nagavara murali

Abstract

1  

nagavara murali

Abstract

ಅಯ್ಯೋ ಎಂಥ ಅಮ್ಮ

ಅಯ್ಯೋ ಎಂಥ ಅಮ್ಮ

2 mins
117


ಅಣ್ಣ ಅತ್ತಿಗೆ ಮಕ್ಕಳು ಬಹಳ ದಿನ ಆದಮೇಲೆ ಮನೇಗೆ ಬರುವರಿದ್ದರು ಅಮ್ಮನಿಗೆ ಏನೋ ಸಂಭ್ರಮ. ನಮ್ಮ ಅಣ್ಣಂಗೆ ಬೇಳೆ ಹೋಳಿಗೆ ಅಂದ್ರೆ ಇಷ್ಟ ನಾಳೆ ಮಾಡ್ತೀನಿ .ಕೆಲವು ಸಾಮಾನು ತಂದುಕೊಡ್ತೀರಾ ಅಂಥ ಗಂಡನ್ನ (ನಮ್ಮ ತಂದೆಯನ್ನ) ಕೇಳಿದರು .ಆಯ್ತು ಹೇಳು ಅಂಥ ದೊಡ್ಡ ಪಟ್ಟಿ ತೊಗೊಂಡು ಹೋಗಿ ಎಲ್ಲಾ ಸೈಕಲ್ ಮೇಲೆ ಹೋಗಿ ತಂದರು. ನಮಗೂ ಹೋಳಿಗೆ ತಿನ್ನೋ ಅವಕಾಶ ಸಿಕ್ತು ನೋಡು

ಅಂಥ ನನಗೆ ಹೇಳಿ ನಕ್ಕರು.ನಾನು ನನ್ನ ಇಬ್ಬರು ತಂಗಿಯರು ಅಪ್ಪ ಎಲ್ಲರೂ ಮಲಗಿದಮೇಲೆ ಹೋಳಿಗೆಗೆ ತಯಾರಿ.ರಾತ್ರಿ ಹನ್ನೆರಡೋ ಒಂದೋ ಆಗಿದೆ. ಆಗಲೂ ಏನೋ ಒಬ್ಬಳೇ ಕೆಲಸ ಮಾಡ್ತಾನೇ ಇದ್ದು ಯಾವಾಗ ಮಲಗಿದಳೋ ಗೊತ್ತಿಲ್ಲ. ಬೆಳಗ್ಗೆ ಐದಕ್ಕೆ ಪ್ರತಿದಿನದಂತೆ ಎದ್ದು ನಿತ್ಯದ ಕೆಲಸ .ಅಪ್ಪ ಏಳೋ ಹೊತ್ತಿಗೆ ಕಾಫಿ ರೆಡಿಯಾಗಿರಬೇಕು.


ಹತ್ತು ಗಂಟೆಗೆ ಅಣ್ಣನ ಪರಿವಾರ ಬಂತು .ಬಂದ ತಕ್ಷಣ ಎಲ್ಲರಿಗೂ ಉಪ್ಪಿಟ್ಟು ಕಾಫೀ ಆಯ್ತು. ಹಸಿದು ಬಂದಿದ್ದ ಕಾರಣ ಎಲ್ಲರೂ ಎರೆಡೆರಡು ಸಲ ಹಾಕಿಸಿ ಕೊಂಡು ತಿಂದರು.ಅವರ ಜೊತೆಗೆ ನಾವೆಲ್ಲಾ ತಿಂದಾಯ್ತು. ಅಪ್ಪ ಅಡುಗೆ ಮನೆ ಒಳಗೆ ಹೋಗಿ ನೋಡಿದರೆ ಉಪ್ಪಿಟ್ಟು ಖಾಲಿ. ಅಮ್ಮನಿಗೆ ಸ್ವಲ್ಪ ವೂ ಇಲ್ಲ. ಅಪ್ಪ ಕೇಳಿದರೆ ನಿಮಗೆ ಏಕೆ . ಚೆನ್ನಾಗಿತ್ತಾ ಹೊಟ್ಟೆ ತುಂಬಾ ಬಂದೋರೂ ತಿಂದರಾ ಅದೇ ಬೇಕಾದ್ದು. ಅಂಥ ಹೇಳಿ ಕಾಫೀ ಮಾತ್ರ ಕುಡಿದಳು ಅಮ್ಮ. ಒಂದು ಗಂಟೆಗೆ ಊಟ ರೆಡಿ. ಒಬ್ಬಳೇ ಅಡುಗೆ ಮಾಡೋ ದೂ ಅಲ್ಲದೇ ಎಲ್ಲರಿಗೂ ಅಮ್ಮಾನೇ ಬಡಿಸ ಬೇಕು. ಅಂದು ಹೋಳಿಗೆ ಚಿತ್ರಾನ್ನ ಪಾಯಸ ಯಾರಿಗೂ ಹೇಳದೆ ಹಬ್ಬದ ಅಡುಗೆ ಮಾಡಿದಾಳೆ ..ಅಣ್ಣನಿಗೆ ಇಷ್ಟ ಅಂತ ಜೊತೆಗೆ ಹಾಲುಬಾಯ್ ಬೇರೆ. ಎಲ್ಲರದೂ ಊಟ ಆಯ್ತು .ಅಪ್ಪ ಅಡುಗೆ ಮನೆ ಒಳಗೆ ಬಗ್ಗಿ ನೋಡಿದ ರು .ಒಂದು ತಟ್ಟೆಯಲ್ಲಿ ಸ್ವಲ್ಪ ಅನ್ನ ಸಾರು ಅದಕ್ಕೆ ಮೊಸರು ಹಾಕ್ಕೊಂಡು ಕಲೆಸಿ ಅಮ್ಮ ತಿನ್ನೋದು ನೋಡಿ ಅಪ್ಪ ಕೇಳಿದರು ಏನಿದು ಹೀಗೆ ಸಾರು ಮೊಸರು ಒಟ್ಟಿಗೆ ಕಲೆಸಿಕೊಂಡು ತಿಂತಾ ಇದ್ದೀಯಲ್ಲ ಅಂದರೆ ಉತ್ತರ ಇಲ್ಲ.


ಒಂದೊಂದೇ ಪಾತ್ರೆ ತೆಗೆದು ನೋಡ್ತಾ ಇನ್ನೇನಾದರೂ ಉಳಿದಿದ್ದರೆ ಹಾಕೋಣ ಅಂಥ ನೋಡಿದರೆ ಒಂದು ಪಾತ್ರೆಯಲ್ಲಿ ಆರು ಹೋಳಿಗೆ ಇತ್ತು .ಅದನ್ನು ಮುಟ್ಟಬೇ ಡಿ ನಮ್ಮ ಅಣ್ಣ ಹೋಗೋವಾಗ ತೊಗೊಂಡು ಹೋ ಗ್ತಾನೆ.ಅತ್ತಿಗೆಗೆ ಮಾಡಕ್ಕೆ ಬರಲ್ಲವಂತೆ ಅಂದಳು ಅಮ್ಮ.ಅಂದು ಎಲ್ಲಾ ಖಾಲಿ ಅಮ್ಮನ ಊಟ ಅಷ್ಟೇ ಪಾಪ .


ಇದು ಒಂದು ದಿನದ ಕತೆಯೂ ಅಲ್ಲ ಒಂದು ಮನೆ ಅಥವ ಒಬ್ಬ ಅಮ್ಮ ನ ಕಥೆಯೂ ಅಲ್ಲ. ಅಮ್ಮ ಅನ್ನೊ ಪ್ರತಿ ಹೆಣ್ಣಿನ ಕಥೆ. ಏನಂತೀರಿ.?



Rate this content
Log in

Similar kannada story from Abstract