nagavara murali

Tragedy Others

4  

nagavara murali

Tragedy Others

ಮಗಳು

ಮಗಳು

2 mins
214


ಮಹತಿ‌ ಶಾಮಣ್ಣನ ಒಬ್ಬಳೇ ಮಗಳು. ಬಹಳ ಮುದ್ದಾಗಿ ಸಾಕಿದ್ದರು.ಅವರಿಗೆ ಮಗಳೇ ಸರ್ವಸ್ವ . ಹಣವಂತರಾದ್ದರಿಂದ ಮಹತಿಗೆ ತಾಯಿ ಇಲ್ಲ ಅನ್ನೋದು ಬಿಟ್ಟರೆ ಯಾವ ಕೊರತೆಯೂ ಇರದ ಹಾಗೆ ನೋಡಿಕೊಂಡ ತಂದೆಗೆ ಅವಳು MBA ಮುಗಿಸಿದ ತಕ್ಷಣಒಳ್ಳೆಯ ಹುಡುಗನನ್ನ ನೋಡಿ ಮದುವೆ ಮಾಡುವ ಯೋಚನೆ ಇತ್ತು. ಮದುವೆ ವಿಷಯ ಮಾತ ನಾಡುವಾಗಲೆಲ್ಲ ನಾಚಿ ಎದ್ದು ಹೊರಟು ಹೋಗ್ತಿ ದ್ದಳು .ಹೆಣ್ಣಿನ ಸ್ವಭಾವ ಅಂತ ಅಂದು ಕೊಂಡು ಸುಮ್ಮನಾಗುತ್ತಿದ್ದರು. 

ಒಂದು ದಿನ ಒಬ್ಬ ಹುಡುಗನನ್ನ ಜೊತೆಗೆ ಕರೆದು ಕೊಂಡು ಬಂದು ತಂದೆಗೆ, ಇವನು ಸ್ಟಾಲಿನ್ ಅಂತ ಮೊದಲ ವರ್ಷ ನನ್ನ ಕ್ಲಾಸಲ್ಲೇ ಇದ್ದ. ವೈಯ್ಯಕ್ತಿಕ ಕಾರಣದಿಂದ ಅರ್ಧಕ್ಕೇ ನಿಲ್ಲಿಸಿ ಬಿಟ್ಟ .good human being . ಇವನ ಎಲ್ಲಾ personal ವಿಷಯಗಳನ್ನ ಇವತ್ತಿಗೂ ನನ್ನ ಹತ್ತಿರ share ಮಾಡ್ಕೋತಾನೆ ನನಗೆ ಅಂತ ಹವರು ಇಷ್ಟ ಅಂತ ನಿಮಗೂ ಗೊತ್ತು. ಇವನ ತಂದೆಯ business ನ ಇವನೇ ಮುಂದು ವರಿಸಬೇಕಂತ ಇವನ ಇಷ್ಟ. ಆದರೆ ತಂದೆಗೆ ಅದು ಇಷ್ಟವಿಲ್ಲವಂತೆ. ಅದಕ್ಕೆ ಬೇರೆ ಏನಾದರೂ ಮಾಡೋ ಯೋಚನೆಯಲ್ಲಿ ಇದಾನೆ. ಶಾಮಣ್ಣ ಕೇಳಿದರು ನಿಮ್ಮ ತಂದೆಯದು ಏನು ಬ್ಯುಸಿ ನೆಸ್ .ಅಂತ ದೊಡ್ಡ ಬ್ಯುಸಿನೆಸ್ ಏನಲ್ಲ uncle real estate ಮಾಡ್ತಾರೆ .ಅಂದರೆ ದೊಡ್ಡ ದೊಡ್ಡ ಅಪಾರ್ಟ್ಮೆಂಟ್, ಲ್ಯಾಂಡ್, ಸೈಟ್ ಈ ತರಹೆ ನಾ ,ಅಲ್ಲಾ uncle ಮನೆ ಬಾಡಿಗೆಗೆ ಕೊಡಿ ಸೋದು. ಆಫೀಸ್ ಇದೆಯಾ, ಇದೆ. ಎಲ್ಲಿ ನಮ್ಮ ಮನೆಗೆ ಸೇರಿಕೊಂಡ ಹಾಗೆ ಇದೆ .ಮನೆ ನಿಮ್ಮ ಸ್ವಂತದ್ದ. ಇಲ್ಲ ಬಾಡಿಗೆ. ಟೀ ತರಲು ಹೋಗಿದ್ದ ಮಹತಿ ಬಂದು ಏನು ಒಂದೇ ದಿನಕ್ಕೆ ಇಷ್ಟೆಲ್ಲಾ ಇವನ ಬಗ್ಗೆ ತಿಳಿಯೋದಕ್ಕೆ ಯೋಚನೆ ಮಾಡಿ ದ್ದೀಯ daddy .imposaible ಇವನ ಕಥೆ ನಾನೇ ಒಂದು ದಿನ ಹೇಳ್ತೀನಿ. He is totally a different person ಅಂದಳು. Nice ಅಂತ ಹೇಳಿ ನನಗೆ ಟೀ ಬೇಡ ಅಂದರು. ಇದೇ first time tea ಬೇಡ ಅಂದದ್ದು ನಮ್ಮ daddy.

Mid night ನಲ್ಲಿ ಕೊಟ್ಟರೂ ಬೇಡ ಅನ್ನೋದಿಲ್ಲ ಏನಾಯ್ತು ಇವತ್ತು ಗೊತ್ತಿಲ್ಲ ಅಂದಳು.

ಬಸ್ ಸ್ಟಾಪ್ ನಲ್ಲಿ ಬಿಟ್ಟು ಬರ್ತೀನಿ ಅಂತ ಹೇಳಿ

ಇಬ್ಬರೂ ಹೊರಗೆ ಹೋದರು .ಶಾಮಣ್ಣನಿಗೆ ಈ ದಿನದವರೆಗೂ ಇಲ್ಲದೇ ಇದ್ದ ಹೊಸ ಯೋಚನೆ ಶುರು ಆಯ್ತು. 

ಅಂದಿನಿಂದ ಆಗಾಗ ಸ್ಟಾಲಿನ್ ಮನೆಗೆ ಬರುತ್ತಿದ್ದ ಶಾಮಣ್ಣ ಅವನ ಹತ್ತಿರ ಮಾತನಾಡುವುದನ್ನ ಹೇಗೊ avoid ಮಾಡ್ತಿದ್ದರು. ಮಹತಿ‌ಗೆ ಈ ವಿಷ ಯ ತಿಳಿದು ಒಂದು ದಿನ ಕೇಳಿದಳು daddy ನಿಜ ಹೇಳಿ ಸ್ಟಾಲಿನ್ ನಮ್ಮ ಮನೆಗೆ ಬರೋದು ನಿಮ ಗೆ ಇಷ್ಟ ಇಲ್ಲವೇ. ತಕ್ಷಣ ಅದಕ್ಕೆ ಮೊದಲು ನಿನ್ನಿಂದ ನನಗೆ ಒಂದು ವಿಷಯ ತಿಳಿಯಬೇಕು ಆಮೇಲೆ ಹೇಳ್ತೀನಿ ಯಾಕೆ ನನಗೆ ಇಷ್ಟ ಇಲ್ಲಾ ಅಂತ. ಕೇಳಿ ಅಂದಾಗ ನೀವಿಬ್ಬರೂ just friends ಆ ಅಥವಾ ಅದು ಇನ್ನೂ ಮುಂದೇ ಹೋಗಿದಿಯಾ ನನಗೆ ಗೊತ್ತಾಗಬೇಕು ಅಂದಾಗ.

ನನ್ನ ಬಗ್ಗೆ ನಿಮಗೆ ಅಷ್ಟೊಂದು ಅನುಮಾನ ಯಾಕೆ. ನಾನು ಅವನನ್ನ ಎಷ್ಟು ಇಷ್ಟ ಪಡ್ತೀನೋ ಅದಕ್ಕಿಂತ ನೂರರಷ್ಟು ಹೆಚ್ಚು ಅವನು ನನ್ನನ್ನ ಇಷ್ಟ ಪಡ್ತಾನೆ ಇನ್ನೇನು ಬೇಕು ಹೇಳಿ. ಮುಂದೆ ನಿಮ್ಮ ಯೋಚನೆ ಏನು .ಅವನು ಅವನ ಕಾಲ ಮೇಲೆ ನಿಂತು ಸಮಾಜದಲ್ಲಿ ನಿಮ್ಮಂತೆ ದೊಡ್ಡ  ವ್ಯಕ್ತಿ ಆದಮೇಲೆ ನಮ್ಮ ಮದುವೆ ಯೋಚನೆ ಅದೂ ನೀವು ಒಪ್ಪಿದರೆ ಮಾತ್ರ ಅಂದಾಗ ಸ್ವಲ್ಪ ಸಮಾಧಾನ ಆಯ್ತು. ಎಷ್ಟಾದರೂ ಮಹತಿ ನನ್ನ ಮಗಳಲ್ಲವೇ .ok ಹಾಗೇ ಮಾಡಿ ಅಂತ ಆ ವಿಷಯ ಅಲ್ಲಿಗೆ ನಿಲ್ಲಿಸಿದರು.

ಶಾಮಣ್ಣನಿಗೆ ಗೊತ್ತು ಅವನು use less ಅವನು ಇವಳನ್ನ ಮದುವೆ ಅಗಬೇಕಾದ್ರೆ ದೊಡ್ಡ business man ಆಗ್ಸ್ಬೇಕು ಅದು ಆಗಲ್ಲ ಇವಳು ಮದುವೆ ಆಗಲ್ಲ ಅಂತ .ಹೀಗೇ ಆರು ತಿಂಗಳು ಕಳೆದಿದೆ. ಒಂದುದಿನ ರಾತ್ರಿ ಹತ್ತಾದರು ಮಹತಿ ಮನೆಗೆ ಬರಲಿಲ್ಲ. Late ಆದರೆ ಫೋನ್ ಮಾಡೋಳು ಏನಿದು ಇವತ್ತು ಫೋನ್ ಸಹಾ ಮಾಡಿಲ್ಲ ಅಂತ ಮೂರನೇ ಸಾರಿ ಕಾಲ್ ಮಾಡಕ್ಕೆ ನೋಡಿದರೂ connect ಆಗ್ತಿಲ್ಲ.ಈಗ ನಿಜವಾಗಿಯೂ ಏನೋ ಆಗಿದೆ ಅಂತ ಭಯ ಆಯ್ತು. ಏನು ಮಾಡಬೇಕಂತ ತಿಳೀತಿಲ್ಲ. ಅಷ್ಟು ಹೊತ್ತಿಗೆ ಮೊಬೈಲ್ ನಲ್ಲಿ ಯಾವುದೋ un known ನಂಬರ್ ನಿಂದ call ಬರ್ತಿದೆ. Uncle 

ದಯವಿಟ್ಟು ನಮ್ಮಿಬ್ಬರನ್ನೂ ಕ್ಷಮಿಸಿ ಮಹತಿ ಇಲ್ಲೇ ಇದಾಳೆ ನಾವು ಐವತ್ತು church ನಲ್ಲಿ ಮದುವೆ ಆಗಿದ್ದೇವೆ ನಿಮ್ಮ ಆಶೀರ್ವಾದ ಮಾತ್ರ ಸಾಕು ಇನ್ನೇನು ಬೇಡ. ಮಾತಾಡಿ ಅಂತ ಮಹತಿ ಗೆ ಕೊಟ್ಟ .ಶಾಮಣ್ಣ ಫೋನ್ ದೂರ ಬಿಸಾಡಿ ಸೋಫಾ ಮೇಲೆ ಕುಸಿದು ಬಿದ್ದರು. ಫೋನಿನಲ್ಲಿ daddy daddy ಅಂತ ಕೂಗಿ ನಿಮಗೆ ಏನಾಯ್ತು ಹೇಗಿದ್ದೀರಿ ಮಾತಾಡಿ daddy ಅಂತ ಜೋರಾಗಿ ಅಳುತ್ತಾ ಇರೋ ಅವಳ ಧ್ವನಿ ಕೇಳಿಸ್ತಿದೆ .ಆದರೆ ಉತ್ತರಿಸಲು ಶಾಮಣ್ಣ ಜೀವಂತ ಇಲ್ಲ.



Rate this content
Log in

Similar kannada story from Tragedy