ಮಳೆ
ಮಳೆ
ನಾನ್-ಸ್ಟಾಪ್ ನವೆಂಬರ್ ಎಡಿಷನ್ - ಬಿಗಿನರ್
ತುಂಬಾ ಮಳೆಯಾಗಿತ್ತು ಎಲ್ಲಾ ಕಡೆಯು ನೀರು ಹರಿಯುತ್ತಿತ್ತು. ಹಳ್ಳ-ಕೊಳ್ಳಗಳು ತುಂಬಿ ತುಳುಕುತ್ತಿದ್ದವು.
ಅತಿಯಾದ ಮಳೆಯಿಂದ ಶಾಲೆಗಳಿಗೆ 2 ದಿನಗಳ ರಜೆ ಸಿಕ್ಕಿತ್ತು.
ಶಿಲ್ಪಾ ಮತ್ತೆ ರೂಪ ಗೆಳತಿಯ ಮನೆಗೆ ಹೋಗಿ ಬರ್ತೀವಿ ಅಂತ ಸುಳ್ಳು ಹೇಳಿ, ಹೊಳೆ ನೋಡಲು ಹೋದರು. ಅಮ್ಮ, ಬೇಗ ಬನ್ನಿ ಮಳೆಗಾಲ ಜೋರಾಗಿದೆ. ಎಲ್ಲಕಡೆ ನೀರು ಹರಿತಿದೆ, ಬೇಡಾ ಅಂದ್ರು ಕೇಳೋಲ್ಲಾ ನೀನು, ಸರಿ ಬೇಗ ಬಂದ್ಬಿಡಿ ಆಯ್ತಾ ಎಂದು ರೂಪಾಳ ತಾಯಿ ಹೇಳಿದರು.
ಅವರು ಹೊಳೆ ಸಮೀಪ ಹೋಗಿ ಆಟವಾಡುತ್ತಾ ಕುಳಿತಿದ್ದರು. ಅವರಿಬ್ಬರ ಜೊತೆ ಮತ್ತೆ ಇನ್ನಿಬ್ಬರು ನಯನಾ, ತನು ಸೇರಿ ನೀರಿನಲ್ಲಿ ದೋಣಿ ಮಾಡಿ ತೇಲಿ ಬಿಡುತ್ತಿದ್ದರು.
ಸುಮಾರು ಹೊತ್ತು ಆಡಿದರು. ಆಡ್ತಾ ಆಡ್ತಾ ಅವರು ನದಿಯ ದಡ ಬಿಟ್ಟು ಮುಂದಕ್ಕೆ ಹೋಗಿ ಬಿಟ್ಟಿದ್ದರು. ರೂಪ ಕಾಲು ಜಾರಿ ಬಿದ್ದಳು ಅವಳನ್ನು ಎತ್ತಲು ಹೋಗಿ ಅವಳ ಮೇಲೆ ಶಿಲ್ಪಾ ಕೂಡ ಬಿದ್ದಳು. ಹರಿಯುತ್ತಿರುವ ನೀರಿನ ಪ್ರಮಾಣ ಏರಿತ್ತು, ಅವರಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಗೆಳತಿಯರ ಮಂದೆಯೇ ಹೋಗಿಬಿಟ್ಟರು!
ನಯನ, ತನುಗೆ ಏನು ಮಾಡಬೇಕು ಎಂಬುದೇ ಗೊತ್ತಾಗಲಿಲ್ಲ. ಅವರಿಬ್ಬರು ನೀರಿನಲ್ಲಿ ಕೊಚ್ಚಿ ಹೋಗುವುದನ್ನು ನೋಡುತ್ತಿದ್ದರೂ, ನಮಗೆ ಏನು ಮಾಡಲು ಅಗಲಿಲ್ಲವಲ್ಲಾ ಎಂದು ಅಳುತ್ತಾ ಊರಿನ ಕಡೆ ಹೋಗಿ ದೊಡ್ಡವರಿಗೆ ಹೇಳಿದರು, ದೊಡ್ಡವರು ಬಂದು ನೋಡುವಷ್ಟರಲ್ಲಿ ಮಳೆ ಹೆಚ್ಚಾಗಿ ಅವರಿಬ್ಬರ ದೇಹಗಳು ತೇಲಿ ಇನ್ನಷ್ಟು ಮುಂದೆ ಹೋಗಿದ್ದವು.
ಅಮ್ಮನಿಗೆ ಸುಳ್ಳು ಹೇಳಿ ಬಂದ ಶಿಲ್ಪ ಈಗಿಲ್ಲ!
ನಿಜ ಹೇಳಿದ್ದರೆ ಅವರಮ್ಮಾ ಅವರನ್ನು ಹೊರಗೆ ಹೋಗುವುದಕ್ಕೂ ಬಿಡುತ್ತಿರಲಿಲ್ಲ, ಹಾಗೆ ಮಾಡಿದ್ದರೆ ಅವಳ ಪ್ರಾಣವೂ ಉಳಿಯುತ್ತಿತ್ತು. ಮಳೆಗಾಲದಲ್ಲಿ ಬಹಳ ಹುಷಾರಾಗಿರಬೇಕು, ಮನೆ ಬಿಟ್ಟು ಎಲ್ಲಿಯೂ ಹೋಗಬಾರದು.
