nagavara murali

Classics Inspirational Thriller

2  

nagavara murali

Classics Inspirational Thriller

ಮಕ್ಕಳು

ಮಕ್ಕಳು

4 mins
147


ಇದು ಸುಮಾರು ಇಪ್ಪತ್ತು ವರ್ಷಗಳ ಹಿಂದಿ ನ ಕಥೆ. ತುಮಕೂರಿನ ಸಿದ್ದಗಂಗಾ ಲೇಔಟ್ ನಲ್ಲಿರುವ. ಚಂದ್ರ ಶೇಖರಯ್ಯ ರಾಜ್ಯ ಸರ್ಕಾರದ ನೀರಾವರಿ ಇಲಾಖೆಯಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದು ಇನ್ನು ಎರಡೇ ವರ್ಷ ಗಳಲ್ಲಿ ನಿವೃತ್ತಿ ಹೊಂದುವರಿದ್ದರು. ಇವರಿಗೆ ಮಹದೇವ, ಮಹಾ ಲಿಂಗ ಇಬ್ಬರು ಗಂಡು ಮಕ್ಕಳು ಮತ್ತು ದಾಕ್ಷಾ ಯಿಣಿ, ಗೌರಿ  ಇಬ್ಬರು ಹೆಣ್ಣು ಮಕ್ಕಳು. ಇಬ್ಬರು ಗಂಡು ಮಕ್ಕ ಳಿಗೂ ಮದುವೆ ಮಾಡಿದ್ದಾರೆ. ಅವರಿಬ್ಬರೂ ಬೆಂಗಳೂ ರಿನಲ್ಲಿ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡ್ತಾ ಇದ್ದಾರೆ. ಮೊದಲನೆಯವಳು ದಾಕ್ಷಾಯಿಣಿ ಮದುವೆ ಯಾದಾಗ ಅವಳ ಗಂಡ ಒಳ್ಳೆಯ ನೌಕರಿಯನಲ್ಲಿ ಇದ್ದ. ಆದರೆ ಸ್ನೇಹಿತರ ಮಾತು ಕೇಳಿ ಸ್ವಂತ ಉದ್ಯೋಗ ಮಾಡುವ ಆಸೆಯಿಂದ ಇದ್ದ ಹಣ ಕಳೆದುಕೊಂಡು ಸಾಲ ಮಾಡಿಕೊಂಡ. ಇದ್ದ ಒಂದು ಮಗುವನ್ನು ಓದಿಸು ವುದೂ ಕಷ್ಟವಾಯ್ತು. ವಿಧಿ ಇಲ್ಲದೇ ಅಪ್ಪನ ಬಳಿ ಒಂದು ಲಕ್ಷ ಕೇಳಿ ತೆಗೆದು ಕೊಂಡು ಹೋಗಿ ಖಾಸಗಿ ಶಾಲೆಗೆ ಸೇರಿಸಿದಳು . ಎರಡನೇ ಮಗಳು ಗೌರಿ ಈಗ ಬಿ .ಕಾಂ ಅಂತಿಮ ವರ್ಷ . ಓದು ಇನ್ನೂ ಮುಗಿದಿಲ್ಲ ವಾದ್ದರಿಂದ ಜೊತೆಗೆ ಮದುವೆಯ ಜವಾಬ್ದಾರಿ ಇನ್ನೂ ಇದೆ. ಆದರೆ ಇವಳ ಮದುವೆಗೆ ಅಂತ ಇಟ್ಟ ಹಣ ಕಷ್ಟ ಅಂದಾಗ ಮೂರು ಮಕ್ಕಳಿಗೂ ಕೊಟ್ಟು ಕೊಟ್ಟು ಕರಗಿ ಹೋಗಿದೆ. 


ದಿನ ಕಳೆದು ನಿವೃತ್ತಿಯೂ ಆಯ್ತು . ನಂತರ ಸರ್ಕಾರ ದಿಂದ ಬಂದ ಸುಮಾರು ಮೂವತ್ತು ಲಕ್ಷ ರೂಪಾಯಿ 

Joint account ನಲ್ಲಿ ಬ್ಯಾಂಕ್ ನಲ್ಲಿ ಇಡುವ ಯೋಚನೆ ಮಾಡುತ್ತಿರುವಾಗ. ಮಹದೇವ ಬಂದು ಅಪ್ಪ, ನಾನು ಒಂದು ಸೈಟ್ ಗೆ ಇದುವರೆಗೂ ಹತ್ತು ಲಕ್ಷ ಕಟ್ಟಿ ದ್ದೇನೆ. ಈಗ ಹತ್ತು ಲಕ್ಷ ಈ ತಿಂಗಳು ಕಟ್ಟದೇ ಹೋದರೆ ಸೈಟ್ ಕೈ ಬಿಟ್ಟು ಹೋಗತ್ತೆ ನನಗೆ ಸಾಲ ಅಂತ ಕೊಡಿ . ತಂಗಿ ಮದುವೆ ಹೊತ್ತಿಗೆ ವಾಪಸ್ ಕೊಡ್ತೀನಿ. ಇವತ್ತು ಅಲ್ಲಿ 30 ×40 ಸೈಟ್ ಬೆಲೆ ಒಂದು ಕೋಟಿ ಇದೆ. ಏನಾದರೂ ತೊಂದರೆ ಆದರೆ ನಾನು ಮಾರಿ ನನ್ನ ತಂಗಿ ಮದುವೆ ಯನ್ನ ನಾನೇ ಮುಂದೆ ನಿಂತು ಮಾಡ್ತೀನಿ. ನನಗೂ ಜವಾಬ್ದಾರಿ ಇದೆ ಅಂದಾಗ. ಏನು ಉತ್ತರ ಕೊಡಬೇಕೋ ತಿಳಿಯದೆ ಹೆಂಡತಿ ಪಾರ್ವತಿ ಕಡೆ ನೋಡಿದರು. ಯೋಚನೆ ಮಾಡಿ ಹೇಳ್ತೀನಿ ಊಟ ಮಾಡಿ ಅಂತ ಎದ್ದರು .ಮಗ ಒಂದು ಸೈಟ್ ಮಾಡಿ ಕೊಂಡರೆ ಒಳ್ಳೆ ಯದೇ ಅಂತ ಯೋಚಿಸಿ ಹತ್ತು ಲಕ್ಷ ಕೊಟ್ಟರು. ಸಂತೋ ಷದಿಂದ ಹೊರಟ.


ಎರಡು ವರ್ಷಗಳ ನಂತರ ಫೋನ್ ಮಾಡಿ ಗೌರಿಗೆ ಒಳ್ಳೆಯ ಕಡೆ ಸಂಭಂದ ಬಂದಿದೆ. ಭಾನುವಾರ ಮನೆಗೆ ಬಾ . ಹುಡುಗನ ಕಡೆಯವರು ಬರುತ್ತಿದ್ದಾರೆ. ಮಾತು ಕಥೆ ಮುಗಿಸಿಸೋಣ ಅಂದಾಗ ನಾನು ಈ ಭಾನುವಾರ ಇರೋದಿಲ್ಲ .ನೀವೇ ಮಾತನಾಡಿ ಬೇಕಾದರೆ ನನ್ನ ಹೆಂಡತಿಯನ್ನ ಕಳುಹಿಸುತ್ತೇನೆ ಅಂದ. ಬೇಜಾರಾದರೂ ತೋರ್ಪಡಿಸದೇ ,ಆಯಿತು ಅಂಥ ಫೋನ್ ಇಟ್ಟರು. ಹುಡುಗನ ಕಡೆಯವರೇ ಒಬ್ಬರು ಬಂದು ಸಾರ್ ಈ ಭಾನುವಾರ ಬರಲು ಸ್ವಲ್ಪ ತೊಂದರೆ ಆಗಿದೆ .ಬೇರೆ ಯಾವ ದಿನವಾದರೂ ನೀವೇ ಹೇಳಿ ನಾವು ಬರ್ತೀವಿ.  ತಪ್ಪಾಗಿ ಭಾವಿಸ ಬೇಡಿ ಕ್ಷಮೆ ಇರಲಿ ಅಂದಾಗ ಅವರಿಗೆ ನಿಜವಾಗಿಯೂ ತೊಂದರೆ ಅಂತ ಗ್ರಹಿಸಿದರು.


ಮಗನಿಗೆ ಫೋನ್ ಮಾಡಿ ಅವರು ಭಾನುವಾರ ಕಾರ ಣಾಂತರಗಳಿಂದ ಅವರು ಬರ್ತಾ ಇಲ್ಲ. ಈಗ ನೀನೇ ಯಾವ ದಿನ ಬರಬೇಕೆಂದರೆ ಆ ದಿನವೇ ಅವರು ಬರಲು ಸಿಧ್ಧ. ನೀನೇ ಹೇಳು ಅಂದಾಗ ಆಯಿತು ಹೇಳ್ತೀನಿ ಅಂದ ವನು ಒಂದು ವಾರವಾದರೂ ತಿಳಿಸಲಿಲ್ಲ. ಚಂದ್ರ ಶೇಖರ ಯ್ಯ ಮಗನ ಮನೆಗೇ ಹೋಗಿ ತೀರ್ಮಾನ ಮಾಡೋದೇ ಮೇಲು ಅಂಥ ಹೊರಟರು. ಮನೆಯಲ್ಲಿ ಸೊಸೆ ಮಾತ್ರ ಇರುವ ವಿಷಯ ತಿಳಿದು ಇವತ್ತು ರಜಾ ಇದೆಯಲ್ಲ ಎಲ್ಲಿ ಗೆ ಹೋದ ಮಾದು ಅಂದಾಗ ಇವರ ಆಫೀಸ್ ನವರೆಲ್ಲಾ ಮೂರು ದಿನ ಟ್ರಿಪ್ ಹೋಗಿದಾರೆ ನಾಳೆ ಅಥವಾ ನಾಳಿದ್ದು ಬರ್ತಾರೆ ಅಂದಳು. ಕಾಫಿ ಮಾಡ್ತೀನಿ ಅಂದ ರೂ ಬೇಡ ಅಂಥ ಹೊರಡಲು ಗೇಟ್ ಹತ್ತಿರ ಬಂದಾಗ ಸ್ಕೂಟರ್ ನಲ್ಲಿ ಮಾದೂನೆ ಬಂದಿದ್ದು ನೋಡಿ ಬೆಚ್ಚಿ ಬಿದ್ದರು. ಅಪ್ಪ ಬನ್ನಿ ಯಾವಾಗ ಬಂದಿದ್ದು ಅಂದಾಗ ಏನೂ ಮಾತನಾಡದೆ ಒಳಗೆ ಹೋದರು. ಏನ್ರೀ ಟ್ರಿಪ್ ಕ್ಯಾನ್ಸಲ್ ಆಯ್ತಾ ಅಂದಳು ಹೆಂಡತಿ. ಮಹದೇವ ಯಾವ ಟ್ರಿಪ್ ಅಂದ .ಚಂದ್ರಶೇಖರಯ್ಯ ಇಬ್ಬರ ಮುಖಾನೂ ನೋಡ್ತಾ ಇದಾರೆ. ಈ ನಡುವೆ ಬಹಳ ಮರೆವು ನಿಮಗೆ ಅಂದಳು ಹೆಂಡತಿ. ನೀನು ಯಾವು ದಾದರೂ ಒಂದು ದಿನ ಹೇಳಿದರೆ ಅವರು ಬರ್ತಾರಂತಪ್ಪ ನೀನೇ ಹೇಳು ಅಂದಾಗ .ಆಯ್ತು ಹೇಳ್ತೀನಿ ಅಂದ. ಅಪ್ಪ ಅಲ್ಲಿಂದ ಹೊರಟರು. ಸೊಸೆ ಸುಳ್ಳು ಹೇಳಿದ್ದು ಏಕೆ ಅಂತ ತಿಳಿಯದೆ ಬೇಜಾರಾಯ್ತು. ಮನೇಗೆ ಬಂದ ತಕ್ಷಣ ಹೆಂಡತಿಗೂ ಹೇಳಿದರು .ಅವರಿಗೂ ಬೇಜಾರಾಯ್ತು. ಸಮಯ ಬಂದಾಗ ಕೇಳೋಣ ಅಂಥ ಸುಮ್ಮನಾದರು.


ಮಗನ ಕಡೆಯಿಂದ ಉತ್ತರ ಬರದೇ ಏಕೆ ಹೀಗೆ ಮಾಡ್ತಾ ಇದ್ದಾನೆ ಅಂಥ ಇಬ್ಬರೂ ಯೋಚನೆ ಮಾಡ್ತಾ ಇರೋ ವಾಗ ಸ್ಕೂಟರ್ ಶಭ್ಧ ಕೇಳಿ ಮಾದು ಬಂದ ಅಂತ ಬಾಗಿ ಲ ಹತ್ತಿರ ಬಂದು ಬಾಪ್ಪ ನಿನಗೇ ಎದುರು ನೋಡ್ತಾ ಇದ್ದೀವಿ ಅಂದರು. 

ಅಮ್ಮ ಕಾಫಿ ಕೊಟ್ಟು ಯಾವಾಗ ಬರಬೇಕು ಅವರು .ಈ ಭಾನುವಾರ ಆಗತ್ತಾ ಅಂದರೆ ಆ ವಿಷಯ ಬಿಟ್ಟು ಸೈಟ್ ಬಗ್ಗೆ ಶುರೂ ಮಾಡಿದ. ನಮ್ಮ ಆಫೀಸ್ ನವರೇ ಹತ್ತು ಜನ ಎರಡು ಇನ್ಸ್ಟಾಲ್ ಮೆಂಟ್ ಕಟ್ಟಿ ಐದು ವರ್ಷ ಕಾದು ಈಗ ಉಳಿದ ಹಣ ಕಟ್ಟಿ ರಿಜಿಸ್ಟ್ರೇಷನ್ ಮಾಡ್ಕೋ ಬಹುದು ಅಂತ ಅಂದುಕೊಂಡರೆ ಲಾಂಡ್ ಓನರ್ ಮತ್ತೆ ತಕರಾರು ಮಾಡಿ ಸುಪ್ರೀಂ ಕೋರ್ಟ್ ಗೆ ಅಪೀಲ್ ಹೋಗಿದಾನಂತಪ್ಪ. ಏನ್ ಮಾಡೋದು ಅಂತಾನೇ ತಿಳೀತಿಲ್ಲ ನಿಮಗೆ ಹೇಳಿ ಹೋಗೋಣ ಅಂಥ ಬಂದೆ ಅಂದ ಮಾದು. ಏನೋ ಮಾದು ನಾವಿನ್ನೂ ಬದುಕಿ ದ್ದೀವಿ ನಿನ್ನ ಹಣದಲ್ಲೇ ನನ್ನ ಮಗಳಿಗೆ ಮದುವೆ ಮಾಡ ಬೇಕಿಲ್ಲ. ಮದುವೆ ಮಾತುಕಥೆ ಯಾವಾಗ ಇಟ್ಟು ಕೊಳ್ಳೋದು ಅಂದರೆ ನಿನ್ನ ಸೈಟ್ ಬಗ್ಗೆ ಮಾತಾಡ್ತೀ ಯಲ್ಲ ಅಂದರು. ತಕ್ಷಣ ಹಾಗಾದರೆ ನಾಳೆ ಬೇಕಾದರೆ ರಜ ಹಾಕ್ತೀನಿ ಅವರಿಗೆ ಬರಕ್ಕೆ ಹೇಳು ಅಂದ. ಅಮ್ಮ ಕೇಳಿದರು ಏನು ನಿನ್ನ ಹೆಂಡತಿ ಇವರು ನಿಮ್ಮ ಮನೇಗೆ ಬಂದಾಗ ನೀನು ಆಫೀಸ್ ನವರ ಜೊತೆ ಟ್ರಿಪ್ ಹೋಗಿ ದಾರೆ ಅಂಥ ಸುಳ್ಳು ಹೇಳೋ ಅವಶ್ಯಕತೆ ಏನಪ್ಪಾ ಅಂದ ರು.  ಆ ವಿಷಯ ಈಗ ಏಕೆ ಬಿಡಮ್ಮ .ಮುಂದೆ ನಡೆಯ ಬೇಕಾದ ಕೆಲಸ ಮುಖ್ಯ ಅಂಥ ಎದ್ದು ನಿಂತ.


ಚಂದ್ರಶೇಖರಯ್ಯ ನವರು ಬೆಳಗ್ಗೆ ವಾಕ್ ಹೋದಾಗ ಅವರ ಹಳೆಯ ಮಿತ್ರರೊಬ್ಬರು ನಾನೂ ಈಗ ಇದೇ ಪಾರ್ಕ್ ಹತ್ತಿರ ಬಂದಿದೀನಿ . ದಿನಾ ಮೀಟ್ ಮಾಡ ಬಹುದು ಅಂತ ಮಾತಿಗೆ ಎಳೆದು.ಮ, ಹೋದವಾರ ನಿಮ್ಮ ಮಗ ಮಾದೂನ ಅವನ ಹೆಂಡತಿ ತಂಗಿ ಮದುವೆ ಯಲ್ಲಿ ನೋಡಿ ನಿನ್ನ ಬಗ್ಗೆ ವಿಚಾರಿಸಿದಾಗ ಹೇಳಿದ ನೀನೂ ಇಲ್ಲೇ ಇರೋದು ಅಂಥ. ಹೌದು ನಿನ್ನ ಮಗ ಸೊಸೇನೆ ನಿಂತು ಮದುವೆ ಮಾಡಿದ್ರು ನೀನೇ ಕಾಣಲಿಲ್ಲ ಅಂದಾಗ. ಇವರಿಗೆ ಶಾಕ್. ತೋರ್ಪಡಿಸದೇ ನನಗೆ ಜ್ವರ ಇತ್ತು ಬರಲಿಲ್ಲ ಅಂಥ ಹೇಗೋ ಬೇರೇ ವಿಷಯಕ್ಕೆ ಮಾತು ಬದಲಾಯಿಸಿದರೂ ಮತ್ತೆ ಮತ್ತೆ ಅದೇ ವಿಷಯ ಹೇಳಿ ಅಂತೂ ಈ ಕಾಲದಲ್ಲಿ ಒಳ್ಳೆಯ ಬೆಲೆಬಾಳೋ ಸೈಟ್ ಮಾರಿ ನಾದಿನಿ ಮದುವೆ ಮಾಡೋದು ಅಂದರೆ ನಿಜಕ್ಕೂ ಮೆಚ್ಚಲೇ ಬೇಕು ಅಂದಾಗ.ನನಗೆ ಸ್ವಲ್ಪ ಅರ್ಜಂಟ್ ಕೆಲಸ ಇದೆ ನಾಳೆ ನೋಡೋಣ ಅಂಥ ಮನೇಗೆ ಬಂದು ಬಿಟ್ಟು ಈ ವಿಷಯವನ್ನ ಹೆಂಡತಿಗೂ ತಿಳಿಸದೇ ತಮ್ಮಲ್ಲೇ ಅರಗಿಸಿಕೊಂಡರು. ಅಂದಿನಿಂದ ಮಗಳ ಮದುವೆ ನಂತರವೂ ಮಾದೂನಾಗಲಿ ಸೊಸೆ ಯನ್ನಾಗಲಿ ಹಣದ ಬಗ್ಗೆ ಅಥವಾ ನಾದಿನಿ ಮದುವೆ ಬಗ್ಗೆ ಎಂದೂ ಕೇಳಲಿಲ್ಲ ಚಂದ್ರಶೇಖರಯ್ಯ.ಆದರೆ ಮಗ ಒಂದು ಮಾತು ಹೇಳದೆ ಹೀಗೆ ಮಾಡಿದ್ದು ಮಾತ್ರ ಸದಾ ಹೊಗೆ ಇಲ್ಲದ ಬೆಂಕಿ ಯಂತೆ ಒಳಗೇಅವರನ್ನು ಸುಡುತ್ತಿತ್ತು.



Rate this content
Log in

Similar kannada story from Classics