ನಿಮಿಷದ ಬೆಲೆ
ನಿಮಿಷದ ಬೆಲೆ


ಗಂಡ ಹೆಂಡತಿ ಇಬ್ಬರು ಚಿಕ್ಕ ಮಕ್ಕಳಿರುವ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿದೆ. ಮಧ್ಯರಾತ್ರಿ ಸುಮಾರು ಒಂದು ಗಂಟೆಯ ಸಮಯ ಇರಬಹುದು. ಗಂಡ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದಾನೆ. ಇದ್ದಕ್ಕಿದ್ದಂತೆ ಗಂಡನಿಗೆ ಜೊಂಪು ಹತ್ತಿದಂತಾಗಿ ಕೆಲವೇ ಸೆಕೆಂಡುಗಳ ಕಾಲ ತೂಕಡಿಸದನೋ ಏನೋ. ಅಷ್ಟೇ. ಅಷ್ಟರಲ್ಲಿ ಎದುರಾದ ಗುಂಡಿಯಲ್ಲಿ ಕಾರು ಧಡಾರನೆ ಇಳಿದು ಮೇಲೆ ಹಾರಿ ಮೂರು ಪಲ್ಟಿ ಹೊಡೆಯಿತು. ಗಂಡನಿಗೆ ಬಲವಾಗಿ ಪೆಟ್ಟಾಗಿ ಮೂರ್ಛೆ ಹೋದ. ಹೆಂಡತಿ ಸ್ಥಳದಲ್ಲೇ ಕೆಲವು ಕ್ಷಣಗಳ ಬಳಿಕ ಸಾವನ್ನಪ್ಪಿದಳು . ಅಮ್ಮನೊಂದಿಗೆ ಕುಳಿತಿದ್ದ ಮಕ್ಕಳಲ್ಲಿ ಮಗ ಕಿಟಕಿಯ ಗಾಜನ್ನು ಒಡೆದು ಹೊರಬಂದು ತನ್ನ ತಂಗಿಯನ್ನು ಹೊರಗೆಳೆದು ಅಮ್ಮನ ಹತ್ತಿರ ಬಂದು ಅಮ್ಮನನ್ನು ಮಾತನಾಡಿಸಿದ್ದಾನೆ. ಅಮ್ಮ ಎಲ್ಲರೂ ಆರೋಗ್ಯ ವಿಚಾರಿಸುವಷ
್ಟರಲ್ಲಿ ಪ್ರಾಣ ಹೋಗಿದೆ. ತಕ್ಷಣವೇ ಆ ಹುಡುಗ ಮೊಬೈಲ್ ಅನ್ನು ಹುಡುಕಿ ತನ್ನ ಚಿಕ್ಕಪ್ಪನಿಗೆ ಫೋನ್ ಮಾಡಿದ್ದಾನೆ. ಚಿಕ್ಕಪ್ಪ ಯಾವುದಾದರೂ ವಾಹನವನ್ನು ತಡೆದು ನಿಲ್ಲಿಸಿ ಸಹಾಯ ಮಾಡಿರೆಂದು ಕೇಳಿಕೋ ಎಂದು ಫೋನಿನಲ್ಲಿಯೇ ಸೂಚನೆ ನೀಡಿ ತಾನೂ ಹೊರಟಿದ್ದಾನೆ. ಆ ರಾತ್ರಿಯಲ್ಲಿ ತನ್ನ ಪುಟ್ಟ ತಂಗಿಯನ್ನು ಎತ್ತಿಕೊಂಡು ಈ ಪುಟ್ಟ ಬಾಲಕ ಆ ರಸ್ತೆಯಲ್ಲಿ ಬರುವ ವಾಹನಗಳನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ.ಈ ಮಗುವಿನ ಅದೃಷ್ಟಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಾಹನವೊಂದು ಬಂದು ಇವರೆಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿಸಿದೆ .
ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರ ಎಚ್ಚರಗೊಂಡ ಹುಡುಗನ ಅಪ್ಪ ನುಡಿದ ಮೊದಲ ನುಡಿ " ಆ ಒಂದು ನಿಮಿಷ ನಾನು ತೂಕಡಿಸಬಾರದಿತ್ತು"