nagavara murali

Tragedy Others

2  

nagavara murali

Tragedy Others

ಮಣ್ಣಿನ ದೋಣಿ

ಮಣ್ಣಿನ ದೋಣಿ

5 mins
128


ಮಚಂದ್ರನ್  ಶಿವಾನಂದ ಕಾಲೇಜ್ ನಲ್ಲಿ ಸುಮಾರು ಐದು ವರ್ಷಗಳಿಂದ lecturer ಆಗಿದ್ದಾರೆ. ಇಡೀ ಕಾಲೇ ಜ್ ನಲ್ಲೇ ಇವರ ಹೆಸರು ಕೇಳಿಲ್ಲದ ವಿಧ್ಯಾರ್ಥಿ ಇರಲು ಸಾಧ್ಯವಿಲ್ಲ. ಕಾರಣ ಇವರು ವಿಧ್ಯಾರ್ಥಿಗಳನ್ನ ಹಾಗೆ ಮೋಡಿ ಮಾಡಿ ತಮ್ಮತ್ತ ಸೆಳೆಯುವ ಚುಂಬಕ ಶಕ್ತಿ ಯಾಗಿದ್ದರು . ಹೊಸ student ಇವರ ಹತ್ತಿರ ಮಾತ ನಾಡುವಾಗ ಅವರ ಹೆಸರು ಮೊದಲು ಹೇಳಬೇಕು ಆಗ ಇವರು ಆ ಹೆಸರನ್ನು repeat ಮಾಡ್ತಾರೆ .ಅಲ್ಲಿಗೆ ಅವನ ಹೆಸರು ಅವರ ತಲೆಯಲ್ಲಿ register ಆಯ್ತು ಅಂತ . ಮತ್ತೆ ಕಾಲೇಜ್ ಮುಗಿಸಿ ಬೇರೆಲ್ಲಾದರೂ ಹೊರಗೆ ನೋಡಿದರೂ ಅದೇ ಹೆಸರಿನಿಂದ ಅವರನ್ನ ಕೂಗಿ ಕರೆ ಯುವಷ್ಟು ಅದ್ಭುತ ನೆನೆಪಿನ ಶಕ್ತಿ ರಾಮ ಚಂದ್ರನ್ ಅವರಿಗೆ. ಇವರನ್ನು ಕಂಡರೆ ಎದುರಲ್ಲೇ you are gifted sir ಅಂಥ ಹೊಗಳಿ ಹಿಂದೆ ಅವರ ಖಾಸಗಿ ವಿಷಯಗಳನ್ನ ಕೆದಕಿ ಇಂತಹ ಗುರುವಿನಿಂದ ಮಕ್ಕಳು ಏನು ಕಲೀತಾರ್ರೀ ಅಂಥ ಗೇಲಿ ಮಾಡೋದು ಇವರನ್ನು ಕಂಡರೆ ಆಗದ college staff ನ ಒಂದು ಗುಂಪು ಇದ್ದೇ ಇತ್ತು. ಹಾಗಾದರೆ ಏನದು ಅವರ ಖಾಸಗಿ ಬದುಕಿನ ಗುಟ್ಟು ನೋಡೋಣ ಬನ್ನಿ.


ರಾಮಚಂದ್ರನ್ ಅದೇ ಕಾಲೇಜಿನ physics lecturer ರಾಜಲಕ್ಷ್ಮೀಯನ್ನ ಇಷ್ಟ ಪಟ್ಟಿದ್ದರು. , ನಾನು ಹಾಗೆ ಏನಾ ದರೂ ಮದುವೆ ಆಗುವುದಾದರೆ ಅದು ನಿಮ್ನನ್ನೇ ಸಾ ರ್, ಇಲ್ಲದೇ ಹೋದರೆ ಮದುವೇನೇ ಬೇಡ ಅಂದಿದ್ದಕ್ಕೆ ಒಪ್ಪಿ simple ಅಗಿ register marriage ಆಗಿ ಹೋ ಟೆಲ್ ಒಂದರಲ್ಲಿ ಸ್ನೇಹಿತರಿಗೆ ಇಬ್ಬರೂ ಸೇರಿ ಪಾರ್ಟಿ ಕೊಟ್ಟಿದ್ದರು. ಎರಡು ವರ್ಷ ಕಳೆದಿರಬಹುದು , ರಾಮ ಚಂದ್ರನ್ ಗೆ ಮತ್ತೊಂದು affair ಇದೆ ಅಂತ ರಾಜಲಕ್ಷ್ಮೀ ಗೆ ಗೊತ್ತಾದರೂ ಪಾಪ ಏನೂ ಮಾಡೋ ಹಾಗೆ ಇರಲಿಲ್ಲ. ನೀನು ತಲೆ ಕೆಡಿಸ್ಕೋಬೇಡ ನಿನಗೆ ಯಾವುದೇ ಕೊರತೆ ಇಲ್ಲದ ಹಾಗೆ ನಾನು ನೋಡ್ಕೋತೀನಿ ಅಂತಾನೇ manage ಮಾಡ್ತಾ ಇದ್ದರು ರಾಮಚಂದ್ರನ್ . ಹೀಗಿ ರುವಾಗ ರಾಜಲಕ್ಷ್ಮೀ ಗೆ ಒಂದು ಹೆಣ್ಣು ಮಗು ಆಯ್ತು. ಮಾನಸಿ ಅಂಥ ಹೆಸರು ಇಟ್ಟರು. ನೋಡಲು ಮುದ್ದಾದ ಮಗು. ಇಬ್ಬರಿಗೂ ಒಳ್ಳೆಯ ಸಂಪಾದನೆ ಇದ್ದ ಕಾರಣ ಬೇರೆ ಯಾವುದಕ್ಕೂ ಕೊರತೆ ಇರಲಿಲ್ಲ. 


ರಾಜಲಕ್ಷ್ಮೀ ಗೆ ಬೇರೊಂದು ಕಾಲೇಜ್ ನಿಂದ ಒಳ್ಳೆಯ offer ಬಂದ ಕಾರಣ ಹತ್ತಿರ ಇದ್ದರೆ ಒಳ್ಳೆಯದು ಅಂತ ತಾಯಿ ಜೊತೆ ಮಲ್ಲೇಶ್ವರದಲ್ಲಿ ಮನೆ ಮಾಡಿದರು. ಇದು ರಾಜಲಕ್ಷ್ಮೀ ತಮ್ಮ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು. ಒಂದು ದಿನವೂ ರಾಜಲಕ್ಷ್ಮೀಯನ್ನಾಗಲಿ , ಮಗುವನ್ನಾಗ ಲಿ ನೋಡಲು ರಾಮಚಂದ್ರನ್ ಈ ಮನೆಗೆ ಬರಲೇ ಇಲ್ಲ.ಅದಕ್ಕೆ ಬಲವಾದ ಕಾರಣ ಅವಳ ಅಮ್ಮ. ಮಗಳ ನ್ನು ನೋಡಿ ಕೊಳ್ಳಲು ತಾಯಿ ಬಂದದ್ದು ಒಂದು ಕಂಡೀ ಶನ್ ಮೇಲೆ. ನಾನು ಇರೋವರೆಗೂ ನಿನ್ನ ಗಂಡ ಈ ಮನೇಗೆ ಬರಬಾರದು . ನಾನು ನಿನ್ನ ಮಗುವಿಗೋಸ್ಕರ ನಿಮ್ಮ ಅಪ್ಪ ಅಣ್ಣ ಯಾರಿಗೂ ಇಷ್ಟ ಇಲ್ಲದಿದ್ದರೂ  ಬರ್ತಾ ಇರೋದು .ನಿನಗೋಸ್ಕರ ಕೂಡಾ ಅಲ್ಲ ಅಂಥ ಹೇಳಿಯೇ ಬಂದರು. ಹಾಗಾಗಿ ರಾಮಚಂದ್ರನ್ ಗೆ ಈಗ ಬಹಳ ಆಪ್ತಳಾದಳು ಗೀತಾ . ಗೀತಾ ರಾಜಲಕ್ಷ್ಮೀಯ ದೂರದ ಸಂಭಂದಿಯೇ. ಗೀತಾ ಗೆ  ರಾಜಲಕ್ಷ್ಮೀಯ ಬಗ್ಗೆ ಕೋಪವಿಲ್ಲ. ಹಾಗೇ ರಾಜಲಕ್ಷ್ಮೀ ಗೂ ಗೀತಾಳ ಬಗ್ಗೆ ಅಸೂಯೆ ಇಲ್ಲ. ಹಲವು ಸಲ ಇಬ್ಬರೂ ಬೇಟಿಯಾಗಿ ಮುಕ್ತವಾಗಿ ಅನೇಕ ವಿಷಯ ಮಾತನಾಡಿದರೂ ಇಬ್ಬ ರೂ ಗಂಡನ ಬಗ್ಗೆ ಎಂದೂ ಕೆಟ್ಟದಾಗಿ ಮಾತನಾಡಿದ್ದಿಲ್ಲ ಅನ್ನೋದೇ ರೋಚಕ ಸಂಗತಿ.


ಹದಿನೈದು ವರ್ಷಗಳು ಕಳೆದಿದೆ . ಗೀತಾಳ ತಂದೆಗೆ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಿದ್ದಾರೆ. ನೋಡಲು  ಒಮ್ಮೆ ತನ್ನ ತಾಯಿ ಮನೆಗೆ ರಾಮಚಂದ್ರನ್ ಜೊತೆ ಬಂದಿದ್ದಾಗ ಒಂದು ಘಟನೆ ನಡೆದು ಹೋಯಿತು. ಯಾವುದೇ ಊರಲ್ಲಿ ಇದ್ದರೂ ರಾಮಚಂದ್ರನ್ ಗೆ ಬೆಳಗ್ಗೆ walk ಮಾಡೋ ಅಭ್ಯಾಸ. ಹಾಗೇ ಇಲ್ಲಿ ಇವರ ಮನೆ ಹತ್ತಿರ ಇರುವ park ಗೆ ಹೋಗಿದ್ದರು. ವಾಪಸ್ ಬರುವ ವೇಳೆ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದು ಎದೆ ಮೂಳೆಗಳು ಮುರಿ ದು ತಲೆಗೂ ಗಂಭೀರವಾಗಿ ಗಾಯವಾಗಿತ್ತು .ಪ್ರಜ್ಞೆ ಇಲ್ಲ ದೆ ರಸ್ತೆಯಲ್ಲಿ ಬಿದ್ದಿರೋದು ನೋಡಿ ಯಾರೋ ಆಟೋ ದವನು ಆಸ್ಪತ್ರೆಗೆ ಸೇರಿಸಿದ್ದಾನೆ. ಮನೆಗೆ ಹತ್ತುಗಂಟೆ ಆದರೂ ವಾಪಸ್ ಬರದೇ ಇದ್ದಾಗ ಹೆದರಿ ವಿಚಾರಿ ಸುತ್ತಿದ್ದಾಗ ಇವರ ಮನೆಗೆ ಹತ್ತಿರವೇ ಹಿಂದಿನ ರಸ್ತೆಯಲ್ಲಿ ಅಫಗಾತ ಆಗಿರುವ ವಿಷಯ ಇವರ ಮನೆ ಕೆಲಸದವಳಿಂದ ತಿಳಿಯಿತು  ಪೋಲಿಸಿನವರ ಸಹಾಯದಿಂದ ಹೇಗೋ ಆ ಆಸ್ಪತ್ರೆ ಹುಡುಕಿ ಹೋದಳು ಗೀತಾ. ಅಲ್ಲಿ ಸಾವು ಬದುಕಿನೊಂದಿಗೆ ಹೋರಾಡ್ತಾ ಇರೋ ವಿಷಯ ತಿಳಿಯಿತು. ಅಳುತ್ತಾ ಒಬ್ಬಳೇ ನಿಂತಿದ್ದಾಗ ಯಾರೋ ಬಂದು ನೀವು accident ಆಗಿರೋ patient ಕಡೆಯ ವರಾ ಅಂದಾಗ ಹೌದು ನಾನು ಅವರ wife ಅಂದಳು ಗೀತಾ. ಬನ್ನಿ condition critical ಆಗಿದೆ .ರಿಬ್ಸ್ ಮುರಿದರೂ ಪರವಾಗಿಲ್ಲ ಆದರೆ head injury ದೇ ಈಗ problem .blood clots ಇದೆ remove ಮಾಡಬೇಕು. ಅಂತ ಹೇಳಿ ಹೋದರು. 


ಅಲ್ಲಿಗೆ sister ಒಬ್ಬರು ಬಂದು ಮೇಡಂ reception ನಲ್ಲಿ ಕರೀತಾರೆ ನೋಡಿ ಅಂದಾಗ ಅಲ್ಲಿಗೆ ಹೋದಳು ಗೀತಾ. ನೀವು ಅವರ wife ತಾನೇ.Immediate ಆಗಿ ಹತ್ತು ಸಾವಿರ pay ಮಾಡಿ. Insurance ಇದೆಯಾ ಅಂದರೆ ಗೊತ್ತಿಲ್ಲ ಅಂದಳು. ಪಕ್ಕದಲ್ಲಿ ಇದ್ದವರು wife ಅಂತೀರಿ Insurance cover ಆಗಿದ್ಯಾ ಇಲ್ಲವಾ ಗೊತ್ತಿ ಲ್ಲ ಅಂದರೆ ಹೇಗೆ ಮೇಡಂ ಅಂದರು .ಆಗಲೂ ಅಳು ತ್ತಲೇ ಇದ್ದಳು ಗೀತಾ. ಮನೇಗೆ ಹೋಗಿ ಬರ್ತೀನಿ ಅಂಥ ಹೇಳಿ ಆಟೋ ಹಿಡಿದು ಮನೆಗೆ ಬಂದಳು. ಈ ಕಡೆ ಪೋಲೀಸರೂ ಬಂದರು.ಯಾರು ಅಂಥ ಗೊತ್ತಾಯ್ತು ಶಿವಾನಂದ ಕಾಲೇಜು ಲಕ್ಚರರ್ ಅಂತೆ ಅಂದಾಗ. ಸಾರ್ ಅವರ wife ಬಂದಿದಾರೆ, ಈಗ ತಾನೇ ಮನೆಗೆ ಹೋದ್ರು ಅಂದಾಗ ಓಹ್ ನಮ್ಮ ಅರ್ಧ ಪ್ರಾಬ್ಲೆಮ್ solve ಆಯ್ತು ಅಂದರು ಪೋಲಿಸ್ ಇನ್ಸ್ಪೆಕ್ಟರ್. ಆ register ಕೊಡಿ Address ನೋಡೋಣ ಅಂಥ ತೆಗೆದು ಕೊಂಡು ನೋಡಿ ದರೆ Mrs.. ರಾಜಲಕ್ಷ್ಮೀ ರಾಮಚಂದ್ರನ್ lecturer ಅಮ್ಮಣ್ಣಿ ಕಾಲೇಜ್ ,ಅಂಥ official ಅಡ್ರೆಸ್ ಮಾತ್ರ ಇದೆಯಲ್ಲ. ನೀವು residential address ತೊಗೋ ಳೋದಿಲ್ವೆ ಅಂದಾಗ ನಾನು ಸ್ವಲ್ಪ ಆಕಡೆ busy ಆಗಿದ್ದೆ ನೊಡಿಲ್ಲ . Educated lady ಸಾರ್ .ಬರ್ತಾರೆ ಬಂದಾಗ ಮನೆ ಅಡ್ರೆಸ್ ತೊಗೋತೀನಿ ಅಂದರು. ಆಗ ಫೋನ್ ರಿಂಗ್ ಆಯಿತು. Reception ನಲ್ಲಿದ್ದ lady ತೊಗೊಂಡರು . ರಾಮಚಂದ್ರನ್ ಅನ್ನೋರು ಯಾರಾದರೂ ಇವತ್ತು ಅಡ್ಮಿಟ್ ಆಗಿದಾರಾ. ಹೌದು accident case. ಅವರ ಹೆಂಡತಿ ಇಷ್ಟು ಹೋತ್ತು ಇಲ್ಲೇ ಇದ್ದರು .ಮನೆಗೆ ಹೋಗಿ ಬರ್ತೀನಿ ಅಂಥ ಹೋಗಿದಾರೆ ‌. What !, ಅವರ ಹೆಂಡತೀನಾ. ಏನು ಹೆಸರು ರಾಜ ಲಕ್ಷ್ಮೀ. ಮೇಡಮ್ ನಾನೇ ರಾಜಲಕ್ಷ್ಮೀ ಅವರ ಹೆಂಡತಿ ಮಾತಾಡ್ತಾ ಇರೋದು . ನನಗೆ ಈಗತಾನೇ ಯಾರೋ ಫೋನ್ ಮಾಡಿ ವೆಗಾಸ್ ಆಸ್ಪತ್ರೆಯಿಂದ ಮಾತಾಡ್ತಾ ಇರೋದು ಅಂತ ಹೇಳಿ ವಿಷಯ ತಿಳಿಸಿದ್ದಕ್ಕೆ ಈಗ ತಕ್ಷಣ ಫೋನ್ ಮಾಡಿದ್ದು. ಇದು ಏನೋ ಒಂದು ತರಹೆ ವಿಚಿತ್ರ ವಾಗಿದೆ. . ನೀವೇ ಇಲ್ಲಿಗೆ ಬನ್ನಿ ಅಂತ ಫೋನ್ ಇಟ್ಟಾಗ ಪೋಲೀಸ್ ಇನ್ಸ್ಪೆಕ್ಟರ್ ಕೇಳಿದರು ಏನಂತೆ ಅವರ ಕಥೆ. ಸಾರ್ ವಿಚಿ ತ್ರ ವಾಗಿದೆ . ಅವರು ಬರಲಿ ಎಲ್ಲಾ ಆಮೇಲೆ ಹೇಳ್ತೀನಿ ಅಂಥ ಬೇರೊಂದು ಅರ್ಜೆಂಟ್ case .ಕಡೆ ಗಮನ ಕೊಟ್ಟರು. 


Register ನಲ್ಲಿ enter ಮಾಡಿದ್ದ ಫೋನ್ ಗೆ ಇನ್ಸ್ಪೆಕ್ಟರ್ ಫೋನ್ ಮಾಡಿದರು .ಆದರೆ ಯಾರೂ receive ಮಾ ಡ್ತಾ ಇಲ್ಲ. ಅರ್ಧಗಂಟೆ ಆಗಿರಬಹುದು ಆಟೋದಲ್ಲಿ ರಾಜಲಕ್ಷ್ಮೀ ಬಂದು I am Rajalakshmi Rama Chandran ಹೇಗಿದಾರೆ. Condition critical ಹಾಗೇ ಇದೆ. ನಿಮ್ಮ ಹೆಸರಿನವರು ಒಬ್ಬರು ಬಂದು ಅಳ್ತಾನೇ ಇದ್ದರು ಮನೇಗೆ ಹೋಗಿ ಹಣ ತರ್ತೀನಿ ಅಂಥ ಹೋದ ರು ಬರಲೇ ಇಲ್ಲ. ಅವರೂ wife ಅಂತಾರೆ. ನೀವೂ ......ಹೌದು .ನಾನೂ ಅವರ ಹೆಂಡತೀನೇ. ಈಗ ಎಷ್ಟು ಕಟ್ಟಬೇಕು ಹೇಳಿ. ಹತ್ತು ಸಾವಿರ ಕಟ್ಟಿ. ಚೆಕ್ ತೊಗೋಳ್ತೀರಾ. Sorry madam . cash or card.


ರಾಜಲಕ್ಷ್ಮೀ ಮಗಳು ಮಾನಸಿ ಆಸ್ಪತ್ರೆ ಒಳಗೂ ಬರದೇ ಹೊರಗೇ ನಿಂತಿದ್ಲು. ಹೊರಗೆ ಹೋಗಿ ಮಾನಿ ,scene create ಮಾಡಬೇಡ .please ಒಳಗೆ ಬಾರೇ, .ICU ನಲ್ಲಿ ಇರೋದರಿಂದ ಯಾರನ್ನೂ ಬಿಡಲ್ಲ. ನೀನು ಸುಮ್ಮ ನೆ ನನ್ನ ಜೊತೆ ಇದ್ದರೆ ಸಾಕು. ನನಗೆ ಧೈರ್ಯ ಬರತ್ತೆ. ಬಾ please ಅಂದಾಗ don't force me to see him ok. ಅಂಥ ಒಳಗೆ ಬಂದಳು. ಒಬ್ಬ ಡಾಕ್ಟರ್ ಬಂದು ಹೇಳಿದರು. ನಿಮ್ಮ ಅಧೃಷ್ಟ. One of the best neuro surgeon in the country Dr. Subhash ಬೆಂಗಳೂರ ಲ್ಲೇ ಇವತ್ತು medical conference ನಲ್ಲಿದ್ದಾರೆ. ಅವರ opinion ತೊಗೋಬಹುದು. ಅವರ ಕಡೆಯ ಒಂದು ಪೇಶಂಟ್ ನಮ್ಮ ಆಸ್ಪತ್ರೆಯಲ್ಲೇ ಇರೋದರಿಂದ ನೋಡ ಕ್ಕೆ ಬರ್ತಾ ಇದಾರೆ. ಇವರು ನಿಮ್ಮ ಡಾಟರ್ರಾ ಹೋಗಿ ದೂರದಿಂದ ನೋಡ್ಲಿ ಪರವಾಗಿಲ್ಲ ಅಂದಾಗ. Sorry, I am not Interested to see any body. ಅಂದಾಗ. ಸಧ್ಯಕ್ಕೆ Doctor ಅಲ್ಲಿ ಇರಲಿಲ್ಲ.


ಮಾನಿ ನೀನು ಮನೇಗೆ ಹೋಗಿ ನನಗೆ ರಾತ್ರಿ ಇರಕ್ಕೆ ಬಟ್ಟೆ ತಂದು ಕೊಡು. ಊಟ ಇಲ್ಲೇ manage ಮಾಡ್ತೀನಿ. ಅಂದರು ಅಮ್ಮ.. Are you mad mummy. ನೀನು ಒಬ್ಬಳೇ ಇಲ್ಲಿ ಇರೋದಾ .ನಾನು ಬಿಡಲ್ಲ. ಬಾ ಮನೆಗೆ ಹೋಗೋಣ ಅಂತ ಕೈಹಿಡಿದು ಎಳೆದಾಗ .ನೀನು ಮನೇಗೆ ಹೋಗು ನಾನು ಬರಲ್ಲ ಅಂತ ಅಮ್ಮ.ಏನಾ ದರೂ ಮಾಡ್ಕೋ ನಿನ್ನಹಣೆ ಬರಹ. ನಾನು ಹೋಗ್ತೀನಿ ಅಂತ ಹೊರಟೇ ಹೋದ್ಲು. Specialist ಯಾವಾಗ ಬಂದರೊ ತಿಳಿಯಲೇ ಇಲ್ಲ. ರಾತ್ರಿ ಹೇಗೋ ಕಳೆದು ಬೆಳಗಾಯ್ತು .ಬೆಳಗ್ಗೆ ಮನೆಗೆ ಹೋಗೋದು ಸಂಜೆ ಅಸ್ಪತ್ರೆ ಗೆ ಬರೋದು ಹೀಗೆ ಒಂದು ವಾರ ಕಳೆದಿದೆ. ಒಂದು ಲಕ್ಷ ರೂಪಾಯಿ ಖರ್ಚು ಆದರೂ ಅದರ ಬಗ್ಗೆ ತಲೆ ಚಿಂತೆ ಮಾಡಲಿಲ್ಲ. ಮೊದಲಿನ ಹಾಗೆ ಆದ್ರೆ ಏನಾದ್ರು ಮಾಡಿ ತನ್ನ ಮನೆಗೆ ಕರೆದು ಕೊಂಡು ಹೋಗಬೇಕು ಮಾನಿನ ಅವರು ಕಣ್ಣಲ್ಲಿ ನೋಡಿ ಸಂತೋಷ ಪಡಬೇಕು ಇವಳೂ ಅಪ್ಪ ಅಂತ ಒಪ್ಪಿಕೊ ಬೇಕು ಅಂತ ಏನೇನೋ ಆಸೆ ಹೊತ್ತು ಹಾಗೆ ಕಣ್ಣು ಮುಚ್ಚಿದ್ದಾಗ ಯಾರೋ ಮೇಡಂ ಅಂದಿದ್ದು ಕೇಳಿ ಹೆದರಿ 

ಏನಾಯ್ತು ಅಂತ ನಿಂತಳು. ಇದಕ್ಕೊಂದು sign ಮಾಡಿ ಕೊಡಿ ಅಂತ ಮಧ್ಯ ರಾತ್ರಿ ಹೇಳಿದಾಗ ಏನು ಈಗ operation ಮಾಡ್ತಾರಾ. ಅಂಥ ಕೇಳಿದ್ರೆ. ಹೌದು Dr. Subhash ಇದಾರೆ .ಎರಡು patient ಗೂ ಅವರೇ ಮಾಡ್ತಾರೆ. ದೇವರೇ ಒಳ್ಳೆಯದು ಆದರೆ ಸಾಕಪ್ಪಾ. ಅಂತ ಮತ್ತೆ ಕಣ್ಣು ಮುಚ್ಚಿದರು ರಾಜಲಕ್ಷ್ಮೀ. ಮಾರನೇ ದಿನ ಸಿಸ್ಟರ್ ಬಂದು .ನೀವು ಹೋಗಿ mostly 

Recognize ಮಾಡ್ತಾರೆ ಅಂದಾಗ ಏನೋ ಸಂತೋಷ. ಒಳಗೆ ಹೋದರೆ ಪಕ್ಕದಲ್ಲಿ ಇನ್ನೊಬ್ಬ ಸಿಸ್ಟರ್ ಇದ್ದರು. 

ಅವರು ಹಣೆ ಮೇಲೆ ಕೈ ಇಟ್ಟು ರಾಮಚಂದ್ರನ್ ನೋಡಿ ಗೀತಾ ಬಂದಿದ್ದಾರೆ ಅಂದಾಗ ಸ್ವಲ್ಪ ಕಣ್ಣು ತೆಗೆದು ಹಾಗೆ ಮುಚ್ಚಿದರು .ನಾನು ಗೀತ ಅಲ್ಲ ರಾಜಿ ಅಂದಾಗ sorry. ನೋಡಿ ರಾಜಿ ಬಂದಿದ್ದಾರೆ ಕಣ್ಣು ಬಿಡಿ , ಕಣ್ಣು ಬಿಡಿ ಅಂದರೆ ಕಣ್ಣು ತೆಗೆಯಲೇ . ಅಳುತ್ತಾ ಬಾಗಿಲ ಹತ್ತಿರ ಬಂದಾಗ ಮತ್ತೊಮ್ಮೆ ತಿರುಗಿ ನೋಡಿದಳು ಮತ್ತೆ ಆ nurse ನೋಡಿ ಗೀತಾ ಬಂದಿದ್ದಾರೆ ಅಂದಾಗ ಕಣ್ಣು ತೆಗೆದು ಎಲ್ಲಿ ಎಲ್ಲಿ ಅನ್ನೋಹಾಗೆ ಕೇಳೋ ಹಾಗೆ ಇತ್ತು . ರಾಜಲಕ್ಷ್ಮೀ ಮನೆಗೆ ಹೋಗೋವಾಗ reception ನಲ್ಲಿ madam ಐವತ್ತು ಸಾವಿರ balance pay ಮಾಡ್ತೀರಾ ಅಂದಾಗ ವಿಧಿ ಇಲ್ಲದೆ ಕೊಟ್ಟು ಮನೆ ಕಡೆ ಹೊರಟಳು . ಈಗ ಮನೆಯಲ್ಲಿ ಮಗಳು ಅಮ್ಮ ಇಬ್ಬರನ್ನೂ ಹೇಗೆ face ಮಾಡೋದು ಅನ್ನೊ ಭಯ ಒಂದೇ ಪಾಪ.


Rate this content
Log in

Similar kannada story from Tragedy