ಕನಸು ಕೈ ಹಿಡಿದಾಗ
ಕನಸು ಕೈ ಹಿಡಿದಾಗ


ತಸ್ಲೀಮಾ ಕೇರಳದ ತ್ರಿಚುರ್ ನ ಹುಡುಗಿ. ಸಾಮಾನ್ಯ ಮಧ್ಯಮ ವರ್ಗದ ಕೇರಳ ಮುಸ್ಲಿಂ ಸಮುದಾಯಕ್ಕೆ ಸೇರಿದವಳು .ಒಬ್ಬಳೇ ಮಗಳು . ಮದುವೆ ವಯಸ್ಸಿಗೆ ಬಂದಾಗ ತಂದೆ ಖಾದರ್ ತಕ್ಕ ಹುಡುಗನಿಗಾಗಿ ಹುಡುಕಾಟ ನಡೆಸಿದ್ದರು. ಒಮ್ಮೆ ದಿನಪತ್ರಿಕೆ ಒಂದರಲ್ಲಿ ದುಬೈನಿಂದ ಬಂದು ಚೆನ್ನೈನಲ್ಲಿ Real estate ಬ್ಯುಸಿನೆಸ್ ಮಾಡುತ್ತಿರುವ ಯುವಕನಿಗೆ ಹೆಣ್ಣು ಬೇಕಾಗಿರುವ ಒಂದು ಪ್ರಕಟಣೆ ಕಂಡ ತಕ್ಷಣ ಫೋನ್ ಮಾಡಿದರು. ಒಂದೇ ತಿಂಗಳಲ್ಲಿ ಇಬ್ಬರಿಗೂ ಮದುವೆ ಯೂ ಆಯ್ತು. ತಸ್ಲಿಮ ಚೆನ್ನೈ ಗೆ ಬಂದು ತಾಹೀರ್ ಜೊತೆ ಸಂಸಾರ ನಡೆಸಿ ಒಂದು ಹೆಣ್ಣು ಮಗುವಿಗೂ ಜನ್ಮ ಕೊಟ್ಟಳು. ಗಂಡನ ಬಳಿ BMW ಕಾರ್ ಇತ್ತು. ಹಣ ಆಸ್ತಿ ಎಲ್ಲವೂ ಇತ್ತು ಗಂಡ ಹಣವಂತ ಅಷ್ಟೆ ಅಲ್ಲದೆ ಒಳ್ಳೆಯ ಗುಣವಂತ ಜೊತೆಗೆ ಸ್ಪುರದ್ರೂಪಿ. ಯಾವುದಕ್ಕೂ ಕೊರತೆ ಇಲ್ಲದ ಸಂಸಾರ. ಹೀಗಿದ್ದಾಗ ಒಂದು ದಿನ ತಸ್ಲಿಮಾ ತಾಹೀರ್ ನ ಹತ್ತಿರ ಮಾತನಾಡುತ್ತಾ ನನಗೆ ಎಲ್ಲವೂ ಕೊಟ್ಟಿದ್ದೀರಿ ಯಾವುದಕ್ಕೂ ಕೊರತೆ ಇಲ್ಲ.ಆದರೆ ನನ್ನ ಕನಸುಗಳು ಮಾತ್ರ ರೆಕ್ಕೆ ಕತ್ತರಿಸಿದ ಹಕ್ಕಿಗಳಂತೆ ಆಗಿದೆ ಎಂದು ಹೇಳಿದಾಗ ಬೆಚ್ಚಿದ. ನನಗೆ ಒಂದು ಸಹಾಯ ಮಾಡಿ ನೀವು ಆಗಲ್ಲ ಅಂತ ಹೇಳೋದಿಲ್ಲ ಎಂದು ನನಗೆ ಭರವಸೆ ಇದೆ ಎಂದಾಗ ನಗುನಗುತ್ತಲೇ ಏನು ಬೇಕಾದರೂ ಕೇಳು , ಈಗಲೇ ಇಲ್ಲೇ ಕೊಡಲು ನಾನು ಸಿದ್ದವಾಗಿದ್ದೇನೆ ನೀನು ಸಂತೋಷದಿಂದ ಇರಬೇಕಾದರೆ ನಾನು ಏನು ಬೇಕಾದರೂ ತ್ಯಾಗ ಮಾಡ್ತೀನಿ ಎಂದ.. ಕೈಯ್ಯ ಮೇಲೆ ಕೈಯ್ಯ ಇಟ್ಟು ಪ್ರಮಾಣ ಮಾಡಿಸಿ ಕೊಂಡಳು . ಆಗಲೂ ಅವನು ನಗುತ್ತಲೇ ಇದ್ದ. ಹೇಳು ಅಂದಾಗ ನನಗೆ ನಿನ್ನಿಂದ ತಲಾಕ್ ಬೇಕೆಂದಳು. ಜೋಕ್ ಗೂ ಒಂದು ಮಿತಿ ಇದೆ ಇದರ ಪರಿಣಾಮ ಬಹಳ ಕೆಟ್ಟದಾಗಿರುತ್ತೆ ಎಂದರೂ ಅವಳು ಜೋಕ್ ಅಲ್ಲ ನನ್ನ ಲೋಕವೇ ಬೇರೆ ನಾನು ಸಾಧಿಸ ಬೇಕಾದ ಗುರಿ ಬೇರೆ ಇದೆ.. ಈ ರೀತಿಯ ಸುಖದ ಸುಪತ್ತಿಗೆಯಿಂದ ಅದು ಅಸಾಧ್ಯ ಎಂದಳು. ಇದನ್ನ ಕೇಳಿ ಏನೂ ಮಾತನಾಡದೆ ಹೊರಟು ಹೋದ .
ಎಂಟು ವರ್ಷದ ಮಗಳನ್ನ ಬಿಟ್ಟು ಮನೆಯಲ್ಲಿದ್ದ ಆಳುಗಳಿಗೆ ಹೇಳಿ ತಂದೆ ಮನೆಯಿಂದ ತಂದಿದ್ದ ಒಡವೆಗಳೊಂದಿಗೆ ತಾಹೀರ್ ಮನೇಗೆ ಬರುವುದರ ಒಳಗೆ ಹೊರಟೆ ಬಿಟ್ಟಳು. ಗಂಡನ ಆಪ್ತ ಸ್ನೇಹಿತ ಚೆಲ್ಲದೊರೈ ಇವಳಿಗೆ ಪರಿಚಯ. ಅವನ ಮನೆಗೆ ಬಂದು ಸಹಕಾರ ಕೇಳಿದಳು. ಅವಳ ಮನದ ಆಸೆಗಳೆನ್ನೆಲ್ಲಾ ಹೇಳಿಕೊಂಡಳು. ಅವನ ಒಳ್ಳೆಯ ಸ್ನೇಹಿತನಿಗೆ ಮೋಸ ವಾಗುವುದನ್ನು ತಡೆಯಲು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕೊನೆಗೆ ಹೇಳಿದ ತಾಹೀರ್ ಒಪ್ಪಿದರೆ ಮಾತ್ರ ಸಹಾಯ ಮಾಡುತ್ತೇನೆ ಇಲ್ಲದಿದ್ದರೆ ಸಾಧ್ಯವಿಲ್ಲ. ನೀನು ಅವನಿಗೆ ಹೇಳದೆ ನಮ್ಮ ಮನೆಗೆ ಬಂದಿರುವುದೇ ಮೊದಲ ತಪ್ಪು. ಜೊತೆಗೆ ನನ್ನ ಸಹಾಯ ಬೇರೆ ಕೇಳುತ್ತಿದ್ದಿಯೆ. ತಕ್ಷಣದಲ್ಲಿ ಅದು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ. ಈ ವಿಷಯ ತಕ್ಷಣ ಸ್ನೇಹಿತ ತಾಹಿ
ರ್ ಗೂ ತಿಳಿಸಿದ .
ಫಿನ್ಲ್ಯಾಂಡ್ ನಿಂದ ಬಂದಿದ್ದ ಒಬ್ಬ ಯುವಕ ನ ಸಂಪರ್ಕ ಮೊದಲಿಂದಲೂ ಇದ್ದು ಅವನ ಹತ್ತಿರ ಹೋಗಿ ಮುಂದೆ ಮಾಡಬೇಕಾದ ಕೆಲಸದ ಬಗ್ಗೆ ಮಾತನಾಡಿದಳು. ಈಗಾಗಲೇ ಅವನು ಇಪ್ಪತ್ತು ಬುದ್ದಿಮಾಂದ್ಯ ಮಕ್ಕಳಿಗೆ ಒಂದು ಶಾಲೆ ನಡೆಸುತ್ತಿದ್ದ. ಇವಳ ಕನಸೂ ಆದೇ ಆಗಿತ್ತು.ಇವಳ ಹತ್ತಿರ ಇದ್ದ ಒಡವೆಗಳೆನ್ನ ಎಲ್ಲವೂ ಎಲ್ಲ ಮಾರಿ ಸ್ವಲ್ಪ ಜಾಗ ಖರೀದಿಸಿದಳು . ಚೆಲ್ಲದುರೈನ ಮತ್ತೆ ಕಂಡು ಸಹಾಯ ಕೋರಿದಳು. ಅಷ್ಟು ಹೊತ್ತಿಗೆ ಅವನ ಸ್ನೇಹಿತ ತಾಹೀರ ಗೆ ಎಲ್ಲ ವಿಷಯ ತಿಳಿಸಿದ್ದ. ಹಾಗಾಗಿ ಸಹಾಯಮಾಡಲು ತೊಂದರೆ ಯಾಗಲಿಲ್ಲ . ಚೆನ್ನೈನ ಒಳ್ಳೆಯ ವಸತಿ ಪ್ರದೇಶದಲ್ಲಿ ಇವನದೇ ದೊಡ್ಡ ಕಟ್ಟಡ ಖಾಲಿ ಇತ್ತು. ಅದನ್ನೇ ತಕ್ಷಣಕ್ಕೆ ಬಿಟ್ಟುಕೊಡಲು ಒಪ್ಪಿದ. ಫಿನ್ಲ್ಯಾಂಡ್ನಿಂದ ಬಂದಿದ್ದ ಅವನು ಹಾಗೂ ತಸ್ಲೀಮಾ ಇಬ್ಬರೂ ಇದೇ ಕಟ್ಟಡದಲ್ಲಿ aautism ಮಕ್ಕಳ ದೊಡ್ಡ ಶಾಲೆ ಪ್ರಾರಂಭ ಮಾಡಿದರು . ಅದು ಚೆನ್ನೈನ ಮೊಟ್ಟ.ಮೊದಲ ಶಾಲೆ ಎಂಬ ಹೆಗ್ಗಳಿಕೆ. ಅಂದಿನ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಿ ಮಾರನೇದಿನ ಎಲ್ಲ ದಿನಪ ತ್ರಿಕೆಗಳಲ್ಲಿ ತಸ್ಲೀಮಾ ಫೋಟೋ ಮುಖ್ಯಮಂತ್ರಿಗಳ ಜೊತೆ ಇದ್ದುದು ಪ್ರಕಟ ವಾಯ್ತು. ತಾಹೀರ್ ನೋಡಿ ಚೆಲ್ಲದುರೈ ಗೆ ಫೋನ್ ಮಾಡಿ ಏನಿದು ಎಂದು ಕೇಳಿದ ಆಗ ನನಗೆ ಇದು ಎಲ್ಲಾ ಮೊದಲೇತಿಳಿದಿ ತ್ತು. ಒಳ್ಳೆಯ ಕೆಲಸಕ್ಕಾಗಿ ನನ್ನ ಬಿಲ್ಡಿಂಗ್ ಕೊಟ್ಟಿದ್ದೇನೆಂದ. ತಾಹೀರ್ ಏನೂ ಮಾತನಾಡಲಿಲ್ಲ.
ಎರಡು ವರ್ಷಗಳು ಉರುಳಿದೆ . ಒಂದು ದಿನ ತಾಹಿರ್ ಮತ್ತು ಚೆಲ್ಲದುರೈ ಇವರ ಶಾಲೆಗೆ ಬಂದರು. ಚೆಲ್ಲದುರೈ ಮೊದಲು ಒಳಗೆ ಹೋಗಿ ಹೇಳಿದ . ತಾಹೀರ್ ನಿನ್ನ ನೋಡಲು ಬಂದಿದ್ದಾನೆ. ತಾನೇ ಹೊರಬಂದು ಸ್ವಾಗತಿಸಿ ದಳು ಮತ್ತು ತನ್ನ ಸ್ನೇಹಿತನನ್ನು ಪರಿಚಯಿ ಸಿದಳು. ಕ್ಷಮಿಸು ತಾಹೀರ್ ನಿನ್ನ ದೃಷ್ಟಿಯಲ್ಲಿ ನಾನು ತಪ್ಪಿತಸ್ಥೆ. ಅದು ನನಗೂ ಗೊತ್ತು . ಆದರೆ ನಾನು ಅಂದು ಹೇಳಿದಂತೆ ನನ್ನ ಕನಸು ಇದಾಗಿತ್ತು ಎಂದಳು.ಕಾರಿನಲ್ಲ ಇದ್ದ ಮಗಳನ್ನ ಕರೆದು ತರಲು ಡ್ರೈವರ್ ಗೆ ಹೇಳಿದ . ಡ್ರೈವರ್ ಜೊತೆ ಮಗಳನ್ನ ನೋಡಲು ಆಸೆಯಿಂದ ಕಾರಿನ ಬಳಿ ಹೋದಳು ಮಗಳನ್ನ ನೋಡಿ ತನ್ನ ಕಣ್ಣುಗಳನ್ನೇ ತಾನು ನಂಬದಾದಳು .ಅಮ್ಮ ಅಂತ ಹೇಳಲು ಸಹಾ ಕಷ್ಟ ಪಡುತ್ತಿದ್ದಾಳೆ. ಮಗಳನ್ನು ಇದೇ ಶಾಲೆಗೆ ಸೇರಿಸಲು ಕರೆದು ತಂದಿರುವುದಾಗಿ ಹೇಳಿದಾಗ ಉತ್ತರ ವಿಲ್ಲದೆ ಕಣ್ಣುಗಳು ತುಂಬಿಬಂತು. ಬೇರೆ ಮಕ್ಕಳೊಂದಿಗೆ ತನ್ನ ಮಗಳನ್ನು ಈ ರೀತಿ ನೊಡಬೇಕಾಗಿ ಬಂದದ್ದು ತನ್ನ ವಿಧಿ ಎಂದು ಮನದಲ್ಲೇ ತಿಳಿದು ಒಳ ನಡೆದಳು. ಅಷ್ಟರಲ್ಲಿ ತಾಹೀರ್ ನಿನ್ನಿಂದ ನನಗೊಂದು ಸಹಾಯಬೇಕೆಂದು ಮೊದಲೇ ಟೈಪ್ ಮಾಡಿದ್ದ ಪತ್ರ ವನ್ನ ಹಿಡಿದ .ಅದು ಡಿವೋರ್ಸ್ ಪತ್ರ ವೆಂದು ತಿಳಿದ ತಕ್ಷಣ ರುಜು ಮಾಡಿದಳು .ಇಬ್ಬರು ಸ್ನೇಹಿತರು ಅಲ್ಲಿಂದ ಹೊರಟರು.