nagavara murali

Others

1  

nagavara murali

Others

ಸೋಲು-ಗೆಲುವು

ಸೋಲು-ಗೆಲುವು

2 mins
138



ತಪ್ಪು ಮಾಡಿದ ಮಗನಿಗೆ ಹೊಡೆದ ಅಪ್ಪ ಏಟು ಜೋ ರಾಗಿ ಬಿದ್ದಿರಬಹುದೆಂದು ನೊಂದು ತಾನೂ ಅಂದು ರಾತ್ರಿ ನಿದ್ದೆ ಮಾಡಿಲ್ಲ. ಅಮ್ಮನಿಗೆ ಮಾತ್ರ ಚೆನ್ನಾಗಿ ಗೊತ್ತು ತಾನು ಹೊಡೆದ ಏಟಿನಿಂದ ಅವನಿಗೆ ಏನೂ ಆಗಲ್ಲ ಅಂಥ. ಅದಕ್ಕೆ ಮಗನನ್ನ ತಬ್ಬಿ ಮಲಗಿ ಒಳ್ಳೆಯ ನಿದ್ದೆ ಮಾಡಿದ್ದಾಳೆ.


ಅಪ್ಪ ಸಮಾಧಾನ ಮಾಡಕ್ಕೆ ಬೆಳಗ್ಗೆ ಎದ್ದು ಅವನಿಗೆ ಏನು ಇಷ್ಟವೋ ಅದನ್ನೇ ಕೊಡಿಸುತ್ತಾನೆ.ಇಲ್ಲಾ ಕೊಡಿಸುವ 

Promise ಆದರೂ ಮಾಡ್ತಾನೆ.ಸಮಾಧಾನದ ನೆಪದಲ್ಲಿ 

ತಾನೂ ಆ ಘಟನೆಯಿಂದ ಬೇಗ ಆಚೆ ಬರಲೊಂದು ತಂತ್ರವಷ್ಟೆ. ಹೇಳಿದ್ದನ್ನ ತಂದು ಕೊಟ್ಟ ತಕ್ಷಣ ತನ್ನ ಕಣ್ಣಿಗೆ ವಿಲನ್ ಆಗಿದ್ದ ಅಪ್ಪ ಈಗ ಒಳ್ಳೆಯ ಅಪ್ಪನಾಗ್ತಾನೆ. . ಸ್ವಲ್ಪ ದಿನ ಅಪ್ಪ ಹೇಳಿದ ಎಲ್ಲಾ ಕೆಲಸ ಮಾಡ್ತಾನೆ .ಅಪ್ಪ ಸಹಾ ಸಣ್ಣ ಪುಟ್ಟ ಕೆಲಸಗಳನ್ನು ಹೇಳಿ ಮಾಡಿಸಿಕೊ ಳ್ತಾನೆ. ಅವನು ಕೇಳಿದ ತಕ್ಷಣ ತಂದು ಕೊಟ್ಟೆ ಅನ್ನೋ ಒಂದೇ ಕಾರಣ .ಅದರ ಮೂಲ ಕಾರಣ ತಾನೇ ಅನ್ನೋ ದು ಮರತೇ ಹೋಗಿರುತ್ತೆ ಅಪ್ಪನಿಗೆ. ಇದು ಕೆಲವು ದಿನ ಗಳು ಮಾತ್ರ. 


ಬುದ್ಧಿವಂತ ಮಗ ಈಗ ಅಮ್ಮ ಹೇಳಿದ ಕೆಲಸ ಮಾತ್ರ ಮಾಡ್ತಾನೆ . ಅಮ್ಮ ಅವನಿಗೆ ಇಷ್ಟವಾದ್ದು ಏನಾದರೂ ಮಾಡಿಕೊಟ್ಟು ತಾನೂ ಅವನಿಂದ ಸಣ್ಣ ಸಣ್ಣ ಕೆಲಸ ಮಾಡಿಸ್ಕೊತಾಳೆ಼ .ಅದು ಅವನು ಏನಾದರೊಂದು 

ಮುರಿದೋ ಒಡೆದೋ ಹರಿದೋ ಹಾಳು ಮಾಡೋ ವರೆಗೂ ಅಷ್ಟೆ. ನಿನ್ನ ಸಹಾಯ ಸಾಕು ಆಟ ಆಡ್ಕೊ ಹೋ ಗು ಅಂದರೆ ಸಾಕು ಅಂಥ ಕಾದಿರುತ್ತೆ ಅವನ ಮನಸ್ಸು. ಬೈದ ತಕ್ಷಣ ಓಡಿ ಹೋಗ್ತಾನೆ. ಅವನಿಗೂ ಅದೇ ಬೇಕು.

.

ದೊಡ್ಡವನಾದ ಮೇಲೆ ಅಪ್ಪನಿಗಿಂತಲೂ ಈಗ ಅಮ್ಮ ತುಂಬಾ ಹತ್ತಿರವಾಗ್ತಾಳೆ. ಹೊರಗೆ ಏನಾಯ್ತು ಯಾರನ್ನು ನೋಡಿದೆ ಅವರು ಏನಂದ್ರು ಇವರು ಏನಂದ್ರೂ .ಎಲ್ಲಾ ಕಥೆ ಅಮ್ಮನ ಹತ್ತಿರ ಹೇಳ್ಕೊತಾನೆ. ಹಾಗೇ ಅಮ್ಮನ ಕಡೆ ನೆಂಟರು ಅಪ್ಪನ ಕಡೆ ನೆಂಟರ ಬಗ್ಗೆ ಕೇಳಿ ತಿಳಿಯುವ ಆಸೆ.ಅಮ್ಮ ಇದರಿಂದ ಉಬ್ಬಿ ಹೋಗ್ತಾಳೆ.ಅಮ್ಮ ತಿಳಿ ಯೋದು ತನ್ನ ಮಗನಿಗೆ ಜವಾಬ್ದಾರಿ ಬರ್ತಾ ಇದೆ. ನೆಂಟರಿಷ್ಟರ ಬಗ್ಗೆ ತಿಳಿಯಲು ಎಷ್ಟು ಕುತೂಹಲ ಇವನಿಗೆ ಅಂಥ.ಏನೂ ಮನಸ್ಸಿನಲ್ಲಿ ಇಟ್ಟು ಕೊಳ್ಳದೇ ಎಲ್ಲಾ ಅಮ್ಮನ ಹತ್ತಿರ ಹೇಳ್ಕೋತಾನೆ ಎಂದೇ ತಿಳಿದು.ಪ್ರೀತಿ ಅನ್ನೋ ಮಗನ ಜೇಡರ ಬಲೆಯಲ್ಲಿ ಸಿಕ್ಕಿ ಹಾಕಿ ಕೊಳ್ಳೋದು ಅಮ್ಮ. .ಇದು ಮುಂದೆ ಏನಾದರೂ ತಾನು ತಪ್ಪು ಮಾಡಿದರೂ ಅಮ್ಮನ್ನ ತನ್ನ ಕಡೆ ಮಾಡ್ಕೊಳ್ಳೋಕೆ ಒಂದು ಮುದ್ದು ಮಗನ ಉಪಾಯ ಅಂಥ ಪ್ರೀತಿಯ ಅಮ್ಮನಿಗೆ ಗೊತ್ತಾಗೋದೇ ಇಲ್ಲ.


ಅಪ್ಪನ ಹತ್ತಿರ ಇದೆಲ್ಲ ನಡೆಯಲ್ಲ ಅಂಥ ಮಗನಿಗೆ ಚೆನ್ನಾಗಿ ಗೊತ್ತು. ಈಗ ಏನು ಬೇಕಾದರೂ ಎಲ್ಲಾ ಅಮ್ಮನ ಮೂಲಕವೇ ಅಪ್ಪನಿಗೆ ಅಹವಾಲು ಸಲ್ಲಿ ಸೋದು. ಇದು ಬುದ್ಧಿವಂತ ಅಪ್ಪ ನಿಗೂ ಗೊತ್ತು. ಅವನೂ ಮೊದಲು ಅದೇ ತಾನೆ ಮಾಡಿರ್ತಾನೆ. ಅಮ್ಮ yes ಅಂದರೆ ಮುಗೀತು ಅಪ್ಪ yes ಅನ್ನಲೇ ಬೇಕು.ಇಲ್ಲ ವೆಂದರೆ ಶಾಂತವಾಗಿರುವ ಮನೆಯಲ್ಲಿ ಯುದ್ಧ. ಹೀಗೆ ಮಗ ತನ್ನ ಬೇಕುಗಳನ್ನ ಸುಲಭವಾಗಿ ಒಂದೊಂದೇ ಪಡೆಯುತ್ತಾನೆ಼ .ಅದು ತಾನೇ ಪ್ರೀತಿಸಿರುವ ಹುಡುಗಿಯನ್ನ ಒಪ್ಪಿಸುವವರೆಗೂ ಮುಂದುವರೆಯುತ್ತೆ.

ಇಲ್ಲೂ ಮೊದಲು ಮಗನಿಗಾಗಿ ಸೋಲು ಒಪ್ಪಿಕೊಳ್ಳುವ ವಳು ಅದೇ ಮಮತಾ ಮಯಿ ತಾಯಿ. ನಂತರ ವಿಧಿ ಇಲ್ಲದೆ ಅಪ್ಪ.


Rate this content
Log in