kaveri p u

Tragedy Inspirational Others

4  

kaveri p u

Tragedy Inspirational Others

ಪಾಲಕರು

ಪಾಲಕರು

1 min
561


ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್


ಉದಯಗೆ ಗುರುಗಳು ತುಂಬಾ ಹೊಡೆದು "ಒಂದು ದಿನವೂ ಓದುವುದಿಲ್ಲಾ, ಬರೆಯುವುದಿಲ್ಲಾ ಹೊಮವರ್ಕ್ ಕೂಡಾ ಮಾಡುವುದಿಲ್ಲಾ, ನಾಳೆ ನಿನ್ನ ಪಾಲಕರನ್ನು ಕರೆದುಕೊಂಡು ಬಾ ಶಾಲೆಗೆ ನಾನು ಮಾತಾಡಬೇಕು." ಎಂದರು


ಮರುದಿನ ಉದಯ, ಅಜ್ಜಿಯನ್ನು ಕರೆದುಕೊಂಡು ಬಂದನು.

" ಯಾಕಾಮ್ಮಾ ನೀವು ಬಂದಿದ್ದೀರಿ ಇವರ ಅಪ್ಪಾ ಅಮ್ಮಾ ಯಾಕೆ ಬರಲಿಲ್ಲಾ? ನಿಮಗೆ ಸರಿಯಾಗಿ ಹೆಜ್ಜೆ ಇಡಲು ಆಗುವುದಿಲ್ಲಾ, ಅವರೇನು ಮಾಡುತ್ತಿದ್ದಾರೆ.?

ಇನ್ನೂ ಉದಯ ಅಂತೂ ಯಾವದಕ್ಕೂ ಯೋಗ್ಯನಲ್ಲ. ಅವಿವೇಕಿ ಅವನು. ಮನೇಲಿ ಅವನಿಗೆ ಹೇಳೋರು ಕೇಳೋರು ಇಲ್ಲವೇ? ಎಂದರು


ನನ್ನ ಮಗನಿಗೆ ಇವನು ಬೇಡ ಕಣಪ್ಪ. ಇವನು ಹುಟ್ಟಿದಮೇಲೆ ಅವಳ ತಾಯಿ ತೀರಿಕೊಂಡಳು. ಆಗಿನಿಂದ ಇವನನ್ನು ಕಂಡರೆ ಅವನಿಗೆ ಅಷ್ಟಕ್ಕಷ್ಟೇ. ಇವನ ಚಿಂತೆಯೂ ಅವನಿಗಿಲ್ಲಾ. ಮತ್ತೊಂದು ಮದುವೆ ಮಾಡಿಕೊಂಡು ಬೇರೆ ಕಡೆ ಇರ್ತಾನೆ. ಇಲ್ಲಿಗೆ ಆಗಾಗ ಬಂದು ಮನೆಗೆ ಬೇಕಾದ ಸಾಮಗ್ರಿ ತಂದು ಹಾಕುತ್ತಾನೆ. ನನ್ನ ಮೊಮ್ಮಗನಿಗೆ ನಾನೇ ಎಲ್ಲಾ ಕಣಪ್ಪ. ನಿಮಗೆ ಆಗುವುದನ್ನು ಹೇಳಿ. ಇವನು ಕಲಿತರೆ ಅವನ ತಾಯಿ ಖುಷಿ ಪಡುತ್ತಾಳೆ. ನಾಳೆ ನಾನು ಹೋದರೆ ಇವನು ಅನಾಥನಾಗಿ ಬೆಳೆಯುತ್ತಾನೆ. ಅದೇ ನನ್ನನ್ನು ಕಾಡುತ್ತದೆ.


ಪ್ರತಿಯೊಬ್ಬ ಮಕ್ಕಳಿಗೂ ಪಾಲಕರು ಇರಲೇಬೇಕು. ತಿದ್ದಿ ಬುದ್ಧಿ ಹೇಳಲು, ತಪ್ಪಿದ ಹಳಿಯನ್ನು ಸರಿಪಡಸಲು ಪಾಲಕರು ಇರಲೇಬೇ.ಕು ಇಲ್ಲವಾದಲ್ಲಿ ಮಕ್ಕಳು ಹಾದಿ ತಪ್ಪುವುದು ಖಂಡಿತಾ.



Rate this content
Log in

Similar kannada story from Tragedy