nagavara murali

Classics Inspirational Others

2  

nagavara murali

Classics Inspirational Others

ಕಾಣಿಕೆ

ಕಾಣಿಕೆ

2 mins
149


ಬಹಳ ವರ್ಷಗಳ ಕೆಳಗೆ ಒಂದು ದೇವಸ್ಥಾನದಲ್ಲಿ ತಿಂಗಳ ಕಾಲ ಒಬ್ಬ ಖ್ಯಾತನಾಮರಿಂದ ರಾಮಾಯಣ ಉಪನ್ಯಾಸ ಏರ್ಪಡಿಸಿದ್ದರು ಕೊನೆಯ ದಿನ ವ್ಯವ ಸ್ಥಾಪಕರು ಒಂದು ಕಾಣಿಕೆ ಡಬ್ಬ ಇಟ್ಟು ,ಒಂದು ತಿಂಗಳು ಕಾಲ ಉಪನ್ಯಾಸ ಕೇಳಿದ ನೀವುಗಳು ತಮ್ಮ ಕೈಲಾದಷ್ಟು ಕಾಣಿಕೆ ಇದರಲ್ಲಿ ಹಾಕಿದರೆ ಆ ಹಣವನ್ನು ನಿಮ್ಮ ಎದುರಲ್ಲೇ ಅವರಿಗೆ ಸಮರ್ಪಣೆ ಮಾಡುವುದೆಂದು ನಿರ್ಧರಿಸಿದ್ದೇವೆ ಎಂದು ಹಿಂದಿನ ದಿನವೇ ತಿಳಸಿದ್ದ ಕಾರಣ ಎಲ್ಲರೂ ಸಾಲಾಗಿ ಬಂದು ಅವರ ಶಕ್ತಿ ಇದ್ದಷ್ಟು ಹಣ ಅದರಲ್ಲಿ ಹಾಕುತ್ತಿದ್ದಾರೆ. ಹತ್ತಿರ ಕುಳಿತಿದ್ದ ಉಪ ನ್ಯಾಸಕರು ಇದನ್ನು ದೇವಾಲಯ ಜೀರ್ಣೋ ದ್ಧಾರ ಕ್ಕೆಂದೇ ತಿಳಿದಿದ್ದರು. ಕಾರಣ ಬಡತನವಾದರೂ ಹಣದಾ ಸೆಗೆ ಅವರು ಎಂದೂ ಉಪನ್ಯಾಸ ಮಾಡಿದವರಲ್ಲ.


ಕೆಲವರು ಹಣವನ್ನು ಕವರ್ ನಲ್ಲಿ ಇಟ್ಟು ಹಾಕೋದು, ಐನೂರು ರೂಪಾಯಿ ಹಾಕುವವರು ಅಗಲವಾಗಿ ಅದನ್ನು ಬಿಡಿಸಿ ತೋರಿಸಿ ಹಾಕೋದು, ನಾಣ್ಯವಾದರೆ ಕಾಣದ ಹಾಗೆ ಮುಷ್ಟಿ ಕಟ್ಟಿ ಡಬ್ಬದ ಒಳಗೆ ಕೈ ಇಟ್ಟು ಹಾಕೋದು ,ಕೆಲವರು ಕಣ್ಣಿಗೆ ಒತ್ತಿಕೊಂಡು ಹತ್ತು ರೂಪಾಯಿ ಹಾಕೋದು ಹೀಗೆ ಎಲ್ಲವನ್ನೂ ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು .ಅವರಲ್ಲಿ ಕುತೂಹಲ ಮೂಡಿಸಿದ್ದು ಒಂದು ವಯಸ್ಸಾದ ಹೆಂಗಸು ಕೋಲೂರಿ ಕೊಂಡು ಬಂದು ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಸಣ್ಣ ಬಟ್ಟೆ ಚೀಲ ತೆಗೆದು ಬಲಗೈಗೆ ಎಡಗೈಯಿಂದ ಹಿಡಿದು ಕೊಡವಿದಾಗ ಬಿದ್ದ ಒಂದು ರೂಪಾಯಿ ನಾಣ್ಯ. ಅದೂ ಪಾಪ ಡಬ್ಬದ ಹೊರಗೆ ಬಿದ್ದಾಗ ಯಾರೋ ತೆಗೆದು ಕೊ ಟ್ಟು ಮತ್ತೆ ಅವಳ ಕೈಲೇ ಹಾಕಿಸಿದ್ದು .


ಹಣ ಎಣಿಕೆ ಆಯ್ತು . ಐದು ಸಾವಿರದ ಎಂಟುನೂರ ಹತ್ತು ರೂಪಾಯಿ ಎಂದು ಘೋಷಣೆ ಆದಾಗ ಯಾರೋ ಕೂಗಿ ಹೇಳಿದರು ಯಾರಾದರೂ ನೂರ ತೊಂಭತ್ತು ಕೊಟ್ಟರೆ ಆರು ಸಾವಿರ ಆಗುತ್ತೆ ಅಂಥ. ಅವರು ಹೇಳಿ ಮುಗಿಸುವ ಮೊದಲೇ ಆ ಉಪನ್ಯಾಸಕರೇ ಅದನ್ನು ಕೊಟ್ಟಿದ್ದರು. ಈಗ ಆರು ಸಾವಿರ ರೂಪಾಯಿ ಒಂದು ತಟ್ಟೆಯಲ್ಲಿ ಇಟ್ಟು ಹಣ್ಣುಗಳ ಜೊತೆ ಇವರಿಗೆ ಕೊಡಲು ಬಂದಾಗ

ಅವರು ಬೇಡವೆಂದರೂ ಎಲ್ಲರ ಒತ್ತಡಕ್ಕೆ ತಲೆ ಬಾಗಿ ತೆಗೆದು ಕೊಳ್ಳುತ್ತಿದ್ದಾಗ ಮತ್ತೊಬ್ಬರು ಶಾಲು ತಂದು ಹೆಗಲಿಗೆ ಹಾಕಿ ನಮಸ್ಕಾರ ಮಾಡಿದರು.ಈಗ ಇವರಿಂದ ಎಲ್ಲರನ್ನೂ ಚಕಿತಗೊಳಿಸುವಂತಹ ಮತ್ತು ಮರೆಯ ಲಾಗದ ಒಂದು ಕಾರ್ಯ ನಡೆದೇ ಹೋಯಿತು .


ಅದೆಂದರೆ ಕೋಲೂರಿಕೊಂಡು ಬಂದ ಆ ಮುದುಕಿಯ ಹತ್ತಿರ ಇವರೇ ಹೋಗಿ ಕೈ ಹಿಡಿದು ಕರೆದುಕೊಂಡು ಬಂದು ತಾವು ಕುಳಿತಿದ್ದ ಕುರ್ಚಿಯಲ್ಲಿ ಕೂಡಿಸಿ ಕಾಲಿಗೆ ಸಾಷ್ಟಾಂಗ ಸಮಸ್ಕಾರ ಮಾಡಿ ಅದರಿಂದ ಮೂರು ಸಾವಿರ ರೂಪಾಯಿ ತೆಗೆದು ಅವಳ ಕೈಗೆ ಕೊಟ್ಟು ಅವ ರಿಗೆ ಕೊಟ್ಟ ಶಾಲನ್ನು ಹೊದಿಸಿದರು ಕಾರಣ ಮಾತ್ರ ಯಾರಿಗೂ ತಿಳಿಯಲೇ ಇಲ್ಲ. ಆ ಮುದುಕಿಗೆ ದಿಗ್ಭ್ರಮೆ

ಯಾಗಿ ಮಾತನಾಡುವ ಸ್ಥಿತಯಲ್ಲಿರಲಿಲ್ಲ ಪಾಪ.


Rate this content
Log in

Similar kannada story from Classics