Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra
Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra

nagavara murali

Classics Thriller


2  

nagavara murali

Classics Thriller


ಪೂರ್ವ ಜನ್ಮದ ನೆನಪು

ಪೂರ್ವ ಜನ್ಮದ ನೆನಪು

3 mins 67 3 mins 67

 ಮಗಧ ಸಾಮ್ರಾಜ್ಯದ ಅಧೀನದಲ್ಲಿನ ಒಂದು ಪುಟ್ಟ ರಾಜ್ಯ .ಇದನ್ನು ಆಳುತ್ತಿದ್ದ ರಾಜ ಪ್ರದೀಪ ವರ್ಮ ಇವನ ಪಟ್ಟದ ರಾಣಿ ಗಂಗಾಂಬಿಕೆ ಗೆ ಹತ್ತು ವರ್ಷ ವಾದರೂ ಮಕ್ಕಳಾಗದ ಕಾರಣ ರಾಜ ಮತ್ತೊಬ್ಬಳನ್ನ ಸ್ವೀಕರಿಸಿದ ಅವಳ ಹೆಸರು ಮಾಲಿನಿ .ಇವಳಿಗೆ ಒಂದು ಗಂಡು ಮಗು ಹುಟ್ಟಿ ಅವನಿಗೆ ಮಾರ್ತಾಂಡ ವರ್ಮ ಎಂದು ನಾಮಕರಣ ವಾಯ್ತು. ಈ ಮಗುವಿನ ಬಗ್ಗೆ ಅರಮನೆ ಯ ಜ್ಯೋತಿಷಿಗೆ ಮಾತ್ರ ತಿಳಿದಿತ್ತು. ಅವನು ರಾಜ ಪ್ರದೀಪ ವರ್ಮನಿಗೆ ತಿಳಿಸಲಿಲ್ಲ.ಕೆಲವು ವರ್ಷಗಳ ನಂತರ ಇಬ್ಬರು ಅವಳಿ ಹಣ್ಣು ಮಕ್ಕಳು ಹುಟ್ಟಿದವು.

 ಮಾರ್ತಾಂಡ ದೊಡ್ಡ ವನಾದ. ಅವನಿಗೆ ಪಟ್ಟಾಭಿಷೇಕ ಮಾಡಿ ಯುವರಾಜ ನೆಂದು ಜನ ಸ್ವೀಕಾರ ಮಾಡಿದರು.


ತನಗೆ ಮಕ್ಕಳು ಇಲ್ಲವೆಂದು ಕೊರಗುತ್ತಿರುವಾಗಲೇ ಎರಡನೆಯವಳಿಗೆ ಗಂಡು ಮಗುವಾದ ದಿನದಿಂದ ಕೋಪಾಗ್ನಿ ಹೊಟ್ಟೆಯಲ್ಲಿ ಇದ್ದೇ ಇತ್ತು. ಒಂದು ದಿನ ದೇವಾಲಯಕ್ಕೆ ಹೋಗಿ ಪ್ರಸಾದ ತಂದಿದ್ದೇನೆಂದು ಯಾರಿಗೂ ತಿಳಿಯದ ಹಾಗೆ ಮೊದಲಪತ್ನಿ ಗಂಗಾಂಬಿಕೆ ಯುವರಾಜನಿಗೆ ಕೊಟ್ಟಳು. ತಿಂದ ಕೆಲವೇ ಸಮಯಕ್ಕೆ ಮಾತು ನಿಂತು ಹೋಯಿತು. ಅರಮನೆಯಲ್ಲಿ ಎಲ್ಲರಿಗೂ ಆತಂಕ .ಎಲ್ಲ ರೀತಿಯ ಔಷದೋಪಚಾರ ವಾಯ್ತು. ಪ್ರಯೋಜನವಿಲ್ಲ. ಬರೆದು ತೋರಿಸಲು ಕೇಳಿದರೂ ಅವನು ಉತ್ತರಿಸಲಿಲ್ಲ . ಎಲ್ಲಿ ಕೂತರೆ ಅಲ್ಲಿ ಸುಮ್ಮನೆ ಏನೋ ಯೋಚನೆ ಮಾಡುತ್ತಿರುವಂತೆ ಇರುತ್ತಿದ್ದ.


ಒಂದು ದಿನ ಪರ ಊರಿನ ಒಬ್ಬ ಯುವತಿ ಅರಮನೆಗೆ ಬಂದು ಯುವರಾಜನನ್ನ ನೋಡಬೇಕೆಂದಾಗ ದ್ವಾರ ಪಾಲಕರು ಅವನು ಕುಳಿತಿದ್ದ ಕಡೆ ಕರೆತಂದರು. ಅವ ನನ್ನು ನೋಡಿದ ತಕ್ಷಣ ಕಾಲಿಗೆ ಗೆಜ್ಜೆ ಕಟ್ಟಿ ನಾಟ್ಯ ಮಾಡಲು ತಯಾರಾದಳು. ಯುವರಾಜನ ಎಲ್ಲೋ ಇದ್ದ ಧೃಷ್ಟಿ ಈಗ ಸಂಪೂರ್ಣವಾಗಿ ಇವಳ ಮೇಲೆ . ಅಲ್ಲಿದ್ದ ವರಿಗೆಲ್ಲಾ ಆಶ್ಚರ್ಯ.ಇವಳ ನಾಟ್ಯಕ್ಕೆ ಅವನು ಮಾರು ಹೋದಂತಿದೆ. ಈ ಸುದ್ದಿ ರಾಜ ಪ್ರದೀಪ ವರ್ಮನಿಗೂ ಮುಟ್ಟಿ ಓಡಿ ಬಂದ. ಸುಮಾರು ಒಂದು ಗಂಟೆ ಸತತ ನಾಟ್ಯ ಮಾಡಿ ತಕ್ಷಣ ನಿಲ್ಲಿಸಿದಾಗ ಅವನ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯಿತು.. ಅವಳು ಅಲ್ಲಿಂದ ಯಾರಿಗೂ ಹೇಳದೇ ಹೊರಟೇ ಹೋದಳು.ಅವಳು ಯಾರೆಂದೇ ತಿಳಿಯದಾಯ್ತು. ಮಾರನೆ ದಿನ ಮತ್ತೆ ಬಂದು ನಾಟ್ಯ ಮಾಡಲು ತಯಾರಾದಾಗ ಅರಮನೆಯ ಪಕ್ಕವಾದ್ಯದವರು ಜೊತೆಗೂಡಿದ ಅವಳ ನಾಟ್ಯ ಬಹಳ ಅಧ್ಬುತವಾಗಿತ್ತು . ಈಗ ಯುವರಾಜನ ಮುಖದಲ್ಲಿ ಕೊಂಚ ಬದಲಾವಣೆ ಸ್ಪಷ್ಟವಾಗಿ ಗೋಚರವಾ ಯ್ತು .ಒಂದು ವಾರ ಪ್ರತಿದಿನ ಇದೇ ರೀತಿ ಅವಳು ಬಂದು ನಾಟ್ಯ ಮಾಡಿ ಹೋಗೋದು ನಡದೇ ಇತ್ತು. ಒಂದು ದಿನ ಅವಳಿಗಾಗಿ ಅರಮನೆಯಲ್ಲಿ ಎಲ್ಲರೂ ಕಾದು ಕುಳಿತಿದ್ದಾರೆ. ಆದರೆ ಅವಳ ಸುಳಿವಿಲ್ಲ. ಯುವ ರಾಜ ದೂರದಲ್ಲಿದ್ದ ಒಂದು ಕುದುರೆ ಹತ್ತಿ ಹೊರಗಿನ ಪ್ರಪಂಚವನ್ನೇ ಅರಿಯದವನು ಅರಮನೆ ಯಿಂದ ಉತ್ತರ ದಿಕ್ಕಿಗೆ ವೇಗವಾಗಿ ಹೊರಟ . ಅರಮನೆ ಸಿಬ್ಬಂದಿ ಇವನನ್ನು ಹಿಂಬಾಲಿಸಿದರು.ಎಲ್ಲಿಗೆ ಹೋಗು ತ್ತಾನೆಂದೇ ತಿಳಿಯಲಿಲ್ಲ. ಕೊನೆಗೆ ಒಂದು ಸರೋವರದ ಬಳಿ ಕುದುರೆ ನಿಂತಾಗ ಇಳಿದು ನೀರು ಕುಡಿಯಲು ಹೋದ . ಅಲ್ಲಿ ಅವಳು ಬಟ್ಟೆ ಒಗೆಯುತ್ತಿರುವುದನ್ನ ಕಂಡು ಹೋಗಿ ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣೀರು ಸುರಿಸಿದ. ಇಬ್ಬರೂ ಏನೂ ಮಾತನಾಡಲಿಲ್ಲ. ಉಳಿದವ ರು ವಿಚಿತ್ರವಾಗಿ ನೋಡುತ್ತಿದ್ದರು. ದುಃಖದಿಂದ ಕುದುರೆ ಹತ್ತಿ ಅರಮನೆಗೆ ಹಿಂದುರಿಗಿ ಬಂದ.ರಾಜ ಪ್ರದೀಪವ ರ್ಮನಿಗೆ ವಿಷಯ ತಿಳಿಸಿದರು . ರಾಜನಿಗೆ ಏನೂ ಅರ್ಥ ವಾಗದೆ ಚಕಿತನಾದ. ಮಾರನೇ ದಿನ ನರ್ತಕಿ ಬಂದು ಅದೇ ರೀತಿ ನರ್ತನ ಮಾಡಲು ತಯಾರಾದ ಳು .ಅಲ್ಲಿದ್ದವರು ಯಾರೋ ಮತ್ತೆ ಅವಳು ಹೋಗದಿರ ಲೆಂದು ಬಾಗಿಲು ಹಾಕಿ ಹೊರಟು ಹೋದರು. ಈಗ ಯುವರಾಜ ಮತ್ತು ನರ್ತಕಿ ಮಾತ್ರ ಇದ್ದಾರೆ.

ಯುವರಾಜ ಅವಳ ಕಾಲುಗಳಿಂದ ಕಟ್ಟಿದ ಗೆಜ್ಜೆ ತೆಗೆದು ಬೆಳ್ಳಿ ಕಡಗಗಳನ್ನ ತನ್ನ ಕೈಗಳಿಂದಲೇ ಹಾಕಿದ.ಯಾರಿಗೂ ತಿಳಿಯ ಬಾರದೆಂದು ಅದರ ಮೇಲೆ ಮತ್ತೆ ಗೆಜ್ಜೆ ಕಟ್ಟಿ ಒಂದು ಬಾರಿ ಗಟ್ಟಿಯಾಗಿ ಅಪ್ಪಿಕೊಂಡ .ಹೋಗುವಂತೆ ಬಾಗಿಲ ಕಡೆ ಕೈ ತೋರಿಸಿ ತಾನೂ ಜೊತೆಗೆ ಬಂದ. ಆದರೆ ಹೊರಗಿನಿಂದ ಬಾಗಿಲು ಹಾಕಿತ್ತು. ಇಬ್ಬರೂ ಸುರಂಗದ ಮಾರ್ಗ ದಲ್ಲಿ ಹೊರ ಬಂದು ಯಾರಿಗೂ ತಿಳಿಯದಂತೆ ಅವಳನ್ನು ಕಳುಹಿಸಿ ಅರಮನೆಗೆ ಬಂದುಬಿಟ್ಟ. ಬೆಳಗ್ಗೆ ಬಾಗಿಲು ತೆಗೆದು ನೋಡಿ ದರೆ ಅವಳು ಅಲ್ಲಿ ಎಲ್ಲೂ ಕಾಣಲಿಲ್ಲ ಹೇಗೆ ಮಾಯ ವಾದ ಳೆಂದು ಯಾರಿಗೂ ತಿಳಿಯಲಿಲ್ಲ. ಅವಳ ಮನೆಯನ್ನ ಮೊದಲು ನೋಡಿದ್ದ ಕೆಲವರು ಹೋಗಿ ಅವಳನ್ನು ಹಿಡಿದು ತರಲು ರಾಜ ಆಜ್ಞೆ ಮಾಡಿದ ಅದರಂತೆಯೇ ಅವಳನ್ನು ಎಳೆದು ತಂದರು. ಇವರನ್ನು ದೂರದಲ್ಲಿ ನೋಡಿದಾಗಲೇ ವಿಷ ಸೇವಿಸಿದ್ದಳು. ಹಾಗಾಗಿ ಅರಮನೆ ತಲುಪಿದಾಗ ಹೆಣವಾಗಿದ್ದಳು .


ಯುವರಾಜನಿಗೆ ತಿಳಿಯದಂತೆ ಮರದ ಪೆಟ್ಟಿಗೆಯಲ್ಲಿ ಹೆಣವನ್ನಿಟ್ಟು ಅರಮನೆಯ ಹಿಂದೆ ಹೂತು ಬಿಟ್ಟರು. ಅವಳ ಜೊತೆಗೆ ಒಂದು ಪುಟ್ಟ ಪೆಟ್ಟಿಗೆ ಇತ್ತು ಅದು ಅವಳ ಕಾಲ ಗೆಜ್ಜೆ ಪೆಟ್ಟಿಗೆ ಇರಬಹುದೆಂದು ಅದನ್ನು ಅವಳ ಜೊತೆಗೆ ಇಟ್ಟು ಬಿಟ್ಟರು. ಒಂದು ರಾತ್ರಿ ಯುವ ರಾಜನಿಗೆ ಕನಸಿನಲ್ಲಿ ನರ್ತಕಿ ಬಂದು ನಡೆದ ಸಂಗತಿ ತಿಳಿಸಿ ತನ್ನ ಜೊತೆ ಬರಲು ಬೇಡಿ ಕೊಂಡಳು. ಹಿಂದಿನ ಜನ್ಮದಲ್ಲಿ ಆ ನರ್ತಕಿ ತನ್ನ ಪತ್ನಿ ಯಾಗಿದ್ದು ನೀರು ಕುಡಿಯಲು ಹೋದಾಗ ಅದೇ ಸರೋವರದಲ್ಲಿ ಕಾಲುಜಾರಿ ಬಿದ್ದು ಸತ್ತು ಹೋಗಿದ್ದಳು.ಈ ಜನ್ಮದಲ್ಲಿ ರಾಜನಿಗೆ ಮಗನಾಗಿ ಹುಟ್ಟಿದರೂ ಪೂರ್ವ ಜನ್ಮದ ನೆನೆಪು ಕಾಡುತ್ತಲೇ ಇತ್ತು. ಅವಳ ಮೊದಲ ಜನ್ಮದಲ್ಲಿ ತೀರಿಸಲಾಗದ ಆಸೆಯೊಂದು ಹಾಗೇ ಉಳಿದಿತ್ತು. ಅದು ಬೆಳ್ಳಿ ಕಡಗವನ್ನು ನಾನೇ ಕೈಯ್ಯಾರೆ ಹಾಕಬೇಕೆನ್ನು ವವುದು ಈಗ ಅದನ್ನು ತೀರಿಸಿ ಅವಳೊಂದಿಗೆ ನಾನೂ ಹೋಗುತ್ತಿದ್ದೇನೆ ಎಂದು ಅವನು ಬರೆದಿಟ್ಟ ಪತ್ರ ಓದಿದ ಮೇಲೆ ಎಲ್ಲರಿಗೂ ನಿಜ ಸಂಗತಿ ತಿಳಿಯಿತು .

ಇವನ ಹೆಣವನ್ನು ದೂರದಲ್ಲಿ ಬೇರೊಂದು ಕಡೆ ಹೂತ ರು. ಅಂದು ರಾತ್ರಿ ಗಂಗಾಂಬಿಕೆಯ ಕನಸಿನಲ್ಲಿ ಇವನು ಬಂದು ನೀವು ನನ್ನ ಧನಿಯನ್ನು ಕಿತ್ತು ಕೊಂಡಿರಿ .ನಾನು ಬರೆದು ತಿಳಿಸಿದ್ದರೆ ನಿಮ್ಮನ್ನು ಅಂದೇ ಮುಗಿಸಿ ಬಿಡುತ್ತಿ ದ್ದರು ಆದರೆ ನೀವೂ ನನ್ನ ತಾಯಿಯಾದ್ದರಿಂದ ಹಾಗೆ ಮಾಡಲಿಲ್ಲ.ನನಗೆ ನಿಮ್ಮಿಂದ ಸಹಾಯ ಬೇಕಿದೆ .ನನ್ನ ಹೆಣ ತೆಗೆಸಿ ನನ್ನ ಪತ್ನಿ ಆ ನರ್ತಕಿ ಪಕ್ಕದಲ್ಲಿ ಹೂಳ ಬೇಕು .ಇದನ್ನು ಯಾರಸಹಾಯ ಪಡೆದು ಮಾಡು ತ್ತೀರೋ ಅವರು ನಿಮ್ಮ ಬಹಳ ಆಪ್ತ ರಾಗಿರ ಬೇ ಕು.ನೀವು ಮಾಡಿರುವ ತಪ್ಪಿಗೆ ಪ್ರಾಯಶ್ಚಿತ್ತ ವಾಗಿ ಇದೊಂದು ನಡೆಸಿಕೊಡಿ ಎಂದು ಕೇಳಿಕೊಂಡ. ಅದರಂತೆಯೇ ಇಬ್ಬರ ನ್ನೂ ಒಂದೇಕಡೆ ಹೂಳ ಲಾಯಿ ತು.


ಒಂದು ದಿನ ಯುವರಾಜನ ಅವಳಿ ತಂಗಿಯಗರಿಗೆ ಇಷ್ಟು ವರ್ಷ ಯಾರೂ ಹತ್ತಿರ ಸುಳಿಯದ ಆ ಹಳೇ ಮಂಟಪದ ಬಗ್ಗೆ ಕುತೂಹಲ ಹೆಚ್ಚಾಗಿ ಧೈರ್ಯ ದಿಂದ ಹೋದಾಗ ವಿಚಿತ್ರ ವಾದ ಶಭ್ಧ ವಾಯ್ತು . ಮೊದಲು ಹೆದರಿದರೂ ಯಾರೋ ಹತ್ತಿರ ಕರೆದಂತಾಗಿ ಹೋದರು.

ಮರದ ಪೆಟ್ಟಿಗೆ ಕಂಡು ಕಷ್ಟ ಪಟ್ಟು ಅದರ ಮುಚ್ಚಳ ತೆಗೆದಾಗ ಅದರಲ್ಲಿದ್ದ ಅಸ್ತಿಪಂಜರ ಕಂಡು ಹೆದರಿ ಓಡುವಾಗ ,ಹೆದರಬೇಡಿ ಇದರ ಜೊತೆಗೆ ಇರುವ ಪೆಟ್ಟಿಗೆ ತೆಗೆಯಲು ಹೆಣ್ಣು ಧ್ವನಿಯೊಂದು ಹೇಳಿತು .ಅದರಲ್ಲಿ ಗೆಜ್ಜೆ ಜೊತೆ ಧೀರ್ಘ ವಾಗಿ ಬರೆದ ಪತ್ರ ಇತ್ತು. ಇದನ್ನು ತೆಗೆದು ಕೊಂಡು ಹೋಗಿ ಯಾರಿಗೂ ತಿಳಿಯದಹಾಗೆ ಓದಿ ಎಂದಿತು ಆ ಧ್ವನಿ. ಹಾಗಾಗಿ ಇವರ ಅಣ್ಣ ಯುವರಾಜ ಮಾರ್ತಾಂಡ ವರ್ಮನ ಕಥೆ ತಿಳಿದು ಕಣ್ಣೀರು ಸುರಿಸಿದರು.Rate this content
Log in

More kannada story from nagavara murali

Similar kannada story from Classics