ಜನನ ನೀಡುವ ಪ್ರಕ್ರಿಯೆ ಪ್ರಾರಂಭವಾಯಿತು.

ಅಂದಿನ ಕಾಲದಲ್ಲಿ ಕೃಷಿ ಪ್ರಧಾನ ಅರ್ಥವ್ಯವಸ್ಥೆಯನ್ನು ಹೊಂದಿದ್ದು ಅವುಗಳಿಂದ ಜೀವನವನ್ನು ನಡೆಸುತ್ತಾ ಇದ್ದರು.


ವೇದ ಮತ್ತು ನಂತರದ ವೇದಗಳ ಕಾಲದ ಘಟ್ಟದ ಕುಟುಂಬ ರಚನೆಯಲ್ಲಿ ಆರಾಧನೆ ಮಾಡುವ ನಾಡವಳಿ ಪ್ರಕ್ರಿಯೆ ಉಂಟುಯಿತು.ಮಾತೃದೇವರು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ವೇದಾಕಾಲದ ಪೂರ್ವದಲ್ಲಿ ಅಂದರೆ ಶಿಲಾಯುಗದಲ್ಲೂ ಮಾತೃದೇವರ ವರ್ಣನೆ ಕಾಣಬಹುದು. ಸಿಂಧುನಾಗರೀಕತೆಯ ಕಾಲದಲ್ಲಿ ಸ್ತ್ರೀ ಮತ್ತು ಪುರುಷ ದೇವತೆಯ ಕೆತ್ತನೆಯ ವಿಗ್ರಹವು ಎಂದೂ ಸಾಕ್ಷಿಗೆ ದೊರಕಿದೆ.


ಪ್ರಾಚೀನ ಕಾಲದಿಂದಲೂ ಕುಲದೇವತೆಯಾಗಿ ಮಾತೃದೇವತೆಯನ್ನು ಕಾಣಬಹುದು. ದೇವರು ಸೃಷ್ಟಿಸಿದ ಪ್ರಾಣಿಗಳು ಅವರಲ್ಲೂ ಸಂತಾನ ಪ್ರಕ್ರಿಯೆ ಉಂಟಾಗಿ ಅವರಲ್ಲೂ ದೇವತಾ ಸದೃಶ್ಯವನ್ನು ಕಾಣಬಹುದು.ಕಾಲಸಾರಿದಂತೆ, ಜನರು ತಮ್ಮ ಜೀವನ ಉಪಯೋಗಕ್ಕಾಗಿ ವ್ಯವಸಾಯ ಮಾಡಿಕೊಳ್ಳಲು ಭೂಮಿಯನ್ನು ತಮ್ಮ ಅಮ್ಮನ ಸಮಾನ ಎಂದೂ ಅವರಿಗೆ ದೇವರಸ್ಥಾನ ಕೊಟ್ಟಿದ್ದು ಎಷ್ಟು ಸೊಗಸಾಗಿದೆ ಅಲ್ಲಿ ಬೆಳೆಯುವ ಧಾನ್ಯದಲ್ಲೂ ದೇವರು ಇದ್ದಾರೆ ಎನ್ನುವ ಪೂಜ್ಯಭಾವವು ಸೃಷ್ಟಿಯಾಯಿತು.


ಗ್ರಾಮದೇವತೆಗಳ ವರ್ಗಿಕರಣ


ಸಿದ್ದಲಿಂಗಯ್ಯನವರು ಆಚರಣೆಗೆ ಹೆಚ್ಚಿನ ಮಹತ್ವಕೊಟ್ಟಿರುತ್ತಾರೆ. ಏಕೆಂದರೆ ಆಚರಣೆಯನ್ನು ಒಂದು ಚಟುವಟಿಕೆ ಎಂದು ಕರೆದಿದ್ದಾರೆ.ಹೇಗೆಂದರೆ ದನಕರುಗಳನ್ನು ಸಾಕುವುದು ಅಲ್ಲಿ ದೇವರನ್ನು ಕಾಣುತ್ತೆವೆ,ಪಶುಸಾಗೋಪನೆ ಮಾಡುವಾಗ ಸಾಕಷ್ಟು ದೇವತೆಗಳು ಅಲ್ಲಿ ಪುರುಷ ಮತ್ತು ಮಹಿಳಾ ದೇವರು ನೆಲೆಸಿರುವುದು ಕಂಡುಕಂಡಿತು.ಇಲ್ಲಿ ಪುರಾಣ ಎಂಬ ಅಮೂಲ್ಯ ಸಾಹಿತ್ಯವನ್ನು ತೆಗೆದುಕೊಂಡಿದ್ದು ಬ್ರಹ್ಮ, ವಿಷ್ಣು, ಶಿವರ ಜನನಕ್ಕೆ ಕಾರಣವಾದವಳು ಒಬ್ಬಳು ಹೆಣ್ಣು. ಅದರಿಂದ ಹೆಣ್ಣಿಗೆ ಪೂಜ್ಯಭಾವದಿಂದ ನೋಡುತ್ತೇವೆ.

  ಗ್ರಾಮದೇವತೆಗಳ ವರ್ಣಿಕರಣ ಎನ್ನುವುದು ತುಂಬಾ ಕಷ್ಟಕರವಾದ ವಿಷಯವಾಗಿದೆ. ಹಿಂದೆ ವೇದಗಳ ಕಾಲದಲ್ಲಿ ಕೃಷಿಯು ಆರ್ಥಿಕ ಚಟುವಟಿಕೆಯ ಮೂಲವಾಗಿದ್ದು ಕೃಷಿಯನ್ನು ಭೂಮಿಯಲ್ಲಿ ಮಾಡುವುದರಿಂದ ಭೂತಾಯಿಯವರನ್ನು ಸ್ತ್ರೀದೇವತೆ ಎಂದು ಪರಿಗಣಿಸಿದ್ದಾರೆ.

ಚಿರಿಕಾಹುವಾಸ ಜನಾಂಗದ ದೇವತೆಗಳನ್ನು ದೇವರು, ಶಕ್ತಿಗಳು, ಪ್ರೇತಗಳು ಎಂದು ವರ್ಣಿಕರಣ ಮಾಡಿದ್ದಾರೆ. ಇಲ್ಲಿ ದೇವರನ್ನು ಪುಣ್ಯ ಮತ್ತು ಶ್ರೇಷ್ಠವಾದ ಭಕ್ತಿಯ ಭಾವದಿಂದ ಪೂಜಿಸುತ್ತೇವೆ. ಅದೇ ರೀತಿಯಲ್ಲಿ ಶಕ್ತಿ ಎನ್ನುವುದು ದೇವರಲ್ಲಿ ಆಗಿರುವಂಥ ಬಹುದೊಡ್ಡ ಅಂಶವಾಗಿದೆ. ಪ್ರೇತಗಳು ಎಂದರೆ ಯಾವ ಮನುಜನಿಗೆ ಸಂಸ್ಕಾರವಾಗದೆ ಆತನು ಆಲದ ಮರದಲ್ಲಿ ಕೂತುಕೊಂಡು ಮುಕ್ತಿಗಾಗಿ ಹವಣಿಸಿರುತ್ತಾರೆ.


ಬಗಾಂಡಾ ಸಂಸ್ಕೃತಿಯಲ್ಲಿ ದೇವರನ್ನು ಕುಲದೇವತೆ, ರಾಜರ ಪ್ರೇತಗಳು,ರಾಷ್ಟೀಯ ದೇವತೆಗಳು ಎಂದು ವರ್ಣಿಕರಣ ಮಾಡಿದ್ದಾರೆ ಸಿದ್ದಲಿಂಗಯ್ಯ ಅವರ ಗ್ರಾಮದೇವತೆ ಗ್ರಂಥದಲ್ಲಿ ನಿರೂಪಿಸಿದ್ದಾರೆ. ಕುಲದೇವತೆ ಎನ್ನುವವರು ಕುಟುಂಬಕ್ಕೆ ಸಂಬಂಧಪಟ್ಟ ದೇವರು. ತಂದೆ ಮತ್ತು ತಾಯಿಯವರ ಆರಾಧಿಸಿಕೊಂಡು ಬಂದ ದೇವರನ್ನು ಮಕ್ಕಳು ಅನುಸರಿಸಿ ಆಚರಿಸಿಕೊಂಡು ಮುಂದುವರಿಸಿಕೊಂಡು ಹೋಗುವುದು. ರಾಷ್ಟ್ರ ಎನ್ನುವುದು ವೇದಗಳ ಕಾಲದಲ್ಲಿ ರಾಜ್ಯವನ್ನು ಆಗುವ ರಾಜರ ಸಂಸ್ಥಾನಂದಲ್ಲಿ ದೇವರನ್ನು ಭಕ್ತಿಯಿಂದ ಆರಾಧಿಸಿಕೊಂಡು ಬರುವುದು.ಉದಾಹರಣೆ, ರಾಜರು ಯುದ್ಧಕ್ಕೆ ಹೋಗುವಾಗ ನಮ್ಮನ್ನು ರಕ್ಷಣೆ ಮಾಡಲು ಮೊದಲು ದೇವರಲ್ಲಿ ಹೋಗುತ್ತಾ ಇದ್ದರು. ಬಹುತೇಕ ರಾಜರು ಮತ್ತು ಮಹಾರಾಣಿಯವರು ಧಾರ್ಮಿಕ ಸಹಿಷ್ಣುತೆಯನ್ನು ಹೊಂದಿದ್ದರು.


ಚಾರ್ಲ್ಸ್ ವಿನಿಕ್ ಅವರು ಅದ್ಭುತವಾಗಿ ವರ್ಣಿಕರಣ ಮಾಡಿದ್ದಾರೆ. ಪ್ರಕೃತಿ ದೇವತೆಗಳು, ಸಮೃದ್ಧಿ ದೇವತೆಗಳು, ಚಟುವಟಿಕೆ ದೇವತೆಗಳು,ಮದ್ಯಸ್ತಿಕೆ ದೇವತೆಗಳು,ಉನ್ನತ ದೇವತೆಗಳು, ಜಗದಾಧಿಕಾರ ದೇವತೆಗಳು ಎಂದು. ಪ್ರಕೃತಿ ಎಂದರೆ ನಾವು ಇರುವ ಈ ಪರಿಸರವೇ ದೇವರು ಎಂಬ ಪುಣ್ಯಾಭಾವ. ಸಮೃದ್ಧಿ ಎಂದರೆ ಜನರು ಎಲ್ಲರೂ ಯೋಗಕ್ಷೇಮದಿಂದ ನೋಡಿಕೊಳ್ಳಲು ದೇವರು ಅವತಾರ ಮಾಡುತ್ತಾರೆ.ಇಲ್ಲಿ ಚಟುವಟಿಕೆ ದೇವರು ಎಂದರೆ ಯುದ್ಧದೇವರು ಎಂದರೆ ಹನುಮಾನ ದೇವರನ್ನು ಅರಾಧಿಸುವುದು. ಊರಿನಲ್ಲಿ ಭಯಾನಕ ರೋಗಗಳು ಬಂದರೆ ರೋಗನಾಶಿನಿ ದೇವರನ್ನು ಆರಾಧಿಸುತ್ತಾ ಇದ್ದರು. ಮದ್ಯಸ್ತಿಕೆ ದೇವರು ಇಬ್ಬರ ನಡುವೆ ಮಧ್ಯವರ್ತಿ ಎಂದರ್ಥ. ಇಲ್ಲಿ ಮುಖ್ಯವಾಗಿ ವಿಷ್ಣು ದೇವರನ್ನು ಗುರುತಿಸಿದ್ದಾರೆ.


ಗ್ರಾಮೀಣ ಭಾಗದಲ್ಲಿ ಮುಖ್ಯವಾಗಿ ಸ್ತ್ರೀ ದೇವತೆಗಳು ಮತ್ತು ಪುರುಷದೇವರನ್ನು ಕಾಣಬಹುದು. ಇಲ್ಲಿ ಗುಣಸ್ವಭಾವಕ್ಕೆ ಅನುಗುಣವಾಗಿ ಸೌಮ್ಯ ದೇವತೆ ಮತ್ತು ಉಗ್ರ ದೇವರು ಎಂದು ವರ್ಗಿಕರಿಸಿದ್ದಾರೆ. ಇಲ್ಲಿ ದುಷ್ಟರನ್ನು ಶಿಕ್ಷೆ ಮಾಡಲು ಉಗ್ರ ದೇವರು ಎಂದರೆ ಕಾಳಿ ಅಮ್ಮ ಅವತಾರ ಮಾಡುತ್ತಾರೆ.

 ಆಹಾರಕ್ಕೆ ಅನುಗುಣವಾಗಿ ಮಾಂಸಾಹಾರಿ ಮತ್ತು ಸಸ್ಯಾಹಾರಿ ದೇವತೆಗಳು ಎಂದು ವರ್ಣಿಕರಿಸಿದ್ದಾರೆ. ಇಲ್ಲಿ ತುಳುನಾಡಿನ ಅಮ್ಮನ ಬಗ್ಗೆ ವಿಶೇಷ ಮಹತ್ವ ನೀಡಿರುತ್ತಾರೆ.

  ಜನಾಂಗ, ಕಾಲಕ್ಕೆ, ಬಣ್ಣಕ್ಕೆ ಅನುಗುಣವಾಗಿ ದೇವರನ್ನು ವರ್ಗಿಕರಿಸಿದ್ದಾರೆ.ಗ್ರಾಮೀಣ ಭಾಗದಲ್ಲಿ ಜನರು ಹೆಚ್ಚಾಗಿ ದೇವರನ್ನು ನಂಬುತ್ತಾರೆ. ನಾವು ತಪ್ಪು ಮಾಡಿದರೆ ನಮ್ಮನ್ನು ಶಿಕ್ಷಿಸುತ್ತಾರೆ ಎನ್ನುವ ಭಯವು ಅವರಿಸುತ್ತದೆ.


ಗ್ರಾಮದೇವತೆಗಳನ್ನು ಕುರಿತ ಪುರಾಣ ಐತಿಹ್ಯಗಳು

ಗ್ರಾಮದೇವತೆ ಅವರ ಬಗ್ಗೆ ಯಾವುದೇ ಮೂಲ ಆಧಾರಗಳು ನಮಗೆ ಸಿಗುವುದಿಲ್ಲ. ಗ್ರಾಮದಲ್ಲಿ ನೆಲೆಸಿರುವ ಜನರು ಗ್ರಾಮದಲ್ಲಿ ನಡೆಯುವ ಘಟನೆಯನ್ನು ಒಬ್ಬರಿಂದ ಇನ್ನೊಬ್ಬರಿಗೆ ತಿಳಿಸುವುದರ ಮೂಲಕ ಗ್ರಾಮದೇವತೆಗಳ ಬಗ್ಗೆ ವಿಷಯಸಂಗ್ರಹ ಮಾಡಬಹುದಾಗಿದೆ.

 ಬಹುತೇಕ ಹಳ್ಳಿಯಲ್ಲಿ ಹರಿಯುವ ನೀರು, ಸೂರ್ಯ, ಗಿಡ, ಮರವನ್ನು ಆರಾಧಿಸುತ್ತಾ ಇದ್ದರು.ಗ್ರಾಮದೇವತೆಯವರಿಗೆ ಸಂಬಂಧಿಸಿದಂತೆ ಪುರಾಣಗಳಲ್ಲಿ ದೇವತೆ ನೆಲೆಗೊಂಡ ಪುರಾಣಗಳು,ಮಾರಮ್ಮನ ಕುರಿತು ಪುರಾಣಗಳು ಸಾಹಸ ಪ್ರದರ್ಶನದ ಸಂಬಂಧದ ಪುರಾಣವು ನಮಗೆ ವಿಷಯ ವಿಶ್ಲೇಷಣೆಗೆ ಅವಕಾಶ ಒದಗಿಸಿಕೊಡುತ್ತದೆ.

  ದೇವರು ಭಕ್ತನನ್ನು ಪರೀಕ್ಷೆ ಮಾಡಲು ಬಂದು ಅಲ್ಲಿಯೇ ತಾನು ಭಕ್ತರನ್ನು ಸಂರಕ್ಷಣೆ ಮಾಡುವ ಕಾಯಕವನ್ನು ಕಾಣಬಹುದು. ಊರಿನಲ್ಲಿ ಬರಗಾಲ, ಕಾಯಿಲೆಗಳು ಸಂಬಂಧಿಸಿದವುಗಳು ಬಂದಾಗ ಊರಿನವರು ಮಾರಮ್ಮನ ಬಳಿ ವರ್ಷಪ್ರತಿಯಂತೆ ಕಾಯಿ ಹೊಡೆಸುವುದು, ನರ ಮತ್ತು ಪ್ರಾಣಿ ಬಲಿಯಂಥ ಕಥೆಯನ್ನು ಕಾಣಬಹುದು. ಸಾಹಸ ಪ್ರದರ್ಶನ ಎಂದರೆ ಗ್ರಾಮದ ಅಮ್ಮ ಅವರು ಧರ್ಮಕಾರ್ಯವನ್ನು ಬಿಟ್ಟು ಅಧರ್ಮ ಮಾಡುವಾಗ ನನ್ನ ವಿವಿಧ ಅವತಾರ ತಾಳಿ ಸಂಹಾರ ಮಾಡುವುದನ್ನು ಗ್ರಾಮದೇವತೆಗಳನ್ನು ಕುರಿತ ಪುರಾಣ ಐತಿಹ್ಯಗಳಲ್ಲಿ ಕಾಣಬಹುದು.


ಗ್ರಾಮದೇವತೆಗಳನ್ನು ಕುರಿತು ಅಚರಣೆಗಳು 


 ಜಾನಪದರಿಗೆ ಸಂಸ್ಕೃತಿಯ ಆಚರಣೆಯೇ ಬುನಾದಿ.ಅವರು ಧರ್ಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದಾರೆ.ಅವರು ನಿರ್ದಿಷ್ಟ ಅವಧಿ ಮತ್ತು ವ್ಯಕ್ತಿಯಿಂದಲೇ ಆಗಬೇಕು ಎನ್ನುವ ಅಂಶವನ್ನು ಗಮನಿಸಬೇಕು. ಧರ್ಮವನ್ನು ಅವರು ನಂಬಿಕೆ ಎಂದು ಕರೆದಿದ್ದಾರೆ.ಗ್ರಾಮ ಎನ್ನುವುದು ಸಣ್ಣ ಘಟಕವಾಗಿದ್ದು ಅಲ್ಲಿ ನೆಲೆಸಿರುವ ಸಾವಿರಾರು ಕುಟುಂಬದವರು ತಮಗೆ ನಮ್ಮ ತಂದೆಯವರು ಮನೆಯಲ್ಲಿ ಮಾಡಿಕೊಂಡ ಆಚರಣೆ ಸಂಪೂರ್ಣ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವುದು ವಾಡಿಕೆಯಾಗಿತ್ತು. ಅದೇ ರೀತಿಯಲ್ಲಿ ಗ್ರಾಮದಲ್ಲಿ ಜನರು ಗ್ರಾಮದೇವತೆಯ ಎದುರು ತಪ್ಪು ಮಾಡಿದ್ದಲ್ಲಿ ಹರಿಕೆ ರೂಪದಲ್ಲಿ ಚಾಟಿ ಹೊಡೆಯುವುದು, ಮುಳ್ಳಿನ ಮೇಲೆ ನಡೆಯುವುದು ಇದ್ದಿತು. ಇದು ಜನಾಂಗ, ಭಾಷೆ, ಜನ, ಪ್ರಾಂತ್ಯ ವಿಶೇಷ ಆಚರಣೆ ಪದ್ಧತಿಯನ್ನು ಕಾಣಬಹುದು.

  ಆಚರಣೆ ನಿಧಾನ ಗತಿಯಲ್ಲಿ ಹಬ್ಬಗಳ ರೂಪದಲ್ಲಿ ಪರಿವರ್ತನೆ ಹೊಂದಿತು. ರೈತ ವರ್ಗದಲ್ಲಿ ಒಳ್ಳೆಯ ಫಸಲು ಬಂದಾಗ ವಾಣಿಜ್ಯ ಮೇಳದ ಹಬ್ಬವನ್ನು ಕಾಣಬಹುದಾಗಿದೆ.

ಮಾರಿಯಮ್ಮ ಹಬ್ಬ ಎಂದರೆ ಊರಿಗೆ ಕಂಟಕ ಬಂದರೆ ಒಂದು ಊರಿಂದ ಇನ್ನೊಂದು ಊರಿಗೆ ಮಾರಿ ಓಡಿಸುವುದು ಮಾಡುತ್ತಾ ಇದ್ದರು. ಹೀಗೆ ಗ್ರಾಮದಲ್ಲಿ ಹಬ್ಬವು ಹಂತ ಹಂತವಾಗಿ ಒಂದು ಅನುಕ್ರಮಾನಿಕೆ ಬಂದಿತು.

   ಗ್ರಾಮ ದೇವತೆಯ ಹಬ್ಬವು ಸಾರುವುದು, ಕಂಬ ನೆಡುವುದು, ಭಂಡಾರ ಕಟ್ಟುವುದು ಕೂಡಿ ಕಟ್ಟುವುದು,ಸಿಡಿ ಕಂಬ ನೆಡುವುದು, ಹೊಳೆಗೆ ಹೋಗುವುದು ಹೊನ್ನೇರು ಚಪ್ಪರ ಹಾಕುವುದು, ಮಡೆ ಮಾಡುವುದು, ಎಳವಾರ ಎಂದರೆ ಊರಿನವರು ಸುತ್ತಲೂ ಇರುವ ಸುಮಾರು ಏಳು ಹಳ್ಳಿಯಿಂದ ಸೌದೆ ತರುವುದು, ನಂತರದಲ್ಲಿ ಕೊಂಡ ಹಾಕುವುದು ಸಂಪ್ರದಾಯವಿದೆ. ಅಂದರೆ ಪೂಜಾರಿ ಇರುತ್ತಾರೆ ಗ್ರಾಮದೇವತೆ ಪೂಜೆ ಮಾಡುತ್ತಾರೆ ಅವರು ಹಬ್ಬದ ಸಂದರ್ಭದಲ್ಲಿ ಕೆಂಡದ ಮೇಲೆ ನಡೆಯುತ್ತಾರೆ ಹಾಗೆಯೇ ಯಾರು ಹರಿಕೆ ಹೊತ್ತವರು ಮಾಡುತ್ತಾರೆ. ನಂತರದಲ್ಲಿ ದೇವರಿಗೆ ಬಲಿ ಕೊಡುವುದನ್ನು ಕಾಣುತ್ತೆವೆ.

  ಗ್ರಾಮ ದೇವತೆಯ ಹಬ್ಬದಲ್ಲಿ ಘಟೆ ಪೂಜೆ ಎಂದರೆ ನೀರನ್ನು ತುಂಬಿಸಿ, ಗಡಿಗೆ ಸುತ್ತಾ ಅರಶಿಣ ಕುಂಕುಮ ಬಳಿದು ಹೂವಿನ ಹಾರ ಹಾಕುವುದನ್ನು ಕಾಣಬಹುದು. ದೇವರಿಗೆ ಅರತಿ ಮಾಡುವುದು, ಬಾಯಿ ಬೀಗ ಹಾಕುವ ಕ್ರಮವಿದೆ, ಅಂದರೆ ಎರಡು ಕೆನ್ನೆಯನ್ನು ತೂತು ಮಾಡಿಕೊಂಡು ಬಾಯಿಗೆ ಬೀಗಹಾಕುವುದು. ನಂತರದಲ್ಲಿ ಅಲಗು ಸೇವೆ, ಉರುಳು ಸೇವೆ, ಕಂಬ ಕೀಳುವುದು,ಹೀಗೆ ಹಟ್ಟುಹಲವರು ಕ್ರಮವನ್ನು ಕಾಣುತ್ತೇವೆ.


ಗ್ರಾಮದೇವತೆಗಳ ವಿಶಿಷ್ಟತೆ


ಗ್ರಾಮೀಣ ಭಾಗದಲ್ಲಿ ಗ್ರಾಮದೇವರಿಗೆ ಸಾಕಷ್ಟು ಜನರು ಬಲಿಯಾಗಿದ್ದಾರೆ. ಇಲ್ಲಿ ಬಹುತೇಕ ಹೆಣ್ಣುಮಕ್ಕಳು ಬಲಿಯಾಗಿದ್ದನ್ನ ಕಾಣಬಹುದು. ಹೆಣ್ಣು ಒಬ್ಬಳು ವಿವಾಹ ಪೂರ್ವದಲ್ಲಿ ಗರ್ಭಿಣಿ ಆದರೆ, ಪರ ಪುರುಷನ ಜೊತೆ ಸಂಪರ್ಕ ಬೆಳೆಸಿದರೆ ಗ್ರಾಮದ ಅಮ್ಮನಿಗೆ ಒಪ್ಪಿಸುತ್ತಾ ಇದ್ದರು.

  ಗ್ರಾಮದೇವತೆಗಳ ಮುಂದೆ ತಮಗೆ ಬಂದ ಸಮಸ್ಯೆಯನ್ನು ಕೇಳಿದಾಗ ಪೂಜಾರಿಯವರು ಗ್ರಾಮದೇವತೆಯೇ ಅವರ ಬಾಯಿಯಲ್ಲಿ ನುಡಿಸುತ್ತಾ ಇದ್ದರು. ಅದನ್ನೇ ಊರಿನವರು ನಂಬಿಕೆಯನ್ನು ವ್ಯಕ್ತಪಡಿಸುತ್ತಾ ಇದ್ದರು.

  ಗ್ರಾಮದೇವತೆ ಅಮ್ಮನವರು ಜನರ ಉಪಯೋಗಕ್ಕಾಗಿ ನೆಲೆಸಿರುವ ದೇವರು ಆಗಿದ್ದಾರೆ. ಗ್ರಾಮದೇವತೆ ಅಮ್ಮನವರು ನ್ಯಾಯಾಲಯ ಕಾರ್ಯವನ್ನು ನಿರ್ವಹಿಸುತ್ತಾ ಇದ್ದರು.ವಿವಿಧ ಗ್ರಾಮದಲ್ಲಿ ನೆಲೆಸಿಕೊಂಡ ದೇವರಿಗೆ ತನ್ನದೇ ವೃಕ್ಷವನ್ನು ಹೊಂದಿದ್ದರು. ಒಮ್ಮೆ ದೇವರು ಕಣ್ಣು ಬಿಟ್ಟರೆ ಸಾಕು ಎಲ್ಲರೂ ಒಮ್ಮೆ ಭಯವನ್ನು ಪಡುತ್ತಾ ಇದ್ದರು.


ಕೊನೆಯ ಮಾತು


ನಮ್ಮ ಸಂಸ್ಕೃತಿ ನಮ್ಮ ಜಾನಪದದಲ್ಲಿ ಇದೆ. ಗ್ರಾಮೀಣ ಭಾಗದಲ್ಲಿ ಕಾಣುತ್ತೇವೆ ಆದರೆ ನಗರಪ್ರದೇಶದಲ್ಲಿ ಅವುಗಳು ಅವನತಿ ಹೊಂದಿದೆ. ಅದರಿಂದ ಸಂಸ್ಕೃತಿ ಮತ್ತು ಸಮಾಚಾರಗಳಿಗೆ ಎಲ್ಲರೂ ಮನಸು ಮಾಡಬೇಕು. ತಂದೆಯವರು ಮಾಡಿಕೊಂಡು ಬಂದ ಸಂಸ್ಕೃತಿ ಆಚರಣೆಯನ್ನು ಅನುಸರಿಕೊಂಡು ಬರಬೇಕು.



Rate this content
Log in

Similar kannada story from Tragedy