nagavara murali

Abstract

2  

nagavara murali

Abstract

ಸ್ಪೋಟ

ಸ್ಪೋಟ

6 mins
146


ಪ್ರೀತಿ ಬಡತನದಲ್ಲೇ ಬೆಂದು ಎಂದಾದರೊಂದು ದಿನ ತಾನೂ ಬೇರೆಯವರಂತೆ ಓದಿ ಕೆಲಸಕ್ಕೆ ಸೇರಿ ಸಂಪಾದನೆ ಮಾಡಿ ಸಂತೋಷವಾಗಿರಬಹುದು ಅನ್ನೋ ಪುಟ್ಟ ಆಸೆ ಹೊತ್ತು ಅಮ್ಮನ ಆಸರೆಯಲ್ಲಿ ಬೆಳೆದು ಹೇಗೋ ಈಗ ಕಾಲೇಜು ಮೆಟ್ಟಿಲು ಹತ್ತಿ ಇನ್ನೂ ಆರು ತಿಂಗಳಾಗಿದೆ . ಅಷ್ಟರಲ್ಲಿ ಒಂದಿನ ಇವಳ ತಾಯಿ ಕೆಲಸ ಮಾಡೋ ಒಂದು ಮನೇಲಿ ಅವರು ಕೊಟ್ಟ ಕಾಫೀ ಕುಡೀತಾ ಇರೋವಾಗ, ಪದ್ಮಮ್ಮ ನೀವು ಇನ್ನೂ ಎಷ್ಟು ವರ್ಷ ಅಂಥ ಹೀಗೇ ದುಡೀತೀರಿ. ಮಗಳು ಬುದ್ಧಿವಂತಳು ನಿಜ. ಆದರೆ ಓದಿರೋರ್ಗೆಲ್ಲಾ ಕೆಲಸ ಸಿಗತ್ತೆ ಅನ್ನೋ ಗ್ಯಾರಂ ಟಿ ಏನು. ನಾಲ್ಕು ಮನೆ ಕೆಲಸ ಮಾಡ್ಕೊಂಡು ಹಗಲು ರಾತ್ರಿ ಇನ್ನೂ ದುಡೀತಾ ಇರಕ್ಕೆ ನಿಮ್ಮದೇನು ಇನ್ನೂ ಚಿಕ್ಕ ವಯಸ್ಸೇ ಹೇಳಿ. ನನ್ನನ್ನ ಕೇಳಿದರೆ ಅವಳಿಗೆ ಇರೋ ಬುದ್ದಿವಂತಿಕೆಗೆ ಒಂದು ಪ್ರೈವೇಟ್ ಕಂಪ ನಿಯಲ್ಲಿ ಎಲ್ಲಾದ್ರೂ ಕೆಲಸ ಸುಲಭವಾಗಿ ಸಿಕ್ಕೇ ಸಿಗತ್ತೆ. ಬೇಕಾದ್ರೆ ಆ ಜವಾಬ್ದಾರಿ ನಾನು ತೊಗೋತೀನಿ. ನಿಮ್ಮ ಕಷ್ಟ ನೋಡಿ ದರೆ ನನಗಂತೂ ಸಂಕಟ ಆಗತ್ತೆ. ಕೆಲಸಕ್ಕೂ ಹೋಗಿ ಓದ್ತಾ ಇರೋರು ಎಷ್ಟು ಜನಾ ಇಲ್ಲ ಹೇಳಿ. ಹಾಗೇ ಮಾಡ್ಲಿ. ಅರ್ಧದಲ್ಲಿ ಓದು ನಿಲ್ಲಿಸಿ ಬಿಟ್ಟೆ ಅಂಥ ಪಾಪ ಆ ಮಗೂಗೂ ಬೇಜಾರೂ ಬೇಡ ಅಂಥ ಪೂರ್ತಿ ತಲೆ ಕೆಡ್ಸಿ, ಕೇಳಿ ನೋಡಿ ಬೇಕಾದ್ರೆ . ನಮ್ಮ ಯಜಮಾನ್ರ ಹತ್ತಿರ ಹೇಳ್ತೀನಿ .ಅವರು ಎಷ್ಟೋ ಜನಕ್ಕೆ ಸಹಾಯ ಮಾಡಿ ದಾರೆ ನಿಮ್ಮ ಪ್ರೀತಿಗೆ ಇಲ್ಲಾ ಅಂತಾರಾ ಅಂದಾಗ ಆಯ್ತಮ್ಮ ನೀವು ಹೇಳೋದೂ ನಮ್ಮ ಒಳ್ಳೇದಕ್ಕೇ ತಾನೇ ಅಂದರು ಪದ್ಮ .


ಸಂಜೆ ಐದಕ್ಕೆ ಪ್ರೀತಿ ಮೂವರು ಸ್ನೇಹಿತೆಯರ ಜೊತೆ ಮನೇಗೆ ಬಂದು ಅಮ್ಮ ಮೂರು ಟೀ ಮಾಡ್ತೀಯಾ ಅಂದಾಗ ಏನಿದು ಕಾಲೇಜು ಮೆಟ್ಟಿಲು ಹತ್ತಿ ಹೊಸಬ ರನ್ನೆಲ್ಲಾ ಮನೇಗೆ ಕರೀತಾಳಲ್ಲಾ ಅಂಥ ಸ್ವಲ್ಪ ಮುಜುಗರ ಆಯ್ತು .ಹರಿದ ಚಾಪೆ ಮೇಲೆ ಕೂತು ಸುತ್ತಲೂ ವಿಚಿತ್ರ ವಾಗಿ ನೋಡ್ತಾ ಇದಾರೆ . ಎದುರಿಗೇ ಎಲ್ಲಾ ಕಾಣೋ ಹಾಗೆ ಬಾಗಿಲೇ ಇಲ್ಲದ ಅಡುಗೆ ಮನೆ ಬೇರೆ. ಅಮ್ಮಾ ಇವಳು ಸರಳ ,ರಾಧಿಕಾ, ಶಾಂತಿ. ನಾವೆಲ್ಲಾ ಒಂದೇ ಸೆಕ್ಷನ್ . ಮೂವರೂ ನನಗೆ ತಂಬಾನೇ ಇಷ್ಟ ಅಮ್ಮ. ನಮ್ಮ ಮನೇಗೆ ಬರಬೇಕೂ ನಿಮ್ಮ ಅಮ್ಮನ್ನ ನೋಡ ಬೇಕು ಅಂಥ ಹೇಳ್ತಾನೇ ಇದ್ರು. ಅದಕ್ಕೆ ಇವತ್ತು ಕ ರ್ಕೋಂಡ್ ಬಂದೆ ಅಂದಳು ಪ್ರೀತಿ. ಆಂಟಿ ನಿಮ್ದು ಕೋಲಾರನಂತೆ ಹೌದಾ ಅಂದಳು ಶಾಂತಿ. ಕೋಲಾರ ದಲ್ಲಿ ಎಲ್ಲಿ ಇರೋದು .ಕೋಲಾರ ಬಿಟ್ಟು ಎಷ್ಟೋ ವರ್ಷಗಳಾಯ್ತು ಈಗೇಕೆ ಅದು ಬಿಡಮ್ಮ ಅಂದರೆ ನಮ್ಮದೂ ಕೋಲಾರ ಅದಕ್ಕೆ ಕೇಳ್ದೆ ಅಷ್ಟೇ ಆಂಟಿ .


ಹೌದಾ ನೀವು ಎಲ್ಲಿ ಇರೋದು ಅಂದಳು ಕೋಲಾರವೇ ನೋಡಿಲ್ಲದ ಪ್ರೀತಿ . ಅಗ್ರಹಾರದಲ್ಲಿ ಪ್ರಾಣದೇವರ ಗುಡಿ ಗೊತ್ತಲ್ಲ ಪಕ್ಕದ ಮನೇನೇ ನಮ್ಮದು. ಈಗ ಒಂದು ಕ್ಷಣ ಪಧ್ಮಕ್ಕನ ಮುಖದಲ್ಲಿ ಏನೋ ಕುತೂಹಲ ಭಯ ಆಶ್ಚ ರ್ಯ ಏಲ್ಲಾ ಒಂದೇ ಸಲ . ಆದರೆ ತೋರಿಸಿಕೊಳ್ಳದೆ ಅಡುಗೆ ಮನೆ ಕಡೆ ಮುಖ ಮಾಡಿದರು.


ಟೀ ಕುಡಿದು ಆಂಟಿ ನಾವು ಬರ್ತೀವಿ. ಟೀ ಚೆನ್ನಾಗಿತ್ತು . ನೀವು ಕುಡೀಲೇ ಇಲ್ಲ ಅಂದಾಗ ನಾವಿಬ್ರೂ ಕಾಫಿ ಕುಡೀತೀವಿ . ಟೀ ಮೊದಲಿಂದ ಅಭ್ಯಾಸ ಇಲ್ಲ. ಅಂದರು. ಹೌದು ಇದು ಬೆಲ್ಲದ ಟೀ ನಿಮಗೆ ಇಷ್ಟ ಆಗಲ್ಲ ಅಂದು ಕೊಂಡೆ ಪರವಾಗಿಲ್ಲ ಅದನ್ನೇ ಚೆನ್ನಾಗಿದೆ ಅಂತಾ ಇದೀರಿ ಅಂಥ ಹೇಳಿ ಸುಮ್ಮನೆ ಬಾಯಿ ಮಾತಿಗೆ ಆಗಾಗ ಬರ್ತಾ ಇರಿ ಅಂದರು. ಅಮ್ಮ ಬಸ್ ಸ್ಟಾಪ್ ವರೆಗೂ ಹೋಗಿ ಬರ್ತೀನಿ ಅಂಥ ಹೇಳಿ ಅವರ ಜೊತೆ ಹೋದಳು ಪ್ರೀತಿ.


ಏನು ಹುಚ್ಚು ಹುಡುಗಿ ಇದು ಯಾರಾರನ್ನೋ ಕರ್ಕೊಂ ಡು ಬಂದು ನನ್ನ ತಲೆ ಬಿಸಿ ಮಾಡ್ತಾಳೆ .ಬೇಡ ಅನ್ನೋ ಹಾಗೂ ಇಲ್ಲ ಸುಮ್ಮನೆ ಇರೋ ಹಾಗೂ ಇಲ್ಲ ಅಂಥ ಒಬ್ಬ ರೇ ಯೋಚನೆ ಮಾಡ್ತಾ ಇದ್ದಾಗ ಪ್ರೀತಿ ಒಳಗೆ ಬಂದಳು.

ಎಂದೂ ಮಗಳು ಇಷ್ಟು ಖುಷಿಯಾಗಿರೋದನ್ನ ನೋಡೇ ಇರಲಿಲ್ಲ .ಮೊದಲ ಸಲ ಯಾವುದೋ ಹಳೆ ರಾಜ್ ಕು ಮಾರ್ ಹಾಡನ್ನ ಗುನಗ್ತಾ ಟವಲ್ ತೊಗೊಂಡು ಬಚ್ಚ ಲು ಮನೇಗೆ ಹೋದಳು. ಏನಿದು ಸ್ನೇಹಿತರು ಸಿಕ್ಕರೆ ಇಷ್ಟು ಬದಲಾವಣೆ ಆಗ್ತಾರಾ ಅಂಥ ಇವರಿಗೆ ಆಶ್ಚರ್ಯ.


ಮಗೂ ನಿನ್ನ ಹತ್ತಿರ ಒಂದು ವಿಷಯ ಹೇಳ್ಬೇಕು .ಅದನ್ನು ಹೇಗೆ ಹೇಳೋದು ಅಂಥ ಗೊತ್ತಿಲ್ಲ ಅಂದಾಗ, ನಿನ್ನ ಮಗ ಳಿಗೆ ಮದುವೆ ಮಾಡಿದರೆ ಹತ್ತು ಮಕ್ಕಳಾಗೋ ವಯಸ್ಸು ಮಿಸಸ್ ಪದ್ಮನಟರಾಜ್. ನನ್ನ ಇನ್ನೂ ಮಗು ಅಂಥ ಕರೀತೀರಲ್ಲ . ಜೋರಾಗಿ ನಗ್ತಾ ಆಯ್ತು ನಿಂಗೆ ನಾನು ಮಗೂನೇ ಹೇಳಮ್ಮ ಅದೇನ್ ಹೇಳಬೇಕೋ . ಯಾರೋ ಹೇಳಿದ್ರು ಕೆಲಸ ಮಾಡ್ತಾನೇ ಓದಲೂ ಬಹು ದಂತೆ ನಿನಗೂ ಗೊತ್ತಾ. ಹೌದು ಸಂಜೆ ಕಾಲೇಜು ಇದೆ. ರಾತ್ರಿ ಮನೆಗೆ ಬರೋ ಹೊತ್ತಿಗೆ ಹತ್ತು ಗಂಟೆ ಆಗತ್ತೆ ಪರ ವಾಗಿಲ್ವಾ ಹೇಳು ಅಂದಳು. .ಅದಕ್ಕೂ ಮೊದಲು ಯಾರಮ್ಮ ಕೆಲಸ ಕೊಡ್ತಾರೆ .ಏನು ಅನುಭವ ಇದೆ. ಡಿಗ್ರಿ ಆಗೀದ್ಯಾ ಅಂಥ ಕೇಳ್ತಾರೆ. ಹೌದು ಏನಿದು ಇವತ್ತು ಯಾರಾದ್ರೂ ನಿನ್ನ ತಲೆ ಕೆಡ್ಸಿ ಮಗಳಿಗೆ ಮದುವೆ ಮಾಡಿ ಬಿಡಿ ಪದ್ಮ ನಿಮ್ಮ ಹಾಗೆ ನಾಲ್ಕೈದು ಮನೆ ಮುಸುರೆ ತಿಕ್ಕಿ ಬೇಕಾದರೆ ಸಂಜೆ ಕಾಲೇಜ್ ಗೆ ಹೋಗ್ಲಿ ಅಂದರಾ ಯಾ ರಾದ್ರೂ . ಏಕಮ್ಮ ಏನಾಯ್ತು ಅಂದಳು ಪ್ರೀತಿ. ನೋಡು ಪ್ರೀತಿ,ಜಾನಕಮ್ಮನೋರು ಎಂದಾದರೂ ನಮಗೆ ಕೆಟ್ಟದ್ದು ಬಯಸ್ತಾರಾ .ಅವರೇ ಹೇಳಿದ್ದು .ಅವರ ಯಜಮಾನರು ಬಹಳ ಜನಕ್ಕೆ ಕೆಲಸ ಕೊಡ್ಸಿದಾರಂತೆ. ಓದಿದೋರಿಗೆಲ್ಲಾ ಕೆಲಸ ಎಲ್ರೀ ಸಿಗತ್ತೆ .ಮೊದಲು ಒಂದು ಕೆಲಸಕ್ಕೆ ಸೇರಿ ಆಮೇಲೆ ಬೇಕಾದರೂ ಓದಬಹುದು ಅಂಥ ಅವರೇ ಹೇಳಿದ್ದು. ಪ್ರೀತಿಯ ಆಶಾ ಗೋಪುರ ಅಲುಗಾಡಿದ ಅನುಭವ ಆಗಿ. ಅಮ್ಮನ ಮುಖಾನೇ ಒದ್ದೆ ಕಣ್ಣುಗಳು ನೋಡ್ತಾ ಇದೆ. ತಕ್ಷಣ ಬೇಡ ಹಾಗೆ ನೋಡ ಬೇಡ ಅವ ರು ಹೇಳಿದ್ದನ್ನ ನಿನಗೆ ಹೇಳಿದೆ ಅಷ್ಟೇ. ಮಗೂ ಇದರಲ್ಲಿ ಯಾರ ಬಲವಂತಾನೂ ಇಲ್ಲ. ಅಮ್ಮನ ತೊಡೆ ಮೇಲೆ ತಲೆ ಇಟ್ಟು ಕಣ್ಣು ಬಿಟ್ಟು ಕೊಂಡೇ ಯೋಚನೆ ಮಾಡ್ತಾ ಮಲಗಿದಾಳೆ. ಕಣ್ಣೀರು ಹರಿದು ತೊಡೆ ತಣ್ಣಗಾಗಿ , ಏ ಏನಿದು ಏಳು. ಅಳಬೇಡ . ಕೆಲಸಕ್ಕೆ ಹೋಗಕ್ಕೆ ಇಷ್ಟ ಇಲ್ಲ .ಡಿಗ್ರಿ ಮಾಡ್ಕೋಂಡು ಆಮೇಲೆ ಕೆಲಸಕ್ಕೆ ಹೋಗಲಿ ಅಂಥ ನಾನೇ ಹೇಳ್ತೀನಿ .ಇಷ್ಟೊಂದು ಯೋಚನೆ ಮಾಡ ಬೇಡ. ಊಟ ಮಾಡು ಅಂದರೆ ಅಮ್ಮ ಬಹಳ ದಿನ ಆಯ್ತು. ತಿನಿಸ್ತೀಯಾ. ಏಯ್ ಏನು ಮಗೂ ಹಾಗೆ ಇವತ್ತು . ಆಯ್ತು ಅಂಥ ಅನ್ನ ಸಾರು ಕಲೆಸಿ ತಟ್ಟೆಯಲ್ಲಿ ತಂದರು. ಒಂದೊಂದೇ ತುತ್ತು ಅರ್ಧ ತಿಂದು ಅಮ್ಮ ಸಾಕು ಏಕೋ ತುಂಬಾ ನಿದ್ದೆ ಇವತ್ತು. ಆಮೇಲೆ ನಾನೇ ಅಲ್ಲಿ ಹೋಗಿ ಮಲಗ್ತೀನಿ ಅಂಥ ಹೇಳಿ ಅಮ್ಮಂದು ಯಾವುದೋ ಹಳೇ ಸೀರೆ ತಲೆ ಕೆಳಕ್ಕೆ ಎಳ್ಕೊಂಡು.


ಒಂದು ನಿಮಿಷಕ್ಕೆ ಗೊರ್ ಗೊರ್ ಅಂಥ ಗೊರಕೆ ಹೊಡೀತಿದಾಳೆ.


ಕಾವೇರಿ ನದಿ ಸೌಮ್ಯವಾಗಿ ಹರೀತಿದೆ. ಪ್ರೀತಿ ನದಿ ದಂಡೆ ಮೇಲೆ ಮರಳನ್ನ ಕಾಲಲ್ಲಿ ಒದ್ದು ಚಿಮ್ಮಿ ನಡೆದು ಕೊಂಡು ಒಬ್ಬಳೇ ಹೋಗ್ತಾ ಇರೋವಾಗ ಯಾರೋ ವಯಸ್ಸಾ ದೋರು ಎದುರಿಗೆ ಬಂದು ನಿನ್ನ ಹೆಸರು ಪ್ರೀತಿ ತಾನೇ. ಹೌದು ನಿಮಗೆ ಹೇಗೆ ಗೊತ್ತು. ನೀವ್ಯಾರು. ಅದೆಲ್ಲ ಆ ಮೇಲೆ ಹೇಳ್ತೀನಿ . ಮೊದಲು ನನ್ನ ಪ್ರಶ್ನೆಗೆ ಉತ್ತರ ಬೇಕು. ಡಿಗ್ರಿ ಮುಗಿದು  ಸರ್ಕಾರೀ ಕೆಲಸ ಸಿಕ್ಕಿ ದೊಡ್ಡ ಅಧಿಕಾರಿ ಆಗಿ.ಅಮ್ಮನ್ನ ಕಾರಲ್ಲೇ ಎಲ್ಲಾ ಕಡೆ ಸುತ್ತಾಡಿಸಬೇಕು ಅಂಥ ಆಸೆ ಇರೋದು ನಿಜಾ ತಾನೇ .ಆಯ್ಯೋ ನನ್ನ ಮನಸಲ್ಲಿ ಇರೋದೆಲ್ಲಾ ಇವರಿಗೆ ಹೇಗೆ ಗೊತ್ತಾಯ್ತು ಅಂದು ಕೊಳ್ಳೋ ಸಮಯಕ್ಕೆ , ಓಹ್ ಹೇಗೆ ಗೋತ್ತಾ ಯ್ತು ಅಂತಾನಾ .ನೀನು ಮರಳನ್ನ ಕಾಲಲ್ಲಿ ಒದ್ದಾಗಲೇ ಗೊತ್ತಾಯ್ತು ತೊಗೋ ಈ ಚೀಲದಲ್ಲಿ ನಲವತ್ತೆಂಟು ಚಿನ್ನ ದ ಕಾಸು ಇದೆ . ನೀನು ಮನಸ್ಸಿನಲ್ಲಿ ಏನೇ ಅಂದು ಕೊಂಡು ಒಂದು ನಾಣ್ಯ ಕಾವೇರಿಯಲ್ಲಿ ಎಸೆದರೆ . ತಕ್ಷಣ ಅದು ಆಗುತ್ತೆ. ಎಚ್ಚರ ಇದನ್ನು ಕೆಟ್ಟದ್ದಕ್ಕಾಗಿ ಉಪಯೋ ಗಿಸಿದ ಆ ಕ್ಷಣ ನೀನು ಸಂಪಾದನೆ ಮಾಡಿದ್ಧೆಲ್ಲಾ ಹೊರ ಟು ಹೋಗುತ್ತೆ ಎಂದು ಹೇಳಿದ ತಕ್ಷಣ ಅಲ್ಲಿ ಅವರಿಲ್ಲ. ಕುತೂಹಲಕ್ಕೆ ಇಲ್ಲೇ ಒಂದು ಸ್ಕೂಟರ್ ಬರಲಿ ಅಂಥ ಹೇಳಿ ಒಂದು ಕಾಸು ತೆಗೆದು ನೀರಿಗೆ ಹಾಕಿದ ತಕ್ಷಣ ಹೊಚ್ಚ ಹೊಸ ಸ್ಕೂಟರ್ ಎದುರಲ್ಲೇ ಪ್ರತ್ಯಕ್ಷ. ಅಯ್ಯೋ ಸ್ಕೂಟರ್ ಓಡಿಸಕ್ಕೆ ಬರಲ್ಲಾ ಏನುಮಾಡೋದು ಅಂಥ ಮತ್ತೊಂದು ನಾಣ್ಯ ತೆಗೆದು ನನಗೆ ಎಲ್ಲರಂತೆ ರೈಡ್ ಮಾಡಕ್ಕೆ ಬರಲಿ ಅಂತ ನೀರಿಗೆ ಎಸೆದಾಯ್ತು. ನೋಡೋ ಣ ಅಂಥ ಸ್ಟಾರ್ಟ್ ಮಾಡಿ ಕೂತರೆ ಅದೇ ಮನೆ ಕಡೆ ಹೋಗ್ತಾ ಇದೆ.


ಅಮ್ಮಂಗೆ ಹತ್ತು ರೇಶ್ಮೆ ಸೀರೆ , ತನಗೆ ಬೇಕು ಬೇಕಾದ ಬಟ್ಟೆಗಳು, ಒಡವೆ ವಾಚು ಕಂಡಿದಲ್ಲಾ ಹೋಗಿ ಹೋಗಿ ನದಿ ಯಲ್ಲಿ ಕಾಸು ಹಾಕಿ ಹಾಕಿ ತೊಗೋತಾ ಇದಾಳೆ . ಯಾರು ಅಷ್ಟು ಸಾರಿ ನದಿಗೆ ಹೋಗೋರು ಅಂಥ ಬೇಜಾರಾಯ್ತು. ಒಂದು ಬಾಟಲ್ ನಲ್ಲಿ ನೀರು ತುಂಬಿಸಿ ಕಾಸು ಹಾಕಿದ್ರೆ ಅದೂ ಕೆಲಸ ಮಾಡ್ತಾ ಇದೆ. ಬ್ಯಾಗ್ ನಲ್ಲೇ ಈಗ ಬಾಟಲ್ ಇಟ್ಟು ಕೊಂಡಾಯ್ತು. ಅಯ್ಯೋ ಇಷ್ಟೊಂದು ಕಾಸು ವೇಸ್ಟ್ ಆಗೋಯ್ತು.ಒಂದು ಡಿಗ್ರಿ , ಕೆಲಸ ,ಮನೆ ಕಾರು ತೊಗೊಂಡು ಬಿಡೋಣ ಅಂತ ನೋಡಿದರೆ ಒಂದೇ ಕಾಸು ಉಳಿದಿದೆ. ಏನ್ಮಾಡೋದು ಅಂಥ ಬಹಳ ತಲೆ ಕೆಡಿಸ್ಕೊಂಡು ಕೊನೇ ಗೆ ಹಣ ಇದ್ದರೆ ಏನು ಬೇಕಾದರೂ ಮಾಡಬಹುದು ಎಷ್ಟು ಕೇಳೋದು ಹತ್ತು ಲಕ್ಷ, ಹತ್ತು ಕೋಟಿ ,ಸಾವಿರ ಕೋಟಿ ಅಯ್ಯೋ ಬೇಡ ಎಲ್ಲಿಂದ ಬಂತು ಅಂಥ ಹೀಡ್ಕೋತಾರೆ ಜೈಲಿಗೆ ಹೋಗಬೇಕಾಗತ್ತೆ ,ಜೈಲಿಗೆ ಹೋಗಬೇಕಾಗತ್ತೆ .ಬೇಡ ಬೇಡ ಅಂಥ ಜೋರಾಗಿ ಕೂಗಿದ್ದು ಕೇಳಿ ಅಮ್ಮ ಏ ಎದ್ದೇಳು ಟೈಮ್ ಆಯ್ತು ಚಪಾತಿ ಡಬ್ಬಿ ಗೆ ಹಾಕಿದೀನಿ ಅಂದಾಗ ಅಯ್ಯೋ ಎಷ್ಟು ಒಳ್ಳೆಯ ಕನಸು .ಏಕಮ್ಮ ಎಬ್ಬಿಸಿ ಬಿಟ್ಟೆ ಅಂತ ಮತ್ತೆ ಕಣ್ಣು ಮುಚ್ಚಿದಳು.ಯಾರೋ ಬಾಗಿಲ ಹತ್ತಿರ ನಿಂತ ಹಾಗಾಯ್ತು. ನೋಡಿದರೆ ಶಾಂತಿ .ಬಾ ಬಾ ನಾನು ಈಗ ಏಳ್ತಾ ಇದೀನಿ .ಎರಡು ನಿಮಿಷ ಸ್ನಾನ ಮಾಡಿ ಬಂದೆ  .ಅಮ್ಮ ಶಾಂತಿ ಅದೇ ನಿಮ್ಮ ಕೋಲಾರದ ಶಾಂತಿ ಬಂದಿದಾಳೆ .ಇವಳು ಏಕೆ ಬಂದಳು ಅಂಥ ಮನಸಲ್ಲೇ ಅಂದು ಕೊಂಡರು .ಆಂಟಿ ನಮ್ಮ ಅಪ್ಪ ದಿನಾ ನಿಮ್ಮ ಮನೆ ಮುಂದೇನೆ ನನ್ನ ಕಾಲೇಜ್ ಗೆ ಕರೆದು ಕೊಂಡು ಹೋಗೋದು .ಇವತ್ತು ಇಲ್ಲೇ ನನ್ನ ಫ್ರೆಂಡ್ ಮನೆ ಇದು ಇಲ್ಲಿಂದಲೇ ಇಬ್ಬರೂ ಹೋಗ್ತೀವಿ ಅಂಥ ಹೇಳಿ ಇಳಿದು ಬಿಟ್ಟೆ ಆಂಟಿ.ಅದೇ ಚಾಪೆ ಮೇಲೆ ಕೂತು ಮತ್ತೆ ಕೋಲಾರಕ್ಕೆ ನೀವು ಹೋಗೋದೇ ಇಲ್ಲ ಅಂದಿರಲ್ಲ ನಿಮ್ಮವರು ಯಾರೂ ಅಲ್ಲಿ ಇಲ್ವಾ. ಇಲ್ಲ ಅಂಥ ಚುಟುಕಾಗಿ ಉತ್ತರ ಕೊಟ್ಟರು. ಪ್ರೀತಿ ರೆಡಿಯಾಗಿ ಬಂದ ತಕ್ಷಣ ಇಬ್ಬರೂ ಹೊರಟರು. ದಾರಿಯಲ್ಲಿ ನಿಮ್ಮ ಅಮ್ಮ ನ ಹೆಸರು ಪದ್ಮ ಅಲ್ವಾ . ಹೌದು ಏಕೆ ಅವತ್ತು ಹೇಳಿದ್ದೆ. ಕೋಲಾರದವರು ಅಂದಾಗ ನಮ್ಮ ಅಮ್ಮ ನ ಕಿವಿ ನೆಟ್ಟಗಾಗಿ ಹೆಸರು ಕೇಳಿದರು ಪಧ್ಮ ಅಂದೆ. ಅದಕ್ಕೆ ಅವರು ಅದೇ ಹೆಸರಿನ ಒಂದು ಹೆಂಗಸು ಇವರ ಅತ್ತಿಗೆ ಅಂದರೆ ನಮ್ಮ ತಂದೆ ಅಕ್ಕ ಒಬ್ಬರು ಇದ್ದರಂತೆ .ಪಾಪ ಸ್ಕೂಲ್ ಗೆ ಹೋಗ್ತಾ ಇದ್ದಾಗಲೇ ಯಾರೋ ಒಬ್ಬ ಮೋಸ ಮಾಡಿ ಬೆಂಗಳೂರಿಗೆ ಕರ್ಕೊಂಡು ಬಂದು ಎರಡು ಮೂರು ವರ್ಷ ಆದಮೇಲೆ ಒಂದು ಹೆಣ್ಣು ಮಗು ಕೊಟ್ಟು ಕೆಲಸಕ್ಕೆ ಅಂಥ ಹೋದೋನು ಎಲ್ಲಿ ಹೋದ ನೋ ತಿಳೀದೆ ಪಾಪ ಬಹಳ ಕಷ್ಟ ಪಟ್ಟು ಹಾಗೇ ಆ ಹೆಣ್ಣು ಮಗೂನ ಸಾಕ್ತಾ ಇದ್ರಂತೆ. ಆಮೇಲೆ ಅವರ ಮನೆಯ ವರು ಯಾರೂ ಅವರ ಬಗ್ಗೆ ಯೋಚನೆ ಮಾಡ್ಲೇ ಇಲ್ವಂತೆ .ನಮ್ಮ ಅಮ್ಮ ಅಪ್ಪ ಮಾತ್ರ ನಾವು ಸಹಾಯ ಮಾಡೋಣ ಅಂಥ ಬಹಳ ಹುಡುಕಾಡಿದರಂತೆ ಆದರೆ ಎಲ್ಲೂ ಕಾಣದೆ ಸುಮ್ಮನಾದರಂತೆ. ಇದೆಲ್ಲಾ ನನಗೂ ಗೊತ್ತೇ ಇರಲಿಲ್ಲ .ನಿನ್ನೆ ಅಮ್ಮ ಹೇಳಿದ್ರು ಆವಾಗ ಅಪ್ಪನ ಕಣ್ಣಲ್ಲಿ ನೀರು ನೋಡಿ ಇಷ್ಟು ವರ್ಷ ಆದರೂ ಇನ್ನೂ ದುಃಖ ಪಡ್ತಾರೆ ಅಂತ ಗೊತ್ತಾಯ್ತು ಅಂದಾಗ ಬಸ್ ಬಂತು. ಇಬ್ಬರೂ ಹತ್ತಿದರು.


ಕಾಲೇಜು ಮುಗಿದು ಮನೆಗೆ ಸಂಜೆ ಬಂದಾಗ ಅಮ್ಮನ ಹತ್ತಿರ ಇದೇ ವಿಷಯ ಹೇಳಿದಳು .ಈಗ ತಕ್ಷಣ ಅವಳ ಬಾಯಿ ಮುಚ್ಚಿ ಮಗೂ ಅದೇ ಪದ್ದು ನಿಮ್ಮ ಮ್ಮ .ಇಷ್ಟು ದಿನ ಮುಚ್ಚಿಟ್ಟಿದ್ದ ರಹಸ್ಯ ನನ್ನ ಜೊತೆಗೆ ಸತ್ತು ಹೋಗಲಿ ಅಂದು ಕೊಂಡರೆ ಏನಿದು ಭಯ ಆಗತ್ತೆ ಕಣಮ್ಮ. ನಾವು ಈ ಊರೇ ಬಿಟ್ಟು ಹೊರಟು ಹೋಗೋಣ ಅಮ್ಮ ನಿನ್ನ ತಪ್ಪು ಏನೂ ಇಲ್ಲದೆ ಯಾಕೆ ಹೆದರಬೇಕು. ಬೇಡ ಇಲ್ಲೇ ಇರೋಣ ಅಂದಾಗ ಮತ್ತೆ ಅದೇ ಶಾಂತಿಬಾಗಿಲಲ್ಲಿ..ಈಗ ಪಧ್ಮ ಒಳಗೆ ಬಾ ಅನ್ನಲೇ ಇಲ್ಲ .ಬಾಗಿಲಲ್ಲೇ ನಿಂತು ಆಂಟಿ ಪ್ರೀತಿ ಇದಾಳಾ ಅಂದರೆ ಅಮ್ಮ ನ ಹಿಂದೇನೆ ನಿಂತಿದಾಳೆ.

ಏ ಪ್ರೀತಿ ಹಬ್ಬಕ್ಕೆ ಶಾಪಿಂಗ್ ಮಾಡ್ಬೇಕು . ನನ್ನ ಜೊತೆಗೆ ಬರ್ತೀಯಾ .ಆಂಟಿ ಹಾಗೆ ನಮ್ಮ ಮನೇಗೆ ಕರ್ಕೊಂಡು ಹೋಗಿ ನಾನೇ ಇಲ್ಲಿ ಡ್ರಾಪ್ ಮಾಡ್ತೀನಿ ಹೆದರ ಬೇಡಿ ಅಮ್ಮ ನೋಡಬೇಕಂತೆ ಪ್ರೀತೀನಾ .ಇಬ್ಬರೂ ಸಿಡಿಲು ಹೊಡೆದವರ ಹಾಗೆ ಶಾಂತಿಯನ್ನೇ ನೋಡ್ತಾ ಇದ್ದಾರೆ . ಈಗ ಅದೇ ಶಾಂತಿಯನ್ನ ಬೇರೆ ದೃಷ್ಟಿಯಿಂದ .ಅವಳಿಗೆ ಆಶ್ಚರ್ಯ.


Rate this content
Log in

Similar kannada story from Abstract