ಸೌಂದರ್ಯ
ಸೌಂದರ್ಯ
ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್
ಅವಳ ನೋಟ ತುಂಬಾ ದಿನದಿಂದ ಅವನ ಮನಸ್ಸನ್ನು ಕೆಡಿಸಿತ್ತು. ಅದೆಷ್ಟು ಬಾರಿ ಅವಳಿಗೆ, ಅವನು ತನ್ನ ಪ್ರೀತಿಯ ನೀವೇದನೆಯನ್ನು ಸಲ್ಲಿಸಿದ್ದ ಅವಳಿಗೆ ಈ ಪ್ರೀತಿ ಪ್ರೇಮದ ಪರಿಯೇ ಇರಲಿಲ್ಲ. ಓದುವುದೇ ಅವಳ ದೊಡ್ಡ ಗುರಿ. ಏನಾದ್ರು ಸಾಧಿಸಬೇಕು ಎನ್ನುವ ಛಲ.
ಇವನ ಪ್ರೀತಿಗೆ ಅವಳು ಪ್ರತಿ ಬಾರಿಯೂ ನಿರಾಕರಣೆಯನ್ನೇ ಮಾಡುತ್ತ ಬಂದಿದ್ದಳು. ಅವಳನ್ನು ಹೇಗಾದರೂ ಮಾಡಿ ಪಡೆಯಲೇಬೇಕು ಎನ್ನುವ ಆಸೆ ಅವನಿಗೆ ಹೆಚ್ಚಾಗುತ್ತಲೇ ಹೋಯಿತು. ಕೊನೆಗೆ ತನ್ನನ್ನು ಅವಳು ಸ್ನೇಹಿತ ಎಂದಾದರೂ ಒಪ್ಪಿಕೊಳ್ಳಬೇಕೆಂದು ಇವನು ಗೋಗರೆಯತೊಡಗಿದ. ಕೊನೆಗೆ ಅವಳು ಹು ಎಂದು ಒಪ್ಪಿಗೆ ಸೂಚಿಸಿದಳು. ಅದಾಗಿ ಒಂದು ತಿಂಗಳು ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿಯೇ ಇದ್ದರು.
ಅದೊಂದು ದಿನ ಅವರು ಬಸ್ ತಪ್ಪಿಸಿಕೊಂಡು ನಡೆದುಕೊಂಡು ಹೋಗಿಬಿಡೋಣ ಎಂದು ಯೋಚಿಸಿದರು. ಒಂದೇ ಕಿಲೋಮೀಟರ್ ತಾನೇ, ನಡೆಯುತ್ತ ಹೋದ್ರಾಯ್ತು ಅಂತಾ ಮಾತಾಡ್ತಾ ಹೊರಟರು.
ಅವಳ ಮಾತು, ಅವಳ ನಡೆ, ಅವಳ ಸೌಂದರ್ಯ ಅದೇಕೋ ಅವನನ್ನ ಮತ್ತೆ ಕೆಣಕಲು ಶುರುಮಾಡಿತು.
ಅವಳನ್ನು ಬಲವಂತವಾಗಿ ಕೈ ಹಿಡಿದು, ನನಗೆ ನೀನು ಬೇಕು, ನಿನ್ನನ್ನು ಬಿಟ್ಟು ಇರೋದಕ್ಕೆ ನನಗೆ ಸಾಧ್ಯವಾಗುತ್ತಿಲ್ಲ, ಪ್ಲೀಸ್ ನನ್ನನ್ನು ಒಪ್ಪಿಕೋ ಎಂದು ಒತ್ತಾಯಿಸಿದ. ಸಿಟ್ಟಿನಿಂದ ಅವನ ಕೆನ್ನೆಗೆ ಒಂದು ಏಟು ಹಾಕಿದಳು. ಅವನು ಅವಳನ್ನು ಬಲವಂತವಾಗಿ ಬಲಾತ್ಕಾರ ಮಾಡಿದನು.
ಅವನಲ್ಲಿ ಅದ್ಯಾವ ಕೆಟ್ಟ ಆಸೆ ಹುಟ್ಟಿತೋ ಆ ದೇವರೇ ಬಲ್ಲಾ.
ಆ ವಾತಾವರಣದಿಂದ ಅವಳ ಆಸೆ ಎಲ್ಲವೂ ಸತ್ತಿತ್ತು. ಊರಿನ ಹತ್ತಿರದಲ್ಲಿ ಇದ್ದ ಒಂದು ಕೆರೆಗೆ ಹೋಗಿ ಅವಳು ತನ್ನ ಪ್ರಾಣವನ್ನು ಬಿಟ್ಟಳು. ಕಾಮುಕರ ಚಟಕ್ಕೆ ಇನ್ನೆಷ್ಟು ಹೆಣ್ಣು ಮಕ್ಕಳ ಬಲಿಯಾಗತ್ತೋ.. ಅವಳ ಸೌಂದರ್ಯವೇ ಅವಳಿಗೆ ಮುಳುವಾಯಿತಾ?
